Author: kannadanewsnow09

ಬೆಂಗಳೂರು: 2024ನೇ ಸಾಲಿನ ದೇಶದ ಅತ್ಯುನ್ನತ ನಾಗರೀಕ ಗೌರವಗಳಲ್ಲಿ ಒಂದಾಗಿರುವಂತ ಪದ್ಮ ಶ್ರೀ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಇಂತಹ ಪ್ರಶಸ್ತಿಗೆ ಕರ್ನಾಟಕದ ಜೇನು ಕುರುಬ ಸಮುದಾಯದ ಸೋಮಣ್ಣ ಅವರಿಗೆ ಸಂದಿದೆ. 2024ನೇ ಸಾಲಿನ ಪದ್ಮ ಶ್ರೀ ಪ್ರಶಸ್ತಿಯನ್ನು ಮೈಸೂರಿನ ಬುಡಕಟ್ಟು ಕಲ್ಯಾಣ ಕಾರ್ಯಕರ್ತೆ, ದಣಿವರಿಯದೆ ಕೆಲಸ ಮಾಡುತ್ತಿರುವಂತ ಜೇನು ಕುರುಬ ಸಮುದಾಯದ ಸೋಮಣ್ಣ ಅವರಿಗೆ ನೀಡಲಾಗಿದೆ. ಜೇನು ಕುರುಬ ಸಮುದಾಯದವರಾಗಿರುವಂತ ಸೋಮಣ್ಣ ಅವರು, ಎಲೆ ಮರೆಯ ಕಾಯಿಯಂತೆ 4 ದಶಕಗಳಿಂದ ಜೆನು ಕುರುಬ ಜನಾಂಗದ ಉನ್ನತಿಗಾಗಿ ಕೆಲಸ ಮಾಡುತ್ತಿದ್ದಾರೆ. ಕಾನೂನುಬದ್ಧತೆಯನ್ನು ಖಚಿತಪಡಿಸಿಕೊಳ್ಳಲು ಹಕ್ಕುಪತ್ರಗಳನ್ನು ಪಡೆಯಲು ಸಹಾಯ ಮಾಡಿದರು. 500 ಕ್ಕೂ ಹೆಚ್ಚು ಬುಡಕಟ್ಟು ಜನಾಂಗದವರಿಗೆ ಮಾನ್ಯತೆ ಮತ್ತು ರಕ್ಷಣೆ ನೀಡಿದ್ದಾರೆ. ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಸಮುದಾಯಗಳ ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರ ಸಾಮಾಜಿಕ ಕಾರ್ಯಗಳು ಪರಿಸರಕ್ಕೂ ವಿಸ್ತರಿಸಿದವು. ಸಂರಕ್ಷಣೆ, ಸಂರಕ್ಷಣೆಯ ಮಹತ್ವವನ್ನು ಒತ್ತಿಹೇಳುತ್ತದೆ. ನೈಸರ್ಗಿಕ ಆವಾಸಸ್ಥಾನಗಳ ಬಗ್ಗೆಯೂ ಅರಿವು ಮೂಡಿಸೋ ಕೆಲಸ ಮಾಡಿದ್ದಾರೆ. ಜೆನು ಕುರುಬ ಸುಮಾರು 40,000 ನಿವಾಸಿಗಳನ್ನು ಹೊಂದಿರುವ ನೀಲಗಿರಿಯಿಂದ…

