Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಸಂವಿಧಾನಕ್ಕೆ ಅಪಚಾರ ಮಾಡಿದ ಕಾಂಗ್ರೆಸ್ ಜನರ ಕ್ಷಮೆ ಕೇಳಬೇಕು. ರಾಹುಲ್ ಗಾಂಧಿ ರಾಮ್ ಲೀಲಾ ಮೈದಾನದಲ್ಲಿ ತಲೆಬಾಗಿ ನಿಂತು ಜನರ ಕ್ಷಮೆ ಕೇಳಬೇಕು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು. ಸ್ವಾತಂತ್ರ್ಯ ಉದ್ಯಾನದಲ್ಲಿ ಬಿಜೆಪಿಯಿಂದ ನಡೆದ, ತುರ್ತು ಪರಿಸ್ಥಿತಿ ಸಂಬಂಧ ರಾಹುಲ್ ಗಾಂಧಿ ಕ್ಷಮೆ ಕೋರಬೇಕೆಂಬ ಆಗ್ರಹದ ಪೋಸ್ಟರ್ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಮೂಲೆಗೆ ತಳ್ಳಿ ಸರ್ವಾಧಿಕಾರಿ ಧೋರಣೆ ತೋರಿದ ಕಾಂಗ್ರೆಸ್ ಪಕ್ಷ ಹಾಗೂ ಇಂದಿರಾಗಾಂಧಿ ರಾತ್ರೋರಾತ್ರಿ ತುರ್ತು ಪರಿಸ್ಥಿತಿ ಹೇರಿದ್ದರು. ನ್ಯಾಯಾಂಗ ವ್ಯವಸ್ಥೆಯನ್ನು ಕಪಿಮುಷ್ಟಿಗೆ ತೆಗೆದುಕೊಂಡು, ಪತ್ರಕರ್ತರನ್ನು ಜೈಲಿಗೆ ಹಾಕಿದ್ದರು. ಎಲ್.ಕೆ.ಅಡ್ವಾಣಿ, ಅಟಲ್ ಬಿಹಾರಿ ವಾಜಪೇಯಿ ಮೊದಲಾದ ಘಟಾನುಘಟಿ ನಾಯಕರನ್ನು ಜೈಲಿಗೆ ತಳ್ಳಿದ್ದರು ಎಂದರು. ಆಗ ನಾನು ವಿವಿ ಪುರ ಕಾಲೇಜಿನಲ್ಲಿ ಮೊದಲ ಪಿಯುಸಿ ವಿದ್ಯಾರ್ಥಿಯಾಗಿದ್ದೆ. ಯಶವಂತಪುರ ಸರ್ಕಲ್ನಲ್ಲಿ ಆರ್ಎಸ್ಎಸ್ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಇಂದಿರಾಗಾಂಧಿ ವಿರುದ್ಧ ಎರಡು ವಾಕ್ಯ ಘೋಷಣೆ ಕೂಗಿದ್ದೆ. ಆಗ ಯಶವಂತಪುರ ಪೊಲೀಸರು…
ಬೆಂಗಳೂರು: ವಿಧಾನಸಭೆ ಮತ್ತು ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಿಂದ ವಿಧಆನ ಪರಿಷತ್ತಿಗೆ ಆಯ್ಕೆಯಾದಂತ 17 ನೂತನ ಸದಸ್ಯರು, ಇಂದು ಪ್ರಮಾಣವಚನ ಸ್ವೀಕರಿಸಿದರು. ವಿಧಾನ ಪರಿಷತ್ತಿಗೆ ವಿಧಆನಸಭೆಯಿಂದ ಆಯ್ಕೆಯಾದ ಐವಾನ್ ಡಿಸೋಜಾ, ಕೆ.ಗೋವಿಂದರಾಜ್, ಜಗದೇವ ಗುತ್ತೇದಾರ್, ಬಿಲ್ಲೀಸ್ ಬಾನು, ಎನ್ ಎಸ್ ಬೋಸರಾಜು, ಡಾ.ಯತೀಂದ್ರ ಸಿದ್ಧರಾಮಯ್ಯ, ಎ ವಸಂತ ಕುಮಾರ್, ಮೂಳೆ ಮಾರುತಿ ರಾವ್, ಟಿಎನ್ ಜವರಾಯಿ ಗೌಡ, ಸಿಟಿ ರವಿ ಮತ್ತು ಎನ್ ರವಿಕುಮಾರ್ ಪ್ರಮಾಣವಚನ ಸ್ವೀಕರಿಸಿದರು. ಅಲ್ಲದೇ ಪವೀಧರರ ಹಾಗೂ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದಂತ ಚಂದ್ರಶೇಖರ ಪಾಟೀಲ್ ಬಸವರಾಜ, ಡಾ.