Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿಯನ್ನು ರಾಜ್ಯಪಾಲರು ನೀಡಿದ್ದರು. ಮುಡಾ ಕುರಿತಂತೆ ಸಚಿವ ಜಮೀರ್ ಅಹ್ಮದ್ ಖಾನ್ ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ್ದರು. ಈ ಹೇಳಿಕೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸೂಚಿಸಿದ್ದಾರೆ. ಈ ಮೂಲಕ ಸಚಿವ ಜಮೀರ್ ಅಹ್ಮದ್ ಗೆ ಬಿಗ್ ಶಾಕ್ ನೀಡಲಾಗಿದೆ. ಸಚಿವ ಜಮೀರ್ ಅಹ್ಮದ್ ಅವರು ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ್ದಾರೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಟಿ.ಜೆ ಅಬ್ರಾಹಂ ಅವರು ರಾಜ್ಯಪಾಲರಿಗೆ ದೂರು ನೀಡಿದ್ದರು. ಮುಡಾ ಹಗರಣ ಸಂಬಂಧ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ್ದು ಆಕ್ಷೇಪಾರ್ಹವಾಗಿದೆ ಎಂಬುದಾಗಿ ತಿಳಿಸಿದ್ದರು. ಈ ದೂರಿನ ಹಿನ್ನಲೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು,ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್ ಅವರಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಹೀಗಾಗಿ ಸಚಿವ ಜಮೀರ್ ಅಹ್ಮದ್ ಗೆ ಸಂಕಷ್ಟ ಎದುರಾದಂತೆ ಆಗಿದೆ. https://kannadanewsnow.com/kannada/woman-reveals-shocking-details-about-fake-ola-cab-at-bengaluru-airport/ https://kannadanewsnow.com/kannada/breaking-qr-code-for-dl-rc-soon-ramalinga-reddy/
ಬೆಂಗಳೂರು: ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾಹನವನ್ನು ಹತ್ತಿದ ನಂತರ ಮಹಿಳೆಯೊಬ್ಬರು ನಕಲಿ ಓಲಾ ಕ್ಯಾಬ್ ಚಾಲಕನೊಂದಿಗೆ ಅಹಿತಕರ ಅನುಭವವನ್ನು ಹಂಚಿಕೊಂಡಿದ್ದಾರೆ. ಎಕ್ಸ್ನಲ್ಲಿನ ಪೋಸ್ಟ್ನಲ್ಲಿ, ನಿಕಿತಾ ಮಲಿಕ್ ಈ ಘಟನೆಯ ವಿವರಗಳನ್ನು ಹಂಚಿಕೊಂಡಿದ್ದು, ಓಲಾದಂತಹ ಸೇವೆಗಳಂತೆ ನಟಿಸುವ ಅನಧಿಕೃತ ಚಾಲಕರು ಒಡ್ಡುವ ಅಪಾಯಗಳನ್ನು ಎತ್ತಿ ತೋರಿಸಿದ್ದಾರೆ. ನವೆಂಬರ್ 8 ರಂದು ರಾತ್ರಿ 10: 30 ರ ಸುಮಾರಿಗೆ ವಿಮಾನ ನಿಲ್ದಾಣದ ಗೊತ್ತುಪಡಿಸಿದ ಪಿಕಪ್ ಪ್ರದೇಶದಿಂದ ಓಲಾ ಕ್ಯಾಬ್ ಅನ್ನು ಕಾಯ್ದಿರಿಸಿದ್ದಾಗಿ ಮಲಿಕ್ ಹೇಳಿದ್ದಾರೆ. ಸ್ವಲ್ಪ ಸಮಯದ ನಂತರ, ಅಪ್ಲಿಕೇಶನ್ ಮೂಲಕ ಅವಳಿಗೆ ನಿಯೋಜಿಸದ ಚಾಲಕನು ಅವಳನ್ನು ಸಂಪರ್ಕಿಸಿ ಅವಳನ್ನು ಅವಳ ಗಮ್ಯಸ್ಥಾನಕ್ಕೆ ಕರೆದೊಯ್ಯಬಹುದು ಎಂದು ಹೇಳಿಕೊಂಡನು. “ಓಲಾ ಪಿಕಪ್ ನಿಲ್ದಾಣದಲ್ಲಿ ಬೆಂಗಳೂರು ವಿಮಾನ ನಿಲ್ದಾಣದಿಂದ ಪ್ರವೇಶಿಸಲ್ಪಟ್ಟ ಯಾದೃಚ್ಛಿಕ ಕ್ಯಾಬ್ ಚಾಲಕನಿಂದ ಬಹುತೇಕ ಕಳ್ಳಸಾಗಣೆ / ಅತ್ಯಾಚಾರ / ಲೂಟಿ / ಹಲ್ಲೆ ನಡೆಯಿತು ಮತ್ತು ರಾತ್ರಿ 10:30 ಕ್ಕೆ ವಿಮಾನ ನಿಲ್ದಾಣದ ಟರ್ಮಿನಲ್ 1 ರಲ್ಲಿ ಒಬ್ಬರಂತೆ ನಟಿಸಿ ನಾನು…
ದಕ್ಷಿಣ ಕನ್ನಡ: ಜಿಲ್ಲೆಯಲ್ಲಿ ಪ್ರೇಯಸಿಯ ಮನೆಗೆ ಬಂದಿದ್ದಂತ ಯುವಕನೊಬ್ಬನನ್ನು ಅದೇ ಗ್ರಾಮದ ಯುವಕರು ಕಂಬಕ್ಕೆ ಕಟ್ಟಿಹಾಕಿ, ಅರೆಬೆತ್ತಲೆಗೊಳಿಸಿ ಮನಬಂದಂತೆ ಹಲ್ಲೆ ಮಾಡಿರುವಂತ ಘಟನೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಸಜಿಪನಡು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಳೆದ ಎರಡು ದಿನಗಳ ಹಿಂದೆ ಬೆಂಗೆರೆಯ ನಿವಾಸಿಯಾಗಿದ್ದಂತ ಮೊಹಮ್ಮದ್ ಮುಸ್ತಾಫಾ ಎಂಬುವರಿಗೆ ಸಜಿಪನಡುವಿನ ಯುವತಿ ಪರಿಚಯವಾಗಿದ್ದ ಕಾರಣ, ಅವರ ಮನೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಯುವಕರ ಗುಂಪೊಂದು ಮುಸ್ತಾಫಾನನ್ನು ಹಿಡಿದು ಅರೆಬೆತ್ತಲೆಗೊಳಿಸಿ, ರಕ್ತ ಬರುವಂತೆ ಮನಸೋ ಇಚ್ಛೆ ಹಲ್ಲೆ ಮಾಡಿರುವುದಾಗಿ ತಿಳಿದು ಬಂದಿದೆ. ಹಲ್ಲೆಗೊಳಗಾದಂತ ಯುವಕ ಪೊಲೀಸ್ ಠಾಣೆಗೆ ತೆರಳಿ ಈ ಸಂಬಂಧ ದೂರು ನೀಡಿದ್ದಾನೆ. ಪ್ರೇಯಸಿಯ ಮನೆಗೆ ಬಂದಿದ್ದಂತ ಯುವಕನನ್ನು ಹಲ್ಲೆ ಮಾಡಿದಂತ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಳೆದ 2 ದಿನಗಳ ಹಿಂದೆ ನಡೆದಂತ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಹಲ್ಲೆ ಮಾಡಿದಂತ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. https://kannadanewsnow.com/kannada/who-have-you-done-a-fact-check-to-transfer-the-corrupt-to-another-district/ https://kannadanewsnow.com/kannada/will-you-resign-as-cm-if-bjp-wins-3-seats-in-by-elections-yediyurappas-question/
