Author: kannadanewsnow09

ಬೆಂಗಳೂರು: ಇಂದು ಕೆ‌ ಎಸ್ ಆರ್ ಟಿ‌‌ ಸಿಯ ಮೃತ ಕುಟುಂಬಸ್ಥರಿಗೆ ಅನುಕಂಪದ ನೇಮಕಾತಿಯ ಆದೇಶ ಪತ್ರವನ್ನು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ವಿತರಿಸಿದರು. ಸುಮಾರು 10 ವರ್ಷಗಳಿಗೂ ಮೇಲ್ಪಟ್ಟು ಅನುಕಂಪದ ಆಧಾರದ ಮೇಲೆ ನೇಮಕಾತಿ ಕೋರಿ ಅರ್ಜಿ ಸಲ್ಲಿಸಿದ್ದ 14 ಮೃತಾವಲಂಬಿತರುಗಳಿಗೆ ಇಂದು  ದಿನಾಂಕ: 08-07-2025 ರಂದು ಕಚೇರಿ ಸಹಾಯಕ (ಸ್ವಚ್ಚತೆ) ಹುದ್ದೆಗೆ ನೇಮಕಾತಿ ಆದೇಶ ನೀಡಲಾಯಿತು. * ಕಳೆದ 1 ವರ್ಷದಲ್ಲಿ ಒಟ್ಟಾರೆ 212 ಮೃತಾವಲಂಬಿತರುಗಳಿಗೆ ಅನುಕಂಪದ ಆಧಾರದ ನೇಮಕಾತಿ ಮಾಡಲಾಗಿದೆ. * ಕರಾಸಾ ಪೇದೆ (Security Guard) 107 ಕಚೇರಿ ಸಹಾಯಕ (ಸ್ವಚ್ಚತೆ) 46 ತಾಂತ್ರಿಕ ಸಹಾಯಕ 37 ಚಾಲಕ / ನಿರ್ವಾಹಕ / ಚಾಲಕ ಕಂ ನಿರ್ವಾಹಕ 22 ಒಟ್ಟು 212 , ಈ ದಿನ ನೀಡಿರುವ ಆದೇಶ ಸೇರಿ 226 ಅನುಕಂಪದ ನೌಕರಿ • ಕರಾಸಾ ಪೇದೆ (Security Guard) ಹುದ್ದೆಗಳಿಗೆ 50 ಮೃತಾವಲಂಬಿತರುಗಳಿಗೆ ಮುಂದಿನ ಒಂದು ವಾರದಲ್ಲಿ ದೇಹ ದಾರ್ಢ್ಯತೆ…

Read More

ಶಿವಮೊಗ್ಗ: ಸಿಎಂ ಸಿದ್ದರಾಮಯ್ಯ ವಿರುದ್ಧದ ಮೂಡಾ ಪ್ರಕರಣದಲ್ಲಿ 14 ನಿವೇಶನಗಳನ್ನು ಹಿಂತಿರುಗಿಸುವಂತಾಗಿದ್ದು ಬಿಜೆಪಿಯ ಹೋರಾಟದ ಫಲ. ವಾಲ್ಮೀಕಿ ನಿಗರಮದ ಹಗರಣದಲ್ಲಿ ಸಚಿವರು ರಾಜೀನಾಮೆ ಕೊಡುವಂತಾಗಿದ್ದು ನನ್ನ ಅಧ್ಯಕ್ಷತೆಯಲ್ಲಿ ಬಿಜೆಪಿ ನಡೆಸಿದ ತಾರ್ಕೀಕ ಅಂತ್ಯದ ಹೋರಾಟವೇ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು. ಇಂದು ಶಿವಮೊಗ್ಗದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಪ್ರಮುಖರ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ ಅವರು, ಬಿಜೆಪಿಯ ಕಾರ್ಯಕರ್ತರಿಗೆ ಸ್ಪಷ್ಟವಾದ ಉದ್ದೇಶ, ಗುರಿ ಇದೆ. ಪಕ್ಷದ ಅನೇಕ ಹಿರಿಯರು, ಸಾವಿರಾರು ಕಾರ್ಯಕರ್ತರು ಬದ್ದತೆಯಿಂದ ಪಕ್ಷಕ್ಕಾಗಿ ದುಡಿದಿದ್ದಾರೆ. ಇದರ ಫಲವಾಗಿ ದೇಶದಲ್ಲಿ ಮತ್ತು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿದು ಜನರ ಸೇವೆಯನ್ನು ಮಾಡುತ್ತಿದೆ. ಆದರೆ ಕಾಂಗ್ರೇಸ್ ಪಕ್ಷ ಅನುಕಂಪ ಮತ್ತು ಇತರೆ ಕಾರಣಗಳಿಂದ 67 ವರ್ಷ ದೇಶವನ್ನು ಆಳಿದೆ. ಇತರೆ ರಾಷ್ಟ್ರೀಯ ಪಕ್ಷಕ್ಕೂ ಬಿಜೆಪಿಗೂ ಇರುವ ವ್ಯತ್ಯಾಸವೆಂದರೆ ಬಿಜೆಪಿ ಕಾರ್ಯಕರ್ತರಿಗೆ ರಾಷ್ಟ್ರೀಯತೆ ಮತ್ತು ರಾಷ್ಡ್ರೀಯ ವಿಷಯದ ಬಗ್ಗೆ ಬದ್ಧತೆಯಿದೆ ಇತರೆ ಪಕ್ಷಗಳಿಗೆ ಅಂತಹ ಯಾವ ಬದ್ದತೆ,…

