Subscribe to Updates
Get the latest creative news from FooBar about art, design and business.
Author: kannadanewsnow09
ನವದೆಹಲಿ: ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ಇಂದು ತಿರಸ್ಕರಿಸಿದೆ. ಇಲ್ಲಿಯವರೆಗೆ ಸಂಗ್ರಹಿಸಿದ ವಸ್ತುಗಳು ಕೇಜ್ರಿವಾಲ್ ಅವರು ಆಪಾದಿತ ವಹಿವಾಟುಗಳಲ್ಲಿ ಭಾಗಿಯಾಗಿದ್ದಾರೆ ಎಂದು ಸೂಚಿಸುತ್ತದೆ. ಈ ಹಂತದಲ್ಲಿ ‘ಮಿನಿ ವಿಚಾರಣೆ’ ನಡೆಸುವ ಮೂಲಕ ತನಿಖೆಯ ಅರ್ಹತೆಗೆ ಹೋಗಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶ ಸ್ವರ್ಣ ಕಾಂತಾ ಶರ್ಮಾ ಹೇಳಿದರು. ಬಿಜೆಪಿ ನಿಯಂತ್ರಣದಲ್ಲಿರುವ ಕೇಂದ್ರ ಸರ್ಕಾರವು ರಾಜಕೀಯ ವಿರೋಧವನ್ನು ಹತ್ತಿಕ್ಕಲು ಜಾರಿ ನಿರ್ದೇಶನಾಲಯವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬ ಕೇಜ್ರಿವಾಲ್ ಅವರ ವಾದವನ್ನು ಒಪ್ಪಿಕೊಳ್ಳಲು ನ್ಯಾಯಾಧೀಶರು ನಿರಾಕರಿಸಿದರು. “ನ್ಯಾಯಾಧೀಶರು ಕಾನೂನಿಗೆ ಬದ್ಧರಾಗಿದ್ದಾರೆಯೇ ಹೊರತು ರಾಜಕೀಯಕ್ಕಲ್ಲ. ತೀರ್ಪುಗಳನ್ನು ಕಾನೂನು ತತ್ವಗಳ ಮೇಲೆ ನೀಡಲಾಗುತ್ತದೆಯೇ ಹೊರತು ರಾಜಕೀಯ ಪರಿಗಣನೆಗಳ ಮೇಲೆ ಅಲ್ಲ.. ರಾಜಕೀಯ ಪರಿಗಣನೆಗಳು ಪ್ರಸ್ತುತವಲ್ಲದ ಕಾರಣ ಅವುಗಳನ್ನು ನ್ಯಾಯಾಲಯದ ಮುಂದೆ ತರಲು ಸಾಧ್ಯವಿಲ್ಲ” ಎಂದು ನ್ಯಾಯಾಧೀಶರು ಹೇಳಿದರು, ಜಾರಿ ನಿರ್ದೇಶನಾಲಯವನ್ನು ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಏಜೆನ್ಸಿಯಾಗಿ ನೋಡಲಾಗುವುದಿಲ್ಲ…
ನವದೆಹಲಿ: ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿದೆ. ಗೋವಾ ಚುನಾವಣೆಗೆ ಹಣವನ್ನು ಕಳುಹಿಸಲಾಗಿದೆ ಎಂದು ತೋರಿಸುವ ಹವಾಲಾ ವಿತರಕರ ಹೇಳಿಕೆಗಳು ಸೇರಿದಂತೆ ಸಾಕಷ್ಟು ದಾಖಲೆಗಳನ್ನು ತೋರಿಸಲು ಇಡಿಗೆ ಸಾಧ್ಯವಾಯಿತು ಎಂದು ನ್ಯಾಯಾಲಯ ಹೇಳಿದೆ. ಪಿಎಂಎಲ್ಎ ಅಡಿಯಲ್ಲಿ ಬಂಧಿಸುವ ಕೇಜ್ರಿವಾಲ್ ಅವರ ಸವಾಲನ್ನು ನ್ಯಾಯಾಲಯ ತಿರಸ್ಕರಿಸಿತು ಮತ್ತು “ನಮ್ಮ ಮುಂದೆ ಇರಿಸಲಾದ ಕಡತಗಳು ಮತ್ತು ವಸ್ತುಗಳು ಕಾನೂನಿನ ಆದೇಶವನ್ನು ಇಡಿ ಅನುಸರಿಸಿದೆ ಎಂದು ಬಹಿರಂಗಪಡಿಸುತ್ತದೆ. ವಿಚಾರಣಾ ನ್ಯಾಯಾಲಯದ ಆದೇಶವು ಎರಡು ಸಾಲಿನ ಆದೇಶವಲ್ಲ. ಜಾರಿ ನಿರ್ದೇಶನಾಲಯದೊಂದಿಗಿನ ಹೇಳಿಕೆಗಳು ಹವಾಲಾ ಡೀಲರ್ಗಳು ಮತ್ತು ಗೋವಾ ಚುನಾವಣೆಯಲ್ಲಿ ಎಎಪಿ ಅಭ್ಯರ್ಥಿಯದ್ದಾಗಿದೆ” ಎಂದು ನ್ಯಾಯಾಲಯ ಹೇಳಿದೆ. ತೀರ್ಪನ್ನು ಪ್ರಕಟಿಸುವ ಮೊದಲು, ಪ್ರಸ್ತುತ ಅರ್ಜಿಯು ಬಂಧನವನ್ನು ಪ್ರಶ್ನಿಸುತ್ತದೆ. ಇದು ಸುಪ್ರೀಂ ಕೋರ್ಟ್ನ ನಿರ್ಧಾರವನ್ನು ಉಲ್ಲಂಘಿಸುತ್ತದೆ ಎಂದು ಸ್ಪಷ್ಟಪಡಿಸಲು ಬಯಸುತ್ತದೆ…
ನವದೆಹಲಿ: ಇಂಡೋನೇಷ್ಯಾದಲ್ಲಿ ಮಂಗಳವಾರ ಮಧ್ಯಾಹ್ನ 6.6 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪನದಿಂದಾಗಿ ಇಂಡೋನೇಷ್ಯಾ ಜನರು ಬೆಚ್ಚಿಬಿದ್ದಿದ್ದಾರೆ.
ನವದೆಹಲಿ: ಇಡಿ ಬಂಧನ ಪ್ರಶ್ನಿಸಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದಂತ ಅರ್ಜಿಯ ವಿಚಾರಣೆಯನ್ನು ನಡೆಸಿದ್ದಂತ ದೆಹಲಿ ಹೈಕೋರ್ಟ್, ಕೇಜ್ರಿವಾಲ್ ಹಗರಣದಲ್ಲಿ ಭಾಗಿಯಾಗಿ್ದದಾರೆ. ಇಂದು ತನ್ನ ತೀರ್ಪು ಪ್ರಕಟಿಸಿದೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಇಡಿ ಬಂಧನ ಪ್ರಶ್ನಿಸಿ ಸಲ್ಲಿಸಿದ್ದಂತ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ದೆಹಲಿ ಮದ್ಯ ನೀತಿ ಪರಿಷ್ಕರಣೆ ಹಗರಣದಲ್ಲಿ ಇಡಿಯಿಂದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಂಧಿಸಲಾಗಿತ್ತು. ಆ ಬಳಿಕ ನ್ಯಾಯಾಲಯಕ್ಕೆ ಹಾಜರುವಡಿಸಿತ್ತು. ಅವರಿಗೆ ನ್ಯಾಯಾಂಗ ಬಂಧನ ಕೂಡ ವಿಧಿಸಲಾಗಿದ್ದು, ತಿಹಾರ್ ಜೈಲಿನಲ್ಲಿ ಇರುವಂತೆ ಆಗಿದೆ. ಇಂತಹ ಪ್ರಕರಣ ಸಂಬಂಧ ಇಡಿ ಬಂಧನ ಪ್ರಶ್ನಿಸಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದಂತ ಅರ್ಜಿಯ ವಿಚಾರಣೆ ನಡೆಸಿದಂತ ದೆಹಲಿ ಹೈಕೋರ್ಟ್, ತೀರ್ಪು ಕಾಯ್ದಿರಿಸಿತ್ತು. ಇದೀಗ ದೆಹಲಿ ಹೈಕೋರ್ಟ್ ನ ನ್ಯಾಯಮೂರ್ತಿ ಸ್ವರ್ಣಕಾಂತ ಅವರನ್ನ ಒಳಗೊಂಡ ನ್ಯಾಯಪೀಠವು, ಅವರು ಅರವಿಂದ್ ಕೇಜ್ರಿವಾಲ್ ಅವರು ಸಲ್ಲಿಸಿರುವಂತ ಅರ್ಜಿಯು ಜಾಮೀನಿನ ಬಗ್ಗೆ ಅಲ್ಲ. ಬೇಲ್ ಕೊಡುವ ಅಧಿಕಾರ ಇರುವುದು ನ್ಯಾಯಾಲಯಕ್ಕೆ ಆಗಿದೆ. ಇಡಿಗೆ ಆ…
ಬೆಂಗಳೂರು: ಅಪಘಾತವಾದಾಗ ತಕ್ಷಣ ಸೂಕ್ತ ಚಿಕಿತ್ಸೆಗೆ ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಡದ ಶೋಭಾ ಕರಂದ್ಲಾಜೆಯವರಲ್ಲಿ ಮಾನವೀಯತೆಯ ಲವಲೇಶವೂ ಇಲ್ಲದಾಗಿದೆ. ಗಾಯಾಳುವನ್ನು ಆಟೋರಿಕ್ಷಾದಲ್ಲಿ ಕರೆದುಕೊಂಡು ಹೋಗುವಂತ ದುರ್ಗತಿ ಬಂದಿರುವುದು ಬಿಜೆಪಿನಾಯಕರು ಧೂರ್ತತನಕ್ಕೆ ಹಿಡಿದ ಕನ್ನಡಿಯಾಗಿದೆ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ಕಿಡಿಕಾರಿದೆ. ಈ ಕುರಿತಂತೆ ಎಕ್ಸ್ ಮಾಡಿದ್ದು, ಶೋಭಾ ಕರಂದ್ಲಾಜೆಯವರ ಕಾರು ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ, ಅಪಘಾತದಲ್ಲಿ ಮೃತರಾದ ವ್ಯಕ್ತಿಯ ಕುಟುಂಬಕ್ಕೆ ಕನಿಷ್ಠ ಸಾಂತ್ವನ ಹೇಳುವುದಕ್ಕೂ ಶೋಭಾ ಅವರಿಗೆ ಪುರಸೊತ್ತು, ಮಾನವೀಯತೆ ಇಲ್ಲವೇ? ಎಂದು ಪ್ರಶ್ನಿಸಿದೆ. ಅಪಘಾತವಾದಾಗ ತಕ್ಷಣ ಸೂಕ್ತ ಚಿಕಿತ್ಸೆಗೆ ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಡದ ಶೋಭಾ ಕರಂದ್ಲಾಜೆಯವರಲ್ಲಿ ಮಾನವೀಯತೆಯ ಲವಲೇಶವೂ ಇಲ್ಲದಾಗಿದೆ. ಗಾಯಾಳುವನ್ನು ಆಟೋರಿಕ್ಷಾದಲ್ಲಿ ಕರೆದುಕೊಂಡು ಹೋಗುವಂತ ದುರ್ಗತಿ ಬಂದಿರುವುದು ಬಿಜೆಪಿ ನಾಯಕರು ಧೂರ್ತತನಕ್ಕೆ ಹಿಡಿದ ಕನ್ನಡಿ ಎಂಬುದಾಗಿ ವಾಗ್ಧಾಳಿ ನಡೆಸಿದೆ. https://twitter.com/INCKarnataka/status/1777305050420768796 https://kannadanewsnow.com/kannada/supreme-court-to-hear-plea-for-100-evm-votes-vvpat-verification-on-april-16/ https://kannadanewsnow.com/kannada/whatsapp-users-beware-if-you-click-on-these-3-messages-you-will-run-out-of-money-in-your-account/
ನವದೆಹಲಿ: ವಿದ್ಯುನ್ಮಾನ ಮತದಾನ ಯಂತ್ರ (ಇವಿಎಂ) ದತ್ತಾಂಶ ಮತ್ತು ವಿವಿಪ್ಯಾಟ್ ದಾಖಲೆಗಳ ನಡುವಿನ ಅಡ್ಡಪರಿಶೀಲನೆಗೆ ಸಂಬಂಧಿಸಿದ ವಿಷಯವು ಮುಂದಿನ ಮಂಗಳವಾರ (ಏಪ್ರಿಲ್ 16) ವಿಚಾರಣೆಗೆ ಬರಲಿದೆ ಎಂದು ಸುಪ್ರೀಂ ಕೋರ್ಟ್ ಇಂದು ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ಇಂದು ಅರ್ಜಿಗಳನ್ನು ಪಟ್ಟಿ ಮಾಡಲಾಗಿದೆ. ನ್ಯಾಯಪೀಠವು ಮತ್ತೊಂದು ವಿಷಯವನ್ನು ಆಲಿಸುತ್ತಿರುವುದರಿಂದ, ನ್ಯಾಯಮೂರ್ತಿ ಖನ್ನಾ ಅವರು ಊಟದ ವಿರಾಮಕ್ಕೆ ಎದ್ದೇಳುವ ಮೊದಲು ಸ್ಪಷ್ಟಪಡಿಸಿದರು. “ಇವಿಎಂ ವಿಷಯದಲ್ಲಿ, ಮುಂದಿನ ಮಂಗಳವಾರದ ಪಟ್ಟಿಯಲ್ಲಿ ಇದು ಇನ್ನೂ ಹೆಚ್ಚಾಗುತ್ತದೆ ಎಂದು ನಾವು ಈಗಾಗಲೇ ಹೇಳಿದ್ದೇವೆ” ಎಂದು ಹೇಳಿದರು. ಸುಮಾರು ಒಂದು ವಾರದ ಹಿಂದೆ, ಎನ್ಜಿಒ-ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ನಡೆಸುತ್ತಿರುವ ಈ ವಿಷಯವನ್ನು ಹಿರಿಯ ವಕೀಲ ಕಪಿಲ್ ಸಿಬಲ್ ಅವರು ನ್ಯಾಯಮೂರ್ತಿ ಖನ್ನಾ ನೇತೃತ್ವದ ನ್ಯಾಯಪೀಠದ ಮುಂದೆ ಉಲ್ಲೇಖಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಸಂದರ್ಭದಲ್ಲಿ, ನ್ಯಾಯಾಧೀಶರು ರೋಸ್ಟರ್ ಮತ್ತು ಪ್ರಕರಣಗಳನ್ನು ಪಟ್ಟಿ ಮಾಡುವ ವಿಧಾನವನ್ನು ಪರಿಗಣಿಸಿ ಮುಂದಿನ ವಾರ (ಅಂದರೆ…
