Subscribe to Updates
Get the latest creative news from FooBar about art, design and business.
Author: kannadanewsnow09
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮೊದಲ ಸೌರ ಮಿಷನ್ ಆದಿತ್ಯ ಎಲ್ 1 ತನ್ನ ಗಮ್ಯಸ್ಥಾನವನ್ನು ತಲುಪಿದೆ. ಈ ಮೂಲಕ ಇಸ್ರೋದ ಮೊದಲ ಸೂರ್ಯ ಮಿಷನ್ ಯಶಸ್ವಿಯಾಗಿದೆ. ಇಂದು ಇಸ್ರೋದಿಂದ ಸೂರ್ಯನ ಶಿಕಾರಿಗಾಗಿ ಹೊರಟಿದ್ದಂತ ಆದಿತ್ಯ ಎಲ್.1 ಅನ್ನು ಅಂತಿಮ ಕಕ್ಷೆಗೆ ಸೇರ್ಪಡೆ ಮಾಡೋ ಕಾರ್ಯವನ್ನು ಸಂಜೆ 4 ಗಂಟೆಗೆ ನಡೆಸಲಾಯಿತು. ಅಂದುಕೊಂಡಂತೆ ಅಂತಿಮ ಕಕ್ಷೆಗೆ ಸೇರಿಸಲಾಗಿದೆ. ಜನವರಿ 6 ರಂದು ಸಂಜೆ 4 ಗಂಟೆಗೆ ಆದಿತ್ಯ-ಎಲ್ 1 ತನ್ನ ಎಲ್ 1 ಬಿಂದುವನ್ನು ತಲುಪಲಿದೆ ಮತ್ತು ಅದನ್ನು ಅಲ್ಲಿಯೇ ಉಳಿಸಿಕೊಳ್ಳಲು ನಾವು ಅಂತಿಮ ತಂತ್ರವನ್ನು ಮಾಡಲಿದ್ದೇವೆ ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಸೋಮವಾರ ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದ್ದರು. ತನ್ನ ಅಂತಿಮ ಗಮ್ಯಸ್ಥಾನವನ್ನು ತಲುಪಿದ ನಂತರ, ಬಾಹ್ಯಾಕಾಶ ನೌಕೆಯು ಯಾವುದೇ ಗ್ರಹಣಗಳಿಲ್ಲದೆ ಸೂರ್ಯನನ್ನು ವೀಕ್ಷಿಸಲು ಸಾಧ್ಯವಾಗುತ್ತದೆ ಎಂದಿದ್ದರು. ಅಂದರಂತೆ ಇಂದು, ಇಸ್ರೋದ ಸೂರ್ಯ ಮಿಷನ್, ‘ಆದಿತ್ಯ ಎಲ್ 1’ 37 ಲಕ್ಷ ಕಿಲೋಮೀಟರ್ ದೂರವನ್ನು ಕ್ರಮಿಸಿ 126…
ಬೆಂಗಳೂರು: ಅತಿಥಿ ಉಪನ್ಯಾಸಕರಿಗೆ ಸೇವಾನುಭವದ ಆಧಾರದಲ್ಲಿ 5,000 ರೂ. ಗಳಿಂದ 8000 ರೂ. ಗಳಷ್ಟು ಗೌರವಧನ ಹೆಚ್ಚಳಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಒಪ್ಪಿಗೆ ಸೂಚಿಸಿದ್ದು ಮಾತ್ರವಲ್ಲದೆ ಇನ್ನಿತರ ಕೆಲವು ಸೌಲಭ್ಯಗಳನ್ನು ವಿಸ್ತರಿಸಿದ್ದಾರೆ. ಈ ಮೂಲಕ ರಾಜ್ಯದ ಅತಿಥಿ ಉಪನ್ಯಾಸಕರಿಗೆ ಭರ್ಜರಿ ಗುಡ್ ನ್ಯೂಸ್ ನೀಡಲಾಗಿದೆ. ಅವರು ಇಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮತ್ತು