Read More

ಬೆಂಗಳೂರು: ರಾಜ್ಯ ಸರ್ಕಾರವು ಬಾಲ್ಯ ವಿವಾಹ ನಿಷೇಧ ಕಾಯ್ದೆ-2006ಕ್ಕೆ ಕಾನೂನು ಬಲ ನೀಡಲು ಮುಂದಾಗಿದೆ. ಒಂದು ವೇಳೆ ಬಾಲ್ಯ ವಿವಾಹ ನಿಷೇಧ ( ಕರ್ನಾಟಕ ತಿದ್ದುಪಡಿ) ಮಸೂದೆ-2025ಕ್ಕೆ ವಿಧಾನ ಮಂಡಲದಲ್ಲಿ ಮಂಡನೆಗೊಂಡು, ಒಪ್ಪಿಗೆ ಪಡೆದ್ರ, ಬಾಲಕ-ಬಾಲಕಿಯರ ನಿಶ್ಚಿತಾರ್ಥವೂ ಅಪರಾಧವಾಗಲಿದೆ. ಹೌದು ಬಾಲ್ಯ ವಿವಾಹಗಳನ್ನು ಮಾಡಲು ಯತ್ನಿಸುವುದು, ಸಿದ್ಧತೆ ನಡೆಸುವ ಅಥವಾ ಚಿಕ್ಕ ವಯಸ್ಸಿನ ಬಾಲಕ-ಬಾಲಕಿಯರನ್ನು ಮದುವೆ ಉದ್ದೇಶದಿಂದ ನಿಶ್ಚಿತಾರ್ಥ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು, ಸರ್ಕಾರ ಬಾಲ್ಯ ವಿವಾಹ ನಿಷೇಧ ( ಕರ್ನಾಟಕ ತಿದ್ದುಪಡಿ) ಮಸೂದೆ-2025 ಅನ್ನು ಮುಂಬರುವಂತ ವಿಧಾನ ಮಂಡಲದ ಅಧಿವೇಶನದಲ್ಲಿ ಮಂಡಿಸಲು ಮುಂದಾಗಿದೆ. ಈ ಮಸೂದೆಗೆ ಉಭಯ ಸದನಗಳಲ್ಲಿ ಒಪ್ಪಿಗೆ ದೊರೆತರೇ ನಿಶ್ಚಿತಾರ್ಥವೂ ಅಪರಾಧವಾಗಲಿದೆ. ಅಂದಹಾಗೇ ಬಾಲ್ಯ ವಿವಾಹ ನಿಷೇಧ ( ಕರ್ನಾಟಕ ತಿದ್ದುಪಡಿ) ಮಸೂದೆ-2025ರ ಅನುಸಾರ ಬಾಲ್ಯ ವಿವಾಹ ಮಾಡೋದಕ್ಕೆ ಯತ್ನಿಸೋದು ಅಪರಾಧ. ಅಲ್ಲದೇ ಸಿದ್ಧತೆ ಅಥವಾ ಚಿಕ್ಕ ವಯಸ್ಸಿನ ಹುಡುಗ-ಹುಡುಗಿಗೆ ನಿಶ್ಚಿತಾರ್ಥ ಮಾಡುವವರ ವಿರುದ್ಧ 2 ವರ್ಷಗಳವರೆಗೆ ವಿಸ್ತರಿಸಬಹುದಾದಂತ ಕಠಿಣ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ.…

