Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ನಗರದಲ್ಲಿ ಭಾರೀ ಮಳೆಯಿಂದಾಗಿ ಬೃಹತ್ ಮರವೊಂದು ಮುರಿದು ಬಿದ್ದ ಪರಿಣಾಮ, 2 ಕಾರು, ಆಟೋವೊಂದು ಜಖಂಗೊಂಡಿರುವಂತ ಘಟನೆ ಕಮೀಷನರ್ ಕಚೇರಿಯ ಹಿಂಭಾಗದಲ್ಲೇ ನಡೆದಿದೆ. ಬೆಂಗಳೂರಿನ ನಗರ ಪೊಲೀಸ್ ಕಚೇರಿಯ ಹಿಂಭಾಗದಲ್ಲಿನ ಆಲಿ ಆಸ್ಕರ್ ರಸ್ತೆಯಲ್ಲಿ ರಸ್ತೆ ಬದಿಯಲ್ಲೇ ವಾಹನಗಳನ್ನು ಪಾರ್ಕ್ ಮಾಡಿ ಹೋಗಿದ್ದಂತ ವೇಳೆಯಲ್ಲಿ ಭಾರೀ ಮಳೆಯಿಂದಾಗಿ ಬೃಹತ್ ಮರವೊಂದು ಮುರಿದು ಬಿದ್ದಿದೆ. ಅದರ ಅಡಿಯಲ್ಲಿ ನಿಲ್ಲಿಸಿದ್ದ 2 ಕಾರುಗಳು ಜಖಂಗೊಂಡಿದ್ದಾವೆ. ಇನ್ನೂ ಅದೇ ರಸ್ತೆಯಲ್ಲಿ ಸಾಗುತ್ತಿದ್ದಂತ ಆಟೋ ಒಂದರ ಮೇಲೆಯೂ ಮರ ಮುರಿದು ಬಿದ್ದು, ಚಾಲಕ ಗಾಯಗೊಂಡಿರೋದಾಗಿ ಹೇಳಲಾಗುತ್ತಿದೆ. ಸ್ಥಳಕ್ಕೆ ಆಗಮಿಸಿದಂತ ಬಿಬಿಎಂಪಿಯ ಸಿಬ್ಬಂದಿಗಳು ಮರವನ್ನು ತೆರವುಗೊಳಿಸಿ ವಾಹನಗಳನ್ನು ಹೊರತೆಗೆದಿದ್ದಾರೆ. https://kannadanewsnow.com/kannada/death-toll-in-wayanad-tragedy-rises-to-254-192-missing-1592-rescued/ https://kannadanewsnow.com/kannada/sslc-exam-3-to-begin-from-october-2-97933-students-to-register/
ಕೇರಳ: ವಯನಾಡಿನಲ್ಲಿ ಸಂಭವಿಸಿದಂತ ಭೂ ಕುಸಿತ ದುರಂತದಲ್ಲಿ ಮೃತರ ಸಂಖ್ಯೆ 254ಕ್ಕೆ ಏರಿಕೆಯಾಗಿದೆ. ಈವರೆಗೆ 192 ಮಂದಿ ನಾಪತ್ತೆಯಾಗಿದ್ದರೇ, 1,592 ಜನರನ್ನು ರಕ್ಷಣೆ ಮಾಡಲಾಗಿದೆ. ದೇವರ ನಾಡಲ್ಲಿ ಭೀಕರ ಭೂಕುಸಿತಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ವಯನಾಡಿನಲ್ಲಿ ಸಂಭವಿಸಿದಂತ ಭೂ ಕುಸಿತದಲ್ಲಿ ಈವರೆಗೆ 254 ಜನರು ಸಾವನ್ನಪ್ಪಿದ್ದಾರೆ. 192 ಮಂದಿ ನಾಪತ್ತೆಯಾಗಿದ್ದು, ಭೂಕುಸಿತದಲ್ಲಿ ಸಿಲುಕಿದ್ದಂತ 1,592 ಜನರನ್ನು ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. 8 ಸಾವಿರಕ್ಕೂ ಹೆಚ್ಚು ಜನರು ಕಾಳಜಿ ಕೇದ್ರ ಸ್ಥಾಳಂತರಿಸಲಾಗಿದೆ. 