Author: ವಸಂತ ಬಿ ಈಶ್ವರಗೆರೆ

ವಸಂತ ಬಿ ಈಶ್ವರಗೆರೆ (Vasantha B Eshwaragere) ಅವರು ಕರ್ನಾಟಕದ ಪತ್ರಕರ್ತರು ಮತ್ತು ಕವಿ. ಉದಯ ನ್ಯೂಸ್, ಟಿವಿ5 ಕನ್ನಡ ಸೇರಿದಂತೆ ವಿವಿಧ ಸುದ್ದಿ ಮಾಧ್ಯಮಗಳಲ್ಲಿ ಸುಮಾರು 15 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಪ್ರಸ್ತುತ ಅವರು Kannada News Now ಡಿಜಿಡಿಲ್‌ ಮಾಧ್ಯಮದಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಾಜಾ ಸುದ್ದಿ, ಸಾಹಿತ್ಯ, ಸಾಮಾಜಿಕ ವರದಿಗಾರಿಕೆ, ನ್ಯಾಯಾಂಗ ಸಂಬಂಧಿತ ವರದಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸುದ್ದಿಗಳ ವರದಿಯಲ್ಲಿ ಸಕ್ರಿಯರಾಗಿದ್ದಾರೆ. ಗುಡವಿ ಪಕ್ಷಿಧಾಮದಂತಹ ಪ್ರವಾಸಿ ತಾಣಗಳ ಕುರಿತು ಲೇಖನಗಳನ್ನು ಬರೆದಿದ್ದಾರೆ.

ಚನ್ನಪಟ್ಟಣ : “ಕಣ್ವ ಅಣೆಕಟ್ಟು ಪ್ರದೇಶವನ್ನು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿ ಮಾಡುವ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಜನಪ್ರತಿನಿಧಿಗಳ ಜತೆ ಸಮಾಲೋಚನೆ ನಡೆಸಿದರು. ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ನಂತರ ಮತದಾರರಿಗೆ “ಕೃತಜ್ಞತಾ ಸಮಾವೇಶ” ನಡೆಸಿದ ಬಳಿಕ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕಣ್ವ ಅಣೆಕಟ್ಟಿಗೆ ಭೇಟಿ ನೀಡಿ ಭಾನುವಾರ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಸಿ.ಪಿ ಯೋಗೇಶ್ವರ್, ಮಾಜಿ ಸಂಸದ ಡಿ.ಕೆ. ಸುರೇಶ್, ಶಾಸಕರಾದ ಬಾಲಕೃಷ್ಣ, ರಂಗನಾಥ್, ಎನ್ ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಎಸ್.ರವಿ ಮತ್ತಿತರ ನಾಯಕರು ಉಪಸ್ಥಿತರಿದ್ದರು. ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಜನಪ್ರತಿನಿಧಿಗಳ ಜತೆ ಮೋಟಾರ್ ಬೋಟ್ ಮೂಲಕ ಕಣ್ವ ಡ್ಯಾಮ್ ನಲ್ಲಿ ವಿಹಾರ ನಡೆಸಿದರು. ಕಣ್ವ ಅಣೆಕಟ್ಟಿನ ಪ್ರದೇಶವನ್ನು ಪ್ರವಾಸೋದ್ಯಮದ ತಾಣವಾಗಿ ರೂಪಿಸಲು ಇರುವ ಅವಕಾಶಗಳ ಕುರಿತು ಚರ್ಚೆ ನಡೆಸಿದರು. ಜಲ ವಿಹಾರ, ಜಲ ಕ್ರೀಡೆ, ಪಾರ್ಕ್ ನಿರ್ಮಾಣ ಸೇರಿದಂತೆ ಅಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ಸಮಾಲೋಚನೆ ನಡೆಸಿದರು. https://kannadanewsnow.com/kannada/165-quintals-of-rice-seized/…

