Author: kannadanewsnow09

ಬೆಂಗಳೂರು: ಹಾಸ್ಟೆಲ್ ಹುಡುಗರು ಚಿತ್ರ ತಂಡದಿಂದ ತಮ್ಮ ಅನುಮತಿಯಿಲ್ಲದೇ ದೃಶ್ಯಾವಳಿ ಬಳಕೆ ಮಾಡಿದ್ದರ ಸಂಬಂಧ ನಟಿ ರಮ್ಯಾ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಸಂಬಂಧದ ವಿಚಾರಣೆಗೆ ಇಂದು ಬೆಂಗಳೂರಿನ ವಾಣಿಜ್ಯ ನ್ಯಾಯಾಲಯಕ್ಕೆ ನಟಿ ರಮ್ಯಾ ವಿಚಾರಣೆ ಹಾಜರಾದರು. ಜುಲೈ.21, 2024ರಂದು ನಟಿ ರಮ್ಯಾ ಅವರು ಅನುಮತಿಯಿಲ್ಲದೇ ತಮ್ಮ ದೃಶ್ಯಾವಳಿಯನ್ನು ಹಾಸ್ಟೆಲ್ ಹುಡುಗರು ಚಿತ್ರದಲ್ಲಿ ಬಳಕೆ ಮಾಡಿದ್ದರ ಕಾರಣ, ನಿರ್ಮಾಪಕರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. 1 ಕೋಟಿ ಪರಿಹಾರ ನೀಡುವಂತೆಯೂ ಅರ್ಜಿ ಸಲ್ಲಿಸಿದ್ದರು. ಇಂದು ಬೆಂಗಳೂರಿನ ವಾಣಿಜ್ಯ ಸಂಕೀರ್ಣಗಳ ನ್ಯಾಯಾಲಯದಲ್ಲಿ ಹಾಸ್ಟೆಲ್ ಹುಡುಗರು ಚಿತ್ರದ ವಿವಾದದ ಕುರಿತಂತೆ ಕೇಸ್ ವಿಚಾರಣೆಯಿದ್ದ ಕಾರಣ, ನಟಿ ರಮ್ಯಾ ಅವರು ವಿಚಾರಣೆಗೆ ಹಾಜರಾದರು.

Read More

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ಡೇಟ್ ಫಿಕ್ಸ್ ಆಗಿದೆ. ಫೆಬ್ರವರಿ 5ರಂದು ಮತದಾನ ನಡೆಯಲಿದೆ. ಫೆಬ್ರವರಿ 8ರಂದು ಮತಏಣಿಕೆ ನಡೆದು ಫಲಿತಾಂಶ ಘೋಷಿಸುವುದಾಗಿ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ರಾಜೀವ್ ಕುಮಾರ್ ತಿಳಿಸಿದ್ದಾರೆ. ಇಂದು ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು,  2025 ರ ದೆಹಲಿ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಚುನಾವಣಾ ಆಯೋಗ (ಇಸಿಐ) ಮಂಗಳವಾರ ಪ್ರಕಟಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ ಫೆಬ್ರವರಿ 5 ರಂದು ಮತದಾನ ನಡೆಯಲಿದ್ದು, ಫೆಬ್ರವರಿ 8 ರಂದು ಫಲಿತಾಂಶ ಪ್ರಕಟವಾಗಲಿದೆ. ದೆಹಲಿಯಲ್ಲಿ ಬಿಜೆಪಿ, ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಆಡಳಿತಾರೂಢ ಎಎಪಿ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ತೀವ್ರ ಸ್ಪರ್ಧೆ ನಡೆಯುತ್ತಿರುವುದರಿಂದ ಈ ಪ್ರಕಟಣೆ ಈಗ ದೆಹಲಿಯಲ್ಲಿ ಈಗಾಗಲೇ ಬಿಸಿಯಾಗಿರುವ ರಾಜಕೀಯ ವೈಫಲ್ಯವನ್ನು ತೀವ್ರಗೊಳಿಸಿದೆ. ರಾಜಕೀಯ ಚರ್ಚೆಯಲ್ಲಿ ಆರೋಪ ಮತ್ತು ಪ್ರತ್ಯಾರೋಪಗಳು ಮೇಲುಗೈ ಸಾಧಿಸುತ್ತಿದ್ದು, ನಡೆಯುತ್ತಿರುವ ‘ಎಎಪಿಡಿಎ’ ವಿವಾದದ ಮಧ್ಯೆ ಇದು ಬಂದಿದೆ. ದೆಹಲಿ ಚುನಾವಣೆಗೆ ಸಜ್ಜಾಗುತ್ತಿದ್ದಂತೆ, ಪ್ರಶ್ನೆ ಉಳಿದಿದೆ -…

