Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಬಿಎಂಟಿಸಿ ಬಸ್ ಪಾಸ್ ಅನ್ನು ಮೊಬೈಲ್ ನಲ್ಲೇ ಖರೀದಿಸುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ. ಸೆ.15ರಿಂದ ಈ ವ್ಯವಸ್ಥೆ ಜಾರಿಗೊಳ್ಳಲಿದೆ. ಹೀಗಾಗಿ ಕೆಲ ಪ್ರಯಾಣಿಕರು ಆತಂಕಕ್ಕೂ ಒಳಗಾಗಿದ್ದರು. ಆದರೇ ಆತಂಕ ಬೇಡ. ಬಿಎಂಟಿಸಿ ಪ್ರಯಾಣಿಕರಿಗೆ ಡಿಜಿಟಲ್ ಜೊತೆಗೆ ಪೂರ್ವ ಮುದ್ರಿತ ಬಸ್ ಬಾಸ್ ಕೂಡ ಲಭ್ಯವಿದೆ ಎಂಬುದಾಗಿ ಬಿಎಂಟಿಸಿ ಸ್ಪಷ್ಟ ಪಡಿಸಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಈ ಹಿಂದೆ ತಿಳಿಸಿರುವಂತೆ, 2024 ರ ಸೆಪ್ಟೆಂಬರ್ 15 ರಿಂದ ನಮ್ಮ ಬಿ.ಎಂ.ಟಿ.ಸಿ ಮೊಬೈಲ್ ಅಪ್ಲಿಕೇಶನ್ ಮೂಲಕ ದೈನಂದಿನ, ಸಾಪ್ತಾಹಿಕ ಮತ್ತು ಮಾಸಿಕ ಬಸ್ ಪಾಸ್ಗಳು ಡಿಜಿಟಲ್ ಮೋಡ್ನಲ್ಲಿ ಲಭ್ಯವಿರುತ್ತವೆ ಎಂದು ಘೋಷಿಸಲು ಹರ್ಷಿಸುತ್ತದೆ. ಈ ಉಪಕ್ರಮವು ನಮ್ಮ ನಿರಂತರ ಪ್ರಯತ್ನಗಳ ಭಾಗವಾಗಿದ್ದು, ಕಾಗದರಹಿತ ವಹಿವಾಟುಗಳನ್ನು ಉತ್ತೇಜಿಸಲು ಮತ್ತು ನಮ್ಮ ಮೌಲ್ಯಯುತ ಪ್ರಯಾಣಿಕರಿಗೆ ಅನುಕೂಲವನ್ನು ಹೆಚ್ಚಿಸಲು ಸಹಾಯವಾಗಿದೆ ಎಂದಿದೆ. ಈ ಸಂಬಂಧ ಸಾರ್ವಜನಿಕ ಪ್ರಯಾಣಿಕರಿಂದ ಪೂರ್ವ ಮುದ್ರಿತ ಪಾಸುಗಳ ವಿತರಣೆಗಾಗಿ ಬೇಡಿಕೆ ಸ್ವೀಕರಿಸಿದ್ದು, ಅವರ ಬೇಡಿಕೆಗೆ ಸ್ಪಂದಿಸಿ…
ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವಂತ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿಗೊಂಡು ಇಂದಿಗೆ ವರ್ಷದ ಸಂಭ್ರಮವಾಗಿದೆ. ಇಂತಹ ಯೋಜನೆಗೆ ಮನೆಯ ಯಜಮಾನಿಯರಿಗೆ 25 ಸಾವಿರ ಕೋಟಿ ಜಮೆ ಮಾಡಲಾಗಿದೆ. ಈ ಕುರಿತಂತೆ ಡಿಸಿಎಂ ಡಿ.ಕೆ ಶಿವಕುಮಾರ್ ಮಾಹಿತಿ ಹಂಚಿಕೊಂಡಿದ್ದರು, ಬಡವರ ಪಾಲಿನ ನಂದಾದೀಪವಾದ ʼಗೃಹಲಕ್ಷ್ಮಿʼ ಯೋಜನೆಗೆ ವರ್ಷ ತುಂಬಿದೆ. ಈ ಒಂದು ವರ್ಷದಲ್ಲಿ ಮನೆಯ ಯಜಮಾನಿಯರಿಗೆ ₹25,248 ಕೋಟಿ ಜಮೆ ಮಾಡಲಾಗಿದೆ. ಇದರಿಂದಾಗಿ ಮಹಿಳೆಯರು ಆರ್ಥಿಕ ಸಬಲರಾಗಿದ್ದು ಮಾತ್ರವಲ್ಲದೇ, ಕುಟುಂಬ ನಿರ್ವಹಣೆಗೂ ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ. https://twitter.com/KarnatakaVarthe/status/1829810388709318851 ಅಂದಹಾಗೇ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಮನೆಯ ಯಜಮಾನಿ ಮಹಿಳೆಯರಿಗೆ ಪ್ರತಿ ತಿಂಗಳು ರೂ.2000 ನೀಡಲಾಗುತ್ತಿದೆ. ಈ ಯೋಜನೆಯಿಂದ ಬಂದಂತ ಹಣದಿಂದ ಯಜಮಾನಿ ಮಹಿಳೆಯರು ಕೆಲವರು ಟಿವಿ ಖರೀದಿಸಿದ್ದರೇ, ಮತ್ತೆ ಕೆಲವರು ಫ್ರಿಡ್ಜ್ ಖರೀದಿಸಿದ್ದಾರೆ. ಮಗದೊಬ್ಬರು ಅಂಗಡಿಯನ್ನೇ ಹಾಕಿದ್ದಾರೆ. ಇದಕ್ಕೆ ಮೀರಿದಂತೆ ಮಹಾತಾಯಿಯೊಬ್ಬರು ಇಡೀ ಊರಿಗೆ ಹೋಳಿಗೆ ಊಟ ಹಾಕಿಸಿ, ಸಂಭ್ರಮಿಸಿದ್ದರು. https://kannadanewsnow.com/kannada/breaking-hc-adjourns-hearing-on-cm-siddaramaiahs-bail-plea-till-2-30-pm/ https://kannadanewsnow.com/kannada/man-attempts-suicide-by-consuming-poison-in-court-fearing-jail-term-in-davangere/
ನವದೆಹಲಿ: ಮಲಯಾಳಂ ಚಿತ್ರೋದ್ಯಮದಲ್ಲಿ ಲೈಂಗಿಕ ಕಿರುಕುಳದ ಪ್ರಕರಣಗಳ ಬಗ್ಗೆ ಪ್ರತಿಕ್ರಿಯಿಸಿದ ನಟಿ ರಾಧಿಕಾ ಶರತ್ ಕುಮಾರ್, ಇಂತಹ ಘಟನೆಗಳು ಇತರ ಚಲನಚಿತ್ರೋದ್ಯಮಗಳಲ್ಲಿಯೂ ಚಾಲ್ತಿಯಲ್ಲಿವೆ ಎಂದು ಒತ್ತಿ ಹೇಳಿದರು. ಅವರು ಸುದ್ದಿ ವಾಹಿನಿಯೊಂದಿಗೆ ಮಾತನಾಡುವಾಗ, ಚಲನಚಿತ್ರ ಸೆಟ್ನಲ್ಲಿ ಪುರುಷರ ಗುಂಪು ಮಹಿಳಾ ನಟಿಯ ನಗ್ನ ವೀಡಿಯೊವನ್ನು ನೋಡುತ್ತಿರುವುದನ್ನು ನೋಡಿದ ಘಟನೆಯನ್ನು ಬಹಿರಂಗಪಡಿಸಿದರು. ಅದನ್ನು ಅವರು ತಮ್ಮ ವ್ಯಾನಿಟಿ ವ್ಯಾನ್ನಲ್ಲಿ ಗುಪ್ತ ಕ್ಯಾಮೆರಾದಿಂದ ರೆಕಾರ್ಡ್ ಮಾಡಿದ್ದರು. ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿರುವ ರಾಧಿಕಾ ಈ ಘಟನೆಯ ಬಗ್ಗೆ ಏಷ್ಯಾನೆಟ್ ನ್ಯೂಸ್ನ ‘ನಮಸ್ತೆ ಕೇರಳ’ ಜೊತೆ ಮಾತನಾಡಿದ್ದಾರೆ. ಅವರು ಸೆಟ್ಗಳಲ್ಲಿನ ನಡವಳಿಕೆಯನ್ನು ಕರೆದು ಅದರ ಬಗ್ಗೆ ಮತ್ತಷ್ಟು ವಿಚಾರಿಸಿದರು. ಆದರೆ ಅವರು “ಅದನ್ನು ಪರಿಶೀಲಿಸುತ್ತಾರೆ” ಎಂದು ಅವರಿಗೆ ತಿಳಿಸಲಾಯಿತು ಎಂದು ಅವರು ಹೇಳಿದರು. ಮಲಯಾಳಂ ಚಿತ್ರೋದ್ಯಮದಲ್ಲಿ ಲೈಂಗಿಕ ಕಿರುಕುಳದ ಪ್ರಕರಣಗಳ ಬಗ್ಗೆ ಪ್ರತಿಕ್ರಿಯಿಸಿದ ನಟಿ ರಾಧಿಕಾ ಶರತ್ ಕುಮಾರ್, ಇಂತಹ ಘಟನೆಗಳು ಇತರ ಚಲನಚಿತ್ರೋದ್ಯಮಗಳಲ್ಲಿಯೂ ಚಾಲ್ತಿಯಲ್ಲಿವೆ ಎಂದು ಒತ್ತಿ ಹೇಳಿದರು.…
