Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಬೀದರ್ ಜಿಲ್ಲೆಯ ಬಿಜೆಪಿಯ ಹಿರಿಯ ಮುಖಂಡ, ಮಾಜಿ ಶಾಸಕ ರಮೇಶ ಕುಮಾರ ಪಾಂಡೆ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿದ್ದ ಅವರು 1999ರಿಂದ 2003ರವರೆಗೆ ಬೀದರ ಕ್ಷೇತ್ರದ ಶಾಸಕರಾಗಿ ಕೆಲಸ ಮಾಡಿದ್ದರು. ಬೀದರ ನಗರಸಭೆ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಜತೆಗೆ ಆರ್ಆರ್ಕೆ ಸಂಸ್ಥೆಯ ಅಧ್ಯಕ್ಷರಾಗಿ ಶೈಕ್ಷಣಿಕ ಅಭಿವೃದ್ಧಿಗೆ ಕೊಡುಗೆ ನೀಡಿದ್ದರು. ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ತಿಳಿಸಿದ್ದಾರೆ. ಅವರ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬಸ್ಥರು ಬಂಧುಮಿತ್ರರು ಹಾಗೂ ಅಭಿಮಾನಿಗಳಿಗೆ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ. https://kannadanewsnow.com/kannada/congress-will-win-20-seats-in-karnataka-in-lok-sabha-elections-siddaramaiah/ https://kannadanewsnow.com/kannada/private-bus-catches-fire-near-majestic-in-bengaluru/
ಕಲಬುರಗಿ: ಸಂಸದ ಉಮೇಶ ಜಾಧವ ಅವರ ಕಾರ್ಯವೈಖರಿ ವಿರುದ್ದ ಬಿಜೆಪಿ ಪಕ್ಷದ ಕಾರ್ಯಕರ್ತರೇ ‘ ಗೋಬ್ಯಾಕ್ ‘ ಅಭಿಯಾನ ಪ್ರಾರಂಭಿಸಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ದಿಗ್ಗಾಂವ ಜಿಲ್ಲಾ ಪಂಚಾಯತ ವ್ಯಾಪ್ತಿಯ ಅಳ್ಳೊಳ್ಳಿ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಸಂಸದರಾದ ನಂತರ ಜಾಧವ ಏನು ಕೆಲಸ ಮಾಡಿದ್ದೀರಿ ಪಟ್ಟಿ ಕೊಡಿ ಎಂದು ಅವರದೇ ಪಕ್ಷದ ಕಾರ್ಯಕರ್ತರು ಆಗ್ರಹಿಸುತ್ತಿದ್ದಾರೆ. ಆದರೆ ಜಾಧವ ಬಳಿ ಉತ್ತರವಿಲ್ಲ. ಆದರೆ, ನಾವು ನಿಮಗೆ ಭರವಸೆ ನೀಡಿದಂತೆ ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದೇವೆ ಜೊತೆಗೆ ರೂ 431 ಕೋಟಿ ವೆಚ್ಚದ ಕಾಮಗಾರಿಗಳನ್ನು ಈ ಗ್ರಾಮಕ್ಕೆ ತಂದು ನಿಮ್ಮ ಬಳಿ ಮತ ಕೇಳುತ್ತಿದ್ದೇವೆ. ಇದು ನಮ್ಮ ಬದ್ದತೆ ಎಂದರು. ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ಜೆಡಿಎಸ್ ನಾಯಕರಿಗೆ ಹೊಟ್ಟೆಯುರಿ ಶುರುವಾಗಿದೆ. ಹಾಗಾಗಿ ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದಾರೆ. ನೀವೆಲ್ಲ ದಾರಿ ತಪ್ಪಿದ್ದೀರಾ ? ಎಂದು ಮಹಿಳೆಯರಿಗೆ ಪ್ರಶ್ನಿಸಿದರು.…
