Author: kannadanewsnow09

ನವದೆಹಲಿ: ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳು ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದರು. ಈ ವೇಳೆ 18ನೇ ಲೋಕಸಭಾ ಚುನಾವಣೆಗೆ ಆಯ್ಕೆಯಾದಂತ ಸದಸ್ಯರ ಪಟ್ಟಿಯನ್ನು ಅವರಿಗೆ ಸಲ್ಲಿಸಿದ್ದಾರೆ. ಭಾರತದ ಮುಖ್ಯ ಚುನಾವಣಾ ಆಯುಕ್ತರಾದ ರಾಜೀವ್ ಕುಮಾರ್, ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಮತ್ತು ಡಾ. ಸುಖ್ಬೀರ್ ಸಿಂಗ್ ಸಂಧು ಅವರೊಂದಿಗೆ ಇಂದು ಸಂಜೆ 04.30 ಕ್ಕೆ ರಾಷ್ಟ್ರಪತಿಗಳನ್ನು ಭೇಟಿ ಮಾಡಿದರು. 1951ರ ಜನ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 73ರ ಪ್ರಕಾರ, 18ನೇ ಲೋಕಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಗಳ ನಂತರ ಸದನಕ್ಕೆ ಆಯ್ಕೆಯಾದ ಸದಸ್ಯರ ಹೆಸರುಗಳನ್ನು ಒಳಗೊಂಡ ಅಧಿಸೂಚನೆಯ ಪ್ರತಿಯನ್ನು ಅವರು ರಾಷ್ಟ್ರಪತಿಗಳಿಗೆ ಸಲ್ಲಿಸಿದರು. ಮಾನವ ಇತಿಹಾಸದ ಅತಿದೊಡ್ಡ ಪ್ರಜಾಪ್ರಭುತ್ವ ಪ್ರಕ್ರಿಯೆಯಾದ ಚುನಾವಣಾ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕಾಗಿ ರಾಷ್ಟ್ರಪತಿಗಳು ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರನ್ನು ಅಭಿನಂದಿಸಿದರು. ಇಡೀ ದೇಶದ ಪರವಾಗಿ, ಚುನಾವಣಾ ಆಯೋಗ, ಅದರ ಅಧಿಕಾರಿಗಳು ಮತ್ತು ಸಿಬ್ಬಂದಿ, ಪ್ರಚಾರ ಮತ್ತು ಮತದಾನದ ನಿರ್ವಹಣೆ ಮತ್ತು ಮೇಲ್ವಿಚಾರಣೆಯಲ್ಲಿ ತೊಡಗಿರುವ…

