Author: kannadanewsnow09

ಶಿವಮೊಗ್ಗ : ಶಿಕಾರಿಪುರ ತೋಟಗಾರಿಕೆ ಇಲಾಖೆಯು 2024-25 ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಅರ್ಹ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ವರ್ಗದ ರೈತರಿಂದ ಅರ್ಜಿ ಆಹ್ವಾನಿಸಿದೆ. ತೋಟಗಾರಿಕೆ ಬೆಳೆಯನ್ನು ಬೆಳೆಯುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ವರ್ಗದ ರೈತರಿಗೆ ಹನಿ ನೀರಾವರಿ ಅಳವಡಿಸಿದ ಪ್ರತಿ ಫಲಾನುಭವಿಗೆ ಮೊದಲ 2 ಹೆ. ಪ್ರದೇಶದವರೆಗೆ ಶೇ. 90% ಮತ್ತು 3 ಹೆ. ಪ್ರದೇಶಕ್ಕೆ ಶೇ. 45% ರಷ್ಟು ಸಹಾಯಧನ ಸೌಲಭ್ಯ ಲಭ್ಯವಿರುತ್ತದೆ. ಇಲಾಖೆಯಿಂದ ಅನುಮೋದಿತ ಕಂಪನಿಗಳ ಮೂಲಕವೇ ರೈತರು ಸೂಕ್ಷ್ಮ ನೀರಾವರಿ ಘಟಕವನ್ನು ಅಳವಡಿಸಿಕೊಲ್ಳುವುದು. ಆಸಕ್ತ ರೈತರು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಹಾಗೂ ತೋಟಗಾರಿಕೆ ಇಲಾಖೆ, ಶಿಕಾರಿಪುರ ಕಚೇರಿಯನ್ನು ಸಂಪರ್ಕಿಸಿ ಅರ್ಜಿಯನ್ನು ಪಡೆಯುವುದು. 2024-25ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯ ಪರಿಶಿಷ್ಟ ಜಾತಿ ರೈತರಿಗೆ ಟ್ರಾಕ್ಟರ್ ಖರೀದಿಸಲು ಸಹಾಯಧನ ನೀಡಲಾಗುತ್ತಿದ್ದು, ಆಸಕ್ತ ರೈತರು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಿ ಹೆಸರು…

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ ಗ್ರೂಪ್-ಸಿ ಹಾಗೂ ಡಿ ವೃಂದದ ನೌಕರರಿಗೆ ಸಿಹಿಸುದ್ದಿ ಎನ್ನುವಂತೆ ನೌಕರರಿಗೆ ತಿಂಗಳಿಗೆ ನೀಡುತ್ತಿದ್ದಂತ ವೈದ್ಯಕೀಯ ಭತ್ಯೆಯನ್ನು 200 ರೂ.ನಿಂದ 500 ರೂ.ವರೆಗೆ ಹೆಚ್ಚಳ ಮಾಡಿದೆ.  ಈ ಕುರಿತಂತೆ ರಾಜ್ಯ ಸರ್ಕಾರದಿಂದ ಆದೇಶ ಮಾಡಲಾಗಿದ್ದು, ರಾಜ್ಯದ  ಗ್ರೂಪ್‌ ಸಿ ಮತ್ತು ಡಿ ವೃಂದದ ನೌಕರರಿಗೆ ನೀಡಲಾಗುವ ತಿಂಗಳ ವೈದ್ಯಕೀಯ ಭತ್ಯೆಯನ್ನು ₹200 ರಿಂದ ₹500ಕ್ಕೆ ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ. ನಗದುರಹಿತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ಬರುವವರೆಗೆ ಈ ವೈದ್ಯಕೀಯ ಸೌಲಭ್ಯ ಮುಂದುವರೆಯಲಿದೆ ಎಂದು ತಿಳಿಸಿದೆ. https://twitter.com/KarnatakaVarthe/status/1833076006929748466 https://kannadanewsnow.com/kannada/bengaluru-belongs-to-kannadigas-post-sparks-debate-on-social-media-war-of-words/ https://kannadanewsnow.com/kannada/breaking-no-relief-for-actor-darshan-at-the-moment-court-order-extending-the-period-of-judicial-custody-for-3-days/

