Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಬಿಬಿಎಂಪಿಯಲ್ಲಿ ಕಾಮಗಾರಿಯನ್ನು ನಿರ್ವಹಿಸಿರುವ ಗುತ್ತಿಗೆದಾರರಿಗೆ ಈಗಾಗಲೇ ಪಾವತಿ ಮಾಡಿರುವ ಬಿಲ್ಲುಗಳಲ್ಲಿ ತಡೆ ಹಿಡಿದಿರುವ ಶೇ.25ರಷ್ಟು ಬಾಕಿ ಮೊತ್ತವನ್ನು ಬಿಡುಗಡೆ ಮಾಡಲು ಆದೇಶಿಸಿದೆ. ಈ ಮೂಲಕ ಪಾವತಿಸಲು ಬಾಕಿಯಿರುವ ಕಾಮಗಾರಿ ಬಿಲ್ಲುಗಳನ್ನು ಶೇ.100ರಷ್ಟು ಪಾವತಿ ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಈ ಕುರಿತಂತೆ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಲಕ್ಷ್ಮೀ ಸಾಗರ್ ಎನ್.ಕೆ ಅವರು ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ 2019-20 ರಿಂದ 2022-23 ರವರೆಗೆ ಪ್ರಮುಖವಾಗಿ ಘನತ್ಯಾಜ್ಯ ನಿರ್ವಹಣೆ ಕಾಮಗಾರಿಗಳು, ರಸ್ತೆ ಅಭಿವೃದ್ಧಿ, ಓಎಫ್‌ಸಿ ಕೇಬಲ್ ಅಳವಡಿಕೆ, ಬೃಹತ್ ನೀರುಗಾಲುವೆ ಕಾಮಗಾರಿಗಳು, ಕೇಂದ್ರ/ವಲಯ ನಗರ ಯೋಜನೆ ವಿಭಾಗಗಳಲ್ಲಿ ನಕ್ಷೆ ಮಂಜೂರಾತಿ | ಸ್ವಾಧೀನಾನುಭವ ಪತ್ರ ನೀಡುವಿಕೆ, ಕೆರೆಗಳ ಅಭಿವೃದ್ಧಿ ಕಾಮಗಾರಿಗಳು, ಯೋಜನೆಯಡಿಯಲ್ಲಿನ ಕಾಮಗಾರಿಗಳು ಮತ್ತು ವಾರ್ಡ್ ಮಟ್ಟದ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ವಿವರವಾದ ತನಿಖೆಯನ್ನು ನಡೆಸಲು 4 ವಿಶೇಷ ತನಿಖಾ ತಜ್ಞರ | ಪರಿಣಿತರ ನೇತೃತ್ವದಲ್ಲಿ 4 ಪ್ರತ್ಯೇಖ ತನಿಖಾ ಸಂಸ್ಥೆಗಳನ್ನು ರಚಿಸಿ…
ನವದೆಹಲಿ: 2024 ರ ಯುಎಸ್ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ (60) ಮತ್ತು ಅವರ ರಿಪಬ್ಲಿಕನ್ ಪ್ರತಿಸ್ಪರ್ಧಿ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (78) ಅವರ ಭವಿಷ್ಯವನ್ನು ನಿರ್ಧರಿಸುವುದು ಏಳು ರಾಜ್ಯಗಳಿಗೆ ಬಿಟ್ಟಿದ್ದು. ಈ ಪ್ರಮುಖ ರಾಜ್ಯಗಳಾದ ಅರಿಜೋನಾ, ಜಾರ್ಜಿಯಾ, ಮಿಚಿಗನ್, ನೆವಾಡಾ, ಉತ್ತರ ಕೆರೊಲಿನಾ, ಪೆನ್ಸಿಲ್ವೇನಿಯಾ ಮತ್ತು ವಿಸ್ಕಾನ್ಸಿನ್ 93 ಎಲೆಕ್ಟೋರಲ್ ಮತಗಳನ್ನು ಹೊಂದಿವೆ ಮತ್ತು ಅಧ್ಯಕ್ಷ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಅಗತ್ಯವಿರುವ ಒಟ್ಟು 538 ಎಲೆಕ್ಟೋರಲ್ ಮತಗಳಲ್ಲಿ 270 ಸ್ಥಾನಗಳಿಗೆ ಎರಡೂ ಅಭ್ಯರ್ಥಿಗಳು ಸ್ಪರ್ಧಿಸುತ್ತಿರುವುದರಿಂದ ಪ್ರಾಥಮಿಕ ಯುದ್ಧಭೂಮಿಗಳಾಗಿವೆ. ಸ್ವಿಂಗ್ ರಾಜ್ಯಗಳು, ಅಥವಾ ಯುದ್ಧಭೂಮಿ ರಾಜ್ಯಗಳು, ಚುನಾವಣೆಯನ್ನು ಅವಲಂಬಿಸಿ ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಬೆಂಬಲದ ನಡುವೆ ಬದಲಾಗಬಹುದು. ಐತಿಹಾಸಿಕವಾಗಿ ಕಡಿಮೆ ಮತದಾನದ ಅಂತರ ಮತ್ತು ಕಾಲಾನಂತರದಲ್ಲಿ ವೈವಿಧ್ಯಮಯ ಫಲಿತಾಂಶಗಳನ್ನು ಹೊಂದಿರುವ ಈ ರಾಜ್ಯಗಳು ಅಭ್ಯರ್ಥಿಗಳಿಂದ ಗಮನಾರ್ಹ ಗಮನವನ್ನು ಸೆಳೆಯುತ್ತವೆ. ಅವರು ಮತದಾರರನ್ನು ಸೆಳೆಯಲು ಮತ್ತು ನಿರ್ಣಾಯಕ ಚುನಾವಣಾ ಮತಗಳನ್ನು ಪಡೆಯಲು ತಮ್ಮ ಪ್ರಚಾರವನ್ನು ಅಲ್ಲಿ ಕೇಂದ್ರೀಕರಿಸುತ್ತಾರೆ.…
ಹುಬ್ಬಳ್ಳಿ: ನಾನು ನಾಳೆ ಬೆಳಿಗ್ಗೆ 10 ಗಂಟೆಗೆ ಮುಡಾ ಹಗರಣ ಸಂಬಂಧ ಲೋಕಾಯುಕ್ತದ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮುಡಾ ಹಗರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಹೀಗಾಗಿ ನಾನು ನಾಳೆ ಬೆಳಿಗ್ಗೆ 10 ಗಂಟೆಗೆ ಮೈಸೂರಿನ ಮುಡಾ ಕಚೇರಿಗೆ ತೆರಳಲಿದ್ದೇನೆ ಎಂದರು. ನಾಳೆ ಬೆಳಿಗ್ಗೆ 10 ಗಂಟೆಗೆ ಲೋಕಾಯುಕ್ತ ಕಚೇರಿಗೆ ತೆರಳಿ ವಿಚಾರಣಾಧಿಕಾರಿಗಳ ಮುಂದೆ ವಿಚಾರಣೆ ಎದುರಿಸಲಿದ್ದೇನೆ. ಅವರು ಕೇಳುವಂತ ಪ್ರಶ್ನೆಗಳಿಗೂ ಉತ್ತರಿಸುವುದಾಗಿ ತಿಳಿಸಿದರು. https://kannadanewsnow.com/kannada/big-news-cm-siddaramaiah-fears-cbi-probe-in-muda-case-hc-to-hear-plea-in-minutes/ https://kannadanewsnow.com/kannada/breaking-lineman-dies-due-to-electrocution-in-tumkur/
ಬೆಂಗಳೂರು: ಬಿಎಂಟಿಸಿಯ ನಿರ್ವಾಹಕರ ಹುದ್ದೆಗೆ ಅರ್ಜಿ ಸಲ್ಲಿಸಿದ್ದವರಿಗೆ ಮಹತ್ವದ ಮಾಹಿತಿ ಎನ್ನುವಂತೆ, ಮೂಲ ದಾಖಲೆ/ದೇಹದಾರ್ಢ್ಯತೆ ಪರಿಶೀಲನೆಗೆ ಹಾಜರಾಗಲು ಕರೆಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳುವಂತೆ ನಿಗಮ ಸೂಚಿಸಿದೆ. ಬೆಂ.ಮ.ಸಾ.