Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ (ಆರ್ಜೆಐಎಲ್) ಚಿಕ್ಕಮಗಳೂರು ನಗರ ಮತ್ತು ಹೆದ್ದಾರಿಯಲ್ಲಿ (ಬೆಂಗಳೂರಿನಿಂದ ಚಿಕ್ಕಮಗಳೂರು) ಮೊಬೈಲ್ ನೆಟ್ವರ್ಕ್ ಕಾರ್ಯಕ್ಷಮತೆಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾದ (ಟ್ರಾಯ್) ಇತ್ತೀಚಿನ ಇಂಡಿಪೆಂಡೆಂಟ್ ಡ್ರೈವ್ ಟೆಸ್ಟ್ (ಐಡಿಟಿ) ವರದಿ ತಿಳಿಸಿದೆ. ಈ ಪರೀಕ್ಷೆಗಳು ಟ್ರಾಯ್ನ ಆವರ್ತಕ ಗುಣಮಟ್ಟದ ಸೇವೆ (ಕ್ಯೂಒಎಸ್) ಲೆಕ್ಕಪರಿಶೋಧನೆಯ ಭಾಗವಾಗಿದೆ. 2025ರ ಮೇ 24ರಿಂದ 28ರವರೆಗೆ ಚಿಕ್ಕಮಗಳೂರು ನಗರ ಮತ್ತು ಹೆದ್ದಾರಿಯಲ್ಲಿ 218.6 ಕಿ.ಮೀ ಡ್ರೈವ್ ಟೆಸ್ಟ್ ಹಾಗೂ 3.4 ಕಿ.ಮೀ ನಡಿಗೆ ಪರೀಕ್ಷೆ ಸೇರಿದಂತೆ ಒಟ್ಟು 222 ಕಿ.ಮೀ ದೂರವನ್ನು ಕ್ರಮಿಸಲಾಗಿತ್ತು. ಚಿಕ್ಕಮಗಳೂರು ನಗರ ಮತ್ತು ಹೆದ್ದಾರಿಯಲ್ಲಿ (ಬೆಂಗಳೂರಿನಿಂದ ಚಿಕ್ಕಮಗಳೂರಿನವರೆಗೆ) ಜಿಯೋದ ಬಲವಾದ ಪ್ರದರ್ಶನವು ಅದರ ಅಗ್ರಸ್ಥಾನವನ್ನು ಪ್ರತಿಬಿಂಬಿಸುತ್ತದೆ. ಟ್ರಾಯ್ ಪರೀಕ್ಷಿಸಿದ ಎಂಟು ಪರವಾನಗಿ ಪಡೆದ ಸೇವಾ ಪ್ರದೇಶಗಳು (ಎಲ್ಎಸ್ಎ) ಮತ್ತು 13 ನಗರಗಳು, ಹೆದ್ದಾರಿಗಳು, ರೈಲ್ವೆ ಮತ್ತು ಕರಾವಳಿ ಮಾರ್ಗಗಳಲ್ಲಿ, ಜಿಯೋ ನಿರಂತರವಾಗಿ ಅಗ್ರಸ್ಥಾನದಲ್ಲಿದೆ. ಐದು ಪ್ರಮುಖ ಧ್ವನಿ ಗುಣಮಟ್ಟ (ವಾಯ್ಸ್ ಕಾಲ್ ಕ್ಲಾರಿಟಿ)…
ಮೈಸೂರು:-ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಪ್ರಾದೇಶಿಕ ಕೇಂದ್ರ ಮಡಿಕೇರಿಯಲ್ಲಿ 2025-26 ನೇ ಸಾಲಿನ ಜುಲೈ ಆವೃತ್ತಿಯ ವಿವಿಧ ಕೋರ್ಸ್ಗಳಿಗೆ ಪ್ರವೇಶಾತಿ ಪ್ರಾರಂಭಿಸಲಾಗಿದ್ದು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ತನ್ನ 2025-26ನೇ ಜುಲೈ ಆವೃತ್ತಿಗೆ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಪ್ರವೇಶಾತಿಗೆ ಈಗಾಗಲೇ ಆನ್ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ. ಮುಕ್ತ ವಿಶ್ವವಿದ್ಯಾಲಯವು “ನಿಮ್ಮ ಮನೆಯೇ ನಿರಂತರ ಪಾಠಶಾಲೆ” ಎಂಬ ಧ್ಯೆಯವಾಕ್ಯದೊಂದಿಗೆ ಯುಜಿಸಿ ಅನುಮೋದಿತ ಶಿಕ್ಷಣ ಕ್ರಮಗಳ ಅಧ್ಯಯನದ ಅವಕಾಶವನ್ನು ವಿದ್ಯಾರ್ಥಿಗಳಿಗೆ ಈಗಾಗಲೇ ಹಲವು ವರ್ಷಗಳಿಂದ ನೀಡುತ್ತಾ ಬಂದಿದೆ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ರಾಜ್ಯದಲ್ಲಿ ಮುಕ್ತ ಶಿಕ್ಷಣ ನೀಡುವ ಏಕೈಕ ವಿದ್ಯಾಲಯವಾಗಿದೆ. ಸ್ನಾತಕ ಶಿಕ್ಷಣ ಕಾರ್ಯಕ್ರಮಗಳ ಅಡಿಯಲ್ಲಿ ಬರುವ (ಬಿ.ಎ, ಬಿಕಾಂ, ಬಿಲಿಬ್ ಐಎಸ್ಸಿ, ಬಿಬಿಎ, ಬಿಸಿಎ, ಬಿಎಸ್ಸಿ, ಬಿಎಸ್ಡಬ್ಲ್ಯೂ) ಹಾಗು ಸ್ನಾತಕೋತ್ತರ ಪಿಜಿ. ಕೋರ್ಸ್ಗಳಾದ (ಎಂಎ, ಎಂಎ-ಪತ್ರಿಕೋದ್ಯಮ, ಎಂಕಾಂ, ಎಂಬಿಎ, ಎಂಲಿಬ್ಐಎಸ್ಸಿ, ಎಂಎಸ್ಸಿ, ಎಂಸಿಎ, ಎಂಎಸ್ಡಬ್ಲೂ) (ಪಿಜಿ ಡಿಪ್ಲೋಮಾ ಪ್ರೋಗ್ರಾಮ್ಸ್ ಸರ್ಟಿಫಿಕೇಟ್ ಪ್ರೋಗ್ರಾಮ್ಸ್) ಕೋರ್ಸ್ಗಳಿಗೆ ಪ್ರವೇಶಾತಿ ಪ್ರಾರಂಭವಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ,…
ಬೆಂಗಳೂರು: ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಆವಾಸ್ ಯೋಜನೆ(ನಗರ) 2.0 ಅಡಿ ನಗರ ಪ್ರದೇಶ ವ್ಯಾಪ್ತಿಯಲ್ಲಿ ಬಡ ಹಾಗೂ ಮಧ್ಯಮ ವರ್ಗದ ವಸತಿ ರಹಿತ (ನಿವೇಶನ/ ಕಚ್ಚಾ ಮನೆ ಹೊಂದಿರುವ) ಹಾಗೂ ನಿವೇಶನ ರಹಿತ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರದ https//pmay.urban.gov.in ದಲ್ಲಿ ಅರ್ಜಿ ಆಹ್ವಾನಿಸಿದೆ. ರಾಜ್ಯದಲ್ಲಿ ಇದುವರೆಗೂ ವಸತಿ ಯೋಜನೆಗಳ ಸೌಲಭ್ಯ ಪಡೆಯದ ಎಲ್ಲಾ ವಸತಿ ರಹಿತ ಹಾಗೂ ನಿವೇಶನ ರಹಿತ ಅರ್ಹ ಫಲಾನುಭವಿಗಳಿಗೆ (ವಿಶೇಷವಾಗಿ ಸಪಾಯಿ ಕರ್ಮಚಾರಿಗಳು, ಬೀದಿ ಬದಿ ವ್ಯಾಪಾರಿಗಳು, ಪಿ.ಎಂ. ವಿಶ್ವಕರ್ಮ ಯೋಜನೆಯ ಫಲಾನುಭವಿಗಳು, ಕಟ್ಟಡ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಕೊಳಚೆ ಪ್ರದೇಶದ ನಿವಾಸಿಗಳು ಸೇರಿದಂತೆ) ವಸತಿ ಸೌಲಭ್ಯ ಪಡೆಯಲು ಜುಲೈ, 15 ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ನಿಗಧಿತ ನಮೂನೆಯಲ್ಲಿ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳ ವಸತಿ ಶಾಖೆಗೆ ಪೋಟೋ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಓಟರ್ ಐಡಿ, ಬ್ಯಾಂಕ್ ಪಾಸ್ ಪುಸ್ತಕ,…
