Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ದೇಶಕ್ಕೆ ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ಪಕ್ಷವು ತಾನು ಮಾಡಿದ ತಪ್ಪಿಗೆ 49 ವರ್ಷಗಳಾದರೂ ಕ್ಷಮೆ ಕೇಳಿಲ್ಲ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಟೀಕಿಸಿದರು. ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ದೇಶಕ್ಕೆ ತುರ್ತು ಪರಿಸ್ಥಿತಿ ಹೇರುವ ಇಂಥ ಪರಿಸ್ಥಿತಿ ಯಾವತ್ತೂ ಬರಬಾರದು ಎಂದಿದ್ದರೆ, ಆ ಕರಾಳ ಅಧ್ಯಾಯದ ನೆನಪು ಮಾಡಿಕೊಳ್ಳುವ ಅವಶ್ಯಕತೆ ಇದೆ. ಕಾಂಗ್ರೆಸ್ಸಿಗೆ ತಾವು ಮಾಡಿದ್ದು ತಪ್ಪು ಎಂದು ಅನಿಸಿದರೆ, ಸಾರ್ವಜನಿಕ ಕ್ಷಮೆ ಯಾಚನೆ ಮಾಡಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್ ಪಕ್ಷದ ಡಿಎನ್‍ಎಯಲ್ಲೇ ವ್ಯಕ್ತಿಗತ ಸ್ವಾರ್ಥಕ್ಕಾಗಿ ಏನನ್ನು ಬೇಕಾದರೂ ಮಾಡುವ ಮನಸ್ಥಿತಿ ಇದೆ. ಈ ಮನಸ್ಥಿತಿ ಪ್ರಜಾಪ್ರಭುತ್ವಕ್ಕೂ ಅಪಾಯಕಾರಿ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷವು ಶ್ರೀಮತಿ ಇಂದಿರಾ ಗಾಂಧಿಯವರ ನೇತೃತ್ವದಲ್ಲಿ ತುರ್ತು ಪರಿಸ್ಥಿತಿ ಹೇರುವ ಮೂಲಕ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಕೆಲಸ ಮಾಡಿತ್ತು.…
ಶಿವಮೊಗ್ಗ: ಬಿಜೆಪಿ ಜಿಲ್ಲಾ ಯುವ ಮೋರ್ಚಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದಂತ ಅರುಣ್ ಕುಗ್ವೆ ಅವರನ್ನು ರಾತ್ರೋರಾತ್ರಿ ಶಿವಮೊಗ್ಗ ಪೊಲೀಸಲು ಬಂಧಿಸಿದ್ದಾರೆ. ಈ ಹಿಂದೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ತನಗೆ ಅರುಣ್ ಕುಗ್ವೆ ವಂಚಿಸಿದ್ದಾರೆ ಅಂತ ಮಹಿಳೆಯೊಬ್ಬರು ದೂರು ನೀಡಿದ್ದರು. ಆ ಬಳಿಕ ತಾವೇ ಬಗೆಹರಿಸಿಕೊಳ್ಳುವುದಾಗಿ ಪೊಲೀಸ್ ಠಾಣೆಗೆ ಮಹಿಳೆ ಲಿಖಿತ ಹೇಳಿಕೆ ನೀಡಿದ ಕಾರಣ, ಪ್ರಕರಣ ದಾಖಲಿಸಿರಲಿಲ್ಲ. ಕೆಲ ವರ್ಷಗಳ ನಂತ್ರ, ಬಿಜೆಪಿ ಮುಖಂಡ ಅರುಣ್ ಕುಗ್ವೆ ತಮ್ಮನ್ನು ಮದುವೆಯಾಗುವುದಾಗಿ ವಂಚಿಸಿದ್ದಾರೆ ಎಂಬುದಾಗಿ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಗೆ ಮಹಿಳೆಯೊಬ್ಬರು ದೂರು ನೀಡಿದ್ದರು. ಆ ಬಳಿಕ ರಾಜೀ ಸಂಧಾನ ಮಾಡಿಕೊಳ್ಳುವುದಾಗಿ ಹೇಳಿದ್ದರಿಂದ ಕಾರಣಾಂತರಗಳಿಂದ ದೂರು ದಾಖಲಾಗಿರಲಿಲ್ಲ. ಈಗ ಮಹಿಳೆಯು ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಗೆ ತೆರಳಿ, ಮದುವೆಯಾಗುವುದಾಗಿ ನಂಬಿಸಿ, ವಂಚಿಸಿದ್ದಾರೆ ಅರುಣ್ ಕುಗ್ವೆ ಅಂತ ದೂರು ನೀಡಿದ್ದಾರೆ. ಈ ದೂರಿನ ಹಿನ್ನಲೆಯಲ್ಲಿ ಶಿವಮೊಗ್ಗ ಮಹಿಳಾ ಠಾಣೆಯ ಪೊಲೀಸರು ಎಫ್ಐಆರ್ ದಾಖಲಿಸಿ, ರಾತ್ರೋ ರಾತ್ರಿ ಇನ್ಸ್ ಪೆಕ್ಟರ್ ಭರತ್ ಕುಮಾರ್ ಸಾಗರದಲ್ಲಿನ…
ನವದೆಹಲಿ: ನೀಟ್-ಯುಜಿ ಪರೀಕ್ಷೆಯಲ್ಲಿನ ಅಕ್ರಮಗಳ ಬಗ್ಗೆ ಕೇಂದ್ರವು ಸಿಬಿಐ ತನಿಖೆಗೆ ಆದೇಶಿಸಿದ ಒಂದು ದಿನದ ನಂತರ, ಕೇಂದ್ರ ಸಂಸ್ಥೆ ಈ ವಿಷಯದ ಬಗ್ಗೆ ಎಫ್ಐಆರ್ ದಾಖಲಿಸಿದೆ. ಕೇಂದ್ರ ಸರ್ಕಾರವು ನಿನ್ನೆ ಸಂಜೆಯಷ್ಟೇ ನೀಟ್ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಆದೇಶಿಸಿತ್ತು. ಈ ಬೆನ್ನಲ್ಲೇ ಸಿಬಿಐ ತನಿಖೆ ಚುರುಕುಗೊಳಿಸಿದ್ದು, ಪ್ರಕರಣ ಸಂಬಂಧ ಎಫ್ಐಆರ್ ದಾಖಲಿಸಿರುವುದಾಗಿ ತಿಳಿದು ಬಂದಿದೆ. ನೀಟ್-ಯುಜಿ ಪ್ರಕರಣದಲ್ಲಿ ಪ್ರತ್ಯೇಕ ಪ್ರಕರಣ ಶಿಕ್ಷಣ ಸಚಿವಾಲಯದ ದೂರಿನ ನಂತರ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸಿಬಿಐ ನಿಯಮಿತ ಪ್ರಕರಣವನ್ನು ದಾಖಲಿಸಿದೆ. ಐಪಿಸಿ ಸೆಕ್ಷನ್ 420 (ವಂಚನೆ) ಮತ್ತು 120 ಬಿ (ಪಿತೂರಿ) ಅಡಿಯಲ್ಲಿ ಎಫ್ಐಆರ್ ದಾಖಲಿಸುವ ಮೂಲಕ ಸಿಬಿಐ ತನಿಖೆಯನ್ನು ಪ್ರಾರಂಭಿಸಿತು. ಮೂಲಗಳ ಪ್ರಕಾರ, ಸಿಬಿಐ ಪ್ರತ್ಯೇಕ ಪ್ರಕರಣವನ್ನು ದಾಖಲಿಸಿದೆ. ಬಿಹಾರ ಮತ್ತು ಗುಜರಾತ್ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿಲ್ಲ. ಎರಡೂ ರಾಜ್ಯಗಳ ಪೊಲೀಸರು ಪ್ರಸ್ತುತ ತನಿಖೆ ನಡೆಸುತ್ತಿದ್ದಾರೆ ಮತ್ತು ತಮ್ಮದೇ ಮಟ್ಟದಲ್ಲಿ ಬಂಧನಗಳನ್ನು ಮಾಡುತ್ತಿದ್ದಾರೆ. ಸಿಬಿಐ…