Read More

ಶಿವಮೊಗ್ಗ: ಮಾನವರಿಗೆ ಹೇಗೆ ಜೀವಿಸುವ ಹಕ್ಕಿದಿಯೋ ಹಾಗೆಯೇ ಮರ-ಗಿಡಗಳಿಗೂ ಜೀವಿಸುವ ಹಕ್ಕಿದ್ದು, ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕರಾದ ಬಿ ಹೆಚ್ ಕೃಷ್ಣಪ್ಪ ನುಡಿದರು. ಜೂ.5 ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಆವರಣದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಾನವ ಹಕ್ಕುಗಳ ಉಲ್ಲಂಘನೆಯಾದಲ್ಲಿ ನ್ಯಾಯಾಲಯದಲ್ಲಿ ದಾವೆ ಹಾಕುತ್ತೇವೆ. ಹಾಗೆಯೇ ಪರಿಸರ ಸಂರಕ್ಷಣೆ ಕಾರ್ಯವನ್ನು ನಮ್ಮಗಳ ಕರ್ತವ್ಯಗಳಲ್ಲಿ ಒಂದೆಂದು ಮಾಡಬೇಕು. ಪರಿಸರ ರಕ್ಷಿಸುವುದು ಸಮಾಜದ ಪ್ರತಿ ನಾಗರೀಕನ ಜವಾಬ್ದಾರಿಯಾಗಿದೆ. ಪ್ರಾಕೃತಿಕ ಸಂಪನ್ಮೂಲಗಳಾದ ನೆಲ, ಜಲ, ವಾಯುವನ್ನು ಶುದ್ಧವಾಗಿ ಸೇವಿಸುವ, ಸಂಸ್ಕರಿಸುವ ಹಾಗೂ ಮುಂದಿನ ಪೀಳಿಗೆಗೆ ವರ್ಗಾಯಿಸುವ ಮಹತ್ತರ ಜವಾಬ್ದಾರಿ ನಮ್ಮಗಳ ಮೇಲಿದೆ. ಪರಿಸರ ಸಂರಕ್ಷಣೆ ಕೇವಲ ಅರಣ್ಯ ಇಲಾಖೆಯ ಜವಾಬ್ದಾರಿ ಮಾತ್ರ ಆಗಿರದೇ ಭೂಮಿಯ ಮೇಲೆ ಜೀವಿಸುವ ಪ್ರತಿಯೊಬ್ಬ ಮಾನವನ ಕರ್ತವ್ಯ ಕೂಡ ಆಗಿದೆ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ನಿರೂಪಣಾಧಿಕಾರಿ ಡಾ.ಸಂತೋಷ್ ಕುಮಾರ್ ಮಾತನಾಡಿ ಇತ್ತೀಚಿನ…

Read More

ಬೆಂಗಳೂರು: 2024ನೇ ಜೂನ್ ತಿಂಗಳಲ್ಲಿ ನಡೆಯಲಿರುವಂತ ಎಸ್ ಎಸ್ ಎಲ್ ಸಿ ಪರೀಕ್ಷೆ-2ಕ್ಕೆ ಹಾಜರಾಗುತ್ತಿರುವ ವಿದ್ಯಾರ್ಥಿಗಳಿಗೆ ಅಂತಿಮ ಪ್ರವೇಶ ಪತ್ರವನ್ನು ವಿತರಣೆ ಮಾಡೋದಕ್ಕೆ ಪ್ರಾರಂಭಿಸಲಾಗಿದೆ ಅಂತ ಶಾಲಾ ಶಿಕ್ಷಣ ಇಲಾಖೆ ತಿಳಿಸಿದೆ. ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯ ಪರೀಕ್ಷೆಗಳ ನಿರ್ದೇಶಕರಾದಂತ ಹೆಚ್.ಎನ್ ಗೋಪಾಲಕೃಷ್ಣ ಸುತ್ತೋಲೆ ಹೊರಡಿಸಿದ್ದಾರೆ. ಅದರಲ್ಲಿ2024ನೇ ಜೂನ್ ಮಾಹೆಯಲ್ಲಿ ನಡೆಯುವ ಎಸ್.ಎಸ್.ಎಲ್.ಸಿ ಪರೀಕ್ಷೆ-2ಕ್ಕೆ ಹಾಜರಾಗುತ್ತಿರುವ ಗೈರು ಹಾಜರಾದ | ಪೂರ್ಣಗೊಳಿಸಲಾಗಿಲ್ಲದ [Not Completed] / ಹಿಂದಿನ ಸಾಲಿನಲ್ಲಿ ಅನುತ್ತೀರ್ಣರಾದ ಹಾಗೂ ಫಲಿತಾಂಶ ಉತ್ತಮಪಡಿಸಿಕೊಳ್ಳುವ ಅಭ್ಯರ್ಥಿಗಳ ಅಂತಿಮ ಪ್ರವೇಶ ಪತ್ರಗಳನ್ನು ದಿನಾಂಕ:06.06.2024 ರಂದು ಮಂಡಳಿಯ ಜಾಲತಾಣದ ಶಾಲಾ ಲಾಗಿನ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಶಾಲಾ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳ ಪ್ರವೇಶ ಪತ್ರಗಳನ್ನು ಮಂಡಳಿಯ ಜಾಲತಾಣದ ಶಾಲಾ ಲಾಗಿನ್ ಮೂಲಕ ಡೌನ್‌ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ವಿತರಿಸುವುದು ಅಂತ ತಿಳಿಸಿದ್ದಾರೆ. ಒಂದು ವೇಳೆ ಏನಾದರೂ ವ್ಯತ್ಯಯಗಳು ಕಂಡು ಬಂದಲ್ಲಿ ಕೂಡಲೇ ಮಂಡಳಿಯ ಸಂಬಂಧಿಸಿದ ಪರಿಶೀಲನಾ ಶಾಖೆಯ ಶಾಖಾಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಿಕೊಂಡು ವಿದ್ಯಾರ್ಥಿಗಳಿಗೆ ಸಕಾಲದಲ್ಲಿ…

