Subscribe to Updates
Get the latest creative news from FooBar about art, design and business.
Author: kannadanewsnow09
ಧಾರವಾಡ: ಜಿಲ್ಲೆಯಲ್ಲಿ ಮನೆಯಲ್ಲಿನ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ನಾಲ್ವರು ಗಂಭೀರವಾಗಿ ಗಾಯಗೊಂಡಿರುವಂತ ಘಟನೆ ನಡೆದಿದೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ರೊಟ್ಟಿಗವಾಡದಲ್ಲಿ ಸಿದ್ದಲಿಂಗ ಹಿರೇಮಠ ಎಂಬುವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಈ ದುರಂತ ಸಂಭವಿಸಿದೆ. ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಮನೆಯಲ್ಲಿದ್ದಂತ ಸಿದ್ದಲಿಂಗಯ್ಯ ಹಿರೇಮಠ, ಪತ್ನಿ ವಿಶಾಲ ಹಿರೇಮಠ ಹಾಗೂ ಪುತ್ರ ಶ್ರೀಪಾದಯ್ಯ ಮತ್ತು ಸಿದ್ದಲಿಂಗಯ್ಯ ಅವರ ತಮ್ಮನ ಹೆಂಡತಿ ನಿರ್ಮಾಲಾ ಹಿರೇಮಠ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳು ನಾಲ್ವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈ ಸಂಬಂಧ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಮ ದಾಖಲಾಗಿದೆ. https://kannadanewsnow.com/kannada/do-you-know-how-many-ganesha-idols-were-immersed-in-bengaluru-on-a-single-day-yesterday-here-are-the-details/ https://kannadanewsnow.com/kannada/actor-darshan-was-given-royal-patronage-by-jail-staff-probe/
ಬೆಂಗಳೂರು: ನಗರದಲ್ಲಿ ವಿಜೃಂಭಣೆಯಿಂದ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತಿದೆ. ಮೊದಲ ದಿನವೇ ಗಣೇಶ ಮೂರ್ತಿಯನ್ನು ಕೂರಿಸಿ, ವಿಸರ್ಜಿಸಿದ ಬಗ್ಗೆ ಬಿಬಿಎಂಪಿ ಮಾಹಿತಿ ನೀಡಿದ್ದು, ಬರೋಬ್ಬರಿ 2.17 ಲಕ್ಷ ಗಣೇಶ ಮೂರ್ತಿಯನ್ನು ನಿನ್ನೆ ಒಂದೇ ಒಂದು ದಿನ ವಿಸರ್ಜಿಸಲಾಗಿದೆ. ಈ ಕುರಿತಂತೆ ಬಿಬಿಎಂಪಿ ಮಾಹಿತಿ ಹಂಚಿಕೊಂಡಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಿನಾಂಕ: 07/09/2024 ರಂದು ಸಂಚಾರಿ/ಮೊಬೈಲ್ ಟ್ಯಾಂಕರ್ ಹಾಗೂ ಕೆರೆ ಅಂಗಳದ ಶಾಶ್ವಾತ/ತಾತ್ಕಾಲಿಕ ಕಲ್ಯಾಣಿಗಳಲ್ಲಿ ಒಟ್ಟು 217006 ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿರುತ್ತದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಿರುವ ವಿವರ: ಪೂರ್ವ ವಲಯ: 40791 ಪಶ್ಚಿಮ ವಲಯ: 52429 ದಕ್ಷಿಣ ವಲಯ: 84149 ಬೊಮ್ಮನಹಳ್ಳಿ ವಲಯ: 3915 ದಾಸರಹಳ್ಳಿ ವಲಯ: 1719 ಮಹದೇವಪುರ ವಲಯ: 7229 ಆರ್.ಆರ್.ನಗರ ವಲಯ: 12680 ಯಲಹಂಕ ವಲಯ: 14094 ಒಟ್ಟು: 217006 ಗಣೇಶ ಮೂರ್ತಿಯನ್ನು ದಿನಾಂಕ 07-09-2024ರಂದು ಬಿಬಿಎಂಪಿ ವ್ಯಾಪ್ತಿಯಲ್ಲಿ ವಿಸರ್ಜಿಸಲಾಗಿದೆ. https://kannadanewsnow.com/kannada/actor-darshan-was-given-royal-patronage-by-jail-staff-probe/ https://kannadanewsnow.com/kannada/15-year-old-boy-dies-after-being-operated-upon-by-fake-doctor-after-watching-youtube-video/ https://kannadanewsnow.com/kannada/alert-beware-of-those-who-use-mobile-phones-excessively-this-dangerous-disease-can-haunt-you/
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೊಲೆ ಆರೋಪಿ ನಟ ದರ್ಶನ್ ಗೆ ರಾಜಾತಿಥ್ಯ ನೀಡಿದ್ದು ಜೈಲು ಸಿಬ್ಬಂದಿಗಳೇ ಎಂಬುದಾಗಿ ಸ್ಪೋಟಕ ಮಾಹಿತಿ ತನಿಖೆಯಲ್ಲಿ ಸತ್ಯ ಬಯಲಾಗಿದೆ. ಈ ಕುರಿತಂತೆ ಪೊಲೀಸ್ ಇಲಾಖೆಯಿಂದ ತನಿಖೆಯನ್ನು ನಡೆಸಲಾಗಿತ್ತು. ತನಿಖಾ ಅಧಿಕಾರಿಗಳ ತಂಡ ಪರಪ್ಪನ ಅಗ್ರಹಾರದ 15 ರಿಂದ 20 ಮಂದಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಂತ ನಟ ದರ್ಶನ್ ಗೆ ಜೈಲು ಸಿಬ್ಬಂದಿಳೇ ರಾಜಾತಿಥ್ಯ ನೀಡಿದ್ದಾರೆ ಎಂಬುದಾಗಿ ಹಲವು ಸಿಬ್ಬಂದಿಗಳು ಹೇಳಿಕೆ ನೀಡಿದ್ದಾರೆ. ನಟ ದರ್ಶನ್ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಟೇಬಲ್, ಚೇರ್, ಮಗ್ ನಲ್ಲಿ ಟೀ ಕೊಟ್ಟು ರಾಜಾತಿಥ್ಯ ನೀಡಿದ್ದು ಜೈಲು ಸಿಬ್ಬಂದಿಗಳೇ ಎನ್ನುವ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಒಟ್ಟಾರೆಯಾಗಿ ನಟ ದರ್ಶನ್ ಗೆ ರಾಜಾತಿಥ್ಯ ನೀಡಿದ್ದು ಜೈಲು ಸಿಬ್ಬಂದಿಗಳೇ ಹೊರತು, ಬೇರೆಯಾರೂ ಅಲ್ಲ. ಇದರಲ್ಲಿ ಜೈಲು ಸಿಬ್ಬಂದಿಗಳ ಪಾತ್ರವೇ ಸಂಪೂರ್ಣವಾಗಿದೆ ಎಂಬುದಾಗಿ ತನಿಖೆಯಿಂದ ಸತ್ಯ ಬಹಿರಂಗವಾಗಿದೆ. ಈ ವರದಿಯನ್ನು ಆಧರಿಸಿ ರಾಜ್ಯ ಸರ್ಕಾರದ…
ಪಾಟ್ನಾ: ನಕಲಿ ವೈದ್ಯರು ಯೂಟ್ಯೂಬ್ ವೀಡಿಯೊಗಳನ್ನು ನೋಡಿ ಪಿತ್ತಕೋಶದಿಂದ ಕಲ್ಲನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆ ನಡೆಸಿದ ನಂತರ 15 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಬಿಹಾರದ ಸರನ್ನಲ್ಲಿ ನಡೆದಿದೆ. ಹದಿಹರೆಯದವನ ಪರಿಸ್ಥಿತಿ ಹದಗೆಡುತ್ತಿದ್ದಂತೆ, ‘ವೈದ್ಯರು’ ಅವರನ್ನು ರಾಜ್ಯ ರಾಜಧಾನಿ ಪಾಟ್ನಾದ ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದರು. ಮಾರ್ಗಮಧ್ಯೆ ಬಾಲಕ ಮೃತಪಟ್ಟಿದ್ದು, ವೈದ್ಯರು ಮತ್ತು ಅವನೊಂದಿಗಿದ್ದ ಇತರರು ಶವವನ್ನು ಆಸ್ಪತ್ರೆಯಲ್ಲಿ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಕೃಷ್ಣ ಕುಮಾರ್ ಹಲವಾರು ಬಾರಿ ವಾಂತಿ ಮಾಡಿದ ನಂತರ ಅವರನ್ನು ಸರನ್ ನ ಗಣಪತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ. ನಾವು ಅವನನ್ನು ದಾಖಲಿಸಿದೆವು ಮತ್ತು ಸ್ವಲ್ಪ ಸಮಯದ ನಂತರ ವಾಂತಿ ನಿಂತಿತು. ಆದರೆ ಅವರಿಗೆ ಶಸ್ತ್ರಚಿಕಿತ್ಸೆ ಮಾಡಬೇಕಾಗಿದೆ ಎಂದು ವೈದ್ಯರು ಅಜಿತ್ ಕುಮಾರ್ ಪುರಿ ಹೇಳಿದರು. ಅವರು ಯೂಟ್ಯೂಬ್ ನಲ್ಲಿ ವೀಡಿಯೊಗಳನ್ನು ನೋಡುವ ಮೂಲಕ ಕಾರ್ಯಾಚರಣೆಯನ್ನು ನಡೆಸಿದರು. ನನ್ನ ಮಗ ನಂತರ ನಿಧನರಾದರು ಎಂದು ಚಂದನ್…