Read More

ಚೈನ್ನೈ: ಖ್ಯಾತ ಸಂಗೀತ ಸಂಯೋಜಕ ಇಳಯರಾಜಾ ಅವರ ಮಗಳು ಭವತಾರಿಣಿ ದೀರ್ಘಕಾಲದ ಅನಾರೋಗ್ಯದಿಂದ ಜನವರಿ 25 ರಂದು ನಿಧನರಾದರು. ಅವರಿಗೆ 47 ವರ್ಷ ವಯಸ್ಸಾಗಿತ್ತು ಮತ್ತು ಶ್ರೀಲಂಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಭವತಾರಿಣಿ ಚಿಕಿತ್ಸೆಗಾಗಿ ಭಾರತದಿಂದ ಶ್ರೀಲಂಕಾಕ್ಕೆ ಪ್ರಯಾಣಿಸಿದ್ದಾರೆ. ಐದು ತಿಂಗಳ ಕಾಲ ಆಯುರ್ವೇದ ಚಿಕಿತ್ಸೆಗೆ ಒಳಗಾಗಿದ್ದರೂ, ಅವರ ಆರೋಗ್ಯ ಸುಧಾರಿಸಲಿಲ್ಲ. ಅವರು ಇಂದು ಸಂಜೆ 5: 20 ಕ್ಕೆ ನಿಧನರಾದರು. ಅವರ ದೇಹವನ್ನು ನಾಳೆ ಚೆನ್ನೈಗೆ ಸಾಗಿಸಲು ನಿರ್ಧರಿಸಲಾಗಿದೆ. ಮೃತ ಭವತಾರಿಣಿ ಚಲನಚಿತ್ರ ರಂಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು.  30ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಹಲವಾರು ಜನಪ್ರಿಯ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಅವರ ಅಕಾಲಿಕ ಸಾವು ಇಡೀ ಮನರಂಜನಾ ಜಗತ್ತಿನಲ್ಲಿ ಆಘಾತವನ್ನುಂಟು ಮಾಡಿದೆ. ಬಹುಮುಖ ಕಲಾವಿದೆಯಾಗಿ, ಅವರು ನಟಿ, ಹಿನ್ನೆಲೆ ಗಾಯಕಿ ಮತ್ತು ಸಂಗೀತ ಸಂಯೋಜಕರಾಗಿ ಉತ್ತಮ ಸಾಧನೆ ಮಾಡಿದರು. ಇಳಯರಾಜಾ ಅವರ ಮಗಳಾಗಿ, ಅವರು ತಮ್ಮ ತಂದೆ ಮತ್ತು ಸಹೋದರರೊಂದಿಗೆ ವಿವಿಧ ಚಲನಚಿತ್ರ ಸಂಗೀತ ಯೋಜನೆಗಳಲ್ಲಿ…

Read More

ಬೆಂಗಳೂರು: ದಿನಾಂಕ 29-01-2024ರಂದು ತಾಂತ್ರಿಕ ಪರೀಕ್ಷಾ ಮಂಡಳಿಯಿಂದ ನಡೆಸಲಾಗಿದ್ದಂತ ಡಿಪ್ಲೋಮಾ ಸೆಮಿಸ್ಟರ್ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸಲಾಗುತ್ತಿದೆ. ಈ ಕುರಿತಂತೆ ಸುತ್ತೋಲೆ ಹೊರಡಿಸಿರುವಂತ ತಾಂತ್ರಿಕ ಪರೀಕ್ಷಾ ಮಂಡಳಿಯ ಕಾರ್ಯದರ್ಶಿಗಳು 2023ರ ಡಿಸೆಂಬರ್ ತಿಂಗಳಿನಲ್ಲಿ ಡಿಪ್ಲೋಮಾ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲಾಗಿತ್ತು ಅಂತ ತಿಳಿಸಿದ್ದಾರೆ. ತಾಂತ್ರಿಕ ಪರೀಕ್ಷಾ ಮಂಡಳಿಯ ಡಿಪ್ಲೋಮಾ ಸೆಮಿಸ್ಟರ್ ಪರೀಕ್ಷೆಗಳ ಫಲಿತಾಂಶವನ್ನು ದಿನಾಂಕ 29-01-2024ರಂದು ಸೋಮವಾರ ಮಧ್ಯಾಹ್ನ 3 ಗಂಟೆಗೆ ಸಂಸ್ಥೆಯಲ್ಲಿ ಉಪಯೋಗಿಸುತ್ತಿರುವ BTELinx ಆನ್ ಲೈನ್ ವೆಬ್ ಪೋರ್ಟಲ್ ನಲ್ಲಿ ಮತ್ತು www.myexamresults.net ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ. https://kannadanewsnow.com/kannada/dont-fall-into-the-trap-of-offers-play-smart-stay-safe-govt-warns-gaming-lovers/ https://kannadanewsnow.com/kannada/big-news-another-good-news-for-state-government-employees-govt-orders-increase-in-in-charge-allowance/