Read More

ಬಳ್ಳಾರಿ: ಜಿಲ್ಲೆಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದಂತ 165 ಕ್ವಿಂಟಾಲ್ ಅಕ್ಕಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಲಾರಿ ಚಾಲಕನನ್ನು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ. ಬಳ್ಳಾರಿಯ ಸಿರಗುಪ್ಪ ಬಳಿಯಲ್ಲಿ ಲಾರಿಯೊಂದರಲ್ಲಿ ಪಡಿತರ ಚೀಟಿದಾರರಿಗೆ ವಿತರಿಸಬೇಕಿದ್ದಂತ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದಂತ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಈ ಮಾಹಿತಿ ತಿಳಿಯುತ್ತಿದ್ದಂತೆ ಅಲರ್ಟ್ ಆದಂತ ಸಿರಗುಪ್ಪ ಠಾಣೆಯ ಪೊಲೀಸರು 165 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದಂತ ಲಾರಿಯನ್ನು ಸೀಜ್ ಮಾಡಿದ್ದಾರೆ. ಲಾರಿ ಚಾಲಕ ಸಣ್ಣ ದುರುಗಪ್ಪ ಎಂಬುವರನ್ನು ಬಂಧಿಸಿರುವಂತ ಪೊಲೀಸರು, ಆತನ ವಿರುದ್ಧ ಕೇಸ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಅಂದಹಾಗೇ 165 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿಯ ಮೌಲ್ಯ ಬರೋಬ್ಬರಿ 4 ಲಕ್ಷದ 77 ಸಾವಿರ ಎಂಬುದಾಗಿ ಹೇಳಲಾಗುತ್ತಿದೆ. ಈ ಬಗ್ಗೆ ಸಿರಗುಪ್ಪ ಠಾಣೆಯ ಪೊಲೀಸರು ಅನ್ನಭಾಗ್ಯ ಅಕ್ಕಿ ಅಕ್ರಮವಾಗಿ ಸಾಗಿಸುತ್ತಿದ್ದವರ ಪತ್ತೆಗೆ ಬಲೆ ಬೀಸಿದ್ದಾರೆ. https://kannadanewsnow.com/kannada/minister-h-k-patil-will-get-yoga-to-become-cm-siddarameshwara-sri-ii/ https://kannadanewsnow.com/kannada/shocking-consuming-this-oil-increases-the-risk-of-diabetes-cancer-heart-attack/

Read More

ಗದಗ: ಈಗಾಗಲೇ ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಬದಲಾವಣೆ ಆಗುವಂತ ಸುದ್ದಿ ಹರಿದಾಡುತ್ತಿದೆ. ಒಂದೆಡೆ ಡಿ.ಕೆ ಶಿವಕುಮಾರ್ ಸಿಎಂ ಆಗ್ತಾರೆ ಅಂತ ಸ್ವಾಮೀಜಿಗಳು ಭವಿಷ್ಯ ನುಡಿದ್ರೆ, ಮತ್ತೊಂದೆಡೆ ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳು ಸಚಿವ ಹೆಚ್.ಕೆ ಪಾಟೀಲ್ ಮುಖ್ಯಮಂತ್ರಿ ಆಗಲಿದ್ದಾರೆ ಅಂತ ಭವಿಷ್ಯ ನುಡಿದ್ದಾರೆ. ಇಂದು ನಗರದಲ್ಲಿ ನಡೆದಂತ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದಂತ ಬೋವಿ ಗುರುಪೀಠ ಮಠದ ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳು, ಸಚಿವ ಹೆಚ್.ಕೆ ಪಾಟೀಲ್ ಅವರಿಗೆ ಸಿಎಂ ಆಗುವ ಯೋಗವಿತ್ತು. ಅಲ್ಲದೇ ಈ ಹಿಂದೆಯೇ 2, 3 ಬಾರಿ ಆಗುತ್ತಿದ್ದರು. ಆದರೇ ಅದು ಸಾಧ್ಯವಾಗಲಿಲ್ಲ ಎಂದರು. ಎಸ್ ಎಂ ಕೃಷ್ಣ ಬಳಿಕ ಸಿಎಂ ಸ್ಥಾನಕ್ಕೆ ಹೆಚ್.ಕೆ ಪಾಟೀಲ್ ಅವರ ಹೆಸರು ಮುಂಚೂಣಿಯಲ್ಲಿ ಕೇಳಿ ಬಂದಿತ್ತು. ಈಗ ತಡವಾಗಿಯಾದರೂ ಸಚಿವ ಹೆಚ್.ಕೆ ಪಾಟೀಲ್ ಅವರಿಗೆ ಸಿಎ ಆಗುವ ಯೋಗ ಕೂಡಿ ಬರಲಿದೆ ಅಂತ ಸಿದ್ಧರಾಮೇಶ್ವರ ಶ್ರೀಗಳು ಭವಿಷ್ಯವನ್ನು ನುಡಿದಿದ್ದಾರೆ. https://kannadanewsnow.com/kannada/in-yet-another-heinous-act-in-the-state-an-8-year-old-girl-was-gang-raped-by-three-men/ https://kannadanewsnow.com/kannada/shocking-consuming-this-oil-increases-the-risk-of-diabetes-cancer-heart-attack/