ಕೋಲಾರ: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ 20 ಸ್ಥಾನಗಳನ್ನು ಈ ಚುನಾವಣೆಯಲ್ಲಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಹಾಗೂ ಜೆಡಿಎಸ್ ಅಪವಿತ್ರ ಮೈತ್ರಿಯನ್ನು ಮಾಡಿಕೊಂಡಿದ್ದಾರೆ. ಹೆಚ್ .ಡಿ. ದೇವೇಗೌಡ ಹಾಗೂ ಹೆಚ್ .ಡಿ.ಕುಮಾರಸ್ವಾಮಿಯವರು ಮೊನ್ನೆಯವರೆಗೂ ದ್ವೇಷದ ಪಕ್ಷ, ಕ್ರಿಮಿನಲ್ ಪಕ್ಷ, ನರೇಂದ್ರ ಮೋದಿ ಯವರು ಮತ್ತೆ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ, ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದಿದ್ದರು. ಈಗ ನರೇಂದ್ರ ಮೋದಿ ಯವರನ್ನು ಸೇರಿಕೊಂಡಿದ್ದಾರೆ. ದೇವೇಗೌಡರು ನರೇಂದ್ರ ಮೋದಿ ಯವರನ್ನು ಬಹಳ ಹೊಗಳುತ್ತಿದ್ದಾರೆ. ಅಲ್ಲದೆ ಚುನಾವಣೆಯಾದ ಮೇಲೆ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರ 5 ವರ್ಷ ಪೂರ್ಣಾವಧಿ ಮುಗಿಸಲಿದೆ ಕಾಂಗ್ರೆಸ್ ಸರ್ಕಾರ 5 ವರ್ಷ ಪೂರ್ಣಾವಧಿ ಮುಗಿಸಿ ಕೊಟ್ಟಿರುವ ಗ್ಯಾರಂಟಿಗಳನ್ನು ಈಡೇರಿಸಲಿದೆ ಎಂದರು. ಜನ ಕಾಂಗ್ರೆಸ್ ಪರವಾಗಿದ್ದಾರೆ ಎಂದು ಗೊತ್ತಾಗಿ ಸಹಿಸದೆ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ . ಇದು ಅವರ ಭ್ರಮೆ ಎಂದರು. ಜನ ಕಾಂಗ್ರೆಸ್ ಕೈಹಿಡಿಯಲ್ಲಿದ್ದಾರೆ ಕ್ರಿಮಿನಲ್ ಪಕ್ಷ ದ…
ಬೆಂಗಳೂರು: ಕಳೆದ ಹನ್ನೊಂದು ತಿಂಗಳುಗಳಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ನಂತರ ಯಾವುದೇ ಅಭಿವೃದ್ಧಿ ಕಾರ್ಯ ಆಗುತ್ತಿಲ್ಲ. ಮಾನ್ಯ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ 1,800 ಕೋಟಿ ರೂ ಅನುದಾನವನ್ನು ಮಂಡ್ಯದ ಅಭಿವೃದ್ಧಿಗೆ ನೀಡಿದ್ದಾರೆ. ಆದರೆ ಕಾಂಗ್ರೆಸ್ ಸರಕಾರ ಅಭಿವೃದ್ಧಿ ಶೂನ್ಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೇಳಿದರು. ಮಂಡ್ಯ ಲೋಕಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಎಚ್.ಡಿ ಕುಮಾರಸ್ವಾಮಿ ಅವರ ಪರವಾಗಿ ಕೆ.ಆರ್.ಪೇಟೆಯಲ್ಲಿ ಇಂದು ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರಕಾರ ಬಂದ ನಂತರ ಯಾವುದೇ ಅಭಿವೃದ್ಧಿ ಆಗುತ್ತಿಲ್ಲ. ಭೀಕರ ಬರಗಾಲ ಇದ್ದರೂ, 800ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡರೂ ಈ ಸರಕಾರಕ್ಕೆ ಕನಿಕರ ಬರುತ್ತಿಲ್ಲ ಎಂದು ಟೀಕಿಸಿದರು. ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗಿದ್ದಾಗ ರೈತರ ಸಾಲಮನ್ನಾ ಮಾಡಿದ್ದರು. ಹಿಂದೆ ಭೀಕರ ಪ್ರವಾಹ ಆದಾಗ ಬಿಎಸ್ವೈ ಅವರು ಉತ್ತರ ಕರ್ನಾಟಕದ ರೈತರಿಗೆ ನ್ಯಾಯ ಕೊಡುವ ಕೆಲಸ ಮಾಡಿದರು. ಮನೆ ಕಳೆದುಕೊಂಡ ರೈತರಿಗೆ 5 ಲಕ್ಷ ರೂ ಪರಿಹಾರ ಕೊಟ್ಟಿದ್ದರು. ಬಡ ರೈತರ…