ಮಾಜಿ MLC ಪುಟ್ಟಣ್ಣ ನೇತೃತ್ವದ ಅತಿಥಿ ಉಪನ್ಯಾಸಕರ ನಿಯೋಗದ ಜತೆ ಅವರ ಬೇಡಿಕೆಗಳ ಕುರಿತು ಚರ್ಚಿಸಿದರು. ಅತಿಥಿ ಉಪನ್ಯಾಸಕರ ಬಗ್ಗೆ ನಮ್ಮ ಸರ್ಕಾರ ಮಾನವೀಯ ಕಾಳಜಿ ಹೊಂದಿದೆ. ಆದರೆ ಸೇವಾ ಭದ್ರತೆ ನೀಡಲು ಕಾನೂನು ತೊಡಕು ಇರುವುದರಿಂದ ಸಾಧ್ಯವಾಗುವುದಿಲ್ಲ. ವಿರೋಧ ಪಕ್ಷದ ನಾಯಕನಾಗಿದ್ದಾಗಲೂ ಅತಿಥಿ ಉಪನ್ಯಾಸಕರ ಪರವಾಗಿ ತಾವು ದನಿ ಎತ್ತಿ ವೇತನ ಹೆಚ್ಚಳಕ್ಕೆ ಒತ್ತಾಯಿಸಿದ್ದನ್ನು ಸ್ಮರಿಸಿಕೊಂಡ ಮುಖ್ಯಮಂತ್ರಿಗಳು, ಇದೀಗ ಎರಡೇ ವರ್ಷದೊಳಗೆ ನಮ್ಮ ಸರ್ಕಾರ ಮತ್ತೆ ನಿಮ್ಮ ವೇತನ ಹೆಚ್ಚಳಕ್ಕೆ ಮುಂದಾಗಿದೆ. ಸರ್ಕಾರ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಅತ್ಯಂತ ಸಹಾನುಭೂತಿಯಿಂದ ಪರಿಗಣಿಸಿದೆ ಎಂದು ತಿಳಿಸಿದರು. ಐದು ವರ್ಷಕ್ಕಿಂತ…
ಬೆಂಗಳೂರು: ವಯೋ ಸಹಜ ಖಾಯಿಲೆಯಿಂದಾಗಿ ಕನ್ನಡದ ಖ್ಯಾತ ಜಾನಪದ ವಿದ್ವಾಂಸ ಪ್ರೊ.ಅಮೃತ ಸೋಮೇಶ್ವರ ಅವರು ಇಂದು ನಿಧನರಾಗಿದ್ದಾರೆ. ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಇಂದು ಎಕ್ಸ್ ಮಾಡಿರುವಂತ ಅವರು, ಪ್ರಖ್ಯಾತ ಜಾನಪದ ವಿದ್ವಾಂಸ, ಸಂಸ್ಕೃತಿ ಚಿಂತಕ ಮತ್ತು ಶಿಷ್ಯರ ಮೆಚ್ಚಿನ ಗುರು ಪ್ರೊ.ಅಮೃತ ಸೋಮೇಶ್ವರ ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬ ಸದಸ್ಯರು ಮತ್ತು ಅಭಿಮಾನಿ ಬಳಗದ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ. https://twitter.com/CMofKarnataka/status/1743553181236543943 ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೂಡ ಎಕ್ಸ್ ಮಾಡಿ, ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಸಾಹಿತಿ, ಯಕ್ಷಗಾನ ಪ್ರಸಂಗಕರ್ತ, ಕನ್ನಡ, ತುಳು ಭಾಷೆ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದ ಸಮಾಜಮುಖಿ ಚಿಂತಕ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪ್ರೊ. ಅಮೃತ ಸೋಮೇಶ್ವರ ಅವರು ನಿಧನ ಹೊಂದಿದ ವಿಷಯ ತಿಳಿದು ಅತ್ಯಂತ ದುಃಖವಾಯಿತು ಎಂದಿದ್ದಾರೆ. ನೂರಾರು…