Read More

ನವದೆಹಲಿ: ತೀವ್ರ ಕುತೂಹಲ ಮೂಡಿಸಿದ್ದಂತ ದೆಹಲಿಯ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಫೆಬ್ರಪರಿ 5ರಂದು ಮತದಾನ ನಡೆಯಲಿದೆ. ಫೆಬ್ರವರಿ 8ರಂದು ಮತಏಣಿಕೆ ನಡೆದು ಫಲಿತಾಂಶ ಘೋಷಣೆಯಾಗಲಿದೆ ಎಂಬುದಾಗಿ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ರಾಜೀವ್ ಕುಮಾರ್ ಘೋಷಿಸಿದರು. ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ರಾಜೀವ್ ಕುಮಾರ್ ಅವರು ಇವಿಎಂ ಯಂತ್ರವನ್ನು ಹ್ಯಾಕ್ ಮಾಡಲು ಸಾದ್ಯವಿಲ್ಲ. ಯಾವುದೇ ಮಾರ್ವಲ್ ಕೂಡ ಅವುಗಳಲ್ಲಿ ಇನ್ ಸ್ಟಾಲ್ ಮಾಡೋದಕ್ಕೆ ಸಾಧ್ಯವಿಲ್ಲ. ಇದನ್ನೇ ಸುಪ್ರೀಂ ಕೋರ್ಟ್ ಕೂಡ ಈಗಾಗಲೇ ಹಲವು ತೀರ್ಪುಗಳಲ್ಲಿ ಸ್ಪಷ್ಟ ಪಡಿಸಿದೆ ಎಂದರು. ಪಾರದರ್ಶಕ ಚುನಾವಣೆ ನಡೆಸುವು ನಮ್ಮ ಆದ್ಯತೆಯಾಗಿದೆ. ಚುನಾವಣೆ 7-8 ದಿನಗಳ ಮೊದಲೇ ಇವಿಎಂ ಸಿದ್ಧತೆ ಕೈಗೊಳ್ಳಲಾಗುತ್ತದೆ. 7-8 ದಿನಗಳ ಮೊದಲೇ ಇವಿಎಂಗೆ ಸಿಂಬಲ್ ಅಳವಡಿಸಲಾಗುತ್ತದೆ. ಏಜೆಂಟ್ ಸಮ್ಮುಖದಲ್ಲೇ ಇವಿಎಂಗೆ ಸಿಂಬಲ್ ಗಳನ್ನು ಅಳವಡಿಸಲಾಗುತ್ತದೆ. ಇವಿಎಂ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿರುತ್ತದೆ. ಪೂರ್ಣ ಪಾರದರ್ಶಕತೆಯಿಂದ ಮತದಾರರ ಪಟ್ಟಿಯನ್ನು ತಯಾಗಿಸಲಾಗುತ್ತದೆ. ಮತದಾನ ಮುಗಿದ ಬಳಿಕ ಇವಿಎಂ ಸೀಲ್…