3,332 ಪುರುಷರು ಹಾಗೂ 3398 ಮಂದಿ ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ. 82 ನಿರಾಶ್ರಿತರ ಶಿಬಿರವನ್ನು ತೆರೆಯಲಾಗಿದೆ. 8 ಕ್ಯಾಂಪ್ ಅನ್ನು ಚೋರ್ ಮಂಡಲಾದಲ್ಲಿ ಓಪನ್ ಮಾಡಲಾಗಿದೆ. ಈವರೆಗೆ 1884 ಮಕ್ಕಳನ್ನು ರಕ್ಷಿಸಲಾಗಿದ್ದು, ಅವರನ್ನು ಕಾಳಜಿ ಕೇಂದ್ರಗಳಲ್ಲಿ ಇರಿಸಲಾಗಿದೆ. ಗುಡ್ಡ ಕುಸಿತದಲ್ಲಿ ಸಂತ್ರಸ್ತರಾದಂತವರಿಗೆ ಅಗತ್ಯ ಸಾಮಗ್ರಿಗಳನ್ನು ಒದಗಿಸುವಂತ ವ್ಯವಸ್ಥೆಯನ್ನು ಕೇರಳ ಸರ್ಕಾರ, ಹೊರ ರಾಜ್ಯಗಳು ಮಾಡುತ್ತಿದ್ದಾವೆ. https://kannadanewsnow.com/kannada/journalists-should-not-forget-their-personal-lives-in-the-rush-of-news-belur-gopalakrishna/ https://kannadanewsnow.com/kannada/sslc-exam-3-to-begin-from-october-2-97933-students-to-register/
ಶಿವಮೊಗ್ಗ: ಅನೇಕ ಪತ್ರಕರ್ತರು ಸುದ್ದಿಯ ಧಾವಂತದಲ್ಲಿ ತಮ್ಮ ವೈಯಕ್ತಿಕ ಬದುಕನ್ನೇ ಮರೆಯುತ್ತಾರೆ. ಆದರೇ ಅದು ಆಗಬಾರದು. ಸುದ್ದಿಯ ಧಾವಂತದಲ್ಲಿ ಯಾವತ್ತೂ ಪತ್ರಕರ್ತರು ವೈಯಕ್ತಿಕ ಬದುಕನ್ನು ಮರೆಯಬಾರದು ಎಂಬುದಾಗಿ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಕಿವಿಮಾತು ಹೇಳಿದರು. ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿನ ಸಾಗರ ತಾಲ್ಲೂಕು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದಂತ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿ ಮಾತನಾಡುತ್ತಾ, ಬಹುತೇಕ ಪತ್ರಕರ್ತರು ಸವಾಲುಗಳ ಜೊತೆಗೆ ಬದುಕುತ್ತಿದ್ದಾರೆ. ಅವರ ಬದುಕು ಹೂವಿನ ಹಾಸಿಗೆಯಾಗಿಲ್ಲ ಅಂತ ಹೇಳಿದರು. ನಾನು ಪತ್ರಕರ್ತರ ಪರವಾಗಿ ಸರ್ಕಾರದ ಮಟ್ಟದಲ್ಲಿ ಕೆಲಸ ಮಾಡುತ್ತೇನೆ. ಅವರಿಗೆ ಉಚಿತ ಸಾರಿಗೆ ಬಸ್ ಪಾಸ್, ಆರೋಗ್ಯ ವಿಮೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಿಕೊಡುವ ಕೆಲಸವನ್ನು ಸರ್ಕಾರದ ಮಟ್ಟದಲ್ಲಿ ನಿಂತು ನಿಮ್ಮ ಪರವಾಗಿ ಮಾಡುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಪ್ರಸ್ತುತದ ವೇಳೆಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳ ಪಾತ್ರ ಕುರಿತಂತೆ ಹಿರಿಯ ನ್ಯಾಯವಾದಿ ಎಂ.ರಾಘವೇಂದ್ರ ಅವರು ಉಪನ್ಯಾಸ ನೀಡಿದರು. ಮಾಧ್ಯಮಗಳು ಆಳುವ…