ಭೋಪಾಲ್: ಮಧ್ಯಪ್ರದೇಶದ ನೋಂದಣಿಯಾಗದ ಅನಾಥಾಶ್ರಮದಿಂದ ಗುಜರಾತ್, ಜಾರ್ಖಂಡ್ ಮತ್ತು ಇತರ ರಾಜ್ಯಗಳ 26 ಬಾಲಕಿಯರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಈ ಹುಡುಗಿಯರು ಎಲ್ಲಿದ್ದಾರೆಂದು ತಿಳಿದಿಲ್ಲ. ಅವರ ಪ್ರಸ್ತುತ ಸ್ಥಳಗಳ ಬಗ್ಗೆ ಮಾಹಿತಿಯ ಕೊರತೆಯನ್ನು ಅಧಿಕಾರಿಗಳು ಎದುರಿಸುತ್ತಿದ್ದಾರೆ. ಈ ನಡುವೆ ತನಿಖೆಗೆ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್ ಆಗ್ರಹಿಸಿದ್ದಾರೆ ಭೋಪಾಲ್ನ ಪರ್ವಾಲಿಯಾ ಸಡಕ್ ಪೊಲೀಸ್ ಠಾಣೆಯಲ್ಲಿ ಬಾಲನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ, 2015 ರ ಸೆಕ್ಷನ್ಗಳ ಅಡಿಯಲ್ಲಿ ಮಕ್ಕಳ ಗೃಹದ ವ್ಯವಸ್ಥಾಪಕ ಅನಿಲ್ ಮೆಥ್ಯೂ ಅವರನ್ನು ಆರೋಪಿ ಎಂದು ಹೆಸರಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ಮನೆಯಲ್ಲಿ ನೋಂದಾಯಿತ 68 ಬಾಲಕಿಯರಲ್ಲಿ 6-18 ವರ್ಷದೊಳಗಿನ 26 ಬಾಲಕಿಯರು ಕಾಣೆಯಾಗಿದ್ದಾರೆ ಎಂದು ಎಫ್ಐಆರ್ನಲ್ಲಿ ತಿಳಿಸಲಾಗಿದೆ. ಬಾಲನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ, 2015 ರ ಪ್ರಕಾರ ಮಕ್ಕಳ ಮನೆಯನ್ನು ನಡೆಸುತ್ತಿಲ್ಲ ಮತ್ತು ನೋಂದಾಯಿಸಲಾಗಿಲ್ಲ ಎಂದು ಎಫ್ಐಆರ್ನಲ್ಲಿ ತಿಳಿಸಲಾಗಿದೆ. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್…
ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ದೇವನಹಳ್ಳಿಯಲ್ಲಿನ 5ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ನಿಂದ ಇಂದು ಮಧ್ಯಾಹ್ನ 3.30ಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ಅವರ ಜಾಮೀನು ಅರ್ಜಿಯ ಸಂಬಂಧ ಕಾಯ್ದಿರಿಸಲಾಗಿದ್ದಂತ ತೀರ್ಪನ್ನು ಪ್ರಕಟಿಸಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿರುವಂತ 5ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ನ ನ್ಯಾಯಾಧೀಶರಾದಂತ ಬೀರಾದಾರ್ ದೇವೇಂದ್ರ ಅವರು ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನಂತ್ರ, ತೀರ್ಪನ್ನು ಇಂದಿಗೆ ಕಾಯ್ದಿರಿಸಿದ್ದರು. ಇಂತಹ ತೀರ್ಪನ್ನು ಇಂದು ನ್ಯಾಯಮೂರ್ತಿ ಬಿರಾದಾರ್ ದೇವೇಂದ್ರಪ್ಪ ಅವರು ಪ್ರಕಟಿಸಲಿದ್ದಾರೆ. ಇಂದು ಮಧ್ಯಾಹ್ನ 3.30ಕ್ಕೆ ತನ್ನ ತೀರ್ಪು ಪ್ರಕಟಿಸೋ ಅವರು, ಯಾವ ತೀರ್ಪು ನೀಡಲಿದ್ದಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಅಂದಹಾಗೇ ಕನ್ನಡ ಕಹಳೆ ಮೊಳಗಿಸಿದ್ದಂತ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಸೇರಿದಂತೆ 32 ಮಂದಿಯನ್ನು ಬಂಧಿಸಲಾಗಿತ್ತು. ವಾಣಿಜ್ಯ ಮಳಿಗೆಗಳ ನಾಮಫಲಕ ಒಡೆದು ಹಾಕಿದಂತ ಅವರ ವಿರುದ್ಧ ಕೇಸ್ ದಾಖಲಿಸಿ ಜೈಲಿಗಟ್ಟಲಾಗಿತ್ತು. ಸದ್ಯ ಸೆಂಟ್ರಲ್ ಜೈಲಿನಲ್ಲಿ ಕರವೇ ಅಧ್ಯಕ್ಷ…
ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅಂಗಡಿ/ ಉದ್ದಿಮೆ/ಮಳಿಗೆಗಳು ಮತ್ತು ಸಂಘ-ಸಂಸ್ಥೆಗಳು ಅಥವಾ ಇತರೆ ಯಾವುದೇ ರೀತಿಯ ಪ್ರದರ್ಶನ ಫಲಕಗಳು, ಜಾಹೀರಾತು ಫಲಕಗಳು ಕನಿಷ್ಠ ಶೇ.60 ರಷ್ಟು ಕಡ್ಡಾಯವಾಗಿ ಕರ್ನಾಟಕದ ಆಡಳಿತ ಭಾಷೆಯಾದ ಕನ್ನಡದಲ್ಲಿ ಇರುವಂತೆ ನಾಮಫಲಕಗಳನ್ನು ಅಳವಡಿಸಿಕೊಳ್ಳುವಂತೆ ಪಾಲಿಕೆ ಆಯುಕ್ತರು ಸೂಚಿಸಿರುತ್ತಾರೆ. ಯಾವುದೇ ದ್ವಿಭಾಷಾ ಅಥವಾ ಬಹುಭಾಷಾ ಫಲಕಗಳು ಇದ್ದಲ್ಲಿ ಗರಿಷ್ಠ ಪ್ರಮಾಣ ಶೇ. 60 ರಷ್ಟು ಕನ್ನಡದಲ್ಲಿಯೇ ಅಳವಡಿಸಿಕೊಳ್ಳಲು ಎಲ್ಲಾ ಅಂಗಡಿ ಮಾಲೀಕರುಗಳು ಕೂಡಲೇ ಕ್ರಮ ಕೈಗೊಳ್ಳುವುದು. ಕನ್ನಡ ಫಲಕಗಳನ್ನು ಪ್ರದರ್ಶಿಸಲು 15 ದಿನಗಳಲ್ಲಿ ಕ್ರಮವಹಿಸದೇ ಇದ್ದಲ್ಲಿ ಪಾಲಿಕೆಯ ಆರೋಗ್ಯ ವಿಭಾಗದಿಂದ ಜಂಟಿ ಸರ್ವೆಗಳನ್ನು