ಸಂಸ್ಥೆಯು ದಿನಾಂಕ 21-10-2024 ರಂದು ನಿರ್ವಾಹಕ (ಮಿಕ್ಕುಳಿದ ಮೂಲವೃಂದ) ಹುದ್ದೆಗೆ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಅರ್ಹ ಅಭ್ಯರ್ಥಿಗಳು ನಿಗದಿಪಡಿಸಿದ ದಿನಾಂಕ ಮತ್ತು ಸಮಯದಂದು ದಾಖಲೆ ಪರಿಶೀಲನೆ ಮತ್ತು ದೈಹಿಕ ಮಾನದಂಡಗಳ ಪರೀಕ್ಷೆಗಾಗಿ ಆಯ್ಕೆ ಸಮಿತಿಯ ಮುಂದೆ ಹಾಜರಾಗಲು ತಿಳಿಸಲಾಗಿದೆ. ಕರೆ ಪತ್ರಗಳನ್ನು www.mybmtc.karnataka.gov.in ಅಧಿಕೃತ ವೆಬ್ ಸೈಟ್ ನಲ್ಲಿ ಡೌನ್ಲೋಡ್ ಮಾಡಬಹುದು ಎಂದಿದೆ. https://kannadanewsnow.com/kannada/fir-filed-against-union-minister-hd-kumaraswamy-2/ https://kannadanewsnow.com/kannada/big-news-cm-siddaramaiah-fears-cbi-probe-in-muda-case-hc-to-hear-plea-in-minutes/
ಬೆಂಗಳೂರು : ಎಡಿಜಿಪಿ ಚಂದ್ರಶೇಖರ್ ಹಾಗೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ನಡುವಿನ ವಾಕ್ಸಮರ ಇದೀಗ ತಾರಕಕ್ಕೆ ಏರಿದ್ದು, ಎಚ್ ಡಿ ಕುಮಾರಸ್ವಾಮಿ ಬೆದರಿಸುವುದಾಗಿ ಹೇಳಿಕೆ ನೀಡಿದ್ದರಿಂದ ಈ ವಿಚಾರವಾಗಿ ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಎಡಿಜಿಪಿ ಚಂದ್ರಶೇಖರ್ ಅವರು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಹೌದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಕುಮಾರಸ್ವಾಮಿ ವಿರುದ್ಧ ಎಡಿಜಿಪಿ ಚಂದ್ರಶೇಖರ್ ಅವರು FIR ದಾಖಲಿಸಿದ್ದಾರೆ.ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹಾಗೂ ಇತರರು ತೊಂದರೆ ಕೊಡುವುದಾಗಿ ನಾನಾಗೆ ಬೆದರಿಕೆ ಹಾಕಿದ್ದಾರೆ ಎಂದು ಎಫ್ ಐ ಆರ್ ನಲ್ಲಿ ಎಡಿಜಿಪಿ ಚಂದ್ರಶೇಖರ್ ಉಲ್ಲೇಖಿಸಿದ್ದಾರೆ. ಎಚ್ ಡಿ ಕುಮಾರಸ್ವಾಮಿ ಅವರು ತೊಂದರೆ ಕೊಡುವುದಾಗಿ ಬೆದರಿಕೆ ಹಾಕಿದ್ದಾರೆ ಆದ್ದರಿಂದ A1 ಆರೋಪಿಯಾಗಿ HD ಕುಮಾರಸ್ವಾಮಿ, A2 ನಿಖಿಲ್, ಹಾಗೂ A3 ಆರೋಪಿ ಜೆಡಿಎಸ್ ಮುಖಂಡ ಸುರೇಶ್ ಬಾಬು ವಿರುದ್ಧ…
ಸಾಲ ಅಂತ ಇದ್ರೆ ಅದು ನಮ್ಮನ್ನು ನಿದ್ರೆ ಮಾಡಲು ಬಿಡುವುದಿಲ್ಲ ಯಾವಗ ಸಾಲ ತೀರುತ್ತದೆ ಎಂಬ ಚಿಂತೆ ನಿಮ್ಮನ್ನು ಕಾಡುತ್ತಿದೇಯೆ..!! ಸಾಲ ಲಕ್ಷ ಇರಲಿ ಕೋಟಿ ಇರಲಿ ಎಲೆ ಲವಂಗ ಏಲಕ್ಕಿ ಪ್ರಯೋಗ ಮಾಡಿ । ಸಾಲ ತೀರೋದು ಗ್ಯಾರಂಟಿ 1)ಸಾಲ ಲಕ್ಷ ಕೋಟಿ ಇರಲಿ ಎಲೆ ಲವಂಗ ಏಲಕ್ಕಿಯ ಪ್ರಯೋಗ ಮಾಡಿದರೆ ಸಾಲತಿರುವುದು 2)ಪಕ್ಕಾ ಸಾಲ ಅಂತ ಇದ್ರೆ ಅದು ನಮ್ಮನ್ನು ನಿದ್ರೆ ಮಾಡಲು ಬಿಡುವುದಿಲ್ಲ ಯಾವಗ ಸಾಲ ತೀರುತ್ತದೆ ಎಂಬ ಚಿಂತೆ ನಮ್ಮನ್ನು ಕಾಡುತ್ತದೆ ಸಾಲ ಇಲ್ಲದ ಜೀವನ ಅತಿ ಸುಂದರ ಜೀವನ ಎನ್ನಬಹುದು ಸಾಲ ತೆಗೆದುಕೊಳ್ಳುವುದು ತುಂಬಾ ಸುಲಭ ಆದರೆ ಅದನ್ನು ತೀರಿಸುವುದು ತುಂಬಾ ಕಷ್ಟಕರವಾದ ಕೆಲಸ ಎಂದು ಎಲ್ಲರಿಗೂ ಗೊತ್ತು ಕೆಲವೊಮ್ಮೆ ಪರಿಸ್ಥಿತಿಗಳು ಹೇಗೆ ಬರುತ್ತಿದೆ ಎಂದರೆ ತಗೊಂಡ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ…
ಇಂತಹ ಕೃತ್ಯಗಳು ಭಾರತವನ್ನು ದುರ್ಬಲಗೊಳಿಸುವುದಿಲ್ಲ: ಕೆನಡಾದಲ್ಲಿನ ಹಿಂದೂ ದೇವಾಲಯದ ಮೇಲಿನ ದಾಳಿಗೆ ಮೋದಿ ಪ್ರತಿಕ್ರಿಯೆ
ನವದೆಹಲಿ: ಕೆನಡಾದ ಹಿಂದೂ ದೇವಾಲಯದ ಮೇಲೆ ನಡೆದ ಉದ್ದೇಶಪೂರ್ವಕ ದಾಳಿಯನ್ನು ಖಂಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಕೆನಡಾ ಸರ್ಕಾರವು ನ್ಯಾಯವನ್ನು ಖಚಿತಪಡಿಸುತ್ತದೆ ಮತ್ತು ಕಾನೂನಿನ ನಿಯಮವನ್ನು ಎತ್ತಿಹಿಡಿಯುತ್ತದೆ ಎಂದು ನಿರೀಕ್ಷಿಸುತ್ತೇನೆ ಎಂದು ಸೋಮವಾರ ಹೇಳಿದ್ದಾರೆ. ಉಭಯ ದೇಶಗಳ ನಡುವೆ ರಾಜತಾಂತ್ರಿಕ ಉದ್ವಿಗ್ನತೆ ಹೆಚ್ಚುತ್ತಿರುವ ಸಮಯದಲ್ಲಿ ಅಪರೂಪದ ಹೇಳಿಕೆಯಲ್ಲಿ, ಕೆನಡಾದಲ್ಲಿ ಭಾರತೀಯ ರಾಜತಾಂತ್ರಿಕರನ್ನು ಬೆದರಿಸುವ ಪ್ರಯತ್ನಗಳು “ಅಷ್ಟೇ ಭಯಾನಕ” ಎಂದು ಮೋದಿ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಹೇಳಿದ್ದಾರೆ. https://twitter.com/narendramodi/status/1853442198575952031 ಒಂಟಾರಿಯೊದ ಬ್ರಾಂಪ್ಟನ್ನಲ್ಲಿರುವ ದೇವಾಲಯದಲ್ಲಿ ಭಾನುವಾರ ನಡೆದ ಹಿಂಸಾಚಾರವನ್ನು ಉಗ್ರಗಾಮಿಗಳು ಮತ್ತು ಪ್ರತ್ಯೇಕತಾವಾದಿಗಳು ನಡೆಸಿದ್ದಾರೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿದೆ. ಅಲ್ಲದೇ ಇಂತಹ ಕೃತ್ಯಗಳು ಭಾರತದ ಸಂಕಲ್ಪವನ್ನು ದುರ್ಬಲಗೊಳಿಸುವುದಿಲ್ಲ ಎಂಬುದಾಗಿ ಕೆನಡಾದಲ್ಲಿ ಹಿಂದೂ ದೇವಾಲಯದ ಮೇಲಿನ ದಾಳಿಗೆ ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ. https://kannadanewsnow.com/kannada/notification-for-by-elections-to-urban-local-body-vacant-seats-in-the-state-released/ https://kannadanewsnow.com/kannada/sensex-crashes-1400-points-investor-wealth-worth-rs-8-lakh-cr-wiped-out-why-is-market-falling/
ಚಿತ್ರದುರ್ಗ: ಚಿತ್ರದುರ್ಗ ಹಾಗೂ ಚಳ್ಳಕೆರೆ ನಗರಸಭೆ ಮತ್ತು ನಾಯಕನಹಟ್ಟಿ ಪಟ್ಟಣ ಪಂಚಾಯಿತಿಯಲ್ಲಿ ವಿವಿಧ ಕಾರಣಗಳಿಂದ ತೆರವಾದ ಖಾಲಿ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಿಸಲಾಗಿದೆ. ಚಿತ್ರದುರ್ಗ ನಗರಸಭೆಯ 15ನೇ ವಾರ್ಡ್-ಹಿಂದುಳಿದ ವರ್ಗ-(ಎ), ಚಳ್ಳಕೆರೆ ನಗರಸಭೆಯ 4ನೇ ವಾರ್ಡ್-ಸಾಮಾನ್ಯ ಹಾಗೂ ನಾಯಕನಹಟ್ಟಿ ಪಟ್ಟಣ ಪಂಚಾಯಿತಿಯ ಜಾಗನೂರುಹಟ್ಟಿಯ 1ನೇ ವಾರ್ಡ್-ಪರಿಶಿಷ್ಟ ಜಾತಿಗೆ ಮೀಸಲಾತಿ ನಿಗಧಿಯಾಗಿದೆ. 2024ರ ನ.4 ಸೋಮವಾರದಂದು ಚುನಾವಣೆ ಅಧಿಸೂಚನೆ ಹೊರಡಿಸಲಾಗಿದ್ದು, ನ.11 ಸೋಮವಾರ ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದೆ. ನ.12 ಮಂಗಳವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನ.14 ಗುರುವಾರ ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ನ.23 ಶನಿವಾರ ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಒಂದು ವೇಳೆ ಮರು ಮತದಾನದ ಅವಶ್ಯಕತೆ ಬಿದ್ದಲ್ಲಿ ನ.25 ಸೋಮವಾರ ಮರು ಮತದಾನ ನಡೆಸಲಾಗುವುದು. ನ.26 ಮಂಗಳವಾರ ಸಂಬಂಧಪಟ್ಟ ತಾಲ್ಲೂಕು ಕೇಂದ್ರಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಸಲಾಗುವುದು. ವಿಜೇತ ಅಭ್ಯರ್ಥಿಯ ಘೋಷಣೆ ತರುವಾಯ ಚುನಾವಣೆ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಲಾಗುವುದು.…
ಧಾರವಾಡ : ಧಾರವಾಡ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿನ ವಿವಿಧ ಗ್ರಾಮ ಪಂಚಾಯತಗಳ ಗ್ರಂಥಾಲಯಗಳಲ್ಲಿ ಖಾಲಿ ಇರುವ 32 ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 5, 2024 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ರೂ. 