Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ರಾಜ್ಯದ ರೈತರಿಗೆ ಕಾಂಗ್ರೆಸ್ ಸರ್ಕಾರದಿಂದಲೇ ಕೇಂದ್ರ ಸರ್ಕಾರದಿಂದ ಬರ ಪರಿಹಾರ ಬಿಡುಗಡೆಗೂ ಮುನ್ನವೇ 2,000 ಬರ ಪರಿಹಾರವನ್ನು ನೀಡಲಾಗುತ್ತಿದೆ. ಈ ಹಣ ಪಡೆಯೋದಕ್ಕೆ ರೈತರು ಬಹುಮುಖ್ಯವಾಗಿ ಕೆಲಸವೊಂದನ್ನು ಮಾಡಬೇಕಿದೆ. ಒಂದು ವೇಳೆ ಆ ಕೆಲಸ ಮಾಡದೇ ಇದ್ರೆ ನಿಮ್ಮ ಖಾತೆಗೆ ಬರ ಪರಿಹಾರದ ಹಣ ಜಮಾ ಆಗೋದಿಲ್ಲ. ಈ ಕುರಿತು ಮಾಹಿತಿ ಹಂಚಿಕೊಂಡಿರುವಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ರಾಜ್ಯದ ರೈತರಿಗೆ ಬರ ಪರಿಹಾರ ನೀಡುವ ಪ್ರಕ್ರಿಯೆ ಪ್ರಾರಂಭವಾಗಿದ್ದು ಬೆಳೆ ನಷ್ಟಕ್ಕೆ ತಾತ್ಕಾಲಿಕ ಪರಿಹಾರವಾಗಿ ರಾಜ್ಯ ಸರ್ಕಾರದಿಂದ 2 ಸಾವಿರ ರೂ.ಗಳನ್ನು ಒದಗಿಸಲಾಗಿದೆ. ಆಧಾರ್ ಲಿಂಕ್ ಮಾಡಿದ ನಂತರ ಪರಿಹಾರದ ಹಣ ರೈತರಿಗೆ ತಲುಪಲಿದೆ. ಆಧಾರ್ ಲಿಂಕ್ ಆಗದ ರೈತರು ತಕ್ಷಣ ಲಿಂಕ್ ಮಾಡಿಸಬೇಕು ಎಂಬುದಾಗಿ ತಿಳಿಸಿದ್ದಾರೆ. ಮತ್ತೊಂದೆಡೆ ಕರ್ನಾಟಕ ಕಾಂಗ್ರೆಸ್ ಪತ್ರ ಬರೆದದ್ದಾಯ್ತು, ಪ್ರಧಾನಿ ಭೇಟಿಯಾಗಿ ಮನವಿ ಸಲ್ಲಿಸಿದ್ದಾಯ್ತು, ಕೇಂದ್ರ ಬರ ಅಧ್ಯಯನ ತಂಡ ಬಂದು ಹೋಗಿದ್ದಾಯ್ತು, 18 ಗಂಟೆ ಕೆಲಸ ಮಾಡುವ ಮೋದಿಯವರಿಗೆ ಕರ್ನಾಟಕದ ಬರ ಪರಿಸ್ಥಿತಿಯ ಬಗ್ಗೆ ಗಮನಿಸಿ…
ಮಧುರೈ ಕಲಾದೇವಿ ಅಮ್ಮನ ದೇವಸ್ಥಾನದ ಮಹತ್ವ ಮುಖ್ಯಾಂಶಗಳು ಏನು ಹೋಗುತ್ತದೆ ಮತ್ತು ಹಿಂತಿರುಗುವುದಿಲ್ಲ. ಇದು ನಮ್ಮ ಜೀವನ ಎಂದು ಹೇಳೋಣ. ಆದರೆ ಸಮಯ ಮತ್ತು ಸಮಯ ಕೂಡ ಹಿಂತಿರುಗುವುದಿಲ್ಲ. ಇಂದು ನಾವು ಆ ಕಾಲದ ಒಡೆಯ, 27 ನಕ್ಷತ್ರಗಳು ಮತ್ತು 12 ರಾಶಿಚಕ್ರದ ಚಿಹ್ನೆಗಳ ಒಡೆಯ ಮತ್ತು ಈ ಸಮಯದ ಒಡೆಯ ಕಾಳಿಕಾದೇವಿ ಅಮ್ಮನ ದೇವಾಲಯದ ಬಗ್ಗೆ ನೋಡಲಿದ್ದೇವೆ. ದೇವಿ ಕಲಾದೇವಿ ವಿಶೇಷ ಯಾವುದೇ ಸಮಯದಲ್ಲಿ ಮನುಷ್ಯರಿಗೆ ಏನಾಗುತ್ತದೆ ಎಂದು ಯಾರೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ವಿಜ್ಞಾನಿಗಳು ಸಹ ಸಮಯದ ರಹಸ್ಯವನ್ನು ಊಹಿಸಲು ಸಾಧ್ಯವಿಲ್ಲ ಮತ್ತು ಈ ಭೂಮಿಯ ಮೇಲೆ ಮುಂದೆ ಏನಾಗುತ್ತದೆ ಎಂಬ ಅಭಿಪ್ರಾಯವಿದೆ. ಆದರೆ ನಮ್ಮ ಕಾಲ ಮತ್ತು ನಮ್ಮ ಭವಿಷ್ಯದ ಕಾಲದ ಬಗ್ಗೆ ತಿಳಿದಿರುವ ದೇವತೆಯಿದ್ದರೆ ಅದು ಈ ಶ್ರೀ ಕಲಾದೇವಿ ದೇವಿಯೇ. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564 ನಂ 1ವಶೀಕರಣ ಸ್ಪೆಷಲಿಸ್ಟ್…
ಹುಬ್ಬಳ್ಳಿ: ಪೊಲೀಸರಿಂದ ರಾಮಜನ್ಮಭೂಮಿ ಹೋರಾಟಗಾರ ಶ್ರೀಕಾಂತ್ ಪೂಜಾರಿಯನ್ನು ಬಂಧಿಸಲಾಗಿದೆ. ಈ ಬಳಿಕ ಅವರ ವಿರುದ್ಧ ಹುಬ್ಬಳ್ಳಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಬರೋಬ್ಬರಿ 15 ಪ್ರಕರಣಗಳನ್ನು ದಾಖಲಿಸಿರೋದಾಗಿ ತಿಳಇದು ಬಂದಿದೆ. ರಾಮಜನ್ಮಭೂಮಿ ಹೋರಾಟಗಾರ ಶ್ರೀಕಾಂತ್ ಪೂಜಾರಿ ಬಂಧನ ಪ್ರಕರಣವನ್ನು ಬಿಜೆಪಿಯ ವಿವಿಧ ನಾಯಕರು ಖಂಡಿಸಿದ್ದಾರೆ. ಇದೊಂದು ರಾಜಕೀಯ ಪ್ರೇರಿತ ನಡೆಯೆಂಬುದಾಗಿ ಕಿಡಿಕಾರಿದ್ದಾರೆ. ಈ ಬೆನ್ನಲ್ಲೇ ಶ್ರೀಕಾಂತ್ ಪೂಜಾರಿ ವಿರುದ್ಧ ಹುಬ್ಬಳ್ಳಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ 15 ಕೇಸ್ ಗಳನ್ನು ದಾಖಲಿಸಲಾಗಿದೆ. ಹಳೇ ಹುಬ್ಬಳ್ಳಿ ಮತ್ತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ 11 ಕೇಸ್ ದಾಖಲಾಗಿದ್ದಾವೆ. ಇನ್ನೂ ಕಸಬಾ ಪೊಲೀಸ್ ಠಾಣೆಯಲ್ಲಿ ಶ್ರೀಕಾಂತ್ ಪೂಜಾರಿ ವಿರುದ್ಧ 3 ಕೇಸ್ ದಾಖಲಾಗಿದ್ರೇ, ಶಹರ ಪೊಲೀಸ್ ಠಾಣೆಯಲ್ಲಿ 1 ಕೇಸ್ ದಾಖಲಾಗಿದೆ. ಶ್ರೀಕಾಂತ್ ಪೂಜಾರಿ ವಿರುದ್ಧ ಹುಬ್ಬಳ್ಳಿಯ ವಿವಿಧ ಠಾಣೆಯಲ್ಲಿ ದಾಖಲಾಗಿರುವಂತ 15 ಕೇಸ್ ಗಳಲ್ಲಿ 11 ಪ್ರಕರಣಗಳು ಅಕ್ರಮ ಸಾರಾಯಿ ಮಾರಾಟ ಕುರಿತು ದಾಖಲಾಗಿರುವಂತ ಪ್ರಕರಣಗಳಾಗಿದ್ದಾವೆ. https://kannadanewsnow.com/kannada/japan-airlines-plane-on-fire-after-possible-crash-with-coast-guard-aircraft-400-on-board-evacuated/ https://kannadanewsnow.com/kannada/they-are-plotting-to-kill-me-vidyadharanathasri/