Read More

ಬೆಂಗಳೂರು: ನಗರದ ಕಾರ್ಪೋರೇಷನ್ ಬಳಿ ಇರುವಂತ ಬಿಬಿಎಂಪಿ ಪ್ರಧಾನ ಕಚೇರಿಯ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬಿಬಿಎಂಪಿ ಚೀಫ್ ಕಮೀಷನರ್ ಕಚೇರಿಯಲ್ಲಿ ಇಡಿ ಅಧಿಕಾರಿಗಳ ದಾಳಿ ನಡೆಸಿ, ದಾಖಲೆ ಪರಿಶೀಲಿಸುತ್ತಿದ್ದಾರೆ. ಇಂದು ಬಿಬಿಎಂಪಿ ಪ್ರಧಾನ ಕಚೇರಿಯ ಮೇಲೆ ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. 7 ಅಧಿಕಾರಿಗಳ ತಂಡದಿಂದ ದಾಳಿಯನ್ನು ನಡೆಸಲಾಗಿದೆ. ಕೇಂದ್ರ ಕಚೇರಿಯಲ್ಲಿ ಇಡಿ ಅಧಿಕಾರಿಗಳಿಂದ ಮಹತ್ವದ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಬಿಬಿಎಂಪಿ ಚೀಫ್ ಇಂಡಿನಿಯರ್ ಕಚೇರಿ ಸೇರಿದಂತೆ ವಿವಿಧ ಕಚೇರಿಯಲ್ಲಿ ಇಡಿ ಅಧಿಕಾರಿಗಳ ತಂಡವು ಅಕ್ರಮ ಹಣ ವರ್ಗಾವಣೆ ಕುರಿತಂತೆ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದೆ. ಈ ಕುರಿತಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. https://kannadanewsnow.com/kannada/salman-khan-upgrades-security-of-his-galaxy-apartment-with-bulletproof-windows-report/ https://kannadanewsnow.com/kannada/breaking-bengaluru-another-suicide-in-bengaluru-debt-ridden-businessman-commits-suicide/

Read More

ಬೆಂಗಳೂರು: ಬಂಡೀಪುರ ಮೀಸಲು ಅರಣ್ಯದಲ್ಲಿ ರಾತ್ರಿ 9ರವರೆಗೆ ಸಾರ್ವಜನಿಕ ವಾಹನಗಳಿಗೆ,  ಆ ನಂತ್ರ ಅರಣ್ಯ ಇಲಾಖೆಯಿಂದಲೇ 2 ಬಸ್ ಸಂಚಾರದ ವ್ಯವಸ್ಥೆಯನ್ನು ಕಲ್ಪಿಸಿರುವುದಾಗಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ಇಂದು ಅರಣ್ಯ ಅಪರಾಧಗಳ ತಡೆಗಾಗಿ ಗರುಡಾಕ್ಷಿ ಆನ್ ಲೈನ್ ಎಫ್ಐಆರ್ ವ್ಯವಸ್ಥೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದಂತ ಅವರು, ಕೇರಳದಿಂದ ನಮ್ಮ ರಾಜ್ಯಕ್ಕೆ ಬಂಡೀಪುರ ಅರಣ್ಯದ ಮೂಲಕ ಬರಲು ರಾತ್ರಿ 9 ರವರೆಗೆ ಅವಕಾಶವನ್ನು ನೀಡಲಾಗಿದೆ. ಅಲ್ಲದೇ ರಾತ್ರಿ 9ರ ನಂತ್ರ ಎರಡು ಬಸ್ ಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ವನ್ಯ ಜೀವಿ ಸಂರಕ್ಷಣೆ ಆಗಬೇಕು. ಉಭಯ ರಾಜ್ಯಗಳ ಸಂಬಂಧ ಕೂಡ ಉಳಿಯಬೇಕು ಎಂದರು. ಇದೇ ಸಂದರ್ಭದಲ್ಲಿ ಸಚಿವ ಈಶ್ವರ್ ಖಂಡ್ರೆ ಗರುಡಾಕ್ಷಿ ತಂತ್ರಾಂಶ ಬಿಡುಗಡೆ ಮಾಡಿದರು. ಈ ಬಳಿಕ ಮಾತನಾಡಿದ ಅವರು, ಅರಣ್ಯ ಅಪರಾಧ ಪ್ರಕರಣಗಳ ನಿರ್ವಹಣೆಗೆ ಆನ್ ಲೈನ್ ವೇದಿಕೆಯಾಗಿದೆ. ಇವತ್ತಿಗೆ ಅನುಗುಣವಾಗಿ ಅರಣ್ಯ ಇಲಾಖೆಯಲ್ಲಿ ಕೆಲ ಸುಧಾರಣೆ ತರುತ್ತಿದ್ದೇವೆ. ದಿನದಿಂದ ದಿನಕ್ಕೆ ಅರಣ್ಯ ಅಪರಾಧಗಳು ಹೆಚ್ಚಾಗುತ್ತಿದೆ. ಭೂಮಿ ಬೆಲೆ ಜಾಸ್ತಿ ಆಗ್ತಿರೋದ್ರಿಂದ ಅಪರಾಧ ಹೆಚ್ಚು. ಒತ್ತುವರಿಗಳು…

