Subscribe to Updates
Get the latest creative news from FooBar about art, design and business.
Author: kannadanewsnow09
ನವದೆಹಲಿ: ದೇಶದಲ್ಲಿ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಲು ನಿರಾಕರಿಸಿದ ತನ್ನ ಹಿಂದಿನ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಪರಿಶೀಲಿಸಲು ಭಾರತದ ಸುಪ್ರೀಂ ಕೋರ್ಟ್ ಸಜ್ಜಾಗಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಹಿಮಾ ಕೊಹ್ಲಿ, ಬಿ.ವಿ.ನಾಗರತ್ನ ಮತ್ತು ಪಿ.ಎಸ್.ನರಸಿಂಹ ಅವರನ್ನೊಳಗೊಂಡ ಐದು ನ್ಯಾಯಾಧೀಶರ ಪೀಠವು ಜುಲೈ 10 ರಂದು ಈ ಪ್ರಕರಣದ ವಿಚಾರಣೆ ನಡೆಸಲಿದೆ. ಕಳೆದ ವರ್ಷ ನವೆಂಬರ್ನಲ್ಲಿ, ವಿವಾಹ ಸಮಾನತೆಯ ಹಕ್ಕುಗಳನ್ನು ಪ್ರತಿಪಾದಿಸುವ ಅರ್ಜಿದಾರರು ಸಲಿಂಗ ದಂಪತಿಗಳಿಗೆ ಯಾವುದೇ ಕಾನೂನು ಮಾನ್ಯತೆಯನ್ನು ನಿರಾಕರಿಸಿದ ಸುಪ್ರೀಂ ಕೋರ್ಟ್ ಸಂವಿಧಾನ ಪೀಠದ ತೀರ್ಪಿನ ವಿರುದ್ಧ ಸಲ್ಲಿಸಲಾದ ಪರಿಶೀಲನಾ ಅರ್ಜಿಯ ಮುಕ್ತ ನ್ಯಾಯಾಲಯದ ವಿಚಾರಣೆಯನ್ನು ಕೋರಿದ್ದರು. ಅರ್ಜಿದಾರರನ್ನು ಪ್ರತಿನಿಧಿಸುವ ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ನ್ಯಾಯಪೀಠದ ಮುಂದೆ ಈ ವಿಷಯವನ್ನು ಎತ್ತಿದರು. ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಬಾರದು ಎಂದು ರೋಹ್ಟಗಿ ಒತ್ತಿ ಹೇಳಿದರು ಮತ್ತು ಮುಕ್ತ ನ್ಯಾಯಾಲಯದ ವಿಚಾರಣೆಗೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್,…
ಲೇಬರ್ ಪಕ್ಷದ ಭರ್ಜರಿ ಗೆಲುವಿನ ನಂತರ ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ‘ರಿಷಿ ಸುನಕ್’ ರಾಜೀನಾಮೆ | Rishi Sunak Resign
ಯುಕೆ: ಎಡಪಂಥೀಯ ಲೇಬರ್ ಪಕ್ಷದ ವಿರುದ್ಧ ಸೋಲನ್ನು ಒಪ್ಪಿಕೊಂಡಿರುವ ಪ್ರಧಾನಿ ರಿಷಿ ಸುನಕ್, ಬ್ರಿಟಿಷ್ ಜನರು “ಗಂಭೀರವಾದ ತೀರ್ಪನ್ನು ನೀಡಿದ್ದಾರೆ” ಎಂದು ಶುಕ್ರವಾರ ಹೇಳಿದ್ದಾರೆ. ಅಲ್ಲದೇ ಬ್ರಿಟನ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಕೈರ್ ಸ್ಟಾರ್ಮರ್ ನೇತೃತ್ವದ ಪಕ್ಷವು ಈಗ 14 ವರ್ಷಗಳಲ್ಲಿ ಮೊದಲ ಬಾರಿಗೆ ಕನ್ಸರ್ವೇಟಿವ್ಗಳನ್ನು ಬದಲಿಸಲು ಸರ್ಕಾರವನ್ನು ರಚಿಸಲಿದೆ. ಮುಂದಿನ ಐದು ವರ್ಷಗಳ ಕಾಲ ಸಂಸತ್ತಿನಲ್ಲಿ ಕುಳಿತುಕೊಳ್ಳುವ 650 ಸಂಸದರನ್ನು ಆಯ್ಕೆ ಮಾಡಲು ನಡೆದ ರಾಷ್ಟ್ರೀಯ ಚುನಾವಣೆಯಲ್ಲಿ ಬ್ರಿಟೀಷರು ಗುರುವಾರ ಮತ ಚಲಾಯಿಸಿದರು. ಹೆಚ್ಚಿನ ಸ್ಥಾನಗಳನ್ನು ಎಣಿಕೆ ಮಾಡಲಾಗಿದ್ದು, ಸ್ಟಾರ್ಮರ್ ನೇತೃತ್ವದ ಲೇಬರ್ ಪಕ್ಷವು ಸಂಸತ್ತಿನಲ್ಲಿ ಕನಿಷ್ಠ 400 ಸ್ಥಾನಗಳನ್ನು ಗಳಿಸಿದೆ. ನಿರ್ಗಮಿತ ಯುಕೆ ಪ್ರಧಾನಿ ರಿಷಿ ಸುನಕ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಶುಭ ಹಾರೈಸಿದ್ದಾರೆ ಮತ್ತು ಅವರ ನಾಯಕತ್ವದಲ್ಲಿ ಯುಕೆ ಮತ್ತು ಭಾರತದ ನಡುವಿನ ಸಂಬಂಧಗಳು ಗಾಢವಾಗಿವೆ ಎಂದು ಹೇಳಿದರು. “ಯುಕೆಯ ನಿಮ್ಮ ಪ್ರಶಂಸನೀಯ ನಾಯಕತ್ವಕ್ಕಾಗಿ ಮತ್ತು ನಿಮ್ಮ ಅಧಿಕಾರಾವಧಿಯಲ್ಲಿ ಭಾರತ ಮತ್ತು ಯುಕೆ…
ಶಿವಮೊಗ್ಗ : ಭಾರತೀಯ ವಾಯುಪಡೆಯಿಂದ ಅಗ್ನಿಪಥ್ ಯೋಜನೆಯಡಿಯಲ್ಲಿ ಅಗ್ನಿವೀರ್ ವಾಯು ಸೇವೆಗೆ ಆಯ್ಕೆ ಪರೀಕ್ಷೆಗಾಗಿ ಎಸ್.ಎಸ್.ಎಲ್.ಸಿ, ದ್ವಿತೀಯ ಪಿಯುಸಿ/ತತ್ಸಮಾನ, ಡಿಪ್ಲೋಮಾ, ವೃತ್ತಿಪರ ಕೋರ್ಸ್ ವಿದ್ಯಾರ್ಹತೆ ಹೊಂದಿರುವ, 03, ಜುಲೈ-2004 ರಿಂದ 03, ಜನವರಿ 2008ರ ನಡುವೆ ಜನಿಸಿರುವ ಅವಿವಾಹಿತ ಪುರುಷ ಮತ್ತು ಮಹಿಳೆಯರಿಂದ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಆನ್ಲೈನ್ https://agnipathvayu.cdac.in ರಲ್ಲಿ ನೊಂದಾಯಿಸಿಕೊಂಡು, ಜಿಲ್ಲಾ ಉದ್ಯೋಗ ವಿನಿಯಮ ಕಚೇರಿ, ಗುತ್ಯಪ್ಪ ಕಾಲೋನಿ, ಪಂಪಾನಗರ 2ನೇ ಕ್ರಾಸ್, ಸಾಗರ ರಸ್ತೆ, ಶಿವಮೊಗ್ಗ ಇಲ್ಲಿಗೆ ಸಂಪರ್ಕಿಸುವಂತೆ ಉದ್ಯೋಗಾಧಿಕಾರಿ ಖಲಂದರ್ ಖಾನ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.: 08182-255293/ 9108235132 ಗಳನ್ನು ಸಂಪರ್ಕಿಸುವುದು. https://kannadanewsnow.com/kannada/cm-siddaramaiah-gives-kannada-grammar-lesson-to-students-applause-from-children/ https://kannadanewsnow.com/kannada/beware-of-bangaloreans-from-now-on-if-you-throw-garbage-everywhere-you-will-be-fined-heavily/