Read More

ನವದೆಹಲಿ: ಲೋಕಸಭೆ ಚುನಾವಣೆ 2024 ಮತ್ತು ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಮತ್ತು ಸಿಕ್ಕಿಂ ರಾಜ್ಯಗಳ ರಾಜ್ಯ ವಿಧಾನಸಭೆಗಳಿಗೆ ಸಾರ್ವತ್ರಿಕ ಚುನಾವಣೆಗಳು ಮತ್ತು ಕೆಲವು ಉಪಚುನಾವಣೆಗಳಿಗಾಗಿ ವಿಧಿಸಲಾಗಿದ್ದಂತ ಮಾದರಿ ನೀತಿ ಸಂಹಿತೆಯನ್ನು ತೆಗೆದುಹಾಕಲಾಗಿದೆ ಅಂತ ಚುನಾವಣಾ ಆಯೋಗ ಆದೇಶದಲ್ಲಿ ತಿಳಿಸಿದೆ. ಇಂದು ಚುನಾವಣಾ ಆಯೋಗದ ಹಿರಿಯ ಪ್ರಧಾನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಿದ ದಿನಾಂಕದಿಂದ ಮಾದರಿ ನೀತಿ ಸಂಹಿತೆಯ ನಿಬಂಧನೆಗಳನ್ನು ಜಾರಿಗೆ ತರಲಾಗಿದೆ. ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಇದು ಜಾರಿಯಲ್ಲಿರುತ್ತದೆ ಎಂದು ಹೇಳಲು ನನಗೆ ನಿರ್ದೇಶಿಸಲಾಗಿದೆ ಎಂದಿದ್ದಾರೆ. ಈಗ, ಲೋಕಸಭೆ ಚುನಾವಣೆ 2024 ಮತ್ತು ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಮತ್ತು ಸಿಕ್ಕಿಂ ರಾಜ್ಯಗಳ ರಾಜ್ಯ ವಿಧಾನಸಭೆಗಳು ಮತ್ತು ಕೆಲವು ಉಪಚುನಾವಣೆಗಳಿಗೆ ಸಂಬಂಧಿಸಿದ ಫಲಿತಾಂಶಗಳನ್ನು ಆಯಾ ಚುನಾವಣಾಧಿಕಾರಿಗಳು ಘೋಷಿಸಿರುವುದರಿಂದ, ಕರ್ನಾಟಕದ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳನ್ನು ಹೊರತುಪಡಿಸಿ ಮಾದರಿ ನೀತಿ ಸಂಹಿತೆ ತಕ್ಷಣದಿಂದ ಜಾರಿಗೆ ಬರುವುದನ್ನು ನಿಲ್ಲಿಸಿದೆ ಎಂದು ತಿಳಿಸಿದ್ದಾರೆ. ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಂದ…

