Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಗೆ 14 ಕ್ಷೇತ್ರಗಳಿಗೆ ಇಂದು ಮೊದಲ ಹಂತದಲ್ಲಿ ಮತದಾನ ನಡೆಯುತ್ತಿದೆ. ಬೆಂಗಳೂರು ಸೇರಿದಂತೆ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದೂ, 3 ಗಂಟೆಯವರೆಗೆ ಬೆಂಗಳೂರಲ್ಲಿ ಎಷ್ಟು ಪ್ರಮಾಣದಲ್ಲಿ ಮತದಾನ ಆಗಿದೆ ಅಂತ ಮುಂದೆ ಓದಿ. ಹೀಗಿದೆ ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ವ್ಯಾಪ್ತಿಯಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ ಮತದಾನದ ಶೇಖಡಾವಾರು ಪ್ರಮಾಣ: ಮಧ್ಯಾಹ್ನ 03.00 ಗಂಟೆಯವರೆಗಿನ ವರದಿ ಬೆಂಗಳೂರು ಕೇಂದ್ರ: ಶೇ. 40.10 ಬೆಂಗಳೂರು ದಕ್ಷಿಣ: ಶೇ. 40.77 ಬೆಂಗಳೂರು ಉತ್ತರ: ಶೇ. 41.12 ಇಲ್ಲಿದೆ ಮಧ್ಯಾಹ್ನ ‘3 ಗಂಟೆ’ಯವರೆಗೆ ರಾಜ್ಯದ ’14 ಕ್ಷೇತ್ರ’ಗಳ ಶೇಕಡವಾರು ಮತದಾನದ ಪ್ರಮಾಣ ರಾಜ್ಯದಲ್ಲಿ ಇಂದು 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯುತ್ತಿದೆ. ಇಂದು ಮಧ್ಯಾಹ್ನ.1 ಗಂಟೆಯ ನಂತ್ರ, ಮಧ್ಯಾಹ್ನ 3 ಗಂಟೆಯವರೆಗೆ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದಲ್ಲಿ ಶೇ.50.93ರಷ್ಟು ಮತದಾನ ನಡೆದಿದೆ. ಈ ಕುರಿತಂತೆ ಚುನಾವಣಾ ಆಯೋಗದಿಂದ ಮಾಹಿತಿ ನೀಡಲಾಗಿದ್ದು, ಇಂದು ಮಧ್ಯಾಹ್ನ 3 ಗಂಟೆಯವರೆಗೆ…
ಬೆಂಗಳೂರು: ರಾಜ್ಯದಲ್ಲಿ ಇಂದು 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯುತ್ತಿದೆ. ಇಂದು ಮಧ್ಯಾಹ್ನ.1 ಗಂಟೆಯ ನಂತ್ರ, ಮಧ್ಯಾಹ್ನ 3 ಗಂಟೆಯವರೆಗೆ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದಲ್ಲಿ ಶೇ.50.93ರಷ್ಟು ಮತದಾನ ನಡೆದಿದೆ. ಈ ಕುರಿತಂತೆ ಚುನಾವಣಾ ಆಯೋಗದಿಂದ ಮಾಹಿತಿ ನೀಡಲಾಗಿದ್ದು, ಇಂದು ಮಧ್ಯಾಹ್ನ 3 ಗಂಟೆಯವರೆಗೆ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ 50.93ರಷ್ಟು ಮತದಾನ ಆಗಿದೆ ಎಂಬುದಾಗಿ ತಿಳಿಸಿದೆ. ಇಲ್ಲಿದೆ 14 ಲೋಕಸಭಾ ಕ್ಷೇತ್ರಗಳ ಶೇಕಡವಾರು ಪ್ರಮಾಣ ಬೆಂಗಳೂರು ಸೆಂಟ್ರಲ್- ಶೇ.40.10 ಬೆಂಗಳೂರು ಉತ್ತರ – ಶೇ.41.12 ಬೆಂಗಳೂರು