ಬೆಂಗಳೂರು: ಇಂದು ಸಿಎಂ ಸಿದ್ಧರಾಮಯ್ಯ ಶಿಕ್ಷಕರಾದರು. ವಿದ್ಯಾರ್ಥಿಗಳಿಗೆ ಕನ್ನಡ ವ್ಯಾಕರಣ ಪಾಠ ಮಾಡಿದರು. ಸಿಎಂ ಸಿದ್ಧರಾಮಯ್ಯ ಅವರ ಕನ್ನಡ ವ್ಯಾಕರಣದ ಪಾಠ ಕೇಳಿದಂತ ಮಕ್ಕಳಂತೂ ಚಪ್ಪಾಳೆಗಳ ಮಹಾಪೂರವನ್ನೇ ಹರಿಸಿದರು. ಅದು ಎಲ್ಲಿ ಅಂತ ಮುಂದೆ ಓದಿ. ಬೆಂಗಳೂರಿನ ಚಾಮರಾಜಪೇಟೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ದಿಢೀರ್ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಭೇಟಿ ನೀಡಿದರು. SCSP/TSP ಸಭೆಯ ಬಳಿಕ ನೇರವಾಗಿ ಭೇಟಿ ನೀಡಿದರು. ಮುಖ್ಯಮಂತ್ರಿಗಳು ಗಮನಿಸಿದ ಲೋಪಗಳು… 250 ವಿದ್ಯಾರ್ಥಿಗಿರುವ ಶಾಲೆ *ಮೊದಲಿಗೆ 10 ನೇ ತರಗತಿಗೆ ಸಿಎಂ ಮತ್ತು ಸಚಿವರ ಭೇಟಿ. ವಿದ್ಯಾರ್ಥಿಗಳೊಂದಿಗೆ ಸಿಎಂ ಸಮಾಲೋಚನೆ. *ಪಠ್ಯ, ಬಾತ್ ರೂಂ ಕಿಟ್ ಗಳ ಸಮರ್ಪಕ ವಿತರಣೆ ಆಗ್ತಿದೆ ಎಂದ ವಿದ್ಯಾರ್ಥಿಗಳು. *ಊಟದ ವ್ಯವಸ್ಥೆ ಬಗ್ಗೆ ವಿದ್ಯಾರ್ಥಿಗಳಿಂದ ಕೇಳಿ ತಿಳಿದ ಸಿಎಂ…ಬೆಳಗ್ಗೆ ದೋಸೆ, ಮಧ್ಯಾಹ್ನ ಊಟ ಚೆನ್ನಾಗಿತ್ತು ಎಂದ ವಿದ್ಯಾರ್ಥಿಗಳು. ಆಗಾಗ ಪಲಾವ್ ಕೊಡ್ತಾರೆ ಎಂದು ಖುಷಿಪಟ್ಟ ವಿದ್ಯಾರ್ಥಿಗಳು. ಕಳೆದ ಬಾರಿ SSLC ಯಲ್ಲಿ ಎಲ್ಲರೂ ಡಿಸ್ಟಿಂಕ್ಷನ್, ಒಬ್ಬ ವಿಧ್ಯಾರ್ಥಿನಿ ಮಾತ್ರ ಸೆಕೆಂಡ್ ಬಂದಿದ್ದಾಗಿ…
ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದ್ದಂತ ಪ್ರಕರಣ ಸಂಬಂಧ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ಹೈಕೋರ್ಟ್ 2 ವಾರಗಳ ಕಾಲ ಮುಂದೂಡಿದೆ. ಈ ಮೂಲಕ ನಿರೀಕ್ಷಣಾ ಜಾಮೀನು ನಿರೀಕ್ಷೆಯಲ್ಲಿದ್ದಂತ ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್ ನೀಡಲಾಗಿದೆ. ಇಂದು ಹೈಕೋರ್ಟ್ ನಲ್ಲಿ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದಂತ ಮತ್ತೊಂದು ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಕೋರಿ ಸಲ್ಲಿಸಿದ್ದಂತ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರನ್ನೊಳಗೊಂಡ ನ್ಯಾಯಪೀಠವು ವಿಚಾರಣೆ ನಡೆಸಿತು. ಈ ವೇಳೆ ಪ್ರಜ್ವಲ್ ರೇವಣ್ಣ ಪರ ವಕೀಲರು ಒಂದು ಪ್ರಕರಣದಲ್ಲಿ ಮಾತ್ರವೇ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಲಾಗಿದೆ. ಉಳಿದ ಕೇಸ್ ಗಳಲ್ಲಿ ಬಾಡಿ ವಾರೆಂಟ್ ಮೂಲಕ ಕಸ್ಟಡಿಗೆ ಪಡೆಯಲಾಗಿದೆ. ಹೀಗಾಗಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪರಿಗಣಿಸುವಂತೆ ಹೈಕೋರ್ಟ್ ನ್ಯಾಯಪೀಠಕ್ಕೆ ಮನವಿ ಮಾಡಿದರು. ಈ ವಾದ ಆಲಿಸಿದಂತ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರು, ಜಾಮೀನು ಅರ್ಜಿಯ ಸಂಬಂಧ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಎಸ್ಐಟಿಗೆ ಸೂಚನೆ ನೀಡಿದರು. ಅಲ್ಲದೇ…
ಬೆಂಗಳೂರು: ರಾಜ್ಯದ ಎಸ್ಸಿ, ಎಸ್ಟಿ ಸಮುದಾಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಎನ್ನುವಂತೆ, ಸರ್ಕಾರವು ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿಗೆ ನೀಡಲಾಗುತ್ತಿದ್ದಂತ ಭತ್ಯೆಯನ್ನು ಹೆಚ್ಚಳ ಮಾಡುವಂತ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ಸಂಬಂಧ ಮಾಹಿತಿ ನೀಡಿರುವಂತ ಸಿಎಂ ಸಿದ್ಧರಾಮಯ್ಯ ಅವರು, IAS, IRS ಸೇರಿ ಮತ್ತಿತರೆ ಸ್ಪರ್ಧಾತ್ಮಕ ಪರೀಕ್ಷೆ ಸಿದ್ದತೆಗಳಿಗಾಗಿ ದೆಹಲಿಯಲ್ಲಿ sC/st ಮಕ್ಕಳಿಗೆ ಉತ್ತಮ ಹಾಸ್ಟೆಲ್ ಕಟ್ಟಿಸುವ ಜೊತೆಗೆ ತಿಂಗಳಿಗೆ 15 ಸಾವಿರ ರೂಪಾಯಿ ಕೊಡಲಾಗುವುದು (ಸದ್ಯ 10 ಸಾವಿರ ಕೊಡಲಾಗುತ್ತಿದ್ದು 5 ಸಾವಿರ ಹೆಚ್ಚಿಸಲಾಗುವುದು. ಈ ಸಂಬಂಧ ತಕ್ಷಣ ಆದೇಶ ಹೊರಡಿಸಲಾಗುವುದು) ದೆಹಲಿ ಹಾಸ್ಟೆಲ್ ನಲ್ಲಿ ಹೈಟೆಕ್ ಲೈಬ್ರೆರಿ ಮಾಡಲಾಗುವುದು. ಅಲ್ಲಿ ಎಲ್ಲಾ ರೀತಿಯ ಪುಸ್ತಕಗಳು ಸಿಗುವ ವ್ಯವಸ್ಥೆ ಕಲ್ಪಿಸಲಾಗುವುದು ಘೋಷಣೆ ಮಾಡಿದ್ದಾರೆ. SCSP/TSP ಪರಿಷತ್ ಸಭೆಯ ಕೊನೆಯಲ್ಲಿ ಮುಖ್ಯಮಂತ್ರಿಗಳು ಇಲಾಖೆಯ ಅಧಿಕಾರಿಗಳಿಗೆ ಕೊಟ್ಟ ಸ್ಪಷ್ಟ ಸೂಚನೆಗಳು… *2024-25 ನೇ ಸಾಲಿಗೆ scsp/tsp ನಲ್ಲಿ ಲಭ್ಯ ಇರುವ ಹಣವನ್ನು ಖರ್ಚು ಮಾಡಲು action plan ಅನುಮೋದನೆ ಮಾಡಲಾಗಿದೆ. *ರಾಜ್ಯದ ಅಭಿವೃದ್ಧಿ ಆಯವ್ಯಯ ಈ ಸಾಲಿನಲ್ಲಿ…
ನವದೆಹಲಿ: ನೀಟ್ ಪಿಜಿ ಪರೀಕ್ಷೆಯನ್ನು ರದ್ದುಗೊಳಿಸಿದ ಸುಮಾರು 10 ದಿನಗಳ ನಂತರ, ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ, ಸ್ನಾತಕೋತ್ತರ (ನೀಟ್ ಪಿಜಿ) ಪರಿಷ್ಕೃತ ಪರೀಕ್ಷಾ ದಿನಾಂಕವನ್ನು ಇಂದು ಪ್ರಕಟಿಸಲಾಗಿದೆ. ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ಸ್ ಇನ್ ಮೆಡಿಕಲ್ ಸೈನ್ಸಸ್ (ಎನ್ಬಿಇಎಂಎಸ್) ಈಗ ನೀಟ್ ಪಿಜಿ ಪರೀಕ್ಷೆಯನ್ನು ಆಗಸ್ಟ್ 11 ರಂದು ನಡೆಸಲಿದೆ. ಇತ್ತೀಚಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಎನ್ಬಿಇಎಂಎಸ್ ಜೂನ್ 23 ರಂದು ನಿಗದಿಯಾಗಿದ್ದ ಪರೀಕ್ಷೆಯನ್ನು ಮುಂದೂಡಿದೆ. ದೇಶಾದ್ಯಂತ ಸುಮಾರು 52,000 ಸ್ನಾತಕೋತ್ತರ ಸೀಟುಗಳಿಗೆ ಪ್ರತಿವರ್ಷ ಸುಮಾರು ಎರಡು ಲಕ್ಷ ಎಂಬಿಬಿಎಸ್ ಪದವೀಧರರು ನೀಟ್ ಪಿಜಿ ತೆಗೆದುಕೊಳ್ಳುತ್ತಾರೆ. https://twitter.com/ANI/status/1809146252527128906 ಮಂಡಳಿಯ ಪ್ರಕಾರ, ಪರೀಕ್ಷಾ ಪ್ರಕ್ರಿಯೆಯ ದೃಢತೆಯನ್ನು ಪರಿಶೀಲಿಸಲು ಸಚಿವಾಲಯ ಬಯಸಿದ್ದರಿಂದ ಮತ್ತು ಪ್ರಕ್ರಿಯೆಯಲ್ಲಿ ಯಾವುದೇ ದುರ್ಬಲತೆ ಇಲ್ಲ ಎಂದು ಖಚಿತಪಡಿಸಿಕೊಳ್ಳಲು ಬಯಸಿದ್ದರಿಂದ ಪರೀಕ್ಷೆಯನ್ನು ರದ್ದುಗೊಳಿಸಲಾಯಿತು. ಎನ್ಟಿಎ ಪರೀಕ್ಷೆ ರದ್ದತಿ ಭಾರತೀಯ ವಿದ್ಯಾರ್ಥಿಗಳನ್ನು ಹೆದರಿಸಿದ ಸಮಯದಲ್ಲಿ ನೀಟ್ ಪಿಜಿ ಅರ್ಜಿದಾರರ ದುರ್ಬಲತೆಯ ಅನಗತ್ಯ…
