Author: kannadanewsnow09

ಬೆಂಗಳೂರು: ರಾಜ್ಯದಲ್ಲಿ ರೈತರ ಪೋಡಿ ಸಮಸ್ಯೆ ನಿವಾರಣೆಗೆ ಮಹತ್ವದ ಕ್ರಮ ವಹಿಸಲಾಗುತ್ತಿದೆ. ನವೆಂಬರ್.30ರ ನಾಳೆಯಿಂದ ಡಿಜಿಟಲ್ ಪೋಡಿ ಅಭಿಯಾನ ಆರಂಭಗೊಳ್ಳುತ್ತಿದ್ದು, ರೈತರ ಪೋಡಿ ದುರಸ್ಥಿ ಸಮಸ್ಯೆ ಸಂಪೂರ್ಣ ಕ್ಲಿಯರ್ ಆಗಲಿದೆ ಅಂತ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, “ರಾಜ್ಯದಲ್ಲಿ ಒಟ್ಟು 1,96,000 ಸರ್ಕಾರಿ ಸರ್ವೇ ನಂಬರ್ ಇದ್ದು, ನಾನಾ ಸರ್ಕಾರಿ ಯೋಜನೆಗಳ ಅಡಿ ಕಳೆದ 30-40 ವರ್ಷಗಳಿಂದ ಲಕ್ಷಾಂತರ ಜನರಿಗೆ ಸರ್ಕಾರಿ ಜಮೀನು ಮಂಜೂರಾಗಿದೆ. ಆದರೆ, 30-40 ವರ್ಷ ಆಗಿದ್ದರೂ ಜಮೀನಿಗೆ ಪೋಡಿ ದುರಸ್ಥಿ ಆಗಿಲ್ಲ. ದಾಖಲೆ ಪಕ್ಕ ಆಗಿಲ್ಲ. ಇಂತಹ ಪ್ರಕರಣಗಳೇ ರಾಜ್ಯದಲ್ಲಿ ಕನಿಷ್ಟ 25 ಲಕ್ಷ ಇರಬಹುದು. ಪಕ್ಕ ಪೋಡಿ ದುರಸ್ಥಿ ಮಾಡಲು ನಮೂನೆ 1 ರಿಂದ 5 ಹಾಗೂ 5 ರಿಂದ 10 ದಾಖಲೆ ಲಭ್ಯವಿರಬೇಕು. ಆದರೆ, ಈ ದಾಖಲೆಗಳಿಲ್ಲದೆ ಲಕ್ಷಾಂತರ ರೈತರು ಸಂಕಷ್ಟಕ್ಕೆ ಒಳಗಾದ್ದಾರೆ. ಸರ್ಕಾರಿ ಕಚೇರಿಗಳಿಗೆ ದಶಕಗಳಿಂದ ಅಲೆಯುತ್ತಿದ್ದರೂ ಪರಿಹಾರ ಮಾತ್ರ ಲಭ್ಯವಾಗಿಲ್ಲ” ಎಂದು ವಿಷಾದಿಸಿದರು. ಮುಂದುವರೆದು,…