Read More

ಬೆಂಗಳೂರು: ಇಂದು ವಿಧಾನಪರಿಷತ್ತಿನ ಪದವೀಧರರು, ಶಿಕ್ಷಕರ ಕ್ಷೇತ್ರಗಳಿಗೆ ನಡೆದಿದ್ದಂತ ಚುನಾವಣೆಯ ಮತಏಣಿಕೆ ಕಾರ್ಯ ನಡೆಯಿತು. ಈ ಚುನಾವಣೆಯಲ್ಲಿ ನೈರುತ್ಯ ಶಿಕ್ಷಕರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಎಸ್.ಎಲ್ ಭೋಜೇಗೌಡ ಭರ್ಜರಿ ಗೆಲುವು ಸಾಧಿಸಿದ್ದಾರೆ. ನೈಋತ್ಯ ಶಿಕ್ಷಕರ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಭೋಜೇಗೌಡ ಗೆಲುವು ಸಾಧಿಸಿದ್ದಾರೆ. ಮೊದಲ ಪ್ರಾಶಸ್ತ್ಯ ಮತದಲ್ಲೇ ಎಸ್.ಎಲ್.ಭೋಜೇಗೌಡ ಗೆಲುವು ಸಾಧಿಸಿದ್ದಾರೆ. ಮತ ಎಣಿಕೆ ಪ್ರಕ್ರಿಯೆ ಸಂಪೂರ್ಣ ಮುಕ್ತಾಯಗೊಂಡಿದ್ದು, 5267 ಮತಗಳ ಭಾರಿ ಅಂತರದಿಂದ ಭೋಜೇಗೌಡ ಗೆಲುವು ಸಾಧಿಸಿದ್ದಾರೆ. ಒಟ್ಟು ಚಲಾವಣೆ ಆಗಿದ್ದ ಮತ 19479 ಆಗಿವೆ. ಕುಲಗೆಟ್ಟ ಮತಗಳ ಸಂಖ್ಯೆ 821, 18658 ಸಿಂಧು ಮತಗಳು ಆಗಿದ್ದಾವೆ. 9,330 ಖೋಟಾ ನಿಗಧಿಯಾಗಿತ್ತು. 9,829 ಮತಗಳ ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಎಸ್.ಎಲ್ ಭೋಜೇಗೌಡ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ. ಮಂಜುನಾಥ್ ಕುಮಾರ್ ಗೆ 4562 ಮತಗಳನ್ನು ಪಡೆದಿದ್ದಾರೆ. https://kannadanewsnow.com/kannada/readers-should-note-this-is-the-last-day-to-update-your-aadhaar-card-for-free/ https://kannadanewsnow.com/kannada/11-candidates-elected-unopposed-to-legislative-council-from-assembly-m-k-visalakshi/

Read More

ಬೆಂಗಳೂರು: ಉತ್ತರಾಖಂಡದಲ್ಲಿ ಹವಾಮಾನ ವೈಪರಿತ್ಯದಿಂದಾಗಿ ಹಿಮಪಾತ ಉಂಟಾದ ಪರಿಣಾಮ ಕರ್ನಾಟಕದಿಂದ ಚಾರಕ್ಕೆ ತೆರಳಿದ್ದಂತ 9 ಮಂದಿ ಸಾವನ್ನಪ್ಪಿದ್ದರು. 13 ಮಂದಿ ಬದುಕುಳಿದಿದ್ದರು. ಇವರು ಇಂದು ರಾತ್ರಿಯೇ ಬೆಂಗಳೂರಿಗೆ ವಾಪಾಸ್ ಆಗಲಿದ್ದಾರೆ. ಈ ಬಗ್ಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಮಾಹಿತಿ ಹಂಚಿಕೊಂಡಿದ್ದು, ಇಂದು ರಾತ್ರಿ 8:45 ಬದುಕುಳಿದವರು ಎಲ್ಲಾ 13 ಬದುಕುಳಿದವರು ಬ್ಲೋರ್ ವಿಮಾನ ನಿಲ್ದಾಣದ ಟರ್ಮಿನಲ್ 1 ಗೆ ಬರುತ್ತಿದ್ದಾರೆ ಎಂದಿದ್ದಾರೆ. ಇನ್ನೂ ಇಂದು ರಾತ್ರಿ ಅವರೊಂದಿಗೆ ಡೆಹ್ರಾಡೂನ್ ನಿಂದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಕೂಡ ವಾಪಾಸ್ ಆಗುತ್ತಿದ್ದಾರೆ. ನಾಳೆ ಮೃತರಾದಂತ 9 ಮಂದಿ ಮೃತದೇಹವು ಆಗಮಿಸೋ ನಿರೀಕ್ಷೆಯಿದೆ. https://kannadanewsnow.com/kannada/readers-should-note-this-is-the-last-day-to-update-your-aadhaar-card-for-free/ https://kannadanewsnow.com/kannada/bjp-mp-elect-kangana-ranaut-slapped-by-cisf-constable-at-mohali-airport/

