Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗದಿಂದ ಚುನಾವಣೆ ಘೋಷಣೆ ಮಾಡಲಾಗಿದೆ. ಜೂನ್.13ರಂದು ಮತದಾನ ನಡೆದು, ಅಂದೇ ಮತಏಣಿಕೆ ಕಾರ್ಯ ನಡೆಸಿ, ಫಲಿತಾಂಶ ಘೋಷಣೆ ಮಾಡಲಾಗುತ್ತಿದೆ. ಈ ಕುರಿತಂತೆ ಕೇಂದ್ರ ಚುನಾವಣಾ ಆಯೋಗದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಕರ್ನಾಟಕ ವಿಧಾನ ಪರಿಷತ್ತಿನ 11 ಸದಸ್ಯರ ಅಧಿಕಾರಾವಧಿಯು 17.06.2024 ರಂದು ನಿವೃತ್ತಿಯಾಗಲಿದ್ದು, ಈ ಕೆಳಗಿನ ವಿವರಗಳ ಪ್ರಕಾರ ದಿನಾಂಕ 17.06.2024 ರಂದು ಕೊನೆಗೊಳ್ಳಲಿದೆ ಎಂದಿದೆ. ದಿನಾಂಕ 17-06-2024ರಂದು ವಿಧಾನ ಪರಿಷತ್ತಿನ ಸದಸ್ಯರಾದಂತ ಅರವಿಂದ್ ಕುಮಾರ್ ಅರಳಿ, ಎನ್ ಎಸ್ ಬೋಸರಾಜು, ಕೆ ಗೋವಿಂದರಾಜ್, ಡಾ.ತೇಜಸ್ವಿನಿ ಗೌಡ, ಮುನಿರಾಜು ಗೌಡ ಪಿಎಂ, ಕೆ.ಪಿ ನಂಜುಂಡಿ, ಬಿಎಂ ಫಾರೂಕ್, ರಘುನಾಥ್ ಮಲ್ಕಾಪುರೆ, ಎನ್ ರವಿಕುಮಾರ್, ಎಸ್ ರುದ್ರೇಗೌಡ ಹಾಗೂ ಕೆ ಹರೀಶ್ ಕುಮಾರ್ ಅವರ ಅವಧಿ ಮುಗಿಯಲಿದೆ ಎಂದಿದೆ. ಈ 11 ಕರ್ನಾಟಕ ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆಗಾಗಿ ಅಧಿಸೂಚನೆ ದಿನಾಂಕ 27-04-2024ರಂದು ಹೊರಡಿಸಲಾಗುತ್ತದೆ. ದಿನಾಂಕ 03-06-2024 ನಾಮಪತ್ರ ಸಲ್ಲಿಸಲು…
ಬೆಂಗಳೂರು: ಹಾಸನ ಪೆನ್ ಡ್ರೈವ್ ಪ್ರಕರಣ ಸಂಬಂಧ ವಿದೇಶದಿಂದ ಪ್ರಜ್ವಲ್ ಬಂದು ತನಿಖೆಗೆ ಸಹಕಾರ ನೀಡಬೇಕು. ಪ್ರಜ್ವಲ್ ರೇವಣ್ಣ ವಿದೇಶದಿಂದ ಬಂದು ಪೊಲೀಸರಿಗೆ ಶರಣಾಗಬೇಕು. ಎಷ್ಟು ದಿನ ಕಳ್ಳ ಪೊಲೀಸ್ ಆಟ ಆಡ್ತೀಯಾ? ಬಂದು ಶರಣಾಗು ಎಂಬುದಾಗಿ ಪ್ರಜ್ವಲ್ ರೇವಣ್ಣಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮನವಿ ಮಾಡಿದರು. ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಅಶ್ಲೀಲ ವೀಡಿಯೋ ಸಂಬಂಧ ಪ್ರಜ್ವಲ್ ರೇವಣ್ಣ ವಿದೇಶದಿಂದ ತನಿಖೆಗೆ ಸಹಕಾರ ನೀಡಬೇಕು. ನಾನು ಮಾಧ್ಯಮಗಳ ಮೂಲಕ ಮನವಿ ಮಾಡುತ್ತೇನೆ. ಈ ನೆಲದ ಕಾನೂನು ಇದೆ. ಯಾಕೆ ವಿದೇಶದಲ್ಲಿ ಇರಬೇಕು? ಎಷ್ಟು ದಿನ ಕಳ್ಳ ಪೋಲೀಸ್ ಆಟ ಆಡ್ತೀಯಾ ಎಂದರು. ಕೈ ಮುಗಿದು ಮನವಿ ಮಾಡುತ್ತೇನೆ. ನನ್ನ ಹಾಗೂ ಹೆಚ್.ಡಿ ದೇವೇಗೌಡರ ಮೇಲೆ ಗೌರವ ಇದ್ದರೇ 24-48 ಗಂಟೆ ಒಳಗೆ ಬೆಂಗಳೂರಿಗೆ ಬಂದು, ಪೊಲೀಸರಿಗೆ ಶರಣಾಗುವಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮನವಿ ಮಾಡಿದರು. ಅಂದಹಾಗೇ ಅಶ್ಲೀಲ ವೀಡಿಯೋ ಬೆಳಕಿಗೆ ಬರುತ್ತಿದ್ದಂತ ಸಂಸದ ಪ್ರಜ್ವಲ್…
ಬೆಂಗಳೂರು: ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿ. ತನ್ನ ಕಳೆದ ಹಣಕಾಸು ವರ್ಷದ ಮತ್ತು ಮಾರ್ಚ್ 31, 2024ಕ್ಕೆ ಅಂತ್ಯಗೊಂಡ 4ನೇ ತ್ರೈಮಾಸಿಕ ಅವಧಿಯ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಬ್ಯಾಂಕ್ ಮಾರ್ಚ್ 31ಕ್ಕೆ ಕೊನೆಯಾದ ತ್ರೈಮಾಸಿಕ ಅವಧಿಯಲ್ಲಿ 6,681 ಕೋಟಿ ರೂ. ಸಾಲವನ್ನು ವಿತರಿಸಿದ್ದು, ಕಳೆದ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಸಾಲ ವಿತರಣೆಯಲ್ಲಿ ಶೇ.11ರಷ್ಟು ಬೆಳವಣಿಗೆ ಸಾಧಿಸಲಾಗಿದೆ. ಅದೇ ರೀತಿ, 2023-2024ನೇ ಹಣಕಾಸು ವರ್ಷದಲ್ಲಿ ಬ್ಯಾಂಕ್ ಒಟ್ಟಾರೆ 23,389 ಕೋಟಿ ರೂ. ಸಾಲ ವಿತರಿಸಿದ್ದು, ಕಳೆದ ವಿತ್ತೀಯ ವರ್ಷಕ್ಕೆ ಹೋಲಿಸಿದರೆ ಶೇ.17ರಷ್ಟು ಹೆಚ್ಚಳವಾಗಿದೆ. ಮಾ.31ಕ್ಕೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಕೈಗೆಟಕುವ ದರದಲ್ಲಿ ಒಟ್ಟು730 ಕೋಟಿ ರೂ.ಗಳ ಗೃಹ ಸಾಲ ನೀಡಲಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ಶೇ.66ರಷ್ಟು ಹೆಚ್ಚು ಸಾಲ ವಿತರಣೆಯಾಗಿದೆ. 2023-2024ನೇ ಹಣಕಾಸು ವರ್ಷದಲ್ಲಿ 2,284 ಕೋಟಿ ರೂ. ಗೃಹ ಸಾಲ ವಿತರಿಸಲಾಗಿದ್ದು, ಕಳೆದ ವಿತ್ತ ವರ್ಷಕ್ಕೆ ಹೋಲಿಸಿದರೆ ಶೇ.64ರಷ್ಟು ಹೆಚ್ಚಳ ಕಂಡಿದೆ. 23-24ರ…
ಅಹಮದಾಬಾದ್: ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಸೋಮವಾರ ಅಹಮದಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಲ್ವರು ಐಸಿಸ್ ಭಯೋತ್ಪಾದಕರನ್ನು ಬಂಧಿಸಿದೆ. ಅಹ್ಮದಾಬಾದ್ ವಿಮಾನ ನಿಲ್ದಾಣದಲ್ಲಿ ಶ್ರೀಲಂಕಾ ಮೂಲದ ನಾಲ್ವರು ಐಸಿಸ್ ಉಗ್ರರರನ್ನು ಎಟಿಎಸ್ ಅಧಿಕಾರಿಗಳು ಬಂಧಿಸಿದ್ದಾರೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗಿದೆ. https://kannadanewsnow.com/kannada/cet-exam-result-to-be-declared-only-after-2nd-puc-exam-2-results-kea/ https://kannadanewsnow.com/kannada/breaking-sc-refuses-to-entertain-plea-against-new-criminal-laws/
ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ-2 ಹಾಗೂ ಕೃಷಿ ಪ್ರಾಯೋಗಿಕ ಪರೀಕ್ಷೆಗಳ ಫಲಿತಾಂಶದ ನಂತ್ರ, ಸಾಮಾನ್ಯ ಪ್ರವೇಶ ಪರೀಕ್ಷೆ( CET-2024) ಫಲಿತಾಂಶ ಪ್ರಕಟಿಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸ್ಪಷ್ಟ ಪಡಿಸಿದೆ. ಈ ಬಗ್ಗೆ ಎಕ್ಸ್ ನಲ್ಲಿ ಮಾಹಿತಿ ಪೋಸ್ಟ್ ಮಾಡಿದ್ದು, ದ್ವಿತೀಯ ಪಿಯುಸಿ ಮತ್ತು ಕೃಷಿ ಪ್ರಾಯೋಗಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾದ ನಂತರವೇ ಕೆಸಿಇಟಿ-24ರ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಎಂದಿದೆ. ಇದಲ್ಲದೆ, ಪ್ರಕಟಣೆಯ ದಿನಾಂಕಕ್ಕೆ ಮುಂಚಿತವಾಗಿ ಫಲಿತಾಂಶಗಳನ್ನು ಪ್ರಕಟಿಸುವ ದಿನಾಂಕವನ್ನು ಕೆಇಎ ಅಧಿಕೃತವಾಗಿ ತಿಳಿಸುತ್ತದೆ. ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೆ ಒಳಗಾಗಬಾರದು. ಹೆಚ್ಚಿನ ಮಾಹಿತಿಗೆ ಸಂಬಂಧಿಸಿದಂತೆ ಕೆಇಎ ಅಧಿಕೃತ ಜಾಲತಾಣ www.kea.kar.nic.in ಗೆ ಭೇಟಿ ನೀಡಿ ಪರಿಶೀಲಿಸಬಹುದು ಎಂದು ಹೇಳಿದೆ. https://twitter.com/KEA_karnataka/status/1792446348773708038 https://kannadanewsnow.com/kannada/did-cm-siddaramaiah-thank-the-killers/ https://kannadanewsnow.com/kannada/breaking-sc-refuses-to-entertain-plea-against-new-criminal-laws/
