Author: kannadanewsnow09

ನವದೆಹಲಿ: ಅಕ್ಟೋಬರ್ 3 ರಂದು ಭಾರತೀಯ ಮಾನದಂಡ ಸೂಚ್ಯಂಕಗಳು ನಿಫ್ಟಿಯೊಂದಿಗೆ 24,900 ಕ್ಕೆ ಏರಿಕೆಯಾಗಿ ಕೊನೆಗೊಂಡವು. ಸೆನ್ಸೆಕ್ಸ್ 200 ಅಂಕಗಳಿಗೆ ಏರಿಕೆಯಾಗಿದೆ. ಟಾಟಾ ಸ್ಟೀಲ್, ಪವರ್ ಗ್ರಿಡ್ ಕಾರ್ಪ್, ಹಿಂಡಾಲ್ಕೊ, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಎಲ್ & ಟಿ ಪ್ರಮುಖ ಲಾಭ ಗಳಿಸಿದವುಗಳಲ್ಲಿ ಸೇರಿವೆ, ಆದರೆ ಮ್ಯಾಕ್ಸ್ ಹೆಲ್ತ್‌ಕೇರ್, ಕೋಲ್ ಇಂಡಿಯಾ, ಮಾರುತಿ ಸುಜುಕಿ, ಟೆಕ್ ಮಹೀಂದ್ರಾ ಮತ್ತು ಎಸ್‌ಬಿಐ ಲೈಫ್ ಇನ್ಶುರೆನ್ಸ್ ನಷ್ಟ ಅನುಭವಿಸಿದವು. ಫಾರ್ಮಾ, ರಿಯಾಲ್ಟಿ, ಎಫ್‌ಎಂಸಿಜಿ ಹೊರತುಪಡಿಸಿ, ಇತರ ಎಲ್ಲಾ ವಲಯ ಸೂಚ್ಯಂಕಗಳು ಲೋಹವು ಶೇಕಡಾ 2 ರಷ್ಟು ಮತ್ತು ಪಿಎಸ್‌ಯು ಬ್ಯಾಂಕ್ ಶೇಕಡಾ 1 ರಷ್ಟು ಏರಿಕೆಯಾಗಿ ಕೊನೆಗೊಂಡಿತು. ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕವು ಶೇಕಡಾ 0.8 ರಷ್ಟು ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕವು ಶೇಕಡಾ 1 ರಷ್ಟು ಏರಿಕೆಯಾಗಿದೆ. https://kannadanewsnow.com/kannada/the-central-government-is-patting-itself-on-the-back-by-cutting-the-gst-it-itself-had-increased-cm-siddaramaiah-sarcastically/ https://kannadanewsnow.com/kannada/alert-smokers-beware-cigarettes-can-cause-these-serious-diseases/

Read More

ಮೈಸೂರು: ಬಿಹಾರ ಚುನಾವಣೆಯ ಹಿನ್ನಲೆಯಲ್ಲಿ ಜಿಎಸ್ ಟಿ ಯನ್ನು ಸರಳೀಕರಣಗೊಳಿಸಿರುವ ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ರಾಜ್ಯಕ್ಕೆ ಅಂದಾಜು 15 ಸಾವಿರ ಕೋಟಿ ರೂ.ಗಳ ನಷ್ಟವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಮೈಸೂರಿನ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಜಿಎಸ್ ಟಿ ಉತ್ಸವ ಆಚರಿಸುವಂತೆ ಕೇಂದ್ರ ಸರ್ಕಾರ ತಿಳಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, 2017 ರಲ್ಲಿ ಕೇಂದ್ರ ಸರ್ಕಾರವೇ ಜಿಎಸ್ ಟಿ ಯನ್ನು ಜಾರಿಗೆ ತಂದು ಜಿಎಸ್ ಟಿ ದರ ನಿಗದಿಪಡಿಸಿದರು. ಕಳೆದ ಎಂಟು ವರ್ಷದಿಂದ ಹೆಚ್ಚಿನ ದರ ಪಡೆದಿರುವ ಕೇಂದ್ರಸರ್ಕಾರ, ಆ ಹಣವನ್ನು ಮರಳಿ ನೀಡುವರೇ? ತಾವೇ ಹೆಚ್ಚಿಸಿದ ಜಿಎಸ್ ಟಿ ದರವನ್ನು ತಾವೇ ಕಡಿಮೆ ಮಾಡಿ, ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವ ಕೆಲಸದಲ್ಲಿ ಕೇಂದ್ರ ತೊಡಗಿದೆ. ಬಿಹಾರದ ಚುನಾವಣೆಯಿರುವ ಕಾರಣ, ಜಿಎಸ್ ಟಿ ಯನ್ನು ಸರಳೀಕರಣಗೊಳಿಸಿ, ಕಡಿತಗೊಳಿಸಿದ್ದೇವೆ ಎಂದು ಹೇಳಿಕೊಳ್ಳುವ ಅವಶ್ಯಕತೆಯಿಲ್ಲ ಎಂದು ತಿಳಿಸಿದರು. ರಾಜ್ಯಕ್ಕೆ ಕೇಂದ್ರದ ಸುಮಾರು 17000 ಕೋಟಿ ಅನುದಾನದಲ್ಲಿ ಖೋತಾ ಕೇಂದ್ರದಿಂದ…

