Author: kannadanewsnow09

ಬೆಂಗಳೂರು: ಜನವರಿ.19ರಂದು ನಡೆಯಬೇಕಿದ್ದಂತ ರಾಜ್ಯ ಬಿಜೆಪು ಕಾರ್ಯಕಾರಿಣಿ ಸಭೆಯನ್ನು, ಜನವರಿ.27ಕ್ಕೆ ಮರು ನಿಗದಿ ಮಾಡಲಾಗಿದೆ. ಅಂದು ಕೇಂದ್ರ ಸಚಿವರು ಸೇರಿದಂತೆ ವಿವಿಧ ಬಿಜೆಪಿ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜನವರಿ.19ಕ್ಕೆ ನಿಗದಿಯಾಗಿದ್ದಂತ ಕರ್ನಾಟಕ ಬಿಜೆಪಿ ಕಾರ್ಯಕಾರಿಣಿ ಸಭೆಯನ್ನು ವಿವಿಧ ಕಾರಣಗಳಿಂದ ಮುಂದೂಡಿಕೆ ಮಾಡಲಾಗಿತ್ತು. ಈ ಸಭೆಯನ್ನು ಜನವರಿ.27ಕ್ಕೆ ಮರು ನಿಗದಿ ಮಾಡಲಾಗಿದೆ. ಜನವರಿ.27ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಲಿದೆ. ಅಂದು ಕೇಂದ್ರ ಸಚಿವ ಭೂಪೇಂದ್ರ ಯಾದವ್ ಸೇರಿದಂತೆ ವಿವಿಧ ನಾಯಕರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. https://kannadanewsnow.com/kannada/breaking-7-1-magnitude-earthquake-hits-kyrgyzstan-china-border-several-injured-earthquake/ https://kannadanewsnow.com/kannada/breaking-sensex-plunges-over-1300-points-investors-lose-rs-5-9-lakh-crore-loss-of-wealth/

Read More

ಹುಬ್ಬಳ್ಳಿ: ಹಾಸನ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಸ್ಪರ್ಧಿಗಳಾಗಿ ಬೇರೆಯವರು ಕಣಕ್ಕೆ ಇಳಿಯಲಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ದೊಡ್ಡಗೌಡರ ಕುಟುಂಬದ ಹೊರತಾಗಿ ಮತ್ತೊಬ್ಬರು ನಿಲ್ಲಲಿದ್ದಾರೆ ಎನ್ನಲಾಗುತ್ತಿತ್ತು. ಆದ್ರೇ ನಾನೇ ಸ್ಪರ್ಧೆ ಮಾಡೋದಾಗಿ ಸಂಸದ ಪ್ರಜ್ಪಲ್ ರೇವಣ್ಣ ಘೋಷಣೆ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ಹಾಸನ ಲೋಕಸಭಾ ಕ್ಷೇತ್ರದಿಂದ ನಾನೇ ಸ್ಪರ್ಧೆ ಮಾಡುತ್ತೇನೆ. ಬೇರೆ ಯಾರೂ ಸ್ಪರ್ಧೆ ಮಾಡೋದಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದರು. ದೊಡ್ಡವರು ಹೇಳಿದ್ದಾರೆ. ಹೀಗಾಗಿ ಹಾಸನ ಲೋಕಸಭಾ ಕ್ಷೇತ್ರದಿಂದ ಈ ಬಾರಿಯೂ ನಾನೇ ಚುನಾವಣೆಗೆ ಸ್ಪರ್ಧಿಸುತ್ತೇನೆ. ಟಿಕೆಟ್ ವಿಚಾರವಾಗಿ ಕುಮಾರಣ್ಣನೇ ಉತ್ತರ ಕೊಡ್ತಾರೆ ಎಂದರು. https://kannadanewsnow.com/kannada/breaking-7-1-magnitude-earthquake-hits-kyrgyzstan-china-border-several-injured-earthquake/ https://kannadanewsnow.com/kannada/breaking-sensex-plunges-over-1300-points-investors-lose-rs-5-9-lakh-crore-loss-of-wealth/

