Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಪ್ರಕರಣದಲ್ಲಿ ಸಚಿವ ಬಿ.ನಾಗೇಂದ್ರ ಇಂದು ರಾಜೀನಾಮೆ ನೀಡಲಿದ್ದಾರೆ ಎಂಬುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಸುಳಿವು ನೀಡಿದ್ದಾರೆ. ಇಂದು ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ವಿಪಕ್ಷಗಳು ಒತ್ತಾಯ ಮಾಡುತ್ತಿವೆ. ಬಿ.ನಾಗೇಂದ್ರ ಜೊತೆಗೆ ನಾನು, ಗೃಹ ಸಚಿವ ಡಾ.ಜಿ ಪರಮೇಶ್ವರ್ ಮಾತನಾಡಿದ್ದೇವೆ. ಅವರು ನಾನು ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರದಲ್ಲಿ ಭಾಗಿಯಾಗಿಲ್ಲ ಅಂತ ತಿಳಿಸಿದ್ದಾರೆ. ಹೀಗಾಗಿ ಸಚಿವ ನಾಗೇಂದ್ರ ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದರು. ಆದರೇ ಪಕ್ಷ ಹಾಗೂ ಹೈಕಮಾಂಡ್ ಘನತೆಗೆ ಧಕ್ಕೆ ಆಗಬಾರದು ಎಂಬ ನಿಲುವು ಬಿ.ನಾಗೇಂದ್ರ ಅವರದ್ದಾಗಿದೆ. ಈ ಹಿನ್ನಲೆಯಲ್ಲೇ ಅವರು ಇಂದು ಸಚಿವ ಸ್ಥಾನಕ್ಕೆ ರಾಜೀನಾಮೆಗೆ ಮುಂದಾಗಿದ್ದಾರೆ. ಇಂದು ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬಹುದು. ಹೈಕಮಾಂಡ್, ಸಿಎಂ ಜೊತೆಗೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂಬುದಾಗಿ ತಿಳಿಸಿದರು. https://kannadanewsnow.com/kannada/good-news-for-mobile-users-the-phone-will-be-charged-in-just-60-seconds/ https://kannadanewsnow.com/kannada/be-careful-before-having-sex-with-your-partner-this-rare-disease-is-on-the-rise/
ಧನ, ಹೆಸರು, ಕೀರ್ತಿ, ಅಂತಸ್ತು ಮುಂತಾದ ಸಕಲ ಭಾಗ್ಯಗಳನ್ನು ಪಡೆಯಲು ಬ್ರಾಹ್ಮೀ ಮುಹೂರ್ತದ ಸಮಯದಲ್ಲಿ ಮಾತ್ರ ಈ ಲಕ್ಷ್ಮೀ ಮಂತ್ರವನ್ನು 21 ದಿನಗಳ ಕಾಲ ಪಠಿಸಿ. ನೀವು ಎಂದಿಗೂ ನಿರೀಕ್ಷಿಸದ ಸಂಪತ್ತು ಮತ್ತು ಸಮೃದ್ಧಿಯ ಜೀವನವನ್ನು ನೀವು ಬದುಕಬಹುದು. ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಹಣ, ಹೆಸರು, ಕೀರ್ತಿ, ಅಂತಸ್ತು ಹೀಗೆ ಎಲ್ಲರ ಮುಂದೆ ಗೌರವದಿಂದ ಬಾಳಲು ಬಯಸುತ್ತಾರೆ ಮತ್ತು ಅದಕ್ಕಾಗಿ ನಾವು ಪ್ರತಿದಿನ ಮಾಡಬಹುದಾದ ಎಲ್ಲಾ ಕೆಲಸಗಳು ಪ್ರಯತ್ನ ಮತ್ತು ಹೋರಾಟವಾಗಿದೆ. ಎಷ್ಟೇ ಪ್ರಯತ್ನ ಪಟ್ಟರೂ ಎಲ್ಲರೂ ಈ ರೀತಿ ಬದುಕಲು ಸಾಧ್ಯವಿಲ್ಲ. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564. ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ…
ನವದೆಹಲಿ: ಬೋಯಿಂಗ್ನ ಸ್ಟಾರ್ಲೈನರ್ ಬಾಹ್ಯಾಕಾಶ ನೌಕೆ ಅಂತಿಮವಾಗಿ ಬುಧವಾರ (ಜೂನ್ 5) ಬಾಹ್ಯಾಕಾಶಕ್ಕೆ ತನ್ನ ಮೊದಲ ಮಾನವ ಹಾರಾಟದಲ್ಲಿ ಅನೇಕ ವಿಳಂಬಗಳು, ಎರಡು ಸ್ಕ್ರಬ್ಗಳು ಮತ್ತು ಹಲವಾರು ದೋಷಗಳನ್ನು ಅನುಭವಿಸಿದ ನಂತರ ಉಡಾವಣೆಯಾಯಿತು. ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರು ನಾಸಾ ಗಗನಯಾತ್ರಿ ಬುಚ್ ವಿಲ್ಮೋರ್ ಅವರೊಂದಿಗೆ ತಮ್ಮ ಮೂರನೇ ಮಿಷನ್ನಲ್ಲಿ ಹಾರಾಟ ನಡೆಸಿದರು. ಒಟ್ಟಾರೆಯಾಗಿ ಅನೇಕ ಬಾರಿ ಮುಂದೂಡಲ್ವಟ್ಟಿದ್ದಂತ ಬೋಯಿಂಗ್ನ ಸ್ಟಾರ್ಲೈನರ್ ಬಾಹ್ಯಾಕಾಶ ನೌಕೆ ಕೊನೆಗೂ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಒಳಗೊಂಡು ಯಶಸ್ವಿಯಾಗಿ ಉಡಾವಣೆಗೊಂಡಿದೆ. https://twitter.com/BoeingSpace/status/1798367584628207823 https://kannadanewsnow.com/kannada/doctors-at-a-maternity-hospital-in-the-state-are-in-agony/ https://kannadanewsnow.com/kannada/9-karnataka-people-die-while-trekking-in-uttarakhand-minister-krishna-byre-gowda/
ಬೆಂಗಳೂರು: ಕರ್ನಾಟಕದಿಂದ ಉತ್ತರಾಖಂಡದ ಡೆಹ್ರಾಡೂನ್ ಗೆ ಚಾರಣಕ್ಕೆ ತೆರಳಿದ್ದಂತ 9 ಕನ್ನಡಿಗರು ಹವಾಮಾನ ವೈಪರಿತ್ಯದಿಂದ ದುರ್ಮರಣಕ್ಕೆ ಒಳಗಾಗಿದ್ದಾರೆ ಅಂತ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದಾರೆ. ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ನಾನು ಈಗ ಡೆಹ್ರಾಡೂನ್ ನ ರಾಜ್ಯ ಅತಿಥಿ ಗೃಹದಲ್ಲಿರುವ 8 ಜನರ ಗುಂಪನ್ನು ಭೇಟಿಯಾಗಿ ಸಂವಾದ ನಡೆಸಿದ್ದೇನೆ. ಅವರೆಲ್ಲರೂ ಸಾಮಾನ್ಯ ಆರೋಗ್ಯದಲ್ಲಿದ್ದಾರೆ. ಹವಾಮಾನಕ್ಕೆ ಒಳಪಟ್ಟು ಇನ್ನೂ ಐದು ಜನರು ಡೆಹ್ರಾಡೂನ್ ತಲುಪಲಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ವಿವಿಧ ಅಧಿಕಾರಿಗಳೊಂದಿಗೆ ನಾನು ಚರ್ಚಿಸಿದ್ದೇನೆ ಎಂದು ತಿಳಿಸಿದ್ದಾರೆ. ಹವಾಮಾನ ವೈಪರಿತ್ಯದ ಕಾರಣಕ್ಕಾಗಿ ಕರ್ನಾಟಕದ 9 ಮಂದಿ ಸಾವನ್ನಪ್ಪಿದ್ದಾರೆ. ಎಲ್ಲಾ 9 ಶವಗಳನ್ನು (ಪ್ರಸ್ತುತ ಉತ್ತರಕಾಶಿಯಲ್ಲಿ 5 ಮತ್ತು ಇನ್ನೂ ಚಾರಣ ಮಾರ್ಗದಲ್ಲಿ 4) ಡೆಹ್ರಾಡೂನ್ಗೆ ಸಾಗಿಸಲು ನಾವು ಸ್ಥಳೀಯ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ. ಸಾಧ್ಯವಾದಷ್ಟು ಬೇಗ ಶವಗಳನ್ನು ಬೆಂಗಳೂರಿಗೆ ಸಾಗಿಸಲು ನಾವು ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. https://kannadanewsnow.com/kannada/doctors-at-a-maternity-hospital-in-the-state-are-in-agony/ https://kannadanewsnow.com/kannada/steps-to-ensure-safe-safety-of-trekkers-immediate-steps-to-bring-dead-bodies-to-the-state-cm-siddaramaiah/ https://kannadanewsnow.com/kannada/devendra-fadnavis-offers-to-resign-as-deputy-cm-of-maharashtra/
ನವದೆಹಲಿ: 3ನೇ ಅವಧಿಗೆ ಭಾರತದ ಪ್ರಧಾನ ಮಂತ್ರಿಯಾಗುತ್ತಿರುವಂತ ನರೇಂದ್ರ ಮೋದಿಯವರಿಗೆ ರಷ್ಯಾ ಪ್ರಧಾನಿ ಪುಟೀನ್, ಯುಎಸ್ ಅಧ್ಯಕ್ಷ ಜಿಯೋ ಬಿಡೆನ್ ಶುಭಾಷಯ ಕೋರಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಟ್ವೀಟ್ ಮಾಡಿ “ಈ ಐತಿಹಾಸಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ ಮತ್ತು ಸುಮಾರು 650 ಮಿಲಿಯನ್ ಮತದಾರರಿಗೆ ಅಭಿನಂದನೆಗಳು. ಅಪರಿಮಿತ ಸಾಮರ್ಥ್ಯದ ಹಂಚಿಕೆಯ ಭವಿಷ್ಯವನ್ನು ನಾವು ಅನ್ಲಾಕ್ ಮಾಡಿದಾಗ ಮಾತ್ರ ನಮ್ಮ ರಾಷ್ಟ್ರಗಳ ನಡುವಿನ ಸ್ನೇಹವು ಬೆಳೆಯುತ್ತಿದೆ ಎಂದಿದ್ದಾರೆ. https://twitter.com/ANI/status/1798364594655875296 ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. https://twitter.com/ANI/status/1798365220576108989 https://kannadanewsnow.com/kannada/steps-to-ensure-safe-safety-of-trekkers-immediate-steps-to-bring-dead-bodies-to-the-state-cm-siddaramaiah/ https://kannadanewsnow.com/kannada/devendra-fadnavis-offers-to-resign-as-deputy-cm-of-maharashtra/