Read More

ಮಂಡ್ಯ: ರಾಜ್ಯದಲ್ಲಿ ಮತ್ತೊಂದು ಕೀಚಕ ಕೃತ್ಯ ಎನ್ನುವಂತೆ 8 ವರ್ಷದ ಬಾಲಕಿಯ ಮೇಲೆ ಮೂವರು ಗ್ಯಾಂಗ್ ರೇಪ್ ಮಾಡಿರುವಂತ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಲಕಿಯೊಬ್ಬಳಿಗೆ ಕೇಕ್ ಕೊಡಿಸಿ, ಚಾಕು ತೋರಿಸಿ ಶಾಲಾ ಆವರಣದಲ್ಲೇ ಮೂವರು ಕಾಮುಕರು ಗ್ಯಾಂಗ್ ರೇಪ್ ಮಾಡಿದ್ದಾರೆ. ಜನವರಿ 31ರಂದು ನಡೆದಿದ್ದಂತ ಘಟನೆಯ ಬಳಿ 2 ದಿನ ಕಳೆದರೂ 8 ವರ್ಷದ ಬಾಲಕಿಗೆ ಹೊಟ್ಟೆನೋವು, ರಕ್ತಸ್ತ್ರಾವ ಕಡಿಮೆಯಾಗದ ಕಾರಣ ಬಾಲಕಿಯ ಚಿಕ್ಕಮ್ಮ ವಿಚಾರಿಸಿದಾಗ ಕೀಚಕ ಕೃತ್ಯ ಹೊರ ಬಂದಿದೆ. ಅಸ್ವಸ್ಥಗೊಂಡ ಬಾಲಕಿಯನ್ನು ಮಂಡ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಮಂಡ್ಯ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. https://kannadanewsnow.com/kannada/groom-dances-to-choli-ke-peeche-kya-hai-song-and-entertains-guests-brides-father-cancels-wedding/ https://kannadanewsnow.com/kannada/shocking-consuming-this-oil-increases-the-risk-of-diabetes-cancer-heart-attack/