ನವದೆಹಲಿ: ಜುಲೈ 21 ರಿಂದ ಆಗಸ್ಟ್ 21 ರವರೆಗೆ ಸಂಸತ್ತಿನ ಮಳೆಗಾಲದ ಅಧಿವೇಶನ ನಡೆಸುವ ಪ್ರಸ್ತಾಪಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮೋದನೆ ನೀಡಿದ್ದಾರೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಬುಧವಾರ ತಿಳಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಆಗಸ್ಟ್ 13 ಮತ್ತು 14 ರಂದು ಯಾವುದೇ ಅಧಿವೇಶನ ಇರುವುದಿಲ್ಲ ಎಂದು ಅವರು ಹೇಳಿದರು. ಈ ಹಿಂದೆ, ಮಳೆಗಾಲದ ಅಧಿವೇಶನ ಜುಲೈ 21 ರಿಂದ ಆಗಸ್ಟ್ 12 ರವರೆಗೆ ನಡೆಯಲಿದೆ ಎಂದು ಘೋಷಿಸಲಾಗಿತ್ತು. ಒಟ್ಟಾರೆಯಾಗಿ ಜುಲೈ 21 ರಿಂದ ಆಗಸ್ಟ್ 21, 2025 ರವರೆಗೆ ಸಂಸತ್ತಿನ ಮಳೆಗಾಲದ ಅಧಿವೇಶನವನ್ನು ಕರೆಯುವ ಸರ್ಕಾರದ ಪ್ರಸ್ತಾವನೆಯನ್ನು ಭಾರತದ ಗೌರವಾನ್ವಿತ ರಾಷ್ಟ್ರಪತಿಗಳು ಅನುಮೋದಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ, ಆಗಸ್ಟ್ 13 ಮತ್ತು 14 ರಂದು ಯಾವುದೇ ಅಧಿವೇಶನಗಳು ಇರುವುದಿಲ್ಲ. https://twitter.com/KirenRijiju/status/1940419023709385177 https://kannadanewsnow.com/kannada/renaming-bangalore-university-to-dr-manmohan-singh-university-cabinet-decision/ https://kannadanewsnow.com/kannada/the-clarity-in-the-conditions-and-instructions-for-kptcl-is-not-in-the-order-je-transfer-confusion-this-year-too/
ಬೆಂಗಳೂರು: ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿವಿಯೆಂದು ಮರುನಾಮಕರಣ ಮಾಡಲು ಸಂಪುಟ ತೀರ್ಮಾನ ಕೈಗೊಂಡಿದೆ. ಇಂದು ನಂದಿಗಿರಿ ಧಾಮದಲ್ಲಿ ಆಯೋಜಿಸಿದ್ದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಲು ತೀರ್ಮಾನಿಸಲಾಗಿದೆ. https://twitter.com/KarnatakaVarthe/status/1940415875208913257 https://kannadanewsnow.com/kannada/temporary-restrictions-for-the-elephant-trunk-procession-for-the-performers-forest-department/ https://kannadanewsnow.com/kannada/the-clarity-in-the-conditions-and-instructions-for-kptcl-is-not-in-the-order-je-transfer-confusion-this-year-too/