Read More

ಬೆಂಗಳೂರು: ಟೆಕ್ ಕ್ಯಾಪಿಟಲ್ ಕನ್ನಡಿಗರಿಗೆ ಸೇರಿದ್ದು ಎಂದು ಎಕ್ಸ್ ಪೋಸ್ಟ್ ವೈರಲ್ ಆದ ನಂತರ ಬೆಂಗಳೂರಿನಲ್ಲಿ ‘ಹೊರಗಿನವರು-ಒಳಗಿನವರು’ ಚರ್ಚೆ ಮತ್ತೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಾರಂಭವಾಗಿದೆ. ಈ ಪೋಸ್ಟ್ ಎಕ್ಸ್ ನಾದ್ಯಂತ ಆಕ್ರೋಶವನ್ನು ಸೃಷ್ಟಿಸಿತು, ಅನೇಕ ಟೆಕ್ಕಿಗಳು, ಉದ್ಯಮಿಗಳು ಮತ್ತು ಎಲ್ಲಾ ವಿಭಾಗಗಳ ಜನರಲ್ಲಿ ಬಿಸಿ ಬಿಸಿ ಚರ್ಚೆಯನ್ನು ಹುಟ್ಟು ಹಾಕಿದೆ. ಮಂಜು ಎಂಬ ಬಳಕೆದಾರರು ಎಕ್ಸ್ ಪೋಸ್ಟ್ನಲ್ಲಿ, “ಬೆಂಗಳೂರಿಗೆ ಬರುವ ಪ್ರತಿಯೊಬ್ಬರಿಗೂ, ನೀವು ಕನ್ನಡ ಮಾತನಾಡದಿದ್ದರೆ ಅಥವಾ ಕನ್ನಡ ಮಾತನಾಡಲು ಪ್ರಯತ್ನಿಸದಿದ್ದರೆ ನಿಮ್ಮನ್ನು ಬೆಂಗಳೂರಿನಲ್ಲಿ ಹೊರಗಿನವರಂತೆ ಪರಿಗಣಿಸಲಾಗುತ್ತದೆ. ಅದನ್ನು ಬರೆಯಿರಿ, ಅದನ್ನು ಸುತ್ತಲೂ ಹಂಚಿಕೊಳ್ಳಿ. ನಾವು ತಮಾಷೆ ಮಾಡುತ್ತಿಲ್ಲ. ಬೆಂಗಳೂರು ಕನ್ನಡಿಗರಿಗೆ ಸೇರಿದ್ದು ಎಂದು ಒತ್ತಿ ಹೇಳಿದ ಅವರು, ಜಾಗತಿಕ ನಗರದಲ್ಲಿ ಇತರ ಭಾಷೆಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಹೇಳಿದರು. https://twitter.com/ManjuKBye/status/1831926183438774774 ಈ ಪೋಸ್ಟ್ ಎಕ್ಸ್ ನಲ್ಲಿ ಸಖತ್ ವೈರಲ್ ಆಗಿದ್ದು, ಇದಕ್ಕೆ ಹಲವರು ತಮ್ಮ ಅಭಿಪ್ರಾಯವನ್ನು ಪರ – ವಿರೋಧವಾಗಿ ಹಂಚಿಕೊಂಡಿದ್ದಾರೆ. ಆ ಬಗ್ಗೆ ಈ ಕೆಳಗಿದೆ. ಈ ಪೋಸ್ಟ್ಗೆ ಪ್ರತಿಕ್ರಿಯಿಸಿರುವ…