Read More

ಬೆಂಗಳೂರು: ಕೊಡಗು ಸೈನಿಕ ಶಾಲೆಯಲ್ಲಿ 6ನೇ ತರಗತಿ(ಹುಡುಗ ಮತ್ತು ಹುಡುಗಿಯರು) ಹಾಗೂ 9 ನೇ ತರಗತಿ(ಹುಡುಗರು ಮಾತ್ರ)ಯ ಪ್ರವೇಶಕ್ಕಾಗಿ ಅರ್ಜಿ ಕರೆಯಲಾಗಿದ್ದು ಜ.13 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ. ಅರ್ಜಿಯನ್ನು https://exams.nta.ac.in/AISSEE ಜಾಲತಾಣದಲ್ಲಿ ಮಾತ್ರ ಸಲ್ಲಿಸಬಹುದು. ಹಾಗೂ ಲಿಖಿತ ಪರೀಕ್ಷೆಯ ದಿನಾಂಕವನ್ನು ಎನ್‌ಟಿಎ ಜಾಲತಾಣದಲ್ಲಿ ನಂತರ ಪ್ರಕಟಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ www.sainikschoolkodagu.edu.in ಎಂಬ ಜಾಲತಾಣವನ್ನು ಸಂಪರ್ಕಿಸಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರಾದ(ಪ್ರ) ಡಾ.ಸಿ.ಎ.ಹಿರೇಮಠ ತಿಳಿಸಿದ್ದಾರೆ. https://kannadanewsnow.com/kannada/at-least-95-killed-over-130-injured-in-tibet-earthquake/ https://kannadanewsnow.com/kannada/salman-khan-upgrades-security-of-his-galaxy-apartment-with-bulletproof-windows-report/