Read More

ಬೆಳಗಾವಿ : ಮಳೆ ಹಾನಿ ಪ್ರದೇಶಗಳಿಗೆ ಸಚಿವರು, ಅಧಿಕಾರಿಗಳು ಭೇಟಿ ನೀಡುತ್ತಿಲ್ಲ. ಎಲ್ಲರೂ ಜಾತಿ ಸಮೀಕ್ಷೆಯಲ್ಲಿ ಹಾಗೂ ಸಿಎಂ ಬದಲಾವಣೆಯ ಕ್ರಾಂತಿಯಲ್ಲಿ ನಿರತರಾಗಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ವ್ಯಕ್ತಪಡಿಸಿದರು. ಉತ್ತರ ಕರ್ನಾಟಕದಲ್ಲಿ ವಿವಿಧೆಡೆ ಮಳೆ ಹಾನಿ ಪರಿಶೀಲನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಷ್ಕಿಗೆ ಎಕರೆಗೆ 25,000 ರೂ. ನೀರಾವರಿ ಜಮೀನಿಗೆ ಎಕರೆಗೆ 50,000 ರೂ. ಪರಿಹಾರ ನೀಡಬೇಕು. ಎನ್‌ಡಿಆರ್‌ಎಫ್‌ ನಿಯಮದ ಪ್ರಕಾರ ನೀಡಿದರೂ. ರೈತರು ಖರ್ಚು ಮಾಡಿದಷ್ಟಾದರೂ ನೀಡಲಿ. ಸರ್ಕಾರವೇ ಕಳಪೆ ಬೀಜ ನೀಡಿದೆ ಎಂದು ರೈತರು ಹೇಳಿದ್ದಾರೆ. ನಾನೂ ಸೇರಿದಂತೆ ಬಿಜೆಪಿ ನಾಯಕರು ಪ್ರವಾಹವಾದ ಕಡೆಗಳಲ್ಲಿ ಪ್ರವಾಸ ಮಾಡಿದ್ದೇವೆ. ಆದರೆ ಸರ್ಕಾರದ ವತಿಯಿಂದ ಯಾರೂ ಪ್ರವಾಸ ಮಾಡಿಲ್ಲ. ಬಿಜೆಪಿ ಅವಧಿಯಲ್ಲಿ ಹಾನಿಯಾದಾಗ, ದುಪ್ಪಟ್ಟು ಪರಿಹಾರ ನೀಡಲಾಗಿತ್ತು. ಬೆಳೆ ಪರಿಹಾರ ಹಾಗೂ ಮನೆ ಹಾನಿ ಪರಿಹಾರವನ್ನು ಡಬಲ್‌ ಮಾಡಲಾಗಿತ್ತು. ಮನೆ ಬಾಗಿಲಿಗೆ ನೀರು ಬಂದರೂ 24 ಗಂಟೆಯೊಳಗೆ ಪರಿಹಾರ ನೀಡಲಾಗಿತ್ತು. ಜೊತೆಗೆ ಪ್ರತಿ ಮನೆಗೆ ಆಹಾರ ಕಿಟ್‌ಗಳನ್ನು ನೀಡಲಾಗಿತ್ತು.…