ಬೆಂಗಳೂರು: ನಟ ದರ್ಶನ್ ಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರಾಜಾತಿಥ್ಯದ ಪೋಟೋ, ವೀಡಿಯೋ ವೈರಲ್ ಆಗಿತ್ತು. ಈ ಬೆನ್ನಲ್ಲೇ ಕೆಲ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು. ಈಗ ತನಿಖೆಯಲ್ಲಿ ಜೈಲು ಅಧಿಕಾರಿಗಳಿಂದಲೇ ನಟ ದರ್ಶನ್ ಗೆ ಮಗ್ ನಲ್ಲಿ ಟೀ ಸಪ್ಲೈ ಮಾಡಿರುವಂತ ವಿಷಯ ಬೆಳಕಿಗೆ ಬಂದಿದೆ. ರಾಜ್ಯ ಸರ್ಕಾರದಿಂದ ಪರಪ್ಪನ ಅಗ್ರಹಾರ ಜೈಲಲ್ಲಿ ಕೊಲೆ ಆರೋಪಿ ನಟ ದರ್ಶನ್ ಗೆ ರಾಜಾತಿಥ್ಯದ ಪ್ರಕರಣ ಸಂಬಂಧ ತನಿಖೆಗೆ ಆದೇಶಿಸಲಾಗಿತ್ತು. ತನಿಖಾಧಿಕಾರಿಗಳ ತಂಡವು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ, ಇಂಚಿಂಚೂ ಮಾಹಿತಿ ಪಡೆದಿದ್ದರು. ಈ ತನಿಖೆಯಲ್ಲಿ ಚೈಲು ಅಧಿಕಾರಿ, ಸಿಬ್ಬಂದಿಗಳೇ ನಟ ದರ್ಶನ್ ಗೆ ರಾಜಾತಿಥ್ಯ ಒದಗಿಸಿರುವಂತ ವಿಷಯ ಬೆಳಕಿಗೆ ಬಂದಿದೆ. ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಗೆ ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿ, ಸಿಬ್ಬಂದಿಗಳಿಂದಲೇ ಕೂರೋದಕ್ಕೆ ಚೇರ್, ಟೇಬಲ್, ಮಗ್ ನಲ್ಲಿ ಟೀ ಸಪ್ಲೈ ಮಾಡಿರುವಂತ ವಿಷಯ ತನಿಖೆಯಲ್ಲಿ ತಿಳಿದು ಬಂದಿದೆ. ಪೊಲೀಸರ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದ್ದು,…
ಬೆಂಗಳೂರು: ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಆಸ್ತಿ ತೆರಿಗೆ ಪಾವತಿಗಾಗಿ ಈ ಮೊದಲು ಬಾಪೂಜಿ ಸೇವಾ ಕೇಂದ್ರಗಳಿಗೆ ತೆರಳಿ ಕ್ಯೂ ನಿಂತು ಪೇ ಮಾಡಬೇಕಿತ್ತು. ಆದರೇ ಈಗ ಗ್ರಾಮ ಪಂಚಾಯ್ತಿ ಆಸ್ತಿ ತೆರಿಗೆ ಪಾವತಿ ಮತ್ತಷ್ಟು ಸರಳವಾಗಿದೆ. ನೀವು ಕುಳಿತಲ್ಲೇ ಆನ್ ಲೈನ್ ಮೂಲಕ ಪಾವತಿಸಬಹುದಾಗಿದೆ. ಹೌದು.. ಸಾರ್ವಜನಿಕರು ಇನ್ಮುಂದೆ ತಮ್ಮ ಮೊಬೈಲ್ ನಲ್ಲೇ ಪೋನ್ ಪೇ, ಗೂಗಲ್ ಪೇ, ಬೀಮ್ ಅಪ್ಲಿಕೇಷನ್, ಪೇಟಿಎಂ ಸೇರಿದಂತೆ ಇತರೆ ಮೊಬೈಲ್ ಅಪ್ಲಿಕೇಷನ್ ಮೂಲಕ ಆಸ್ತಿ ತೆರಿಗೆಯನ್ನು ಪಾವತಿಸಬಹುದಾಗಿದೆ. ಬಹುತೇಕರು ಯುಪಿಐ ಪಾವತಿ ಬಳಕೆಯನ್ನು ಮಾಡುತ್ತಲೇ ಇರ್ತೀರಿ. ನೀವು ಗ್ರಾಮ ಪಂಚಾಯ್ತಿ ಆಸ್ತಿ ತೆರಿಗೆ ಪಾವತಿಗಾಗಿ ಈಗ ಕಷ್ಟ ಪಡುವ ಅಗತ್ಯವಿಲ್ಲ. ಕ್ಯೂ ನಿಂತು ಆಸ್ತಿ ತೆರಿಗೆ ಪಾವತಿಸೋ ಅಗತ್ಯನೂ ಇಲ್ಲ. ಕೇವಲ ಆನ್ ಲೈನ್ ನಲ್ಲೇ ನಿಮ್ಮ ಆಸ್ತಿ ತೆರಿಗೆಯ ನಂಬರ್ ದಾಖಲಿಸಿ, ಎಲೆಕ್ಟ್ರಿಕ್ ಸಿಟಿ ಬಿಲ್ ಪಾವತಿ ಮಾಡಿದಂತೆಯೇ ಮಾಡಬಹುದಾಗಿದೆ. ಈ ವಿಧಾನ ಅನುಸರಿಸಿ, ಗ್ರಾಮ ಪಂಚಾಯ್ತಿ ಆಸ್ತಿ ತೆರಿಗೆ ಪಾವತಿಸಿ ನೀವು ಇದಕ್ಕಾಗಿ…
ಕೆಎನ್ಎನ್ ಸ್ಪೆಷಲ್ ಡೆಸ್ಕ್: ಶನಿವಾರ ದಿಂದ ಗಣೇಶ ಚತುರ್ಥಿ ಹಬ್ಬ. ನಾಡು, ದೇಶದೆಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಸಾರ್ವಜನಿಕರು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಸರ್ಜಿಸುವುದು ಕಾಮನ್. ಆದರೇ ರಾಜ್ಯದ ಈ ಪೊಲೀಸ್ ಠಾಣೆಯಲ್ಲಿ ಮಾತ್ರ ಸಾರ್ವಜನಿಕರಂತೆ ಪ್ರತಿ ವರ್ಷ ಪೊಲೀಸ್ ಠಾಣೆಯಲ್ಲಿ ಗಣೇಶ ಮೂರ್ತಿಯನ್ನು ಕೂರಿಸಿ, ವಿಸರ್ಜನೆ ಮಾಡಲಾಗುತ್ತದೆ. ಅದು ಎಲ್ಲಿ? ಏಕೆ ಎನ್ನುವ ಬಗ್ಗೆ ಮುಂದೆ ಓದಿ. ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಸಾಗರ ಟೌನ್ ಠಾಣೆಯಲ್ಲೇ ಪ್ರತಿ ವರ್ಷ ಸಾರ್ವಜನಿಕರು ಕೂರಿಸುವಂತೆಯೇ ಗಣೇಶ ಮೂರ್ತಿಯನ್ನು ಪ್ರತಿಸ್ಠಾಪಿಸುವಂತ ಪರಿಪಾಟ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಗಣೇಶ ಚತುರ್ಥಿ ಹಬ್ಬದಂದು ಪ್ರತಿವರ್ಷ ಸಾಗರ ನಗರ ಪೊಲೀಸ್ ಠಾಣೆಯಲ್ಲಿ ಗಣೇಶ ಮೂರ್ತಿಯನ್ನು ಸಾಂಪ್ರದಾಯಿಕವಾಗಿ ಕೂರಿಸದೇ ಇರೋದೇ ಇಲ್ಲ. ಹೀಗಿದೆ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಹಿಂದಿನ ಕಾರಣ.. ಹತ್ತಿಪ್ಪತ್ತು ವರ್ಷಗಳ ಹಿಂದೆ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಯ ವೇಳೆಯಲ್ಲಿ ಗಲಾಟೆಯಾಗಿತ್ತಂತೆ. ಅಂದು ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಗೊಳಿಸಲು ಲಾಠಿ ಚಾರ್ಜ್…