ಬೆಂಗಳೂರು: ಉತ್ತರಾಖಂಡದ ಶಾಸ್ತ್ರತಾಳ್ ಗೆ ಚಾರಣಕ್ಕೆಂದು ತೆರಳಿ ಹವಾಮಾನ ವೈಪರೀತ್ಯದಿಂದಾಗಿ ಮೃತಪಟ್ಟಿರುವವರ ಮೃತದೇಹಗಳನ್ನು ಕುಟುಂಬದವರಿಗೆ ತಲುಪಿಸುವ ಮತ್ತು ರಕ್ಷಿಸಲ್ಪಟ್ಟಿರುವ ಉಳಿದ ಚಾರಣಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡೆಹ್ರಾಡೋನ್ ನಲ್ಲಿರುವ ಕಂದಾಯ ಸಚಿವ ಕೃಷ್ಣಬೈರೇಗೌಡ ಮತ್ತು ರಕ್ಷಿಸಲ್ಪಟ್ಟ ಚಾರಣಿಗರ ಜೊತೆ ದೂರವಾಣಿ ಮೂಲಕ ಮಾತನಾಡಿದರು. ಮೃತರ ಸಂಖ್ಯೆ 9 ಕ್ಕೆ ಏರಿದ ಸಂಗತಿ ತಿಳಿದು ಬಹಳ ನೋವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ರಕ್ಷಿಸಲ್ಪಟ್ಟಿರುವ ಎಲ್ಲರನ್ನೂ ಯಾವುದೇ ಅಡಚಣೆ ಆಗದಂತೆ ಸುರಕ್ಷಿತವಾಗಿ ಮನೆಗಳಿಗೆ ಸೇರಿಸಬೇಕು. ಮೃತ ದೇಹಗಳನ್ನು ಕುಟುಂಬದವರಿಗೆ ತಲುಪಿಸುವ ನಿಟ್ಟಿನಲ್ಲೂ ಅಗತ್ಯವಾದ ಎಲ್ಲಾ ಪ್ರಕ್ರಿಯೆಗಳನ್ನು ತುರ್ತಾಗಿ ನಿರ್ವಹಿಸಬೇಕು ಎನ್ನುವ ಸೂಚನೆಗಳನ್ನು ಸಚಿವ ಕೃಷ್ಣಬೈರೇಗೌಡರಿಗೆ ನೀಡಿದ್ದಾರೆ. ರಕ್ಷಿಸಲ್ಪಟ್ಟು ಸುರಕ್ಷಿತ ನೆಲೆಗೆ ಕರೆತರಲಾಗಿರುವ ಚಾರಣಿಗರ ಜೊತೆಗೂ ಮಾತನಾಡಿದ ಮುಖ್ಯಮಂತ್ರಿಗಳು, ಬಾಕಿ ಉಳಿದಿರುವ ಪ್ರತಿಯೊಬ್ಬರನ್ನೂ ಸುರಕ್ಷಿತವಾಗಿ ಕಾಪಾಡಿ ಕರೆತರುವ ಬಗ್ಗೆ ಸರ್ಕಾರಗಳ ಮಟ್ಟದಲ್ಲಿ ಸಕಲ ಪ್ರಯತ್ನಗಳೂ ನಡೆಯುತ್ತಿವೆ ಎಂದು ಭರವಸೆ…
ಶಿವಮೊಗ್ಗ: ಜೂನ್.5ರ ವಿಶ್ವ ಪರಿಸರ ದಿನಾಚರಣೆಯ ಸಲುವಾಗಿ ಸೊರಬ ತಾಲೂಕು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಇಂದು ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿನ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ತಾಲೂಕು ಆಸ್ಪತ್ರೆಯ ಮುಂಭಾಗದಲ್ಲಿ ಡಿಹೆಚ್ಓ ಡಾ.ನಟರಾಜ್ ಕೆ.ಎಸ್ ಅವರು ಗಿಡನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಬಳಿಕ ಮಾತನಾಡಿದಂತ ಅವರು ಪರಿಸರ ಉಳಿಸೋದು ನಮ್ಮ ನಿಮ್ಮೆಲ್ಲ ಕರ್ತವ್ಯವಾಗಿದೆ. ಗಿಡಮರ ಬೆಳೆಸಿದ್ರೆ ನಾವು ನೀವೆಲ್ಲ ಆರೋಗ್ಯವಂತರಾಗಿರುತ್ತೇವೆ ಅಂತ ಹೇಳಿದ್ರು. ಈ ಕಾರ್ಯಕ್ರಮದಲ್ಲಿ ಡಾ.ಗುಡದಪ್ಪ ಕಸವಿ, ಡಿವಿಬಿಡಿಸಿಪಿ ಆಫೀಸರ್, ಡಾ.ನಾಗರಾಜ್ ನಾಯ್ಕ್, ಜಿಲ್ಲಾ ಆರ್ ಸಿ ಹೆಚ್ ಅಧಿಕಾರಿ, ಸೊರಬ ತಾಲ್ಲೂಕು ವೈದ್ಯಾಧಿಕಾರಿಗಳು ಡಾ.