ಬೆಂಗಳೂರು: ನಗರದಲ್ಲಿ ಇಂದು ಆರ್ ಎಸ್ ಎಸ್ ನಿಂದ ಆಯೋಜಿಸಲಾಗಿದ್ದಂತ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಮುಖಂಡರು ಆಕ್ಷೇಪಿಸಿದ್ದಾರೆ. ಹೀಗಾಗಿ ಸ್ಥಳದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾಗ್ವಾದ ನಡೆದು, ಬಿಗುವಿನ ವಾತಾವರಣದಿಂದ ಕೂಡಿದೆ. ಬೆಂಗಳೂರಿನ ವೈಯ್ಯಾಲಿ ಕಾವಲ್ ನಲ್ಲಿ ಇಂದು ಸಂಜೆ ಆರ್ ಎಸ್ ಎಸ್ ಸಂಸ್ಥಾಪಕ ಹೆಗ್ಡೆವಾರ್ ಅವರ ಜನ್ಮ ದಿನದ ನಿಮಿತ್ತ ಕಾರ್ಯಕ್ರಮ ಆಯೋಜಿಸಲಾಗಿತ್ತು. ವೈಯ್ಯಾಲಿಕಾವಲ್ ನಲ್ಲಿನ ಕರ್ನಲ್ ವಸಂತ್ ಕ್ರೀಡಾಂಗಣದಲ್ಲಿ ಇದಕ್ಕಾಗಿ ಸಿದ್ಧತೆ ಕೂಡ ಕೈಗೊಳ್ಳಲಾಗಿತ್ತು. ಇಂದು ದಿಢೀರ್ ಈ ಸ್ಥಳಕ್ಕೆ ತೆರಳಿದಂತ ಕಾಂಗ್ರೆಸ್ ಮುಖಂಡರು, ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಹೀಗೆ ಕಾರ್ಯಕ್ರಮ ಆಯೋಜಿಸುವುದು ಸರಿಯಲ್ಲ. ಮತದಾರರನ್ನು ಸೆಳೆಯೋದಕ್ಕೆ ಹೀಗೆ ಕಾರ್ಯಕ್ರಮ ಆಯೋಜಿಸಿರೋದಾಗಿ ಆಕ್ಷೇಪ ವ್ಯಕ್ತ ಪಡಿಸಿದರು. ಈ ವೇಳೆಯಲ್ಲಿ ಕಾಂಗ್ರೆಸ್ ಹಾಗೂ ಆರ್ ಎಸ್ ಎಸ್ ಮುಖಂಡರ ನಡುವೆ ವಾಗ್ವಾದವು ನಡೆಯಿತು. ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು, ಚುನಾವಣಾಧಿಕಾರಿಗಳು ಭೇಟಿ ನೀಡಿ, ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಇದೀಗ ಕಾಂಗ್ರೆಸ್ ಮುಖಂಡ ಆಕ್ಷೇಪದಿಂದಾಗಿ ಆರ್ ಎಸ್ ಎಸ್ ನಿಗದಿ ಮಾಡಿದ್ದಂತ…
ಬೆಂಗಳೂರು: ರಾಜಧಾನಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 60 ಕಿ.