Read More

ಬೆಂಗಳೂರು : “ಬಿಜೆಪಿ ಗೂಂಡಾಗಳು ಕೈಯಲ್ಲಿ ಮಂತ್ರಾಕ್ಷತೆ ಹಿಡಿದಿದ್ದರೆ, ಬಗಲಲ್ಲಿ ದೊಣ್ಣೆ ಸಿಕ್ಕಿಸಿಕೊಂಡಿದ್ದಾರೆ ಹಿಡಿದಿದ್ದಾರೆ. ಈ ಗೂಂಡಾಗಳ ಗೊಡ್ಡು ಬೆದರಿಕೆಗೆ ಯಾವುದೇ ಕಾಂಗ್ರೆಸಿಗ ಹೆದರುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು. ಅಸ್ಸಾಂನಲ್ಲಿ ರಾಹುಲ್ ಗಾಂಧಿ ಅವರ ಭಾರತ ಜೋಡೋ ನ್ಯಾಯ ಯಾತ್ರೆ ಮೇಲೆ ಬಿಜೆಪಿ ಕಾರ್ಯಕರ್ತರ ದಾಳಿ ಖಂಡಿಸಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಅಸ್ಸಾಂನಲ್ಲಿ ಕಳೆದೆರಡು ದಿನಗಳಿಂದ ಈ ಯಾತ್ರೆಯನ್ನು ತಡೆಯಲಾಗಿದೆ. ಇಂದು ಗುವಾಹಟಿಗೆ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ. ಆಮೂಲಕ ದೇಶದಲ್ಲಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಬದುಕಿದೆಯೋ ಸತ್ತಿದೆಯೋ ಎಂಬ ಪ್ರಶ್ನೆ ಉದ್ಭವಿಸಿದೆ. ಅಸ್ಸಾಂ ಸರ್ಕಾರದ ಈ ನಡೆಯನ್ನು ನಾವೆಲ್ಲರೂ ಖಂಡಿಸುತ್ತೇವೆ ಎಂದರು. ರಾಹುಲ್ ಗಾಂಧಿ ಅವರು ದೇಶದ ಮನಸ್ಸುಗಳನ್ನು ಒಗ್ಗೂಡಿಸಲು, ಜನರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿ, ಅವರಿಗೆ ನ್ಯಾಯ ಒದಗಿಸಲು ಮಣಿಪುರದಿಂದ ಮುಂಬೈವರೆಗೂ ಎರಡನೇ ಹಂತದ ಭಾರತ ಜೋಡೋ ನ್ಯಾಯ ಯಾತ್ರೆ ಹಮ್ಮಿಕೊಂಡಿದ್ದಾರೆ. ಈ ಯಾತ್ರೆಯಿಂದ ಬಿಜೆಪಿ ನಾಯಕರಲ್ಲಿ…