Read More

ಬೆಂಗಳೂರು : ಹಿಂಗಾರು ಮಳೆ ಅವಧಿಯಲ್ಲಿ ರಾಜ್ಯಾದ್ಯಂತ 1,58,087 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಮುಂದಿನ ಒಂದು ವಾರದಲ್ಲಿ ಎಲ್ಲಾ ರೈತರ ಬ್ಯಾಂಕ್ ಖಾತೆಗಳಿಗೂ ಪರಿಹಾರ ಹಣ ಜಮೆಯಾಗಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು. ಶುಕ್ರವಾರ ವಿಕಾಸ ಸೌಧದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ಜಿಲ್ಲಾಧಿಕಾರಿಗಳ ಸಭೆ ನಡೆಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, “ ಹಿಂಗಾರು ಹಂಗಾಮಿನಲ್ಲಿ ಉಂಟಾಗಿರುವ ಬೆಳೆ ಹಾನಿ ಸಂಬಂಧಿಸಿದಂತೆ ಕಳೆದ ಒಂದು ತಿಂಗಳಿನಿಂದ ಜಂಟಿ ಸಮೀಕ್ಷೆ ನಡೆಸಲಾಗಿದ್ದು, ಡೇಟಾ ಎಂಟ್ರಿ ಕೆಲಸಗಳೂ ಮುಕ್ತಾಯದ ಹಂತದಲ್ಲಿದೆ. ರೂ. 120 ಕೋಟಿ ವರೆಗೆ ನಷ್ಟ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದ್ದು, ಮುಂದಿನ ಒಂದು ವಾರದಲ್ಲಿ ಎಲ್ಲಾ ರೈತರ ಖಾತೆಗಳಿಗೂ ಹಣ ಜಮೆ ಆಗಲಿದೆ” ಎಂದು ತಿಳಿಸಿದರು. ಮುಂದುವರೆದು, “ಜಿಲ್ಲಾಧಿಕಾರಿಗಳ ಖಾತೆಯಲ್ಲೇ ರೂ. 642 ಕೋಟಿ ಹಣ ಲಭ್ಯವಿದ್ದು, ಈ ಹಣದಲ್ಲೇ ಪರಿಹಾರ ಶೀಘ್ರ ವಿತರಿಸಲಾಗುವುದು. ಮುಂಗಾರು ಹಂಗಾಮಿನಲ್ಲಿ ಸುಮಾರು 77,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿತ್ತು.…

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ ಬಗರ್ ಹುಕುಂ ಸಾಗುವಳಿದಾರರಿಗೆ ಭರ್ಜರಿ ಗುಡ್ ನ್ಯೂಸ್ ನೀಡಲಾಗಿದೆ. ಬರೋಬ್ಬರಿ 1.26 ಲಕ್ಷ ಅರ್ಜಿಗಳು ಸಾಗುವಳಿ ಚೀಟಿಗೆ ಅರ್ಹವಾಗಿವೆ. ಮೊದಲ ಹಂತದಲ್ಲಿ ಡಿಸೆಂಬರ್.15ರೊಳಗೆ 5,000 ರೈತರಿಗೆ ಸಾಗುವಳಿ ಚೀಟಿ ವಿತರಣೆ ಮಾಡುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಶುಕ್ರವಾರ ವಿಕಾಸ ಸೌಧದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ಜಿಲ್ಲಾಧಿಕಾರಿಗಳ ಸಭೆ ನಡೆಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಬಗರ್ ಹುಕುಂ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳ ಪೈಕಿ ಕನಿಷ್ಟ 5,000 ಜನರ ಅರ್ಜಿಗಳನ್ನಾದರೂ “ಬಗರ್ ಹುಕುಂ” ಕಮಿಟಿಯ ಎದುರು ಮಂಡಿಸಿ ಡಿ.15ರ ಒಳಗೆ ಸಾಗುವಳಿ ಚೀಟಿ ನೀಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಭರವಸೆ ನೀಡಿದರು. ಈ ಬಗ್ಗೆ ಮಾಹಿತಿ ನೀಡಿದ ಅವರು, “ರಾಜ್ಯಾದ್ಯಂತ ಲಕ್ಷಾಂತರ ಜನ ಬಗರ್ ಹುಕುಂ ಅಡಿಯಲ್ಲಿ ಜಮೀನು ಮಂಜೂರಾತಿಗೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಈ ಪೈಕಿ 1,26,000 ಅರ್ಜಿಗಳನ್ನು ಮಾತ್ರ ಅರ್ಹ ಎಂದು ಪರಿಗಣಿಸಲಾಗಿದೆ. ಕೆಲ…

Read More

ಬೆಂಗಳೂರು: ಗುಂತಕಲ್ ವಿಭಾಗದ ಗುಂತಕಲ್-ಗೂತ್ತಿ ಭಾಗದ ಬುಗ್ಗಾನಿ ಸಿಮೆಂಟ್ ನಗರ, ಕೃಷ್ಣಮ್ಮ ಕೋನಾ ಮತ್ತು ಪಾಣ್ಯಂ ನಿಲ್ದಾಣಗಳ ನಡುವೆ ಜೋಡಿ ಮಾರ್ಗ ಕಾಮಗಾರಿ ಡಿಸೆಂಬರ್ 11 ರಿಂದ 13 ರವರೆಗೆ ಕೈಗೊಳ್ಳುವುದರಿಂದ, ಈ ಕೆಳಗಿನ ರೈಲುಗಳ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ದಕ್ಷಿಣ ಮಧ್ಯ ರೈಲ್ವೆಯು ಸೂಚಿಸಿದೆ. ಬದಲಾದ ಮಾರ್ಗದ ಮೂಲಕ ಚಲಿಸುವ ರೈಲುಗಳ ವಿವರ ಈ ಕೆಳಗಿನಂತಿವೆ: 1. ಡಿಸೆಂಬರ್ 6 ರಂದು ಪುರಿಯಿಂದ ಹೊರಡುವ ರೈಲು ಸಂಖ್ಯೆ 22883 ಪುರಿ-ಯಶವಂತಪುರ ಗರೀಬ್ ರಥ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ನಂದ್ಯಾಲ್, ಯರ್ರಾಗುಂಟ್ಲ, ಗೂತ್ತಿ ಫೋರ್ಟ್, ಅನಂತಪುರ ನಿಲ್ದಾಣಗಳ ಮೂಲಕ ಚಲಿಸುತ್ತದೆ. ಮಾರ್ಗ ಬದಲಾವಣೆಯಿಂದ ಡೋನ್ ನಿಲ್ದಾಣದಲ್ಲಿ ನಿಯಮಿತ ನಿಲುಗಡೆ ಇರುವುದಿಲ್ಲ. 2. ಡಿಸೆಂಬರ್ 7 ರಂದು ಯಶವಂತಪುರ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 22884 ಯಶವಂತಪುರ-ಪುರಿ ಗರೀಬ್ ರಥ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಅನಂತಪುರ, ಗೂತ್ತಿ ಫೋರ್ಟ್, ಯರ್ರಗುಂಟ್ಲಾ, ನಂದ್ಯಾಲ್ ನಿಲ್ದಾಣಗಳ ಮೂಲಕ ಚಲಿಸಲಿದೆ. ಹೀಗಾಗಿ ಡೋನ್…

Read More

ಬೆಂಗಳೂರು: ಬಿಬಿಎಂಪಿ ಕಂದಾಯ ವಿಭಾಗಗಕ್ಕೆ ಸಂಬಂಧಿಸಿದ ಅಧಿಕಾರಿಗಳು ಪ್ರತಿ ಬುಧವಾರ ಕಂದಾಯ ಮತ್ತು ಕುಂದು ಕೊರತೆಗಳ ಅದಾಲತ್” ನಡೆಸಿ ಸಾರ್ವಜನಿಕರ ಕುಂದುಕೊರತೆಗಳು ಮತ್ತು ಮನವಿಗಳನ್ನು ವಿಲೇವಾರಿ ಮಾಡಲು ಕಂದಾಯ ವಿಭಾಗದ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್ ರವರು ಆದೇಶ ಹೊರಡಿಸಿದ್ದಾರೆ. ಪಾಲಿಕೆಯ ಮುಖ್ಯ ಆಯುಕ್ತರು ರವರ ನಿರ್ದೇಶನದಂತೆ ಕಂದಾಯ ವಿಭಾಗದ ಅಧಿಕಾರಿಗಳು ಅವರವರ ಕಛೇರಿಗಳಲ್ಲಿ ಪ್ರತಿ ಬುಧವಾರ ಬೆಳಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 02.00 ಗಂಟೆಯವರೆಗೆ ಕಡ್ಡಾಯವಾಗಿ ಹಾಜರಿದ್ದು, “ಕಂದಾಯ ಮತ್ತು ಕುಂದು ಕೊರತೆಗಳ ಅದಾಲತ್” ನಡೆಸಬೇಕು. ಸದರಿ ಅಧಿಕಾರಿಗಳನ್ನು ಯಾವುದೇ ಭೌತಿಕ ಸಭೆಗೆ ಅಥವಾ ಸಾಮಾನ್ಯ ಸಭೆಗೆ, ವರ್ಚುಯಲ್ ಸಭೆಗೆ ಕರೆಯಬಾರದು. ಸದರಿ ವೇಳೆಯಲ್ಲಿ ಕಛೇರಿ ಸಿಬ್ಬಂದಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು ಹಾಗೂ ಸಾರ್ವಜನಿಕರಿಂದ ಸ್ವೀಕರಿಸುವ ಎಲ್ಲಾ ಕುಂದು ಕೊರತೆಗಳನ್ನು ಮತ್ತು ಮನವಿಗಳನ್ನು “ಕಂದಾಯ ಮತ್ತು ಕುಂದು ಕೊರತೆಗಳ ಅದಾಲತ್” ನಡೆಸಿ ಶೀಘ್ರವಾಗಿ ವಿಲೇವಾರಿ ಮಾಡುವುದು. ಪಾಲಿಕೆಯ ಎಲ್ಲಾ ವಲಯ ಜಂಟಿ ಆಯುಕ್ತರುಗಳು, ವಲಯ ಉಪ ಆಯುಕ್ತರುಗಳು (ಕಂದಾಯ), ಕಂದಾಯ…