ಶಿವಮೊಗ್ಗ : ಮೀನುಗಾರಿಕೆ ಇಲಾಖೆಯು ಜುಲೈ 23 ಮತ್ತು 24 ರಂದು 2 ದಿನಗಳ “ಒಳನಾಡು ಮೀನುಕೃಷಿಯಲ್ಲಿ ಹೊಸ ಮೀನು ತಳಿಗಳ ಸಾಕಾಣಿಕೆ” ಕುರಿತು ತರಬೇತಿ ಕಾರ್ಯಕ್ರಮವನ್ನು ಮೀನುಗಾರಿಕೆ ತರಬೇತಿ ಕೇಂದ್ರ, ಬಿ.ಆರ್.ಪ್ರಾಜೆಕ್ಟ್ನಲ್ಲಿ ಆಯೋಜಿಸಿದ್ದು, ಆಸಕ್ತರು ನೊಂದಾಯಿಸಿಕೊಳ್ಳುವಂತೆ ಮೀನುಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ನೋಂದಣಿಗಾಗಿ ಸಂಪರ್ಕ ಸಂಖ್ಯೆ 8277200300 ನ್ನು ಸಂಪರ್ಕಿಸುವುದು. https://kannadanewsnow.com/kannada/ayodhya-ram-temple-priests-banned-from-using-new-dress-code-mobile-phones-ayodhye-ram-mandir/
ನವದೆಹಲಿ: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆಯುವ ನೀಟ್-ಪಿಜಿ ಪರೀಕ್ಷೆಯ ( NEET-PG exam ) ದಿನಾಂಕವನ್ನು ರಾಷ್ಟ್ರೀಯ ಪರೀಕ್ಷಾ ಮಂಡಳಿ (National Board of Examinations – NBE) ಶುಕ್ರವಾರ ಪ್ರಕಟಿಸಿದೆ. ಏಜೆನ್ಸಿಯು ಆಗಸ್ಟ್ 11ರಂದು ಪರೀಕ್ಷೆಯ ದಿನಾಂಕವನ್ನು ನಿಗದಿಪಡಿಸಿದೆ. ಇದು ಎರಡು ಪಾಳಿಗಳಲ್ಲಿ ನಡೆಯಲಿದೆ ಎಂದು ಏಜೆನ್ಸಿಯ ಪ್ರಕಟಣೆ ತಿಳಿಸಿದೆ. ಜೂನ್ 22 ರಂದು ನಿಗದಿಯಾಗಿದ್ದ ನೀಟ್-ಪಿಜಿ ಪರೀಕ್ಷೆಯನ್ನು ( NEET-PG exam 2024 ) ಪ್ರಾರಂಭವಾಗುವ ಕೆಲವೇ ಗಂಟೆಗಳ ಮೊದಲು ಯುಜಿ ಪರೀಕ್ಷೆಗೆ ಪ್ರಶ್ನೆ ಪತ್ರಿಕೆಗಳು ಸೋರಿಕೆ ಸೇರಿದಂತೆ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಪರೀಕ್ಷೆಯನ್ನು ರದ್ದುಗೊಳಿಸಿದ ನಂತರ, ಎನ್ಬಿಇ ಅಧ್ಯಕ್ಷ ಡಾ.ಅಭಿಜತ್ ಸೇಠ್ ಅವರು ಶಿಕ್ಷಣ ಸಚಿವಾಲಯವು ಪರೀಕ್ಷಾ ಪ್ರಕ್ರಿಯೆಯ ದೃಢತೆಯನ್ನು ಪರಿಶೀಲಿಸಲು ಮತ್ತು ಈ ಪ್ರಕ್ರಿಯೆಯಲ್ಲಿ ಯಾವುದೇ ದುರ್ಬಲತೆ ಇಲ್ಲ ಎಂಬ ಭರವಸೆಯನ್ನು ಪಡೆಯಲು ಬಯಸಿದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದರು. NTA ಕಳೆದ ಏಳು ವರ್ಷಗಳಿಂದ ನೀಟ್-ಪಿಜಿಯನ್ನು ನಡೆಸುತ್ತಿದೆ ಮತ್ತು ಮಂಡಳಿಯ…
ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564. ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564 ನಮ್ಮ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗದ ಪರಿಸ್ಥಿತಿ ಇರುತ್ತದೆ.…