ಚಿಕ್ಕಮಗಳೂರು: ಜಿಲ್ಲೆಯ ಪ್ರಸಿದ್ಧ ಚಾರಣ ಸ್ಥಳಗಳಲ್ಲಿ ಎತ್ತಿನಭುಜವೂ ಒಂದು. ಈ ಚಾರಣ ತಾಣಕ್ಕೆ ಚಾರಣಿಗರ ಸುರಕ್ಷತೆಯಿಂದ ತಾತ್ಕಾಲಿಕ ನಿರ್ಬಂಧವನ್ನು ಹೇರಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಪ್ರವಾಸಿ ತಾಣವಾದ ಎತ್ತಿನಭುಜ ಚಾರಣವನ್ನು ಜುಲೈ 31ರ ವರೆಗೆ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ಮಳೆಯಾಗುತ್ತಿರುವುದರಿಂದ ಹಾಗೂ ದಟ್ಟವಾಗಿ ಮಂಜು ಕವಿಯುತ್ತಿರುವುದರಿಂದ ಪ್ರವಾಸಿಗರು ಅಪಾಯಕ್ಕೆ ಒಳಗಾಗುವ ಸಾಧ್ಯತೆಗಳು ಇರುತ್ತವೆ ಎಂದು ಅರಣ್ಯ ಇಲಾಖೆ ತಿಳಿಸಿದೆ. https://twitter.com/KarnatakaVarthe/status/1940413048252252162 https://kannadanewsnow.com/kannada/india-to-get-1st-batch-of-apache-choppers-this-month-to-deploy-along-pak-border/ https://kannadanewsnow.com/kannada/the-clarity-in-the-conditions-and-instructions-for-kptcl-is-not-in-the-order-je-transfer-confusion-this-year-too/
ನವದೆಹಲಿ: ಆಪರೇಷನ್ ಸಿಂಧೂರ್ ನಂತರ, ಸೇನೆಯು ಪಶ್ಚಿಮ ಗಡಿಯಲ್ಲಿ ತನ್ನ ಯುದ್ಧ ಸಾಮರ್ಥ್ಯಗಳನ್ನು ಹೆಚ್ಚಿಸುವತ್ತ ಗಮನಹರಿಸಿದ್ದರೂ, ಮೊದಲ ಬ್ಯಾಚ್ ಅಪಾಚೆ ಯುದ್ಧ ಹೆಲಿಕಾಪ್ಟರ್ಗಳಿಗಾಗಿ ದೀರ್ಘ ಕಾಯುವಿಕೆ ಮುಗಿದಂತೆ ಕಾಣುತ್ತಿದೆ. 15 ತಿಂಗಳ ವಿಳಂಬದ ನಂತರ, ಪಶ್ಚಿಮ ಗಡಿಯಲ್ಲಿ ನಿಯೋಜಿಸಬೇಕಾದ ಅಪಾಚೆ ದಾಳಿ ಹೆಲಿಕಾಪ್ಟರ್ಗಳ ವಿತರಣೆ ಶೀಘ್ರದಲ್ಲೇ ಪ್ರಾರಂಭವಾಗುವ ಸಾಧ್ಯತೆಯಿದೆ. ಸೇನಾ ವಾಯುಯಾನ ದಳವು ಮಾರ್ಚ್ 2024 ರಲ್ಲಿ ಜೋಧ್ಪುರದಲ್ಲಿ ತನ್ನ ಮೊದಲ ಅಪಾಚೆ ಸ್ಕ್ವಾಡ್ರನ್ ಅನ್ನು ಹೆಚ್ಚಿಸಿತು, ಆದರೆ ಸುಮಾರು 15 ತಿಂಗಳ ಹೆಚ್ಚಳದ ನಂತರ, ಸ್ಕ್ವಾಡ್ರನ್ ದಾಳಿ ಹೆಲಿಕಾಪ್ಟರ್ಗಳಿಲ್ಲದೆ ಉಳಿದಿದೆ. ಅಮೆರಿಕದಿಂದ ಅಪಾಚೆ AH-64E ದಾಳಿ ಹೆಲಿಕಾಪ್ಟರ್ಗಳ ವಿತರಣೆಯು ಹಲವು ಗಡುವುಗಳನ್ನು ತಪ್ಪಿಸಿಕೊಂಡಿದೆ. 2020 ರಲ್ಲಿ ಅಮೆರಿಕದೊಂದಿಗೆ ಸಹಿ ಹಾಕಲಾದ $600 ಮಿಲಿಯನ್ ಒಪ್ಪಂದದ ಭಾಗವಾಗಿ, ಭಾರತೀಯ ಸೇನೆಯು ಮೇ-ಜೂನ್ 2024 ರೊಳಗೆ ಆರು ಅಪಾಚೆ ಹೆಲಿಕಾಪ್ಟರ್ಗಳನ್ನು ತಲುಪಿಸುವ ನಿರೀಕ್ಷೆಯಿದೆ. ಆದಾಗ್ಯೂ, ಪೂರೈಕೆ ಸರಪಳಿ ಅಡಚಣೆಯಿಂದಾಗಿ ಸಮಯವನ್ನು ಡಿಸೆಂಬರ್ 2024 ಕ್ಕೆ ಬದಲಾಯಿಸಲಾಯಿತು. ವಿತರಣಾ ವೇಳಾಪಟ್ಟಿಯ ಬಗ್ಗೆ ತಿಳಿದಿರುವ ಮೂಲಗಳು, ಈ…