ದಾವಣಗೆರೆ: ಪ್ರಕರಣವೊಂದರಲ್ಲಿ ಜೈಲು ಶಿಕ್ಷೆಯ ಭಯದಿಂದಾಗಿ ಆರೋಪಿಯೊಬ್ಬ ನ್ಯಾಯಾಲಯದ ಆವರಣದಲ್ಲೇ ವಿಷ ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವಂತ ಘಟನೆ ನಡೆದಿದೆ. ಇಂದು ಕೌಟುಂಬಿಕ ದೌರ್ಜನ್ಯ ಪ್ರಕರಣವೊಂದರಲ್ಲಿ ವಿಚಾರಣೆಗೆ ಆರೋಪಿಯಾಗಿದ್ದಂತ ಫಜಲ್ ಆಲಿ ಎಂಬಾತ ದಾವಣಗೆರೆಯ ಹರಿಹರದ 2ನೇ ಹೆಚ್ಚುವರಿ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಜೈಲು ಶಿಕ್ಷೆಯ ಭಯದಲ್ಲಿದ್ದಂತ ಆರೋಪಿ, ನ್ಯಾಯಾಧೀಶರ ಮುಂದೆಯೇ ವಿಷ ಸೇವಿಸಿ ಆಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. https://kannadanewsnow.com/kannada/russian-helicopter-with-19-passengers-three-crew-members-goes-missing-in-kamchatka-peninsula/ https://kannadanewsnow.com/kannada/breaking-hc-adjourns-hearing-on-cm-siddaramaiahs-bail-plea-till-2-30-pm/
ಮಾಸ್ಕೋ: ಮೂವರು ಸಿಬ್ಬಂದಿ ಮತ್ತು 19 ಪ್ರಯಾಣಿಕರನ್ನು ಹೊತ್ತ ರಷ್ಯಾದ ಹೆಲಿಕಾಪ್ಟರ್ ದೂರದ ಪೂರ್ವ ಪರ್ಯಾಯ ದ್ವೀಪವಾದ ಕಮ್ಚಾಟ್ಕಾದಲ್ಲಿ ಶನಿವಾರ ಕಾಣೆಯಾಗಿದೆ ಎಂದು ಫೆಡರಲ್ ವಾಯು ಸಾರಿಗೆ ಏಜೆನ್ಸಿಯ ಪ್ರಾಥಮಿಕ ಅಂಕಿಅಂಶಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ. ಎಂಐ -8 ಟಿ ಹೆಲಿಕಾಪ್ಟರ್ ವಾಚ್ಕಾಜೆಟ್ಸ್ ಜ್ವಾಲಾಮುಖಿಯ ಬಳಿಯ ನೆಲೆಯಿಂದ ಹೊರಟಿತು ಮತ್ತು ಸಿಬ್ಬಂದಿ 04:00 ಜಿಎಂಟಿ (ಭಾರತೀಯ ಸಮಯ ಬೆಳಿಗ್ಗೆ 9:30) ನಿಗದಿತ ಸಮಯಕ್ಕೆ ವರದಿ ಮಾಡಲು ವಿಫಲರಾದರು. ಎಂಐ-8 1960ರ ದಶಕದಲ್ಲಿ ವಿನ್ಯಾಸಗೊಳಿಸಲಾದ ಎರಡು ಎಂಜಿನ್ ಹೆಲಿಕಾಪ್ಟರ್ ಆಗಿದೆ. ಇದನ್ನು