Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಹಾಸನ ಪೆನ್ ಡ್ರೈವ್ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಅದೇ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಮಾಡಿದಂತ ಸೂತ್ರಧಾರಿಯ ಸುಳಿವು ಪತ್ತೆಯಾಗಿರೋದಾಗಿ ತಿಳಿದು ಬಂದಿದೆ. ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದೆ. ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ಪ್ರಕರಣದಲ್ಲಿ, ಇದೀಗ ಮತ್ತೊಂದು ಹೊಸ ಟ್ವಿಸ್ಟ್ ಸಿಕ್ಕಿದೆ. ಅದೇ ವಾಟ್ಸ್ ಆಪ್ ನಲ್ಲಿ ಮೊದಲು ಶೇರ್ ಮಾಡಿದಂತ ಆರೋಪಿಯ ಸುಳಿವು ಪತ್ತೆಯಾಗಿದೆಯಂತೆ. ಮೊದಲು ಯಾರು ವಾಟ್ಸ್ ಆಪ್ ನಲ್ಲಿ ಕಾಪಿ ಮಾಡಿದ್ರೋ ಆ ವ್ಯಕ್ತಿಯ ಸುಳಿವು ಪತ್ತೆಯಾಗಿದೆ. ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋವನ್ನು ಮೊದಲು ವಾಟ್ಸ್ ಆಪ್ ನಲ್ಲಿ ಶೇರ್ ಮಾಡಿದ್ದೇ ಶ್ರೇಯಸ್ ಶಿಷ್ಯ ಎಂಬುದಾಗಿ ತಿಳಿದು ಬಂದಿದೆ. ಕೈ ಮುಖಂಡನಿಗೆ ಮೊದಲು ವಾಟ್ಸ್ ಮೂಲಕ ಶ್ರೇಯಸ್ ಶಿಷ್ಯ ಪ್ರಜ್ವಲ್ ರೇವಣ್ಣ ಅವರ ವೀಡಿಯೋ ಕಳುಹಿಸಿರೋದಾಗಿ ಪತ್ತೆಯಾಗಿದೆ ಎನ್ನಲಾಗಿದೆ. ಸ್ವತಹ ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್ ನಂಬರ್ ನಿಂದಲೇ ಅಶ್ಲೀಲ ವೀಡಿಯೋ ಶೇರ್…
ಶಿವಮೊಗ್ಗ: 400 ಮಹಿಳೆಯ ಮೇಲೆ ಪ್ರಜ್ವಲ್ ರೇವಣ್ಣ ಅತ್ಯಾಚಾರ ನಡೆಸಿದ್ದಾರೆ. ಕೃತ್ಯದ ವೀಡಿಯೋ ಸಹ ಮಾಡಿಕೊಂಡಿದ್ದಾನೆ. ಇದು ಲೈಂಗಿಕರ ಹಗರಣವಲ್ಲ ಸಾಮೂಹಿಕ ಅತ್ಯಾಚಾರ ಎಂಬುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ನಗರದಲ್ಲಿ ಇಂದು ಪ್ರಜಾಧ್ವನಿ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದಂತ ಅವರು, ಪ್ರಜ್ವಲ್ ರೇವಣ್ಣ ಕೃತ್ಯ ನಡೆಸಿರೋದಲ್ಲದೇ ವೀಡಿಯೋ ಕೂಡ ಮಾಡಿಕೊಂಡಿದ್ದಾನೆ. ಇದು ಲೈಂಗಿಕ ಹಗರಣವಲ್ಲ. ಬದಲಾಗಿ ಸಾಮೂಹಿಕ ಅತ್ಯಾಚಾರವಾಗಿದೆ ಎಂಬುದಾಗಿ ಆಕ್ರೋಶ ಹೊರ ಹಾಕಿದರು. ಪ್ರಧಾನಿ ನರೇಂದ್ರ ಮೋದಿಯವರು ಅತ್ಯಾಚಾರಿಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಪ್ರಜ್ವಲ್ ರೇವಣ್ಣಗೆ ವೋಟ್ ಹಾಕಿದ್ರೆ ನನಗೆ ಮತ ಹಾಕಿದಂತೆ ಅಂದಿದ್ದಾರೆ. ಬಿಜೆಪಿ ನಾಯಕರಿಗೆ ಅತ್ಯಾಚಾರ ಅನ್ನೋದು ಗೊತ್ತಿಲ್ವ ಅಂತ ಪ್ರಶ್ನಿಸಿದರು https://kannadanewsnow.com/kannada/johnson-johnson-to-pay-rs-648-crore-compensation-for-cancer-cases/ https://kannadanewsnow.com/kannada/pakistan-wants-to-make-rahul-gandhi-the-prime-minister-of-india-pm-modi/
ನಾವು ಕಷ್ಟಪಟ್ಟು ದುಡಿದ ಹಣವನ್ನು ಖರ್ಚು ಮಾಡಬೇಕು ಆದರೆ ಆ ಖರ್ಚುಗಳನ್ನು ಒಳ್ಳೆಯದಕ್ಕೆ ಖರ್ಚು ಮಾಡಬೇಕು ಮತ್ತು ವ್ಯರ್ಥ ಮಾಡಬಾರದು. ಕಟ್ಟುನಿಟ್ಟಾಗಿ ಹೇಳುವುದಾದರೆ, ವ್ಯರ್ಥವಾದರೆ ಒಬ್ಬರ ಜೀವನದಲ್ಲಿ ಪ್ರಗತಿಯಿಲ್ಲ. ಒಬ್ಬರ ಪ್ರಗತಿಯನ್ನು ಹಣದಿಂದ ನಿರ್ಧರಿಸಲಾಗುತ್ತದೆ. ಎಷ್ಟರಮಟ್ಟಿಗೆ ಹಣ ಉಳಿತಾಯ ಮತ್ತು ಮಂಗಳಕರವಾಗಿ ಖರ್ಚು ಮಾಡಿದರೆ ಅವರ ಜೀವನದಲ್ಲಿ ಪ್ರಗತಿಯುಂಟಾಗುತ್ತದೆ. ಈ ಆಧ್ಯಾತ್ಮಿಕ ಪೋಸ್ಟ್‌ನಲ್ಲಿ, ಅಂತಹ ವ್ಯರ್ಥಗಳನ್ನು ತಪ್ಪಿಸುವ ಮೂಲಕ ಉಳಿತಾಯವನ್ನು ಹೆಚ್ಚಿಸಲು ಮಾಡಬಹುದಾದ ಪರಿಹಾರವನ್ನು ನಾವು ನೋಡಲಿದ್ದೇವೆ . ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564. ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು…
ಕಲಿಯುಗದಲ್ಲಿ ಜನರು ಸಾಲದ ಬಾಧೆಯಿಂದ ನರಳುತ್ತಾರೆ ಎಂಬುದು ಸಿದ್ಧರಿಗೆ ತಿಳಿದಿತ್ತು. ಅದಕ್ಕೇ ಅವರು ಈ ಮೈತ್ರೇಯ ಮುಹೂರ್ತ ವನ್ನು ಕಂಡುಹಿಡಿದು ಹೇಳಿದ್ದಾರೆ. ಈ ಮೈತ್ರೇಯ ಮುಹೂರ್ತದ ಸಮಯದಲ್ಲಿ ಸಾಲವನ್ನು ಹಿಂತಿರುಗಿಸಿದಾಗ, ಸಾಲದ ಸಮಸ್ಯೆ ಶೀಘ್ರದಲ್ಲೇ ಪರಿಹಾರವಾಗುತ್ತದೆ ಎಂದು ನಂಬಲಾಗಿದೆ. ಮೈತ್ರೇಯ ಮುಹೂರ್ತದ ಸಮಯವನ್ನು ಬಳಸಿಕೊಂಡು ಅನೇಕರು ಸಾಲದ ಸಮಸ್ಯೆಯಿಂದ ಹೊರಬಂದಿದ್ದಾರೆ ಎಂಬುದು ಗಮನಾರ್ಹ. ಈ ಆಧ್ಯಾತ್ಮಿಕ ಪೋಸ್ಟ್ ಮೂಲಕ ಈ ಮೇ ತಿಂಗಳಲ್ಲಿ ಮೈತ್ರೇಯ ಮುಹೂರ್ತ ಯಾವಾಗ ಬರುತ್ತಿದೆ ಎಂದು ತಿಳಿದುಕೊಳ್ಳೋಣ. ಮೇನಲ್ಲಿ ಅಮೃತ ಸಿದ್ಧಿ ಯೋಗ ಮೈತ್ರೇಯ ಮುಹೂರ್ತ 06-05-2024 ಸೋಮವಾರ ಬೆಳಿಗ್ಗೆ 7:30 – 8:30 AM ಮೈತ್ರೇಯ ಮುಹೂರ್ತ. ಮಂಗಳವಾರ 07-05-2024 ರಂದು ಮಧ್ಯಾಹ್ನ 12:30 ರಿಂದ 1:30 ರವರೆಗೆ ಮೈತ್ರೇಯ ಮುಹೂರ್ತ ಇದೆ. 23-05-2024 ರಿಂದ 6:30 – 7:30 PM ಮೈತ್ರೇಯ ಮುಹೂರ್ತದ ಸಮಯ. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ…
ಯಾದಗಿರಿ : ನರೇಂದ್ರ ಮೋದಿಯವರ ಬಳಿ ಹಣ ಜಾಸ್ತಿ ಇದ್ದರೆ, ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ 30 ಲಕ್ಷ ಹುದ್ದೆಗಳನ್ನು ಏಕೆ ತುಂಬಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ಅವರು ಇಂದು ಯಾದಗಿರಿಯಲ್ಲಿ ಆಯೋಜಿಸಲಾಗಿದ್ದ ಪ್ರಜಾಧ್ವನಿ -02 ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪಕ್ಷದ ಅಭ್ಯರ್ಥಿಯಾದ ಜಿ ಕುಮಾರ ನಾಯ್ಕ ಅವರ ಪರವಾಗಿ ಮತದಾರರಲ್ಲಿ ಮತ ಯಾಚಿಸಿ ಮಾತನಾಡಿದರು. ನರೇಂದ್ರ ಮೋದಿಯವರ ಬಳಿ ಹಣ ಜಾಸ್ತಿ ಇದ್ದರೆ, ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ 30 ಲಕ್ಷ ಹುದ್ದೆಗಳನ್ನು ತುಂಬಲು ಏನು ಅಡ್ಡಿಯಾಗಿತ್ತು? ಅದನ್ನು ತುಂಬಿದ್ದರೆ ಸುಮಾರು 50% ಹಿಂದುಳಿದವರು, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಕೆಲಸ ದೊರಕುತ್ತಿತ್ತು. ಇನ್ನುಳಿದ 50% ಇತರರಿಗೆ ದೊರಕುತ್ತಿತ್ತು. ಈ ಖಾಲಿ ಹುದ್ದೆಗಳನ್ನು ಏಕೆ ತುಂಬಿಲ್ಲ ಎಂದು ಪ್ರಶ್ನಿಸಿದರು. ರಾಜ್ಯ ಸರ್ಕಾರದ ಬಳಿ ಸಂಬಳ ಕೊಡಲು ದುಡ್ಡಿಲ್ಲ ಎನ್ನುವ ಮೋದಿ ಮತ್ತು ಬಿಜೆಪಿ ಆರೋಪಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು, ದುಡ್ಡಿಲ್ಲದೇ ಹೋಗಿದ್ದರೆ 8 ತಿಂಗಳಲ್ಲಿ 5…
