Author: kannadanewsnow09

ಬೆಂಗಳೂರು: “ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ. ಎಲ್ಲಾ ತಾಲೂಕಿಗೂ ನೀರು ಒದಗಿಸಲು ಯೋಜನೆ ರೂಪಿಸಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶನಿವಾರ ಪ್ರತಿಕ್ರಿಯಿಸಿದರು. “ಹೇಮಾವತಿ ಲಿಂಕ್ ಕೆನಾಲ್ ವಿಚಾರವಾಗಿ ಜನಪ್ರತಿನಿಧಿಗಳ ಸಭೆ ಕರೆದು, ಅವರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಈ ಹಿಂದೆ ಶಾಸಕರು ತಾಂತ್ರಿಕ ಸಮಿತಿ ರಚಿಸಿ ಎಂದಿದ್ದರು. ತಾಂತ್ರಿಕ ಸಮಿತಿ ವರದಿ ನಂತರ ಕಾಮಗಾರಿಗೆ ಮುಂದಾದರೂ ಮತ್ತೆ ಪ್ರತಿಭಟನೆ ಮಾಡಿದ್ದರು. ಅವರು ಪೈಪ್ ಲೈನ್ ಹಾಕಬೇಡಿ ತೆರೆದ ಕಾಲುವೆಯಲ್ಲಿ ನೀರು ತೆಗೆದುಕೊಂಡು ಹೋಗಿ ಎಂದು ಹೇಳುತ್ತಿದ್ದಾರೆ. ಪೈಪ್ ಲೈನ್ ಮಾಡುವುದು ಸರ್ಕಾರದ ತೀರ್ಮಾನ” ಎಂದು ತಿಳಿಸಿದರು. “ಕೇಂದ್ರ ಸಚಿವ ಸೋಮಣ್ಣ ಅವರು ಭಾರತೀಯ ವಿಜ್ಞಾನ ಸಂಸ್ಥೆ ತಜ್ಞರಿಂದ ಪರಿಶೀಲನೆಗೆ ಶಿಫಾರಸ್ಸು ಮಾಡಿದ್ದು, ಇದಕ್ಕೆ ಒಪ್ಪಿಗೆ ನೀಡಲಾಗಿದೆ. ನಮಗೆ ಕೇವಲ ಕುಣಿಗಲ್ ತಾಲೂಕು ಮಾತ್ರವಲ್ಲ. ಇಡೀ ತುಮಕೂರು ಜಿಲ್ಲೆಗೆ ನೀರು ಒದಗಿಸಬೇಕಿದ್ದು, ಅದಕ್ಕೆ ಪೂರಕವಾಗಿ ನಾನು ಯೋಜನೆ ಸಿದ್ಧಪಡಿಸಿದ್ದೇನೆ.…

Read More

ಮೈಸೂರು: ಪ್ರೀತಿಯ ವಿಚಾರಕ್ಕೆ ಶಿಕ್ಷಕಿಯ ಮೇಲೆ ಹಲ್ಲೆ ಮಾಡಿದ್ದಲ್ಲದೇ ಆಕೆಯನ್ನು ಚಾಕುವಿನಿಂದ ಇರಿದು ಯುವಕನೊಬ್ಬ ಹತ್ಯೆ ಮಾಡಿರುವಂತ ಘಟನೆ ಮೈಸೂರಲ್ಲಿ ನಡೆದಿದೆ. ಮೈಸೂರಿನ ಅಶೋಕಪುರಂನಲ್ಲಿ ಪಾಂಡವಪುರ ಎಲೆಕೆರೆ ಹ್ಯಾಂಡ್ ಪೋಸ್ಟ್ ಮೂಲದ ಪೂರ್ಣಿಮಾ(36) ಎಂಬಾಕೆಯನ್ನುಕ್ಯಾತನಹಳ್ಳಿ ಗ್ರಾಮದ ಅಭಿಷೇಕ್ ಎಂಬಾತ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ. ಅಂದಹಾಗೇ ಪೂರ್ಣಿಮಾ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಳು. ಆಕೆಯನ್ನು ಅಭಿಷೇಕ್ ಪ್ರೀತಿಸುತ್ತಿದ್ದನು. ಪ್ರೀತಿಯ ವಿಚಾರಕ್ಕಾಗಿ ಕೋಪಗೊಂಡ ಅಭಿಷೇಕ್ ಶಿಕ್ಷಕಿ ಪೂರ್ಣಿಮಾ ಮೇಲೆ ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಆ ಬಳಿಕ ಪರಾರಿಯಾಗಿದ್ದಾನೆ. ಚಾಕು ಇರಿತಕ್ಕೆ ಒಳಗಾದಂತ ಪೂರ್ಣಿಮಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಅಭಿಷೇಕ್ ನನ್ನು ಬಂಧಿಸಿದ್ದಾರೆ.