Read More

ಬೆಂಗಳೂರು: ವನ್ಯಜೀವಿಗಳ ಸಂರಕ್ಷಣೆ ಹಾಗೂ ಅರಣ್ಯ ಜಮೀನು ಒತ್ತುವರಿಯನ್ನು ಪರಿಣಾಮಕಾರಿಯಾಗಿ ತಡೆಯಲು ಇಲಾಖೆಯಲ್ಲಿ ಖಾಲಿ ಇರುವ 6 ಸಾವಿರ ಖಾಯಂ ಹಾಗೂ ಗುತ್ತಿಗೆ ಆಧಾರಿತ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲಾಗುವುದು ಎಂದು ಅರಣ್ಯ ಸಚಿವರಾದ ಈಶ್ವರ್‌ ಖಂಡ್ರೆ ಅವರು ತಿಳಿಸಿದ್ದಾರೆ. https://twitter.com/KarnatakaVarthe/status/1942167988238790680 ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿರಂತರ ಭೂಕುಸಿತ ಸಂಭವಿಸುತ್ತಿದ್ದು, ಜೀವಹಾನಿ ಆಗುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದರು. ಈ ನಿಟ್ಟಿನಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಮತ್ತು ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ ನೇತೃತ್ವದಲ್ಲಿ, ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಹಾಗೂ ತಜ್ಞರನ್ನೊಳಗೊಂಡ ಸಮಿತಿಯನ್ನು 10 ದಿನಗಳ ಒಳಗಾಗಿ ರಚಿಸಿ, 6 ತಿಂಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದರು. ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ಕಾಲೋನಿಯಲ್ಲಿರುವ ಜೀವವೈವಿಧ್ಯ ತಾಣದ 368 ವಿವಿಧ ಪ್ರಭೇದದ ಬೃಹತ್ ಮರಗಳಿದ್ದು, ಇವುಗಳನ್ನು ಸಂರಕ್ಷಿಸಲು ಈ ಪ್ರದೇಶವನ್ನು ಜೀವವೈವಿಧ್ಯ ಪಾರಂಪರಿಕ ತಾಣವಾಗಿ ಘೋಷಿಸುವಂತೆ ಸ್ಥಳೀಯರು ಮತ್ತು ಪರಿಸರ…

