Author: kannadanewsnow09

ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಅದೇ ಪೆನ್ ಡ್ರೈವ್ ವೈರಲ್ ಮಾಡಿದಂತ ಆರೋಪಿಗಳಾದಂತ ಚೇತನ್, ಲಿಖಿತ್ ಹೆಸರಿನ ಇಬ್ಬರು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಇದೇ ಸಂದರ್ಭದಲ್ಲಿ ಪೆನ್ ಡ್ರೈವ್ ಹಂಚಿಕೆ ಆರೋಪ ಎದುರಿಸುತ್ತಿರೋ ನವೀನ್ ಗೌಡ ಎಂಬಾತ ನನಗೆ ದಾರಿಯಲ್ಲಿ ಸಿಕ್ಕಿದ್ದಂತ ಪೆನ್ ಡ್ರೈವ್ ಅನ್ನು ಎ ಮಂಜುಗೆ ಕೊಟ್ಟಿದ್ದೆ ಎಂಬುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಕುರಿತಂತೆ ಫೆಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವಂತ ನವೀನ್ ಗೌಡ, ಏಪ್ರಿಲ್ 20ರಂದು ನನಗೆ ರಸ್ತೆಯಲ್ಲಿ ಸಿಕ್ಕಿದ್ದಂತ ಪೆನ್ ಡ್ರೈವ್ ಅನ್ನು ಅರಕಲಗೂಡು ಶಾಸಕರಾದಂತ ಎ ಮಂಜು ಅವರಿಗೆ ಏಪ್ರಿಲ್.21ರಂದು ನೀಡಿದ್ದೇನೆ. ಏಪ್ರಿಲ್.21ರಂದು ಅರಕಲಗೂಡಿನ ಮಾರುತಿ ಕಲ್ಯಾಣ ಮಂಟಪದಲ್ಲಿ ನೀಡಿದ್ದೇನೆ ಎಂದಿದ್ದಾರೆ. ಇನ್ನೂ ಮುಂದುವರೆದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಹೇಳಿದ ಹಾಗೆ ವೀಡಿಯೋ ವೈರಲ್ ಹಿಂದೆ ಇರುವ ಮಹಾ ನಾಯಕ ಅರಕಲಗೂಡು ಶಾಸಕರೇ ಆಗಿರಬಹುದು ಎಂಬುದಾಗಿ ತಿಳಿಸಿದ್ದಾರೆ. https://kannadanewsnow.com/kannada/breaking-big-twist-to-kidnapping-case-against-revanna-missing-victim-releases-video-statement/ https://kannadanewsnow.com/kannada/conspiracy-is-being-hatched-to-finish-jds-but-no-one-can-do-it-mla-a-manju/