Read More

ಉತ್ತರ ಪ್ರದೇಶ: ರಾಮ ಮಂದಿರಕ್ಕೆ ಕೊಡುಗೆ ನೀಡುವ ಮೂಲಕ ತೆರಿಗೆದಾರರು ಆದಾಯ ತೆರಿಗೆಯನ್ನು ಉಳಿಸಬಹುದು. ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವೆಬ್ಸೈಟ್ ಪ್ರಕಾರ, “ಕೇಂದ್ರ ಸರ್ಕಾರವು 2020-2021 ರ ಹಣಕಾಸು ವರ್ಷದಿಂದ “ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ” (ಪ್ಯಾನ್: AAZTS6197B) ಅನ್ನು ಐತಿಹಾಸಿಕ ಪ್ರಾಮುಖ್ಯತೆಯ ಸ್ಥಳ ಮತ್ತು ಪ್ರಸಿದ್ಧ ಸಾರ್ವಜನಿಕ ಪೂಜಾ ಸ್ಥಳವೆಂದು ಅಧಿಸೂಚನೆ ಹೊರಡಿಸಿದೆ. ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ಮಂದಿರದ ನವೀಕರಣ / ದುರಸ್ತಿಯ ಉದ್ದೇಶಕ್ಕಾಗಿ ಸ್ವಯಂಪ್ರೇರಿತ ಕೊಡುಗೆಯ 50% ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 80 ಜಿ ಅಡಿಯಲ್ಲಿ ಉಲ್ಲೇಖಿಸಲಾದ ಇತರ ಷರತ್ತುಗಳಿಗೆ ಒಳಪಟ್ಟು ಸೆಕ್ಷನ್ 80 ಜಿ (2) (ಬಿ) ಅಡಿಯಲ್ಲಿ ಕಡಿತಕ್ಕೆ ಅರ್ಹವಾಗಿದೆ. 2000 ರೂ.ಗಿಂತ ಹೆಚ್ಚಿನ ನಗದು ದೇಣಿಗೆಗೆ ತೆರಿಗೆ ವಿನಾಯಿತಿ ನೀಡಲು ಅನುಮತಿಸಲಾಗುವುದಿಲ್ಲ. ಸೆಕ್ಷನ್ 80 ಸಿ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80 ಜಿ ನಿರ್ದಿಷ್ಟ ಪರಿಹಾರ ನಿಧಿಗಳು ಮತ್ತು ದತ್ತಿ…

Read More

ಬೆಂಗಳೂರು: ಇಂದು ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದಂತ ವಾಹನ ಸವಾರರಿಗೆ ಟ್ರಾಫಿಕ್ ಪೊಲೀಸರು ಬಿಗ್ ಶಾಕ್ ನೀಡಿದ್ದಾರೆ. ವಿಶೇಷ ಕಾರ್ಯಾಚರಣೆ ನಡೆಸಿ ಬರೋಬ್ಬರಿ 525 ಸವಾರರ ವಿರುದ್ಧ ಕೇಸ್ ಹಾಕಿದ್ದಾರೆ. ಅಲ್ಲದೇ 2.64 ಲಕ್ಷ ದಂಡವನ್ನು ವಸೂಲಿ ಮಾಡಿದ್ದಾರೆ. ಈ ಕುರಿತಂತೆ ಬೆಂಗಳೂರು ನಗರ ಸಂಚಾರ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ನಗರದಲ್ಲಿ ಸಂಭವಿಸುತ್ತಿರುವ ರಸ್ತೆ ಅಪಘಾತಗಳನ್ನು ತಡೆಗಟ್ಟುವ ಸಲುವಾಗಿ ಹಾಗೂ ಏಕಮುಖ ರಸ್ತೆಯಲ್ಲಿ ವಾಹನ ಚಲಾಯಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆಯನ್ನುಂಟು ಮಾಡುತ್ತಿರುವವರ ವಿರುದ್ಧ ವಿಶೇಷ ಕಾರ್ಯಾಚರಣೆಯನ್ನು ಇಂದು ನಡೆಸಲಾಯಿತು ಎಂದಿದೆ. ಇಂದು ಸಂಜೆ 6 ಗಂಟೆಯಿಂದ 7.30ರವರೆಗೆ ಹಮ್ಮಿಕೊಳ್ಳಲಾಗಿದ್ದಂತ ಏಕಮುಖ ರಸ್ತೆಯ ಚಾಲನೆಯ ವಿರುದ್ಧದ ವಿಶೇಷ ಕಾರ್ಯಾಚರಣೆಯಲ್ಲಿ ವಾಹನಗಳ ಮಾದರಿ ಆಧಾರದ ಮೇಲೆ 525 ಕೇಸ್ ದಾಖಲಿಸಲಾಗಿದೆ. 2,64,000 ದಂಡವನ್ನು ಸಂಗ್ರಹಿಸಲಾಗಿದೆ ಅಂತ ತಿಳಿಸಿದೆ. ಅಂದಹಾಗೇ ಸ್ಕೂಟರ್ ವಾಹನ ಸವಾರರ ವಿರುದ್ಧ ಬರೋಬ್ಬರಿ 227 ಕೇಸ್ ದಾಖಲಿಸಿ 1,13,500 ದಂಡ ಸಂಗ್ರಹಿಸಿದ್ರೇ, ಮೋಟರ್ ಸೈಕಲ್ 196, ಎಲ್…