ವಿನಯ್ ಪಾಟೀಲ್, ಡಾ.ಭರತ್, ಡಾ.ಲೋಹಿತ್, ಡಾ.ಸತೀಶ್, ಡಾ.ಆಕಾಶ್, ಡಾ.ಅಮಿತಾ, ಡಾ.ಅಭಿಷೇಕ್ ಹಾಗೂ ಶಿಲ್ಪಾ ಬೋರ್ಕರ್, ಶುಶ್ರೂಷಾಧೀಕ್ಷಕರು ಸೇರಿದಂತೆ ಇತರೆ ಸಿಬ್ಬಂದಿಗಳು ಹಾಜರಿದ್ದರು. ನಿವೃತ್ತ ನೌಕರರಿಗೆ ಬೀಳ್ಕೊಡುಗೆ ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿವೃತ್ತಿ ಹೊಂದಿದ ಹಿರಿಯ ಕ್ಷಕಿರಣ…
ಮಡಿಕೇರಿ: 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೊಡಗು ಜಿಲ್ಲೆಯಲ್ಲಿ ಈವರೆಗೆ 324 ಮಿ.ಮಿ. ಮಳೆಯಾಗಿದ್ದು, ವಾಡಿಕೆಗಿಂತ ಶೇ.21 ರಷ್ಟು ಹೆಚ್ಚಾಗಿ ಮಳೆಯಾಗಿರುತ್ತದೆ. ರೈತರು ಮುಂಗಾರು ಹಂಗಾಮಿನ ಪೂರ್ವ ಸಿದ್ದತೆಯಲ್ಲಿದ್ದು, ಜಿಲ್ಲೆಯಲ್ಲಿ ಭತ್ತದ ಸಸಿ ಮಡಿ ಕಾರ್ಯವು ಜೂನ್ ಮಾಹೆಯಲ್ಲಿ ನಡೆಯಲಿದ್ದು, ಜುಲೈ ಮತ್ತು ಆಗಸ್ಟ್ ಮಾಹೆಗಳಲ್ಲಿ ನಾಟಿ ಕಾರ್ಯಕೈಗೊಳ್ಳಲಾಗುತ್ತದೆ. ಮುಸುಕಿನ ಜೋಳದ ಬಿತ್ತನೆ ಕಾರ್ಯವನ್ನು ಜೂನ್ ಮಾಹೆಯಲ್ಲಿ ಕೈಗೊಳ್ಳಲಾಗುತ್ತದೆ. ಆದ್ದರಿಂದ ರೈತರಿಗೆ ಅನುಕೂಲವಾಗುವಂತೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಇತರೆ ಕೃಷಿ ಪರಿಕರಗಳನ್ನು ಇಲಾಖೆಯ ರೈತ ಸಂಪರ್ಕ ಕೇಂದ್ರಗಳು, ಸಹಕಾರ ಸಂಘಗಳು ಮತ್ತು ಖಾಸಗಿ ಮಾರಾಟಗಾರರಲ್ಲಿ ದಾಸ್ತಾನೀಕರಿಸಲಾಗಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಒಟ್ಟು 1871 ಕ್ವಿಂಟಾಲ್ ಭತ್ತ ಮತ್ತು 41 ಕ್ವಿಂಟಾಲ್ ಮುಸುಕಿನ ಜೋಳದ ಬಿತ್ತನೆ ಬೀಜಗಳನ್ನು ಸರಬರಾಜು ಮಾಡುವ ಗುರಿ ಹೊಂದಲಾಗಿದ್ದು, ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಸ್ತುತ ದಿನಾಂಕದವರೆಗೆ ಒಟ್ಟು 943.75 ಕ್ವಿಂಟಾಲ್ ಭತ್ತ ಹಾಗೂ 2.4 ಕ್ವಿಂಟಾಲ್ ಮುಸುಕಿನ ಜೋಳದ ವಿವಿಧ ತಳಿಯ ಬಿತ್ತನೆ ಬೀಜಗಳು ಸರಬರಾಜಾಗಿದ್ದು,…
ಶಿವಮೊಗ್ಗ: ಕಾಳಜಿವಹಿಸಿ, ಕರ್ತವ್ಯ ನಿಷ್ಠೆ ತೋರಿ, ರೋಗಿಗಳ ಆರೈಕೆ, ಸೇವೆ ಮಾಡಬೇಕಾಗಿದ್ದಂತ ಸರ್ಕಾರಿ ವೈದ್ಯ ಮಾಡಿದ್ದು ಮಾತ್ರ ಮಹಾ ಎಡವಟ್ಟು. ಇದರ ಪರಿಣಾಮ ಮಹಿಳೆ ಅನುಭವಿಸಿದ್ದಂತೂ ಯಮಯಾತನೆ. ವೈದ್ಯರ ಸಣ್ಣ ತಪ್ಪಿಗಾಗಿ ಲಕ್ಷ ಲಕ್ಷ ಖರ್ಚು ಮಾಡಿದ ಬಡ ಮಹಿಳೆಯ ಗೋಳಿ ಕಥೆ ಮುಂದೆ ನೀವೇ ಓದಿ. ಮೇ.15ರಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮಾಸೂರು ಗ್ರಾಮದ ಮಹಿಳೆಯೊಬ್ಬರು ಹೆರಿಗಾಗಿ ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಹೆರಿಗೆ ಮಾಡಿಸಿದ್ದು ವೈದ್ಯ ಡಾ.