Read More

ತಿರುಪತಿ: ತಿರುಪತಿಯ ಹಲವಾರು ಪ್ರದೇಶಗಳಲ್ಲಿ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿವೆ. ಭಯೋತ್ಪಾದಕರಿಂದ ಬಾಂಬ್ ಬೆದರಿಕೆ ಬಂದಿರುವುದರಿಂದ ಪೊಲೀಸರು ಅಲರ್ಟ್ ಆಗಿದ್ದಾರೆ. ಬಾಂಬ್ ನಿಷ್ಕ್ರಿಯ ದಳಗಳು ಹಲವಾರು ಪ್ರದೇಶಗಳಲ್ಲಿ ತಪಾಸಣೆ ನಡೆಸಿವೆ. ಭಕ್ತರು ಕಿಕ್ಕಿರಿದು ತುಂಬಿರುವ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಮತ್ತು ವಿಷ್ಣು ನಿವಾಸದಲ್ಲಿ ವಿಶೇಷ ಬಾಂಬ್ ದಳ ಮತ್ತು ಶ್ವಾನ ದಳಗಳನ್ನು ನಡೆಸಲಾಗಿದೆ. ತಮಿಳುನಾಡಿನಲ್ಲಿ ಬಾಂಬ್ ಬೆದರಿಕೆ ವಿಷಯ ಮತ್ತೊಮ್ಮೆ ಕೋಲಾಹಲ ಸೃಷ್ಟಿಸಿದೆ. ಶುಕ್ರವಾರ ಬೆಳಿಗ್ಗೆ ರಾಜ್ಯ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ರಾಜ್ಯಪಾಲ ಆರ್.ಎನ್. ರವಿ ಅವರ ನಿವಾಸ, ಚಲನಚಿತ್ರ ನಟಿ ತ್ರಿಶಾ ಅವರ ನಿವಾಸ ಮತ್ತು ಬಿಜೆಪಿ ಪ್ರಧಾನ ಕಚೇರಿಗೆ ಬೆದರಿಕೆ ಕರೆಗಳು ಬಂದಿವೆ. ಈ ಹಿನ್ನೆಲೆಯಲ್ಲಿ, ತಕ್ಷಣ ಎಚ್ಚೆತ್ತ ಪೊಲೀಸರು ಮತ್ತು ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಬಾಂಬ್ ದಳ ಮತ್ತು ಶ್ವಾನ ದಳಗಳು ಪರಿಶೀಲನೆ ನಡೆಸಿವೆ. ತಮಿಳುನಾಡಿನ ಹಲವಾರು ರಾಜಕೀಯ ಮತ್ತು ಚಲನಚಿತ್ರ ವ್ಯಕ್ತಿಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದ ಹಿನ್ನೆಲೆಯಲ್ಲಿ.. ತಿರುಪತಿಯಲ್ಲಿರುವ ಪೊಲೀಸ್ ವಿಶೇಷ ಘಟಕವನ್ನು…