Read More

ನವದೆಹಲಿ: ಜನಪ್ರಿಯ ಬಾಲಿವುಡ್ ಹಾಡು ‘ಚೋಲಿ ಕೆ ಪೀಚೆ ಕ್ಯಾ ಹೈ’ ಗೆ ನೃತ್ಯ ಮಾಡುವ ಮೂಲಕ ಅತಿಥಿಗಳನ್ನು ರಂಜಿಸಲು ವರ ಪ್ರಯತ್ನಿಸಿದ ನಂತರ ವಧುವಿನ ತಂದೆ ಮದುವೆಯನ್ನೇ ರದ್ದುಗೊಳಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ. ತನ್ನ ಸ್ನೇಹಿತನ ಕೋರಿಕೆಯ ಮೇರೆಗೆ ವರನು 90 ರ ದಶಕದ ಪೆಪ್ಪಿ ಹಾಡಿಗೆ ನೃತ್ಯ ಮಾಡಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ನವಭಾರತ್ ವರದಿಯ ಪ್ರಕಾರ, ಪ್ರಸಿದ್ಧ ಬಾಲಿವುಡ್ ಹಾಡು ಪ್ಲೇ ಮಾಡಲು ಪ್ರಾರಂಭಿಸಿದಾಗ, ಅವರು ಸೇರುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ವಧುವಿನ ತಂದೆಗೆ ಈ ಕೃತ್ಯ ಇಷ್ಟವಾಗಲಿಲ್ಲ ಮತ್ತು ಕೋಪಗೊಂಡರು. ತನ್ನ ಕುಟುಂಬದ ಮೌಲ್ಯಗಳನ್ನು “ಹಾನಿಗೊಳಿಸಿದ್ದಕ್ಕಾಗಿ” ಅವನು ವರನ ಮೇಲೆ ತಾಳ್ಮೆ ಕಳೆದುಕೊಂಡನು. ವರನು ವಧುವಿನ ತಂದೆಗೆ ಇದೆಲ್ಲವೂ ಮೋಜು ಎಂದು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದನು, ಆದರೆ ಅವರು ಕೇಳಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ವೈರಲ್ ಈ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಾಗ, ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳದೆ ಇರಲು ಸಾಧ್ಯವಾಗಲಿಲ್ಲ. “ಮಾವ ಸರಿಯಾದ ನಿರ್ಧಾರವನ್ನು ತೆಗೆದುಕೊಂಡರು, ಇಲ್ಲದಿದ್ದರೆ,…

Read More

ಚನ್ನಪಟ್ಟಣ : “ಮತದಾರರು ಈ ಜಿಲ್ಲೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಿ ಸರ್ಕಾರಕ್ಕೆ ಶಕ್ತಿ ನೀಡಿದ್ದು, ಮುಂದಿನ ಮೂರು ವರ್ಷಗಳಲ್ಲಿ ಎಲ್ಲಾ ನಾಯಕರು ಸೇರಿ ಚನ್ನಪಟ್ಟಣ ಹಾಗೂ ಇಡೀ ಜಿಲ್ಲೆಯ ಚಿತ್ರಣ ಬದಲಿಸುತ್ತೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಚನ್ನಪಟ್ಟಣದಲ್ಲಿ ನಡೆದ “ಕೃತಜ್ಞತಾ ಸಮಾವೇಶ”ದಲ್ಲಿ ಡಿ.ಕೆ. ಶಿವಕುಮಾರ್ ಅವರು ಭಾನುವಾರ ಮಾತನಾಡಿದರು. “ಇದು ಋಣ ತೀರಿಸುವ ಕಾರ್ಯಕ್ರಮ. ನೀವು ನಮಗೆ ಕೊಟ್ಟ ಶಕ್ತಿಗೆ ಅಭಿನಂದನೆ ಸಲ್ಲಿಸಲು ಈ ಕಾರ್ಯಕ್ರಮ ಮಾಡಿದ್ದೇವೆ. ಬೆಳಗಾವಿ ಅಧಿವೇಶನದ ಶತಮಾನೋತ್ಸವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು 2 ಬಾರಿ ಮುಂದೂಡಲಾಗಿತ್ತು. ಇಂದು ಬೆಳಗ್ಗೆ ಮುಖ್ಯಮಂತ್ರಿಗಳ ಕಾಲಿಗೆ ಪೆಟ್ಟಾಗಿದ್ದು, ವೈದ್ಯರ ಸಲಹೆ ಮೇರೆಗೆ ಅವರು ಈ ಕಾರ್ಯಕ್ರಮಕ್ಕೆ ಆಗಮಿಸಲು ಸಾಧ್ಯವಾಗಿಲ್ಲ” ಎಂದು ತಿಳಿಸಿದರು. “ಈ ಚುನಾವಣೆಯಲ್ಲಿ ಹಗಲು ರಾತ್ರಿ ಶ್ರಮಿಸಿದ ಎಲ್ಲಾ ನಾಯಕರು, ಮಂತ್ರಿಗಳು, ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನೀವು ಅಭಿವೃದ್ಧಿಗೆ ಮತ ಕೊಟ್ಟಿದ್ದೀರಿ. ನಾನು 1989ರಿಂದ ಈ ಜಿಲ್ಲೆಯ ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ಜಿಲ್ಲೆಯಲ್ಲಿ ಮೊದಲ…