16,382.52 ಗೌರವ ಸಂಭಾವನೆ ನೀಡಲಾಗುತ್ತದೆ. ಗ್ರಾಮ ಪಂಚಾಯತವಾರು ಖಾಲಿ ಇರುವ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳ ಮೀಸಲಾತಿ ವಿವರ ಹಾಗೂ ನಿಬಂಧನೆಗಳನ್ನು ತಿಳಿದುಕೊಳ್ಳಲು ಮತ್ತು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪಂಚಾಯತ ಫೋರ್ಟಲ್ https://zpdharwad.karnataka.gov.in ಗೆ ಅಥವಾ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿಗಳ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. https://kannadanewsnow.com/kannada/to-the-attention-of-farmers-in-the-state-registration-for-crop-insurance-begins-register-without-fail/ https://kannadanewsnow.com/kannada/sensex-crashes-1400-points-investor-wealth-worth-rs-8-lakh-cr-wiped-out-why-is-market-falling/
ಬಳ್ಳಾರಿ : ಪ್ರಸ್ತಕ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯ ಹಿಂಗಾರು ಹಾಗೂ ಮುಂಗಾರು ಹಂಗಾಮಿನ ಬೆಳೆ ವಿಮೆಗೆ ನೋಂದಾಯಿಸಲು ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದ ರೈತರು ಬ್ಯಾಂಕುಗಳಲ್ಲಿ ವಿಮೆ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. ಹಿಂಗಾರು ಹಂಗಾಮಿನ ಗ್ರಾಮ ಪಂಚಾಯಿತಿ ಮಟ್ಟದ ನೀರಾವರಿ ಬೆಳೆ ಜೋಳ, ನೀರಾವರಿ ಮತ್ತು ಮಳೆಯಾಶ್ರಿತ ಬೆಳೆ ಕಡಲೆ ಮತ್ತು ಬೇಸಿಗೆ ಹಂಗಾಮಿನ ಗ್ರಾಮ ಪಂಚಾಯಿತಿ ಮಟ್ಟದ ನೀರಾವರಿ ಬೆಳೆಗಳಾದ ನೆಲಗಡಲೆ (ಶೇಂಗಾ), ಭತ್ತ ಹಾಗೂ ಹೋಬಳಿ ಮಟ್ಟದ ಹಿಂಗಾರು ಹಂಗಾಮಿನ ನೀರಾವರಿ ಬೆಳೆ ಮುಸುಕಿನ ಜೋಳ, ನೀರಾವರಿ/ಮಳೆಯಾಶ್ರಿತ ಬೆಳೆ ಸೂರ್ಯಕಾಂತಿ, ಕುಸುಮೆ, ಈರುಳ್ಳಿ ಮತ್ತು ಬೇಸಿಗೆ ಹಂಗಾಮಿನ ನೀರಾವರಿ ಬೆಳೆಗಳಾದ ಸೂರ್ಯಕಾಂತಿ, ಈರುಳ್ಳಿ ಜಿಲ್ಲೆಯ ಬೆಳೆಗಳಾಗಿವೆ. ಬೆಳೆ ವಿಮೆಗೆ ಕೊನೆಯ ದಿನ: ಹಿಂಗಾರು ಹಂಗಾಮಿನ ಬೆಳೆಗಳಾದ ಜೋಳ, ಮುಸುಕಿನ ಜೋಳ, ಸೂರ್ಯಕಾಂತಿ, ಕುಸುಮೆ ಬೆಳೆಗಳಿಗೆ ಡಿ.16 ಆಗಿದೆ. ಅದರಂತೆ ಮಳೆಯಾಶ್ರಿತ…