ಹಾಸನ: ಅಸಹಜ ಲೈಂಗಿಕ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವಂತ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಪರವಾಗಿ, ಸಂತ್ರಸ್ತ ವ್ಯಕ್ತಿಯ ವಿರುದ್ಧ ಶಿವಕುಮಾರ್ ಎಂಬುವರು ದೂರು ನೀಡಿದ್ದರು. ಈ ದೂರಿನಡಿ ಆತನ ವಿರುದ್ಧ ಕೇಸ್ ಕೂಡ ದಾಖಲಾಗಿತ್ತು. ಆದ್ರೇ ಇದೀಗ ಹೀಗೆ ಸೂರಜ್ ರೇವಣ್ಣ ಪರವಾಗಿ ದೂರು ನೀಡಿದ್ದಂತ ವ್ಯಕ್ತಿಯೇ ನಾಪತ್ತೆಯಾಗಿರೋದಾಗಿ ತಿಳಿದು ಬಂದಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರು ಟೌನ್ ಪೊಲೀಸ್ ಠಾಣೆಯಲ್ಲಿ ಸೂರಜ್ ರೇವಣ್ಣ ಅವರಿಗೆ ಬ್ಲಾಕ್ ಮಾಡಿದ್ದಾರೆ. ಕೋಟಿ ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಮೂಲಕ ಸಂತ್ರಸ್ತ ವ್ಯಕ್ತಿಯೊಬ್ಬರು ಬೆದರಿಕೆ ಹಾಕಿರೋದಾಗಿ ಶಿವಕುಮಾರ್ ಎಂಬುವರು ದೂರು ನೀಡಿದ್ದರು. ಈ ದೂರು ಪಡೆದಿದ್ದಂತ ಪೊಲೀಸರು ಕೇಸ್ ಸಹ ಬುಕ್ ಮಾಡಿದ್ದರು. ಆದ್ರೇ ಹತ್ತಾರು ಅನುಮಾನಗಳಿಗೆ ಎಡೆಮಾಡಿ ಕೊಟ್ಟಂತೆ, ಈಗ ಸೂರಜ್ ರೇವಣ್ಣ ಪರ ದೂರು ನೀಡಿದ್ದಂತ ಶಿವಕುಮಾರ್ ಅವರೇ ನಾಪತ್ತೆಯಾಗಿರೋದಾಗಿ ತಿಳಿದು ಬಂದಿದೆ. ದೂರು ನೀಡಿದ್ದಂತ ಶಿವಕುಮಾರ್ ನಾಪತ್ತೆಯಾಗಿದ್ದು, ಸಂಪರ್ಕಕ್ಕೇ ಪೊಲೀಸರಿಗೆ ಸಾಧ್ಯವಾಗುತ್ತಿಲ್ಲವಂತೆ. ಅವರು ಮೊಬೈಲ್ ಸ್ವಿಚ್ ಆಪ್ ಮಾಡಿಕೊಂಡು…
ನವದೆಹಲಿ: ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಭಾನುವಾರ ತಮ್ಮ ಸೋದರಳಿಯ ಆಕಾಶ್ ಆನಂದ್ ಅವರನ್ನು ಪಕ್ಷದ ರಾಷ್ಟ್ರೀಯ ಸಂಯೋಜಕ ಹುದ್ದೆಗೆ ಮರುಸ್ಥಾಪಿಸಿದ್ದಾರೆ ಮತ್ತು ಅವರನ್ನು ತಮ್ಮ ರಾಜಕೀಯ ಉತ್ತರಾಧಿಕಾರಿ ಎಂದು ಘೋಷಿಸಿದ್ದಾರೆ. ಲಕ್ನೋದಲ್ಲಿ ನಡೆದ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ. ಈ ವರ್ಷದ ಮೇ ತಿಂಗಳಲ್ಲಿ, ಆಕಾಶ್ ಆನಂದ್ ಅವರನ್ನು ರಾಷ್ಟ್ರೀಯ ಸಂಯೋಜಕ ಹುದ್ದೆಯಿಂದ ಮತ್ತು ಅವರ ಉತ್ತರಾಧಿಕಾರಿಯಾಗಿ ತೆಗೆದುಹಾಕಲಾಯಿತು. ತಮ್ಮ ನಿರ್ಧಾರವನ್ನು ಪ್ರಕಟಿಸಿದ ಮಾಯಾವತಿ, ಅವರು ರಾಜಕೀಯ ಪ್ರಬುದ್ಧರಾಗುವವರೆಗೆ ಅವರನ್ನು ಹುದ್ದೆಗಳಿಂದ ತೆಗೆದುಹಾಕಲಾಗುತ್ತಿದೆ ಎಂದು ಎಕ್ಸ್ ನಲ್ಲಿ ಬರೆದಿದ್ದರು. ಮೇ ತಿಂಗಳಲ್ಲಿ ಎಕ್ಸ್ ನಲ್ಲಿ ಸರಣಿ ಸಾಮಾಜಿಕ ಮಾಧ್ಯಮ ಪೋಸ್ಟ್ ಗಳಲ್ಲಿ, ಮಾಯಾವತಿ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶಗಳಿಗೆ ಪಕ್ಷದ ಬದ್ಧತೆಯನ್ನು ಮತ್ತು “ಸಾಮಾಜಿಕ ಬದಲಾವಣೆಗಾಗಿ ನಡೆಯುತ್ತಿರುವ ಆಂದೋಲನ” ವನ್ನು ಪುನರುಚ್ಚರಿಸಿದ್ದರು. ಆಕಾಶ್ ಆನಂದ್ ಅವರನ್ನು ಬಿಎಸ್ಪಿಯ ರಾಷ್ಟ್ರೀಯ ಸಂಯೋಜಕರಾಗಿ ನೇಮಿಸಲಾಯಿತು. ಈ ಆಂದೋಲನಕ್ಕೆ ವೇಗವನ್ನು ಒದಗಿಸಿದ್ದಕ್ಕಾಗಿ ಅವರನ್ನು ಅವರ ಉತ್ತರಾಧಿಕಾರಿ ಎಂದು ಘೋಷಿಸಲಾಯಿತು ಎಂದು ಅವರು ಹೇಳಿದರು.…
ರಾಮನಗರ: ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಗೆದ್ದು, ಕೇಂದ್ರ ಸಚಿವರಾಗಿದ್ದಾರೆ. ಈ ಬೆನ್ನಲ್ಲೇ ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಗರಿಗೆದರಿದೆ. ಆ ಬಗ್ಗೆ ಹೆಚ್.ಡಿ ಕುಮಾರಸ್ವಾಮಿ ಏನು ಹೇಳಿದ್ರು ಅಂತ ಮುಂದೆ ಓದಿ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ನಮ್ಮಲ್ಲಿ ಯಾವುದೇ ಒಡಕಿಲ್ಲ. ಗೊಂದಲವಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ. ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಗೆ ಸಿ.ಪಿ ಯೋಗೇಶ್ವರ್ ನಿಲ್ಲ ಬಹುದು, ಇಲ್ಲವೇ ಜೆಡಿಎಸ್ ಕಾರ್ಯಕರ್ತರೇ ನಿಲ್ಲಬಹುದು. ಈ ವಿಚಾರದಲ್ಲಿ ಯಾವುದೇ ಗೊಂದಲ, ಒಡಕಿಲ್ಲ ಅಂತ ತಿಳಿಸಿದ್ದಾರೆ. ನನಗೆ ಚನ್ನಪಟ್ಟಣ ಕ್ಷೇತ್ರವನ್ನು ಬಿಟ್ಟು ಕೊಡೋದಕ್ಕೆ ಮನಸ್ಸಿಲ್ಲ. ನನಗೆ ಮೂರು ಬಾರಿ ಶಸ್ತ್ರ ಚಿಕಿತ್ಸೆ ಆಗಿದೆ. ಈ ನಡುವೆಯೂ ಅಭಿವೃದ್ಧಿ ಕಾರ್ಯ, ಸಾಮಾಜಿಕ ಸೇವೆಯಲ್ಲಿ ತೊಡಗಿದ್ದೇನೆ ಎಂದರು. ನಾನು ಬದುಕಿರೋವರೆಗೂ ಚನ್ನಪಟ್ಟಣ ಕ್ಷೇತ್ರವನ್ನು ಮರೆಯುವುದಿಲ್ಲ. ನಾನು ಕೇಂದ್ರ ಮಂತ್ರಿಯಾದ ಬಳಿಕ ಕ್ಷೇತ್ರದ ಜನತೆಯನ್ನು ಮರೆಯುವುದಿಲ್ಲ. ಕ್ಷೇತ್ರದ ಜನತೆಯ ಕೆಲಸಗಳನ್ನು…
ಬೆಂಗಳೂರು: ಕರ್ನಾಟಕ ದ್ವಿತಿಯ ಪಿಯುಸಿ ಪರೀಕ್ಷೆ-2ರ ಫಲಿತಾಂಶವನ್ನು ಇಂದು ಪ್ರಕಟಿಸಲಾಗಿದೆ. ಈ ಬೆನ್ನಲ್ಲೇ ದ್ವಿತೀಯ ಪಿಯುಸಿ ಪರೀಕ್ಷೆ-3ರ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದ್ವಿತೀಯ ಪಿಯು ಪರೀಕ್ಷೆ-3 ದಿನಾಂಕ 24-06-2024ರಿಂದ ಆರಂಭಗೊಂಡು, 05-07-2024ರವರೆಗೆ ನಡೆಯಲಿದೆ ಎಂದು ತಿಳಿಸಿದೆ. ದ್ವಿತೀಯ ಪಿಯುಸಿ ಪರೀಕ್ಷೆ-3ಗೆ ಕಲಾ ವಿಭಾಗದಲ್ಲಿ 19,113 ವಿದ್ಯಾರ್ಥಿಗಳು, 11,698 ವಿದ್ಯಾರ್ಥಿನಿಯರು ಸೇರಿದಂತೆ 30,811 ಮಂದಿ ನೋಂದಾಯಿಸಿಕೊಂಡಿದ್ದಾರೆ ಅಂತ ಹೇಳಿದೆ. ವಿಜ್ಞಾನ ವಿಭಾಗದಲ್ಲಿ 19,783 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 25,401 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 44,358 ಹುಡುಗರು, 31,637 ಹುಡುಗಿಯರು ಸೇರಿ 75,995 ವಿದ್ಯಾರ್ಥಿಗಳು ಪರೀಕ್ಷೆ-3ಕ್ಕೆ ನೋಂದಾಯಿಸಿಕೊಂಡಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆ-3 ರಾಜ್ಯದ 248 ಕೇಂದ್ರಗಳಲ್ಲಿ ನಡೆಯಲಿದೆ. ಈ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕಣ್ಗಾವಲು ಇರಿಸಲಾಗಿದೆ. ಅಲ್ಲದೇ ಜಿಲ್ಲಾ ಮತ್ತು ತಾಲ್ಲೂಕು ಹಂತದಲ್ಲಿ ವಿಚಕ್ಷಣದಳಗಳನ್ನು ರಚಿಸಲಾಗಿದೆ ಅಂತ ತಿಳಿಸಿದೆ. ಹೀಗಿದೆ ದ್ವಿತೀಯ ಪಿಯುಸಿ ಪರೀಕ್ಷೆ-3ರ ವೇಳಾಪಟ್ಟಿ ದಿನಾಂಕ 24-06-2024ರ ಸೋಮವಾರ-…