Read More

ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ರಾಮ ಮಂದಿರ ಉದ್ಘಾಟನೆಗಾಗಿ ಹಾಕಿದ್ದಂತ ಬ್ಯಾನರ್ ಅನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ಅವರನ್ನು ಬಂಧಿಸುವಂತೆ ಗ್ರಾಮಸ್ಥರು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಗಿಡ್ಡಬ್ಬನಹಳ್ಳಿಯಲ್ಲಿ ಇಂದು ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮದ ಸಲುವಾಗಿ ಹಾಕಲಾಗಿದ್ದಂತ ಬ್ಯಾನರ್ ಅನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಬ್ಯಾನರ್ ಹರಿದಂತ ಕಿಡಿಗೇಡಿಗಳನ್ನು ಬಂಧಿಸುವಂತೆ ಗ್ರಾಮಸ್ಥರು ಕೇಸರಿ ಭಾವುಟಗಳನ್ನು ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗೆ ಪ್ರತಿಭಟನೆ ನಡೆಸುತ್ತಿರುವಂತ ಗ್ರಾಮಸ್ಥರನ್ನು ಮನವೊಲೀಸೋದಕ್ಕೆ ಸೂಲಿಬೆಲೆ ಠಾಣೆಯ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. https://kannadanewsnow.com/kannada/the-disproportionate-assets-case-against-jayalalithaa-case-court-orders-attachment-of-disproportionate-assets-recovery-of-penalty/ https://kannadanewsnow.com/kannada/trying-to-incite-indian-muslims-pakistan-condemns-ram-temple-construction-says-india/

Read More

ಬೆಂಗಳೂರು: ದಿವಂಗದ ಜಯಲಲಿತಾ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಅಕ್ರಮ ಆಸ್ತಿ ಜಪ್ತಿ, ದಂಡ ವಸೂಲಿಗೆ ವಿಶೇಷ ಕೋರ್ಟ್ ಆದೇಶಿಸಿದೆ. ಅಲ್ಲದೇ ಕರ್ನಾಟಕಕ್ಕೆ ವ್ಯಾಜ್ಯ ಶುಲ್ಕವಾಗಿ 5 ಕೋಟಿ ಪಾವಿಸುವಂತೆಯೂ ಆದೇಶಿಸಲಾಗಿದೆ. ಈ ಕುರಿತಂತೆ ಇಂದು ವಿಶೇಷ ಕೋರ್ಟ್ ವಿಚಾರಣೆ ನಡೆಸಿ ಸೂಚನೆ ನೀಡಿದೆ. ದಿವಂಗದ ಜಯಲಲಿತಾ ವಿರುದ್ಧದ ಆದಾಯ ಮೀರಿ ಆಸ್ತಿಗಳಿಕೆ ಪ್ರಕರಣದಲ್ಲಿ ಅಕ್ರಮ ಆಸ್ತಿ ಜಪ್ತಿ ಹಾಗೂ ದಂಡ ವಸೂಲಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಜಪಾತಿಯಾದ ಆಸ್ತಿ ವಿವರವನ್ನು ಕೋರ್ಟ್ ಗೆ ಎಸ್ ಪಿಪಿ ಕಿರಣ್ ಎಸ್ ಜವಳಿ ಸಲ್ಲಿಸಿದರು. ವ್ಯಾಜ್ಯ ಶುಲ್ಕವಾಗಿ ಕರ್ನಾಟಕಕ್ಕೆ 5 ಕೋಟಿ ಪಾವತಿಸುವಂತೆ ಕೋರ್ಟ್ ತಮಿಳುನಾಡು ಸರ್ಕಾರಕ್ಕೆ ಸೂಚಿಸಿದೆ. ಅಲ್ಲದೇ ಡಿಡಿ ರೂಪದಲ್ಲಿ ಕರ್ನಾಟಕಕ್ಕೆ ನೀಡಲು ಸೂಚಿಸಿದೆ. ಇನ್ನೂ ಜಯಲಲಿತಾ ಒಡವೆಗಳು ಬೆಂಗಳೂರಿನ ಕೋರ್ಟ್ ವಶದಲ್ಲಿರುವ ಹಿನ್ನಲೆಯಲ್ಲಿ ಒಡವೆ ಹರಾಜು ಬದಲು, ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲು ನಿರ್ಧಾರ ಕೈಗೊಳ್ಳುವಂತೆ ಹೇಳಿದೆ. ಗೃಹ ಕಾರ್ಯದರ್ಶಿ, ಪೊಲೀಸರೊಂದಿಗೆ ಹಾಜರಾಗಬೇಕು. ಒಡವೆಗಳನ್ನು ಗುರುತಿಸಿ,…