Read More

ಮಧ್ಯ ಚೀನಾದಲ್ಲಿ ಚಿನ್ನದ ಮಹತ್ವದ ಆವಿಷ್ಕಾರವನ್ನು ಮಾಡಲಾಗಿದೆ. ಅಂದಾಜುಗಳು ಸರಿಸುಮಾರು 1,000 ಮೆಟ್ರಿಕ್ ಟನ್ ಉತ್ತಮ ಗುಣಮಟ್ಟದ ಅದಿರಿನ ನಿಕ್ಷೇಪವನ್ನು ಸೂಚಿಸುತ್ತವೆ. ಚೀನಾದ ಸರ್ಕಾರಿ ಮಾಧ್ಯಮಗಳು ವರದಿ ಮಾಡಿದ ಈ ಸಂಶೋಧನೆಯ ಮೌಲ್ಯ ಸುಮಾರು 83 ಬಿಲಿಯನ್ ಯುಎಸ್ ಡಾಲರ್ ಆಗಿದ್ದು, ಇದು ಇದುವರೆಗೆ ಪತ್ತೆಯಾದ ಅತಿದೊಡ್ಡ ಚಿನ್ನದ ನಿಕ್ಷೇಪವಾಗಿದೆ, ಇದು ಸುಮಾರು 900 ಮೆಟ್ರಿಕ್ ಟನ್ ಹೊಂದಿರುವ ದಕ್ಷಿಣ ಆಫ್ರಿಕಾದ ಸೌತ್ ಡೀಪ್ ಗಣಿಯನ್ನು ಮೀರಿಸಿದೆ. ಹುನಾನ್ ಪ್ರಾಂತ್ಯದ ಭೂವೈಜ್ಞಾನಿಕ ಬ್ಯೂರೋ ಈ ನಿಕ್ಷೇಪವು ಪಿಂಗ್ಜಿಯಾಂಗ್ ಕೌಂಟಿಯಲ್ಲಿದೆ ಎಂದು ಘೋಷಿಸಿತು, ಅಲ್ಲಿ ಭೂವಿಜ್ಞಾನಿಗಳು 2 ಕಿಲೋಮೀಟರ್ ಆಳದಲ್ಲಿ 40 ಚಿನ್ನದ ರಕ್ತನಾಳಗಳನ್ನು ಗುರುತಿಸಿದ್ದಾರೆ. ಚಿನ್ನದ ನಿಕ್ಷೇಪಗಳು ವಿವಿಧ ಭೂವೈಜ್ಞಾನಿಕ ಪ್ರಕ್ರಿಯೆಗಳ ಮೂಲಕ ರೂಪುಗೊಳ್ಳುತ್ತವೆ, ಇದು ಲಕ್ಷಾಂತರ ವರ್ಷಗಳಿಂದ ಬಂಡೆಗಳ ಮೂಲಕ ಚಿನ್ನ-ಸಮೃದ್ಧ ದ್ರವಗಳ ಚಲನೆಯನ್ನು ಒಳಗೊಂಡಿರುತ್ತದೆ. ಬಿಸಿಯಾದ, ಖನಿಜ ಸಮೃದ್ಧ ದ್ರವಗಳು ಭೂಮಿಯ ಹೊರಪದರದಲ್ಲಿನ ಮುರಿತಗಳು ಮತ್ತು ಬಿರುಕುಗಳ ಮೂಲಕ ಪ್ರವಹಿಸುತ್ತವೆ. ಈ ದ್ರವಗಳು ಸುತ್ತಮುತ್ತಲಿನ ಬಂಡೆಗಳಿಂದ ಚಿನ್ನವನ್ನು ಕರಗಿಸುತ್ತವೆ…