Read More

ಬೆಂಗಳೂರು : ಬೆಂಗಳೂರು ಹಾಗೂ ಧಾರವಾಡದ ನಿವಾಸಿಗಳು ಪರಿಸರದ ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತಿರುವುದು ಇತ್ತೀಚಿನ ಸಮೀಕ್ಷೆಯಲ್ಲಿ ಸ್ಪಷ್ಟವಾಗಿದೆ. ಅವರು ಕೊನೇ ಮೈಲಿ ವಿತರಣಾ ವ್ಯವಸ್ಥೆ ವಿಚಾರಕ್ಕೆ ಬಂದಾಗ ಬ್ಯಾಟರಿ ಚಾಲಿತ ವಾಹನಗಳನ್ನು ಹೆಚ್ಚು ಆಯ್ಕೆ ಮಾಡಿಕೊಳ್ಳಬೇಕು ಎಂಬ ಅಭಿಪ್ರಾಯಕ್ಕೆ ಬದ್ಧರಾಗಿದ್ದಾರೆ. ಸಮೀಕ್ಷೆಯ ಪ್ರಕಾರ, ಶೇಕಡಾ 80.1ರಷ್ಟು ಮಂದಿ ಪರಿಸರಕ್ಕೆ ವಿಷಕಾರಿ ಅನಿಲ ಹೊರಸೂಸುವುದನ್ನು ತಪ್ಪಿಸುವ ನಿಟ್ಟಿನಲ್ಲಿ ತಮ್ಮ ಬದ್ಧತೆ ಪ್ರದರ್ಶಿಸಿದ್ದಾರೆ. ಎರಡೂ ನಗರಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಪಾಲ್ಗೊಂಡಿರುವ ಶೇಕಡಾ 96ರಷ್ಟು ಮಂದಿ ಕೊನೇ ಮೈಲಿ ಸಾರಿಗೆಯಾಗಿ ಎಲೆಕ್ಟ್ರಿಕ್‌ ವಾಹನಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಅದರ ಮೂಲಕ ವಾಯುಮಾಲಿನ್ಯ ತಡೆಗಟ್ಟಬಹುದು ಎಂಬುದನ್ನು ಬಲವಾಗಿ ನಂಬಿದ್ದಾರೆ. ಕೊನೇ ಮೈಲಿ ವಿತರಣೆ ವ್ಯವಸ್ಥೆ ಎಂದರೆ, ವಿತರಣಾ ಕೇಂದ್ರದಿಂದ ಗ್ರಾಹಕರ ಬಾಗಿಲಿಗೆ ಸರಕುಗಳನ್ನು ಸಾಗಿಸುವ ಸಾರಿಗೆ ಜಾಲವಾಗಿದೆ. ವಾಸ್ತವವೇನೆಂದರೆ 2024ರ ವೇಳೆಗೆ ಕೊನೆಯ ಮೈಲಿ ವಿತರಣಾ ವಲಯವೊಂದೇ ಹಸಿರುಮನೆ ಪರಿಣಾಮಕ್ಕೆ ಕಾರಣವಾಗುವ ಅನಿಲವಾದ ಇಂಗಾಲದ ಡೈಆಕ್ಸೈಡ್ ಅನ್ನು 500,000 ಟನ್‌ನಷ್ಟು ವಾತಾವರಣಕ್ಕೆ ಬಿಡುಗಡೆ ಮಾಡಲಿದೆ ಎಂಬುದು…

Read More

ಮಂಡ್ಯ : ಮದ್ದೂರು ಪಟ್ಟಣದ ಪೇಟೆ ಬೀದಿಯ ಅಗಲೀಕರಣ ಸಂಬಂಧ ಸೆ.10 ರಂದು ಸಂಬಂಧಪಟ್ಟ ಅಧಿಕಾರಿಗಳ ಸಭೆಯನ್ನು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸಂಜೆ 5 ಗಂಟೆಗೆ ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು. ಪಟ್ಟಣದ ಪೇಟೆ ಬೀದಿಯನ್ನು ಶಾಸಕ ಕೆ.ಎಂ.ಉದಯ್ ಹಾಗೂ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಪಟ್ಟಣದ ಪೇಟೆ ಬೀದಿ ಕಿರಿದಾಗಿರುವ ಕಾರಣ ವಾಹನ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿರುವ ಬಗ್ಗೆ ಶಾಸಕ ಕೆ.ಎಂ.ಉದಯ್ ಅವರು ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಸಂಬಂಧ ಪೌರಾಡಳಿತ ನಿರ್ದೇಶನಾಲಯ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ವರದಿ ನೀಡುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ರಸ್ತೆಯನ್ನು ಪರಿಶೀಲನೆ ಮಾಡಲಾಗುತ್ತಿದ್ದು, ಇನ್ನೊಂದು ತಿಂಗಳೊಳಗೆ ರಸ್ತೆ ಕಾಮಗಾರಿ ಸಂಬಂಧ ಡಿಪಿಆರ್ ಸಿದ್ಧವಾಗಲಿದೆ ಎಂದು ಹೇಳಿದರು. ಪಟ್ಟಣದ ಪೇಟೆ ಬೀದಿಯು ಕೆಲವು ಕಡೆ 20,40 ಹಾಗೂ 60 ಅಡಿಗಳು ಇದ್ದು ಶಾಸಕ ಕೆ.ಎಂ.ಉದಯ್ ಅವರು 100 ಅಡಿಗೆ ವಿಸ್ತರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದು, ಈ ಸಂಬಂಧ ಅಧಿಕಾರಿಗಳ…