Read More

ಚೆನ್ನೈ: ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕನಿಷ್ಠ ಎಂಟು ಮಕ್ಕಳ ಸಾವಿಗೆ ಈ ಸಿರಪ್ ಕಾರಣ ಎಂಬ ಮಾಧ್ಯಮ ವರದಿಗಳ ನಂತರ, ಔಷಧ ನಿಯಂತ್ರಣ ಆಡಳಿತ ಇಲಾಖೆ (ಡಿಡಿಸಿಎ) ತಮಿಳುನಾಡಿನಲ್ಲಿ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಮಾರಾಟವನ್ನು ನಿಷೇಧಿಸಿದೆ ಮತ್ತು ತಯಾರಕರ ಕಾಂಚೀಪುರಂ ಸ್ಥಾವರದಲ್ಲಿ ಅದರ ಎಲ್ಲಾ ಸ್ಟಾಕ್ ಅನ್ನು ಸ್ಥಗಿತಗೊಳಿಸಿದೆ. ರಾಜ್ಯದ ಚಿಂದ್ವಾರ ಜಿಲ್ಲೆಯಲ್ಲಿ ಮಕ್ಕಳ ಸಾವಿಗೆ ಸಂಬಂಧಿಸಿದಂತೆ ಮಧ್ಯಪ್ರದೇಶ (ಎಂಪಿ) ನಿಯಂತ್ರಕ, ಆಹಾರ ಮತ್ತು ಔಷಧ ಆಡಳಿತದಿಂದ ಬಂದ ಸಂವಹನದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಕಳೆದ ಮೂರು ವಾರಗಳಲ್ಲಿ ಆರು ಮಕ್ಕಳ ಸಾವಿಗೆ ಈ ಸಿರಪ್ ಕಾರಣ ಎಂದು ಶಂಕಿಸಲಾಗಿದೆ. ಔಷಧ ನಿಯಂತ್ರಣ ಮತ್ತು ನಿಯಂತ್ರಣ ಮತ್ತು ಪರವಾನಗಿ ಪ್ರಾಧಿಕಾರದ ಉಪ ನಿರ್ದೇಶಕಿ ಎಸ್ ಗುರುಭಾರತಿ, ರಾಜ್ಯಾದ್ಯಂತದ ಎಲ್ಲಾ ಔಷಧ ನಿರೀಕ್ಷಕರಿಗೆ ಔಷಧಾಲಯಗಳು ಕೋಲ್ಡ್ರಿಫ್ ಮಾರಾಟವನ್ನು ತಡೆಯಲು ಮತ್ತು ಮುಂದಿನ ಆದೇಶದವರೆಗೆ ಲಭ್ಯವಿರುವಲ್ಲೆಲ್ಲಾ ಸ್ಟಾಕ್ ಅನ್ನು ಸ್ಥಗಿತಗೊಳಿಸಲು ಕೇಳಲಾಗಿದೆ ಎಂದು ಟಿಎನ್‌ಐಇಗೆ ತಿಳಿಸಿದರು. ಸಾವಿಗೆ ಕಾರಣವೆಂದು ಶಂಕಿಸಲಾದ ಕೋಲ್ಡ್ರಿಫ್‌ನ ಒಂದೇ…

Read More

ಕೊಪ್ಪಳ: ರಾಜ್ಯದಲ್ಲೇ ಬೆಚ್ಚಿ ಬೀಳಿಸಿದ್ದಂತ ಕೊಪ್ಪಳದ ವಿದ್ಯಾರ್ಥಿ ಯಲ್ಲಾಲಿಂಗ ಕೊಲೆ ಪ್ರಕರಣದ ತೀರ್ಪನ್ನು ಕೋರ್ಟ್ ಪ್ರಕಟಿಸಿದೆ. ವಿದ್ಯಾರ್ಥಿ ಯಲ್ಲಾಲಿಂಗಾ ಕೊಲೆ ಪ್ರಕರಣದಲ್ಲಿ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶಿಸಿದೆ. ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ವಿದ್ಯಾರ್ಥಿ ಯಲ್ಲಾಲಿಂಗ ಕೊಲೆ ಪ್ರಕರಣದ ಅಂತಿಮ ತೀರ್ಪನ್ನು ಇಂದು ಪ್ರಕಟಿಸಲಾಗಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಅಂದಹಾಗೇ ಹತ್ತು ವರ್ಷಗಳ ಹಿಂದೆ ಜನವರಿ.11, 2015ರಂದು ಕೊಪ್ಪಳದ ಕನಕಗಿರಿ ತಾಲ್ಲೂಕಿನ ಕನಕಾಪುರ ಗ್ರಾಮದ ವಿದ್ಯಾರ್ಥಿಯಾಗಿದ್ದಂತ ಯಲ್ಲಾಲಿಂಗ ಕೊಲೆಯಾಗಿದ್ದನು. ಕೊಪ್ಪಳದ ಕನಕಾಪೂರದ ವಿದ್ಯಾರ್ಥಿ ಯಲ್ಲಾಲಿಂಗನನ್ನು ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ಕೊಲೆ ಪ್ರಕರಣ ಕರ್ನಾಟಕದಲ್ಲಿ ಅಲ್ಲದೇ ಇಡೀ ದೇಶದಲ್ಲೇ ಬಹುದೊಡ್ಡ ಸದ್ದು ಮಾಡಲಾಗಿತ್ತು. ಈ ಕೊಲೆ ಪ್ರಕರಣದಲ್ಲಿ ಸಾಕ್ಷಾಧಾರಗಳ ಕೊರತೆಯಿಂದ ಕೋರ್ಟ್ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ.