ರಷ್ಯಾದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ, ಅಲ್ಲಿ ಅಪಘಾತಗಳು ಆಗಾಗ್ಗೆ ಸಂಭವಿಸುತ್ತಿವೆ. https://kannadanewsnow.com/kannada/breaking-hc-adjourns-hearing-on-cm-siddaramaiahs-bail-plea-till-2-30-pm/ https://kannadanewsnow.com/kannada/visa-partners-with-skill-india-to-skill-20000-youth-for-tourism-industry/
ಬೆಂಗಳೂರು : ಸೆಪ್ಟೆಂಬರ್ 2 ರಿಂದ 1-5 ನಮೂನೆ ಪೋಡಿ ದುರಸ್ಥಿ ಕಾರ್ಯವನ್ನು ಅಭಿಯಾನ ಮಾದರಿಯಲ್ಲಿ ರಾಜ್ಯಾದ್ಯಂತ ಜಾರಿಗೊಳಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ದಶಕಗಳಿಂದ ಬಾಕಿ ಉಳಿದಿರುವ ಪೋಡಿ ದುರಸ್ಥಿ ಕಾರ್ಯಕ್ಕೆ ಚುರುಕು ನೀಡುವ ಸಂಬಂಧ ವಿಕಾಸಸೌಧದಲ್ಲಿ ಶುಕ್ರವಾರ ಎಲ್ಲಾ ಜಿಲ್ಲಾಧಿಕಾರಿಗಳು, ತಹಶೀಲ್ದಾರರು, ಕಂದಾಯ ನಿರೀಕ್ಷಕರೂ ಸೇರಿ ಇಲಾಖೆಯ ಎಲ್ಲಾ ಅಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಚಿವ ಕೃಷ್ಣ ಬೈರೇಗೌಡ ಅವರು ಸಭೆ ನಡೆಸಿದರು. “ರಾಜ್ಯದಲ್ಲಿ ಸುಮಾರು 10 ಲಕ್ಷ ರೈತರಿಗೆ ಹತ್ತಾರು ವರ್ಷಗಳ ಹಿಂದೆ ಸರ್ಕಾರಿ ಜಮೀನು ಅಕ್ರಮ ಸಕ್ರಮದಡಿ ಮಂಜೂರಾಗಿದ್ದರೂ ಸಹ, ಪೋಡಿ ದುರಸ್ಥಿ ಆಗದೆ ಬಾಕಿ ಉಳಿದಿದೆ. ಲಕ್ಷಾಂತರ ರೈತರು ಅನೇಕ ವರ್ಷಗಳಿಂದ ಪ್ರಯತ್ನ ಮಾಡುತ್ತಿದ್ದರೂ ಸಹ, ಕೆಲವೇ ಕೆಲವರಿಗೆ ಮಾತ್ರ ಪೋಡಿ ದುರಸ್ಥಿಯಾಗಿದ್ದು ಬಹುತೇಕರಿಗೆ ಆಗಿರುವುದಿಲ್ಲ. ಇದರಿಂದಾಗಿ ಹಲವು ರೈತರು ತೀವ್ರ ತೊಂದರೆಗೆ ಸಿಲುಕಿದ್ದು, ಅಧಿಕಾರಿಗಳು ಸೆಪ್ಟೆಂಬರ್ 2 ರಿಂದ ಅಭಿಯಾನ ಮಾದರಿಯಲ್ಲಿ…
ಬೆಂಗಳೂರು: ಆಸ್ತಿ ತೆರಿಗೆ ಪಾವತಿದಾರರಿಗೆ ಗುಡ್ ನ್ಯೂಸ್ ಎನ್ನುವಂತೆ ಸೆಪ್ಟೆಂಬರ್.14ರವರೆಗೆ ಶೇ.5ರ ರಿಯಾಯಿತಿಯನ್ನು ವಿಸ್ತರಿಸಿ ರಾಜ್ಯ ಸರ್ಕಾರದ ಆದೇಶಿಸಿದೆ. ಈ ಕುರಿತಂತೆ ಆದೇಶ ಹೊರಡಿಸಿದ್ದು, ರಾಜ್ಯದ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಆಸ್ತಿ ತೆರಿಗೆದಾರರು ತಮ್ಮ ಆಸ್ತಿಯ ತೆರಿಗೆ ಪಾವತಿ ಮಾಡಲು ಶೇ.5 ರಷ್ಟು ರಿಯಾಯಿತಿ ನೀಡಲು ಕಲ್ಪಿಸಿರುವ ಅವಕಾಶದ ಅವಧಿಯನ್ನು ಸೆ.14 ರವರೆಗೆ ವಿಸ್ತರಿಸಲಾಗಿದೆ ಎಂದಿದೆ. ಆಸ್ತಿ ತೆರಿಗೆ ಪಾವತಿಯನ್ನು ಪರಿಣಾಮಕಾರಿಯಾಗಿ ಹೆಚ್ಚಿಸಲು ಹಾಗೂ ಸ್ವಯಂ ತೆರಿಗೆ ಪಾವತಿಯನ್ನು ಉತ್ತೇಜಿಸಲು ಆರ್ಥಿಕ ವರ್ಷದ ಪ್ರಾರಂಭದ 30 ದಿನಗಳಲ್ಲಿ ಪೂರ್ಣ ಪ್ರಮಾಣದ ಆಸ್ತಿ ತೆರಿಗೆ ಪಾವತಿ ಮಾಡಿದಲ್ಲಿ ಶೇ.5 ರಷ್ಟು ರಿಯಾಯಿತಿ ನೀಡಲಾಗುವುದು. ಆಸ್ತಿ ತೆರಿಗೆದಾರರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದೆ.
ಬೆಂಗಳೂರು: ಕಾಲೇಜು ಶಿಕ್ಷಣ ಇಲಾಖೆಯಿಂದ 2024-25ನೇ ಶೈಕ್ಷಣಿಕ ಸಾಲಿಗೆ ಅತಿಥಿ ಉಪನ್ಯಾಸಕರ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ನಾಳೆಯಿಂದ ಅರ್ಜಿ ಸಲ್ಲಿಕೆ ಆರಂಭಗೊಳ್ಳಲಿದ್ದು, ಸೆಪ್ಟೆಂಬರ್.7 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. 15 ವರ್ಷಗಳಿಗೂ ಹೆಚ್ಚು ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದಂತ ಅನುಭವ, UGC ನಿಗದಿತ ವಿದ್ಯಾರ್ಹತೆ ಹೊಂದಿರುವವರಿಗೆ 40,000 ವರೆಗೆ ವೇತನ ಸಿಗಲಿದೆ. ಈ ಕುರಿತಂತೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, 2024-25ನೇ ಶೈಕ್ಷಣಿಕ ಸಾಲಿನಲ್ಲಿ ಇಲಾಖಾ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ (ಸರ್ಕಾರಿ ಸಂಸ್ಕೃತ ಹಾಗೂ ಚಿತ್ರಕಲಾ ಕಾಲೇಜುಗಳೂ ಒಳಗೊಂಡಂತೆ) ಖಾಯಂ ಉಪನ್ಯಾಸಕರಿಗೆ ಕಾರ್ಯಭಾರ ಹಂಚಿಕೆ ಮಾಡಿದ ನಂತರ ಉಳಿಕೆಯಾಗುವ ಬೋಧನಾ ಕಾರ್ಯಭಾರಕ್ಕನುಗುಣವಾಗಿ ಅತಿಥಿ ಉಪನ್ಯಾಸಕರನ್ನು (ಗ್ರಂಥಪಾಲಕರು ಹಾಗೂ ದೈಹಿಕ ಶಿಕ್ಷಣ ಒಳಗೊಂಡಂತೆ) ಆನ್ಲೈನ್ ಕೌನ್ಸಿಲಿಂಗ್ ಪ್ರಕ್ರಿಯೆ ಮೂಲಕ ಆಯ್ಕೆ ಮಾಡಿಕೊಳ್ಳುವ ಸಂಬಂಧ ಈ ಕೆಳಕಂಡಂತೆ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗುವುದು ಎಂದಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ದಿನಾಂಕ 31-08-2024ರಿಂದ ಆರಂಭಗೊಳ್ಳಲಿದೆ.…