Read More

ಬೆಂಗಳೂರು: ಸಿಂಗಾಪುರದ ಉದ್ಯಮಿಗಳು ರಾಜ್ಯದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆಗೆ ಮುಂದೆ ಬಂದರೆ ಅವರಿಗೆ ಅಗತ್ಯವಾಗಿ ಬೇಕಾದ ಭೂಮಿ ಮತ್ತಿತರ ಮೂಲಸೌಕರ್ಯಗಳನ್ನು ಸಮರೋಪಾದಿಯಲ್ಲಿ ಒದಗಿಸಲಾಗುವುದು. ಈ ನಿಟ್ಟಿನಲ್ಲಿ ಅಲ್ಲಿನ ಉದ್ಯಮಿಗಳೊಂದಿಗೆ ನಿರಂತರ ಸಂಪರ್ಕದಲ್ಲಿ ಇರಲಾಗುವುದು ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ. ತಮ್ಮನ್ನು ಇಲ್ಲಿ ಸೋಮವಾರ ಭೇಟಿಯಾದ `ಸಿಂಗಪುರ್ ಬಿಜಿನೆಸ್ ಫೆಡರೇಶನ್’ನ ಉನ್ನತ ಮಟ್ಟದ ನಿಯೋಗದ ಸದಸ್ಯರೊಂದಿಗೆ ಅವರು ಉನ್ನತ ಮಟ್ಟದ ಮಾತುಕತೆ ನಡೆಸಿದರು. ಫೆಡರೇಶನ್ನಿನ ಉಪಾಧ್ಯಕ್ಷ ಪ್ರಸೂನ್ ಮುಖರ್ಜಿ ಈ ನಿಯೋಗದ ನೇತೃತ್ವ ವಹಿಸಿದ್ದರು. ನಿಯೋಗದೊಂದಿಗೆ ಮಾತನಾಡಿದ ಸಚಿವರು, 2025ರ ಫೆಬ್ರವರಿ 12ರಿಂದ 14ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ `ಜಾಗತಿಕ ಹೂಡಿಕೆದಾರರ ಸಮಾವೇಶ’ದಲ್ಲಿ ಸಿಂಗಪುರದ ಉದ್ದಿಮೆಗಳು ಭಾಗವಹಿಸಬೇಕು ಎಂದು ಆಹ್ವಾನಿಸಿದರು. ಮಾತುಕತೆಯ ಸಂದರ್ಭದಲ್ಲಿ ಸಿಂಗಪುರದ ಅಪ್ಲೈಡ್ ಟೋಟಲ್ ಕಂಟ್ರೋಲ್ ಟ್ರೀಟ್ಮೆಂಟ್ ಪಿಟಿಇ ಲಿಮಿಟೆಡ್, ಬಯೋಮೆಡ್ ಸರ್ವೀಸಸ್ ಪಿಟಿಇ ಲಿಮಿಟೆಡ್, ಕೇಟರಿಂಗ್ ಸೊಲ್ಯೂಷನ್ಸ್ ಲಿ, ಹರ್ಮಿಸ್ ಎಪಿಟೆಕ್ ಕಾರ್ಪೊರೇಷನ್, ಇನ್ಸ್ಫಿಯರ್ ಟೆಕ್ನಾಲಜಿ, ರೀಟ್ಜ್ ಲಿಮಿಟೆಡ್, ಯೂನಿವರ್ಸಲ್ ಸಕ್ಸಸ್…