Read More

ನವದೆಹಲಿ: ಇತ್ತೀಚೆಗೆ ಮಂಡಿ ಲೋಕಸಭಾ ಸ್ಥಾನವನ್ನು ಗೆದ್ದ ಬಾಲಿವುಡ್ ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರನೌತ್ ಅವರನ್ನು ಮೊಹಾಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ಹೋಲ್ಡ್ ಪ್ರದೇಶದಲ್ಲಿ ತಪಾಸಣೆ ನಡೆಸಿದ ನಂತರ ಸಿಐಎಸ್ಎಫ್ನ ಮಹಿಳಾ ಕಾನ್ಸ್ಟೇಬಲ್ ಕಪಾಳಮೋಕ್ಷ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ರೈತರ ಪ್ರತಿಭಟನೆಯ ಸಮಯದಲ್ಲಿ ಕಂಗನಾ ಪಂಜಾಬ್ನ ಮಹಿಳೆಯರ ವಿರುದ್ಧ ತಪ್ಪು ಕಾಮೆಂಟ್ಗಳನ್ನು ನೀಡಿದ್ದಾರೆ ಎಂದು ವಿಚಾರಣೆಯ ಸಮಯದಲ್ಲಿ ಕಾನ್ಸ್ಟೇಬಲ್ ಹೇಳಿದ್ದಾರೆ. https://twitter.com/theprayagtiwari/status/1798683682322227220 ಗೃಹ ಸಚಿವಾಲಯಕ್ಕೆ ದೂರು ನೀಡುವುದಾಗಿ ಕಂಗನಾ ಹೇಳಿದ್ದಾರೆ. https://kannadanewsnow.com/kannada/readers-should-note-this-is-the-last-day-to-update-your-aadhaar-card-for-free/ https://kannadanewsnow.com/kannada/11-candidates-elected-unopposed-to-legislative-council-from-assembly-m-k-visalakshi/