Read More

ಕೋಲಾರ: ವಿವಾಹಿತೆಯನ್ನು ಪ್ರೀತಿಸಿ ಮದುವೆ ಆಗುವುದಾಗಿ ನಂಬಿಸಿ ವಂಚನೆ ಮಾಡಿದ್ದಲ್ಲದೇ, ಗರ್ಭಿಣಿಯಾಗುತ್ತಿದ್ದಂತೆ ಮದುವೆಯಾಗಲು ನಿರಾಕರಿಸಿದಂತ ಪ್ರಿಯಕರನ ಮನೆ ಮುಂದೆ ಮಹಿಳೆ ಧರಣಿ ನಡೆಸುತ್ತಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ಪ್ರಿಯಕರ ಅಮರನಾಥ್ ಮನೆ ಎದುರು ಧರಣಿಯನ್ನು ಮಹಿಳೆ ನಡೆಸುತ್ತಿದ್ದಾರೆ. ಅಮರನಾಥ್ ಮನೆಯ ಎದುರು ಮಹಿಳೆ ಸಂಯುಕ್ತಾ ಪ್ರತಿಭಟನೆ ನಡೆಸುತ್ತಿದ್ದಾರೆ. ಪತಿ ಹರೀಶ್ ಸ್ನೇಹಿತ ಅಮರನಾಥ್ ನನ್ನು ಪ್ರೀತಿಸಿದ್ದ ಸಂಯುಕ್ತಾ. ಬೆಂಗಳೂರಲ್ಲಿ ಪತಿಯ ಹರೀಶ್ ಸ್ನೇಹಿತ ಅಮರನಾಥ್ ಜೊತೆಗೆ ಸಂಯುಕ್ತಾ ಪ್ರೀತಿ ಪ್ರೇಮದಲ್ಲಿ ಬಿದ್ದಿದ್ದರು. 3 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಅಮರನಾಥ್ ಗಾಗಿ ಪತಿ ಹರೀಶ್ ನನ್ನೇ ಸಂಯುಕ್ತಾ ತೊರೆದು ಬಂದಿದ್ದರು. ಸಂಯುಕ್ತಾ 5 ತಿಂಗಳ ಗರ್ಭಿಣಿಯಾದ ಬಳಿಕ, ವಿವಾಹಕ್ಕೆ ಅಮರನಾಥ್ ನಿರಾಕರಿಸಿದ್ದಾರೆ. ಹೀಗಾಗಿ ತನ್ನನ್ನು ಮದುವೆ ಮಾಡಿಕೊಳ್ಳುಂತೆ ಆಗ್ರಹಿಸಿ ಕೋಲಾರದ ಶ್ರೀನಿವಾಸಪುರದಲ್ಲಿರುವಂತ ಅಮರನಾಥ್ ಮನೆಯ ಮುಂದೆ ಸಂಯುಕ್ತಾ ಧರಣೆ ನಡೆಸುತ್ತಿದ್ದಾರೆ. https://kannadanewsnow.com/kannada/decision-to-consider-all-sudden-deaths-in-the-state-as-notified-diseases-minister-dinesh-gundu-rao/ https://kannadanewsnow.com/kannada/important-information-regarding-medical-seats-from-kea/

Read More

ಬೆಂಗಳೂರು: ರಾಜ್ಯದ ಜಿಲ್ಲೆಗಳಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳುವಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಆದ್ಯತೆಯ ಮೇರೆಗೆ ಆಸಕ್ತಿ ವಹಿಸಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಸೂಚಿಸಿದರು. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಬೆಂಗಳೂರಿನಲ್ಲಿ ಇಂದು ಸಚಿವರು ಐದು ಗಂಟೆಗಳಿಗೂ ಹೆಚ್ಚು ಕಾಲ ವಿಡಿಯೋ ಸಭೆ ನಡೆಸಿ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲಿಸಿ, ಪಂಚಾಯತ್‌ ರಾಜ್‌ ಎಂಜನಿಯರಿಂಗ್‌ ಇಲಾಖೆ, ಗ್ರಾಮೀಣ ನೀರು ಸರಬರಾಜು ಇಲಾಖೆ ಹಾಗೂ ಕರ್ನಾಟಕ ಗ್ರಾಮೀಣ ಮೂಲಭೂತ ಸೌಲಭ್ಯ ಅಭಿವೃದ್ಧಿ ಸಂಸ್ಥೆಯ ಮೂಲಕ ನಡೆಯುತ್ತಿರುವ ಕಾಮಗಾರಿಗಳನ್ನು ನಿಯಮಿತವಾಗಿ ಪರಿಶೀಲನೆ ಮಾಡುವ ಹೊಣೆಗಾರಿಕೆಯನ್ನು ಅಧಿಕಾರಿಗಳು ಆದ್ಯತೆಯ ಮೇಲೆ ತೆಗೆದುಕೊಳ್ಳಬೇಕೆಂದು ಸಲಹೆ ಮಾಡಿದರು. ಈ ತಿಂಗಳ 15ರಿಂದ 31ರವರೆಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಮ್ಮ ತಮ್ಮ ಜಿಲ್ಲೆಗಳಲ್ಲಿ ತೀವ್ರ ಪ್ರವಾಸ ಮಾಡಿ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಬೇಕಲ್ಲದೆ, ಕೆಲವಾರು ಕಡೆ ಕಾಮಗಾರಿಗಳು ಕುಂಠಿತಗೊಂಡಿದ್ದು ಅವುಗಳಿಗೆ ಚಾಲನೆ ನೀಡಲು ಕ್ರಮ ಕೈಗೊಳ್ಳಬೇಕು ಹಾಗೂ ಈ ನಿಟ್ಟಿನಲ್ಲಿ…