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು 18 ಗಂಟೆ ಈ ದೇಶಕ್ಕಾಗಿ ಕೆಲಸ ಮಾಡ್ತಿದ್ದಾರೆ ಎನ್ನುತ್ತಾರೆ. ಆದ್ರೇ ಕರ್ನಾಟಕ ಬರದಿಂದ ತತ್ತರಿಸುತ್ತಿದೆ. ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡೋದಕ್ಕೆ 18 ನಿಮಿಷ ಸಮಯ ಕೂಡ ಪ್ರಧಾನಿ ನರೇಂದ್ರ ಮೋದಿಯವರಿಗೆ ಇಲ್ಲ ಅಂತ ಕರ್ನಾಟಕ ಕಾಂಗ್ರೆಸ್ ವ್ಯಂಗ್ಯವಾಡಿದೆ. ಈ ಕುರಿತಂತೆ ಇಂದು ಎಕ್ಸ್ ಮಾಡಿದ್ದು, ಪತ್ರ ಬರೆದದ್ದಾಯ್ತು, ಪ್ರಧಾನಿ ಭೇಟಿಯಾಗಿ ಮನವಿ ಸಲ್ಲಿಸಿದ್ದಾಯ್ತು, ಕೇಂದ್ರ ಬರ ಅಧ್ಯಯನ ತಂಡ ಬಂದು ಹೋಗಿದ್ದಾಯ್ತು, 18 ಗಂಟೆ ಕೆಲಸ ಮಾಡುವ ಮೋದಿಯವರಿಗೆ ಕರ್ನಾಟಕದ ಬರ ಪರಿಸ್ಥಿತಿಯ ಬಗ್ಗೆ ಗಮನಿಸಿ ಪರಿಹಾರ ಒದಗಿಸಲು ಕನಿಷ್ಠ 18 ನಿಮಿಷ ಸಮಯವಿಲ್ಲವೇ ಬಿಜೆಪಿ ? ಎಂದು ಪ್ರಶ್ನಿಸಿದೆ. ಬಿಜೆಪಿಯ 25 ಸಂಸದರು ಬರ ಪರಿಹಾರ ಬಿಡುಗಡೆ ಮಾಡುವಂತೆ ಇದುವರೆಗೂ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವ ಕೆಲಸ ಮಾಡಿಲ್ಲವೇಕೆ? ಬಿಜೆಪಿಗರಿಗೆ ಕನ್ನಡಿಗರ ಮತ ಮಾತ್ರ ಬೇಕು, ಕನ್ನಡಿಗರ ಹಿತ ಬೇಡವಾಗಿದೆ ಅಂತ ಕಿಡಿಕಾರಿದೆ. https://twitter.com/INCKarnataka/status/1742123588507853260 https://kannadanewsnow.com/kannada/supreme-court-seeks-details-on-safety-measures-to-prevent-train-accidents/ https://kannadanewsnow.com/kannada/japan-airlines-plane-on-fire-after-possible-crash-with-coast-guard-aircraft-400-on-board-evacuated/
ಬೆಂಗಳೂರು: ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (ಕೆಎಸ್ ಡಿಎಲ್) 2023ರ ಡಿಸೆಂಬರ್ ತಿಂಗಳೊಂದರಲ್ಲೇ 123.42 ಕೋಟಿ ರೂ. ಮೊತ್ತದ ಮಾರ್ಜಕಗಳನ್ನು (ಡಿಟರ್ಜೆಂಟ್ಸ್) ಮಾರಾಟ ಮಾಡಿದ್ದು, ಕಳೆದ 40 ವರ್ಷಗಳ ವಹಿವಾಟಿನ ಇತಿಹಾಸದಲ್ಲಿ ಇದೊಂದು ದಾಖಲೆಯಾಗಿದೆ ಎಂದು ಸಂಸ್ಥೆ ಅಧ್ಯಕ್ಷರೂ ಆದ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ. ಈ ಬಗ್ಗೆ ಮಂಗಳವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, `ಕಳೆದ ತಿಂಗಳು ಕೆಎಸ್ಡಿಎಲ್ 852 ಟನ್ ಮಾರ್ಜಕಗಳನ್ನು ತಯಾರಿಸಿ, ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ. 2022ರ ಸೆಪ್ಟೆಂಬರ್ ತಿಂಗಳಲ್ಲಿ 775 ಟನ್ ಮಾರ್ಜಕಗಳನ್ನು ಉತ್ಪಾದಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಅದನ್ನೀಗ ಮುರಿದು, ವಹಿವಾಟಿನಲ್ಲೂ ವಿಕ್ರಮ ಸಾಧಿಸಲಾಗಿದೆ’ ಎಂದಿದ್ದಾರೆ. ಕೆಎಸ್ಡಿಎಲ್ ನಲ್ಲಿ ಇದುವರೆಗೆ ಮಾರ್ಜಕಗಳ ಉತ್ಪಾದನಾ ವಿಭಾಗದಲ್ಲಿ ಒಂದು ಪಾಳಿಯ ಕೆಲಸದ ವ್ಯವಸ್ಥೆ ಇತ್ತು. ಅದನ್ನೀಗ ಮೂರು ಪಾಳಿಗಳಿಗೆ ವಿಸ್ತರಿಸಲಾಗಿದೆ. ಜೊತೆಗೆ, ಈವರೆಗೆ ಸಂಸ್ಥೆಯಲ್ಲಿ ಮಾರ್ಜಕಗಳ ತಯಾರಿಕೆಗೆ ಕೇವಲ ಒಂದು ಯಂತ್ರ ಮಾತ್ರವಿತ್ತು.…
ಬೆಂಗಳೂರು: ನನ್ನನ್ನು ಸಾಯಿಸೋದಕ್ಕೆ ಹೊಂಚು ಹಾಕುತ್ತಿದ್ದಾರೆ. ನಮಗೂ ಅವರಿಗೂ ಯಾವುದೇ ದ್ವೇಷವಿಲ್ಲ. ಅಧಿಕಾರಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಅಂತ ಆದಿಚುಂಚನಗಿರಿ ಶಾಖಾ ಮಠದ ವಿದ್ಯಾಧರನಾಥಶ್ರೀ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನ ಉತ್ತರ ತಾಲೂಕಿನ ಹೆಸರುಘಟ್ಟದ ಬಳಿ ಇರುವಂತ ಆದಿಚುಂಚನಗಿರಿ ಶಾಖಾ ಮಠದ ವಿದ್ಯಾಧರನಾಥಶ್ರೀಯವರು ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಇಬ್ಬರು ಸ್ವಾಮೀಜಿಗಳು ನನ್ನನ್ನು ಸಾಯಿಸೋದಕ್ಕೆ ಹೊಂಚು ಹಾಕಿಸುತ್ತಿದ್ದಾರೆ. ಇದರ ಹಿಂದೆ ನಮಗೂ ಅವರಿಗೂ ಇರೋ ದ್ವೇಷ ಕಾರಣವಲ್ಲ. ಬದಲಾಗಿ ಅವರು ಅಧಿಕಾರ ಹಿಡಿಯೋದಕ್ಕಾಗಿ ಹೀಗೆಲ್ಲ ಮಾಡುತ್ತಿದ್ದಾರೆ ಎಂದರು. ನಾನು ಇದಕ್ಕೆಲ್ಲ ಹೆದರೋದಿಲ್ಲ. ಇಂತವರ ವಿರುದ್ಧ ಗಟ್ಟಿಯಾಗೇ ಹೋರಾಡುತ್ತೇನೆ. ಇನ್ನೂ ಈ ವಿಷಯ ಎಲ್ಲಿಗೆ ಹೋಗುತ್ತದೋ ಕಾದು ನೋಡಬೇಕು ಎಂಬುದಾಗಿ ತಿಳಿಸಿದರು. https://kannadanewsnow.com/kannada/supreme-court-seeks-details-on-safety-measures-to-prevent-train-accidents/ https://kannadanewsnow.com/kannada/japan-airlines-plane-on-fire-after-possible-crash-with-coast-guard-aircraft-400-on-board-evacuated/
ನವದೆಹಲಿ: ಜಾತಿ ಸಮೀಕ್ಷೆಯ ದತ್ತಾಂಶವನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಸುಪ್ರೀಂ ಕೋರ್ಟ್ ಬಿಹಾರ ಸರ್ಕಾರಕ್ಕೆ ಸೂಚನೆ ನೀಡಿದ್ದು, ಅದನ್ನು ಬಹಿರಂಗಪಡಿಸದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ ಮತ್ತು ಸಮೀಕ್ಷೆಯನ್ನು ಎತ್ತಿಹಿಡಿದ ಪಾಟ್ನಾ ಹೈಕೋರ್ಟ್ನ 2023 ರ ನಿರ್ಧಾರಕ್ಕೆ ಸವಾಲುಗಳಿಗೆ ಸಂಬಂಧಿಸಿದಂತೆ ಜನವರಿ 29 ಕ್ಕೆ ವಿಚಾರಣೆಯ ದಿನಾಂಕವನ್ನು ನಿಗದಿಪಡಿಸಿದೆ. ಜಾತಿ ಸಮೀಕ್ಷೆಯ ದತ್ತಾಂಶವನ್ನು ಸಾರ್ವಜನಿಕ ಡೊಮೇನ್ ನಲ್ಲಿ ಇಡುವಂತೆ ಸುಪ್ರೀಂ ಕೋರ್ಟ್ ಬಿಹಾರ ಸರ್ಕಾರಕ್ಕೆ ಸೂಚಿಸಿದೆ. ಬಿಹಾರ ಜಾತಿ ಸಮೀಕ್ಷೆಯಲ್ಲಿನ ದತ್ತಾಂಶಗಳು ಸಾರ್ವಜನಿಕರಿಗೆ ಲಭ್ಯವಾಗದಿರುವ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ, ಏಕೆಂದರೆ ಯಾರಾದರೂ ನಿರ್ದಿಷ್ಟ ತೀರ್ಮಾನವನ್ನು ತೆಗೆದುಕೊಳ್ಳಲು ಸಿದ್ಧರಿದ್ದರೆ ಅವರು ಆ ಡೇಟಾವನ್ನು ಹೊಂದಲು ಸಾಧ್ಯವಾಗುತ್ತದೆ. ಜಾತಿ ಆಧಾರಿತ ಸಮೀಕ್ಷೆಯನ್ನು ಕೈಗೊಳ್ಳುವ ಬಿಹಾರ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದ 2023 ರ ಆಗಸ್ಟ್ 2 ರ ಪಾಟ್ನಾ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜನವರಿ 29 ಕ್ಕೆ ಮುಂದೂಡಿದೆ. https://twitter.com/ANI/status/1742144399218446417 