Read More

ನವದೆಹಲಿ: ಆದಾಯ ತೆರಿಗೆ ಇಲಾಖೆ ಪ್ರಾರಂಭಿಸಿದ ಪ್ಯಾನ್ 2.0 ಯೋಜನೆಯನ್ನು ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (ಸಿಸಿಇಎ) ಅನುಮೋದಿಸಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಯು ಪ್ಯಾನ್ ಮತ್ತು ಟ್ಯಾನ್ ನಿರ್ವಹಣಾ ವ್ಯವಸ್ಥೆಗಳನ್ನು ಡಿಜಿಟಲೀಕರಣ ಮತ್ತು ನವೀಕರಿಸುವ ಗುರಿಯನ್ನು ಹೊಂದಿದೆ, ಅವುಗಳನ್ನು ಬಳಕೆದಾರರಿಗೆ ಹೆಚ್ಚು ಪ್ರವೇಶಿಸಲು ಮತ್ತು ಪರಿಣಾಮಕಾರಿಯಾಗಿ ಮಾಡುತ್ತದೆ. ಪರಿಷ್ಕೃತ ವ್ಯವಸ್ಥೆಯನ್ನು ವರ್ಧಿತ ಸೇವಾ ದಕ್ಷತೆ, ಬಲವಾದ ಕುಂದುಕೊರತೆ ಪರಿಹಾರ ಕಾರ್ಯವಿಧಾನಗಳು ಮತ್ತು ಸುಧಾರಿತ ಡೇಟಾ ಭದ್ರತೆಯನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಬಳಕೆದಾರರು ಸರಳೀಕೃತ ಆನ್ಲೈನ್ ಅಪ್ಲಿಕೇಶನ್ಗಳು, ತಡೆರಹಿತ ನವೀಕರಣಗಳು ಮತ್ತು ಅನುಕೂಲಕರ ಡಿಜಿಟಲ್ ಪ್ಯಾನ್ ಮೌಲ್ಯಮಾಪನವನ್ನು ಎದುರು ನೋಡಬಹುದು. ಅಸ್ತಿತ್ವದಲ್ಲಿರುವ ಪ್ಯಾನ್ ಕಾರ್ಡ್ ಹೊಂದಿರುವವರು ಈ ಹೊಸ ಯೋಜನೆಯಡಿ ಮತ್ತೆ ಅರ್ಜಿ ಸಲ್ಲಿಸುವ ಬಗ್ಗೆ ಚಿಂತಿಸಬೇಕಾಗಿಲ್ಲ. ಕ್ಯೂಆರ್ ಕೋಡ್ಗಳಂತಹ ಸುಧಾರಿತ ವೈಶಿಷ್ಟ್ಯಗಳನ್ನು ಒಳಗೊಂಡಿರುವ ನವೀಕರಿಸಿದ ಪ್ಯಾನ್ ಕಾರ್ಡ್ಗಳನ್ನು ತೆರಿಗೆದಾರರಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನೀಡಲಾಗುವುದು ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಕ್ಯಾಬಿನೆಟ್ ಬ್ರೀಫಿಂಗ್ ಸಮಯದಲ್ಲಿ ದೃಢಪಡಿಸಿದರು. ನೀವು ಹೊಸ ಪ್ಯಾನ್ ಕಾರ್ಡ್…