Read More

ಕ್ರೊಯೇಷಿಯಾದ ಜಾಗ್ರೆಬ್‌ನಲ್ಲಿ ಶುಕ್ರವಾರ ನಡೆದ 2025 ರ ಗ್ರ್ಯಾಂಡ್ ಚೆಸ್ ಟೂರ್‌ನ ಭಾಗವಾದ ಸೂಪರ್‌ಯುನೈಟೆಡ್ ರಾಪಿಡ್ & ಬ್ಲಿಟ್ಜ್ ಪಂದ್ಯಾವಳಿಯಲ್ಲಿ ಕ್ಷಿಪ್ರ ಪ್ರಶಸ್ತಿಯನ್ನು ಗೆದ್ದುಕೊಂಡರು, ಹಾಲಿ ವಿಶ್ವ ಚಾಂಪಿಯನ್ ಡಿ. ಗುಕೇಶ್ ಜಾಗತಿಕ ವೇದಿಕೆಯಲ್ಲಿ ತಮ್ಮ ಬೆಳೆಯುತ್ತಿರುವ ನಿಲುವನ್ನು ಒತ್ತಿ ಹೇಳಿದರು. 19 ವರ್ಷದ ಆಟಗಾರ ಸಂಯಮ, ಯುದ್ಧತಂತ್ರದ ನಿಖರತೆ ಮತ್ತು ಅದ್ಭುತ ಫಾರ್ಮ್ ಪ್ರದರ್ಶಿಸಿ 18 ಅಂಕಗಳಿಂದ 14 ಅಂಕಗಳನ್ನು ಗಳಿಸಿ, ಅತ್ಯುನ್ನತ ಗೌರವವನ್ನು ಗಳಿಸಿದರು. ಅವರ ಅಭಿಯಾನವು ಆರಂಭಿಕ ಎಡವಿ ಬೀಳುವಿಕೆಯೊಂದಿಗೆ ಪ್ರಾರಂಭವಾಯಿತು – ಜಾನ್-ಕ್ರಿಜ್ಟೋಫ್ ಡುಡಾ ವಿರುದ್ಧ ಮೊದಲ ಸುತ್ತಿನ ಸೋಲು. ಆದರೆ ಅದು ಗಮನಾರ್ಹ ತಿರುವು ನೀಡಿತು. ಗುಕೇಶ್ ಸತತ ಐದು ಜಯಗಳೊಂದಿಗೆ ಪ್ರತಿಕ್ರಿಯಿಸಿದರು, ಇದರಲ್ಲಿ 4 ನೇ ಸುತ್ತಿನಲ್ಲಿ ವಿಶ್ವದ ನಂ. 1 ಮ್ಯಾಗ್ನಸ್ ಕಾರ್ಲ್ಸೆನ್ ಅವರ ಕ್ಲಿನಿಕಲ್ ಡಿಸ್ಮ್ಯಾಂಡಿಂಗ್ ಸೇರಿದೆ, ಇದರ ಫಲಿತಾಂಶವು ಅವರನ್ನು ಲೀಡರ್‌ಬೋರ್ಡ್‌ನ ನಿಯಂತ್ರಣದಲ್ಲಿ ದೃಢವಾಗಿ ಇರಿಸಿತು. ಅವರು ಅಂತಿಮ ಸುತ್ತಿನಲ್ಲಿ ಯುನೈಟೆಡ್ ಸ್ಟೇಟ್ಸ್‌ನ ವೆಸ್ಲಿ ಸೋ ವಿರುದ್ಧ ಸಿಗ್ನೇಚರ್…

Read More

ಬೆಂಗಳೂರು : ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿಗಳ ಅಸಹಜ ಸಾವಿನ ಪ್ರಕರಣದಲ್ಲಿ ಕರ್ತವ್ಯ ಲೋಪ ಮತ್ತು ನಿರ್ಲಕ್ಷ್ಯ ತೋರಿದ ಎಸಿಎಫ್ ಗಜಾನನ ಹೆಗಡೆ ಮತ್ತು ಆರ್.ಎಫ್.ಓ. ಮಾದೇಶ ಅಮಾನತು ಮಾಡಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ, ಡಿಸಿಎಫ್ ಚಕ್ರಪಾಣಿ ಅಮಾನತಿಗೂ ಶಿಫಾರಸು ಮಾಡಿದ್ದಾರೆ. ಉನ್ನತ ಮಟ್ಟದ ವಿಚಾರಣಾ ಸಮಿತಿಯ ಪ್ರಾಥಮಿಕ ವರದಿ ಸ್ವೀಕರಿಸಿ, ಪರಾಮರ್ಶಿಸಿದ ಸಚಿವರು, ಹುಲಿಗಳ ಅಸಹಜ ಸಾವಿನ ಪ್ರಕರಣದಲ್ಲಿ ಮೇಲ್ನೋಟಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕರ್ತವ್ಯಲೋಪ ಕಂಡುಬಂದಿರುವ ಹಿನ್ನೆಲೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ವಲಯ ಅರಣ್ಯಾಧಿಕಾರಿ ಅಮಾನತು ಮಾಡಿ, ಐ.ಎಫ್.ಎಸ್. ಅಧಿಕಾರಿ ಚಕ್ರಪಾಣಿ ಅಮಾನತಿಗೆ ಶಿಫಾರಸು ಮಾಡಿದ್ದಾರೆ. ವೇತನ ಪಾವತಿಸದಿರುವುದೂ ಕರ್ತವ್ಯಲೋಪ: ಹೊರಗುತ್ತಿಗೆ ಸಿಬ್ಬಂದಿಗೆ ವೇತನ ಪಾವತಿ ಮಾಡಲು ಏಪ್ರಿಲ್ ತಿಂಗಳಾಂತ್ಯಕ್ಕೇ ಹಣ ಬಿಡುಗಡೆಯಾಗಿದ್ದರೂ, ಜೂನ್ ತಿಂಗಳವರೆಗೆ ವೇತನ ಪಾವತಿಸದಿರುವುದು ಡಿಸಿಎಫ್ ಚಕ್ರಪಾಣಿ ಅವರ ಮೂಲಭೂತ ಕರ್ತವ್ಯ ಲೋಪವಾಗಿದ್ದು, ಇದು ಗಸ್ತು ಕಾರ್ಯಕ್ಕೆ ಹಿನ್ನಡೆ ಉಂಟು ಮಾಡಿದೆ ಈ ಸಂಬಂಧ…

Read More

ಬೆಂಗಳೂರು : “ಮೊದಲ ಹಂತದ ಟನಲ್ ರಸ್ತೆಗೆ ಟೆಂಡರ್ ಪ್ರಕ್ರಿಯೆ ಮುಂದಿನ‌ 4-5 ದಿನಗಳಲ್ಲಿ ಅಂತಿಮಗೊಳ್ಳಲಿದೆ. ಮೊದಲ ಹಂತಕ್ಕೆ 17 ಸಾವಿರ ಕೋಟಿ,‌ ಎರಡನೇ ಹಂತಕ್ಕೆ 23 ಸಾವಿರ ಕೋಟಿ ವ್ಯಯಿಸಲಾಗುತ್ತಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ವಿಧಾನಸೌಧದಲ್ಲಿ ಸುದ್ದಿ ಸಂಸ್ಥೆಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು. “ಹೆಬ್ಬಾಳ ಜಂಕ್ಷನ್ ನಿಂದ ಸಿಲ್ಕ್ ಬೋರ್ಡ್ ವರೆಗೆ ಸುಮಾರು 40 ಕಿ.ಮೀ ಮತ್ತು 23 ಕಿ.ಮೀ ಉದ್ದದ ಮೈಸೂರು ರಸ್ತೆಯಿಂದ ಕೆ.ಆರ್.ಪುರದ ವರೆಗೆ ಟ್ವಿನ್ ಟನಲ್ ರಸ್ತೆ ನಿರ್ಮಾಣಕ್ಕೆ ನಾವು ಮುಂದಡಿ ಇಟ್ಟಿದ್ದೇವೆ” ಎಂದರು. “130 ಕಿ.ಮೀ ಮೇಲ್ಸೆತುವೆಗಳು, ನೂತನ ಮೆಟ್ರೋ ಮಾರ್ಗಗಳು ಹೋಗುವ ಕಡೆ ಡಬಲ್ ಡೆಕ್ಕರ್ ಗಳ ನಿರ್ಮಾಣ ಮಾಡಲಾಗುವುದು. ಈಗಾಗಲೇ 7 ಕಿ.ಮೀ ಡಬಲ್ ಡೆಕ್ಕರ್ ನಿರ್ಮಾಣ ಮಾಡಲಾಗಿದ್ದು, 37 ಕಿ.ಮೀ ಡಬಲ್ ಡೆಕ್ಕರ್ ನಿರ್ಮಾಣ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.‌ ಶೀಘ್ರದಲ್ಲೇ ಇದಕ್ಕೂ ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸಲಾಗುವುದು. ರಾಜಕಾಲುವೆಗಳ ಪಕ್ಕದಲ್ಲಿ 300 ಕಿ.ಮೀ ಉದ್ದದ ರಸ್ತೆ ನಿರ್ಮಾಣವೂ…