ಗ್ರಾಮಾಂತರ- ಶೇ.40.77 ಬೆಂಗಳೂರು ದಕ್ಷಿಣ – ಶೇ.40.77 ಚಾಮರಾಜನಗರ – ಶೇ.54.82 ಚಿಕ್ಕಬಳ್ಳಾಪುರ – ಶೇ.55.90 ಚಿತ್ರದುರ್ಗ – ಶೇ.52.14 ದಕ್ಷಿಣ ಕನ್ನಡ- ಶೇ.58.76 ಹಾಸನ- ಶೇ.55.92 ಕೋಲಾರ- ಶೇ.54.66 ಮಂಡ್ಯ- ಶೇ.57.44 ಮೈಸೂರು-ಕೊಡಗು – ಶೇ.53.55 ತುಮಕೂರು- ಶೇ.56.62 ಉಡುಪಿ-ಚಿಕ್ಕಮಗಳೂರು – ಶೇ.57.49 https://kannadanewsnow.com/kannada/voter-collapses-and-dies-moments-after-casting-his-vote-in-tumkur/ https://kannadanewsnow.com/kannada/breaking-x-down-across-the-country-including-karnataka/
ತುಮಕೂರು: ಮತ ಚಲಾಯಿಸಿ ಮನೆಗೆ ತೆರಳಿದ ಕೆಲವೇ ಕ್ಷಣಗಳಲ್ಲಿ, ಮತದಾರರೊಬ್ಬರು ಕುಸಿದು ಬಿದ್ದು ದಿಢೀರ್ ಸಾವನ್ನಪ್ಪಿರುವಂತ ಘಟನೆ ತುಮಕೂರಲ್ಲಿ ನಡೆದಿದೆ. ತುಮಕೂರಿನ ಎಸ್ ಎಸ್ ಪುರಂ ಮತಗಟ್ಟೆಯಲ್ಲಿ ಇಂದು ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮತವನ್ನು ಹೆಚ್.ಕೆ ರಮೇಶ್ ಎಂಬುವರು ಪತ್ನಿ ಸಮೇತ ತೆರಳಿ ಚಲಾಯಿಸಿ ಬಂದಿದ್ದರು. ಹೆಚ್ ಕೆ ರಮೇಶ್ ಅವರು ತಮ್ಮ ಮಾಲೀಕತ್ವದ ಬಟ್ಟೆ ಅಂಗಟಿಗೆ ಮತ ಚಲಾಯಿಸಿ ತೆರಳಿದಂತ ಕೆಲವೇ ಕ್ಷಣಗಳಲ್ಲಿ ಕುಸಿದು ಬಿದ್ದು ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ. ಅವರು ಮಯೂರ ಯುವ ವೇದಿಕೆ ಸದಸ್ಯರು ಕೂಡ ಆಗಿದ್ದರು ಎಂಬುದಾಗಿ ತಿಳಿದು ಬಂದಿದೆ. ‘ನೋಟಾ’ಗೆ ಹೆಚ್ಚು ಮತ ಬಂದರೆ ಮರುಚುನಾವಣೆ: ಆಯೋಗಕ್ಕೆ ‘ಸುಪ್ರೀಂ ಕೋರ್ಟ್’ ನೋಟಿಸ್ ನವದೆಹಲಿ: ಲೋಕಸಭಾ ಚುನಾವಣೆಗೆ ಇಂದು ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಮತದಾನ ನಡೆಯುತ್ತಿದೆ. ಈ ವೇಳೆಯಲ್ಲಿ ನೋಟಾಗೆ ಹೆಚ್ಚು ಮತ ಬಂದರೆ ಮರುಚುನಾವಣೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟೀಸ್ ನೀಡಿದೆ. ನೋಟಾಗೆ ಹೆಚ್ಚು ಮತ ಬಂದರೆ ಮರುಚುನಾವಣೆ…
ನವದೆಹಲಿ: ಲೋಕಸಭಾ ಚುನಾವಣೆಗೆ ಇಂದು ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಮತದಾನ ನಡೆಯುತ್ತಿದೆ. ಈ ವೇಳೆಯಲ್ಲಿ ನೋಟಾಗೆ ಹೆಚ್ಚು ಮತ ಬಂದರೆ ಮರುಚುನಾವಣೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟೀಸ್ ನೀಡಿದೆ. ನೋಟಾಗೆ ಹೆಚ್ಚು ಮತ ಬಂದರೆ ಮರುಚುನಾವಣೆ ನಡೆಸುವ ಬಗ್ಗೆ ಸಲ್ಲಿಕೆಯಾಗಿರುವ ಅರ್ಜಿಯನ್ನು ಗಣನೆಗೆ ತೆಗೆದುಕೊಂಡಿರುವ ಸುಪ್ರೀಂಕೋರ್ಟ್, ಚುನಾವಣಾ ಆಯೋಗಕ್ಕೆ ನೋಟಿಸ್ ನೀಡಿದೆ. ಚುನಾವಣೆಯಲ್ಲಿ ನೋಟಾಗೆ ಅತಿ ಹೆಚ್ಚು ಮತ ಬಂದರೆ, ಆ ಕ್ಷೇತ್ರದಲ್ಲಿ ಹೊಸದಾಗಿ ಮರುಚುನಾವಣೆ ನಡೆಸಬೇಕು ಹಾಗೂ ನೋಟಾಗಿಂತ ಕಡಿಮೆ ಮತ ಪಡೆಯುವ ಅಭ್ಯರ್ಥಿಯನ್ನು ಮರು ಚುನಾವಣೆಗೆ ನಿಷೇಧಿಸಬೇಕು. ಚುನಾವಣೆಯಲ್ಲಿ ಸ್ಪರ್ಧಿಸದಂತೆ ಸೂಚಿಸಬೇಕೆಂದು ಕೋರಿ ಅರ್ಜಿ ಸಲ್ಲಿಕೆಯಾಗಿತ್ತು. https://kannadanewsnow.com/kannada/lok-sabha-elections-heres-the-voting-percentage-in-14-constituencies-till-1-pm/ https://kannadanewsnow.com/kannada/breaking-x-down-across-the-country-including-karnataka/
ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ಕನಕಪುರದಲ್ಲಿ ಲೋಕಸಭಾ ಚುನಾವಣೆ ಬಿರುಸಿನ ಮತದಾನ ನಡೆಯುತ್ತಿದೆ. ಇಂದು ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಂಸದ ಡಿ.ಕೆ ಸುರೇಶ್ ತಮ್ಮ ಹಕ್ಕು ಚಲಾಯಿಸಿದ್ದಾರೆ. ಇಂದು ಕನಕಪುರದ ದೊಡ್ಡಆಲನಹಳ್ಳಿಯ ಮತಗಟ್ಟೆಗೆ ತೆರಳಿದಂತ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ಸಂಸದ ಡಿ ಕೆ ಸುರೇಶ್ ಅವರು ಮತ ಚಲಾಯಿಸಿದರು. ಮತ್ತೊಂದೆಡೆ ಮೈಸೂರಿನ ಸಿದ್ಧರಾಮನಹುಂಡಿಯ ಮತಗಟ್ಟೆಯಲ್ಲಿ ಮುಖ್ಯಮಂತ್ರಿ ಸಿದ್ದರಾನಯ್ಯ ಮತ್ತು ಯತೀಂದ್ರ ಸಿದ್ದರಾಮಯ್ಯ ಅವರು ಮತದಾನ ಮಾಡಿದರು. https://kannadanewsnow.com/kannada/dk-shivakumar-distributed-gift-coupons-money-gods-laddoos-overnight-hd-kumaraswamy/ https://kannadanewsnow.com/kannada/lok-sabha-elections-heres-the-voting-percentage-in-14-constituencies-till-1-pm/