ಬೆಂಗಳೂರು: ಅಮಾನತುಗೊಂಡ ಭ್ರಷ್ಠಾಚಾರಿಗಳನ್ನು ಬೇರೆ ಜಿಲ್ಲೆಗೆ ವರ್ಗಾವಣೆಗೊಳಿಸಲು ಯಾರ ಬಳಿ “Fact Check” ಮಾಡಿಸಿದ್ದೀರಿ? ನಿಮ್ಮ ಪಾಲೆಷ್ಟು? ಎಂಬುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ರಾಯಚೂರು ಜಿಲ್ಲೆಯಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ಅಮಾನತುಗೊಂಡ PDO ಅಧಿಕಾರಿಗಳನ್ನು ಕಾನೂನು ಕ್ರಮ ಕೈಗೊಳ್ಳದೇ, ಯಾದಗಿರಿ ಜಿಲ್ಲೆಗೆ ವರ್ಗಾಯಿಸಿರುವುದು ಸ್ವತಃ ಕಾಂಗ್ರೆಸ್ ಸರ್ಕಾರವೇ ಭ್ರಷ್ಟಾಚಾರವನ್ನು ಪ್ರೋತ್ಸಾಹಿಸುವಂತಾಗಿದೆ ಎಂದು ಗುಡುಗಿದ್ದಾರೆ. ಮಾನ್ಯ ಪ್ರಿಯಾಂಕ್ ಖರ್ಗೆ ಅವರು ಭ್ರಷ್ಟಾಚಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಅವರ ಭ್ರಷ್ಠಾಚಾರ ಕೃತ್ಯವನ್ನು ಮರೆಮಾಚುವ ನಿಟ್ಟಿನಲ್ಲಿ ಮಾಡಿದ ಈ ವರ್ಗಾವಣೆ, ಸಿದ್ಧರಾಮಯ್ಯ ಸರ್ಕಾರದ ನಿಲುವಿನ ಮೇಲೆ ಸಂಶಯ ಹುಟ್ಟಿಸುತ್ತಿದೆ ಎಂದಿದ್ದಾರೆ. ಸಾಮಾನ್ಯ ಜನರಿಗೆ ನ್ಯಾಯ ಸಿಗಬೇಕಾದರೆ, ಭ್ರಷ್ಟ ಅಧಿಕಾರಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸುವುದು ಮುಖ್ಯ. ಆದರೆ ಸರ್ಕಾರವೇ ಇಂತಹ ಆಪಾದಿತ ಅಧಿಕಾರಿಗಳಿಗೆ ರಕ್ಷಣೆ ನೀಡಿದಂತಾಗಿದ್ದು, ಭ್ರಷ್ಟಾಚಾರಿಗಳಿಗೆ ಖುದ್ದು ಪ್ರೋತ್ಸಾಹ ನೀಡುತ್ತಿರುವಂತಾಗಿದೆ ಎಂದು ಕಿಡಿಕಾರಿದ್ದಾರೆ. ಅಮಾನತುಗೊಂಡ…
ಹಾವೇರಿ : ಉಪ ಚುನಾವಣೆಯಲ್ಲಿ ಶಿಗ್ಗಾವಿ ಸೇರಿದಂತೆ ಮೂರು ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಪರವಾದ ಗಾಳಿ ಇದೆ. ಮೂರು ಕ್ಷೇತ್ರದಲ್ಲಿ ಬಿಜೆಪಿ ಗೆದ್ದರೆ, ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತೀರಾ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಶ್ನಿಸಿದ್ದಾರೆ. ಶಿಗ್ಗಾವಿ ಸವಣೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರವಾಗಿ ಇಂದು ಹುಲಗೂರು, ತಡಸ್ ಗ್ರಾಮಗಳಲ್ಲಿ ರೋಡ್ ಶೋ ನಡೆಸಿ ಚುನಾವಣಾ ಪ್ರಚಾರ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಿಗ್ಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ ಬೊಮ್ಮಾಯಿ 50000 ಮತಗಳ ಅಂತರದಿಂದ ಗೆಲ್ಲುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವವೋ ಭರತ್ ಬೊಮ್ಮಾಯಿ ಗೆಲುವು ಅಷ್ಟೇ ಸತ್ಯ ಎಂದು ಹೇಳಿದರು. ಈ ಉಪ ಚುನಾವಣೆಯಲ್ಲಿ ಬಿಜೆಪಿ ಮೂರು ಕ್ಷೇತ್ರದಲ್ಲಿ ಗೆಲ್ಲಿಲಿದೆ. ಮೂರು ಕ್ಷೇತ್ರ ಗೆದ್ದರೆ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜಿನಾಮೆ ಕೊಡ್ತಿರಾ ಎಂದು ಪ್ರಶ್ನಿಸಿದರು. ಮೂರು ಕ್ಷೇತ್ರದಲ್ಲಿ ಬಿಜೆಪಿ ಗಾಳಿ…