Read More

ಕೊಲಂಬೋ: ಶ್ರೀಲಂಕಾದ ವಾಸ್ಗಮುವಾ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ವೇಳೆಯಲ್ಲಿ ಆನೆಯೊಂದು ವಾಹನದ ಮೇಲೆ ನುಗ್ಗಿ ಬಂದಿದೆ. ಸಫಾರಿ ಜೀಪಿನ ಚಾಲಕ ಮದಗಜವನ್ನು ಹೇಗೆ ಕೆಲವೇ ನಿಮಿಷಗಳಲ್ಲಿ ದಾಳಿ ಮಾಡೋದನ್ನು ತಡೆದು ನಿಲ್ಲಿಸಿದರು ಅಂತ ಮುಂದೆ ಓದಿ ಜೊತೆಗೆ ವೀಡಿಯೋ ನೋಡಿ. ಮೂಲತಃ ಇಮಾಲ್ ನಾಣಯಕ್ಕರ ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಈ ಕ್ಲಿಪ್ನಲ್ಲಿ ಪ್ರವಾಸಿಗರನ್ನು ಹೊತ್ತ ವಾಹನವು ಸಮೀಪಿಸುತ್ತಿದ್ದಂತೆ ಎರಡು ಆನೆಗಳು ಸಾಲಿನಲ್ಲಿ ನಡೆಯುತ್ತಿರುವುದನ್ನು ತೋರಿಸುತ್ತದೆ. ಇದ್ದಕ್ಕಿದ್ದಂತೆ, ಆನೆಗಳಲ್ಲಿ ಒಂದು ಅವರ ಕಡೆಗೆ ಧಾವಿಸಿತು. ಭೀತಿಯು ಪ್ರಾರಂಭವಾಗುತ್ತಿದ್ದಂತೆಯೇ, ಮಾರ್ಗದರ್ಶಿ ತ್ವರಿತವಾಗಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡನು, ಸಂಭವನೀಯ ಅಪಾಯಕಾರಿ ಮುಖಾಮುಖಿಯನ್ನು ತಪ್ಪಿಸಿದನು. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. https://www.youtube.com/watch?v=vCSytkHMlXQ ಈ ಕ್ಷಣವನ್ನು ವಿವರಿಸಿದ ಇಮಾಲ್, “ಅಡ್ರಿನಾಲಿನ್ ರಶ್ ಬಗ್ಗೆ ಮಾತನಾಡಿ! ಈ ಆನೆ ನಮ್ಮನ್ನು ಬೆನ್ನಟ್ಟಲು ನಿರ್ಧರಿಸುತ್ತಿದ್ದಂತೆ, ನಮ್ಮ ಮಾರ್ಗದರ್ಶಿ ಎಲ್ಲರನ್ನೂ ಸುರಕ್ಷಿತವಾಗಿಡಲು ನಿಪುಣತೆಯಿಂದ ಹೆಜ್ಜೆ ಹಾಕಿದರು. ಪ್ರಕೃತಿಯು ಕ್ರೂರವಾಗಿರಬಹುದು, ಆದರೆ ಅದು ಅದನ್ನು ಮರೆಯಲಾಗದು ಎಂದಿದ್ದಾರೆ. ಅಪ್ಲೋಡ್ ಮಾಡಿದಾಗಿನಿಂದ, ವೀಡಿಯೊವನ್ನು…