Read More

ಬೆಂಗಳೂರು: ಮಂಡ್ಯದ ಕೆರಗೋಡಿನಲ್ಲಿ ಹನುಮಧ್ವಜ ಘಟನೆಯ ಸಂಬಂಧ ಪ್ರತಿಭಟನೆ ನಡೆಸಿದವರ ವಿರುದ್ಧ ಪೊಲೀಸರು ರೌಡಿ ಶೀಟರ್ ತೆರೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಹೀಗೆ ಮಾಡಿದ್ದೇ ಆದಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂಬುದಾಗಿ ಬಿವೈ ವಿಜಯೇಂದ್ರ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜಕ್ಕೆ ಆದ ಅಪಮಾನ ಖಂಡಿಸಿ ಪ್ರತಿಭಟನೆ ನಡೆಸಿದ್ದ ಹನುಮಭಕ್ತರ ವಿರುದ್ಧ ರೌಡಿಶೀಟರ್ ಪಟ್ಟಿಗೆ ಸೇರ್ಪಡೆ ಮಾಡಲು ಪೊಲೀಸರು ವಹಿಸಿರುವ ಕ್ರಮ ಕಾಂಗ್ರೆಸ್ ಸರ್ಕಾರದ ದ್ವೇಷ ರಾಜಕಾರಣಕ್ಕೆ ದುರ್ಬಳಕೆಯಾಗುತ್ತಿರುವ ಕಾನೂನು ಅಸ್ತ್ರವಾಗಿದೆ ಎಂದಿದ್ದಾರೆ. ಗ್ರಾಮೀಣ ಭಾಗದ ಹನುಮ ಭಕ್ತರು ತಮ್ಮ ಭಾವನೆಗಳನ್ನು ಘಾಸಿಗೊಳಿಸಿದ ಆಡಳಿತ ವ್ಯವಸ್ಥೆಯ ವಿರುದ್ಧ ಪ್ರತಿಭಟನೆ ನಡೆಸಿದ್ದು ನಿರೀಕ್ಷಿತ ಘಟನೆಯಾಗಿದೆ. ಆದರೆ ಹಿಂದೂ ಶ್ರದ್ಧೆಯ ಭಕ್ತರು ಹಾಗೂ ಸಂಘಟನೆಗಳ ಕಾರ್ಯಕರ್ತರುಗಳಿಗೆ ಗೂಂಡಾಗಿರಿ ಹಣೆಪಟ್ಟಿ ಕಟ್ಟಲು ಪೊಲೀಸರು ನೋಟೀಸ್ ನೀಡಿರುವುದು ಅತ್ಯಂತ ಖಂಡನೀಯ ಎಂಬುದಾಗಿ ಹೇಳಿದ್ದಾರೆ. ಹನುಮಧ್ವಜ ಘಟನೆಯಲ್ಲಿ ಪ್ರತಿಭಟಿಸಿದವರ ಮೇಲೆ ರೌಡಿಶೀಟರ್ ತೆರೆದದ್ದೇ ಆದಲ್ಲಿ…

Read More

ಬ್ರೆಜಿಲ್: ಇಲ್ಲಿನ ರಿಯೊ ಗ್ರಾಂಡೆ ಡೊ ಸುಲ್ ರಾಜ್ಯದಲ್ಲಿ ಸುರಿಯುತ್ತಿರುವಂತ ಭಾರೀ ಮಳೆಯಿಂದಾಗಿ ಇದುವರೆಗೆ 136 ಜನರು ಸಾವನ್ನಪ್ಪಿದ್ದಾರೆ. ಅಲ್ಲದೇ 125 ಮಂದಿ ನಾಪತ್ತೆಯಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಬಿರುಗಾಳಿ ಹಾಗೂ ಪ್ರವಾಹದ ಪರಿಣಾಮವಾಗಿ ಬ್ರೆಜಿಲ್ ನ 446 ನಗರಗಳಿಗೆ ಹಾನಿಯಾಗಿದೆ. ರಾಜ್ಯದ 20 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದಿಂದ ನೆರೆ ಸಂತ್ರಸ್ತರಾಗಿದ್ದಾರೆ. ಸದ್ಯ ಪ್ರವಾಹ ಪೀಡಿತ ಪ್ರದೇಶದಲ್ಲಿ ಸಿಲುಕಿದ್ದಂತ 5,37,000 ಜನರನ್ನು ಸ್ಥಳಾಂತರಿಸಲಾಗಿದೆ. https://kannadanewsnow.com/kannada/breaking-congress-releases-list-of-6-candidates-for-karnataka-legislative-council-elections/ https://kannadanewsnow.com/kannada/lok-sabha-elections-2024-no-reservation-on-the-basis-of-religion-says-pm-modi/

Read More

ಕಲಬುರ್ಗಿ: ಜಿಲ್ಲೆಯಲ್ಲಿ ಇಂದು ಯುವಕನೊಬ್ಬನನ್ನು ಹಾಡ ಹಗಲೇ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿರುವಂತ ಘಟನೆ ನಡೆದಿದೆ. ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಣ್ಣೂರು ಗ್ರಾಮದಲ್ಲಿ ಪ್ರೀತಿಯ ವಿಚಾರಕ್ಕೆ ರಮಜಾನ್ ಮಹೆಬೂಬ್ ತಾರಾ(24) ಎಂಬಾತನನ್ನು ಹಾಡ ಹಗಲೇ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಈ ವಿಷಯ ತಿಳಿದು ಘಟನಾ ಸ್ಥಳಕ್ಕೆ ಅಫಜಲಪುರ ಸಿಪಿಐ ಹಾಗೂ ಪಿಎಸ್ಐ ಭೇಟಿ ನೀಡಿ, ಪರಿಶೀಲನೆ ನಡೆಸಿ, ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. https://kannadanewsnow.com/kannada/bjp-announces-list-of-candidates-for-karnataka-legislative-council-elections/ https://kannadanewsnow.com/kannada/england-pacer-james-anderson-announces-retirement-from-test-cricket/

Read More

ಬೆಂಗಳೂರು: ಕರ್ನಾಟ ವಿಧಾನ ಪರಿಷತ್ತಿನ ಮೂರು ಪದವೀಧರರ ಕ್ಷೇತ್ರ ಹಾಗೂ ಎರಡು ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿಯಿಂದ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಇಂದು ಬಿಜೆಪಿಯಿಂದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು ನಾರ್ಥ್ ಈಸ್ಟ್ ಪದವೀಧರ ಕ್ಷೇತ್ರಕ್ಕೆ ಅಮರನಾಥ ಪಾಟೀಲ್ ಗೆ ಟಿಕೆಟ್ ನೀಡಲಾಗಿದೆ. ಸೌತ್ ವೆಸ್ಟ್ ಪದವೀಧರರ ಕ್ಷೇತ್ರಕ್ಕೆ ಡಾ.ದನಂಜಯ ಸರ್ಜಿಗೆ ಟಿಕೆಟ್ ನೀಡಲಾಗಿದೆ. ಬೆಂಗಳೂರು ಪದವೀಧರರ ಕ್ಷೇತ್ರಕ್ಕೆ ಎ ದೇವೇಗೌಡ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಇನ್ನೂ ಸೌತ್ ಈಸ್ಟ್ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ವೈ ಎ ನಾರಾಯಣಸ್ವಾಮಿ, ಸೌತ್ ಶಿಕ್ಷಕರ ಕ್ಷೇತ್ರಕ್ಕೆ ಇಸಿ ನಿಂಗರಾಜುಗೆ ಬಿಜೆಪಿಯಿಂದ ಟಿಕೆಟ್ ನೀಡಲಾಗಿದೆ. https://kannadanewsnow.com/kannada/former-cm-sm-krishnas-health-condition-stable-manipal-hospital-doctors/

Read More

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಆರೋಗ್ಯ ಚಿಂತಾಜನಕವಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ. ಇನ್ನೇನು ಇನ್ನಿಲ್ಲ ಎಂದೆಲ್ಲ ಹೇಳಲಾಗುತ್ತಿತ್ತು. ಆದ್ರೇ ಮಾಜಿ ಸಿಎಂ ಎಸ್ ಎಂ ಕೃಷ್ಣ ಆರೋಗ್ಯ ಸ್ಥಿರವಾಗಿದೆ ಎಂಬುದಾಗಿ ಮಣಿಪಾಲ್ ಆಸ್ಪತ್ರೆಯ ವೈದ್ಯರು ಸ್ಪಷ್ಟ ಪಡಿಸಿದ್ದಾರೆ. ಇಂದು ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರ ಆರೋಗ್ಯದ ಬಗ್ಗೆ ಮಣಿಪಾಲ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ. ಅವರ ಆರೋಗ್ಯ ಸ್ಥಿರವಾಗಿದೆ. ಯಾವುದೇ ಗಂಭೀರ ಸ್ಥಿತಿಯನ್ನು ತಲುಪಿಲ್ಲ ಎಂಬುದಾಗಿ ತಿಳಿಸಿದೆ. ಮಣಿಪಾಲ್ ಆಸ್ಪತ್ರೆಯ ಡಾ.ಸತ್ಯನಾರಾಯಣ, ಡಾ.ಸುನೀಲ್ ಕಾರಂತ್ ಅವರ ನೇೃತ್ವದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯದ ಬಗ್ಗೆಯೂ ನಿಗಾ ವಹಿಸಲಾಗಿದೆ. ಅವರು ಆರೋಗ್ಯ ಸ್ಥಿತಿಯಲ್ಲಿ ಗಂಭೀರವಾಗಿ ಎಂಬುದು ಸುಳ್ಳು. ಅವರು ಇನ್ನಿಲ್ಲ ಎಂಬುದು ಸತ್ಯಕ್ಕೆ ದೂರವಾದದ್ದು ಆಗಿದೆ. ಆ ಬಗ್ಗೆ ಯಾರು ಆತಂಕಕ್ಕೆ ಒಳಗಾಗಬಾರದು ಎಂಬುದಾಗಿ ಸ್ಪಷ್ಟ ಪಡಿಸಿದೆ. https://kannadanewsnow.com/kannada/tree-felling-team-formed-in-bengaluru-to-work-actively-during-monsoon/ https://kannadanewsnow.com/kannada/england-pacer-james-anderson-announces-retirement-from-test-cricket/

Read More

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆಗಾಲದ ವೇಳೆ ಧರೆಗುರುಳುವ ಮರ, ಮರದ ರೆಂಬೆ/ಕೊಂಬೆಗಳನ್ನು ತೆರವುಗೊಳಿಸುವ ಸಲುವಾಗಿ “ಮರ ಕಟಾವು ತಂಡಗಳು” ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಧರಗುರುಳಿದ ಮರಗಳನ್ನು ಕಾಲಮಿತಿಯೊಳಗಾಗಿ ತೆರವುಗೊಳಿಸಲಾಗುತ್ತಿದೆ ಎಂಬುದಾಗಿ ಬಿಬಿಎಂಪಿ ತಿಳಿಸಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ನಗರಲ್ಲಿ ಮಳೆಗಾಲ ಪ್ರಾರಂಭವಾಗಿದ್ದು, ಮಳೆಯಾಗುವ ವೇಳೆ ಮರಗಳು, ಮರದ ರೆಂಬೆ/ಕೊಂಬೆಗಳು ಧರೆಗುರುಳಲಿವೆ. ಇದರಿಂದ ನಾಗರೀಕರಿಗೆ ಹಾಗೂ ವಾಹನ ಸವಾರರಿಗೆ ಸಾಕಷ್ಟು ಸಮಸ್ಯೆಯಾಗಲಿದೆ. ಈ ನಿಟ್ಟಿನಲ್ಲಿ ಪಾಲಿಕೆಯ ಅರಣ್ಯ ವಿಭಾಗವು ಮರ ಕಟಾವು ತಂಡಗಳನ್ನು ನಿಯೋಜಿಸಿದೆ ಎಂದಿದೆ. ಪಾಲಿಕೆಯ ನಿಯಂತ್ರಣ ಕೊಠಡಿಗಳಿಗೆ ಮರ, ಮರದ ರೆಂಬೆ/ಕೊಂಬೆಗಳು ಬಿದ್ದಂತಹ ದೂರುಗಳು ಬಂದ ಕೂಡಲೆ, ಆ ದೂರುಗಳನ್ನು ಆಯಾ ವಲಯದ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಿದ್ದಾರೆ. ಅನಂತರ ಅಧಿಕಾರಿಗಳು ಮರ, ಮರದ ರೆಂಬೆ/ಕೊಂಬೆ ಬಿದ್ದಿರುವ ಸ್ಥಳಕ್ಕೆ ಮರ ಕಟಾವು ತಂಡಗಳನ್ನು ಕಳುಹಿಸಿ ಧರೆಗುರುಳಿದ ಮರಗಳನ್ನು ಕಟಾವು ಮಾಡಿ ನಾಗರೀಕರು/ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿದ್ದಾರೆ ಎಂದು ತಿಳಿಸಿದೆ. 39 ಮರ ಕಟಾವು ತಂಡಗಳ ನಿಯೋಜನೆ ಪಾಲಿಕೆ ವ್ಯಾಪ್ತಿಯಲ್ಲಿ 28…