Read More

ಮಂಡ್ಯ : ಮದ್ದೂರು ತಾಲೂಕಿನ ಅಗರಲಿಂಗನದೊಡ್ಡಿ ಸರ್ಕಾರಿ ಪ್ರಾಥಮಿಕ ಪಾಠಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಉದ್ದೇಶ ಪೂರ್ವಕವಾಗಿ ವಿಳಂಬ ಮಾಡಿದ ಗುತ್ತಿಗೆದಾರ ಹಾಗೂ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಎಚ್ಚರಿಕೆ ನೀಡಿದರು. ಅಗರಲಿಂಗನದೊಡ್ಡಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಶಾಲಾ ಕಟ್ಟಡದ ನಿರ್ಮಾಣ ಕಾಮಗಾರಿಯನ್ನು ಅಧಿಕಾರಿಗಳೊಂದಿಗೆ ಸೋಮವಾರ ಆಗಮಿಸಿ ಕಾಮಗಾರಿ ವಿಳಂಬಕ್ಕೆ ಕಾರಣಗಳೇನು ಎಂಬುದರ ಬಗ್ಗೆ ಸಮಗ್ರ ಮಾಹಿತಿ ಪಡೆದು ಬಳಿಕ ಮಾತನಾಡಿದರು. ಶಾಲಾ ಕಟ್ಟಡದ ಕಾಮಗಾರಿಯನ್ನು 2 ತಿಂಗಳೊಳಗೆ ಪೂರ್ಣಗೊಳಿಸಿ ವಿಧ್ಯಾರ್ಥಿಗಳ ಅನುಕೂಲಕ್ಕೆ ಅನುವು ಮಾಡಿಕೊಡಬೇಕೆಂದು ಉಚ್ಚ ನ್ಯಾಯಾಲಯ ಆದೇಶ ಹೊರಡಿಸಿದ್ದರು ಸಹ ಗುತ್ತಿಗೆದಾರರು ಅವಧಿಯೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಿದ ಬಗ್ಗೆ ಸ್ಥಳದಲ್ಲಿದ್ದ ಗುತ್ತಿಗೆದಾರ ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಟ್ಟಡ ಕಾಮಗಾರಿಗೆ ಜ.31 ರಂದು ಭೂಮಿ ಪೂಜೆ ಮಾಡಲಾಗಿತ್ತು. ಜು. 31 ರೊಳಗೆ ಕಾಮಗಾರಿ ಮುಗಿಸಿ ಉದ್ಘಾಟನೆಗೊಳ್ಳಬೇಕಿತ್ತು. ಆದರೆ, ಗುತ್ತಿಗೆದಾರ ಹಾಗೂ ಸಂಬಂಧಿಸಿದ ಅಧಿಕಾರಿಗಳ ಬೇಜವಾಬ್ದಾರಿತನದಿಂದ ವಿಳಂಬವಾಗುತ್ತಿದೆ ಎಂದು ಸಿಡಿಮಿಡಿಗೊಂಡರು. ಈ ಸಂಬಂಧವಾಗಿ ಉಚ್ಚ ನ್ಯಾಯಾಲಯ…