ಕನಕಪುರ: “ಮಲೆನಾಡು ಸೇರಿದಂತೆ ಇತರೆ ಕಡೆ ಉತ್ತಮ ಮಳೆಯಾಗುತ್ತಿದೆ. ಮಂಡ್ಯ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಉತ್ತಮ ಮಳೆಯಾಗಿಲ್ಲ ಆದ ಕಾರಣಕ್ಕೆ ಅರ್ಕಾವತಿ ಬಲದಂಡೆ ನಾಲೆ ಏತ ನೀರಾವರಿ ಯೋಜನೆಯನ್ನು ತುರ್ತಾಗಿ ಪುನಶ್ಚೇತನ ಮಾಡಿ ಚಾಲನೆ ನೀಡಿದ್ದೇವೆ. ಇದು ನನ್ನ ಬಹುದಿನದ ಕನಸು. ಇದರಿಂದ ಸಾವಿರ ಎಕರೆಗೂ ಹೆಚ್ಚು ಭೂಮಿಗೆ ನೀರಾವರಿ ಅನುಕೂಲವಾಗಲಿದೆ. ಎಸ್.ಎಂ.ಕೃಷ್ಣ ಅವರ ಸಂಪುಟದಲ್ಲಿ ಸಚಿವನಾಗಿದ್ದಾಗ ಒತ್ತಾಯ ಮಾಡಿ ಅವರನ್ನು ಕರೆದುಕೊಂಡು ಬಂದು ಅರ್ಕಾವತಿ ಬಲದಂಡೆ ನಾಲೆಯ ಏತ ನೀರಾವರಿ ಕಾಮಗಾರಿಯನ್ನು ಉದ್ಘಾಟಿಸಲಾಗಿತ್ತು. ರೈತರು ಕಡಿಮೆ ಹಣಕ್ಕೆ ಭೂಮಿ ಕಳೆದುಕೊಂಡಿದ್ದಾರೆ ಈ ಭಾಗದ ರೈತರು ಈ ಯೋಜನೆ ಸಾಕಾರಗೊಳ್ಳುವ ವೇಳೆಯಲ್ಲಿ ಕೇವಲ ಮೂರು- ನಾಲ್ಕು ಸಾವಿರಕ್ಕೆ ತಮ್ಮ ಜಮೀನುಗಳನ್ನು ಕಳೆದುಕೊಂಡಿದ್ದಾರೆ. ಈ ವಿಚಾರ ನನಗೆ ಈಗಲೂ ಬೇಸರ ತರಿಸುತ್ತದೆ. ಹಣಕ್ಕೆ ಕಷ್ಟವಿದ್ದ ಕಾಲದಲ್ಲೂ ಎಸ್. ಎಂ. ಕೃಷ್ಣ ಅವರ ಕೈಯಿಂದ ಸುಮಾರು 300 ಜನ ರೈತರಿಗೆ ಎಕರೆ ಇಂತಿಷ್ಟು ಎಂದು ಹೆಚ್ಚುವರಿಯಾಗಿ ಏಳು ಕೋಟಿ ಪರಿಹಾರ ಕೊಡಿಸಲಾಯಿತು. ದೇವರ ಅನುಗ್ರಹದಿಂದ ನಾನೇ…
ಮೈಸೂರು: ಕಳ್ಳರು ಮನೆಗಳ್ಳತನ ಮಾಡಿ, ಕದ್ದಿದ್ದಂತ ಚಿನ್ನಾಭರಣದಲ್ಲಿ ಪಾಲು ಪಡೆದಿದ್ದಂತ ಹೆಡ್ ಕಾನ್ಸ್ ಸ್ಟೇಬಲ್ ಒಬ್ಬರು, ಮಾರಾಟ ಮಾಡಲು ಯತ್ನಿಸಿ ಪೊಲೀಸರಿಗೆ ಸಿಕ್ಕಿಬಿದ್ದು, ಬಂಧನಕ್ಕೆ ಒಳಗಾಗಿರುವಂತ ಘಟನೆ ಮೈಸೂರಿನ ಮಂಡಿ ಠಾಣೆಯಲ್ಲಿ ನಡೆದಿತ್ತು. ಈ ಸಂಬಂಧ ಮೇಲ್ನೋಟಕ್ಕೆ ಆರೋಪ ಸಾಭೀತಾದ ಹಿನ್ನಲೆಯಲ್ಲಿ ಹೆಡ್ ಕಾನ್ಸ್ ಸ್ಟೇಬಲ್ ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶಿಸಿದ್ದಾರೆ. ಮೈಸೂರಿನ ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿವಿಧ ಮನೆಗಳ್ಳತನ ಪ್ರಕರಣಗಳು ನಡೆದಿದ್ದವು. ಈ ಕಳ್ಳತನ ಪ್ರಕರಣದಲ್ಲಿ ಕಳ್ಳರಾದಂತ ನಜರುಲ್ಲಾ ಬಾಬು, ಆಲಿ ಎಂಬುವರು ಭಾಗಿಯಾಗಿದ್ದಂತ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಅವರನ್ನು ಪೊಲೀಸರು ಬಂಧಿಸಿದ್ದರು. ಪೊಲೀಸರು ಬಂಧಿಸಿದ್ದಂತ ಮನೆಗಳ್ಳರಾದಂತ ನಜರುಲ್ಲಾ ಬಾಬು ಹಾಗೂ ಆಲಿ ತಾವು ಕದ್ದಿದ್ದಂತ 400 ಗ್ರಾಂ ಚಿನ್ನಾಭರಣದಲ್ಲಿ 300 ಗ್ರಾಂ ಅನ್ನು ಅಶೋಕಪುರಂ ಠಾಣೆಯ ಹೆಡ್ ಕಾನ್ ಸ್ಟೇಬಲ್ ರಾಜು ಎಂಬುವರಿಗೆ ಕೊಟ್ಟಿರುವುದಾಗಿ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧರಿಸಿ ಅಶೋಕಪುರಂ ಹೆಡ್ ಕಾನ್ ಸ್ಟೇಬಲ್ ರಾಜು ಅವರ ಮೇಲೆ ಮಂಡಿ ಠಾಣೆಯ ಪೊಲೀಸರು…
ಬೆಂಗಳೂರು: ಇಂದು ಗಣೇಶ ಚತುರ್ಥಿ ಹಬ್ಬ. ಕರ್ನಾಟಕ, ಭಾರತದೆಲ್ಲೆಡೆ ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಇಂತಹ ಹಬ್ಬವನ್ನು ಆರಂಭಿಸಿದ್ದೇ ಬಾಲ ಗಂಗಾಧರ ತಿಲಕ್ ಅವರು. ಅವರ ನಿಮಗೆ ತಿಳಿದಿರ ವಿಷಯವನ್ನು ಹಿರಿಯ ಪತ್ರಕರ್ತ ದಿನೇಶ್ ಅಮೀನಮಟ್ಟು ಈ ಕೆಳಗಿನಂತೆ ಹಂಚಿಕೊಂಡಿದ್ದಾರೆ ಓದಿ. ಇಂದು ಗಣೇಶನ ಹಬ್ಬ. ಭಾರತದ ರಾಜಕೀಯ ಕ್ಷೇತ್ರದಲ್ಲಿ ಧರ್ಮದ ಪ್ರವೇಶಕ್ಕೆ ಕಾರಣವಾದ ಸಾರ್ವಜನಿಕ ಗಣೇಶೋತ್ಸವದ ರೂವಾರಿ ಬಾಲ ಗಂಗಾಧರ ತಿಲಕ್. ಈ ಹಿನ್ನೆಲೆಯಲ್ಲಿ ನೋಡುವುದಾದರೆ, ರಾಜಕೀಯ ಕ್ಷೇತ್ರ ಪ್ರವೇಶಿಸಿದ ಧರ್ಮ ಕೋಮುವಾದದ ರೂಪ ಪಡೆದು ಎರಡೂ ಕ್ಷೇತ್ರಗಳು ದಾರಿ ತಪ್ಪಿರುವುದಕ್ಕೆ ತಿಲಕ್ ಅವರೇ ಹೊಣೆಗಾರರಾಗುತ್ತಾರೆ. ತನ್ನದೊಂದು ತೀರ್ಮಾನ ಭವಿಷ್ಯದಲ್ಲಿ ಇಂತಹದ್ದೊಂದು ಅನಾಹುತಕ್ಕೆ ದಾರಿ ಮಾಡಿಕೊಡಬಹುದು ಎಂದು ಬಾಲ ಗಂಗಾಧರ ತಿಲಕ್ ಇಲ್ಲವೇ ಅವರ ತೀರ್ಮಾನವನ್ನು ಬೆಂಬಲಿಸಿದ್ದ ಮಹಾತ್ಮ ಗಾಂಧಿ ಊಹಿಸಿದ್ದರೇ? ಕೋಮುವಾದದ ಬೆಂಕಿಯನ್ನು ಆರಿಸುತ್ತಲೇ ಅದಕ್ಕೆ ಬಲಿಯಾದ ಗಾಂಧೀಜಿಯವರು ಇಂತಹದ್ದೊಂದು ಊಹೆ ಮಾಡಿದ್ದರೆಂದು ಅನಿಸುವುದಿಲ್ಲ. ಆದರೆ ತಿಲಕ್? ಕಾಂಗ್ರೆಸ್ ಪಕ್ಷದೊಳಗೆ ಲಾಲ ಲಜಪತ್ ರಾಯ್ ಮತ್ತು ಬಿಪಿನ್ ಚಂದ್ರಪಾಲ್ ಜೊತೆ ಉಗ್ರ…