ಬೆಂಗಳೂರು: ಎಸ್ ಎಸ್ ಎಲ್ ಸಿ ಪರೀಕ್ಷೆ-3 ಆಗಸ್ಟ್.2ರಿಂದ ಆರಂಭಗೊಳ್ಳಲಿದೆ. ಈ ಪರೀಕ್ಷೆಗೆ ರಾಜ್ಯಾಧ್ಯಂತ 97,933 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಈ ಕುರಿತಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಮಾಹಿತಿ ನೀಡಿದ್ದು, ಎಸ್.ಎಸ್.ಎಲ್.ಸಿ ಪರೀಕ್ಷೆ-3ನ್ನು ದಿನಾಂಕ:02-08-2024 ರಿಂದ ದಿನಾಂಕ:09-08-2024 ರವರೆಗೆ ನಡೆಸಲು ಉದ್ದೇಶಿಸಲಾಗಿದೆ ಎಂದಿದೆ. ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳ 97,933 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿರುತ್ತಾರೆ. ಇದರಲ್ಲಿ 67,716 ಬಾಲಕರು ಮತ್ತು 30,217 ಬಾಲಕಿಯರು ಸೇರಿರುತ್ತಾರೆ ಎಂದು ತಿಳಿಸಿದೆ. ಒಟ್ಟು ನೋಂದಣಿಯಲ್ಲಿ 459 ವಿದ್ಯಾರ್ಥಿಗಳು ಫಲಿತಾಂಶ ವೃದ್ಧಿಗಾಗಿ ಪರೀಕ್ಷೆ ತೆಗೆದುಕೊಂಡಿರುತ್ತಾರೆ. ರಾಜ್ಯದ 410 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಏಳು ಮಾಧ್ಯಮಗಳಲ್ಲಿ ಪರೀಕ್ಷೆ ಬರೆಯಲು ಅವಕಾಶವಿದೆ ಎಂದಿದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ಕೇಂದ್ರದ ಮುಖ್ಯಸ್ಥರು, ಪ್ರಶ್ನೆ ಪತ್ರಿಕೆ ಅಭಿರಕ್ಷಕರು, ಸ್ಥಾನಿಕ ಜಾಗೃತ ದಳದವರು ಹಾಗೂ ಕೊಠಡಿ ಮೇಲ್ವಿಚಾರಕರು ಕರ್ತವ್ಯ ನಿರ್ವಹಿಸುತ್ತಾರೆ ಎಂದು ಮಾಹಿತಿ ನೀಡಿದೆ. ಜಿಲ್ಲಾ ಮತ್ತು ತಾಲ್ಲೂಕು ಹಂತಗಳ ವಿಚಕ್ಷಣ ದಳಗಳು ಪರೀಕ್ಷಾ ಸಂದರ್ಭದಲ್ಲಿ ಕಾರ್ಯ…