Read More

ಬೆಂಗಳೂರು : ಪ್ರಸಿದ್ಧ ಭಾರತೀಯ ಇತಿಹಾಸಕಾರ, ಅಂಕಣಕಾರ ಮತ್ತು ಚಿಂತಕರಾದ ಡಾ.ರಾಮಚಂದ್ರ ಗುಹಾ ಅವರನ್ನು 2025ನೇ ಸಾಲಿನ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ– ಕರ್ನಾಟಕಕ್ಕೆ ರಾಜ್ಯ ಸರ್ಕಾರ ಆಯ್ಕೆ ಮಾಡಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಪ್ರತಿ ವರ್ಷ ನೀಡಲಾಗುವ ಈ ಗೌರವಾನ್ವಿತ ಪ್ರಶಸ್ತಿಯನ್ನು, ಗಾಂಧೀಜಿಯವರ ಜೀವನ ಮೌಲ್ಯಗಳನ್ನು ಸಮಾಜದಲ್ಲಿ ಹರಡಲು ಮಹತ್ತರ ಕೊಡುಗೆ ನೀಡಿದ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ಪ್ರದಾನ ಮಾಡಲಾಗುತ್ತದೆ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿಯನ್ನು ರಾಜ್ಯಾದ್ಯಂತ ಅರ್ಥಪೂರ್ಣವಾಗಿ, ಜನಸಾಮಾನ್ಯರು, ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯಿಂದ ಆಚರಿಸಲು ರಾಜ್ಯ ಸರ್ಕಾರವು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಆಚರಣೆಯ ಅಂಗವಾಗಿ ಗಾಂಧೀಜಿಯವರ ತತ್ವ, ಮೌಲ್ಯ ಹಾಗೂ ಸಮಾಜಮುಖಿ ಚಿಂತನೆಗಳನ್ನು ಜನಮನಗಳಲ್ಲಿ ಬಿತ್ತುವಲ್ಲಿ ಮಹತ್ವದ ಪಾತ್ರವಹಿಸಿರುವ ಡಾ. ರಾಮಚಂದ್ರ ಗುಹಾ ಅವರನ್ನು ಈ ವರ್ಷದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಡಾ. ಗುಹಾ ಅವರು ಭಾರತದ ಸಮಕಾಲೀನ ಇತಿಹಾಸ, ರಾಜಕೀಯ ಚಳವಳಿಗಳು, ಪರಿಸರ ಹೋರಾಟಗಳು ಹಾಗೂ ಕ್ರಿಕೆಟ್ ಕುರಿತ…