Read More

ಬೆಂಗಳೂರು: ಇಂದು ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ್‌ ಸರ್‌ನಾಯಕ್‌, ಮಾಧವ್ ಕುಸೆಕರ್ ಭಾಆಸೇ, ಎಂ.ಎಸ್.ಆರ್.ಟಿ.ಸಿ ಉಪಾಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಧಿಕಾರಿಗಳ ತಂಡವು ಕರಾರಸಾ ನಿಗಮದ, ಘಟಕ,‌ ಕಾರ್ಯಾಗಾರ ಹಾಗೂ ಕೇಂದ್ರ ಕಛೇರಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ನಿಗಮದಲ್ಲಿನ ಪ್ರತಿಷ್ಠಿತ ವಾಹನಗಳ ಕಾರ್ಯಾಚರಣೆ, ಕಾರ್ಮಿಕ ಕಲ್ಯಾಣ ಉಪಕ್ರಮಗಳು, ವಾಣಿಜ್ಯ ಆದಾಯ, ಬಸ್ಸುಗಳ ಪುನಃಶ್ಚೇತನ/ ನವೀಕರಣ, ಹೆಚ್.ಆರ್.ಎಂ.ಎಸ್., ಇ-ಟೆಕೇಟಿಂಗ್, ಕೆ.ಎಸ್.ಆರ್.ಟಿ.ಸಿ. ಆರೋಗ್ಯ, ರೂ 1 ಕೋಟಿ ಅಪಘಾತ ವಿಮೆ, ಇತರೆ ಉಪಕ್ರಮಗಳ ಬಗ್ಗೆ ರಾಮಲಿಂಗಾ ರೆಡ್ಡಿ  ಸಾರಿಗೆ ಮತ್ತು ಮುಜರಾಯಿ ಸಚಿವರು,‌ ಕರ್ನಾಟಕ ಸರ್ಕಾರ ಮತ್ತು ರಿಜ್ವಾನ್ ನವಾಬ್ ಮಾನ್ಯ ಉಪಾಧ್ಯಕ್ಷರು, ಕರಾರಸಾ. ನಿಗಮ., ಸರ್ಕಾರದ ಕಾರ್ಯದರ್ಶಿಗಳು, ಸಾರಿಗೆ ಇಲಾಖೆ, ವ್ಯವಸ್ಥಾಪಕ ನಿರ್ದೇಶಕರು, ಕರಾರಸಾ ನಿಗಮ ಅವರೊಂದಿಗೆ ವಿವರವಾಗಿ ಚರ್ಚಿಸಿ ಮಾಹಿತಿ ಪಡೆದುಕೊಂಡರು. ಮುಂದುವರೆದು, ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ-2ಕ್ಕೆ ಭೇಟಿ ನೀಡಿದ ತಂಡವು ಐರಾವತ ಕ್ಲಬ್ ಕಾಸ್, ಐರಾವತ ಕ್ಲಬ್ ಕಾಸ್ 2.0, ಅಂಬಾರಿ ಡ್ರೀಮ್ ಕ್ಲಾಸ್, ಪಲ್ಲಕ್ಕಿ,…

Read More

ಚನ್ನಪಟ್ಟಣ : “ಚನ್ನಪಟ್ಟಣದ ಜನರು ಸ್ವಾಭಿಮಾನಿ ಮತದಾರರು.ಈ ಜಿಲ್ಲೆಯ ಮಗನಿಗೆ ಅವಕಾಶ ಮಾಡಿಕೊಡಿ ಎನ್ನುವ ಮನವಿಗೆ ಸ್ಪಂದಿಸಿ ಇಡೀ ಕಾಂಗ್ರೆಸ್ ಸರ್ಕಾರಕ್ಕೆ ಬಲ ತುಂಬಿದ್ದೀರಿ. ನಮ್ಮ ಕೈ ಹಿಡಿದ ನಿಮ್ಮ ಋಣ ತೀರಿಸುತ್ತೇವೆ” ಎಂದು ಮಾಜಿ ಸಂಸದ ಡಿ. ಕೆ. ಸುರೇಶ್ ಅವರು ತಿಳಿಸಿದರು. ಭಾನುವಾರ ಹಮ್ಮಿಕೊಂಡಿದ್ದ ಚನ್ನಪಟ್ಟಣ ಉಪಚುನಾವಣೆ ಗೆಲುವಿಗೆ ಕಾರಣರಾದ ಮತದಾರರಿಗೆ ಕೃತಜ್ಞತಾ ಸಮಾವೇಶದಲ್ಲಿ ಅವರು ಮಾತನಾಡಿದರು. “ಇಡೀ ರಾಜ್ಯ ಚನ್ನಪಟ್ಟಣದ ಉಪಚುನಾವಣೆಯನ್ನು ನೋಡುತ್ತಿತ್ತು. ಇದು ಅತ್ಯಂತ ಸವಾಲಿನ ಚುನಾವಣೆಯಾಗಿ ಮಾರ್ಪಾಡಾಗಿತ್ತು. ಚನ್ನಪಟ್ಟಣದ ಚುನಾವಣಾ ಇತಿಹಾಸದಲ್ಲಿ ಯೋಗೇಶ್ವರ್ ಅವರಿಗೆ ಅತ್ಯಂತ ಹೆಚ್ಚಿನ ಮತ ನೀಡಿದವರು ನೀವು. ಡಿ.ಕೆ.ಸುರೇಶ್, ಡಿ.ಕೆ.ಶಿವಕುಮಾರ್ ಸೇರಿದಂತೆ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ನೀವು ಶಕ್ತಿ ನೀಡಿದ್ದೀರಿ” ಎಂದರು. “ನಮ್ಮ ಸರ್ಕಾರಕ್ಕೆ ಶಕ್ತಿ ಕೊಟ್ಟ ನಿಮ್ಮ ಬದುಕನ್ನು ಹಸನು ಮಾಡುವ ಕೆಲಸ ನಾವು ಮಾಡುತ್ತೇವೆ. ಪ್ರತಿ ಮನೆಗೆ ಹೋಗಿ ನಿಮ್ಮ ಕಷ್ಟ ಸುಖ ವಿಚಾರಿಸಿದ್ದೇವೆ. ಈ ಜಿಲ್ಲೆಯ ಮನೆ ಮಗನಾದ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ…