Read More

ನವದೆಹಲಿ: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರು ನಟಿ ಸನಾ ಜಾವೇದ್ ಅವರನ್ನು ಅಚ್ಚರಿಯ ಸಮಾರಂಭದಲ್ಲಿ ವಿವಾಹವಾದರು. ಸಾನಿಯಾ ಮಿರ್ಜಾ ವಿಚ್ಛೇದನ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದರು ಮತ್ತು ಇತ್ತೀಚಿನ ಮದುವೆಗೆ ಹಲವಾರು ತಿಂಗಳುಗಳ ಮೊದಲು ಶೋಯೆಬ್ ಮಲಿಕ್ ಅವರಿಂದ ‘ಖುಲಾ’ ಪಡೆದಿದ್ದರು ಎಂಬುದು ನಂತರ ಬೆಳಕಿಗೆ ಬಂದಿತು. ಮಿರ್ಜಾ ಕುಟುಂಬವು ಮಲಿಕ್ ಅವರ ಹೊಸ ಪ್ರಯಾಣಕ್ಕೆ ಶುಭ ಹಾರೈಸಿತು. ಮಾಜಿ ದಂಪತಿಗಳಾದ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಮದುವೆಯಾಗಿ ಸುಮಾರು ಒಂದು ದಶಕವನ್ನು ಹಂಚಿಕೊಂಡಿದ್ದರು ಮತ್ತು ಇಜಾನ್ ಎಂಬ ಐದು ವರ್ಷದ ಮಗನ ಪೋಷಕರಾಗಿದ್ದಾರೆ. ಮಲಿಕ್ ಅವರೊಂದಿಗಿನ ಸಂಬಂಧಕ್ಕೆ ಮೊದಲು, ಸನಾ ಜಾವೇದ್ ಈ ಹಿಂದೆ ಗಾಯಕ ಮತ್ತು ಗೀತರಚನೆಕಾರ ಉಮೈರ್ ಜಸ್ವಾಲ್ ಅವರನ್ನು ವಿವಾಹವಾಗಿದ್ದರು. ಆದರೆ ಅವರ ಮೂರು ವರ್ಷಗಳ ವೈವಾಹಿಕ ಜೀವನವು 2023 ರಲ್ಲಿ ಕೊನೆಗೊಂಡಿತು. ಸಮಾ ಟಿವಿಯ ಇತ್ತೀಚಿನ ಪಾಡ್ಕಾಸ್ಟ್ನಲ್ಲಿ, ಅನುಭವಿ ಪಾಕಿಸ್ತಾನಿ ಪತ್ರಕರ್ತ ನಯೀಮ್ ಹನೀಫ್ ಶೋಯೆಬ್ ಮಲಿಕ್ ಮತ್ತು ಸನಾ ಜಾವೇದ್ ನಡುವಿನ…