Read More

ಬೆಂಗಳೂರು: ಕರ್ನಾಟಕದಲ್ಲಿ ವೈದ್ಯಕೀಯ ಸೀಟುಗಳಿಗೆ ಎನ್ ಆರ್ ಐ ವಾರ್ಡ್ ಕ್ಲೇಮ್ ಮಾಡಿರುವ ಅಭ್ಯರ್ಥಿಗಳ ದಾಖಲೆ ಪರಿಶೀಲನೆಯನ್ನು ಜುಲೈ 8ರಿಂದ ಜುಲೈ 10ರವರೆಗೆ ನಡೆಸಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸೋಮವಾರ ತಿಳಿಸಿದೆ. ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಆಯುಷ್ ಕೋರ್ಸ್ ಗಳಿಗೆ ಎನ್ ಆರ್ ಐ ವಾರ್ಡ್ ಕ್ಲೇಮ್ ಮಾಡಿರುವ ಅಭ್ಯರ್ಥಿಗಳು ಮೂಲ ದಾಖಲೆಗಳೊಂದಿಗೆ ಮಲ್ಲೇಶ್ವರದಲ್ಲಿರುವ ಕೆಇಎ ಕಚೇರಿಗೆ ಖುದ್ದು ಹಾಜರಾಗಿ ಪರಿಶೀಲನೆ ಮಾಡಿಸಿಕೊಳ್ಳಬೇಕು. ಮೊದಲ ದಿನ, ನೀಟ್ ನಲ್ಲಿ ನಾಲ್ಕು ಲಕ್ಷದವರೆಗೆ ರಾಂಕ್ ಪಡೆದವರು, ಎರಡನೇ ದಿನ 8 ಲಕ್ಷದವರೆಗೆ ರಾಂಕ್ ಪಡೆದವರು ಹಾಗೂ ಮೂರನೇ ದಿನ 12 ಲಕ್ಷದವರೆಗೆ ರಾಂಕ್ ಪಡೆದವರು ದಾಖಲೆ ಪರಿಶೀಲನೆಗೆ ಖುದ್ದು ಹಾಜರಾಗಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ಸೂಚಿಸಿದ್ದಾರೆ. ವಿದೇಶಿ ನಾಗರಿಕತ್ವ ಹಾಗೂ ಎನ್ ಆರ್ ಐ ವಾರ್ಡ್ ಕ್ಲೇಮ್ ಮಾಡಿರುವುದಕ್ಕೆ ಸಂಬಂಧಿಸಿದಂತೆ ಪರಿಶೀಲನೆ ವೇಳೆ ಯಾವ್ಯಾವ ದಾಖಲೆಗಳನ್ನು ಸಲ್ಲಿಸಬೇಕು ಎಂಬ ಬಗ್ಗೆ ಕೆಇಎ ವೆಬ್…