ಹಾವೇರಿ: ತುಂಗಾ ಮೇಲ್ದಂಡೆ ಯೋಜನೆ ಮೂಲಕ ಹಾವೇರಿ ಜಿಲ್ಲೆಗೆ ನೀರು ತರುವುದು ಅಸಾಧ್ಯವಾಗಿದ್ದನ್ನು ಸಾಧ್ಯ ಮಾಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅವರು ಇಂದು ರಾಣೆಬೆನ್ನೂರು ತಾಲೂಕಿನ ಹನುಮಾಪುರ, ಹೊನ್ನತ್ತಿ, ಗುಡ್ಡದ ಅನವೇರಿ, ಗುಡ್ಡದ ಗುಡ್ಡಾಪುರ, ಖಜ್ಜರಿ ಗ್ರಾಮಗಳಲ್ಲಿ ರೋಡ್ ಶೋ ಮೂಲಕ ಮತಯಾಚನೆ ಮಾಡಿದರು. ತುಂಗಾ ಮೇಲ್ದಂಡೆ ಯೋಜನೆ ಮೂಲಕ ರಾಣೆಬೆನ್ನೂರಿಗೆ ನೀರು ತರುವ ಯೋಜನೆಯನ್ನು 2008 ರಲ್ಲಿ ನಾನು ಜಲ ಸಂಪನ್ಮೂಲ ಸಚಿವನಾಗಿದ್ದಾಗ ಸಭೆ ಮಾಡಿ, 2011 ರಲ್ಲಿ ಯೋಜನೆ ಪೂರ್ಣಗೊಳಿಸುವುದಾಗಿ ಹೇಳಿದ್ದೆ, ಆದರೆ, ಅದು ಅಸಾಧ್ಯವೆಂದು ಹೇಳಿದ್ದರು. ನಾಲ್ಕು ಬಾರಿ ಟೆಂಡರ್ ಕರೆದರೂ ಯಾರೂ ಬರಲಿಲ್ಲ. ಕಡೆಗೆ ನನ್ನ ಸ್ನೇಹಿತ ತಂತ್ರಜ್ಞಾನ ಬಳಸಿ 150 ಆಳದಲ್ಲಿ ಕೆನಾಲ್ ಮಾಡಿ ನೀರು ತಂದೆವು ಎಂದು ಹೇಳಿದರು. ಸ್ವಾತಂತ್ರ್ಯ ಬಂದ ಮೇಲೆ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಬ್ಯಾಡಗಿ ಕ್ಚೇತ್ರಕ್ಕೆ ಅತಿ ಹೆಚ್ಚು 2000 ಕೋಟಿ ಅನುದಾನ…
ರಾಮನಗರ: ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋ ರಾಷ್ಟ್ರಮಟ್ಟದಲ್ಲಿ ಸುದ್ದಿಮಾಡಿದೆ. ಈ ಬೆನ್ನಲ್ಲೇ ಕಾಂಗ್ರೆಸ್ ಶಾಸಕನದ್ದು ಎನ್ನಲಾದಂತ ಅಶ್ಲೀಲ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ, ರಾಮನಗರದಲ್ಲೂ ಅಶ್ಲೀಲ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಅವರದ್ದು ಎನ್ನಲಾದ ಅಶ್ಲೀಲ ವೀಡಿಯೋ ಹರಿದಾಡುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ರಾಮನಗರ ಕಾಂಗ್ರೆಸ್ ಶಾಸಕನ ವೀಡಿಯೋ ವೈರಲ್ ಆಗುತ್ತಿದ್ದಂತೆ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಜೋಗೇಂಧರ್ ಅವರು ರಾಮನಗರ ಸಿಇಎನ್ ಪೊಲೀಸ್ ಠಾಣೆಗೆ ವೀಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಪೊಲೀಸರಿಗೆ ನೀಡಿರುವಂತ ದೂರಿನಲ್ಲಿ, ಕಾಂಗ್ರೆಸ್ ಶಾಸಕರ ತೇಜೋವಧೆ ಮಾಡಲು ಕೆಲ ಮಂದಿ ನಕಲಿ ವೀಡಿಯೋವನ್ನು ಎಡಿಟ್ ಮಾಡಿ ಹೀಗೆ ಹರಿ ಬಿಟ್ಟಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ…