Read More

ಕುಟುಂಬದಲ್ಲಿ ಎಷ್ಟೇ ದೊಡ್ಡ ಆರ್ಥಿಕ ಸಮಸ್ಯೆ ಇದ್ದರೂ ಅದನ್ನು ಸರಿಪಡಿಸಲು ಕುಟುಂಬಸ್ಥರು ಹರಸಾಹಸ ಮಾಡಿ ಹೇಗಾದರೂ ಸಮಸ್ಯೆಯಿಂದ ಹೊರಬರುತ್ತಾರೆ. ಆದರೆ ಕೆಲವು ಕುಟುಂಬದ ಸದಸ್ಯರು ದೈಹಿಕವಾಗಿ ಗಾಯಗೊಂಡಿದ್ದಾರೆ. ವಾಸಿಯಾಗದ ಕಾಯಿಲೆ ಬಂದಿದೆ. ಅವನು ಚೆನ್ನಾಗಿಲ್ಲದಿದ್ದರೆ, ಕುಟುಂಬವು ಕಳೆದುಕೊಳ್ಳುತ್ತದೆ. ಅವರು ಏನು ಮಾಡಬೇಕೆಂದು ತಿಳಿಯದೆ ಒದ್ದಾಡುತ್ತಾರೆ. ನಮ್ಮಲ್ಲಿ ಅನೇಕರಿಗೆ ಈ ಅನುಭವವಿದೆ. ಇಂದಿಗೂ ನಮ್ಮ ಮನೆಯಿಂದ ಬರುವ ಆದಾಯ ವೈದ್ಯಕೀಯ ವೆಚ್ಚಕ್ಕೆ ವ್ಯರ್ಥವಾಗುವ ಪರಿಸ್ಥಿತಿ ಇದೆ. ಅಂತಹವರೆಲ್ಲರೂ ಅನುಸರಿಸಬಹುದಾದ ಈ ಸರಳ ಆಧ್ಯಾತ್ಮಿಕ ಪರಿಹಾರಗಳನ್ನು ಅನುಸರಿಸಿ . ದೀರ್ಘಕಾಲದ ಕಾಯಿಲೆಯನ್ನು ಗುಣಪಡಿಸುವಲ್ಲಿ ಈ ಪರಿಹಾರಗಳು ಖಂಡಿತವಾಗಿಯೂ ಕೆಲವು ಒಳ್ಳೆಯದನ್ನು ಮಾಡುತ್ತವೆ. ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ವಿದ್ವಾನ್ ವಿದ್ಯಾಧರ್ ತಂತ್ರಿ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9686268564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ…

Read More

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ( M Chinnaswamy Stadium in Bengaluru ) ಭಾನುವಾರದ ನಾಳೆ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore -RCB) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (Delhi Capitals -DC)  ನಡುವಿನ ಪಂದ್ಯಕ್ಕೆ ಮುಂಚಿತವಾಗಿ ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ ಹೊಸ ಸಂಚಾರ ಸಲಹೆಯನ್ನು ನೀಡಿದೆ. ಮಧ್ಯಾಹ್ನ 3 ರಿಂದ ರಾತ್ರಿ 11 ರವರೆಗೆ ನಿಗದಿಯಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League -IPL) ಕ್ರಿಕೆಟ್ ಪಂದ್ಯದ ಸಮಯದಲ್ಲಿ ಸುಗಮ ಸಂಚಾರ ಹರಿವನ್ನು ಸುಗಮಗೊಳಿಸಲು ಮತ್ತು ದಟ್ಟಣೆಯನ್ನು ತಡೆಗಟ್ಟಲು ಪರ್ಯಾಯ ಪಾರ್ಕಿಂಗ್ ಸ್ಥಳಗಳನ್ನು ಸಲಹೆ ಮಾಡಲಾಗಿದೆ. ಈ ಕ್ರೀಡಾಂಗಣವು ಕರ್ನಾಟಕ ರಾಜಧಾನಿಯ ಕಬ್ಬನ್ ಪಾರ್ಕ್ ಬಳಿ ಎಂಜಿ ರಸ್ತೆಯಲ್ಲಿದೆ. ಬೆಂಗಳೂರು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯ ನಡೆಯುವ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಸ್ಥಳಗಳಲ್ಲಿ ಪಾರ್ಕಿಂಗ್ ನಿರ್ಬಂಧಗಳು ಈ ಕೆಳಗಿನ ಸ್ಥಳಗಳು ಮತ್ತು ಬೀದಿಗಳಲ್ಲಿ ಯಾವುದೇ ಪಾರ್ಕಿಂಗ್…