Read More

ಬೆಂಗಳೂರು: ಆಸ್ಪತ್ರೆಯ ಹೊರೆಗೆ ನಡೆಯುವ ಎಲ್ಲ ಹಠಾತ್ ಸಾವುಗಳು ಇನ್ಮುಂದೆ ನೋಟಿಫೈಯಾಗಲಿದ್ದು, ಹೃದಯಾಘಾತಗಳ ಬಗ್ಗೆ ಸಂಶೋಧನೆಗೆ ಹೆಚ್ಚಿನ ಅಂಕಿ ಅಂಶಗಳು ದೊರೆಯಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.  ಬೆಂಗಳೂರಿನಲ್ಲಿ ಇಂದು ಕೋವಿಡ್ ಅಡ್ಡ ಪರಿಣಾಮಗಳ ಕುರಿತು ತಜ್ಞರ ಸಮಿತಿಯ ವರದಿ ಸ್ವೀಕರಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಮಧುಮೇಹ, ರಕ್ತದೊತ್ತಡ, ಒಬೆಸಿಟಿ ಹೆಚ್ಚಾಗಿದೆ. ಸ್ಟೀರಾಯ್ಡ್ ಹೆಚ್ಚಿನ ಬಳಕೆಯೂ ಕೂಡ ಕಾರಣವಾಗಿದೆ. ಕೋವಿಡ್ ಪೂರ್ವದಲ್ಲಿ ಜಯದೇವ ಆಸ್ಪತ್ರೆ ಮೆಡಿಕಲ್ ರೆಕಾರ್ಡ್ಸ್ ಗೆ ಹೊಲಿಕೆ ಮಾಡಿ ಕೂಡಾ ವರದಿ ಸಿದ್ಧಪಡಿಸಲಾಗಿದೆ. ಜಯದೇವ ಆಸ್ಪತ್ರೆಯಲ್ಲಿ 253 ಹೃದ್ರೋಗ ರೋಗಿಗಳ ಮೇಲೆ ಅಧ್ಯಯನ ಮಾಡಲಾಗಿದೆ. ಹೃದಯಾಘಾತಗಳಿಗೆ ಕೋವಿಡ್ ಲಸಿಕೆ ನೇರ ಕಾರಣವಲ್ಲ ಎಂದು ತಿಳಿದುಬಂದಿದೆ. ಎಂಆರ್ ಎನ್ ಎ ಲಸಿಕೆಯಿಂದ ಕೊಂಚ ಸಮಸ್ಯೆ ಎದುರಾಗಿದೆ. ಆದರೆ ಈ ಲಸಿಕೆಯನ್ನು ನಮ್ಮ ದೇಶದಲ್ಲಿ ಯಾರು ಪಡೆದಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಮೊಬೈಲ್, ಸಿಸ್ಟಮ್ ಗಳ ಸ್ಕ್ರೀನ್ ಮುಂದೆ ಮಿತಿಮೀರಿದ ಸಮಯ ಕಳೆದಿರುವುದು ಪರಿಣಾಮ…

Read More

ಬೆಂಗಳೂರು:  ಕೋವಿಡ್ ಬಳಿಕ ಶೇ 4 ರಿಂದ 5 ರಷ್ಟು ಹೃದಯಾಘಾತಗಳ ಸಂಖ್ಯೆ ಹೆಚ್ಚಾಗಿವೆ ಎಂದರು. ಆದರೆ ಇದಕ್ಕೆ ಕೋವಿಡ್ ಲಸಿಕೆ ನೇರ ಕಾರಣವಲ್ಲ ಎಂಬುದು ತಜ್ಞರ ವರದಿಯಲ್ಲಿ ಹೇಳಲಾಗಿದೆ ಎಂದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ ಸ್ಪಷ್ಟಪಡಿಸಿದರು.‌ ಬೆಂಗಳೂರಿನಲ್ಲಿ ಇಂದು ಕೋವಿಡ್ ಅಡ್ಡ ಪರಿಣಾಮಗಳ ಕುರಿತು ತಜ್ಞರ ಸಮಿತಿಯ ವರದಿ ಸ್ವೀಕರಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಹೃದಯಾಘಾತಗಳು ಹೆಚ್ಚಾಗಲು ಶೇ 50 ರಷ್ಟು ಪ್ರಕರಣಗಳಲ್ಲಿ ತಂಬಾಕು ಸೇವನೆಯೇ ಪ್ರಮುಖ ಕಾರಣ ಎಂಬುದು ತಜ್ಞರ ವರದಿಯಲ್ಲಿ ಹೇಳಲಾಗಿದೆ. ಇದರ ಹೊರತಾಗಿ ಮಧುಮೇಹ, ರಕ್ತದೊತ್ತಡ, ಒಬೆಸಿಟಿ ಹೆಚ್ಚಾಗಿದೆ. ಸ್ಟೀರಾಯ್ಡ್ ಹೆಚ್ಚಿನ ಬಳಕೆಯೂ ಕೂಡ ಕಾರಣವಾಗಿದೆ. ಕೋವಿಡ್ ಪೂರ್ವದಲ್ಲಿ ಜಯದೇವ ಆಸ್ಪತ್ರೆ ಮೆಡಿಕಲ್ ರೆಕಾರ್ಡ್ಸ್ ಗೆ ಹೊಲಿಕೆ ಮಾಡಿ ಕೂಡಾ ವರದಿ ಸಿದ್ಧಪಡಿಸಲಾಗಿದೆ. ಜಯದೇವ ಆಸ್ಪತ್ರೆಯಲ್ಲಿ 253 ಹೃದ್ರೋಗ ರೋಗಿಗಳ ಮೇಲೆ ಅಧ್ಯಯನ ಮಾಡಲಾಗಿದೆ. ಹೃದಯಾಘಾತಗಳಿಗೆ ಕೋವಿಡ್ ಲಸಿಕೆ ನೇರ ಕಾರಣವಲ್ಲ ಎಂದು ತಿಳಿದುಬಂದಿದೆ. ಎಂಆರ್ ಎನ್ ಎ ಲಸಿಕೆಯಿಂದ ಕೊಂಚ ಸಮಸ್ಯೆ ಎದುರಾಗಿದೆ.…