ಬೆಂಗಳೂರು: ನಗರದ ಹೃದಯ ಭಾಗದಲ್ಲಿರುವಂತ ಮೆಜೆಸ್ಟಿಕ್ ಬಳಿಯಲ್ಲಿ ರಸ್ತೆ ಬದಿಯಲ್ಲಿ ಖಾಸಗಿ ಬಸ್ ಒಂದನ್ನು ಪಾರ್ಕ್ ಮಾಡಲಾಗಿತ್ತು. ಈ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡು ರಸ್ತೆಯಲ್ಲೇ ಹೊತ್ತಿ ಉರಿದಿದೆ. ಬೆಂಗಳೂರಿನ ಮೆಜೆಸ್ಟಿಕ್ ಬಳಿಯ ರಸ್ತೆಯಲ್ಲಿ ನಿಲ್ಲಿಸಿದ್ದಂತ ಖಾಸಗಿ ಬಸ್ ವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಧಗಧಗಿಸಿ ಹೊತ್ತಿ ಉರಿದಿದೆ. ಕೆಎ 22, ಬಿ 5235 ಎಂಬ ಸಂಖ್ಯೆ ಬಸ್ ಹೊತ್ತಿ ಉರಿದಿರೋದಾಗಿ ತಿಳಿದು ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸೋ ಕಾರ್ಯದಲ್ಲಿ ತೊಡಗಿದ್ದಾವೆ. ಬಸ್ ಗೆ ಬೆಂಕಿಯು ತಾಂತ್ರಿಕ ಕಾರಣದಿಂದ ಹೊತ್ತಿಕೊಂಡಿರಬಹುದು ಎನ್ನಲಾಗುತ್ತಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿ ನಿರೀಕ್ಷಿಸಲಾಗಿದೆ. https://kannadanewsnow.com/kannada/breaking-ec-stays-west-bengal-governors-visit-to-behar/
ಕೋಲಾರ: ಈ ಚುನಾವಣೆಯಲ್ಲಿ ದೇಶ, ಸಂವಿಧಾನ, ಪ್ರಜಾಪ್ರಭುತ್ವ ಉಳಿಯಬೇಕು. ಅದು ಉಳಿಯಲು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಅವರು ಇಂದು ಚೊಕ್ಕoಡಹಳ್ಳಿ ಗೇಟ್ ಮಾಲೂರು ತಾಲ್ಲೂಕು, ಕೋಲಾರ ಜಿಲ್ಲೆ ಇಲ್ಲಿ ಪ್ರಜಾಧ್ವನಿ -02 ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ತಮ್ಮ ಪಕ್ಷದ ಅಭ್ಯರ್ಥಿಯಾದ ಕೆವಿ ಗೌತಮ್ ಇವರ ಪರ ಮತಯಾಚನೆ ಮಾಡಿದ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಈ ಲೋಕಸಭಾ ಚುನಾವಣೆ ಬಹಳ ಮಹತ್ತರವಾದ ಚುನಾವಣೆ ಎಂದು ಭಾವಿಸಬೇಕು. ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಕಾಂಗ್ರೆಸ್ ಪಕ್ಷದ ವಿರುದ್ಧವಾಗಿ ಚುನಾವಣೆ ಎದುರಿಸುತ್ತಿದೆ. ಬಿಜೆಪಿಯವರು 28ಕ್ಕೆ 28 ಸ್ಥಾನಗಳನ್ನು ಗೆಲ್ಲು ವುದಾಗಿ ಹೇಳಿಕೊಳ್ಳುತ್ತಿದ್ದು, ಜೆಡಿಎಸ್ ಕೂಡ ಅದಕ್ಕೆ ಧ್ವನಿಗೂಡಿಸುತ್ತಿದೆ. ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಸೋಲುತ್ತದೆ ಎನ್ನುವ ಭಯದಿಂದ ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದೆ. ಜೆಡಿಎಸ್ ಕೂಡ ಕೋಲಾರ, ಮಂಡ್ಯ ಹಾಗೂ ಹಾಸನ ಸೇರಿ ಮೂರು ಸ್ಥಾನಗಳನ್ನು ಮಾತ್ರ…