Read More

ಶಿವಮೊಗ್ಗ: ಸಾಗರದ ಲಯನ್ಸ್ ಕ್ಲಬ್ ವತಿಯಿಂದ ನವರಾತ್ರಿ ಸಂಭ್ರಮದ ಅಂಗವಾಗಿ ಕ್ರಿಸ್ಟಲ್ ಸಾಗರ್ ಸಹಯೋಗದಲ್ಲಿ ಏರ್ಪಡಿಸಿದ್ದ ದಾಂಡಿಯಾ ಫೆಸ್ಟ್ ಕಾರ್ಯಕ್ರಮ ವನ್ನು ಲಯನ್ಸ್ ಸಂಸ್ಥೆಯ ನಾಗರಾಜ್ ಇ. ಉದ್ಘಾಟಿಸಿದರು. ಸಾಗರದ ಲಯನ್ಸ್ ಸಂಸ್ಥೆ ಅಧ್ಯಕ್ಷ ಡಾ.ಪ್ರಸನ್ನ ಟಿ., ಲಯನ್ಸ್ ಸಂಸ್ಥೆಯ ವಿ.ಸಿ.ಪಾಟೀಲ್, ತಿಮ್ಮಪ್ಪ ಎನ್., ವಿನಯ್‌ಕುಮಾರ್ ಎಂ., ಸಿಬಿನ್ ಸೋಮನ್, ಶ್ವೇತಾ ರಮೇಶ್, ಅಂಬಲಿ ಸೋಮನ್, ಅರ್ಚನಾ ಪ್ರಸನ್ನ, ಶ್ಯಾಮಲಾ ನಾಗರಾಜ್, ಕೆ.ಬಿ.ಮಹಾಬಲೇಶ್ ಉಪಸ್ಥಿತರಿದ್ದರು. ನಂತರ ವೈವಿಧ್ಯಮಯ ನೃತ್ಯ ಕಾರ್ಯಕ್ರಮ ನಡೆಯಿತು. https://kannadanewsnow.com/kannada/hills-will-become-plains-plains-will-become-hills-cody-shri-shocking-future/ https://kannadanewsnow.com/kannada/kodimath-sris-explosive-prediction-about-cm-siddaramaiahs-government/

Read More

ಶಿವಮೊಗ್ಗ: ಭಾವ ಇಲ್ಲದ ಅರ್ಚನೆಗೆ ಯಾವುದೇ ಫಲ ಇಲ್ಲ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು. ಶಿವಮೊಗ್ಗ ಜಿಲ್ಲೆಯ ಸಾಗರ ಅಗ್ರಹಾರದಲ್ಲಿರುವ ಶ್ರೀ ರಾಘವೇಶ್ವರ ಭವನದ ಶ್ರೀಮನ್ನಗರ ವೇದಿಕೆಯಲ್ಲಿ ಏರ್ಪಡಿಸಿರುವ ನವರಾತ್ರ ನಮಸ್ಯಾದ 10 ನೇ ದಿನದ ಲಲಿತೋಪಾಖ್ಯಾನ ಪ್ರವಚನದಲ್ಲಿ ಅವರು ನುಡಿದರು. ಪೂಜೆಯಲ್ಲಿ ದೇವರಿಗೆ ಎಷ್ಟು ವಸ್ತು ಸಮರ್ಪಿಸುತ್ತಿದ್ದೇವೆ ಎನ್ನುವುದಕ್ಕಿಂತ ಭಕ್ತಿಯಲ್ಲಿ ಭಾವಿಸಿ ಪೂಜೆ ಮಾಡುತ್ತಿದ್ದೇವೆ ಎನ್ನುವುದು ಅತೀ ಮುಖ್ಯ, ಯಾರ ಕುರಿತು ಪೂಜಿಸುತ್ತೇವೋ ಆ ಕುರುಣಾಮಯಿಯ ಕುರಿತು ನಮ್ಮ ಚಿತ್ತಭಿತ್ತಿಯಲ್ಲಿ ಭಾವನೆಯೇ ಇಲ್ಲದಿದ್ದರೆ ಆ ಪೂಜೆ ಪರಿಪೂರ್ಣವಲ್ಲ ಎಂದರು. ದೇವಿಯ ಪ್ರತಿ ಸ್ತೋತ್ರ ಹೇಳುವಾಗ ಸೃಷ್ಟಿಯ ನೆಮ್ಮದಿಗಾಗಿ ಆಕೆ ಮಾಡಿದ ಪ್ರತಿ ಕಾರ್ಯವೂ ನಮ್ಮ ಮನದಲ್ಲಿದ್ದರೆ ಅದನ್ನು ಸ್ಮರಿಸಿ ಧ್ಯಾನಿಸಿದರೆ ಮಾತ್ರ ಅನುಗ್ರಹ ದೊರೆಯಲಿದೆ ಎಂದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜೇಂದ್ರ ಪತ್ನಿ ಪ್ರೇಮಾರೊಟ್ಟಿಗೆ ಆಗಮಿಸಿ ಲಲಿತಾದೇವಿ ಪೂಜೆಯಲ್ಲಿ ಪಾಲ್ಗೊಂಡರು ಹಾಗೂ ಉಡಿ ಸಮರ್ಪಣೆಗೈದು ನಂತರ ಶ್ರೀಗಳವರಿಂದ ಆಶೀರ್ವಾದ ಪಡೆದರು. ಇದಕ್ಕೂ ಮುನ್ನ ಬೆಳಗ್ಗೆ ಶುಂಭಹಾ ಉಪಾಸನೆ,…