Read More

ಚೀನಾ : ಚೀನಾದ ಹುಲುನ್ಬುಯಿರ್ನ ಮೊಕಿ ತರಬೇತಿ ನೆಲೆಯಲ್ಲಿ ಸೋಮವಾರ (ಸೆಪ್ಟೆಂಬರ್ 9) ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ 5-1 ಗೋಲುಗಳಿಂದ ಜಪಾನ್ ತಂಡವನ್ನು ಮಣಿಸಿ ಸತತ ಎರಡನೇ ಗೆಲುವು ದಾಖಲಿಸಿದೆ. ಚೀನಾ ವಿರುದ್ಧದ ಪಂದ್ಯದಂತೆಯೇ, ರೆಫರಿ ಶಿಳ್ಳೆ ಬೀಸಿದ ಕೂಡಲೇ ಸುಖ್ಜೀತ್ ಸಿಂಗ್ ಅವರು ಗೋಲ್ನೊಂದಿಗೆ ಭಾರತದ ಖಾತೆಯನ್ನು ತೆರೆದರು. ಜಪಾನಿನ ಡಿಫೆನ್ಸ್ ನಿಟ್ಟುಸಿರು ಬಿಡುವ ಮೊದಲೇ ಭಾರತ ಅಭಿಷೇಕ್ ರೂಪದಲ್ಲಿ ಮತ್ತೆ ದಾಳಿ ನಡೆಸಿತು. ಅಭಿಷೇಕ್ ಜಪಾನಿನ ಅರ್ಧಭಾಗಕ್ಕೆ ಧಾವಿಸಿ ಮತ್ತೊಂದು ಫೀಲ್ಡ್ ಗೋಲ್ ಗಳಿಸಲು ಅವರ ಡಿಫೆನ್ಸ್ ಅನ್ನು ಛಿದ್ರಗೊಳಿಸಿದರು. ಕೆಲವು ಸೆಕೆಂಡುಗಳ ಅಂತರದಲ್ಲಿ ಸತತ ಎರಡು ಗೋಲುಗಳು ಜಪಾನಿನ ತಂಡವನ್ನು ಹಿಂದಕ್ಕೆ ಕುಳಿತುಕೊಳ್ಳುವಂತೆ ಮಾಡಿತು ಮತ್ತು ತಮ್ಮ ಡಿಫೆನ್ಸ್ ಅನ್ನು ಪ್ಲಗ್ ಮಾಡುವತ್ತ ಸಂಪೂರ್ಣವಾಗಿ ಗಮನ ಹರಿಸಿತು. ಮೊದಲಾರ್ಧದಲ್ಲಿ ಮೆನ್ ಇನ್ ಬ್ಲೂ ತಂಡದ ಪ್ರಾಬಲ್ಯ ಹೊರತಾಗಿಯೂ ಜಪಾನ್ ಭಾರತಕ್ಕೆ ಗೋಲು ಗಳಿಸಲು ಹೆಚ್ಚಿನ ಅವಕಾಶಗಳನ್ನು ನಿರಾಕರಿಸಿತು. ಎರಡನೇ ಕ್ವಾರ್ಟರ್ ಅದೇ ಹರಿವಿನೊಂದಿಗೆ ಪ್ರಾರಂಭವಾಯಿತು…

Read More

ಹಾಸನ: ಇನ್ನೂ ಅನಾಹುತ ಕಡಿಮೆಯಾಗಿಲ್ಲ. ಮಳೆ ಹೆಚ್ಚಾಗಲಿದೆ. ಐದು ಕಡೆಯಲ್ಲಿ ತೊಂದರೆ ಎದುರಾಗಲಿದೆ. ಆಕಾಶದಲ್ಲಿ ದೊಡ್ಡ ಆಘಾತವೇ ಉಂಟಾಗಲಿದೆ. ಭೂಮಿ, ಆಕಾಶ, ಅಗ್ನಿ, ವಾಯು, ಜಲಗಳಿಂದ ಕಂಟಕ ಎದುರಾಗಲಿದೆ ಎಂಬುದಾಗಿ ಕೋಡಿಮಠದ ಶಿವಾನಂದ ಶಿವಾಚಾರ್ಯ ಶ್ರೀಗಳು ಸ್ಪೋಟಕ ಭವಿಷ್ಯವನ್ನು ನುಡಿದಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮಳೆ ಇನ್ನೂ ಜಾಸ್ತಿ ಆಗಲಿದೆ. ಪ್ರಾಕೃತಿಕ ದೋಷವಿದೆ. ಐದು ಕಡೆ ತೊಂದರೆಯಿದೆ. ಭೂಮಿ, ಆಕಾಶ, ಅಗ್ನಿ, ವಾಯು ಎಲ್ಲಾ ಕಡೆಗೂ ತೊಂದರೆ ಆಗ್ತಿದೆ. ಯುದ್ಧದಲ್ಲಿ ಸಾಯುತ್ತಾರೆ ಅಂದಿದ್ದೆ, ಗುಡ್ಡ ಹೋಗುತ್ತದೆ ಎಂದಿದ್ದೆ, ಭೂಮಿ ಬಿರಿಯುತ್ತೆ ಅಂತ ಹೇಳಿದೆ ಅದರಂತೆ ಆಗಿದೆ ಎಂದರು. ಇನ್ನೂ ಆಕಾಶದಲ್ಲಿ ದೊಡ್ಡ ಆಘಾತ ಉಂಟಾಗುವಂತ ಘಟನೆ ನಡೆಯಲಿದೆ. ಇನ್ನೂ ಅನಾಹುತವಿದೆ. ಇನ್ನೂ ಮಳೆಯಿದೆ, ಅನಾಹುತವಿದೆ. ಒಂದು ಆಕಾಶ ತತ್ವದ ಪ್ರಕಾರ ತೊಂದರೆ ಆಗಬಹುದು. ಅದು ರಾಜನ ಮೇಲೂ ತೊಂದರೆ ಆಗಬಹುದು ಎಂದರು. ಮಹಾಭಾರತದಲ್ಲಿ ಕೃಷ್ಣ ಇದ್ದ, ಗಧಾಯುದ್ಧದಲ್ಲಿ ಭೀಮ ಗೆದ್ದ. ಈಗ ಕೃಷ್ಣ ಇಲ್ಲ ದುರ್ಯೋಧನ ಗೆಲ್ಲುತ್ತಾನೆ. ಸೆಂಟ್ರಲ್ಲೂ ಇದೆ, ಸ್ಟೇಟಲ್ಲೂ…

