Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ನೆಲಮಂಗಲ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಕಾರೊಂದು ಪಾದಚಾರಿಗೆ ಡಿಕ್ಕಿಹೊಡೆದ ಪರಿಣಾಮ, ಸ್ಥಳದಲ್ಲೇ ವ್ಯಕ್ತಿಯೊಬ್ಬ ಸಾವನ್ನಪ್ಪಿರೋ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದಂತ ಬಾಲಕೃಷ್ಣನ್ ಎಂಬುವರಿ ಕಾರೋಂದು ಡಿಕ್ಕಿಯಾಗಿದೆ. ಈ ಪರಿಣಾಮ ಸ್ಥಳದಲ್ಲೇ ಪಾದಚಾರಿ ಬಾಲಕೃಷ್ಣನ್ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ. ನೆಲಮಂಗಲ ಬಳಿಯ ವಿಶ್ವೇಶ್ವರಪುರಂ ಬಳಿಯಲ್ಲಿ ಈ ಹಿಟ್ ಅಂಡ್ ರನ್ ಕೇಸ್ ನಡೆದಿದೆ. ಈ ಘಟನೆಯ ಬಳಿಕ ಕಾರು ಚಾಲಕ ಕಾರು ಬಿಟ್ಟು ಪರಾರಿಯಾಗಿರೋದೋಗಿ ತಿಳಿದು ಬಂದಿದೆ. ಈ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/this-famous-ram-temple-in-the-state-will-be-exploded-in-the-name-of-allah-hu-bomb-threat-letter/ https://kannadanewsnow.com/kannada/nia-releases-new-pics-of-bangalore-cafe-bomber/
ಬೆಂಗಳೂರು: ನಗರದಲ್ಲಿ ಡ್ಯಾನ್ ಮಾಡುವಾಗ ಮೈ ಟಚ್ ಮಾಡಿದ ಅಂತ ಒಂದೇ ಒಂದು ಕಾರಣಕ್ಕೆ ಯುವಕನೋರ್ವನನ್ನು ನಾಲ್ವರು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿರೋ ಘಟನೆ ನಡೆದಿದೆ. ಬೆಂಗಳೂರಿನ ಗಿರಿನಗರದಲ್ಲಿ ಶಿವರಾತ್ರಿ ಪ್ರಯುಕ್ತ ಡ್ಯಾನ್ಸ್ ಆಯೋಜಿಸಲಾಗಿತ್ತು. ಈ ಡ್ಯಾನ್ಸ್ ಮಾಡುವ ವೇಳೆಯಲ್ಲಿ ಯೋಗೇಶ್(23) ಮೈ ಟಚ್ ಮಾಡಿದ್ದನಂತೆ. ಈ ಕಾರಣಕ್ಕೆ ಡ್ಯಾನ್ಸ್ ಮುಗಿಸಿ ಮನೆಗೆ ಹೊರಟಂತ ಯೋಗೇಶ್ ನನ್ನು ನಾಲ್ವರು ಹಿಂಭಾಲಿಸಿ ತೆರಳಿದ್ದಾರೆ. ರಾತ್ರಿ ಬೈಕ್ ನಲ್ಲಿ ತೆರಳುತ್ತಿದ್ದಂತ ಯೋಗೇಶ್ ನನ್ನು ಫಾಲೋ ಮಾಡಿದಂತ ನಾಲ್ವರು ಗಲಾಟೆ ತೆಗೆದು ನಡು ರಸ್ತೆಯಲ್ಲೇ ಚಾಕುವಿನಿಂದ ಇರಿದಿದ್ದಾರೆ. ಚಾಕು ಇರಿತಕ್ಕೆ ಒಳಗಾದಂತ ಯೋಗೇಶ್ವರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಂತ ಬ್ಯಾಟರಾಯನಪುರ ಠಾಣೆಯ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ. https://kannadanewsnow.com/kannada/nia-releases-new-pics-of-bangalore-cafe-bomber/ https://kannadanewsnow.com/kannada/this-famous-ram-temple-in-the-state-will-be-exploded-in-the-name-of-allah-hu-bomb-threat-letter/