ನಡೆಸಿ ಪ್ರತ್ಯೇಕವಾಗಿ ನಿಯಮಾನುಸಾರ ಅಂಗಡಿ/ ಉದ್ದಿಮೆ/ಮಳಿಗೆಗಳು ಮತ್ತು ಸಂಘ-ಸಂಸ್ಥೆಗಳು ಅಥವಾ ಇತರೆ ಯಾವುದೇ ರೀತಿಯ ಪ್ರದರ್ಶನ ಫಲಕಗಳು, ಜಾಹೀರಾತು ಫಲಕಗಳನ್ನು ಅಳವಡಿಸದೇ ಇರುವಂತಹ ಅಂಗಡಿಯ ಮಾಲೀಕರುಗಳಿಗೆ ಅಥವಾ ಸಂಬಂಧಪಟ್ಟಂತ ನಿಯಮ ಉಲ್ಲಂಘನೆ ಮಾಡುವವರಿಗೆ ಉದ್ದಿಮೆ ಪರವಾನಿಗೆಯನ್ನು ರದ್ದುಪಡಿಸುವ ಮತ್ತು ಕರ್ನಾಟಕ ಕಾರ್ಪೋರೇಷನ್ ಕಾಯ್ದೆ 1976ರ ಸಂಬಂಧಪಟ್ಟ ವಿಧಿಗಳ ಅನ್ವಯದಂತೆ ಹಾಗೂ…
ಧಾರವಾಡ: ಶಾಲೆಗೆ ಸಾರಿಗೆ ಬಸ್ಸಿನಲ್ಲಿ ತೆರಳುತ್ತಿದ್ದಂತ ಆ ಬಾಲಕಿ, ಅಚಾನಕ್ಕಾಗಿ ಬಸ್ಸಿನಲ್ಲಿ ಬಸ್ ಕಂಡಕ್ಟರ್ ದುಡ್ಡು ಎಣಿಸುತ್ತಿದ್ದಾಗ ಆತನ ಕೈ ಟಚ್ ಮಾಡಿದ್ದಳು. ಆಗ ಅವರ ಕೈಯಲ್ಲಿದ್ದಂತ ದುಡ್ಡು ಕೆಳಗೆ ಬಿದ್ದಿತ್ತು. ಇಷ್ಟಕ್ಕೇ ಸಿಟ್ಟಾದಂತ ಸರ್ಕಾರಿ ಬಸ್ ಕಂಡಕ್ಟರ್ ಶಾಲಾ ಬಾಲಕಿಯ ಕಪಾಳಕ್ಕೆ ಹೊಡೆದಿರೋ ಘಟನೆ ಧಾರವಾಡದ ಕೆಲಗೇರಿ ಬಡಾವಣೆಯಲ್ಲಿ ನಡೆದಿದೆ. ಧಾರವಾಡದಿಂದ ಮುಗಡ ಗ್ರಾಮಕ್ಕೆ ಶಾಲಾ ಬಾಲಕಿ ಪ್ರಕೃತಿ ಸರ್ಕಾರಿ ಬಸ್ಸಿನಲ್ಲಿ ತೆರಳುತ್ತಿದ್ದಳು. ಬಸ್ ರಷ್ ಆಗಿದ್ದರಿಂದಾಗಿ ಹೇಗೋ ಸಾವರಿಸಿಕೊಂಡು ನಿಂತಿದ್ದಂತ ಆಕೆ ಕಂಡಕ್ಟರ್ ದುಡ್ಡು ಏಣಿಸೋದನ್ನ ಗಮನಿಸದೇ, ಅಚಾನಕ್ಕಾಗಿ ಬಸ್ ಎತ್ತಾಕಿದಾಗ ಟಚ್ ಮಾಡಿದ್ದಳು. ಆಗ ಕಂಡಕ್ಟರ್ ಕೈಯಲ್ಲಿದ್ದಂತ ಹಣ ಕೆಳಗೆ ಬಿದ್ದಿತ್ತು. ಇಷ್ಟಕ್ಕೇ ಸಿಟ್ಟಾದಂತ ಸಾರಿಗೆ ಬಸ್ ಕಂಡಕ್ಟರ್ ಗೌರೀಶ್ ಎಂಬಾತ ಶಾಲಾ ಬಾಲಕಿ ಪ್ರಕೃತಿಯ ಕಪಾಳಕ್ಕೆ ಹೊಡೆದಿದ್ದನು. ಕಂಡಕ್ಟರ್ ಕಪಾಳಕ್ಕೆ ಹೊಡೆದಿದ್ದರಿಂದ ಬಿಕ್ಕಿಬಿಕ್ಕಿ ಅತ್ತಿದ್ದಾಳೆ. ಕಪಾಳ ಮೋಕ್ಷದಿಂದಾಗಿ ಶಾಲಾ ಬಾಲಕಿ ಪ್ರಕೃತಿ ಕೆನ್ನೆ ಊತ ಬಂದು, ಕೆಂಪಾಗಿತ್ತು. ಮನೆಗೆ ತೆರಳಿದಂತ ಪ್ರಕೃತಿ, ಬಸ್ಸಿನಲ್ಲಿ ನಡೆದಂತ ಘಟನೆಯನ್ನು…