Read More

ಮಂಡ್ಯ: ಜಿಲ್ಲೆಯಲ್ಲಿ ಹೊಟ್ಟೆ ಕಿಚ್ಚಿಗೆ ಬೆಳಎದು ನಿಂತಿದ್ದಂತ ಅಡಿಕೆ ಹಾಗೂ ತೆಂಗು ಸಸಿಗಳನ್ನೇ ಕಿಡಿಗೇಡಿಗಳು ಕಡಿದು ಹಾಕಿರೋ ಘಟನೆ ನಡೆದಿದೆ. ಈಗ ದುಷ್ಕರ್ಮಿಗಳ ಕಿಡಿಗೇಡಿ ಕೃತ್ಯಕ್ಕೆ ಅನ್ನದಾತ ಆಘಾತಕ್ಕೆ ಒಳಗಾಗಿದ್ದಾನೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೊಡ್ಡಚಿಕ್ಕನಹಳ್ಳಿ ಗ್ರಾಮದಲ್ಲಿ ಹೊಟ್ಟೆಕಿಚ್ಚಿಗೆ ಬೆಳೆದು ನಿಂತ ಅಡಿಕೆ ಮತ್ತು ತೆಂಗು ಸಸಿಗಳಿಗೆ ಮಚ್ಚು ಬೀಸಲಾಗಿದೆ. ಆಳೆತ್ತರ ಬೆಳೆದ ಅಡಿಕೆ ಮತ್ತು ತೆಂಗಿನ ಗಿಡಗಳನ್ನು ದುಷ್ಕರ್ಮಿಗಳು ಕಡಿದು ಹಾಕಿದ್ದಾರೆ. ನಾಗಮಂಗಲ ತಾಲ್ಲೂಕಿನ ದೊಡ್ಡಚಿಕ್ಕನಹಳ್ಳಿ‌ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶ್ರೀನಿವಾಸ್ ಎಂಬ ರೈತನ ಜಮೀನಿನಲ್ಲಿ ಕೃತ್ಯ ಎಸಗಲಾಗಿದೆ. 2 ತೆಂಗಿನ ಗಿಡ 39 ಅಡಿಕೆ ಸಸಿಗಳನ್ನ ದುಷ್ಕರ್ಮಿಗಳು ಕಡಿದು ಹಾಕಿದ್ದಾರೆ. ರೈತ ಶ್ರೀನಿವಾಸ್ ಸಹೋದರ ಕೃಷ್ಣೇಗೌಡರಿಂದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಈ ಸಂಬಂಧ ನಾಗಮಂಗಲ ಪೊಲೀಸ್ ಠಾಣೆಯಲ್ಲಿ ದೂರು‌ ದಾಖಲಾಗಿದ್ದು, ಪೊಲೀಸರು ದುಷ್ಕರ್ಮಿಗಳ ಪತ್ತೆ ಕಾರ್ಯ ಕೈಗೊಂಡಿದ್ದಾರೆ. ವರದಿ: ಗಿರೀಶ್ ರಾಜ್, ಮಂಡ್ಯ https://kannadanewsnow.com/kannada/dont-fall-into-the-trap-of-offers-play-smart-stay-safe-govt-warns-gaming-lovers/ https://kannadanewsnow.com/kannada/big-news-another-good-news-for-state-government-employees-govt-orders-increase-in-in-charge-allowance/

Read More

ಬೆಂಗಳೂರು: ರಾಜ್ಯದ 13 ಸಾವಿರ ಸರ್ಕಾರಿ ನೌಕರರಿಗೆ ಒಪಿಎಸ್ ಗ್ಯಾರಂಟಿಯನ್ನು ಜಾರಿಗೊಳಿಸಲಾಗಿದೆ. ಈ ಮೂಲಕ ರಾಜ್ಯ ಸರ್ಕಾರಿ ನೌಕರರ ಬಹು ದಿನಗಳ ಬೇಡಿಕೆ ಈಡೇರಿಸಲಾಗಿದೆ ಅಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ. ಈ ಬಗ್ಗೆ ಎಕ್ಸ್ ಮಾಡಿದ್ದು, ಸುಮಾರು 13 ಸಾವಿರ ನೌಕರರನ್ನು ಹಳೆ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಿದ್ದೇವೆ. ಇದರಿಂದಾಗಿ ಅಷ್ಟೂ ನೌಕರರ ಕುಟುಂಬಗಳಿಗೆ ನೆಮ್ಮದಿ ಸಿಗಲಿದೆ ಎಂದು ಭಾವಿಸಿದ್ದೇನೆ ಅಂತ ಹೇಳಿದ್ದಾರೆ. 2006 ಏಪ್ರಿಲ್‌ 4ಕ್ಕಿಂತ ಪೂರ್ವದಲ್ಲಿ ಹೊರಡಿಸಿದ್ದ ಅಧಿಸೂಚನೆ ಅನ್ವಯ ನೇಮಕಾತಿಗೆ ಅರ್ಜಿ ಸಲ್ಲಿಸಿ, ತಾಂತ್ರಿಕ ಕಾರಣಗಳಿಂದ ವಿಳಂಬವಾಗಿ ನೇಮಕಾತಿ ಆದೇಶ ಪಡೆದಿದ್ದ 11,366 ನೌಕರರನ್ನು ರಾಜ್ಯ ಸರ್ಕಾರ ಹಳೇ ಪಿಂಚಣಿ ಯೋಜನೆ ವ್ಯಾಪ್ತಿಗೆ (ಒಪಿಎಸ್‌) ಸೇರಿಸಿ ಆದೇಶ ಹೊರಡಿಸಿದೆ ಎಂದಿದ್ದಾರೆ. ಹಾಗೆಯೇ ಏಪ್ರಿಲ್‌ 1, 2006ರ ಪೂರ್ವದಲ್ಲಿ ಸರ್ಕಾರಿ ಹುದ್ದೆಗೆ ಆಯ್ಕೆಯಾಗಿ, ನಂತರ ಇತರೆ ಇಲಾಖೆಯ ಬೇರೆ ಹುದ್ದೆಗಳಿಗೆ ಮರು ಆಯ್ಕೆಯಾದವರೂ ಹಳೇ ಪಿಂಚಣಿ ಯೋಜನೆ ಆಯ್ಕೆ ಮಾಡಿಕೊಳ್ಳಲು ಆರ್ಥಿಕ ಇಲಾಖೆ ಅವಕಾಶ ನೀಡಿದೆ. ಇದರಿಂದ ಸುಮಾರು…

Read More

ಬೆಂಗಳೂರು: ನಗರದಲ್ಲಿನ ಪ್ರೀ ಸ್ಕೂಲ್ ಒಂದರಲ್ಲಿ ನಡೆದಂತ ನಿರ್ಲಕ್ಷ್ಯ ಘಟನೆಯಿಂದಾಗಿ 4 ವರ್ಷದ ಪುಟ್ಟ ಕಂದಮ್ಮ ಜೀವನ್ಮರಣ ಹೋರಾಟ ನಡೆಸುತ್ತಿರುವಂತೆ ಆಗಿತ್ತು. ಇದೀಗ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ಪುಟ್ಟ ಕಂದಮ್ಮ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ. ಬೆಂಗಳೂರಿನ ಹೆಣ್ಣೂರಿನ ಚೆಲ್ಲಕೆರೆಯಲ್ಲಿನ ಡೆಲ್ಲಿ ಪ್ರೀ ಸ್ಕೂಲ್ ನಲ್ಲಿ 4 ವರ್ಷದ ಜಿನಾ ಓದುತ್ತಿದ್ದಳು. ಜನವರಿ.22ರಂದು 3ನೇ ಮಹಡಿಯಿಂದ ಬಿದ್ದಿದ್ದಂತ ಜಿನಾಗೆ ತಲೆಗೆ ತೀವ್ರವಾಗಿ ಪೆಟ್ಟಾಗಿ ಗಾಯ ಕೂಡ ಆಗಿತ್ತು. ಕೂಡಲೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವಂತ 4 ವರ್ಷದ ಜಿನಾ ಸ್ಥಿತಿ ಚಿಂತಾಜನಕವಾಗಿರೋದಾಗಿ ನಿನ್ನೆ ತಿಳಿದು ಬಂದಿತ್ತು. ಇದೀಗ 4 ವರ್ಷದ ಪುಟ್ಟ ಬಾಲಕಿ ಜಿನಾ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ. ಹೀಗಾಗಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಅಂದಹಾಗೇ ಜಿನಾ ಇಷ್ಟು ತೀವ್ರವಾಗಿ ಗಾಯಗೊಂಡರೂ ಹೆಣ್ಣೂರು ಠಾಣೆಯ ಪೊಲೀಸರು ಮಾತ್ರ ಎಫ್ಐಆರ್ ದಾಖಲಿಸಿ, ಪ್ರೀ ಸ್ಕೂಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳೋ ಬದಲಾಗಿ, ಎನ್…

Read More

ಬೆಂಗಳೂರು: ನಾಳೆ ಗಣರಾಜ್ಯೋತ್ಸವವನ್ನು ದೇಶದೆಲ್ಲೆಡೆ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ಗಣರಾಜ್ಯೋತ್ಸವ ಸಮಾರಂಭಗಳಲ್ಲಿ ಡಾ.ಬಿಆರ್ ಅಂಬೇಡ್ಕರ್ ಪೋಟೋ ಇಡೋದು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಕುರಿತಂತೆ ರಾಜ್ಯ ಶಿಷ್ಟಾಚಾರದ ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ಜನವರಿ.26ರಂದು ರಾಜ್ಯದ ಸರ್ಕಾರಿ ಕಚೇರಿಗಳು, ಸರ್ಕಾರಿ ಸ್ವಾಮ್ಯಕ್ಕೆ ಒಳಪಡುವ ಸಂಸ್ಥೆಗಳು ಹಾಗೂ ಸರ್ಕಾರಿ ಶಾಲಾ ಕಾಲೇಜುಗಳು ಸೇರಿದಂತೆ ಸರ್ಕಾರದ ವತಿಯಿಂದ ನಡೆಯುವ ಎಲ್ಲಾ ಗಣರಾಜ್ಯೋತ್ಸವ ಸಮಾರಂಭಗಳಲ್ಲಿ ಸಂವಿಧಾನದ ಪಿತಾಮಹ, ಭಾರತ ರತ್ನ ಡಾ.ಬಿಆರ್ ಅಂಬೇಡ್ಕರ್ ಭಾವಚಿತ್ರವನ್ನು ಕಡ್ಡಾಯವಾಗಿ ಇಡುವಂತೆ ಸೂಚಿಸಿದ್ದಾರೆ. https://kannadanewsnow.com/kannada/state-govt-to-give-makmal-cap-to-employees-in-the-name-of-ops-former-cm-hdk/ https://kannadanewsnow.com/kannada/karnataka-budget-2019-governor-to-address-joint-house-on-feb-12/