ಬೆಂಗಳೂರು: ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾದ ನಂತ್ರ ಪೊಲೀಸರು ಬಂಧಿಸಿದ್ದಾರೆ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಐಡಿ ತನಿಖೆಗೂ ವಹಿಸಿ ಆದೇಶಿಸಿದೆ. ಈ ಪ್ರಕರಣದ ಬಗ್ಗೆ ಹೆಚ್.ಡಿ ರೇವಣ್ಣ ಏನು ಹೇಳಿದ್ರು ಅಂತ ಮುಂದೆ ಓದಿ. ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಹೆಚ್.ಡಿ ರೇವಣ್ಣ ಅವರು ನಮ್ಮ ಕುಟುಂಬದ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಯುತ್ತಿದೆ. ಸೂರಜ್ ರೇವಣ್ಣ ಅವರನ್ನು ಬಂಧಿಸಿದ ನಂತ್ರ ಹಾಸನದಲ್ಲಿ ಮೆಡಿಕಲ್ ಟೆಸ್ಟ್ ಮಾಡದೇ ಯಾಕೆ ಬೆಂಗಳೂರಿಗೆ ಕರೆತಂದ್ರ.? ಇದೆಲ್ಲ ನಮ್ಮನ್ನು ಹೆದರಿಸೋಕೆ ಮಾಡ್ತಿದ್ದಾರೆ ಅಂತ ಕಿಡಿಕಾರಿದರು. ಸೂರಜ್ ರೇವಣ್ಣ ವಿರುದ್ಧ ಪ್ರಕರಣ ದಾಖಲಾಗೋ ಮೊದಲೇ ಅವರೇ ಸಂತ್ರಸ್ತ ವ್ಯಕ್ತಿಯ ವಿರುದ್ಧ ದೂರು ಕೊಟ್ಟಿದ್ದಾರೆ. ತಪ್ಪು ಮಾಡಿದ್ರೆ ಸೂರಜ್ ರೇವಣ್ಣ ಯಾಕೆ ದೂರು ಕೊಡೋಕೆ ಹೋಗ್ತಾ ಇದ್ದರು? ನಾನು ಈಗ ಏನೂ ಹೇಳಲ್ಲ. ಟೈಂ ಬಂದಾಗ ಹೇಳ್ತೀನಿ. ನಾವೇನು ತಪ್ಪು ಮಾಡಿ ಓಡಿ ಹೋಗಿಲ್ಲ ಎಂಬುದಾಗಿ ಗುಡುಗಿದರು. https://kannadanewsnow.com/kannada/first-file-signed-by-union-minister-hdk-disrupted-devadari-mining-put-on-hold/ https://kannadanewsnow.com/kannada/breaking-police-seize-suraj-revannas-mobile-phone-in-unnatural-sexual-assault-case/
ಬ್ರಾಹ್ಮ ವಿವಾಹ ಆಚರಣೆಗಳಲ್ಲಿ ವರನು ವಧುವಿಗೆ ಅರುಂಧತಿ ನಕ್ಷತ್ರ ತೋರಿಸುವುದು ಮುಖ್ಯ ಸಂಪ್ರದಾಯವಾಗಿದೆ. #ವಶಿಷ್ಠ (Mizar) ಹಾಗೂ #ಅರುಂಧತಿ (Alcor) ಅವಳಿ ನಕ್ಷತ್ರಗಳು. ಸಪ್ತರ್ಷಿ ಮಂಡಲದ (Ursa Major) ತುದಿಯಿಂದ ಮರೀಚಿಯ (Alkaid) ನಂತರದ ಎರಡನೆಯ ಸ್ಥಾನ ವಶಿಷ್ಠ ಹಾಗೂ ಅದಕ್ಕೆ ಅಂಟಿಕೊಂಡಂತೆ ಪಕ್ಕದಲ್ಲಿರುವುದೇ ಅರುಂಧತಿ ನಕ್ಷತ್ರ. ಇವೆರಡೂ ಅವಳಿ ನಕ್ಷತ್ರಗಳು. ಖಗೋಳಶಾಸ್ತ್ರದಲ್ಲಿ ಅವಳಿ ನಕ್ಷತ್ರಗಳೆಂದರೆ ಒಂದು ನಕ್ಷತ್ರವನ್ನು ಇನ್ನೊಂದು ನಕ್ಷತ್ರವು ಸುತ್ತುವುದು. ಆದರೆ ವಶಿಷ್ಠ-ಅರುಂಧತಿಯ ವಿಷಯದಲ್ಲಿ ಈ ನಿಯಮ ಬೇರೆ ಆಯಾಮ ಹೊಂದಿದೆ. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564. ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ…
ಬೆಂಗಳೂರು: ಕರ್ನಾಟಕ ಕೌಶಲ್ಯಾಭಿವೃದ್ದಿ ನಿಗಮವು ರಾಜ್ಯದ ಯುವಕರಿಗೆ ಹೊರದೇಶಗಳಲ್ಲಿ ಉದ್ಯೋಗ ಒದಗಿಸುವ ಮಹತ್ವದ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಇದರ ಭಾಗವಾಗಿ ಸ್ಲೋವಾಕಿಯಾ ರಾಷ್ಟ್ರದಲ್ಲಿ ಬಿಇ, ಡಿಪ್ಲೊಮೊ, ಐಟಿಐ ಮತ್ತಿತರ ವೃತ್ತಿಪರ ಕೋರ್ಸ್‍ಗಳನ್ನು ಮುಗಿಸಿದ 94 ಯುವಕರಿಗೆ ಉದ್ಯೋಗ ನೀಡುವಲ್ಲಿ ಕೌಶಲ್ಯಾಭಿವೃದ್ಧಿ ನಿಗಮವು ಯಶಸ್ವಿಯಾಗಿದೆ. ಕೌಶಲ್ಯಾಭಿವೃದ್ಧಿ, ಜೀವನೋಪಾಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ರಾದ ಡಾ.ಶರಣಪ್ರಕಾಶ್ ಪಾಟೀಲ್ ಅವರು ತೆಗೆದುಕೊಂಡ ದಿಟ್ಟನಿರ್ಧಾರದಿಂದಾಗಿ ಉದ್ಯೋಗವಿಲ್ಲದೆ ಕೆಲಸ ಹರಸುತ್ತಿದ್ದ ಯುವಕರು ಇದೀಗ ವಿದೇಶದಲ್ಲಿ ಕೈತುಂಬ ಸಂಬಳ ಪಡೆಯುತ್ತಿದ್ದು, ತಮ್ಮ ಭವಿಷ್ಯವ ರೂಪಿಸಿಕೊಂಡಿದ್ದಾರೆ. ಯುವಕರ ಕೌಶಲ್ಯಾ ಅರ್ಹತೆಗೆ ತಕ್ಕಂತೆ ಉದ್ಯೋಗಗಳನ್ನುನೀಡಲಾಗುತ್ತಿದೆ. ಅವರಿಗೆ ಇಲ್ಲಿಯೇ ತರಬೇತಿ, ವೀಸಾ ವ್ಯವಸ್ಥೆ, ಗೃಹ ಇಲಾಖೆಯಲ್ಲಿ ದಾಖಲಾತಿಗಳ ಪ್ರಮಾಣಪತ್ರ ಪರಿಶೀಲನೆ ಮಾತ್ರವಲ್ಲದೆ ಹೊರರಾಷ್ಟ್ರಗಳಿಗೆ ತೆರಳುವವರಿಗೆ ಊಟ, ವಸತಿವ್ಯವಸ್ಥೆ, ಸಂಬಂಧಪಟ್ಟವರ ಭೇಟಿಗೆ ಬೇಕಾದ ಇನ್ನಿತರಸೌಲಭ್ಯಗಳನ್ನು ಸಹ ಇಲಾಖೆಯ ಅಧಿಕಾರಿಗಳೇ ನಿಗಾವಹಿಸುತ್ತಾರೆ. ಐಟಿಬಿಟಿ, ವಿಜ್ಞಾನ, ಕೈಗಾರಿಕೆ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕರ್ನಾಟಕ ಇತರೆ ರಾಜ್ಯಗಳಿಗೆ ಹೋಲಿಸಿದರೆ ಸಾಕಷ್ಟು ಮುಂಚೂಣಿಯಲ್ಲಿದೆ. ಇದನ್ನು ಮನಗಂಡ ಸ್ಲೋವಾಕಿಯಾ ರಾಷ್ಟ್ರವು ಎರಡೂವರೆ ಸಾವಿರ…