Read More

ಟಿಬೆಟ್: ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ ಸೇರಿದಂತೆ ಆರು ಭೂಕಂಪಗಳು ಟಿಬೆಟ್ನಲ್ಲಿ ಮಂಗಳವಾರ ಒಂದು ಗಂಟೆಯಲ್ಲಿ ಸಂಭವಿಸಿದ ಭೂಕಂಪದಲ್ಲಿ ಕನಿಷ್ಠ 95 ಜನರು ಸಾವನ್ನಪ್ಪಿದ್ದಾರೆ. 130 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಭಾರತ, ನೇಪಾಳ ಮತ್ತು ಭೂತಾನ್ ನ ಅನೇಕ ಪ್ರದೇಶಗಳಲ್ಲಿ ಭೂಕಂಪಗಳು ಕಟ್ಟಡಗಳನ್ನು ನಡುಗಿಸಿದವು ಎಂಬುದಾಗಿ ವರದಿಯಾಗಿದೆ. ಭೂಕಂಪದಲ್ಲಿ ಟಿಬೆಟ್ನ ಶಿಗಾಟ್ಸೆ ಪ್ರದೇಶದಲ್ಲಿ ಕನಿಷ್ಠ 95 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. 130 ಮಂದಿ ಗಾಯಗೊಂಡಿದ್ದಾರೆ ಎಂದು ಚೀನಾದ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ. ಭೂಕಂಪದ ಕೇಂದ್ರಬಿಂದುವಿನ ಬಳಿ ಹಲವಾರು ಕಟ್ಟಡಗಳು ಕುಸಿದಿವೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ. “ಡಿಂಗ್ರಿ ಕೌಂಟಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಬಹಳ ಬಲವಾದ ಭೂಕಂಪನವನ್ನು ಅನುಭವಿಸಿವೆ ಮತ್ತು ಕೇಂದ್ರಬಿಂದುವಿನ ಬಳಿಯ ಅನೇಕ ಕಟ್ಟಡಗಳು ಕುಸಿದಿವೆ” ಎಂದು ಚೀನಾದ ಸರ್ಕಾರಿ ಪ್ರಸಾರಕ ಸಿಸಿಟಿವಿ ತಿಳಿಸಿದೆ. https://twitter.com/XHNews/status/1876492717213245521 ಶಿಗಟ್ಸೆ 800,000 ಜನರಿಗೆ…

Read More

ಬೆಂಗಳೂರು : ಈ ಬಾರಿ ಸರ್ವ ಜನಾಂಗದ ಶಾಂತಿಯ ತೋಟ ಎಂಬ ವಿಷಯವನ್ನು ಆಧರಿಸಿ 16 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವನ್ನು ಮಾರ್ಚ್ 1-8 ರವರೆಗೆ ಆಯೋಜಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸಂಘಟನಾ ಸಮಿತಿ ಸಭೆಯ ನಂತರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಸಿನಿಮಾಸಕ್ತರಿಗೆ ಸುವರ್ಣಾವಕಾಶ ಕಳೆದ ವರ್ಷ ಚಲನಚಿತ್ರೋತ್ಸವಕ್ಕೆ ಸಾಮಾಜಿಕ ನ್ಯಾಯ ಎಂಬ ಥೀಮ್‌ ಆಧರಿಸಿ ಚಲನಚಿತ್ರೋತ್ಸವವನ್ನು ಆಯೋಜಿಸಲಾಗಿತ್ತು . ಈ ಬಾರಿಯೂ 60 ಕ್ಕೂ ಹೆಚ್ಚು ದೇಶಗಳ ಚಲನಚಿತ್ರಗಳು ಅಂತರರಾಷ್ಟ್ರೀಯ ಚಲನಚಿತ್ರೋತ್ಸದಲ್ಲಿ ಪಾಲ್ಗೊಳ್ಳಲಿದ್ದು, 200 ಚಲನಚಿತ್ರಗಳು 13 ಪರದೆಗಳಲ್ಲಿ ಪ್ರದರ್ಶನಗೊಳ್ಳಲಿವೆ. ಒರಾಯ್ ಮಾಲ್ ನಲ್ಲಿ 11 ಪರದೆಗಳು, ಸುಚಿತ್ರಾ ಫಿಲಂ ಸೊಸೈಟಿ ಹಾಗೂ ಡಾ: ಅಂಬರೀಶ್ ಆಡಿಟೋರಿಯಂ, ಚಾಮರಾಜಪೇಟೆ ಇಲ್ಲಿ ತಲಾ ಒಂದು ಪರದೆಯಲ್ಲಿ ಚಿತ್ರ ಪ್ರದರ್ಶನಗೊಳ್ಳಲಿವೆ. ಕನ್ನಡ ಸೇರಿದಂತೆ ಇತರೆ ಭಾಷೆಗಳ 400 ಚಿತ್ರ ಪ್ರದರ್ಶನಗಳು ನಡೆಯಲಿದ್ದು ಬೆಂಗಳೂರು ನಾಗರಿಕರಿಗೆ ಹಾಗೂ ರಾಜ್ಯದ ಎಲ್ಲರಿಗೂ ವಿವಿಧ ದೇಶಗಳ ನಾಗರಿಕತೆಯನ್ನು ಕಾಣಲು…