Read More

ಧಾರವಾಡ: ಎರಡೂವರೆ ವರ್ಷಕ್ಕೆ ಮುಖ್ಯಮಂತ್ರಿ ರಾಜ್ಯದಲ್ಲಿ ಬದಲಾವಣೆ ಆಗಲಿದ್ದಾರೆ ಎನ್ನಲಾಗುತ್ತಿತ್ತು. ಇದರ ನಡುವೆ ಕೋಡಿಮಠ ಶ್ರೀಗಳು ಸಿಎಂ ಸಿದ್ಧರಾಮಯ್ಯ ಸರ್ಕಾರದ ಬಗ್ಗೆ ಸ್ಪೋಟಕ ಭವಿಷ್ಯ ನುಡಿದ್ದಾರೆ. ಅದು ಏನು ಅಂತ ಮುಂದೆ ಓದಿ. ಇಂದು ದಸರಾ ಹಬ್ಬದ ಪ್ರಯುಕ್ತ ಜಂಬೂ ಸವಾರಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ದಸರಾದ ನಿಜವಾದಂತ ಅರ್ಥವೆಂದರೇ ದುಷ್ಟ ಶಕ್ತಿಗಳನ್ನು ದೂರ ಮಾಡುವುದು. ಮನುಷ್ಯನ ಕೋಪ, ತಾಪ, ಆಸೆಗಳನ್ನು ಗೆಲ್ಲುವಂತೆ ಮಾಡುವುದಾಗಿದೆ. ಅಲ್ಲದೇ ಮನುಷ್ಯನಿಗೆ ಶಾಂತಿ, ಸುಖ, ನೆಮ್ಮದಿಗಾಗಿ ದಸರಾವನ್ನು ಆಚರಿಸಲಾಗುತ್ತದೆ ಎಂದರು. ಸಿಎಂ ಸಿದ್ಧರಾಮಯ್ಯ ಅವರ ಸರ್ಕಾರದ ಬಗ್ಗೆ ಭವಿಷ್ಯ ನುಡಿದಂತ ಅವರು, ಸಂಕ್ರಾಂತಿಯವರೆಗೆ ಯಾವುದೇ ತೊಂದರೆ ಸಿದ್ಧರಾಮಯ್ಯ ಸರ್ಕಾರಕ್ಕೆ ಇಲ್ಲ. ಭಯವೂ ಇಲ್ಲ. ಸಂಕ್ರಾಂತಿ ಬಳಿಕ ಆ ಸಿದ್ಧರಾಮಯ್ಯ ಸರ್ಕಾರದ ಬಗ್ಗೆ ಭವಿಷ್ಯ ನುಡಿಯುವುದಾಗಿ ಹೇಳಿದರು. ಇನ್ನೂ ನಾನು ಈ ಹಿಂದೆಯೇ ಹೇಳಿದ್ದೇನೆ. ಅದೇನೆಂದರೇ ಬಯಲು ಸೀಮೆ ಮಲೆನಾಡು ಆಗಲಿದೆ. ಮಲೆನಾಡು ಬಯಲು ಸೀಮೆ ಆಗುತ್ತದೆ ಎಂಬುದಾಗಿ. ಅದರಂತೆ ನಮ್ಮಲ್ಲೀಗ ಬಯಲು…

Read More