ರಾಮನಗರ: ತಮ್ಮನ್ನು ರಣಹೇಡಿ ಎಂದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಯ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು; ರಣಹೇಡಿ ನಾನಲ್ಲ, ನೇರವಾಗಿ ಚುನಾವಣೆ ಎದುರಿಸಲಾಗದೆ ರಾತ್ರೋರಾತ್ರಿ ಮತದಾರರಿಗೆ QR ಕೋಡ್ ಗಿಫ್ಟ್ ಕೂಪನ್, ಹಣ ಹಂಚಿಕೆ ಮಾಡುವವರು ರಣಹೇಡಿಗಳು ಎಂದು ತಿರುಗೇಟು ಕೊಟ್ಟರು. ಬಿಡದಿ ಸಮೀಪದ ಕೇತಿಗಾನಹಳ್ಳಿ ಮತಗಟ್ಟೆಯಲ್ಲಿ ಮತದಾನ ಮಾಡಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು. ರಣಹೇಡಿ ನಾನಲ್ಲ, ರಣಹೇಡಿಗಳು ಅವರು, ಕುತಂತ್ರದ ರಾಜಕಾರಣಿಗಳು ಅವರು. ಯಾರು ರಣಹೇಡಿ ಎಂದು ಮುಂದೆ ಚರ್ಚೆ ಮಾಡೋಣ. ರಣಹೇಡಿ ಸಂಸ್ಕೃತಿ ಡಿ.ಕೆ.ಶಿವಕುಮಾರ್ ಅವರದ್ದು. ನಾವು ನೇರವಾಗಿಯೇ ಚುನಾವಣೆ ಮಾಡುತ್ತಿದ್ದೇವೆ ಎಂದು ಗುಡುಗಿದರು. ರಾತ್ರೋರಾತ್ರಿ ಹೋಗಿ ಕಳ್ಳಕಳ್ಳವಾಗಿ ಜನರಿಗೆ ಕ್ಯೂ ಆರ್ ಕೋಡ್ ಇರುವ ಗಿಫ್ಟ್ ಕೂಪನ್ ಗಳನ್ನು ಹಂಚಿಕೆ ಮಾಡಿದ ವ್ಯಕ್ತಿ ರಣಹೇಡಿತನದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಕುಟುಕಿದರು. ಆಯೋಗಕ್ಕೆ ದೂರು ಕೊಟ್ಟರೆ ಉಪಯೋಗ ಇಲ್ಲ ಗಿಫ್ಟ್ ಕೂಪನ್ ಬಗ್ಗೆ ಚುನಾವಣಾ ಆಯೋಗಕ್ಕೆ ಈಗ ದೂರು…
ತಾಂಜೇನಿಯಾ: ಪೂರ್ವ ಆಫ್ರಿಕಾದ ದೇಶ ತಾಂಜೇನಿಯಾದಲ್ಲಿ ಭಾರಿ ಮಳೆಯಿಂದಾಗಿ ಕನಿಷ್ಠ 150ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಮಳೆಯಿಂದ 200,000ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. 51,000 ಮನೆಗಳಿಗೆ ಹಾನಿಯಾಗಿದೆ ಎಂದು ತಾಂಜೇನಿಯಾ ಪ್ರಧಾನಿ ಕಾಸಿಮ್ ಮಜಲಿವಾ ಹೇಳಿದ್ದಾರೆ. ಎಲ್ ನಿನೋ ಹವಾಮಾನ ಮಾದರಿಗಳು ಹವಾಮಾನವನ್ನು ಹದಗೆಡಿಸಿದೆ. ಪ್ರವಾಹಕ್ಕೆ ಕಾರಣವಾಗಿದೆ ಮತ್ತು ರಸ್ತೆಗಳು, ಸೇತುವೆಗಳು ಮತ್ತು ರೈಲ್ವೆಗಳನ್ನು ನಾಶಪಡಿಸಿದೆ ಎಂದು ಪ್ರಧಾನಿ ಕಾಸಿಮ್ ಮಜಲಿವಾ ಸಂಸತ್ತಿನಲ್ಲಿ ಹೇಳಿದರು. ದೇಶದ ವಿವಿಧ ಭಾಗಗಳಲ್ಲಿ ಬಲವಾದ ಗಾಳಿ, ಪ್ರವಾಹ ಮತ್ತು ಭೂಕುಸಿತದೊಂದಿಗೆ ಭಾರಿ ಎಲ್ ನಿನೊ ಮಳೆ ಗಮನಾರ್ಹ ಹಾನಿಯನ್ನುಂಟು ಮಾಡಿದೆ ಎಂದು ಮಜಲೀವಾ ಗುರುವಾರ ಸಂಸತ್ತಿಗೆ ತಿಳಿಸಿದರು. ಏನಿದು ಎಲ್ ನಿನೋ? ಎಲ್ ನಿನೋ ನೈಸರ್ಗಿಕವಾಗಿ ಸಂಭವಿಸುವ ಹವಾಮಾನ ಮಾದರಿಯಾಗಿದ್ದು, ಸಾಮಾನ್ಯವಾಗಿ ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಶಾಖ, ಜೊತೆಗೆ ಬರಗಾಲ ಮತ್ತು ಭಾರಿ ಮಳೆಯೊಂದಿಗೆ ಸಂಬಂಧಿಸಿದೆ. ವಿನಾಶಕಾರಿ ಮಳೆಯ ಕಾರಣಗಳ ಬಗ್ಗೆ ಮಾತನಾಡಿದ ಕಾಸಿಮ್ ಮಜಲಿವಾ, ಅರಣ್ಯನಾಶ, ಕೃಷಿ ಮತ್ತು ಅನಿಯಂತ್ರಿತ ಜಾನುವಾರು ಮೇಯಿಸುವಿಕೆಯಂತಹ ಸುಸ್ಥಿರವಲ್ಲದ ಕೃಷಿ…
ಮಂಡ್ಯ: ಮತದಾನ ಮಾಡೋದು ಕರ್ತ್ಯವ್ಯ ಅದನ್ನ ನಿರ್ವಹಿಸಿದ್ದೀನಿ ಎಂಬುದಾಗಿ ಸಂಸದೆ ಸುಮಲತಾ ಅಂಬರೀಶ್ ಅವರು ಹೇಳಿದರು. ಇಂದು ಮಂಡ್ಯ ಜಿಲ್ಲೆಯ ದೊಡ್ಡರರಿಸಿನ ಕೆರೆ ಗ್ರಾಮದಲ್ಲಿ ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ, ದೇವೇಗೌಡರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ. ಅವರು ದೊಡ್ಡವರು. ಅವರಿಗೆ ಸರಿಯಾದ ಮಾಹಿತಿ ಕೊಡದೆ ಆ ರೀತಿ ಹೇಳಿದ್ದಾರೆ. ಅವರಿಂದ ಅಂತಹ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ. ಸ್ಚತಂತ್ರ ಸಂಸದೆಯಾಗಿ ನನ್ನಜವಾಬ್ದಾರಿಯನ್ನ ನಿರ್ವಹಿಸಿದ್ದೀನಿ ಎಂದರು. ಮೋದಿ ಅವರು ಪ್ರಧಾನಿಯಾಗಬೇಕು ಎಂಬ ಉದ್ದೇಶದಿಂದ ನಾನು ಗೆದ್ದಂತಹ ಸೀಟ್ ಅನ್ನ ತ್ಯಾಗ ಮಾಡಿದ್ದೀನಿ. ಈ ಹಂತದಲ್ಲಿ ಅಂಬರೀಶ್ ಅವರ ಪಡೆಯ ಶಕ್ತಿಯನ್ನ ಎನ್ ಡಿಎ ಗೆ ಕೊಟ್ಟಿದ್ದೇವೆ. ನಾವು ನಿಷ್ಠೆಯಿಂದ ಕೆಲಸ ಮಾಡಿದ್ದೀನಿ. ಈ ದಿನದ ವರೆಗೂ ಜೆಡಿಎಸ್ ನ ಯಾವುದೇ ನಾಯಕರು ಯಾವುದೇ ಸಭೆಗೆ ಆಹ್ವಾನಿಸಿಲ್ಲ. ಅವರು ಕರೆದು ನಾನು ಬರದೆ ಇದ್ದರೆ ತಪ್ಪಾಗುತ್ತೆ. ಆದ್ರೆ ಅವರು ನನ್ನಕರೆದೇ ಇಲ್ಲ ಎಂದು ತಿಳಿಸಿದರು. https://kannadanewsnow.com/kannada/lok-sabha-elections-heres-the-voting-percentage-in-14-constituencies-till-1-pm/ https://kannadanewsnow.com/kannada/x-twitter-server-down-again-in-india-user-struggle/