ನಾಗೇಂದ್ರಪ್ಪ. ಆದರೆ ಹೆರಿಗೆ ವೇಳೆಯಲ್ಲಿ ಮಾಡಿರೋ ಎಡವಟ್ಟಿಗೆ ಆ ಮಹಿಳೆ ಅನುಭವಿಸಿದ್ದು ನರಕಯಾತನೆ. ಹೌದು ಹೆರಿಗೆ ಮಾಡಿಸಿ ರಕ್ತ ಸ್ರಾವ ಆಗುತಿದ್ದರೂ ಲೆಕ್ಕಿಸದೆ ಹೊಲಿಗೆ ಹಾಕಿ ಇದೇ ಡಾ.ನಾಗೇಂದ್ರಪ್ಪ ಕಳಿಸಿದ್ದಾರೆ. ಹೀಗೆ ಹೆರಿಗೆ ನಂತರ ಮನೆಗೆ ತೆರಳಿದಂತ ಹಸುಗೂಸಿನ ಬಾಣಂತಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ತಕ್ಷಣ ಅದೇ ಡಾ.ನಾಗೇಂದ್ರಪ್ಪ ಅವರ ಬಳಿಗೆ ಕುಟುಂಬಸ್ಥರು ಕರೆದುಕೊಂಡು ಹೋಗಿದ್ದಾರೆ. ಕನಿಷ್ಠ ಸೌಜನ್ಯಕ್ಕೂ ಪರೀಕ್ಷೆ ಮಾಡದ ವೈದ್ಯ ಡಾ.ನಾಗೇಂದ್ರಪ್ಪ, ಇದಕ್ಕೂ…
ಮಡಿಕೇರಿ : ಕರ್ನಾಟಕ ಸರ್ಕಾರದಿಂದ ಮೈಸೂರಿನಲ್ಲಿ ಸ್ಥಾಪಿತವಾಗಿರುವ ರಂಗಾಯಣ ರೆಪರ್ಟರಿಯು ಕಳೆದ 15 ವರ್ಷಗಳ ಹಿಂದೆ ಸ್ಥಾಪಿಸಿದ ಭಾರತೀಯ ರಂಗಶಿಕ್ಷಣ ಕೇಂದ್ರ ಪೂರ್ಣ ಪ್ರಮಾಣದ ರಂಗಶಿಕ್ಷಣವನ್ನು ನೀಡುವ ಸಂಸ್ಥೆಯಾಗಿರುತ್ತದೆ. ಈ ಸಂಸ್ಥೆ ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ಚವಿದ್ಯಾಲಯದ ಮಾನ್ಯತೆ ಪಡೆದಿದೆ. ಪ್ರತಿವರ್ಷ ರಂಗಶಿಕ್ಷಣದಲ್ಲಿ ಹತ್ತು ತಿಂಗಳ ಡಿಪ್ಲೊಮೊ ಕೋರ್ಸ್‍ನ್ನು ನಡೆಸುವ ಈ ಸಂಸ್ಥೆಯು ಪ್ರಸ್ತುತ 2024-25ನೇ ಸಾಲಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. 2024-25ನೇ ಸಾಲಿನ ಈ ರಂಗತರಬೇತಿ ಕೋರ್ಸ್‍ಗೆ ಸೇರಬಯಸುವ ವಿದ್ಯಾರ್ಥಿಗಳು ರಂಗಭೂಮಿಯ ಪ್ರಾಥಮಿಕ ಅನುಭವ ಹೊಂದಿರಬೇಕು. ಕನಿಷ್ಠ ದ್ವಿತೀಯ ಪಿಯುಸಿ (10+2) ಅಥವಾ ತತ್ಸಮಾನ ಪರೀಕ್ಷೆ ತೇರ್ಗಡೆ ಹೊಂದಿರಬೇಕು. ವಯೋಮಿತಿ ಅರ್ಜಿ ಸಲ್ಲಿಸಲು ನಿಗದಿಗೊಳಿಸಿದ ಕಡೆಯ ದಿನಾಂಕಕ್ಕೆ 18 ವರ್ಷಗಳು ತುಂಬಿದ ಮತ್ತು 28 ವರ್ಷಗಳು ತುಂಬಿರದ ಅಭ್ಯರ್ಥಿಗಳಾಗಿರಬೇಕು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಿಯಮಾನುಸಾರ ರಂಗಾಯಣದಿಂದಲೇ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಮತ್ತು ಮಾಹೆಯಾನ ರೂ.5,000 ಗಳ ವಿದ್ಯಾರ್ಥಿ ವೇತನ ಪಾವತಿಸಲಾಗುವುದು. ಭಾರತೀಯ ರಂಗಶಿಕ್ಷಣ…