Read More

ಬೆಂಗಳೂರು: ಕರ್ನಾಟಕ ಬಜೆಟ್ ಅನ್ನು ಮಂಡಿಸೋದಕ್ಕೆ ಬಜೆಟ್ ಅಧಿವೇಶನ ಆರಂಭಕ್ಕೆ ಈಗ ಮುಹೂರ್ತ ಫಿಕ್ಸ್ ಆಗಿದೆ. ಫೆಬ್ರವರಿ.12ರಂದು ಜಂಟಿ ಸದನವನ್ನು ಉದ್ದೇಶಿಸಿ ರಾಜ್ಯಪಾಲರ ಭಾಷಣದ ಬಳಿಕ ಬಜೆಟ್ ಅಧಿವೇಶನ ಆರಂಭಗೊಳ್ಳಲಿದೆ. ಈ ಕುರಿತಂತೆ ಕರ್ನಾಟಕ ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ ವಿಶಾಲಾಕ್ಷಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಹದಿಮೂರನೇ ವಿಧಾನಸಭೆಯ ಮೂರನೇ ಅಧಿವೇಶನವು ದಿನಾಂಕ 12-02-2024ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ವಿಧಾನಸೌಧದಲ್ಲಿರುವ ವಿಧಾನಸಭೆಯ ಸಭಾಂಗಣದಲ್ಲಿ ಸಮಾವೇಶಗೊಳ್ಳಲಿದೆ ಎಂದಿದ್ದಾರೆ. ಫೆಬ್ರವರಿ.12ರಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ವಿಧಾನಮಂಡಲದ ಉಭಯ ಸನದಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ. ಇನ್ನೂ ರಾಜ್ಯಪಾಲರ ಭಾಷಣದ ಬಳಿಕ ಫೆಬ್ರವರಿ.16ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಮ್ಮ ಚೊಚ್ಚಲ ರಾಜ್ಯ ಬಜೆಟ್ 2024-25 ಅನ್ನು ಮಂಡಿಸಲಿದ್ದಾರೆ. ಈ ಮೂಲಕ ಕರ್ನಾಟಕ ಬಜೆಟ್ ಮಂಡನೆಗೆ ಮುಹೂರ್ತ ಫಿಕ್ಸ್ ಆದಂತೆ ಆಗಿದೆ. https://kannadanewsnow.com/kannada/state-govt-to-give-makmal-cap-to-employees-in-the-name-of-ops-former-cm-hdk/ https://kannadanewsnow.com/kannada/dont-fall-into-the-trap-of-offers-play-smart-stay-safe-govt-warns-gaming-lovers/

Read More

ಬೆಂಗಳೂರು: ರೈಲ್ವೆ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸೋ ನಿಟ್ಟಿನಲ್ಲಿ ಕೆಲ ರೈಲುಗಳನ್ನು ಪ್ರಾಯೋಗಿಕವಾಗಿ ನಿಲುಗಡೆ ಮುಂದುವರೆಸಲಾಗಿದೆ. ಇನ್ನೂ ವಿಶೇಷ ರೈಲುಗಳ ಸಂಚಾರವನ್ನು ಮುಂದುವರೆಸಲಾಗಿದೆ. ಈ ಕುರಿತಂತೆ ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ್ ಕನಮಡಿ ಮಾಹಿತಿ ನೀಡಿದ್ದಾರೆ. I.ರೈಲುಗಳ ಪ್ರಾಯೋಗಿಕ ನಿಲುಗಡೆ ಮುಂದುವರಿಕೆ ಈ ಕೆಳಗೆ ತಿಳಿಸಲಾದ ನಿಲ್ದಾಣಗಳಲ್ಲಿ ಕೆಳಗಿನ ರೈಲುಗಳನ್ನು ಪ್ರಾಯೋಗಿಕ ಆಧಾರದ ಮೇಲೆ ಮುಂದಿನ ಆದೇಶದವರೆಗೆ ನಿಲುಗಡೆಯನ್ನು ಮುಂದುವರಿಸಲು ದಕ್ಷಿಣ ರೈಲ್ವೆಯು ಸೂಚಿಸಿದೆ. ವಿವರಗಳು ಈ ಕೆಳಗಿನಂತಿವೆ: 1. ರೈಲು ಸಂಖ್ಯೆ 16527 ಯಶವಂತಪುರ-ಕಣ್ಣೂರು ಎಕ್ಸ್ ಪ್ರೆಸ್ ರೈಲನ್ನು ಆಗಸ್ಟ್ 15, 2023 ರಿಂದ ಈಗಾಗಲೇ ಪರಪನಂಗಡಿ ನಿಲ್ದಾಣದಲ್ಲಿ ಪ್ರಾಯೋಗಿಕ ನಿಲುಗಡೆಯನ್ನು ಒದಗಿಸಲಾಗಿದ್ದು, ಮುಂದಿನ ಆದೇಶದವರೆಗೆ ಮುಂದುವರಿಸಲಾಗುತ್ತಿದೆ. 2. ರೈಲು ಸಂಖ್ಯೆ 16528 ಕಣ್ಣೂರು-ಯಶವಂತಪುರ ಎಕ್ಸ್‌ಪ್ರೆಸ್ ರೈಲನ್ನು ಆಗಸ್ಟ್ 15, 2023 ರಿಂದ ಈಗಾಗಲೇ ಪರಪನಂಗಡಿ ನಿಲ್ದಾಣದಲ್ಲಿ ಪ್ರಾಯೋಗಿಕ ನಿಲುಗಡೆಯನ್ನು ಒದಗಿಸಲಾಗಿದ್ದು, ಮುಂದಿನ ಆದೇಶದವರೆಗೆ ಮುಂದುವರಿಸಲಾಗುತ್ತಿದೆ. 3. ರೈಲು ಸಂಖ್ಯೆ 22677 ಯಶವಂತಪುರ-ಕೊಚುವೇಲಿ ಎಕ್ಸ್‌ಪ್ರೆಸ್…