Read More

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಕಳೆದ ಕೆಲ ದಿನಗಳಿಂದ ಎಡಬಿಡದೆ ಮಳೆಯಾಗುತ್ತಿದ್ದು, ನಾಳೆಯೂ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹೀಗಾಗಿ ನಾಳೆ ಚಿಕ್ಕಮಗಳೂರು ಜಿಲ್ಲೆಯ 6 ತಾಲ್ಲೂಕಿನ ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ. ನಾಳೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿರುವ ಕಾರಣ ಚಿಕ್ಕಮಗಳೂರು, ಕಳಸ, ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್ ಆರ್ ಪುರ ತಾಲ್ಲೂಕಿನ ಅಂಗನವಾಡಿಗಳಿಗೆ ರಜೆ ನೀಡಲಾಗಿದೆ. ಇದಕ್ಕೂ ಮೊದಲು ಉಪವಿಭಾಗಾಧಿಕಾರಿಗಳ ಕಚೇರಿಯಿಂದ ಶಾಲೆಗಳಿಗೆ ರಜೆ ಘೋಷಣೆ ಮಾಡಿದ ನಕಲಿ ಆದೇಶ ಪ್ರತಿ ಹೊರ ಬಿದ್ದು ಗೊಂದಲ ಮೂಡಿತ್ತು. ಆ ನಂತ್ರ ಮಕ್ಕಳು, ಪೋಷಕರಲ್ಲಿ ರಜೆ ಬಗ್ಗೆ ಗೊಂದಲ ನಿರ್ಮಾಣವಾಗಿತ್ತು. ಹೀಗಾಗಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್, ನಾಳೆ ಅಂಗನವಾಡಿಗಳಿಗೆ ಮಾತ್ರವೇ ರಜೆ ನೀಡಿರುವುದಾಗಿ ಅಧಿಕೃತ ಆದೇಶ ಹೊರಡಿಸಿ, ತಿಳಿಸಿದ್ದಾರೆ. https://kannadanewsnow.com/kannada/actress-ranya-rao-gold-smuggling-case-ed-seizes-property-worth-rs-34-12-crore/ https://kannadanewsnow.com/kannada/applications-invited-for-free-coaching-for-upsc-prelims-mains-exams/

Read More

ಬೆಂಗಳೂರು: ನಟಿ ರನ್ಯಾ ರಾವ್ ವಿರುದ್ಧದ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಇಡಿ ಎಂಟ್ರಿಯಾಗಿತ್ತು. ಈ ಪ್ರಕರಣ ಸಂಬಂಧ ನಟಿ ರನ್ಯಾ ರಾವ್ ಗೆ ಸೇರಿದಂತ 34.12 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ. ಈ ಮಾಹಿತಿ ನೀಡಿರುವಂತ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ದುಬೈನಿಂದ ಚಿನ್ನ ಕಳ್ಳ ಸಾಗಾಣೆ ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವಂತ ನಟಿ ರನ್ಯಾ ರಾವ್ ಅವರಿಗೆ ಸೇರಿದಂತ 34.12 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ತಿಳಿಸಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದ ಅಡಿಯಲ್ಲಿ ನಟಿ ರನ್ಯಾ ರಾವ್ ಅವರಿಗೆ ಸಂಬಂಧಿಸಿದಂತ ಬೆಂಗಳೂರಿನ ವಿಕ್ಟೋರಿಯಾ ಲೇಔಟ್ ನಲ್ಲಿರುವಂತ ಮನೆ, ಅರ್ಕಾವತಿ ಬಡಾವಣೆಯ ನಿವೇಶನ, ತುಮಕೂರಿನ ಕೈಗಾರಿಕಾ ನಿವೇಶನ, ಆನೇಕಲ್ ತಾಲ್ಲೂಕಿನಲ್ಲಿರುವಂತ ಕೃಷಿ ಜಮೀನನ್ನು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಅಂದಹಾಗೇ ನಟಿ ರನ್ಯಾ ರಾವ್ ಮಾರ್ಚ್.3ರಂದು ದುಬೈನಿಂದ ಬೆಂಗಳೂರಿಗೆ ಆಗಮಿಸಿದಾ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದ್ದರು. ಈ ಸಂದರ್ಭದಲ್ಲಿ 12.56…