ನವದೆಹಲಿ: 543 ಲೋಕಸಭಾ ಸ್ಥಾನಗಳಲ್ಲಿ ಏಪ್ರಿಲ್.19 ರಂದು ಮೊದಲ ಹಂತದಲ್ಲಿ 21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 102 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಈ ಮೊದಲ ಹಂತದ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬಿದ್ದಿದೆ. ಹೀಗಾಗಿ ಇನ್ಮುಂದೆ ಮನೆ ಮನೆ ಪ್ರಚಾರಕ್ಕೆ ಮಾತ್ರವೇ ಅವಕಾಶ ನೀಡಲಾಗಿದೆ. ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ರಾಜಕೀಯ ಪಕ್ಷಗಳ ಪ್ರಚಾರವು ಭರದಿಂದ ಸಾಗಿದ್ದು, ಕೇಂದ್ರದಲ್ಲಿ ಬಿಜೆಪಿ ಹ್ಯಾಟ್ರಿಕ್ ಅವಧಿಗೆ ಗೆಲ್ಲಲು ಪ್ರಯತ್ನಿಸುತ್ತಿದ್ದರೆ, ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಎನ್ಡಿಎಯ ದಶಕದ ಭದ್ರಕೋಟೆಯನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿವೆ. 543 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 19 ರಂದು ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 102 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಲೋಕಸಭಾ ಚುನಾವಣೆ-1: ಪ್ರಮುಖ ಕ್ಷೇತ್ರಗಳು ಲೋಕಸಭಾ ಚುನಾವಣೆಯ ಮೊದಲ ಹಂತದ ಪ್ರಮುಖ ಕ್ಷೇತ್ರಗಳು ಹೀಗಿವೆ: ಅಸ್ಸಾಂ: ದಿಬ್ರುಘರ್, ಸೋನಿತ್ಪುರ ತಮಿಳುನಾಡು: ಚೆನ್ನೈ ಉತ್ತರ, ಚೆನ್ನೈ ದಕ್ಷಿಣ, ಚೆನ್ನೈ ಸೆಂಟ್ರಲ್, ಕೊಯಮತ್ತೂರು, ತೂತುಕುಡಿ, ತಿರುನೆಲ್ವೇಲಿ,…
ಕೋಲಾರ: ಈ ಬಾರಿ ಬಿಜೆಪಿಯನ್ನು ಸೋಲಿಸಿದಾಗ ಮಾತ್ರ 2024 ರ ಲೋಕಸಭಾ ಚುನಾವಣೆಗೆ ಮಹತ್ವ ಬರುತ್ತದೆ. ಮೋದಿ ಅವರು ಎಲ್ಲಿ ಹೋದರು ಕಾಂಗ್ರೆಸ್ ಅನ್ನು ಬೈಯ್ಯುವ ಭಾಷಣ ಮಾಡುತ್ತಿದ್ದಾರೆ. ಕಳೆದ ಭಾನುವಾ ಮೈಸೂರಿನಲ್ಲಿ ಮೋದಿ ಅವರು 30 ನಿಮಿಷ ಭಾಷಣ ಮಾಡಿದರು. ಆದರಲ್ಲಿ 5 ನಿಮಿಷ ಮಾತ್ರ ಅವರು ಮಾಡಿರುವ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು. ಮಿಕ್ಕ 20 ನಿಮಿಷವನ್ನು ಕಾಂಗ್ರೆಸ್ ಬೈಯ್ಯುವುದಕ್ಕೆ ಮೀಸಲಿಟ್ಟರು. ಇದೇ ಮೋದಿ ಅವರ ಕೊಡುಗೆ ಎಂಬುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಕೋಲಾರದಲ್ಲಿ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ 2 ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದಂತ ಅವರು, ಮೋದಿ ಅವರು ಈ ಕರ್ನಾಟಕಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಮೊದಲು ಹೇಳಬೇಕು. ಬಿಜೆಪಿಯವರು ಮನೆ ಬಾಗಿಲಿಗೆ ಬಂದಾಗ ಜನ ಪ್ರಶ್ನೆ ಮಾಡಬೇಕು. ಬರ ಬಂದಾಗ, ನೆರೆ ಬಂದಾಗ, ತೆರಿಗೆ ಹಣ ಎಷ್ಟು ಕೊಟ್ಟಿದ್ದೀರಿ ಎಂದು ಕೇಳಬೇಕು ಎಂದರು. ಅನೇಕ ಅಂಕಿ- ಅಂಶಗಳನ್ನು ಸಿದ್ದರಾಮಯ್ಯ ಅವರು, ಸಚಿವ ಕೃಷ್ಣಬೈರೇಗೌಡರು, ಶಿವಕುಮಾರ್ ಕೇಂದ್ರ ಹಣಕಾಸು…
ಇನ್ನು ಜೀವನದಲ್ಲಿ ಕಷ್ಟಗಳು ಇದ್ದರೆ,ಶ್ರೀ ಆಂಜನೇಯ ಸ್ವಾಮಿಗೆ ಈ ರೀತಿಯಾಗಿ ಹರಕೆ ಮಾಡಿಕೊಂಡರೆ ,ಜೀವನದಲ್ಲಿ ಇರುವಂತಹ ಇಂತಹ ಕಷ್ಟಗಳುಇದು ಯಾವ ರೀತಿಯ ಕಷ್ಟವೇ ಆದರೂ ಸರಿ ಆಂಜನೇಯಸ್ವಾಮಿ ಕೃಪೆಯಿಂದ ಎಲ್ಲಾ ಕಷ್ಟಗಳು ಜೀವನದಲ್ಲಿ ಪರಿಹಾರವಾಗುತ್ತದೆ . ಪಂಡಿತ್ ವಿದ್ಯಾಧರ್ ನಕ್ಷತ್ರಿ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 9686268564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸೃಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಶ್ರೀ ವಿದ್ಯಾಧರ್ ನಕ್ಷತ್ರಿ ಪ್ರಧಾನ್ ತಾಂತ್ರಿಕ್ 9686268564 ಎಲ್ಲಾ ಸಂಕಷ್ಟಗಳು ದೂರವಾಗುವುದು ಖಚಿತ. ಸಾಕ್ಷಾತ್ ಶ್ರೀರಾಮ ಭಕ್ತ ಆಂಜನೇಯನ ಮಹಿಮೆಗಳು ಅಪಾರ. ನಂಬಿ…
ಗದಗ: ಏಪ್ರಿಲ್ 19 ರಂದು ಹಾವೇರಿ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಲಿದ್ದು, ಅಂದು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರಗಳಿಂದ ಸಾವಿರಾರು ಜನರು ಬರುವ ನಿರೀಕ್ಷೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಎಂಟು ಕ್ಷೇತ್ರದ ಜನರು ಕಾರ್ಯಕರ್ತರಿಗೆ ಬರಲು ಸೂಚನೆ ನೀಡಿದ್ದೇವೆ. ಸಾವಿರಾರು ಜನರು ಬರುತ್ತಾರೆ. ಅಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಪ್ರತಿಪಕ್ಷದ ನಾಯಕರಾದ ಆರ್. ಅಶೋಕ್, ಮಾಜಿ ಸಚಿವರಾರ ಬೈರತಿ ಬಸವರಾಜ, ಮುರುಗೇಶ್ ನಿರಾಣಿ ಬರುತ್ತಾರೆ ಎಂದರು. ಇದೇ ವೇಳೆ ಸಂಸದ ಕರಡಿ ಸಂಗಣ್ಣ ಬಿಜೆಪಿ ತೊರೆದಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಂಗಣ್ಣ ಅವರು ಕಾಂಗ್ರೆಸ್ ಸೇರ್ಪಡೆ ಆಗುತ್ತಿರುವುದು ದುರದುಷ್ಟಕರ, ನಾವು ಅವರ ಮನವೊಲಿಸುವ ಕೆಲಸ ಮಾಡಿದ್ದೇವು ಕಾಂಗ್ರೆಸ್ ನವರು ಅವರಿಗೆ ಪ್ರಚೋದನೆ ಮಾಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಟಿಕೆಟ್ ಸಿಗದವರು ಬೇಸರ ಮಾಡಿಕೊಳ್ಳುವುದು…