ಬೆಂಗಳೂರು: ಕೇಂದ್ರ ಸರ್ಕಾರದಿಂದ ಹಿಟ್ ಅಂಡ್ ರನ್ ಕಾಯ್ದೆಯ ವಿರುದ್ಧ ಉತ್ತರ ಭಾರತದಲ್ಲಿ ಲಾರಿ ಮಾಲೀಕರು ರೊಚ್ಚಿಗೆದ್ದಿದ್ದರು. ಈ ಬೆನ್ನಲ್ಲೇ ಕರ್ನಾಟಕದಲ್ಲೂ ಲಾರಿ ಮಾಲೀಕರು ಜನವರಿ.17ರಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈ ಕುರಿತಂತೆ ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದಂತ ಲಾರಿ ಅಸೋಸಿಯೇಷನ್ ಗೌರವಾಧ್ಯಕ್ಷ ಚನ್ನಾರೆಡ್ಡಿ ಅವರು, ಕೇಂದ್ರ ಸರ್ಕಾರದಿಂದ ಹಿಟ್ ಅಂಡ್ ರನ್ ಕಾಯ್ದೆಯನ್ನು ಪರಿಷ್ಕರಣೆ ಮಾಡಲಾಗುತ್ತಿದೆ. ಲಾರಿ ಮಾಲೀಕರನ್ನು ಜೈಲಿಗಟ್ಟೋ ಕೆಲಸ ಮಾಡುತ್ತಿದೆ ಎಂಬುದಾಗಿ ಕಿಡಿಕಾರಿದರು. ಹಿಟ್ ಅಂಡ್ ರನ್ ಕೇಸ್ ಗೆ ಜೈಲು ಶಿಕ್ಷೆಯ ಅವಧಿಯನ್ನು ಹೆಚ್ಚಳ ಮಾಡಲಾಗುತ್ತಿದೆ. ದಂಡದ ಮೊತ್ತವನ್ನು ಭಾರೀ ಹೆಚ್ಚಳ ಮಾಡಲಾಗುತ್ತಿದೆ. ಇಂತಹ ಕಾಯ್ದೆಯನ್ನು ವಿರೋಧಿಸಿ ಕರ್ನಾಟಕದಲ್ಲಿ ಲಾರಿ ಮಾಲೀಕರಿಂದ ಜನವರಿ.17ರಿಂದ ಅನಿರ್ಧಿಷ್ಟಾವಧಿ ಮುಷ್ಕರವನ್ನು ನಡೆಸೋದಾಗಿ ತಿಳಿಸಿದರು. ಅಂದಹಾಗೇ ಕಳೆದ ವಾರ ಉತ್ತರ ಭಾರತದ ಹಲವೆಡೆ ಲಾರಿ ಮಾಲೀಕರು ಕೇಂದ್ರ ಸರ್ಕಾರದ ಕಾಯ್ದೆಯ ವಿರುದ್ಧ ಸಿಡಿದೆದ್ದಿದ್ದರು. ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ, ಟೈಯರ್ ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದರು. ಈ…
ನವದೆಹಲಿ: ಜ.14 ರಿಂದ ಪ್ರಾರಂಭವಾಗಲಿರುವ ರಾಹುಲ್ ಗಾಂಧಿ ಅವರ ಮುಂಬರುವ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಲಾಂಛನ, ಟೀಸರ್, ಟ್ಯಾಗ್ ಲೈನ್ ಅನ್ನು ಕಾಂಗ್ರೆಸ್ ಉನ್ನತ ನಾಯಕರು ಶನಿವಾರ ಅನಾವರಣಗೊಳಿಸಿದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಿರಿಯ ನಾಯಕರಾದ ಜೈರಾಮ್ ರಮೇಶ್ ಮತ್ತು ಕೆ.ಸಿ.ವೇಣುಗೋಪಾಲ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಲಾಂಛನ, ಟೀಸರ್, ಟ್ಯಾಗ್ ಲೈನ್ ಅನ್ನು ಅನಾವರಣಗೊಳಿಸಿದರು. 