Read More

ಬೆಳಗಾವಿ: ರಾಜ್ಯದ ಮಹಿಳಾ ಹೋರಾಟಗಾರ್ತಿಯಾಗಿ ಗುರ್ತಿಸಿಕೊಂಡಿದ್ದು, ಅನೇಕ ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಕೊಡಿಸಿದ್ದಂತ ಮಹಿಳೆಗೆ ಯೋಧನೊಬ್ಬ ಲವ್ ಸೆಕ್ಸ್ ದೋಖಾ ಮಾಡಿರೋದಾಗಿ ತಿಳಿದು ಬಂದಿದೆ. ಈ ಕಾರಣದಿಂದಲೇ ಹೋರಾಟಗಾರ್ತಿ, ಯೋಧನ ಮನೆಯ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಮಚ್ಚ ಗ್ರಾಮ ಪ್ರಮೋದಾ ಹಜಾರೆ ಅವರೇ ಲವ್, ಸೆಕ್ಸ್ ದೋಖಾಗೆ ಒಳಗಾದವರು. ಬೆಳಗಾವಿಯ ಬಿಜಿಗರ್ಣಿ ಗ್ರಾಮದ ಯೋಧ ಅಕ್ಷಯ್ ನಲವಡೆ ಫೇಸ್ ಬುಕ್ ಮೂಲಕ ಪ್ರಮೋದಾಗೆ ಪರಿಚಯವಾಗಿದ್ದರು. ಕಳೆದ 6 ವರ್ಷಗಳ ಹಿಂದೆ ಪರಿಚಯವಾಗಿದ್ದಂತ ಇವರ ನಡುವೆ ಪ್ರೀತಿ ಬೆಳೆದಿತ್ತು. ತನಗಿಂತ 14 ವರ್ಷ ಹಿರಿಯ ಮಹಿಳೆಯನ್ನು ಅಕ್ಷಯ್ ಪ್ರೀತಿ ಮಾಡುವುದಾಗಿ ನಂಬಿಸಿದ್ದನು. ಇದಷ್ಟೇ ಅಲ್ಲದೇ ಮದುವೆಯಾಗುವುದಾಗಿ ಹೋರಾಟಗಾರ್ತಿ ಪ್ರಮೋದಾ ಹಜಾರೆಗೆ ನಂಬಿಸಿ, ಆಕೆಯೊಂದಿಗೆ ದೈಹಿಕ ಸಂಪರ್ಕ ಕೂಡ ಬೆಳೆಸಿದ್ದನಂತೆ. ಆ ಬಳಿಕ ಪ್ರಮೋದಾ ಹಜಾರೆಗೆ ಮನೆಗೆ ರಜೆಗೆ ಬಂದಿದ್ದಂತ ಅಕ್ಷಯ್ ಆಕೆಯ ಮನೆಯಲ್ಲಿನ ದೇವರ ಕೋಣೆಯಲ್ಲಿ ಮದುವೆಯಾಗಿದ್ದನಂತೆ. ರಜೆಗಾಗಿ ಕೆಲ ದಿನಗಳ ಹಿಂದೆ ಬಂದು 15 ದಿನಗಳ ಕಾಲ ಪ್ರಮೋದಾ…

Read More

ಬೆಂಗಳೂರು: ಬಿಡಿಎ ವಿಷಯದಲ್ಲಿ ಬಿ.ಎಸ್.ವೈ ಪ್ರಾಸಿಕ್ಯೂಶನ್‍ಗೆ ಕೇಳಿದ್ದೀರಿ. ನಿನ್ನೆ ಸಂಪುಟದಲ್ಲಿ ತೀರ್ಮಾನ ಮಾಡಿದ್ದೀರಿ. ಈ ಕೇಸು ಖುಲಾಸೆ ಆಗಿದೆ. ಆದರೂ ನೀವೇನು ಮಾಡಲು ಹೊರಟಿದ್ದೀರಿ? ಇದು ಬಿಜೆಪಿ ನಾಯಕರ ವಿರುದ್ಧದ ಷಡ್ಯಂತ್ರ ಮತ್ತು ಹಗೆತನದ ರಾಜಕೀಯ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದರು. ವಿಧಾನಸೌಧದ ಕೊಠಡಿ ಸಂಖ್ಯೆ 155 ರಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಮ್ಮ ಸರಕಾರದ ಅಬಕಾರಿ ಸಚಿವರ ವಿರುದ್ಧ ಆರೋಪಗಳಿವೆ. ವಿಡಿಯೋಗಳು, ಆಡಿಯೋಗಳೂ ಬಂದಿವೆ. ನೀವೇನು ಮಾಡಿದ್ದೀರಿ? ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿದ್ದೀರಿ. ಸಂಘಟನೆಗಳು 700 ಕೋಟಿ ಲಂಚ ಸಂಗ್ರಹ ಸಂಬಂಧ ಸಚಿವ ತಿಮ್ಮಾಪುರ ಅವರ ವಿರುದ್ಧ ಆಪಾದನೆ ಮಾಡಿವೆ. 700 ಕೋಟಿ ಲಂಚದ ಹಗರಣ ಇದ್ದರೂ ಕೂಡ ನೀವು ಅವರನ್ನು ರಕ್ಷಿಸುತ್ತೀರಿ. ಅಮಾನತಾದ ಅಧಿಕಾರಿಗಳು ಯಾರ ಏಜೆಂಟರು ಎಂದು ತಿಳಿಸಲು ಆಗ್ರಹಿಸಿದರು. ಅವರು ಸಚಿವರ ಏಜೆಂಟರೇ? ಅಥವಾ ಮುಖ್ಯಮಂತ್ರಿಗಳ ಏಜೆಂಟರಾಗಿದ್ದರೇ? ಅವರ ತಲೆದಂಡ ಮಾತ್ರ ಯಾಕೆ? ಸಚಿವರ ತಲೆದಂಡ ಯಾಕಾಗಬಾರದು ಎಂದು…