ನವದೆಹಲಿ: ಭಾರತ ಸೇರಿದಂತೆ ವಿಶ್ವದಾದ್ಯಂತ ಗೂಗಲ್ ಸರ್ವರ್ ಡೌನ್ ಆಗಿರೋದಾಗಿ ಬಳಕೆದಾರರು ವರದಿ ಮಾಡಿದ್ದಾರೆ. ಗೂಗಲ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿರುವ ಕಾರಣ, ಬಳಕೆದಾರರು ಪರದಾಡುತ್ತಿದ್ದಾರೆ ಎಂಬುದಾಗಿ ವರದಿಯಾಗಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಗಳನ್ನು ಬಳಕೆದಾರರು ಮಾಡುತ್ತಿದ್ದಾರೆ. ಗೂಗಲ್ ಡೌನ್ ಆಗಿದೆಯೇ? ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ. ಸರ್ಚ್ ಇಂಜಿನ್ ಇಲ್ಲದೆ ಗೊಂದಲಕ್ಕೊಳಗಾದಾಗ ನೆಟ್ಟಿಗರು ಕೇಳುತ್ತಿದ್ದಾರೆ. ಭಾರತೀಯ ಕಾಲಮಾನ ರಾತ್ರಿ 8:20 ರ ಸುಮಾರಿಗೆ ಗೂಗಲ್ ಹುಡುಕಾಟವು ನೆಟ್ಟಿಗರಿಗೆ ಕೆಲಸ ಮಾಡುತ್ತಿಲ್ಲ ಎಂಬುದಾಗಿ ದೂರಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಡೌನ್ ಡೆಟೆಕ್ಟರ್ ಪ್ರಕಾರ, ಇದನ್ನು ಬರೆಯುವ ಸಮಯದಲ್ಲಿ ಭಾರತದಲ್ಲಿ ಸುಮಾರು 600 ವರದಿಗಳಿವೆ. ಜಾಗತಿಕ ಮಟ್ಟದಲ್ಲಿ, ಗೂಗಲ್ 1300 ಕ್ಕೂ ಹೆಚ್ಚು ವರದಿಗಳೊಂದಿಗೆ ಕುಸಿದಿದೆ ಎಂದು ವರದಿಯಾಗಿದೆ. ಡೌನ್ ಡಿಟೆಕ್ಟರ್ ನ ಸ್ಥಗಿತ ನಕ್ಷೆಯ ಪ್ರಕಾರ, ದೆಹಲಿ, ಲಕ್ನೋ, ಕೋಲ್ಕತಾ, ಮುಂಬೈ, ಬೆಂಗಳೂರು ಮತ್ತು ಚೆನ್ನೈ ಗೂಗಲ್ ನೊಂದಿಗೆ ಸಮಸ್ಯೆಗಳನ್ನು ವರದಿ ಮಾಡಿವೆ. ಪ್ರಪಂಚದಾದ್ಯಂತ ಸ್ಪಷ್ಟವಾದ ಸ್ಥಗಿತವನ್ನು ಎದುರಿಸಿದ್ದರಿಂದ…
ನವದೆಹಲಿ: ಅಮಿತ್ ಶಾ ಅವರ ಮಾರ್ಫಿಂಗ್ ವೀಡಿಯೊದ ಮೇಲೆ ಪೊಲೀಸ್ ದಬ್ಬಾಳಿಕೆ ನಡೆಯುತ್ತಿರುವ ಮಧ್ಯೆ ಜಾರ್ಖಂಡ್ ಕಾಂಗ್ರೆಸ್ನ ಅಧಿಕೃತ ಎಕ್ಸ್ ಖಾತೆಯನ್ನು ಬುಧವಾರ ತಡೆಹಿಡಿಯಲಾಗಿದೆ. ಬಿಜೆಪಿ ಸರ್ಕಾರ ಮತ್ತೆ ರಚನೆಯಾದರೆ ಒಬಿಸಿ ಮತ್ತು ಎಸ್ಸಿ / ಎಸ್ಟಿ ಮೀಸಲಾತಿಯನ್ನು ರದ್ದುಗೊಳಿಸಲಾಗುವುದು ಎಂದು ಅಮಿತ್ ಶಾ ಅವರ ಚುನಾವಣಾ ಭಾಷಣ ವೈರಲ್ ಆಗಿದೆ” ಎಂಬ ಶೀರ್ಷಿಕೆಯೊಂದಿಗೆ ಹ್ಯಾಂಡಲ್ ವೀಡಿಯೊವನ್ನು ಹಂಚಿಕೊಂಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಕಲಿ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ವಿಶೇಷ ಸೆಲ್ ಸಿಆರ್ಪಿಸಿಯ ಸೆಕ್ಷನ್ 91 ರ ಅಡಿಯಲ್ಲಿ ಜಾರ್ಖಂಡ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಠಾಕೂರ್ ಅವರಿಗೆ ನೋಟಿಸ್ ನೀಡಿದ್ದು, ಮೇ 2 ರಂದು ಸೆಲ್ ಕಚೇರಿಯಲ್ಲಿ ಹಾಜರಾಗುವಂತೆ ಸೂಚಿಸಿದೆ. ಏಪ್ರಿಲ್ 29 ರ ಪತ್ರದಲ್ಲಿ, ಇನ್ಸ್ಪೆಕ್ಟರ್ ನರೇಶ್ ಮಲಿಕ್ ವಿಶೇಷ ಸೆಲ್, “ಮೇಲೆ ತಿಳಿಸಿದ ಪ್ರಕರಣವನ್ನು ಸಹಿ ಮಾಡಿದವರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿತ್ತು. ತನಿಖೆಯ ಉದ್ದೇಶಕ್ಕಾಗಿ, ಈ…
ಬೆಂಗಳೂರು: ತಮ್ಮ ಮತಬ್ಯಾಂಕಿಗಾಗಿ ಕರ್ನಾಟಕ ಸುರಕ್ಷತೆಗೆ ಧಕ್ಕೆ ತರುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಕ್ಷೇಪಿಸಿದರು. ಧಾರವಾಡ ಲೋಕಸಭಾ ಕ್ಷೇತ್ರದ ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಇಂದು ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದ ಅವರು, ದೇಶ ಸುರಕ್ಷತೆಗೆ ಶ್ರಮಿಸುವ ನರೇಂದ್ರ ಮೋದಿಜೀ ಮತ್ತು ದೇಶವಿರೋಧಿಗಳನ್ನು ಬೆಂಬಲಿಸುವ ಕಾಂಗ್ರೆಸ್ ಪಕ್ಷದ ನಡುವೆ ಒಬ್ಬರನ್ನು ಕರ್ನಾಟಕದ ಮತದಾರರು ಆಯ್ಕೆ ಮಾಡಬೇಕು ಎಂದು ತಿಳಿಸಿದರು. ಪ್ರಲ್ಹಾದ್ ಜೋಷಿಯವರಿಗೆ ನೀಡಿದ ಪ್ರತಿಮತವು ಮೋದಿಯವರ ಕೈಗಳನ್ನು ಬಲಪಡಿಸಲಿದೆ ಹಾಗೂ ನಕ್ಸಲ್‍ವಾದ, ಆತಂಕವಾದವನ್ನು ಅಂತ್ಯಗೊಳಿಸಲಿದೆ; ಹಾಗೂ ಭಾರತವನ್ನು ವಿಶ್ವದ ಮೂರನೇ ಆರ್ಥಿಕÀ ಶಕ್ತಿಯಾಗಿ ಮಾರ್ಪಡಿಸಲಿದೆ ಎಂದರು. ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸಲು ಎಲ್ಲ 28 ಕ್ಷೇತ್ರಗಳಲ್ಲಿ ಎನ್‍ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಿ ನರೇಂದ್ರ ಮೋದಿಯವರ ಕೈಗಳನ್ನು ಬಲಪಡಿಸಿ ಎಂದು ವಿನಂತಿಸಿದರು. ಕಾಶ್ಮೀರವೇ ಇರಲಿ, ಕನ್ಯಾಕುಮಾರಿ, ಬಂಗಾಲ, ಗುಜರಾತ್, ಮಧ್ಯಪ್ರದೇಶ, ಉತ್ತರಪ್ರದೇಶ, ಕರ್ನಾಟಕ ಸೇರಿ ಎಲ್ಲೆಡೆ ಮೋದಿ ಮೋದಿ ಎಂಬ ಘೋಷಣೆ ಕೇಳಿಸುತ್ತಿದೆ.…