ಬೆಂಗಳೂರು: ಮುಖ್ಯಮಂತ್ರಿಗಳು ಕೊಲೆಗಡುಕರಿಗೆ ಧನ್ಯವಾದ ಹೇಳಿದ್ದಾರಾ? ತಮ್ಮ ಸರಕಾರದ ಅವಧಿ ಮುಗಿದುದಕ್ಕೆ ಬೈಬೈ- ಗುಡ್ ಬೈ ಎಂದು ಧನ್ಯವಾದ ಹೇಳಿದ್ದಾರೋ ಅರ್ಥ ಆಗಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ತಿಳಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅವರ ಮುಖದ ಕಳೆ ನೋಡಿದರೆ ಅವರು ಸರಕಾರದ ಕೊನೆ ಅವಧಿ ಎದುರಿಸುತ್ತಿರುವಂತಿತ್ತು ಎಂದು ವಿಶ್ಲೇಷಿಸಿದರು. ಕಾಂಗ್ರೆಸ್ ಸರಕಾರದ ಒಂದು ವರ್ಷ ಕೊಲೆಗಡುಕರಿಗೆ ಹರ್ಷ. ಒನ್ ಇಯರ್ ಖಜಾನೆ ಫುಲ್ ಕ್ಲಿಯರ್, ಖಾಲಿ ಖಾಲಿ. ವರುಷ ಒಂದು ಸಮಸ್ಯೆಗಳು ನೂರೊಂದು. ಕಾಂಗ್ರೆಸ್ ಸರಕಾರ ಬಂತು; ಜನರ ಮುಖದಲ್ಲಿ ಹರ್ಷ ಇಲ್ಲ ಎಂದು ತಿಳಿಸಿದರು. ಕಾಂಗ್ರೆಸ್ ಲೂಟಿ ಎಷ್ಟು ಕೋಟಿ ಎಂದು ಜನರು ಲೆಕ್ಕ ಹಾಕುತ್ತಿದ್ದಾರೆ. ನೇಹಾ, ಮೀನಾ, ಅಂಜಲಿ ಎಂಬ ಮಹಾಲಕ್ಷ್ಮಿಯರು. ನಮ್ಮ ಮನೆಯ ಮಹಾಲಕ್ಷಿಯರಿಗಿಲ್ಲ ಬದುಕುವ ಭಾಗ್ಯ ಎಂದರಲ್ಲದೆ, ನೇಹಾ, ಮೀನಾ, ಅಂಜಲಿ ಆಯ್ತು. ಮುಂದೆ ಯಾರೆಂದು ನಮ್ಮ ಹೆಣ್ಮಕ್ಕಳು ಆತಂಕದಿಂದ…
ಬೆಂಗಳೂರು: ಹಾಸನದ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿರುದ್ಧ ಮಹಿಳೆಯರೊಬ್ಬರು ಲೈಂಗಿಕ ದೌರ್ಜನ್ಯ ಪ್ರಕರಮ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಇಂದು ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಮೇ.16ರಂದು ಜೆಡಿಎಸ್ ಶಾಸಕ ಹೆಚ್.ಡಿ ರೇವಣ್ಣ ವಿರುದ್ಧ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ಒಂದು ದಿನದ ಮಟ್ಟಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಮೇ.17ರಂದು ಜಾಮೀನು ಅವಧಿ ಮುಕ್ತಾಯಗೊಂಡ ಹಿನ್ನಲೆಯಲ್ಲಿ ನ್ಯಾಯಪೀಠವು, ಅರ್ಜಿಯ ವಿಚಾರಣೆ ನಡೆಸಿತು. ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ನ ನ್ಯಾಯಪೀಠದ ಮುಂದೆ ಎಸ್ಐಟಿ ಪರ ಎಸ್ ಪಿಪಿ ಜಾಯ್ನಾ ಕೊಥಾರಿ ಅವರು ಆರಂಭದಲ್ಲಿ ವಾದ ಮಂಡಿಸಿದರು. ಅವರು ಐಪಿಸಿ ಸೆಕ್ಷನ್ 436ರಡಿ ದಾಖಲಾಗಿರುವಂತ ಪ್ರಕರಣದಲ್ಲಿ ಜಾಮೀನು ಅರ್ಜಿ ಊರ್ಜಿತವಲ್ಲ. ಈಗಾಗಲೇ ಈ ಪ್ರಕರಣದಲ್ಲಿ ಹೆಚ್.ಡಿ ರೇವಣ್ಣ ಅವರು ಕೋರ್ಟ್ ಮುಂದೆ ಶರಣಾಗಿದ್ದಾರೆ. ಐಪಿಸಿ ಸೆಕ್ಷನ್ 376ರಡಿ ಜೀವಾವಧಿ ಶಿಕ್ಷೆ ಇದೆ. ಇದು ಜಾಮೀನು…
ಬೆಂಗಳೂರು : ಬಿಜೆಪಿಯ ನಿರಂತರ ಅಪಪ್ರಚಾರದ ನಡುವೆಯೂ ಗ್ಯಾರಂಟಿಗಳು ಜನರ ಮನೆ ಮನೆ ತಲುಪಿವೆ. ಗ್ಯಾರಂಟಿಗಳ ಹೊರತಾಗಿ ಅಭಿವೃದ್ಧಿಗೂ ಹಣ ಮೀಸಲಿಟ್ಟು ಖರ್ಚು ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಕಿ ಅಂಶಗಳ ಸಮೇತ ವಿವರಿಸಿದರು. ಸರ್ಕಾರಕ್ಕೆ ವರ್ಷ ಪೂರೈಸಿದ ಸಂದರ್ಭದಲ್ಲಿ ಬೆಂಗಳೂರು ಪ್ರೆಸ್ ಕ್ಲಬ್ ಆಯೋಜಿಸಿದ್ದ ಮೀಟ್ ದ ಪ್ರೆಸ್ ನಲ್ಲಿ ಮಾತನಾಡಿದರು. ವಿಜಯೇಂದ್ರ, ಆರ್.ಅಶೋಕ್ ಗೆ ಆರ್ಥಿಕತೆ ಅರ್ಥ ಆಗಲ್ಲ. ಹೀಗಾಗಿ ಖಜಾನೆ ಖಾಲಿ ಆಗಿದೆ ಎಂದು ಪರಮ ಸುಳ್ಳು ಹೇಳುತ್ತಿದ್ದಾರೆ. ನಾವು ಗ್ಯಾರಂಟಿಯೇತರ ಅಭಿವೃದ್ಧಿ ಕಾರ್ಯಗಳಿಗೆ 54374 ಕೋಟಿ ಖರ್ಚು ಮಾಡುವುದಾಗಿ ಬಜೆಟ್ ನಲ್ಲಿ ಹೇಳಿದ್ದೆವು. ಆದರೆ 56274 ಕೋಟಿ ಖರ್ಚು ಮಾಡಿದೆವು. ಅಂದರೆ ಬಜೆಟ್ ನಲ್ಲಿ ಹೇಳಿದ್ದಕ್ಕಿಂತ ಹೆಚ್ಚು ಖರ್ಚು ಮಾಡಿದ್ದೇವೆ ಎಂದು ಅಂಕಿ ಅಂಶಗಳ ಸಮೇತ ವಿವರಿಸಿದರು. ನೀರಾವರಿಗೆ 16360 ಕೋಟಿ ಖರ್ಚು ಮಾಡುವುದಾಗಿ ಬಜೆಟ್ ನಲ್ಲಿ ಹೇಳಿದ್ದೆವು. ಆದರೆ 18198 ಕೋಟಿ ಖರ್ಚು ಮಾಡಿದೆವು. ಹೇಳಿದ್ದಕ್ಕಿಂತ ಹೆಚ್ಚು ಖರ್ಚು ಮಾಡಿದ್ದೇವೆ. ಲೋಕೋಪಯೋಗಿ ಇಲಾಖೆಗೂ 9661…
ಇರಾನ್: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದ ಹಿನ್ನೆಲೆಯಲ್ಲಿ ಅವರ ನಿಧನಕ್ಕೆ ಐದು ದಿನಗಳ ಸಾರ್ವಜನಿಕ ಶೋಕಾಚರಣೆಯನ್ನು ಇರಾನ್ನ ಸರ್ವೋಚ್ಚ ನಾಯಕ ಅಲಿ ಖಮೇನಿ ಘೋಷಿಸಿದ್ದಾರೆ. ಮೊದಲ ಉಪಾಧ್ಯಕ್ಷ ಮೊಹಮ್ಮದ್ ಮೊಖ್ಬರ್ ಅವರನ್ನು ದೇಶದ ಕಾರ್ಯನಿರ್ವಾಹಕ ಶಾಖೆಯ ಮಧ್ಯಂತರ ಮುಖ್ಯಸ್ಥರಾಗಿ ನೇಮಕ ಮಾಡಿರುವುದನ್ನು ದೃಢಪಡಿಸಿದ್ದಾರೆ. ರೈಸಿ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲು ಅಧ್ಯಕ್ಷೀಯ ಚುನಾವಣೆ ನಡೆಸಲು ಇರಾನ್ ಈಗ ಗರಿಷ್ಠ 50 ದಿನಗಳ ಅವಧಿಯನ್ನು ಹೊಂದಿದೆ. “ನಾನು ಐದು ದಿನಗಳ ಸಾರ್ವಜನಿಕ ಶೋಕಾಚರಣೆಯನ್ನು ಘೋಷಿಸುತ್ತೇನೆ ಮತ್ತು ಇರಾನ್ನ ಪ್ರೀತಿಯ ಜನರಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ” ಎಂದು ಖಮೇನಿ ಅಧಿಕೃತ ಸುದ್ದಿ ಸಂಸ್ಥೆ ಐಆರ್ಎನ್ಎ ನಡೆಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. “ಮೊಖ್ಬರ್ ಕಾರ್ಯನಿರ್ವಾಹಕ ಶಾಖೆಯನ್ನು ನಿರ್ವಹಿಸುತ್ತಾರೆ ಮತ್ತು ಗರಿಷ್ಠ 50 ದಿನಗಳಲ್ಲಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು ಶಾಸಕಾಂಗ ಮತ್ತು ನ್ಯಾಯಾಂಗ ಶಾಖೆಗಳ ಮುಖ್ಯಸ್ಥರೊಂದಿಗೆ ವ್ಯವಸ್ಥೆ ಮಾಡಲು ಬದ್ಧರಾಗಿದ್ದಾರೆ” ಎಂದು ಅವರು ಹೇಳಿದರು. https://kannadanewsnow.com/kannada/note-date-for-registration-of-students-for-sslc-exam-ii-extended/ https://kannadanewsnow.com/kannada/breaking-sc-refuses-to-entertain-plea-against-new-criminal-laws/
ಬೆಂಗಳೂರು: 2024ರ ಎಸ್ ಎಸ್ ಎಲ್ ಸಿ ಪರೀಕ್ಷೆ-2ಕ್ಕೆ ಪುನರಾವರ್ತಿತ ಮತ್ತು ಫಲಿತಾಂಶ ಉತ್ತಮಪಡಿಸಿಕೊಳ್ಳುವ ವಿದ್ಯಾರ್ಥಿಗಳ ನೋಂದಣಿ ದಿನಾಂಕವನ್ನು ವಿಸ್ತರಣೆ ಮಾಡಿ ಶಾಲಾ ಶಿಕ್ಷಣ ಇಲಾಖೆ ಆದೇಶಿಸಿದೆ. ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದ್ದು, 2024ರ ಎಸ್ ಎಸ್ ಎಲ್ ಸಿ ಪರೀಕ್ಷೆ-1ಕ್ಕೆ ನೋಂದಾಯಿಸಿಕೊಂಡು ಪರೀಕ್ಷೆಗೆ ಗೈರು ಹಾಜರಾದ, ಪೂರ್ಣಗೊಳಿಸಲಾಗಿಲ್ಲದ, ಹಿಂದಿನ ಸಾಲಿನಲ್ಲಿ ಅನುತ್ತೀರ್ಣರಾದ ಹಾಗೂ ಫಲಿತಾಂಶ ಉತ್ತಮಪಡಿಸಿಕೊಳ್ಳುವ ಅಭ್ಯರ್ಥಿಗಳಿಗೆ 2024ರ ಜೂನ್ ನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷ-2 ಅನ್ನು ನಡೆಸಲಾಗುತ್ತಿದೆ ಎಂದಿದ್ದಾರೆ. ಎಸ್ ಎಸ್ ಎಲ್ ಸಿ ಪರೀಕ್ಷೆ-2ಕ್ಕೆ ಪುನರಾವರ್ತಿತ ಮತ್ತು ಫಲಿತಾಂಶ ಉತ್ತಮಪಡಿಸಿಕೊಳ್ಳುವ ವಿದ್ಯಾರ್ಥಿಗಳ ನೋಂದಣಿ ದಿನಾಂಕವನ್ನು ಈ ಕೆಳಕಂಡಂತೆ ವಿಸ್ತರಣೆ ಮಾಡಲಾಗಿದೆ. ಮಂಡಳಿಯ ಜಾಲತಾಣದ ಶಾಲಾ ಲಾಗಿನ್ ಮೂಲಕ ವಿದ್ಯಾರ್ಥಿಗಳ ಮಾಹಿತಿಯನ್ನು ಅಪ್ ಲೋಡ್ ಮಾಡಲು ದಿನಾಂಕ 21-05-2024ರ ಮಧ್ಯರಾತ್ರಿ 12 ಗಂಟೆಯವರೆಗೆ ವಿಸ್ತರಣೆ ಮಾಡಲಾಗಿದೆ. ಮಂಡಳಿಯ ಜಾಲತಾಣದ ಶಾಲಾ ಲಾಗಿನ್ ಮೂಲಕ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕದ ಚಲನ್ ಮುದ್ರಿಸಿಕೊಳ್ಳಲು ದಿನಾಂಕ…