ನವದೆಹಲಿ: ಕೆನಡಾಕ್ಕೆ ತೆರಳುವ ತನ್ನ ಯೋಜನೆಗೆ ಹಣ ನೀಡಲು ನಿರಾಕರಿಸಿದ್ದಕ್ಕಾಗಿ 31 ವರ್ಷದ ವ್ಯಕ್ತಿಯೊಬ್ಬ ತನ್ನ ತಾಯಿಯನ್ನು ಹನ್ನೆರಡಕ್ಕೂ ಹೆಚ್ಚು ಬಾರಿ ಇರಿದು ಕೊಂದ ಆಘಾತಕಾರಿ ಘಟನೆ ಆಗ್ನೇಯ ದೆಹಲಿಯಲ್ಲಿ ನಡೆದಿದೆ. ಆರೋಪಿ ಕೃಷ್ಣ ಕಾಂತ್ ನಿರುದ್ಯೋಗಿ ಮತ್ತು ಮಾದಕ ವ್ಯಸನಿಯಾಗಿದ್ದು, ದಾಳಿಯ ಸ್ವಲ್ಪ ಸಮಯದ ನಂತರ ಬಂಧಿಸಲಾಯಿತು. ಇದು ಅವನ ತಾಯಿ ಗೀತಾ (50) ಅವರ ಜೀವವನ್ನು ಬಲಿ ತೆಗೆದುಕೊಂಡಿತು. ಟೈಮ್ಸ್ ಆಫ್ ಇಂಡಿಯಾ (ಟಿಒಐ) ವರದಿಯ ಪ್ರಕಾರ, ಕಾಂತ್ ಅವರು ಮದುವೆಯಾಗುವವರೆಗೂ ವಿದೇಶಕ್ಕೆ ಹೋಗುವ ಬಯಕೆಯನ್ನು ಅವರ ಕುಟುಂಬವು ವಿರೋಧಿಸಿತ್ತು, ಇದು ಅವರೊಂದಿಗೆ ಬಿರುಕು ಮತ್ತು ಕುಟುಂಬ ಸಂಬಂಧಗಳನ್ನು ಹದಗೆಡಿಸಿತು. ನವೆಂಬರ್ 6 ರಂದು ಕಾಂತ್ ತನ್ನ ತಂದೆ ಸುರ್ಜೀತ್ ಸಿಂಗ್ಗೆ ಕರೆ ಮಾಡಿ ಮನೆಗೆ ಮರಳುವಂತೆ ಒತ್ತಾಯಿಸಿದಾಗ ಈ ಅಪರಾಧ ಬೆಳಕಿಗೆ ಬಂದಿದೆ. “ಆಗಮಿಸಿದಾಗ, ಸಿಂಗ್ ತನ್ನ ಮಗ ಕ್ಷಮೆಯಾಚಿಸುವುದನ್ನು ಮತ್ತು ಶಾಂತವಾಗಿರುವುದನ್ನು ಕಂಡು, ಮಹಡಿಗೆ ಹೋಗಲು ಸೂಚನೆ ನೀಡಿದರು” ಎಂದು ಪೊಲೀಸರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.…
ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದಂತ ಕೋವಿಡ್ ಕಿಟ್ ಖರೀದಿ ಹಗರಣದ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಆ ಬಗ್ಗೆ ಅವರ ಸುದ್ದಿಗೋಷ್ಠಿಯ ಸಂಪೂರ್ಣ ಹೈಲೈಟ್ಸ್ ಮುಂದೋ ಓದಿ. ಇಂದು ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಕೊರೋನ ಸಮಯದಲ್ಲಿ ಯಡಿಯೂರಪ್ಪ ಹಾಗೂ ಶ್ರೀ ರಾಮುಲು ಅವರು ಹೆಣದ ಮೇಲೆ ಹೇಗೆ ಹಣ ಮಾಡಿದರು ಎಂಬುದನ್ನು ಜಸ್ಟೀಜ್ ಕುನ್ಹಾ ಅವರ ಕೊರೋನ ಮಧ್ಯಂತರ ವರದಿಯಲ್ಲಿದೆ. ಈ ಮಧ್ಯಂತರ ವರದಿಯಲ್ಲಿ ಸುಮಾರು 700 ಕೋಟಿ ಹಗರಣದ ಬಗ್ಗೆ ಬೆಳಕು ಚೆಲ್ಲಲಾಗಿದೆ. ಸುಮಾರು 3 ಸಾವಿರ ಕೋಟಿಗೂ ಹೆಚ್ಚಿನ ಹಗರಣ ನಡೆದಿದೆ ಎನ್ನಬಹುದು ಎಂದರು. 17.03.2020 ರಂದು 416.48 ಕೋಟಿ ಮೊತ್ತದ ಔಷಧಿಗಳು, ಕೆಮಿಕಲ್ ಗಳು, ವೈದ್ಯಕೀಯ ಸಲಕರಣೆಗಳನ್ನು ಖರೀದಿ ಮಾಡಲಾಗುತ್ತದೆ. 18.03.2020 ರಂದು ಆರೋಗ್ಯ ಇಲಾಖೆಯ ಅಡಿಯಲ್ಲಿ ಬರುವ ಅಗತ್ಯ ವಸ್ತುಗಳ ನಿಗಾವಹಿಸುವ ಸಮಿತಿಯು ನಮಗೆ 12 ಲಕ್ಷ ಪಿಪಿಈ ಕಿಟ್ ಗಳು ಬೇಕು ಎಂದು…
ಬೆಂಗಳೂರು: ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಮುಂಬರುವ ಶಬರಿಮಲೆ ಋತುವಿನಲ್ಲಿ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು, ದಕ್ಷಿಣ ರೈಲ್ವೆ ಕೊಚುವೇಲಿ ಮತ್ತು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು (ಎಸ್ಎಂವಿಟಿ) ನಿಲ್ದಾಣಗಳ ನಡುವೆ ವಿಶೇಷ ರೈಲುಗಳ ಸೇವೆಯನ್ನು ಪ್ರತಿ ದಿಕ್ಕಿನಲ್ಲಿ ಹನ್ನೆರಡು ಟ್ರಿಪ್ ಗಳನ್ನು ಓಡಿಸಲು ಸೂಚಿಸಿದೆ. ಸೇವೆಗಳು: 1. ರೈಲು ಸಂಖ್ಯೆ 06083 ಕೊಚುವೇಲಿ-ಎಸ್ಎಂವಿಟಿ ಬೆಂಗಳೂರು ಸಾಪ್ತಾಹಿಕ ಎಕ್ಸ್ ಪ್ರೆಸ್ ವಿಶೇಷ ರೈಲು ಕೊಚುವೇಲಿ ನಿಲ್ದಾಣದಿಂದ ನವೆಂಬರ್ 12 ರಿಂದ ಜನವರಿ 28, 2025 ವರಗೆ 18:05 ಗಂಟೆಗೆ ಹೊರಟು, ಮರುದಿನ ದಿನ 10:55 ಗಂಟೆಗೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ. 2. ರೈಲು ಸಂಖ್ಯೆ 06084 ಎಸ್ಎಂವಿಟಿ ಬೆಂಗಳೂರು-ಕೊಚುವೇಲಿ ಸಾಪ್ತಾಹಿಕ ಎಕ್ಸ್ ಪ್ರೆಸ್ ವಿಶೇಷ ರೈಲು ಎಸ್ಎಂವಿಟಿ ಬೆಂಗಳೂರು ನಿಲ್ದಾಣದಿಂದ ನವೆಂಬರ್ 13 ರಿಂದ ಜನವರಿ 29, 2025 ವರಗೆ 12:45 ಗಂಟೆಗೆ ಹೊರಟು, ಮರುದಿನ ದಿನ 06:45 ಗಂಟೆಗೆ ಕೊಚುವೇಲಿ ತಲುಪಲಿದೆ. ಈ ರೈಲು ಎರಡು ದಿಕ್ಕಿನ ಮಾರ್ಗದಲ್ಲಿ, ಕೊಲ್ಲಮ್, ಕಾಯಂಕುಳಂ, ಪಾಲಕಾಡ್,…
ಬೆಂಗಳೂರು: ಕಾಲೇಜು ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಪ್ರಾಂಶುಪಾಲರ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿತ್ತು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, ಮರಿಟ್ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಈಗ ಅಭ್ಯರ್ಥಿಗಳ ಶೈಕ್ಷಣಿಕ ಹಾಗೂ ಮೀಸಲಾತಿ ಸಂಬಂಧಿತ ದೃಢೀಕೃತ ದಾಖಲಾತಿಗಳನ್ನು ಸಲ್ಲಿಸಲು ಸೂಚಿಸಿದೆ. ಈ ಕುರಿತಂತೆ ಕಾಲೇಜು ಶಿಕ್ಷಣ ಇಲಾಖೆಯಿಂದ ಜ್ಞಾಪನಪತ್ರವನ್ನು ಹೊರಡಿಸಲಾಗಿದ್ದು, ಕಾಲೇಜು ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಪ್ರಾಂಶುಪಾಲರ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, ಸಲ್ಲಿಸಿರುವ ಮೆರಿಟ್ ಪಟ್ಟಿಯಲ್ಲಿನ ಅಭ್ಯರ್ಥಿಗಳ ಶೈಕ್ಷಣಿಕ ಹಾಗೂ ಮೀಸಲಾತಿ ಸಂಬಂಧಿತ ದೃಢೀಕೃತ ದಾಖಲಾತಿಗಳನ್ನು ದಿನಾಂಕ:28.08.2024 ರೊಳಗಾಗಿ ಸಲ್ಲಿಸಲು ಉಲ್ಲೇಖ-(1) ರ ಈ ಕಛೇರಿಯ ಅಧಿಕೃತ ಜ್ಞಾಪನದಲ್ಲಿ ತಿಳಿಸಲಾಗಿತ್ತು. ತದನಂತರ, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಉಲ್ಲೇಖ-(2) ರಂತೆ ದಿನಾಂಕ:03.09.2024 ರವರೆಗೆ ವಿಸ್ತರಿಸಿ, ದಾಖಲೆಗಳನ್ನು ಸಲ್ಲಿಸಲು ಮತ್ತೊಮ್ಮೆ ಅವಕಾಶ ಕಲ್ಪಿಸಲಾಗಿತ್ತು. ಆದಾಗೂ ಈ ಅಧಿಕೃತ ಜ್ಞಾಪನದೊಂದಿಗೆ ಲಗತ್ತಿಸಿರುವ…
ಬೆಂಗಳೂರು : “ಚುನಾವಣೆಗಳಲ್ಲಿ ಸುಳ್ಳೇ ಬಿಜೆಪಿಯ ಪ್ರಬಲ ಅಸ್ತ್ರವಾಗಿದೆ. ಹೀಗಾಗಿ ಪ್ರಧಾನಮಂತ್ರಿಯಂತಹ ಉನ್ನತ ಹುದ್ದೆಯಲ್ಲಿರುವವರು ಆಧಾರರಹಿತ ಸುಳ್ಳು ಆರೋಪ ಮಾಡುತ್ತಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಸದಾಶಿವನಗರ ನಿವಾಸದ ಬಳಿ ಶಿವಕುಮಾರ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಭಾನುವಾರ ಪ್ರತಿಕ್ರಿಯೆ ನೀಡಿದರು. ಮಹಾರಾಷ್ಟ್ರ ಚುನಾವಣೆಗಾಗಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಬಕಾರಿ ಇಲಾಖೆಯಲ್ಲಿ ₹700 ಕೋಟಿ ವಸೂಲಿ ಮಾಡಿದೆ ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆರೋಪದ ಬಗ್ಗೆ ಕೇಳಿದಾಗ, “ಪ್ರಧಾನಮಂತ್ರಿಗಳು ರಾಜಕೀಯ ಆರೋಪ ಮಾಡುತ್ತಿದ್ದಾರೆ. ಅವರು ಈ ಆರೋಪಗಳನ್ನು ಸಾಬೀತುಪಡಿಸಲಿ. ನಾವು ಯಾವುದೇ ಶಿಕ್ಷೆಗೆ ಬೇಕಾದರೂ ಗುರಿಯಾಗುತ್ತೇವೆ. ಕೇಂದ್ರ ಸಚಿವರುಗಳು ಯಾವ ಯಾವ ಚುನಾವಣೆಗೆ ಎಷ್ಟೆಷ್ಟು ಹಣ ಸಂಗ್ರಹಿಸುತ್ತಿದ್ದಾರೆ ಎಂದು ನನಗೂ ಗೊತ್ತಿದೆ. ಉನ್ನತ ಹುದ್ದೆಯಲ್ಲಿರುವವರು ಆಧಾರವಿಲ್ಲದೆ ಆರೋಪ ಮಾಡಬಾರದು. ಮಹಾರಾಷ್ಟ್ರ ಕಾಂಗ್ರೆಸ್ ನವರು ಈ ಬಗ್ಗೆ ನಮ್ಮ ಜತೆ ಚರ್ಚೆಯನ್ನೇ ಮಾಡಿಲ್ಲ. ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳ ನಾಯಕರು ನಮ್ಮ ರಾಜ್ಯದ ಗ್ಯಾರಂಟಿ ಯೋಜನೆಗಳ ಬಗ್ಗೆ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ.…