Read More

ಈ ಭೂಮಿಯ ಮೇಲೆ ಜನರು ಹೆಚ್ಚಾಗಿ ಹೆದರುವ ದೇವರು ಅಂದರೆ ಶನಿದೇವ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಶನಿ ದೇವರು ಮಾನವ ಮಾಡುವ ಪಾಪ ಕರ್ಮಗಳಿಗೆ ಅಂಗವಾಗಿ ಅವರು ಪುಣ್ಯ ಮತ್ತು ಶಿಕ್ಷೆಯನ್ನ ಕೊಡುವ ಕಾರಣ ಜನರು ತಪ್ಪು ಮಾಡುವ ಮುನ್ನ ಒಮ್ಮೆ ಶನಿ ದೇವರನ್ನ ಜ್ಞಾಪಕ ಮಾಡುತ್ತಾರೆ ಎಂದು ಹೇಳಬಹುದು. ಇನ್ನು ಶನಿ ದೇವರ ದೃಷ್ಟಿಯಿಂದ ಪಾರಾಗಲು ಜನರು ಶನಿ ದೇವರ ವೃತ ಮತ್ತು ಎಳ್ಳೆಣ್ಣೆಯ ದೀಪವನ್ನ ಶನಿ ದೇವರಿಗೆ ಹಚ್ಚುವುದರ ಮೂಲಕ ಶನಿಯ ಆರಾಧನೆಯನ್ನ ಮಾಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಪಂಡಿತರು ಮತ್ತು ಶಾಸ್ತ್ರ ಹೇಳುವ ಪ್ರಕಾರ ಮಾನವನ ಶರೀರದಲ್ಲಿ ಇಂತಹ ಲಕ್ಷಣಗಳು ಕಂಡುಬಂದರೆ ಶನಿ ದೇವರ ಕೃಪೆ ಅವರ ಮೇಲೆ ಇದೆ ಅನ್ನುವ ಸೂಚನೆ ಆದಾಗಿದೆ ಎಂದು ಶಾಸ್ತ್ರ ಹೇಳುತ್ತದೆ. ಹಾಗಾದರೆ ನಮ್ಮ ಶರೀರದಲ್ಲಿ ಯಾವ ಲಕ್ಷಣಗಳು ಕಂಡುಬಂದರೆ ನಮಗೆ ಶನಿ ದೇವರ ಕೃಪೆ ಸಿಕ್ಕಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ…

Read More