ನವದೆಹಲಿ: ಬಿಜು ಜನತಾದಳದ ಸಂಸದೆ ಮಮತಾ ಮಹಾಂತ ಅವರು ತಮ್ಮ ಅಧಿಕಾರಾವಧಿ ಪೂರ್ಣಗೊಳ್ಳುವ ಎರಡು ವರ್ಷಗಳ ಮೊದಲು ಬುಧವಾರ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಒಡಿಶಾದ ಮಯೂರ್ಭಂಜ್ನ ನಾಯಕಿ ಕೂಡ ಪ್ರಾದೇಶಿಕ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಬಿಜೆಡಿ ತನ್ನ ದಾಳಿಯನ್ನು ತೀವ್ರಗೊಳಿಸಿರುವ ಸಮಯದಲ್ಲಿ ಅವರ ಪಕ್ಷದ ಸಹೋದ್ಯೋಗಿಗಳು ಈ ಕ್ರಮವನ್ನು “ಹಠಾತ್ ಮತ್ತು ಅನಿರೀಕ್ಷಿತ” ಎಂದು ಕರೆದಿದ್ದಾರೆ. ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಡಿ ಸೋಲಿನ ನಂತರ, ಪ್ರಾದೇಶಿಕ ಪಕ್ಷವು ಕೇಂದ್ರದಲ್ಲಿ ಎನ್ಡಿಎ ಸರ್ಕಾರಕ್ಕೆ “ವಿಷಯಾಧಾರಿತ ಬೆಂಬಲ” ನೀಡುವುದನ್ನು ನಿಲ್ಲಿಸುವುದಾಗಿ ಮತ್ತು ಸಂಸತ್ತಿನಲ್ಲಿ “ಬಲವಾದ ಮತ್ತು ರೋಮಾಂಚಕ” ಪ್ರತಿಪಕ್ಷವಾಗುವುದಾಗಿ ಘೋಷಿಸಿತ್ತು. ಇದು ಏಕಕಾಲಿಕ ಚುನಾವಣೆಗಳಲ್ಲಿನ ಸೋಲಿಗೆ ಮುಂಚಿತವಾಗಿ ತನ್ನ ನಿಲುವಿನಿಂದ ನಿರ್ಗಮಿಸುತ್ತದೆ. ಮೇಲ್ಮನೆಗೆ ಮಹಾಂತ ಅವರ ರಾಜೀನಾಮೆಯನ್ನು ಘೋಷಿಸಿದ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್, ಈ ಸಂಬಂಧ ಮಮತಾ ಅವರಿಂದ ಪತ್ರ ಬಂದಿದೆ ಎಂದು…
ಬೆಂಗಳೂರು: ಸಿಎಂ ಸಿದ್ಧರಾಮಯ್ಯ ಅವರ ವಿರುದ್ಧ ಮುಡಾ ಹಗರಣ ಸಂಬಂಧ ಖಾಸಗಿ ದೂರು ದಾಖಲಾಗಿದೆ. ಈ ಹಿನ್ನಲೆಯಲ್ಲಿ ಮುಡಾ ಅಕ್ರಮ ಸಂಬಂಧ ಸಿಎಂ ಸಿದ್ಧರಾಮಯ್ಯ ವಿರುದ್ಧದ ಖಾಸಗಿ ದೂರಿನ ಬಗ್ಗೆ ವರದಿ ನೀಡುವಂತೆ ರಾಜ್ಯಪಾಲರು ಸರ್ಕಾರಕ್ಕೆ ಸೂಚಿಸಿದ್ದಾರೆ. ಈ ಸಂಬಂಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ ಎನ್ನಲಾಗುತ್ತಿದೆ. ಸಿಎಸ್ ಅವರಿಗೆ ನಿರಂತವಾಗಿ ವರದಿಯನ್ನು ಕೇಳುತ್ತಿದ್ದರೂ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮಾತ್ರ ಒಂದು ಬಾರಿಗೆ ಮಾತ್ರವೇ ಅವರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಇಷ್ಟಕ್ಕೇ ಸುಮ್ಮನಾಗದಂತ ರಾಜ್ಯಪಾಲರು ಹೆಚ್ಚಿನ ವಿವರಗಳೊಂದಿಗೆ ಮುಡಾ ಅಕ್ರಮದ ಸಂಬಂಧ ಸಿಎಂ ಸಿದ್ಧರಾಮಯ್ಯ ಅವರ ವಿರುದ್ಧ ದಾಖಲಾಗಿರುವಂತ ಖಾಸಗಿ ದೂರಿನ ಸಂಬಂಧ ವರದಿ ನೀಡುವಂತೆ ಸಿಎಸ್ ಅವರಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಅಂದಹಾಗೇ ರಾಜ್ಯ ವಿಧಾನಮಂಡಲದ ಅಧಿವೇಶನದ ವೇಳೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ರಾಜ್ಯಪಾಲ ಥಾವರ್ ಚಂದ್ ಹೆಗ್ಲೋಟ್ ಅವರಿಗೆ ಒಂದು ಬಾರಿಗೆ ಮುಡಾ ಅಕ್ರಮ ಸಂಬಂಧ ಸಿಎಂ…
ಬೆಂಗಳೂರು: ನಾಳೆ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಸಿಎಂ ಸಿದ್ಧರಾಮಯ್ಯ ಅವರು ಹೊರಗುಳಿಯಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈ ವೇಳೆಯಲ್ಲೇ ಸಿಎಂ ಸಿದ್ಧರಾಮಯ್ಯ ವಿರುದ್ಧ ರಾಜ್ಯಪಾಲರು ಕ್ರಮ ಕೈಗೊಳ್ಳದಂತೆ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯವನ್ನು ಕೈಗೊಳ್ಳುವ ಸಾಧ್ಯತೆ ಇದೆ. ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ನಾಳೆ ರಾಜ್ಯ ಸಚಿವ ಸಂಪುಟ ಸಭೆ ನಿಗದಿಯಾಗಿತ್ತು. ಈ ಸಭೆಯಲ್ಲಿ ಸಿದ್ಧರಾಮಯ್ಯ ಭಾಗಿಯಾಗುತ್ತಿಲ್ಲ. ಅವರು ಹೊರಗೆ ಉಳಿಯಲಿದ್ದಾರೆ ಎನ್ನಲಾಗುತ್ತಿದೆ. ನಾಳೆಯ ಸಚಿವ ಸಂಪುಟ ಜವಾಬ್ದಾರಿಯನ್ನು ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ನೀಡಿದ್ದು, ಅವರ ನೇತೃತ್ವದಲ್ಲಿಯೇ ರಾಜ್ಯಪಾಲರು ಸಿಎಂ ಸಿದ್ಧರಾಮಯ್ಯ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳದಂತೆ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. https://kannadanewsnow.com/kannada/breaking-congress-moves-adjournment-motion-against-pm-modi-for-praising-anurags-caste-remark/ https://kannadanewsnow.com/kannada/breaking-rs-2-5-lakh-compensation-to-those-who-lost-their-houses-in-floods-new-house-to-be-given-to-them-minister-krishna-byre-gowda/
ಪ್ಯಾರಿಸ್ : ಪ್ಯಾರಿಸ್ ಒಲಿಂಪಿಕ್ಸ್ ಶುರುವಾದ ಕೆಲವೇ ದಿನಗಳಲ್ಲಿ ಭಾರತವು ಎರಡು ಪದಕಗಳನ್ನು ಗೆಲ್ಲುವ ಮೂಲಕ ಉತ್ತಮ ಆರಂಭವನ್ನು ಮಾಡಿದೆ. ಭಾರತೀಯ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಡಿ ಲಾ ವಿಲೆಟ್ ಪಾರ್ಕ್‌ನಲ್ಲಿರುವ ಇಂಡಿಯಾ ಹೌಸ್‌ಗೆ ಆಗಮಿಸುತ್ತಿದ್ದು, ಅಲ್ಲಿ ಅವರಿಗೆ ಆತ್ಮೀಯ ಸ್ವಾಗತ ನೀಡಲಾಗುತ್ತಿದೆ. ಕಂಚಿನ ಪದಕ ವಿಜೇತ ಸರಬ್ಜೋತ್ ಸಿಂಗ್, ರೋಹನ್ ಬೋಪಣ್ಣ, ಶರತ್ ಕಮಲ್, ಮನಿಕಾ ಬಾತ್ರಾ ಮತ್ತು ಅರ್ಜುನ್ ಬಾಬುತಾ ಅವರಂತಹ ಭಾರತದ ಅಗ್ರಗಣ್ಯ ಕ್ರೀಡಾಪಟುಗಳನ್ನು ಇಂಡಿಯಾ ಹೌಸ್‌ನಲ್ಲಿ ಸನ್ಮಾನಿಸಲಾಯಿತು. ಅಥ್ಲೀಟ್‌ಗಳನ್ನು ಆತ್ಮೀಯವಾಗಿ ಭೇಟಿ ಮಾಡಿದ ಐಒಸಿ ಸದಸ್ಯೆ ಮತ್ತು ರಿಲಯನ್ಸ್ ಫೌಂಡೇಷನ್‌ನ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಮಾತನಾಡಿ , “ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ನಿರ್ಮಿಸಲಾದ ಇಂಡಿಯಾ ಹೌಸ್‌ಗೆ ಸುಸ್ವಾಗತ. ಭಾರತವನ್ನು ಪ್ರತಿನಿಧಿಸುವ ಅನೇಕ ಭಾರತೀಯ ಕ್ರೀಡಾಪಟುಗಳು ಇಂದು ಇಲ್ಲಿದ್ದಾರೆ. ನಿಮ್ಮಲ್ಲಿನ ಪ್ರತಿಯೊಬ್ಬರೂ ನಮ್ಮ ತಲೆ ಗರ್ವದಿಂದ ಎತ್ತುವಂತೆ ಮಾಡಿದ್ದೀರಿ. ಪದಕ ಗೆದ್ದು, ನಮ್ಮನ್ನು ಗೌರವ ದೊರೆಯುವಂತೆ ಮಾಡಿದ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್…
ಕೇರಳ: ವಯನಾಡಲ್ಲಿ ಭೀಕರ ಭೂ ಕುಸಿತಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಇದೀಗ ಸಿಕ್ಕ ಅಂಕಿ ಅಂಶದಂತೆ ಕೇರಳದ ವಯನಾಡಲ್ಲಿ 246 ಮಂದಿ ಸಾವನ್ನಪ್ಪಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಕೇರಳದ ಚೂರಲ್ಮಾಲಾ ಮತ್ತು ಮುಂಡಕ್ಕೈನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 246ಕ್ಕೆ ತಲುಪಿದೆ. ಭೂಕುಸಿತದಲ್ಲಿ ಇಡೀ ಮುಂಡಕ್ಕೈ ಗ್ರಾಮ ಕೊಚ್ಚಿ ಹೋಗಿದೆ. ಇಂದು ಮುಂಜಾನೆ ಈ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆಗಳು ಪ್ರಾರಂಭವಾದವು, ಆದರೆ ರಕ್ಷಣಾ ನಿರ್ವಾಹಕರು ತುರ್ತು ಸಮಯದಲ್ಲೂ ಚೂರಲ್ಮಾಲಾದಿಂದ ಮುಂಡಕ್ಕೈವರೆಗಿನ ಪ್ರದೇಶಗಳನ್ನು ತಲುಪಲು ಸಾಧ್ಯವಾಗಲಿಲ್ಲ. ಅಧಿಕಾರಿಗಳ ವಾಹನಗಳು ಸೇರಿದಂತೆ ಅನೇಕರ ವಾಹನಗಳನ್ನು ಇಲ್ಲಿಗೆ ಹೋಗುವ ರಸ್ತೆಯಲ್ಲಿ ನಿಲ್ಲಿಸಲಾಗಿದೆ. ಈ ರೀತಿ ವಾಹನಗಳನ್ನು ನಿಲ್ಲಿಸದಂತೆ ಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ ಸೂಚಿಸಿದ್ದಾರೆ. 14 ಕಿ.ಮೀ ದಾಟಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಬುಧವಾರ ಬೆಳಿಗ್ಗೆ ಚೂರಲ್ಮಾಲಾದಿಂದ ಒಂಬತ್ತು ಶವಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುಂಡಕ್ಕೈನಲ್ಲಿ ಈಗ ಕೇವಲ 30 ಮನೆಗಳು ಮಾತ್ರ ಉಳಿದಿವೆ. ವಿಪತ್ತು ಪ್ರದೇಶದಲ್ಲಿ ಸುಮಾರು 500 ಮನೆಗಳು ಇದ್ದವು. 225 ಜನರನ್ನು ಕಂಡುಹಿಡಿಯಬೇಕಾಗಿದೆ ಎಂದು ಕಂದಾಯ ಇಲಾಖೆ…
ಬೆಂಗಳೂರು: ರಾಜ್ಯದಲ್ಲಿ ಅಪಾರ ಪ್ರಮಾಣದಲ್ಲಿ ಬಂಡವಾಳ ಹೂಡಿ, 30 ವರ್ಷಗಳಿಂದಲೂ ಇಲ್ಲಿ ನೆಲೆಯೂರಿರುವ ಟೊಯೋಟಾ ಕಂಪನಿಯ ಹೂಡಿಕೆ ಎಂದಿನಂತೆ ಮುಂದುವರಿಯಲಿದೆ. ಅದು ಮಹಾರಾಷ್ಟ್ರದಲ್ಲೂ ಹೂಡಿಕೆ ಮಾಡುತ್ತಿರುವುದನ್ನು ಬೇರೆ ದೃಷ್ಟಿಯಿಂದ ನೋಡುವ ಅಗತ್ಯವಿಲ್ಲ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ‘ಟೊಯೋಟಾ ಕಂಪನಿಯು ಮಹಾರಾಷ್ಟ್ರದಲ್ಲಿ ಹೆಚ್ಚುವರಿ ಹೂಡಿಕೆ ಮಾಡಬಹುದು. ನಮ್ಮಲ್ಲಿ ಹೂಡಿಕೆ ಮಾಡಿದ ಮಾತ್ರಕ್ಕೆ ಅವರು ಇನ್ನೊಂದು ಕಡೆ ಬಂಡವಾಳ ಹೂಡಬಾರದು ಎಂದೇನಿಲ್ಲ. ಆದರೆ ರಾಜ್ಯದಲ್ಲಿ ಆ ಕಂಪನಿಯ ಹೂಡಿಕೆ ಎಂದಿನಂತೆಯೇ ಮುಂದುವರಿದುಕೊಂಡು ಹೋಗಲಿದೆ’ ಎಂದಿದ್ದಾರೆ. ಟೊಯೋಟಾ ಕಂಪನಿಯು 2023ರಲ್ಲಿ 3,300 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಬಿಡದಿಯಲ್ಲಿ ತನ್ನ ಮೂರನೇ ಕಾರು ತಯಾರಿಕೆ ಘಟಕ ತೆರೆಯಲು ರಾಜ್ಯ ಸರಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ. 2022ರಲ್ಲಿ ಅದು ನಮ್ಮಲ್ಲಿ 4,100 ಕೋಟಿ ರೂಪಾಯಿ ಹೂಡಿದೆ. ಅದರ ಕೇಂದ್ರ ಕಚೇರಿ ಮತ್ತು ಸಂಶೋಧನಾ ಕೇಂದ್ರಗಳು ನಮ್ಮಲ್ಲೇ ಇವೆ ಎಂದು ಅವರು ಹೇಳಿದ್ದಾರೆ.…