ಮೀ. ಆಸುಪಾಸಿನಲ್ಲಿ ತಮ್ಮ ಉದ್ಯಮ ಘಟಕ ಸ್ಥಾಪಿಸಲು 25 ಎಕರೆ ಭೂಮಿ ಅಗತ್ಯವಿದೆ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದ ಲೆನ್ಸ್ ಕಾರ್ಟ್ ಸಮೂಹದ ಮನವಿಗೆ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು ಕೇವಲ ಐದು ನಿಮಿಷಗಳಲ್ಲಿ ಸ್ಪಂದಿಸಿ, ಗಮನ ಸೆಳೆದಿದ್ದಾರೆ. ಲೆನ್ಸ್ ಕಾರ್ಟ್ ಉನ್ನತಾಧಿಕಾರಿ ಪೀಯೂಷ್ ಬನ್ಸಾಲ್ ಅವರು ‘ಎಕ್ಸ್’ನಲ್ಲಿ ತಮ್ಮ ಅಗತ್ಯದ ಬಗ್ಗೆ ಒಂದು ಪೋಸ್ಟ್ ಹಾಕಿದ್ದರು. ಅದರಲ್ಲಿ ಅವರು, ಯಾವುದಾದರೂ ಉದ್ಯಮ ಸಂಸ್ಥೆಗೆ ಜಮೀನು ಮಾರಾಟ ಮಾಡಲು ಆಸಕ್ತಿ ಇದ್ದರೆ ತಮಗೆ ಇ-ಮೇಲ್ ಕಳಿಸುವಂತೆ ಕೋರಿದ್ದರು. https://twitter.com/MBPatil/status/1777581857871433764?t=MVnmY8LQFF282w1t2Pp5dg&s=08 ಇದನ್ನು ಗಮನಿಸಿದ ಸಚಿವರು ಕೂಡಲೇ ಕಾರ್ಯಪ್ರವೃತ್ತರಾಗಿ, ‘ಕೈಗಾರಿಕಾ ಇಲಾಖೆಯು ನಿಮ್ಮ ಬೆಂಬಲಕ್ಕಿದ್ದು, ನಿಮ್ಮ ಅಗತ್ಯಗಳನ್ನೆಲ್ಲ ಪೂರೈಸಲಿದೆ. ನಮ್ಮ ಅಧಿಕಾರಿಗಳು ತಕ್ಷಣವೇ ನಿಮ್ಮನ್ನು ಸಂಪರ್ಕಿಸಲಿದ್ದಾರೆ. ನೀವು ಇರಬೇಕಾದ ಜಾಗ ಕರ್ನಾಟಕ!’ ಎಂದು ಮರುಪೋಸ್ಟ್ ಮಾಡಿ, ಭರವಸೆ ನೀಡಿದ್ದಾರೆ. ಜೊತೆಗೆ ಅಧಿಕಾರಿಗಳಿಗೆ ಅವರು ಅಗತ್ಯ ಸೂಚನೆಗಳನ್ನು ಸಹ ಕೊಟ್ಟಿದ್ದಾರೆ. ಸಚಿವರ ಈ…
ಮೈಸೂರು: ಬಾಲಿವುಡ್ ನಟ ಅಜಯ್ ದೇವಗನ್ ನಟನೆಯ ಮೈದಾನ್ ಸಿನಿಮಾ ಬಿಡುಗಡೆ ಸಂಕಷ್ಟ ಎದುರಾಗಿದೆ. ಏಪ್ರಿಲ್.11ರಂದು ತೆರೆ ಕಾಣಬೇಕಿದ್ದಂತ ಮೈದಾನ್ ಚಿತ್ರವು ಕಥೆ ಕದ್ದಂತ ಚಿತ್ರವಾಗಿದೆ ಎಂಬ ಕಾರಣಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿದೆ. ಬೋನಿ ಕಪೂರ್ ನಿರ್ಮಾಣದ, ಅಜಯ್ ದೇವಗನ್ ನಟನೆಯ ಮೈದಾನ್ ಚಿತ್ರ ಏಪ್ರಿಲ್ 11ರಂದು ದೇಶಾದ್ಯಂತ ರಿಲೀಸ್ ಆಗಬೇಕಿತ್ತು. ಆದ್ರೇ ತಮ್ಮ ಸಿನಿಮಾದ ಮೂಲ ಕತೆಯನ್ನು ಕದ್ದಿದ್ದಾರೆ ಎಂಬುದಾಗಿ ಮೈಸೂರಿನ ಸ್ಟೋರಿ ರೈಟರ್ ಅನಿಲ್ ಕುಮಾರ್ ಕೋರ್ಟ್ ಮೆಟ್ಟಿಲೇರಿದ್ದರು. ಮೈಸೂರು ನ್ಯಾಯಾಲಯದ ಮುಂದೆ ದೂರು ದಾರ ಅನಿಲ್ ಕುಮಾರ್, 2018ರ ಚಿತ್ರದ ಕತೆ ಬಗ್ಗೆ ಲಿಂಕ್ಡಿನ್ ನಲ್ಲಿ ಹಾಕಿದ್ದೆ. ಕಥೆ ಗಮನಿಸಿ ಸುಕ್ ದಾಸ್ ಸೂರ್ಯವಂಶಿ ಎಂಬುವರು ಚರ್ಚಿಸಿದ್ದರು. 2019ರ ಫೆಬ್ರವರಿಯಲ್ಲಿ ಹೆಸರು ಕೂಡ ನೋಂದಾಯಿಸಲಾಗಿತ್ತು. ನನ್ನ ಮೂಲ ಕತೆ ಕದ್ದು ಮೈದಾನ್ ಎಂದು ಹೆಸರಿಟ್ಟಿದ್ದಾರೆ. ಈ ಚಿತ್ರ ಬಿಡುಗಡೆ ತಡೆ ನೀಡುವಂತೆ ಮನವಿ ಮಾಡಿದ್ದರು. ದೂರುದಾರರ ಮನವಿ ಪುರಸ್ಕರಿಸಿರುವಂತ ಮೈಸೂರು ನ್ಯಾಯಾಲಯವು, ಅಮಿತ್ ಶರ್ಮಾ ನಿರ್ದೇಶನದ ಮೈದಾನ್…
ಹಾಸನ: ರಾಜ್ಯ ಸರ್ಕಾರಿ ನೌಕರರು ರಾಜಕೀಯ ಪಕ್ಷಗಳ ಪರವಾಗಿ ಸಂದೇಶಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಲಿದೆ. ಒಂದು ವೇಳೆ ಯಾವುದೇ ಪಕ್ಷದ ಪರವಾಗಿ ಸಂದೇಶವನ್ನು ಫಾರ್ವರ್ಡ್ ಮಾಡಿದ್ರೂ, ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಮುಂದೆ ಸುದ್ದಿ ಓದಿ. ಹಾಸನದ ಡಿಡಿಪಿಐ ಕಚೇರಿಯಲ್ಲಿ ಎಫ್ ಡಿಎ ಆಗಿ ಕಾರ್ಯ ನಿರ್ವಹಿಸುತ್ತಿದ್ದಂತ ಬಿ.ಹೆಚ್ ಮಂಜುನಾಥ್ ಎಂಬುವರು ಬಿಜೆಪಿ ಪರವಿದ್ದಂತ ಸಂದೇಶವೊಂದನ್ನು ಪ್ರೀತಂ ಜೆ ಗೌಡ ಹಾಸನ ಎಂಎಲ್ಎ ಎಂಬ ವಾಟ್ಸ್ ಆಪ್ ಗ್ರೂಪ್ ನಲ್ಲಿ ಶೇರ್ ಮಾಡಿದ್ದಾರೆ. ಹೀಗೆ ಸರ್ಕಾರಿ ಅಧಿಕಾರಿಯಾಗಿದ್ದೂ, ಬಿಜೆಪಿ ಪರವಾಗಿದ್ದಂತ ಸಂದೇಶ ಫಾರ್ವರ್ಡ್ ಮಾಡಿದ್ದಕ್ಕೆ ಮಂಜುನಾಥ್ ವಿರುದ್ಧ ನಾಗೇಂದ್ರ ಎಂಬುವರು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಹಾಸನ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರು ಬಿಹೆಚ್ ಮಂಜುನಾಥ್ ಅಮಾನತುಗೊಳಿಸಿ ಆದೇಶಿಸಿದ್ದಾರೆ. ಅಂದಹಾಗೇ 24 ಗಂಟೆಯೊಳಗೆ ಡಿಸಿಪಿಐಗೆ ಮಾಹಿತಿ ಒದಗಿಸಿ ಎಂದು ಎಡಿಸಿ ಶಾಂತಲಾ ಅವರು ಮಂಜುನಾಥ್ ಗೆ ನೋಟಿಸ್ ನೀಡಿದ್ದರು.…