ಕೋಲ್ಕತ್ತಾ: ಈಸ್ಟ್ ವೆಸ್ಟ್ ಮೆಟ್ರೋ ರೈಲು ನಿಗಮವು ಮಾರ್ಚ್ 15 ರಿಂದ ಅಂಡರ್ ವಾಟರ್ ಮೆಟ್ರೋ ಸಾರ್ವಜನಿಕರಿಗೆ ಮುಕ್ತವಾಗಲಿದೆ ಎಂದು ಶನಿವಾರ ಘೋಷಿಸಿದೆ. ಕಳೆದ ಬುಧವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ಕೋಲ್ಕತ್ತಾ ಮತ್ತು ಅದರ ಅವಳಿ ಹೌರಾವನ್ನು ಸಂಪರ್ಕಿಸುವ ನೀರೊಳಗಿನ ಮೆಟ್ರೋ ಸಂಪರ್ಕವನ್ನು ಉದ್ಘಾಟಿಸಿದ್ದರು. ಅದೃಷ್ಟಶಾಲಿ ಶಾಲಾ ಮಕ್ಕಳ ಗುಂಪಿನೊಂದಿಗೆ ಪ್ರಧಾನಿ ನದಿಯ ಕೆಳಗೆ ಸವಾರಿ ಮಾಡಿದರು. ಆದರೆ ಸರಾಸರಿ ಕೋಲ್ಕತ್ತಾ ನಾಗರಿಕರು ಇಂತಹ ಅಂಡರ್ ವಾಟರ್ ಮೆಟ್ರೋದಲ್ಲಿ ಪ್ರಯಾಣಿಸಲು ಕಾಯಬೇಕಾಗುತ್ತದೆ ಎನ್ನಲಾಗಿತ್ತು. ಆದರೇ ಇದೀಗ ಅದಕ್ಕೆ ಅವಕಾಶ ಕೂಡಿ ಬಂದಿದೆ. ಮಾರ್ಚ್.15ರಿಂದ ಕೋಲ್ಕತ್ತಾದ ಅಂಡರ್ ವಾಟರ್ ಮೆಟ್ರೋ ಸಾರ್ವಜನಿಕರ ಪ್ರಯಾಣಕ್ಕೆ ಮುಕ್ತವಾಗಲಿದೆ. ಈ ಬಗ್ಗೆ ಈಸ್ಟ್ ವೆಸ್ಟ್ ಮೆಟ್ರೋ ರೈಲು ನಿಗಮ ಅಧಿಕೃತ ಮಾಹಿತಿಯನ್ನೂ ನೀಡಿದೆ. https://kannadanewsnow.com/kannada/nia-releases-new-pics-of-bangalore-cafe-bomber/ https://kannadanewsnow.com/kannada/this-famous-ram-temple-in-the-state-will-be-exploded-in-the-name-of-allah-hu-bomb-threat-letter/
ಬೆಂಗಳೂರು: ಖಾಸಗಿ ಟ್ಯಾಂಕರ್ ಗಳಿಗೆ ಸಿಗುವ ನೀರು ಸರ್ಕಾರಕ್ಕೆ ಯಾಕೆ ಸಿಗುತ್ತಿಲ್ಲ ಎಂದು ಸಾರ್ವಜನಿಕ ಚರ್ಚೆಯಾಗುತ್ತಿದೆ ಎಂದು ಕೇಳಿದಾಗ, “ಖಾಸಗಿ ಟ್ಯಾಂಕರ್ ಗಳು ಖಾಸಗಿ ಕೊಳವೆ ಬಾವಿಗಳಿಂದ ನೀರು ಪೂರೈಸುತ್ತಿವೆ. ಸರ್ಕಾರದ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ನೀರು ಪೂರೈಸಲಾಗುತ್ತಿದೆ. ದುರಸ್ತಿ ಇದ್ದ ಘಟಕಗಳನ್ನು ರಿಪೇರಿ ಮಾಡುತ್ತಿದ್ದೇವೆ. ಇನ್ನು ಮೂರ್ನಾಲ್ಕು ತಿಂಗಳು ಈ ಸಮಸ್ಯೆ ಇರುತ್ತವೆ. ಎಲ್ಲಾ ಸಮಸ್ಯೆ ಬಗೆಹರಿಸುತ್ತೇವೆ. ನಮಗೆ ನೀರಿನ ಬೆಲೆ ಗೊತ್ತಿದೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು. ಗ್ರಾಮಾಂತರ ಜಿಲ್ಲೆ ಕೊಳವೆ ಬಾವಿ ಮೇಲೆ ಅವಲಂಬಿತ, ಹೀಗಾಗಿ ನೋಡಲ್ ಅಧಿಕಾರಿ ನೇಮಕ ಬೆಂಗಳೂರು ಗ್ರಾಮಾಂತರ ಭಾಗದ ವಾರ್ಡ್ ಗಳಿಗೆ ನೋಡಲ್ ಅಧಿಕಾರಿ ನೇಮಿಸಿದ್ದು, ಬೇರೆ ಭಾಗಗಳಲ್ಲಿ ಯಾಕೆ ನೇಮಿಸಿಲ್ಲ ಎಂದು ಕೇಳಿದಾಗ, “ಬೆಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನೋಡಲ್ ಅಧಿಕಾರಿ ನೇಮಕ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಭಾಗ ಸಂಪೂರ್ಣವಾಗಿ ಕೊಳವೆ ಬಾವಿಗಳ ಮೇಲೆ ಅವಲಂಬಿತವಾಗಿವೆ. ಬೆಂಗಳೂರು ನಗರ ಕಾವೇರಿ ನೀರನ್ನು ಅವಲಂಬಿಸಿದೆ. ಬೆಂಗಳೂರು ಗ್ರಾಮಾಂತರದಿಂದಲೇ…
ಬೆಂಗಳೂರು: ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಯಾವಾಗ ಎಂದು ಕೇಳಿದಾಗ, “ನಾವು ಸ್ಕ್ರೀನಿಂಗ್ ಕಮಿಟಿಯಲ್ಲಿ ಚರ್ಚೆ ಮಾಡಿ ಹೈಕಮಾಂಡ್ ಗೆ ಹೆಸರು ರವಾನೆ ಮಾಡುತ್ತೇವೆ. 11ರಂದು ಹೈಕಮಾಂಡ್ ನಾಯಕರು ಚರ್ಚೆ ಮಾಡಿ ಪಟ್ಟಿ ಪ್ರಕಟಿಸುತ್ತಾರೆ” ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದರು. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶನಿವಾರ ಪ್ರತಿಕ್ರಿಯಿಸಿದರು. ಕುಮಾರಸ್ವಾಮಿ ಅವರು ಜನರಿಗೆ ಹೇಗೆ ಮುಖ ತೋರಿಸುತ್ತಾರೆ? ಬಿಜೆಪಿಗಿಂತ ಮುನ್ನ ನೀವು ಟಿಕೆಟ್ ಘೋಷಣೆ ಮಾಡಿದ್ದೀರಿ ಎಂದು ಕೇಳಿದಾಗ, “ಈಗಿನ ರಾಜಕೀಯ ನೋಡಿ ಬಹಳ ನೋವಾಗುತ್ತಿದೆ. ಕುಮಾರಸ್ವಾಮಿ ಅವರು ತಮ್ಮ ಸರ್ಕಾರವನ್ನು ಬೀಳಿಸಿದ ಯಡಿಯೂರಪ್ಪ, ಯೋಗೇಶ್ವರ್, ಮುನಿರತ್ನ ಅವರನ್ನು ಈಗ ತಬ್ಬಾಡುತ್ತಿದ್ದಾರೆ. ರಾಜಕಾರಣದಲ್ಲಿ ಯಾರು ಯಾರನ್ನ ನಂಬಬೇಕು ಎಂದು ಬಹಳ ವ್ಯಥೆಯಾಗುತ್ತಿದೆ. ನಾವು ಕುಮಾರಣ್ಣ ಅವರನ್ನು 5 ವರ್ಷ ಸಿಎಂ ಮಾಡಬೇಕು ಎಂದು ಮೈತ್ರಿ ಸರ್ಕಾರ ಮಾಡಿದೆವು. ಆ ಸರ್ಕಾರ ಬೀಳಿಸಿದವರ ಜೊತೆ ಈಗ ಕುಮಾರಸ್ವಾಮಿ ಸ್ನೇಹ ಬೆಳೆಸುತ್ತಿದ್ದಾರೆ. ಅವರ ವಕ್ತಾರರಾಗಿದ್ದಾರೆ. ಇದೆಲ್ಲವನ್ನೂ ನಿರ್ಧರಿಸಲು ಜನರಿಗೆ…
ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಆಯಾಮಗಳಿಂದ ಎನ್ಎಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಬಾಂಬರ್ ಸಮುದ್ರ ಮಾರ್ಗ ಬಳಸಿ ಎಸ್ಕೇಪ್ ಆಗಿರೋ ಶಂಕೆಯನ್ನು ವ್ಯಕ್ತಪಡಿಸಿರುವಂತ ಎನ್ಐಎ ಟೀಂ, ಮಂಗಳೂರಲ್ಲಿ ಕರಾವಳಿ ಕಾವಲು ಪಡೆಯನ್ನು ಹೈ ಅಲರ್ಟ್ ಮಾಡಿದೆ. ಮಂಗಳೂರಿನ ಕರಾವಳಿ ತೀರದಲ್ಲಿ ರಾಮೇಶ್ವರಂ ಕೆಫೆ ಸ್ಪೋಟಕ ಆರೋಪಿಯು ಸಮುದ್ರ ಮಾರ್ಗದ ಮೂಲಕ ತೆರಳಿರೋ ಶಂಕೆ ವ್ಯಕ್ತವಾದ ಹಿನ್ನಲೆಯಲ್ಲಿ ಎನ್ಐಎ ಅಧಿಕಾರಿಗಳು ಕರಾವಳಿ ಕಾವಲುಪಡೆಯನ್ನು ಅಲರ್ಟ್ ಮಾಡಿದ್ದಾರೆ. ಎನ್ಐಎ ಸೂಚನೆಯ ಮೇರೆಗೆ ಮಂಗಳೂರಲ್ಲಿ ಕರಾವಳಿ ಕಾವಲುಪಡೆಯಿಂದ ಪ್ರತಿ ಬೋಡ್ ಗಳನ್ನು ತಪಾಸಣೆ ಮಾಡಲಾಗುತ್ತಿದೆ. ಜೊತೆಗೆ ಎನ್ಐಎ ಬಿಡುಗಡೆ ಮಾಡಿರುವಂತ ಬಾಂಬರ್ ಪೋಟೋಗಳನ್ನು ಮೀನುಗಾರರಿಗೆ ತೋರಿಸಿ, ಸುಳಿವು ಸಿಗಲಿದ್ಯಾ ಅಂತ ಪತ್ತೆ ಹಚ್ಚುತ್ತಿದೆ. ಅರಬ್ಬೀ ಸಮುದ್ರದ ಆಯಕಟ್ಟಿನ ಸ್ಥಳಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಮಂಗಳೂರಿನ ವಿವಿಧ ಕಡೆಯಲ್ಲಿ ಎನ್ಐಎ ಸೂಚನೆಯ ಮೇರೆಗೆ ಕರಾವಳಿ ಕಾವಲುಪಡೆಯಿಂದ ಬೋಟ್ ಗಳನ್ನು ತಪಾಸಣೆ ನಡೆಸಲಾಗುತ್ತಿದೆ. ಜೊತೆಗೆ ಬಾಂಬರ್ ಸಮುದ್ರ ಮಾರ್ಗ ಬಳಸಿ ಪರಾರಿಯಾದ…
ಬೆಂಗಳೂರು: ರಾಜ್ಯ ಸರ್ಕಾರದಿಂದ ವಿವಾಹ ನೋದಂಣಿಗಾಗಿ ಕಚೇರಿ ಅಲೆದಾಟಕ್ಕೆ ಬ್ರೇಕ್ ಹಾಕಲಾಗಿದೆ. ಇದರ ಬದಲಾಗಿ ಆನ್ ಲೈನ್ ಮೂಲಕ ನೋಂದಣಿ ಮಾಡೋದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಸೋ ನಿಮಗೆ ವಿವಾಹ ನೋಂದಣಿ ಮಾಜಿಸಬೇಕು ಅಂದ್ರೇ ಜಸ್ಟ್ ಕುಳಿತಲ್ಲೇ ಆನ್ ಲೈನ್ ಮೂಲಕ ನೋಂದಣಿ ಮಾಡಬಹುದಾಗಿದೆ. ಅದು ಹೇಗೆ ಅಂತ ಮುಂದೆ ಓದಿ. ಮದುವೆಗಳು ನಿಶ್ಚಯವಾಗಲಿ ಸ್ವರ್ಗದಲ್ಲಿ, ನೋಂದಣಿಯಾಗಲಿ ಕಾವೇರಿ 2.0ರಲ್ಲಿ, ನಿಮ್ಮ ಮನೆಯಲ್ಲೇ ನೆಮ್ಮದಿ ಗ್ಯಾರಂಟಿ ಎಂಬುದಾಗಿ ರಾಜ್ಯ ಸರ್ಕಾರ ಹೇಳಿದೆ. ಜೊತೆಗೆ ಕಾವೇರಿ 2.0 ತಂತ್ರಾಂಶದಲ್ಲಿ ಸುಲಭ, ಸರಳ, ಸುಲಲಿತವಾಗಿ ವಿವಾಹ ನೋಂದಣಿ ಮಾಡಿಕೊಳ್ಳಿ ಎಂದು ಹೇಳಿದೆ. ಆನ್ ಲೈನ್ ನಲ್ಲೇ ವಿವಾಹ ನೋಂದಣಿಗಾಗಿ ಈ ಹಂತ ಅನುಸರಿಸಿ https://kaveri.karnataka.gov.in ಗೆ ಭೇಟಿ ನೀಡಿ. ಬಳಕೆದಾರರ ಖಾತೆಯನ್ನು ತೆರೆಯಿರಿ. ಕಾವೇರಿ ಪೋರ್ಟಲ್ ಗೆ ಲಾಗಿನ್ ಮಾಡಿ, ವಿವಾಹ ನೋಂದಣಿ ಸೇವೆ ಆಯ್ಕೆ ಮಾಡಿ ಮತ್ತು ವಿವರ ನಮೂದಿಸಿ ಅರ್ಜಿ ಸಲ್ಲಿಸಿ. ಗಂಡ, ಹೆಂಡತಿ ಮತ್ತು ಮೂರು ಸಾಕ್ಷಿದಾರರ ಆಧಾರ್ ದೃಢೀಕರಣ ಪ್ರಕ್ರಿಯೆ…