Read More

ನವಮಿ ತಿಥಿಯು ಶ್ರೀರಾಮನನ್ನು ಪೂಜಿಸಲು ಶುಭ ದಿನ. ಏಕೆಂದರೆ ಶ್ರೀರಾಮನು ನವಮಿ ತಿಥಿಯಂದು ಅವತರಿಸಿದ್ದನು. ಅಂತಹ ನವಮಿ ತಿಥಿ ಶುಕ್ರವಾರದೊಂದಿಗೆ ಹೊಂದಿಕೆಯಾಗುತ್ತದೆ. ಶುಕ್ರವಾರವನ್ನು ಮಹಾಲಕ್ಷ್ಮಿಗೆ ಶುಭ ದಿನವೆಂದು ಪರಿಗಣಿಸಲಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಈ ಎರಡೂ ಒಟ್ಟಿಗೆ ಬರುವ ಈ ಅದ್ಭುತ ದಿನವನ್ನು ನಾವು ಸರಿಯಾಗಿ ಬಳಸಿಕೊಂಡರೆ, ನಮ್ಮ ಜೀವನದಲ್ಲಿನ ಎಲ್ಲಾ ದುರದೃಷ್ಟಗಳು ಸಂಪೂರ್ಣವಾಗಿ ನಿವಾರಣೆಯಾಗುತ್ತವೆ ಮತ್ತು ಅದೃಷ್ಟವು ಮೇಲುಗೈ ಸಾಧಿಸುತ್ತದೆ. ಈ ಆಧ್ಯಾತ್ಮಿಕ ಪೋಸ್ಟ್‌ನಲ್ಲಿ ನಾವು ಆ ಪೂಜಾ ವಿಧಾನವನ್ನು ನೋಡಲಿದ್ದೇವೆ . ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ,…

Read More

ಬೆಂಗಳೂರು: ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನೇ ಸಂವಿಧಾನ ಪೀಠಿಕೆ ಬೋಧನೆ ಕಾರ್ಯಕ್ರಮದಂತು ಇಡುವುದನ್ನು ಮರೆಯಲಾಗಿತ್ತು. ಇದು ವ್ಯಾಪಕ ಟೀಕೆಗೆ ಗುರಿಯಾಗಿ ಸರ್ಕಾರಕ್ಕೂ ಮುಜುಗರ ಉಂಟು ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ವಿಧಾನಸಭೆ ಉಪ ಕಾರ್ಯದರ್ಶಿ ಕೆ.ಜೆ ಜಲಜಾಕ್ಷಿಯನ್ನು ಅಮಾನತುಗೊಳಿಸಿ ಸರ್ಕಾರ ಆದೇಶಿಸಿದೆ. ನವೆಂಬರ್.26ರಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸಂವಿಧಾನ ಪೀಠಿಕೆ ಬೋಧನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂವಿಧಾನ ದಿನಾಚರಣೆಯ ಕಾರ್ಯಕ್ರಮದಂದೇ ಡಾ.ಬಿಆರ್ ಅಂಬೇಡ್ಕರ್ ಭಾವಚಿತ್ರ ಇಡುವುದನ್ನು ಮರೆಯಲಾಗಿತ್ತು. ಈ ಹಿನ್ನಲೆಯಲ್ಲಿ 7 ತಿಂಗಳ ನಂತ್ರ ಪರಿಷತ್ ಉಪ ಕಾರ್ಯದರ್ಶಿ ಕೆ.ಜೆ ಜಲಜಾಕ್ಷಿಯನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿ ಆದೇಶಿಸಿದೆ. ಈ ಕಾರ್ಯಕ್ರಮ ಆರಂಭಕ್ಕೂ ಮುನ್ನ ನೆನಪಿಸಿದ್ದರೂ ಕಡೆಗಣಿಸಿದ ಆರೋಪದಡಿ ಅಮಾನತುಗೊಳಿಸಲಾಗಿದೆ. https://kannadanewsnow.com/kannada/applications-invited-for-free-coaching-for-upsc-prelims-mains-exams/ https://kannadanewsnow.com/kannada/good-news-for-state-transport-bus-passengers-the-ticket-price-roundup-system-will-soon-be-abolished/