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರದಿಂದ 7ನೇ ವೇತನ ಆಯೋಗದ ಪರಿಷ್ಕೃತ ವೇತನ ಜಾರಿಗೊಳಿಸಿ ಆದೇಶಿಸಿತ್ತು. ಈ ಬೆನ್ನಲ್ಲೇ ರಾಜ್ಯದ ಅಗ್ನಿಶಾಮಕ ಠಾಣೆಯ ಅಧಿಕಾರಿ, ಸಿಬ್ಬಂದಿಗಳಿಗೂ 7ನೇ ರಾಜ್ಯ ಪರಿಷ್ಕೃತ ವೇತನ ಆಯೋಗದಂತೆ ವೇತನ ಜಾರಿಗೊಳಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಕುರಿತಂತೆ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಮಹಾ ನಿರ್ದೇಶಕರು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ನಿರ್ದೇಶಕರಾದಂತ ಟಿಎನ್ ಶಿವಶಂಕರ್ ಅವರು ಸುತ್ತೋಲೆ ಹೊರಡಿಸಿದ್ದಾರೆ. ಅದರಲ್ಲಿ 7ನೇ ವೇತನ ಪರಿಷ್ಕೃತ ವೇತನ ಜಾರಿಯಾಗಿದ್ದು, ಅದರನ್ವಯ ನಿಮ್ಮ ವಲಯ ವ್ಯಾಪ್ತಿಯ ಅಗ್ನಿಶಾಮಕ ಠಾಣೆ ಮತ್ತು ಕಛೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಲಿಪಿಕ ನೌಕರರುಗಳ ಮೂಲ ಸೇವಾ ಪುಸ್ತಕಗಳನ್ನು ಪರಿಶೀಲಿಸಿ 7ನೇ ಪರಿಷ್ಕೃತ ವೇತನ ಶ್ರೇಣಿಗಳ ನಿಯಮಗಳನ್ವಯ ಅನ್ವಯಿಸುವ ವೇತನ ಶ್ರೇಣಿ ಮತ್ತು ವೇತನ ನಿಗದಿಪಡಿಸತಕ್ಕದ್ದು ಎಂದಿದ್ದಾರೆ. ಮುಂದುವರೆದು ಯಾವುದೇ ಅಧಿಕಾರಿ / ಸಿಬ್ಬಂದಿಯವರು ಮತ್ತು ಲಿಪಿಕ ನೌಕರರ ವೇತನ ನಿಗದಿಯಲ್ಲಿ ಸಮಸ್ಯೆಗಳು…
ಇಸ್ರೇಲಿ ಗಡಿಯ ಸಮೀಪವಿರುವ ಈಜಿಪ್ಟ್ನ ತಾಬಾ ಎಂಬ ಪಟ್ಟಣದಲ್ಲಿ ಅನೇಕ ಪ್ರವಾಸಿಗರಿಗೆ ಚೂರಿ ಇರಿತವಾಗಿದೆ ಎಂದು ಈಜಿಪ್ಟ್ನ ಸರ್ಕಾರಿ ಸಂಬಂಧಿತ ಅಲ್-ಖೈದಾ ನ್ಯೂಸ್ ಟಿವಿ ಶುಕ್ರವಾರ ವರದಿ ಮಾಡಿದೆ. ಈಜಿಪ್ಟ್ ನ ತಾಬಾ ಎಂಬಲ್ಲಿ ಅನೇಕ ಪ್ರವಾಸಿಗರ ಮೇಲೆ ವ್ಯಕ್ತಿಯೊಬ್ಬ ಹಲವು ಪ್ರವಾಸಿಗರಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿ ನಿರೀಕ್ಷಿಸಲಾಗಿದೆ. https://kannadanewsnow.com/kannada/chalavadi-narayanasamy-in-which-quota-did-you-get-an-industrial-site/ https://kannadanewsnow.com/kannada/good-news-for-property-tax-payers-5-discount-extended-till-september-14/