ಧನಂಜಯ್ ಸರ್ಜಿ, ರಾಮೋಜಿಗೌಡ, ಎಸ್.ಎಲ್ ಬೋಜೇಗೌಡ, ಕೆ.ವಿವೇಕಾನಂದ ಮತ್ತು ಡಿ.ಟಿ ಶ್ರೀನಿವಾಸ್ ಅವರು ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಸಚಿವ ಹೆಚ್.ಕೆ ಪಾಟೀಲ್ ಸೇರಿದಂತೆ ಇತರರು ಹಾಜರಿದ್ದರು. https://kannadanewsnow.com/kannada/big-news-nissin-invites-to-set-up-food-parks-in-vijayapura-dharwad-districts/ https://kannadanewsnow.com/kannada/breaking-producer-soundarya-jagadeesh-commits-suicide-pavithra-gowda-paid-rs-2-crore/
ನಾವು ಏನನ್ನಾದರೂ ಮಾಡಬೇಕು ಎಂದು ನಾವು ಭಾವಿಸುತ್ತೇವೆ. ಆ ವಿಚಾರದಲ್ಲಿ ಅಡೆತಡೆಗಳು ಎದುರಾಗುತ್ತವೆ. ಇದಕ್ಕೆ ಹೊಣೆ ಯಾರು? ರಾಹು ಮತ್ತು ಕೇತು ಕಾರಣರಾಗಿರುತ್ತಾರೆ. ಅದಕ್ಕಾಗಿಯೇ ನಮ್ಮ ಪೂರ್ವಜರು ಯಾವುದೇ ಕೆಲಸ ಮಾಡುವ ಮೊದಲು ಗಣಪತಿಯನ್ನು ಪೂಜಿಸಬೇಕು ಎಂದು ಹೇಳಿದ್ದಾರೆ. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564. ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ…
ಶಿವಮೊಗ್ಗ: ಬಿಜೆಪಿ ಜಿಲ್ಲಾ ಯುವ ಮೋರ್ಚಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದಂತ ಅರುಣ್ ಕುಗ್ವೆ ಅವರನ್ನು ರಾತ್ರೋರಾತ್ರಿ ಶಿವಮೊಗ್ಗ ಪೊಲೀಸಲು ಬಂಧಿಸಿದ್ದಾರೆ. ಈ ಹಿಂದೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ತನಗೆ ಅರುಣ್ ಕುಗ್ವೆ ವಂಚಿಸಿದ್ದಾರೆ ಅಂತ ಮಹಿಳೆಯೊಬ್ಬರು ದೂರು ನೀಡಿದ್ದರು. ಆ ಬಳಿಕ ತಾವೇ ಬಗೆಹರಿಸಿಕೊಳ್ಳುವುದಾಗಿ ಪೊಲೀಸ್ ಠಾಣೆಗೆ ಮಹಿಳೆ ಲಿಖಿತ ಹೇಳಿಕೆ ನೀಡಿದ ಕಾರಣ, ಪ್ರಕರಣ ದಾಖಲಿಸಿರಲಿಲ್ಲ. ಕೆಲ ವರ್ಷಗಳ ನಂತ್ರ, ಬಿಜೆಪಿ ಮುಖಂಡ ಅರುಣ್ ಕುಗ್ವೆ ತಮ್ಮನ್ನು ಮದುವೆಯಾಗುವುದಾಗಿ ವಂಚಿಸಿದ್ದಾರೆ ಎಂಬುದಾಗಿ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಗೆ ಮಹಿಳೆಯೊಬ್ಬರು ದೂರು ನೀಡಿದ್ದರು. ಆ ಬಳಿಕ ರಾಜೀ ಸಂಧಾನ ಮಾಡಿಕೊಳ್ಳುವುದಾಗಿ ಹೇಳಿದ್ದರಿಂದ ಕಾರಣಾಂತರಗಳಿಂದ ದೂರು ದಾಖಲಾಗಿರಲಿಲ್ಲ. ಈಗ ಮಹಿಳೆಯು ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಗೆ ತೆರಳಿ, ಮದುವೆಯಾಗುವುದಾಗಿ ನಂಬಿಸಿ, ವಂಚಿಸಿದ್ದಾರೆ ಅರುಣ್ ಕುಗ್ವೆ ಅಂತ ದೂರು ನೀಡಿದ್ದಾರೆ. ಈ ದೂರಿನ ಹಿನ್ನಲೆಯಲ್ಲಿ ಶಿವಮೊಗ್ಗ ಮಹಿಳಾ ಠಾಣೆಯ ಪೊಲೀಸರು ಎಫ್ಐಆರ್ ದಾಖಲಿಸಿ, ರಾತ್ರೋ ರಾತ್ರಿ ಇನ್ಸ್ ಪೆಕ್ಟರ್ ಭರತ್ ಕುಮಾರ್ ಸಾಗರದಲ್ಲಿನ…
ನವದೆಹಲಿ: ನೀಟ್-ಯುಜಿ ಪರೀಕ್ಷೆಯಲ್ಲಿನ ಅಕ್ರಮಗಳ ಬಗ್ಗೆ ಕೇಂದ್ರವು ಸಿಬಿಐ ತನಿಖೆಗೆ ಆದೇಶಿಸಿದ ಒಂದು ದಿನದ ನಂತರ, ಕೇಂದ್ರ ತನಿಖಾ ಸಂಸ್ಥೆ ಈ ವಿಷಯದ ಬಗ್ಗೆ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದೆ. ಕೇಂದ್ರ ಸರ್ಕಾರವು ನಿನ್ನೆ ಸಂಜೆಯಷ್ಟೇ ನೀಟ್ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಆದೇಶಿಸಿತ್ತು. ಈ ಬೆನ್ನಲ್ಲೇ ಸಿಬಿಐ ತನಿಖೆ ಚುರುಕುಗೊಳಿಸಿದ್ದು, ಪ್ರಕರಣ ಸಂಬಂಧ ಎಫ್ಐಆರ್ ದಾಖಲಿಸಿರುವುದಾಗಿ ತಿಳಿದು ಬಂದಿದೆ. ಸಿಬಿಐ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ. ಈ ವಿಷಯದ ಬಗ್ಗೆ ಹೆಚ್ಚಿನ ಆದ್ಯತೆಯ ಮೇರೆಗೆ ತನಿಖೆ ನಡೆಸಲು ಸಿಬಿಐ ವಿಶೇಷ ತಂಡಗಳನ್ನು ರಚಿಸಿದೆ. ಸ್ಥಳೀಯ ಪೊಲೀಸ್ ಪ್ರಕರಣಗಳು ದಾಖಲಾಗಿರುವ ಪಾಟ್ನಾ ಮತ್ತು ಗೋಧ್ರಾಗೆ ವಿಶೇಷ ಸಿಬಿಐ ತಂಡಗಳನ್ನು ಕಳುಹಿಸಲಾಗುತ್ತಿದೆ. https://twitter.com/ANI/status/1804840920342515969 https://kannadanewsnow.com/kannada/2-crpf-personnel-killed-after-naxals-target-their-convoy-with-ied-blast-in-chhattisgarhs-sukma/ https://kannadanewsnow.com/kannada/i-dont-want-to-give-up-channapatna-union-minister-hd-kumaraswamy/
ನವದೆಹಲಿ: ಛತ್ತೀಸ್ಗಢದ ನಕ್ಸಲ್ ಬಂಡಾಯ ಪೀಡಿತ ಸುಕ್ಮಾ ಜಿಲ್ಲೆಯಲ್ಲಿ ಸುಧಾರಿತ ಸ್ಫೋಟಕ ಸಾಧನ (Improvised Explosive Device -IED) ಸ್ಫೋಟದಲ್ಲಿ ಇಬ್ಬರು ಕೇಂದ್ರ ಮೀಸಲು ಪೊಲೀಸ್ ಪಡೆ (Central Reserve Police Force – CRPF) ಸಿಬ್ಬಂದಿಗಳು ಹುತಾತ್ಮರಾಗಿದ್ದಾರೆ. ಈ ಸ್ಪೋಟದಲ್ಲಿ ಹಲವಾರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಮೂಲಗಳ ಪ್ರಕಾರ, ನಕ್ಸಲರು ತಮ್ಮ ಸಾಪ್ತಾಹಿಕ ದಿನಸಿ ವಸ್ತುಗಳನ್ನು ತರಲು ತೆರಳುತ್ತಿದ್ದಾಗ ಜಾಗರ್ ಗುಂಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಭದ್ರತಾ ಪಡೆಗಳ ಬೆಂಗಾವಲು ವಾಹನವನ್ನು ಗುರಿಯಾಗಿಸಿಕೊಂಡು ಐಇಡಿ ಸ್ಫೋಟದಿಂದ ದಾಳಿ ನಡೆಸಿದ್ದಾರೆ. https://twitter.com/ANI/status/1804839827055260059 https://kannadanewsnow.com/kannada/bajrang-punia-suspended-by-nada-for-violating-anti-doping-rule/ https://kannadanewsnow.com/kannada/i-dont-want-to-give-up-channapatna-union-minister-hd-kumaraswamy/
ನವದೆಹಲಿ: ಡೋಪಿಂಗ್ ವಿರೋಧಿ ನಿಯಮ ಉಲ್ಲಂಘನೆಗಾಗಿ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಬಜರಂಗ್ ಪೂನಿಯಾ ( Olympic Medallist wrestler Bajrang Punia ) ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ವಿರೋಧಿ ಸಂಸ್ಥೆ (National Anti-Doping Agency – NADA) ಭಾನುವಾರ ಅಮಾನತುಗೊಳಿಸಿದೆ ಎಂದು ಎಎನ್ಐ ವರದಿ ಮಾಡಿದೆ. ಕಳೆದ ತಿಂಗಳು ಟ್ರಯಲ್ಸ್ ಸಮಯದಲ್ಲಿ ಡೋಪ್ ಪರೀಕ್ಷೆಗೆ ತನ್ನ ಮಾದರಿಯನ್ನು ನೀಡಲು ನಿರಾಕರಿಸಿದ್ದಕ್ಕಾಗಿ ಪುನಿಯಾ ಅವರನ್ನು ತಾತ್ಕಾಲಿಕ ಅಮಾನತುಗೊಳಿಸಲಾಯಿತು. https://twitter.com/ANI/status/1804780168730276056 ಮಾರ್ಚ್ನಲ್ಲಿ ನಡೆದ ಆಯ್ಕೆ ಟ್ರಯಲ್ಸ್ ನಂತರ ಡೋಪ್ ಪರೀಕ್ಷೆಗೆ ತನ್ನ ಮಾದರಿಯನ್ನು ನೀಡಲು ನಿರಾಕರಿಸಿದ ಕುಸ್ತಿಪಟುವಿಗೆ ಏಜೆನ್ಸಿ ಚಾರ್ಜ್ ನೋಟಿಸ್ ನೀಡುವವರೆಗೆ ಪುನಿಯಾ ಮೇಲೆ ವಿಧಿಸಲಾಗಿದ್ದ ತಾತ್ಕಾಲಿಕ ಅಮಾನತು ಆದೇಶವನ್ನು ನಾಡಾದ ಶಿಸ್ತು ಸಮಿತಿ (NADA’s Disciplinary Panel – ADDP) ಈ ಹಿಂದೆ ಹಿಂತೆಗೆದುಕೊಂಡಿತ್ತು. https://kannadanewsnow.com/kannada/sbi-plans-to-open-400-branches-in-fy25-chairman-khara/ https://kannadanewsnow.com/kannada/i-dont-want-to-give-up-channapatna-union-minister-hd-kumaraswamy/