Read More

ಮಂಡ್ಯ : ಪ್ರಸಕ್ತ ಮುಂಗಾರಿನಲ್ಲಿ ಮದ್ದೂರು ತಾಲೂಕಿನಲ್ಲಿ ಉತ್ತಮವಾಗಿ ಮಳೆಯಾಗಿದ್ದು, ರೈತರು ಭೂಮಿ ಸಿದ್ಧತೆ ಕಾರ್ಯದಲ್ಲಿ ತೊಡಗಿದ್ದಾರೆ. ತಾಲೂಕಿನ ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಕೀಟನಾಶಕ ಮಾರಾಟಗಾರರು ಗುಣಮಟ್ಟದ ಕೃಷಿ ಪರಿಕರಗಳನ್ನು ಮಾರಾಟ ಮಾಡಬೇಕೆಂದು ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್ ಸೂಚನೆ ನೀಡಿದರು. ಮದ್ದೂರು ಪಟ್ಟಣದ ಕೃಷಿ ನಿರ್ದೇಶಕರ ಕಛೇರಿಯಲ್ಲಿ 2024-25 ನೇ ಸಾಲಿನ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಮಾರಾಟಗಾರರಿಗೆ ತರಭೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ಮುಂಗಾರು ಚುರುಕುಗೊಂಡಿದ್ದು, ರೈತರು ಜಮೀನುಗಳನ್ನು ಬಿತ್ತನೆ ಕಾರ್ಯಕ್ಕೆ ಸಿದ್ಧಗೊಳಿಸಿದ್ದು, ವಿವಿಧ ಬಿತ್ತನೆ ಬೀಜಗಳು ಹಾಗೂ ರಸಗೊಬ್ಬರ ಖರೀದಿಯಲ್ಲಿ ತೊಡಗಿದ್ದಾರೆ. ರೈತರಿಗೆ ಅವಶ್ಯಕವಿರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಕೊರತೆಯಾಗದಂತೆ ನಿರ್ವಹಿಸಬೇಕು. ಜಿಲ್ಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳಿಗೆ ಯಾವುದೇ ಕೊರತೆಯಿಲ್ಲ. ಹಾಗೂ ಅವುಗಳು ಅಗತ್ಯ ವಸ್ತು ಕಾಯ್ದೆಯಡಿ ಬರುವುದರಿಂದ ಅವುಗಳನ್ನು ಪಾರದರ್ಶಕವಾಗಿ ಮತ್ತು ಸಮರ್ಪಕವಾಗಿ ಸಮಗ್ರ ಪೋಷಕಾಂಶಗಳ ಬಳಕೆ ಬಗ್ಗೆ ರೈತರಿಗೆ ಒತ್ತು ನೀಡಿ ಮಾರಾಟ ಮಾಡುವುದರ…

Read More

ಚಂಡೀಗಢ: ನೂತನ ಸಂಸದೆಯಾದ ಕಂಗನಾ ರಾಣಾವತ್ ಅವರು ಭದ್ರತೆಯನ್ನು ಮೀರಿ ಮೊಬೈಲ್ ಕೈಯಲ್ಲೇ ಹಿಡಿದು ತೆರಳೋದಕ್ಕೆ ವಿಮಾನ ನಿಲ್ದಾಣದಲ್ಲಿ ಮುಂದಾಗಿದ್ದಾರೆ. ಈ ವೇಳೆ ಪೊಲೀಸ್ ಪೇದೆಯೊಂದಿಗೆ ಕಿರಿಕ್ ತೆಗೆದಿದ್ದಾರೆ. ಆ ಬಳಿಕ ವಾಗ್ವಾದ ನಡೆದಿದೆ. ಈ ವೇಳೆಯಲ್ಲಿ ನೂತನ ಸಂಸದೆ ಕಂಗನಾ ರಾಣಾವತ್ ಗೆ ಪೊಲೀಸ್ ಪೇದೆ ಕಪಾಳ ಮೋಕ್ಷ ಮಾಡಿರೋದಾಗಿ ತಿಳಿದು ಬಂದಿದೆ. ಬಾಲಿವುಡ್ ನಟಿ ಕಂಗನಾ ರನೌತ್ ಅವರಿಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಗೆ ಸೇರಿದ ಮಹಿಳಾ ಸಿಬ್ಬಂದಿ ಕಪಾಳಮೋಕ್ಷ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. https://twitter.com/theprayagtiwari/status/1798683682322227220 ಮೂಲಗಳ ಪ್ರಕಾರ, ಭದ್ರತಾ ತಪಾಸಣೆಯ ಸಮಯದಲ್ಲಿ ನಟ-ರಾಜಕಾರಣಿ ತನ್ನ ಫೋನ್ ಅನ್ನು ಟ್ರೇಯಲ್ಲಿ ಇಡಲು ನಿರಾಕರಿಸಿದ ನಂತರ ಭದ್ರತಾ ಸಿಬ್ಬಂದಿಯನ್ನು ತಳ್ಳಿದ್ದಕ್ಕಾಗಿ ಮಂಡಿಯಿಂದ ನಿಯೋಜಿತ ಸಂಸದರಿಗೆ ಭದ್ರತಾ ತಪಾಸಣೆಯಲ್ಲಿ ಕಪಾಳಮೋಕ್ಷ ಮಾಡಲಾಗಿದೆ. ಕಂಗನಾ ರನೌತ್ ಮಧ್ಯಾಹ್ನ 3 ಗಂಟೆಗೆ ವಿಸ್ತಾರಾ ವಿಮಾನದಲ್ಲಿ ದೆಹಲಿಗೆ ತೆರಳಿದರು. https://kannadanewsnow.com/kannada/b-nagendra-to-meet-cm-today-and-resign-from-ministers-post/ https://kannadanewsnow.com/kannada/readers-should-note-this-is-the-last-day-to-update-your-aadhaar-card-for-free/