ಬೆಂಗಳೂರು: ಇಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ವಾಸು ಅವರು ನಿಧನರಾಗಿದ್ದಾರೆ. ಅವರ ನಿಧನಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ. “ವಾಸು ಅವರ ನಿಧನದ ಸುದ್ದಿ ಕೇಳಿ ಬಹಳ ನೋವಾಗಿದೆ. ನನ್ನ ಆತ್ಮೀಯರಾಗಿದ್ದ ವಾಸು ಅವರ ಜತೆ ರಾಜಕೀಯ ಪಯಣದಲ್ಲಿ ಉತ್ತಮ ಒಡನಾಟ ಹೊಂದಿದ್ದೆ. ಮೈಸೂರು ಮೇಯರ್ ಆಗಿ, ನಂತರ ಶಾಸಕರಾಗಿ ವಾಸು ಅವರು ಮೈಸೂರು, ಚಾಮರಾಜನಗರ ಭಾಗದಲ್ಲಿ ಪಕ್ಷದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಅಗಲಿಕೆ ಪಕ್ಷಕ್ಕೆ ಬಹಳ ನಷ್ಟ ತಂದಿದೆ ಎಂದಿದ್ದಾರೆ. ವಾಸು ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳಿಗೆ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಶಿವಕುಮಾರ್ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ವಾಸು ಅವರ ನಿಧನಕ್ಕೆ ವಿಜಯೇಂದ್ರ ಸಂತಾಪ ಬೆಂಗಳೂರು: ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಜನಾನುರಾಗಿ ನಾಯಕ ಹಾಗೂ ನಮ್ಮ ಪಕ್ಷದ ಮುಖಂಡ ಕವೀಶ್…
ಬೆಳಗಾವಿ: ಜಿಲ್ಲೆಯ ಪ್ರಸಿದ್ಧವಾದಂತ ರಾಮಮಂದಿರವೊಂದನ್ನು ಬಾಂಬ್ ಇಟ್ಟು ಸ್ಪೋಟಿಸೋದಾಗಿ ಅಲ್ಲಾ ಹು ಹೆಸರಿನಲ್ಲಿ ದುಷ್ಕರ್ಮಿಗಳು ಬೆದರಿಕೆ ಪತ್ರವನ್ನು ಕಳಿಸಿರೋ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದಲ್ಲಿರುವಂತ 101 ವರ್ಷಗಳ ಇತಿಹಾಸ ಹೊಂದಿರುವಂತ ರಾಮಮಂದಿರವನ್ನು ಸ್ಪೋಟಿಸೋದಾಗಿ ಅಲ್ಲಾ ಹು ಹೆಸರಿನಲ್ಲಿ ಹಿಂದಿಯಲ್ಲಿ ದುಷ್ಕರ್ಮಿಗಳು ಬೆದರಿಕೆ ಪತ್ರವನ್ನು ಕಳುಹಿಸಿದ್ದಾರೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿರುವಂತ ಶ್ರೀರಾಮ ಮಂದಿರವನ್ನು ಸ್ಪೋಟಿಸೋದಾಗಿ ಫೆಬ್ರವರಿ.7 ಹಾಗೂ ಫೆಬ್ರವರಿ 28ರಂದು ಅಲ್ಲಾ ಹು ಹೆಸರಿನಲ್ಲಿ ದುಷ್ಕರ್ಮಿಗಳಿಂದ ಬೆದರಿಕೆ ಪತ್ರವನ್ನು ಕುಳುಹಿಸಲಾಗಿದೆ. ಫೆಬ್ರವರಿ.7ರಂದು ಕಳುಹಿಸಲಾಗಿರುವಂತ ಮೊದಲ ಪತ್ರವು ರಾಮಮಂದಿರದ ಗರ್ಭಗುಡಿಯಲ್ಲಿ ಪತ್ತೆಯಾಗಿದೆ. ಫೆಬ್ರವರಿ.2ರಂದು ಎರಡನೇ ಬೆದರಿಕೆ ಪತ್ರವು ಹನುಮಾನ್ ಗುಡಿಯಲ್ಲಿ ಸಿಕ್ಕಿದೆ. ಈ ಪತ್ರಗಳನ್ನು ಪೊಲೀಸರಿಗೆ ದೇವಾಲಯದ ಅರ್ಚಕರು ನೀಡಿದ್ದು, ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅಲ್ಲದೇ ಬೆಂಗಳೂರು ಸ್ಪೋಟದ ಬೆನ್ನಲ್ಲೇ ಶ್ರೀರಾಮಮಂದಿರ ಸ್ಪೋಟಿಸೋದಾಗಿ ಕಳುಹಿಸಿರೋ ಬೆದರಿಕೆ ಪತ್ರ ಜನರಲ್ಲಿ ಆತಂಕವನ್ನು ಹುಟ್ಟಿಸಿದೆ. https://kannadanewsnow.com/kannada/nia-releases-new-pics-of-bangalore-cafe-bomber/ https://kannadanewsnow.com/kannada/breaking-muslim-cleric-hacked-to-death-over-flex-issue-in-mysuru/
ಬೆಂಗಳೂರು: ಮಾರ್ಚ್ 1 ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟದಲ್ಲಿ ಭಾಗಿಯಾಗಿರುವ ಶಂಕಿತ ಆರೋಪಿ ಪುಣೆಯಲ್ಲಿದ್ದಾನೆ ಎಂದು ನಂಬಲಾಗಿದೆ ಎಂದು ಲೋಕಮತ್ ವರದಿ ಮಾಡಿದೆ. ಅಲ್ಲದೇ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳಿಂದ ಬಾಂಬರ್ ಹೊಸ ಪೋಟೋಗಳನ್ನು ಬಿಡುಗಡೆ ಮಾಡಲಾಗಿದೆ. ಸ್ಫೋಟದ ನಂತರ ಆರೋಪಿಗಳು ಕರ್ನಾಟಕದ ಬಳ್ಳಾರಿಗೆ ಬಸ್ ನಲ್ಲಿ ಪ್ರಯಾಣಿಸಿ ನಂತರ ಭಟ್ಕಳ, ಗೋಕರ್ಣ, ಬೆಳಗಾವಿ ಮತ್ತು ಕೊಲ್ಹಾಪುರ ಮೂಲಕ ಪುಣೆಗೆ ತೆರಳಿದರು ಎಂದು ವರದಿಯಾಗಿದೆ. ಆದಾಗ್ಯೂ, ಶಂಕಿತ ಭಯೋತ್ಪಾದಕ ಪುಣೆಯನ್ನು ತಲುಪಿದ್ದಾನೆಯೇ ಅಥವಾ ಮಾರ್ಗಮಧ್ಯೆ ಬಸ್ಸುಗಳನ್ನು ಬದಲಾಯಿಸಿದ್ದಾನೆಯೇ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ದೃಢಪಡಿಸಿಲ್ಲ ಎಂದು ವರದಿ ತಿಳಿಸಿದೆ. ಏತನ್ಮಧ್ಯೆ, ಎನ್ಐಎ ಶನಿವಾರ ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಆರೋಪಿಗಳ ಹಲವಾರು ಸಿಸಿಟಿವಿ ಚಿತ್ರಗಳನ್ನು ಹಂಚಿಕೊಂಡಿದೆ. “ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಶಂಕಿತರನ್ನು ಗುರುತಿಸಲು ಎನ್ಐಎ ನಾಗರಿಕರ ಸಹಕಾರವನ್ನು ಕೋರಿದೆ. ಯಾವುದೇ ಮಾಹಿತಿಯೊಂದಿಗೆ 08029510900, 8904241100, ಅಥವಾ ಇಮೇಲ್ info.blr.nia@gov.in ಗೆ ಕರೆ ಮಾಡಿ.…