https://kannadanewsnow.com/kannada/japan-airlines-plane-on-fire-after-possible-crash-with-coast-guard-aircraft-400-on-board-evacuated/ https://kannadanewsnow.com/kannada/supreme-court-seeks-details-on-safety-measures-to-prevent-train-accidents/
ಇಸ್ರೇಲ್: ಇಸ್ರೇಲಿ ಗುಪ್ತಚರ ಸಂಸ್ಥೆ ಮೊಸಾದ್ ನ ಮಾಜಿ ಮುಖ್ಯಸ್ಥ ಝ್ವಿ ಝಮೀರ್ (98) ನಿಧನರಾಗಿದ್ದಾರೆ. 1968 ರಿಂದ 1974 ರವರೆಗೆ ಅವರ ನೇತೃತ್ವದ ಮೊಸ್ಸಾದ್ ಅವರ ಮರಣವನ್ನು ಘೋಷಿಸಿತು. ಇಸ್ರೇಲ್ನ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ, “ಇಸ್ರೇಲ್ನ ಭದ್ರತೆಗೆ ಅವರು ನೀಡಿದ ಕೊಡುಗೆಯನ್ನು ಮುಂಬರುವ ಅನೇಕ ವರ್ಷಗಳವರೆಗೆ ನೆನಪಿಸಿಕೊಳ್ಳಲಾಗುವುದು” ಎಂದು ಹೇಳಿದ್ದಾರೆ. ಝ್ವಿ ಝಮೀರ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು 1972ರ ಮ್ಯೂನಿಚ್ ಒಲಿಂಪಿಕ್ಸ್ನಲ್ಲಿ ಇಸ್ರೇಲಿ ಅಥ್ಲೀಟ್ಗಳ ಹತ್ಯಾಕಾಂಡಕ್ಕೆ ಕಾರಣರಾದ ಫೆಲೆಸ್ತೀನ್ ಕಮಾಂಡರ್ಗಳನ್ನು ಹತ್ಯೆ ಮಾಡುವ ಇಸ್ರೇಲ್ನ ಅಭಿಯಾನದ ಮೇಲ್ವಿಚಾರಣೆಯನ್ನು ಝ್ವಿ ಝಮೀರ್ ವಹಿಸಿದ್ದರು. 1973ರಲ್ಲಿ ಈಜಿಪ್ಟ್ ಮತ್ತು ಸಿರಿಯಾ ಇಸ್ರೇಲ್ ಮೇಲೆ ದಾಳಿ ನಡೆಸಲಿವೆ ಎಂಬ ಝ್ವಿ ಝಮೀರ್ ಅವರ ಎಚ್ಚರಿಕೆಯನ್ನು ಸರ್ಕಾರ ಹೆಚ್ಚಾಗಿ ನಿರ್ಲಕ್ಷಿಸಿದೆ ಎಂದು ಅವರು ಹೇಳಿದರು. ಅಕ್ಟೋಬರ್ 6, 1973 ರಂದು ಸಿರಿಯಾ ಮತ್ತು ಈಜಿಪ್ಟ್ ಇಸ್ರೇಲ್ ಮೇಲೆ ದಾಳಿ ಮಾಡಿದಾಗ ಝ್ವಿ ಝಮೀರ್ ಮೊಸ್ಸಾದ್ ಉಸ್ತುವಾರಿ ವಹಿಸಿದ್ದರು. ಕೈರೋ…
ಬೆಂಗಳೂರು : ರಾಜ್ಯದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ರೂಪಾಂತರ ಜೆ.