Read More

ಸ್ನಾಯು ಉಳುಕು ಮತ್ತು ಅತಿಯಾಗಿ ಹಿಗ್ಗಿಸುವುದು ಬೆನ್ನುನೋವಿಗೆ ಸಾಮಾನ್ಯ ಕಾರಣಗಳಾಗಿವೆ. ಭಾರವಾದ ವಸ್ತುಗಳನ್ನು ತಪ್ಪಾಗಿ ಎತ್ತುವುದು, ಹಠಾತ್ತನೆ ಸೊಂಟವನ್ನು ಬಾಗಿಸುವುದು ಅಥವಾ ತಿರುಚುವುದು ಅಥವಾ ಅತಿಯಾದ ಶ್ರಮ ವಹಿಸುವುದರಿಂದ ಸೊಂಟದಲ್ಲಿರುವ ಸ್ನಾಯುಗಳು ಅಥವಾ ಅಸ್ಥಿರಜ್ಜುಗಳು (ಮೂಳೆಗಳನ್ನು ಸಂಪರ್ಕಿಸುವ ಅಂಗಾಂಶಗಳು) ಹಿಗ್ಗಬಹುದು ಅಥವಾ ಉಳುಕಬಹುದು. ಇದು ನೋವಿಗೆ ಕಾರಣ ಕುಳಿತುಕೊಳ್ಳುವ ಭಂಗಿ: ದೀರ್ಘಕಾಲದವರೆಗೆ ಬಾಗಿಕೊಂಡು ಕುಳಿತುಕೊಳ್ಳುವುದು (ಉದಾಹರಣೆಗೆ, ಕಂಪ್ಯೂಟರ್ ಮುಂದೆ), ತಪ್ಪಾಗಿ ನಿಲ್ಲುವುದು ಅಥವಾ ಕಳಪೆ ಭಂಗಿಯಲ್ಲಿ ಮಲಗುವುದು ಬೆನ್ನುಮೂಳೆಯ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡಬಹುದು ಮತ್ತು ನೋವನ್ನು ಉಂಟುಮಾಡಬಹುದು. ಡಿಸ್ಕ್ ಸಮಸ್ಯೆಗಳು:  ಬೆನ್ನುಮೂಳೆಯ ಮೂಳೆಗಳ (ಕಶೇರುಖಂಡಗಳು) ನಡುವಿನ ಕುಶನ್‌ಗಳಾಗಿರುವ ಡಿಸ್ಕ್‌ಗಳು ಉಬ್ಬಬಹುದು (ಉಬ್ಬಬಹುದು) ಅಥವಾ ಸಂಪೂರ್ಣವಾಗಿ ಛಿದ್ರವಾಗಬಹುದು (ಹರ್ನಿಯೇಟೆಡ್), ಹತ್ತಿರದ ನರಗಳ ಮೇಲೆ ಒತ್ತಡ ಹೇರಬಹುದು. ಇದು ತೀವ್ರವಾದ ಬೆನ್ನು ನೋವು, ಕಾಲು ಸೆಳೆತ, ದೌರ್ಬಲ್ಯ ಅಥವಾ ಜುಮ್ಮೆನಿಸುವಿಕೆಗೆ ಕಾರಣವಾಗಬಹುದು. ಸಿಯಾಟಿಕಾ:  ಈ ನೋವು ಸಿಯಾಟಿಕ್ ನರದ ಮೇಲಿನ ಒತ್ತಡದಿಂದ ಉಂಟಾಗುತ್ತದೆ. ಸಿಯಾಟಿಕ್ ನರವು ಕೆಳಗಿನ ಬೆನ್ನಿನಿಂದ ಪೃಷ್ಠದ ಮೂಲಕ, ಕಾಲಿನ…

Read More