ನವದೆಹಲಿ: ನೆಟ್ವರ್ಕ್ ವಿಸ್ತರಣೆ ಯೋಜನೆಯ ಭಾಗವಾಗಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India – SBI) ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶಾದ್ಯಂತ 400 ಶಾಖೆಗಳನ್ನು ತೆರೆಯಲು ಯೋಜಿಸುತ್ತಿದೆ. ದೇಶದ ಅತಿದೊಡ್ಡ ಬ್ಯಾಂಕ್ ಕಳೆದ ಹಣಕಾಸು ವರ್ಷದಲ್ಲಿ 137 ಶಾಖೆಗಳನ್ನು ತೆರೆಯಿತು. ಒಟ್ಟು 59 ಹೊಸ ಗ್ರಾಮೀಣ ಶಾಖೆಗಳನ್ನು ಪ್ರಾರಂಭಿಸಲಾಗಿದೆ. “ಶೇಕಡಾ 89 ರಷ್ಟು ಡಿಜಿಟಲ್ ಮತ್ತು ಶೇಕಡಾ 98 ರಷ್ಟು ವಹಿವಾಟುಗಳು ಶಾಖೆಯ ಹೊರಗೆ ನಡೆಯುತ್ತಿವೆಯೇ, ಶಾಖೆಯ ಅಗತ್ಯವಿದೆಯೇ ಎಂದು ಯಾರೋ ನನ್ನನ್ನು ಕೇಳಿದರು. ನನ್ನ ಉತ್ತರ ಹೌದು. ಹೊಸ ಪ್ರದೇಶಗಳು ಹೊರಹೊಮ್ಮುತ್ತಿರುವುದರಿಂದ ಇದು ಇನ್ನೂ ಅಗತ್ಯವಾಗಿದೆ ” ಎಂದು ಎಸ್ಬಿಐ ಅಧ್ಯಕ್ಷ ದಿನೇಶ್ ಕುಮಾರ್ ಖರಾ ( SBI Chairman Dinesh Kumar Khara ) ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಸಲಹಾ ಮತ್ತು ಸಂಪತ್ತಿನ ಸೇವೆಗಳಂತಹ ಕೆಲವು ಸೇವೆಗಳನ್ನು ಶಾಖೆಯಿಂದ ಮಾತ್ರ ನೀಡಬಹುದು ಎಂದು ಅವರು ಹೇಳಿದರು. “ನಾವು ಅವಕಾಶವಿರುವ ಸ್ಥಳಗಳನ್ನು ಗುರುತಿಸುತ್ತೇವೆ…
ಹಾವೇರಿ: ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭಗೊಂಡ ನಂತ್ರ, ಸರಿಯಾದ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಈ ಗ್ರಾಮದ ಜನರು ತಮ್ಮ ಊರಿನಲ್ಲಿ ಮಳೆ ಬರುತ್ತಿಲ್ಲ ಅನ್ನೋ ಕಾರಣಕ್ಕೆ ಹೂತಿದ್ದಂತ ಶವಗಳನ್ನೇ ಹೊರತೆಗೆದಿರುವಂತ ಶಾಕಿಂಗ್ ಸುದ್ದಿ ತಿಳಿದು ಬಂದಿದೆ. ಹಾವೇರಿ ಜಿಲ್ಲೆಯ ಹಲವೆಡೆ ಮುಂಗಾರು ಮಳೆ ಆರಂಭಗೊಂಡ ನಂತ್ರವೂ ಸಮರ್ಪಕವಾಗಿ ಮಳೆಯಾಗಿರಲಿಲ್ಲ. ಇದಕ್ಕೆ ಕಾರಣ ಚರ್ಮ ರೋಗ(ತೊನ್ನು) ಇದ್ದಂತ ವ್ಯಕ್ತಿಯನ್ನು ಹೂತು ಹಾಕಿದ್ದೇ ಕಾರಣ ಎಂಬುದಾಗಿ ಹೇಳಲಾಗುತ್ತಿದೆ. ಮೂಡನಂಬಿಕೆಗೆ ಜೋತು ಬಿದ್ದಂತ ಜನರು ಮಳೆ ಬರದೇ ಇರೋದಕ್ಕೆ ತೊನ್ನು ಖಾಯಿಲೆಯ ವ್ಯಕ್ತಿಯನ್ನು