Read More

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ರಾಮರಾಜ್ಯದ ಕನಸು ಮುಂದಿನ ದಿನಗಳಲ್ಲಿ ನನಸಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಇಂದು ವಿಶ್ವಾಸ ವ್ಯಕ್ತಪಡಿಸಿದರು. ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ರಾಮರಾಜ್ಯದ ಕನಸು ಮುಂದಿನ ದಿನಗಳಲ್ಲಿ ನನಸಾಗಲಿದೆ. ದೇಶದ ಪ್ರತಿಯೊಂದು ರಾಜ್ಯವನ್ನು ಪ್ರಗತಿಪಥದಲ್ಲಿ ಒಯ್ಯುವ ಹಾಗೂ 2047ನೇ ಇಸವಿಗೆ ಅಭಿವೃದ್ಧಿ ಹೊಂದಿದ ‘ವಿಕಸಿತ ಭಾರತ’ದ ನಿರ್ಮಾಣಕ್ಕೆ ಅವರು ಸಂಕಲ್ಪ ತೊಟ್ಟಿದ್ದಾರೆ. ಅದು ನನಸಾಗಲಿದೆ ಎಂದರು. ಮೋದಿಜೀ ಅವರ ಕರೆಗೆ ಓಗೊಟ್ಟು ಅಯೋಧ್ಯೆ ರಾಮಲಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಮನೆಮನೆಯಲ್ಲೂ ದೀಪ ಹಚ್ಚಿದ ಹಿಂದೂಗಳಿಗೆ ಮತ್ತು ಕಾರ್ಯಕರ್ತರಿಗೆ ಅವರು ಕೃತಜ್ಞತೆ ಸಲ್ಲಿಸಿದರು. ಜನರ ನಿರೀಕ್ಷೆ, ಕೋಟಿ ಕೋಟಿ ರಾಮಭಕ್ತರ ಅಪೇಕ್ಷೆಯಂತೆ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠೆ ಕಾರ್ಯ ನೆರವೇರಿದೆ. ದೇಶದ ಮೂಲೆಮೂಲೆಯಿಂದ…

Read More

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 161 ಮಂದಿಗೆ ಕೊರೋನಾ ಪಾಸಿಟಿವ್ ( Corona Positve ) ಎಂಬುದಾಗಿ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಅಲ್ಲದೇ ಸೋಂಕಿತರಾದಂತ ಓರ್ವ ಸಾವನ್ನಪ್ಪಿದ್ದಾನೆ. ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆಯಿಂದ ( Karnataka Health Department ) ಮಾಹಿತಿ ಬಿಡುಗಡೆ ಮಾಡಿದ್ದು ಕಳೆದ 24 ಗಂಟೆಯಲ್ಲಿ RTPCR ಮೂಲಕ 4022, RAT ಮೂಲಕ 945 ಸೇರಿದಂತೆ 4967 ಮಂದಿಯನ್ನು ಕೊರೋನಾ ಸೋಂಕು ( Coronavirus ) ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದಿದೆ. ಇಂದು ನಡೆಸಿದಂತ ಕೊರೋನಾ ಸೋಂಕು ಪತ್ತೆ ಪರೀಕ್ಷೆಯಲ್ಲಿ ಬಳ್ಳಾರಿಯಲ್ಲಿ 06, ಬೆಳಗಾವಿ 01,  ಬೆಂಗಳೂರು ಗ್ರಾಮಾಂತರ 07, ಬೆಂಗಳೂರು ನಗರ 79, ಚಾಮರಾಜನಗರ 01, ಚಿಕ್ಕಬಳ್ಳಾಪುರ 02, ಚಿಕ್ಕಮಗಳೂರು 15, ದಕ್ಷಿಣ ಕನ್ನಡ 03, ದಾವಣಗೆರೆ 01, ಧಾರವಾಡ 08, ಹಾಸನ 03, ಕೋಲಾರ 02, ಕೊಪ್ಪಳ 05, ಮೈಸೂರು 08, ರಾಯಚೂರು 03, ಶಿವಮೊಗ್ಗ 02, ತುಮಕೂರು 03, ಉಡುಪಿ 01, ಉತ್ತರ ಕನ್ನಡ…

Read More