ಎನ್- 1 ಸೋಂಕು ಕಾಣಿಸಿಕೊಂಡಿದ್ದರೂ ಜನತೆ ಅನಗತ್ಯವಾಗಿ ಆತಂಕಕ್ಕೇ ಒಳಪಡದೆ, ಕೆಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಸಲಹೆ ಮಾಡಿದ್ದಾರೆ. ಮಂಗಳವಾರ ಬೆಂಗಳೂರಿನ ವಿಕಾಸಸೌಧದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖಾ ವ್ಯಾಪ್ತಿಗೆ ಒಳಪಡುವ ವಿವಿಧ ಅಸ್ಪತ್ರೆಗಳ ಮುಖ್ಯಸ್ಥರು, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷರು, ಸದಸ್ಯರ ಜೊತೆ ನಡೆಸಿದ ಅವರು, ಪ್ರಸ್ತುತ ರಾಜ್ಯದಲ್ಲಿ ಕೋವಿಡ್ -19 ನಿಯಂತ್ರಣ ಹಾಗೂ ಪೂರ್ವ ಸಿದ್ದತೆಗಳ ಕುರಿತು ಮಾಹಿತಿ ಪಡೆದುಕೊಂಡರು. ರೂಪಾಂತರ ಜೆ.ಎನ್-1 ಸೋಂಕು ಕಾಣಿಸಿಕೊಂಡಿದ್ದರೂ ಇದು ಮನುಷ್ಯರ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ, ಹಾಗೂ ತಜ್ಞರೇ ಹೇಳಿದ್ದಾರೆ.ಆದರೂ ಇದರ ಬಗ್ಗೆ ಮೈ ಮರೆಯದೆ, ಕೆಲವು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುವ ಕುರಿತು ಜನಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವ ಡಾ. ಶರಣ್ ಪ್ರಕಾಶ್…
ಮೈಸೂರು: ಅಂದಕಾಸುರ ಸಂಹಾರ ವೇಳೆಯಲ್ಲಿ ನಂಜನಗೂಡು ಶ್ರೀಕಂಠೇಶ್ವರ ದೇವರ ಉತ್ಸವ ಮೂರ್ತಿಯ ಮೇಲೆ ನೀರೆರಚಲಾಗಿತ್ತು. ಇದರಿಂದ ಭಕ್ತರು, ಅರ್ಚಕರು ತೀವ್ರ ಖೇದವನ್ನು ವ್ಯಕ್ತಪಡಿಸಿದ್ದರು. ಈ ಘಟನೆಯನ್ನು ಖಂಡಿಸಿ, ಜನವರಿ.4ರಂದು ನಂಜನಗೂಡು ತಾಲೂಕು ಬಂದ್ ಗೆ ಕರೆ ನೀಡಲಾಗಿದೆ. ಮೈಸೂರು ಜಿಲ್ಲೆಯ ನಂಜನಗೂಡು ಅನ್ನು ಜನವರಿ.4ರಂದು ಬಂದ್ ಗೆ ಕರೆ ನೀಡಲಾಗಿದೆ. ಶ್ರೀಕಂಠೇಶ್ವರ ಭಕ್ತರಿಂದ ಜನವರಿ.4ರಂದು ಬಂದ್ ಗೆ ಕರೆ ನೀಡಲಾಗಿದೆ. ಅಂದಕಾಸುರ ಸಂಹಾರದ ವೇಳೆಯಲ್ಲಿ ನೀರೆರಚಿದ ಪ್ರಕರಣ ಖಂಡಿಸಿ, ಜನವರಿ.4ರಂದು ಬಂದ್ ನಡೆಸಲಾಗುತ್ತಿದೆ. ಈ ಮೂಲಕ ಶ್ರೀಕಂಠೇಶ್ವರ ಉತ್ಸವ ಮೂರ್ತಿಯ ಮೇಲೆ ನೀರು ಎರಚಿದಂತ ಘಟನೆಯನ್ನು ಖಂಡಿಸಲಾಗುತ್ತಿದೆ. https://kannadanewsnow.com/kannada/state-cabinet-meeting-scheduled-for-january-5/ https://kannadanewsnow.com/kannada/supreme-court-seeks-details-on-safety-measures-to-prevent-train-accidents/