ಹೂತು ಹಾಕಿರೋದೇ ಕಾರಣ. ಇದೇ ಕಾರಣದಿಂದ ಮಳೆಯಾಗುತ್ತಿಲ್ಲ ಅಂತ ಜನರು ಹೂತಿದ್ದಂತ ಶವಗಳನ್ನು ಹೊರ ತೆಗೆದಿದ್ದಾರೆ. ಆ ಬಳಿಕ ಸುಟ್ಟು ಹಾಕಿದ್ದಾರೆ. ಅಂದಹಾಗೇ ಈಗಾಗಲೇ ಚರ್ಮ ಖಾಯಿಲೆಯಿಂದ ಬಳಲಿ, ಸಾವನ್ನಪ್ಪಿದ್ದಂತ 8 ರಿಂದ 10 ಶವಗಳನ್ನು ಜನರು ಜಿಲ್ಲೆಯಲ್ಲಿ ಹೊರತೆಗೆದು, ಶವಗಳನ್ನು ಸುಟ್ಟು ಹಾಕಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ. ಈ ಎಲ್ಲಾ ಪೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾವೆ. https://kannadanewsnow.com/kannada/shivakumar-who-had-lodged-a-complaint-on-behalf-of-suraj-revanna-goes-missing/…
ಬೆಂಗಳೂರು : ಯಶಸ್ಸಿಗೆ ಕೇವಲ ಅದೃಷ್ಟ ಅಷ್ಟೇ ಅಲ್ಲ ಅದನ್ನ ಸಾಕಾರಗೊಳಿಸಲು ಅಗತ್ಯ ತಯಾರಿಯೂ ಅಷ್ಟೇ ಮುಖ್ಯ ಎಂದು ಗ್ಲೋಬಲ್ ಅಕಾಡೆಮಿ ಅಪ್ ಟೆಕ್ನಾಲಜಿಯ ವ್ಯವಸ್ಥಾಪಕ ನಿರ್ದೇಶಕರಾದ ಐಶ್ವರ್ಯ ಡಿಕೆಎಸ್ ಹೆಗ್ಡೆ ಅಭಿಪ್ರಾಯಪಟ್ಟರು. ಇಂದು ಹೆಸರುಘಟ್ಟ ರಸ್ತೆಯಲ್ಲಿ ಇರುವ ಸೌಂದರ್ಯ ಕಾಂಪೋಸಿಟ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಒರಿಯೆಂಟೇಶನ್ ಕಾರ್ಯಕ್ರಮ ಇಗ್ನೈಟ್ 2024 ಗೆ ಚಾಲನೆ ನೀಡಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು. ಜೀವನದಲ್ಲಿ ಶಿಕ್ಷಣ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಉತ್ತಮ ಶಿಕ್ಷಣ ನಮ್ಮ ಉತ್ತಮ ಜೀವನದ ಗಟ್ಟಿ ಬೇರುಗಳಾಗಿವೇ. ಸೌಂದರ್ಯ ಶಿಕ್ಷಣ ಸಂಸ್ಥೆ ಗಳಂತಹ ಉತ್ತಮ ಸಂಸ್ಥೆಗಳು ನಮ್ಮ ರಾಜ್ಯದ ಶಿಕ್ಷಣ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಿದೆ. ನಮ್ಮ ಮಕ್ಕಳು ತಮ್ಮ ಸರ್ವತೋಮುಖ ಬೆಳವಣಿಗೆಯತ್ತ ಗಮನ ಹರಿಸಬೇಕು. ಈ ಬೆಳವಣಿಗೆಯಲ್ಲಿ ಪೋಷಕರದ್ದು ಹಾಗೂ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ. ಯಾವುದೇ ಕ್ಷೇತ್ರದಲ್ಲಾದರೂ ಕೂಡಾ ಯಶಸ್ಸು ಪಡೆಯಲು ಕೇವಲ ಅದೃಷ್ಟ ಸಾಕಾಗಲ್ಲ. ಅದೃಷ್ಟದಿಂದ ದೊರೆತಂತಹ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಅಗತ್ಯ…