Read More

ದಾವಣಗೆರೆ: ಜಿಲ್ಲೆಯಲ್ಲಿ ರಜೆ ಇದ್ದ ಕಾರಣ ಕೆರೆಗೆ ಈಜಲು ತೆರಳಿದ್ದಂತ ಇಬ್ಬರು ಬಾಲಕರು ನೀರುಪಾಲಾಗಿರುವಂತ ಧಾರುಣ ಘಟನೆ ಕುರ್ಕಿ ಗ್ರಾಮದ ಬಳಿಯಲ್ಲಿ ನಡೆದಿದೆ. ದಾವಣಗೆರೆಯ ಗುರುಕುಲ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಇಂದು ಭಾನುವಾರದ ಕಾರಣ ಈಜಾಡಲು ಕುರ್ಕಿ ಗ್ರಾಮದ ಕೆರೆಯ ಬಳಿಗೆ ತೆರಳಿದ್ದರು. ನೀರಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ಯತೀಂದ್ರ(16) ಮತ್ತು ಪಾಂಡು(16) ಎಂಬುದಾಗಿ ಗುರುತಿಸಲಾಗಿದೆ. ಮೃತ ವಿದ್ಯಾರ್ಥಿಗಳು ತುರ್ಚಘಟ್ಟದ ಗುರುಕುಲ ಶಾಲೆಯ ವಿದ್ಯಾರ್ಥಿಗಳು ಆಗಿದ್ದಾರೆ. ಶಾಲೆಗೆ ರಜೆ ಇದ್ದಿದ್ದರಿಂದ ಈಜಾಡಲು ತೆರಳಿದ್ದರು. ಮೃತ ವಿದ್ಯಾರ್ಥಿಗಳಲ್ಲಿ ಒಬ್ಬರ ಶವ ದೊರೆತಿದೆ. ಇನ್ನೊಬ್ಬನ ಶವಕ್ಕಾಗಿ ಶೋಧಕಾರ್ಯಾಚರಣೆಯನ್ನು ಅಗ್ನಿಶಾಮಕ ಸಿಬ್ಬಂದಿ ಮುಂದುವರೆಸಿದ್ದಾರೆ. ಈ ಸಂಬಂಧ ಮಾಯಕೊಂಡ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/if-siddaramaiah-goes-to-jail-1-crore-people-including-me-will-go-vatal-nagaraj/ https://kannadanewsnow.com/kannada/shocking-consuming-this-oil-increases-the-risk-of-diabetes-cancer-heart-attack/

Read More