Read More

ಬೆಂಗಳೂರು: ಭಾರತೀಯ ವಾಯು ಪಡೆಯಿಂದ ಅಗ್ನಿಪತ್ ಯೋಜನೆಯಡಿಯಲ್ಲಿ ಅಗ್ನಿವೀರ್ ವಾಯು ಪ್ರವೇಶ ಆಯ್ಕೆ ಪರೀಕ್ಷೆಗಾಗಿ ಅವಿವಾಹಿತ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.50 ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಅಥವಾ ಡಿಪ್ಲೋಮಾ ವಿಭಾಗದ ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಷ್, ಆಟೋಮೊಬೈಲ್, ಕಂಪ್ಯೂಟರ್ ಸೈನ್ಸ್, ಇನ್‍ಸ್ಟ್ರುಮೆಂಟ್ ಟೆಕ್ನಾಲಜಿ, ಇನ್ಪಾರ್ಮೇಶನ್ ಟೆಕ್ನಾಲಜಿಯಲ್ಲಿ ಶೇ.50 ರಷ್ಟು ಅಂಕಗಳೊಂದಿಗೆ ತೇರ್ಗಡೆ ಆಗಿರಬೇಕು. ಇಲ್ಲವೇ 02 ವರ್ಷದ ವೃತ್ತಿಪರ ಕೋರ್ಸ್‍ಗಳಲ್ಲಿ ಭೌತಶಾಸ್ತ್ರ ಮತ್ತು ಗಣಿತ ವಿಷಯಗಳನ್ನು ವ್ಯಾಸಂಗ ಮಾಡಿ ಶೇ.50 ರಷ್ಟು ಅಥವಾ ಯಾವುದೇ ಪಿಯುಸಿ ವಿಭಾಗದಲ್ಲಿ ಶೇ.50 ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಅಭ್ಯರ್ಥಿಯು 2005ರ ಜುಲೈ, 02 ರಿಂದ 2009ರ ಜನವರಿ, 02 ರ ನಡುವೆ ಜನಿಸಿರಬೇಕು. (ಎರಡೂ ದಿನಾಂಕಗಳು ಸೇರಿದಂತೆ) ಅರ್ಜಿ ಶುಲ್ಕ 550 ರೂ.ಗಳಾಗಿದೆ. ಆಸಕ್ತ ಅಭ್ಯರ್ಥಿಗಳು ಸಂಪೂರ್ಣ ವಿವರ ಮತ್ತು ಸೂಚನೆಗಳಿಗೆ ವೆಬ್‍ಸೈಟ್ https://agnipathvayu.cdac.in ನೋಡಬಹುದು. ವೆಬ್‍ಸೈಟ್‍ನಲ್ಲಿ 2025 ರ ಜುಲೈ, 11 ರಿಂದ…

Read More