Read More

ಬೆಂಗಳೂರು: ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಸಂಭವಿಸಿದೆ. ದಿನೇಶ್ ಗುಂಡೂರಾವ್ ಅವರು ಆರೋಗ್ಯ ಸಚಿವರಾಗಲು ಯೋಗ್ಯರೇ? ಅವರೇನು ವೈದ್ಯರೇ? ಎಂಬಿಬಿಎಸ್ ಓದಿದವರೇ? ಪಿಎಚ್‍ಡಿ ಆಗಿದೆಯೇ? ಎಂದು ಕೇಳಿದರು. ದನಕರುಗಳಿಗೆ ಕೊಡುವ ಔಷಧಿಗಳು ಆಸ್ಪತ್ರೆಗೆ ಸರಬರಾಜಾದ ಬಗ್ಗೆ ಸದನದಲ್ಲಿ ಕೇಳಿದ್ದೆವು. ಅದು ಮುದ್ರಣದ ತಪ್ಪು ಎಂದಿದ್ದರು. ಬಳಿಕ ವರದಿ ಬಂದಾಗ ಅದಾಗಿದ್ದು ನಿಜ; ವಿಷಯ ತಿಳಿದು ವಾಪಸ್ ಕಳಿಸಿದ್ದಾಗಿ ಹೇಳಿದ್ದರು ಎಂದು ಛಲವಾದಿ ನಾರಾಯಣಸ್ವಾಮಿ ಅವರು ವಿವರಿಸಿದರು. ಯಾದಗಿರಿಯಲ್ಲಿ ವೆಟರ್ನರಿ ಔಷಧಿ ಆಸ್ಪತ್ರೆಗೆ ಸರಬರಾಜಾಗಿದೆ. ಬಾಣಂತಿಯರಿಗೆ ಕೊಟ್ಟ ಔಷಧಿ ಕಳಪೆ ಆಗಿದ್ದುದಲ್ಲದೇ, ಕೊಟ್ಟ ದ್ರಾವಣಗಳು ಕಳಪೆ ಎಂದು ವರದಿ ಬರುತ್ತಿದೆ. ಹೀಗಿದ್ದರೂ ಅವರನ್ನು ಬದಲಿಸಿಲ್ಲ; ಇದು ಜೀವಗಳ ಜೊತೆ ಆಟ. ದಿನೇಶ್ ಗುಂಡೂರಾವ್ ಅವರನ್ನು ತಕ್ಷಣ ವಜಾ ಮಾಡಬೇಕೆಂದು ಆಗ್ರಹಿಸಿದರು. https://kannadanewsnow.com/kannada/india-will-not-visit-pakistan-for-icc-champions-trophy-mea/ https://kannadanewsnow.com/kannada/big-news-bellary-district-hospital-death-case-explosive-element-revealed-in-investigation/

Read More