Read More

ಗದಗ: ನಗರದಲ್ಲಿನ ಮನೆಯೊಂದಕ್ಕೆ ಹಾಡಹಗಲೇ ನುಗ್ಗಿರುವಂತ ಐವರು ದುಷ್ಕರ್ಮಿಗಳು ಮನೆಯಲ್ಲಿರುವಂತ ಟಿವಿ, ಫ್ರಿಜ್ಡ್ ಧ್ವಂಸಗೊಳಿಸಿದ್ರೇ, ಮನೆ ಮುಂದೆ ನಿಂತಿದ್ದಂತ ಜೀಪಿಗೆ ಬೆಂಕಿ ಹಚ್ಚಿ ಅಟ್ಟಹಾಸ ಮರೆದಿದ್ದಾರೆ. ಗದಗ ನಗರದ ಪಂಚಾಕ್ಷರಿ ನಗರದಲ್ಲಿ ಹಾಡು ಹಗಲೇ ಮನೆಗೆ ನುಗ್ಗಿರುವಂತ ಐವರು ದುಷ್ಕರ್ಮಿಗಳು ಮನೆಯಲ್ಲಿದ್ದಂತ ಟಿವಿ, ಫ್ರಿಡ್ಜ್ ಧ್ವಂಸಗೊಳಿಸಿದ್ದಾರೆ. ಇದನ್ನು ಪ್ರಶ್ನಿಸಿದಂತ ಮನೆಯಲ್ಲಿನ ಮಹಿಳೆಯೊಬ್ಬರ ಸೀರೆಯನ್ನು ಹಿಡಿದು ಎಳೆದಾಡಿರೋದಾಗಿ ಅಸಭ್ಯವಾಗಿಯೂ ವರ್ತಿಸಿರೋದಾಗಿ ತಿಳಿದು ಬಂದಿದೆ. ಇನ್ನೂ ಮನೆಯ ಮುಂದೆ ನಿಂತಿದ್ದಂತ ಜೀಪಿಗೂ ಬೆಂಕಿ ಹಚ್ಚಿದ್ದಾರೆ. ಇದರಿಂದಾಗಿ ಜೀವು ಧಗಧಗಿಸಿ ಹೊತ್ತಿ ಉರಿದಿದೆ. ಪ್ರಕಾಶ್ ನಿಡಗುಂದಿ ಎಂಬುವರಿಗೆ ಸೇರಿದ ಮನೆಯಲ್ಲೇ ಹೀಗೆ ಐವರು ದುಷ್ಕರ್ಮಿಗಳು ಅಟ್ಟಹಾಸವನ್ನು ಮರೆದಿರೋದಾಗಿದೆ. ಈ ಘಟನೆಯ ಹಿಂದೆ ಹುಯಿಲಗೋಳ ಗ್ರಾಮ ಪಂಚಾಯ್ತಿ ಸದಸ್ಯರಾದಂತ ಮಿಲಿಂದರ್ ಕಾಳೆ, ನಾಗರಾಜ್ ಕಾಳೆ ವಿರುದ್ಧ ಮನೆಯವರು ಆರೋಪ ಮಾಡಿದ್ದಾರೆ. ಇವರ ಕುಮ್ಮಕ್ಕಿನಿಂದಲೇ ಐವರು ದುಷ್ಕರ್ಮಿಗಳು ನಮ್ಮ ಮನೆಗೆ ನುಗ್ಗಿ ಅಟ್ಟಹಾಸ ಮರೆದಿದ್ದಾರೆ. ನಮ್ಮ ಜೀವನಕ್ಕೆ ಏನಾದ್ರೂ ಆದ್ರೇ ಇವರೇ ಹೊಣೆಗಾರರು ಎಂಬುದಾಗಿ ಹೇಳಿದ್ದಾರೆ. ಸದಸ್ಯ ಗದಗ…

Read More