ಬೆಂಗಳೂರು: ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಇಂದು ಮೊದಲ ಹಂತದಲ್ಲಿ ಮತದಾನ ನಡೆಯುತ್ತಿದೆ. ಮೊದಲ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಲ್ಲಿ 1 ಗಂಟೆಯವರೆಗೆ ಎಷ್ಟು ಪ್ರಮಾಣದಲ್ಲಿ ಮತದಾನ ಮಾಡಲಾಗಿದೆ ಅಂತ ಮುಂದೆ ಓದಿ. ಉಡುಪಿ-ಚಿಕ್ಕಮಗಳೂರು – ಶೇ.46.43 ಹಾಸನ- ಶೇ.40.99 ದಕ್ಷಿಣ ಕನ್ನಡ – ಶೇ.48.10 ಚಿತ್ರದುರ್ಗ – ಶೇ.39.05 ತುಮಕೂರು – ಶೇ.41.91 ಮಂಡ್ಯ – ಶೇ.40.70 ಮೈಸೂರು- ಶೇ.41.58 ಚಾಮರಾಜನಗರ – ಶೇ.39.57 ಬೆಂಗಳೂರು ಗ್ರಾಮಾಂತರ- ಶೇ.36.09 ಬೆಂಗಳೂರು ನಾರ್ಥ್ – ಶೇ.36.25 ಬೆಂಗಳೂರು ಕೇಂದ್ರ – ಶೇ.30.10 ಬೆಂಗಳೂರು ಸೌತ್ – ಶೇ.31.51 ಚಿಕ್ಕಬಳ್ಳಾಪುರ – ಶೇ.39.85 ಕೋಲಾರ – ಶೇ.38.85 https://kannadanewsnow.com/kannada/teacher-dies-of-heart-attack-while-on-election-duty-in-chitradurga/ https://kannadanewsnow.com/kannada/x-twitter-server-down-again-in-india-user-struggle/
ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆಯಲ್ಲಿ ಲೋಕಸಭಾ ಚುನಾವಣಾ ಕರ್ತವ್ಯ ನಿರ್ವಹಿಸುತ್ತಿದ್ದಂತ ವೇಳೆಯಲ್ಲೇ ಶಿಕ್ಷಕಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವಂತ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಚಳ್ಳಕೆರೆ ತಾಲೂಕಿನ ಹೊಟ್ಟೆಪ್ಪನಹಳ್ಳಿಯ ಮೇಗಳಗೊಲ್ಲರಹಟ್ಟಿ ಮತಗಟ್ಟೆ ಸಂಖ್ಯೆ 202ರಲ್ಲಿ ಎಪಿಆರ್ಓ ಆಗಿ ಕರ್ತವ್ಯ ನಿರ್ವಹಿಸುವ ವೇಳೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಮೃತರನ್ನು ಯಶೋಧ (58) ವರ್ಷ ಎಂದು ಗುರುತಿಸಲಾಗಿದೆ. ಮೃತ ಶಿಕ್ಷಕಿ ಯಶೋಧರ ಅವರು ಬೊಮ್ಮಸಂದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. https://kannadanewsnow.com/kannada/lok-sabha-elections-2024-siddaramaiah-yathindra-cast-their-votes-in-siddaramanahundi/ https://kannadanewsnow.com/kannada/lok-sabha-elections-2019-heres-how-to-vote-in-bengaluru-constituency-till-1-pm/