Read More

ಬೆಂಗಳೂರು: ಇಂದು ಸಂಜೆ 7.30ಕ್ಕೆ ಸಿಎಂ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಲಿದ್ದೇನೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಪ್ರಕರಣ ಸಂಬಂಧ ಸ್ವ ಇಚ್ಛೆಯಿಂದ ಅವರಿಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತ ಪತ್ರವನ್ನು ಸಲ್ಲಿಸಲಿದ್ದೇನೆ ಎಂಬುದಾಗಿ ಸಚಿವ ಬಿ.ನಾಗೇಂದ್ರ ಘೋಷಣೆ ಮಾಡಿದರು. ಇಂದು ವಿಧಾನಸೌಧದ 3ನೇ ಮಹಡಿಯಲ್ಲಿರುವಂತ ಸಚಿವರ ಕೊಠಡಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಸಚಿವ ಬಿ.ನಾಗೇಂದ್ರ ಅವರು, ಈಗಾಗಲೇ ಕಳೆದ ಹತ್ತು ದಿನಗಳಿಂದ ಇವ್ತತು ನಿಗಮದ ಪ್ರಕರಣವನ್ನು ಅನೇಕ ರೀತಿಯಲ್ಲಿ ತೋರಿಸಲಾಗುತ್ತಿದೆ. ರಾಜ್ಯದ ಜನರಲ್ಲಿ ಆತಂಕದ ರೀತಿಯಲ್ಲಿ ತೋರಿಸಲಾಗುತ್ತಿದೆ. ವಿಪಕ್ಷಗಳು ಕಳೆದ 10 ದಿನಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಹೆಸರು ಕೆಡಿಸೋ ಕೆಲಸ ಮಾಡುತ್ತಿದ್ದಾವೆ ಎಂದರು. ಇವತ್ತು ನಿಗದಮಲ್ಲಿ ಆಗಿರುವಂತ ಅವ್ಯವಹಾರ ಸಂಬಂಧ ಎಂಡಿ ಹಾಗೂ ಇತರರನ್ನು ಎಸ್ಐಟಿ ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಲಾಗುತ್ತಿದೆ. ಪಕ್ಷದ ಎಲ್ಲಾ ನಾಯಕರ ಜೊತೆಗೆ ಚರ್ಚಿಸಲಾಗಿ, ಯಾರೂ ನನ್ನ ರಾಜೀನಾಮೆಗೆ ಒತ್ತಡ ಹಾಕಿರಲಿಲ್ಲ. ಇವತ್ತು ನಾನು ಸ್ವಇಚ್ಛೆಯಿಂದ ರಾಜೀನಾಮೆಗೆ ಮುಂದಾಗಿದ್ದೇನೆ ಎಂದರು. ಇಂದು ಸಂಜೆ 7.30ಕ್ಕೆ ಸಿಎಂ ಸಿದ್ಧರಾಮಯ್ಯ ಭೇಟಿಗೆ ಸಮಯಾವಕಾಶ…

Read More