ಬೆಂಗಳೂರು: ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದಿದೆ ಎನ್ನಲಾಗಿರುವಂತ ಅವ್ಯವಹಾರದ ಬಗ್ಗೆ ವಿಚಾರಣಾಧಿಕಾರಿಯನ್ನು ನೇಮಿಸಿ ತನಿಖೆಗೆ ಸಹಕಾರ ಇಲಾಖೆ ಆದೇಶಿಸಿದೆ. ಈ ಕುರಿತಂತೆ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು ಹಾಗೂ ಸಹಕಾರ ಸಂಘಗಳ ಉಪ ನಿಬಂಧಕರು ಆದೇಶ ಹೊರಡಿಸಿದ್ದು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಈ ಸಂಸ್ಥೆಯು ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ 1960ರಡಿ ನೋಂದಣಿಗೊಂಡು ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆಯ ವಿರುದ್ದ ಈ ಕಛೇರಿಗೆ ವಿವಿಧ ದಿನಾಂಕಗಳಂದು ದೂರು ಅರ್ಜಿಗಳು ಸಲ್ಲಿಕೆಯಾಗಿರುತ್ತವೆ. ಸದರಿ ದೂರು ಅರ್ಜಿಗಳ ಕುರಿತು ಸತ್ಯಾಸತ್ಯತೆಯನ್ನು ಅರಿಯಲು ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ 1960 ರ ಪ್ರಕರಣ 25ರಡಿ ವಿಚಾರಣೆ ನಡೆಸುವುದು ಸೂಕ್ತವೆಂದು ಮನಗಂಡು ಸ್ವಪ್ರೇರಣೆಯಿಂದ ವಿಚಾರಣೆ ನಡೆಸಲು ನಿರ್ಧರಿಸಿ ಕೆಳಕಂಡ ಆದೇಶ ಹೊರಡಿಸಿರುವುದಾಗಿ ತಿಳಿದ್ದಾರೆ. ಪ್ರಸ್ತಾವನೆಯಲ್ಲಿ ತಿಳಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ 1960ರ ಪ್ರಕರಣ 25 ರಡಿಯಲ್ಲಿ ದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಸಹಕಾರ ಸಂಘಗಳ ಉಪ ನಿಬಂಧಕರು, 2ನೇ ವಲಯ, ಬೆಂಗಳೂರು ನಗರ ಜಿಲ್ಲೆ ಆದ…
ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (National Testing Agency – NTA) ಜುಲೈ 4 ರಂದು CUET UG 2025 ಫಲಿತಾಂಶಗಳನ್ನು ಪ್ರಕಟಿಸಲಿದೆ ಎಂದು ಸಂಸ್ಥೆ ಮಂಗಳವಾರ ದೃಢಪಡಿಸಿದೆ. ಪದವಿಪೂರ್ವ ಕಾರ್ಯಕ್ರಮಗಳಿಗೆ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (Common University Entrance Test for Undergraduate programmes -CUET UG) ಭಾರತದಾದ್ಯಂತ ಕೇಂದ್ರೀಯ ಮತ್ತು ಇತರ ಹಲವಾರು ಭಾಗವಹಿಸುವ ವಿಶ್ವವಿದ್ಯಾಲಯಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಪ್ರಮುಖ ಪರೀಕ್ಷೆಯಾಗಿದೆ. ಫಲಿತಾಂಶಗಳು ಅಧಿಕೃತ ವೆಬ್ಸೈಟ್ – exams.nta.ac.in/CUET-UG ನಲ್ಲಿ ಲಭ್ಯವಿರುತ್ತವೆ. ವಿದ್ಯಾರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿಕೊಂಡು ತಮ್ಮ ಅಂಕಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ. https://twitter.com/NTA_Exams/status/1940411679780778084 ಈ ವರ್ಷ, CUET UG ಪರೀಕ್ಷೆಯನ್ನು ಮೇ 15 ಮತ್ತು ಮೇ 24, 2025 ರ ನಡುವೆ ಹೈಬ್ರಿಡ್ ಸ್ವರೂಪದಲ್ಲಿ ನಡೆಸಲಾಯಿತು – ಕೆಲವು ಪತ್ರಿಕೆಗಳನ್ನು CBT (ಕಂಪ್ಯೂಟರ್ ಆಧಾರಿತ ಪರೀಕ್ಷೆ) ಮೋಡ್ನಲ್ಲಿ ಮತ್ತು ಇತರವುಗಳನ್ನು ಪೆನ್-ಅಂಡ್-ಪೇಪರ್ ಸ್ವರೂಪದಲ್ಲಿ ನಡೆಸಲಾಯಿತು. ಪರೀಕ್ಷೆಯನ್ನು ಭಾರತ ಮತ್ತು…
ಶಿವಮೊಗ್ಗ: ಜಿಲ್ಲೆಯ ಸಾಗರ ನಗರದ ಉಪ ವಿಭಾಗೀಯ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ.ಪರಪ್ಪ.ಕೆ ಜನಾನುರಾಗಿಯಾಗಿದ್ದವರು. ಎಷ್ಟೇ ಹೊತ್ತಿನಲ್ಲಿ ರೋಗಿಗಳು ಕರೆ ಮಾಡಿ ಸೇವೆಗೆ ಕೋರಿದ್ರೆ ಸಾಕು, ಕ್ಷಣಾರ್ಧ ಚಿಕಿತ್ಸೆಗೆ ಹಾಜರ್. ಇಂತಹ ಸಹೃದಯಿ ವೈದ್ಯ ಡಾ.ಪರಪ್ಪ ಇಂದು ನಿವೃತ್ತರಾಗಿದ್ದಾರೆ. ಅವರಿಗೆ ಇಡೀ ತಾಲ್ಲೂಕಿನ ಜನತೆ, ಆರೋಗ್ಯ ಇಲಾಖೆಯ ನೌಕರರು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡುಗೆ ನೀಡಿದರು. ಇಂದು ವಯೋನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ನೌಕರರ ಒಕ್ಕೂಟ, ಆರೋಗ್ಯ ರಕ್ಷಾ ಸಮಿತಿ ವತಿಯಿಂದ ನೀಡಲಾದ ಅಭಿನಂದನೆ ಸ್ವೀಕರಿಸಿ ಮಾತನಾಡಿದಂತ ಅವರು, ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುವುದು ಸವಾಲಿನ ಕೆಲಸ. ಆಸ್ಪತ್ರೆಯೊಳಗಿನ ವೈದ್ಯಸಿಬ್ಬಂದಿಗಳ ಜೊತೆ ಜನಪ್ರತಿನಿಧಿಗಳು, ಸಾರ್ವಜನಿಕರ ಸಹಕಾರ ಉತ್ತಮ ಕೆಲಸ ಮಾಡಲು ಅತ್ಯಗತ್ಯ ಎಂದರು. ಹಣದ ಹಿಂದೆ ಹೋದರೆ ನೆಮ್ಮದಿ ಸಿಗುವುದಿಲ್ಲ. ನಾವು ಸರ್ಕಾರಿ ಸೇವಕರಾಗಿ ಸೇರಿದ ನಂತರ ಒಂದಷ್ಟು ಸಾಮಾಜಿಕ ಸೇವೆಯನ್ನು ಮೈಗೂಡಿಸಿಕೊಳ್ಳಬೇಕು. ಅದರಲ್ಲೂ ಸರ್ಕಾರಿ ಆಸ್ಪತ್ರೆಯ ವೈದ್ಯರಾದವರ ಮೇಲೆ ಅತಿಹೆಚ್ಚು ಹೊಣೆ ಇರುತ್ತದೆ. ರೋಗಿಗಳಿಗೆ ಉತ್ತಮ ಸೇವೆ ನೀಡುವ ಮೂಲಕ…