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ ನಕಲಿ ರೇಷನ್ ಕಾರ್ಡ್ ದಾರರ ವಿರುದ್ಧ ಸಮರವನ್ನೇ ಸಾರಿದೆ. ಅನರ್ಹ ಪಡಿತರ ಚೀಟಿದಾರರ ಕಾರ್ಡ್ ರದ್ದು ಮಾಡಲಾಗಿದೆ. ಈ ಸಂಬಂಧ ಅನರ್ಹ ಬಿಪಿಎಲ್ ಕಾರ್ಡ್ ದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈಗಾಗಲೇ ರಾಜ್ಯ ಸರ್ಕಾರವು ಅನರ್ಹ ಬಿಪಿಎಲ್ ಕಾರ್ಡ್ ರದ್ದುಗೊಳಿಸುವುದಾಗಿ ಹೇಳಿತ್ತು. ಅದರಂತೆ ಅಧಿಕಾರಿಗಳಿಗೆ ಅನರ್ಹರಲ್ಲದವರು ಯಾರು ಯಾರು ರೇಷನ್ ಕಾರ್ಡ್ ಪಡೆದಿದ್ದಾರೆ ಎನ್ನುವಂತ ಪಟ್ಟಿಯನ್ನು ತಯಾರಿಸುವಂತೆಯೂ ಸೂಚಿಸಿತ್ತು. ಆಹಾರ ಇಲಾಖೆಯ ಅಧಿಕಾರಿಗಳು ಬಿಪಿಎಲ್ ಕಾರ್ಡ್ ಪಡೆಯುವ ಮಾನದಂಡದಂತೆ ಯಾರು ಅರ್ಹರು, ಯಾರು ಅನರ್ಹರು ಎಂಬುದಾಗಿ ಮಾಹಿತಿ ಕಲೆಹಾಕಿ, ಅನರ್ಹರು ಬಿಪಿಎಲ್ ಕಾರ್ಡ್ ಪಡೆದಿರುವಂತ ಪಟ್ಟಿಯನ್ನು ತಯಾರಿಸಿತ್ತು. ಚಿಕ್ಕಮಗಳೂರು ಜಿಲ್ಲೆಯಲ್ಲಿ 50126 ರೇಷನ್ ಕಾರ್ಡ್ ಗಳನ್ನು ಪರಿಶೀಲನೆ ಮಾಡಲಾಗಿದೆ. ಆಹಾರ ಇಲಾಖೆಯಿಂದ 1.20 ಲಕ್ಷ ಆದಾಯದ ಮಿತಿ ಮೀರಿದವರು. 10 ಚದರ ಅಡಿಗಳಿಗಿಂತ ಹೆಚ್ಚು ಮನೆ ಹೊಂದಿರುವವರು ಸೇರಿದಂತೆ ಇತರೆ ಮಾನದಂಡಗಳನ್ನು ಆಧರಿಸಿ ಅನರ್ಹರಾದಂತ ಬಿಪಿಎಲ್ ಕಾರ್ಡ್ ದಾರರ ಪಟ್ಟಿಯನ್ನು ಜಿಲ್ಲಾಡಳಿತದಿಂದ ಬಿಡುಗಡೆ ಮಾಡಲಾಗಿದೆ. ಈ ಅನರ್ಹರು…

Read More