6,700 ಕಿಲೋಮೀಟರ್ ಉದ್ದದ ಪಾದಯಾತ್ರೆ ಮಣಿಪುರದ ಇಂಫಾಲ್ನಿಂದ ಪ್ರಾರಂಭವಾಗುತ್ತದೆ ಮತ್ತು 15 ರಾಜ್ಯಗಳ ಮೂಲಕ ಹಾದು ಮುಂಬೈನಲ್ಲಿ ಕೊನೆಗೊಳ್ಳುತ್ತದೆ. ಈ ಯಾತ್ರೆಯು ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಅಸ್ಸಾಂ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾ, ಛತ್ತೀಸ್ಗಢ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರದ ಮೂಲಕ ಹಾದುಹೋಗಲಿದೆ. ಈ ಹಿಂದೆ ‘ಭಾರತ್ ನ್ಯಾಯ್ ಯಾತ್ರೆ’ ಎಂದು ಹೆಸರಿಸಲಾಗಿದ್ದ ಈ ಉಪಕ್ರಮವನ್ನು ‘ಭಾರತ್ ಜೋಡೋ ನ್ಯಾಯ್ ಯಾತ್ರಾ’ ಎಂದು ಮರುನಾಮಕರಣ ಮಾಡಲಾಯಿತು. ಇದಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೈರಾಮ್ ರಮೇಶ್, ಪ್ರತಿಪಕ್ಷಗಳ ಐಎನ್ಡಿಎಎ ಬಣದ…
ಬೆಂಗಳೂರು: ಮುಖ್ಯಮಂತ್ರಿಗಳೇ ತಾವು ಬಿಡುಗಡೆ ಮಾಡಿರುವ 105 ಕೋಟಿ ಎಷ್ಟು ಲಕ್ಷ ಜನ ರೈತರಿಗೆ ತಲುಪಲಿದೆ. ಅರೆಕಾಸಿನ ಮಜ್ಜಿಗೆಗೂ ಸಾಲುವುದಿಲ್ಲ. ಅಗಾಧ ಪ್ರಮಾಣದ ಬರ ಮತ್ತು ತಾವು ಬಿಡುಗಡೆ ಮಾಡಿರುವ ಹಣವನ್ನು ನೋಡಿದರೆ, ರೈತರಿಗೆ ಚಿಲ್ಲರೆ ಕಾಸಿನ ಭಿಕ್ಷೆ ಕೊಟ್ಟಂತೆ ಕಾಣುತ್ತದೆ ಎಂಬುದಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ಈ ಕುರಿತಂತೆ ಇಂದು ಎಕ್ಸ್ ಮಾಡಿರುವಂತ ಅವರು, ಎನ್ ಡಿ ಆರ್ ಎಫ್ ಮಾರ್ಗಸೂಚಿ ಪ್ರಕಾರ ಕೇಂದ್ರ ಸರ್ಕಾರ ಬಿಡುಗಡೆ ಮಾಡುವ ಹಣದ ಬಗ್ಗೆ ನಾವೂ ಕೂಡ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಆದರೆ, ನಿಮ್ಮನ್ನು ಆಯ್ಕೆ ಮಾಡಿ ಅಧಿಕಾರದ ಗದ್ದುಗೆಗೆ ಕುಂದರಿಸಿರುವ ರೈತಾಪಿ ವರ್ಗವನ್ನು ರಕ್ಷಿಸುವಂತದ್ದು ನಿಮ್ಮ ಕರ್ತವ್ಯ ನೀವು ಕೂಡಲೇ ಸಂಪೂರ್ಣವಾಗಿರುವ ಹಣವನ್ನು ಬಿಡಿಗಡೆ ಮಾಡಬೇಕೆಂದು ಆಗ್ರಹ ಮಾಡಿದ್ದಾರೆ. ಈಗಾಗಲೇ ಸಾಕಷ್ಟು ಕಾಲಹರಣವನ್ನು ಮಾಡಿರುತ್ತೀರಿ, ರಾಜ್ಯದ ಆರ್ಥಿಕ ಸ್ಥಿತಿ ಉತ್ತಮ ಇದೆ ಎಂದು ಬೆನ್ನು ತಟ್ಟಿಕೊಳ್ಳುತ್ತಿರುವ ನಿಮ್ಮ ಸರ್ಕಾರ ಯಾಕೆ ರೈತರ ಪರಿಹಾರವನ್ನು ಪೂರ್ಣ ಬಿಡುಗಡೆ ಮಾಡುತ್ತಿಲ್ಲ.…