Read More

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಸ್ವತ್ತು ಅಕ್ರಮವಾಗಿ ಆಕ್ರಮಿಸಿಕೊಳ್ಳೋದು, ಮಾರಾಟ ಮಾಡೋದು, ಕಬಳಿಸೋದು, ಸ್ವಾಧೀನ ಮಾಡೋದು ಅಪರಾಧ. ಆ ಎಲ್ಲಾ ಅಪರಾಧಗಳಿಗೆ ಸಾರ್ವಜನಿಕರಿಗೆ ಏನೆಲ್ಲ ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ ಎನ್ನುವ ಬಗ್ಗೆ ಉಪಯುಕ್ತ ಮಾಹಿತಿ ಮುಂದಿದೆ ಓದಿ. ಈ ಸಂಬಂಧ ಕರ್ನಾಟಕ ಭೂ ಕಂದಾಯ ಅಧಿನಿಯ 1964ರ 192-ಎ ಅಡಿಯಲ್ಲಿ ಸರ್ಕಾರಿ ಸ್ವತ್ತಿನ ಕುರಿತಂತೆ ಮಹತ್ವದ ಮಾಹಿತಿ ನೀಡಲಾಗಿದೆ. ಈ ಕಾಯ್ದೆಯಲ್ಲಿ ಏನೇ ಒಳೊಳಗೊಂಡಿದ್ದರೂ ಅಥವಾ ನಿಯಮಗಳನ್ನು ಏನೇ ಇದ್ದರೂ ಯಾವನೊಬ್ಬ ವ್ಯಕ್ತಿ, ಈ ಕೆಳಗಿನ ಪಟ್ಟಿ ಕಲಂ(2)ರಲ್ಲಿ ನಿರ್ದಿಷ್ಟ ಪಡಿಸಲಾದ ಅಪರಾಧ ಎಸಗಿದರೇ ನ್ಯಾಹಿಕ ದಂಡಾಧಿಕಾರಿಗಳು ಪ್ರಥಮ ದರ್ಜೆಯವರಿಂದ ವಿಚಾರಣೆ ನಡೆಸಿ ಈ ಕೆಳಗಿನಂತೆ ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದಾಗಿದೆ. ಸರ್ಕಾರಿ ಸ್ವತ್ತನ್ನು ಅಕ್ರಮವಾಗಿ ಆಕ್ರಮಿಸಿ, ಸರ್ಕಾರಿ ಸ್ವತ್ತೆಂದು ಗೊತ್ತಿದ್ದು ಹೊಂದಿದ್ದರೇ, ಪರಂತು ಈ ಮೇಲ್ಕಂಡ ಉಪಬಂಧವು ಜಮ್ಮಾ ಕೊಡಗು ಜಿಲ್ಲೆಯಲ್ಲಿನ ಭಾನೆ ಸ್ವತ್ತುಗಳು ಮತ್ತು ಕಲಮು 94ಎ, 94ಬಿ ಮತ್ತು 94ಸಿ ರಡಿಯಲ್ಲಿ ಸ್ಥಾಪಿಸಲಾದ ಸಮಿತಿಗಳ ಮುಂದೆ ಕ್ರಮಬದ್ಧಗೊಳಿಸಲು…

Read More

ಬೆಂಗಳೂರು: ನಗರದ ಮೆಜೆಸ್ಟಿಕ್ ನಲ್ಲಿ ಆಂಧ್ರ ಪ್ರದೇಶ ಸಾರಿಗೆ ಸಂಸ್ಥೆಗೆ ಸೇರಿದಂತೆ ಬಸ್ ಹರಿದು ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವಂತ ಘಟನೆ ನಡೆದಿದೆ. ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿರುವಂತ ಟರ್ಮಿನಲ್-3ರಲ್ಲಿ ಆಂಧ್ರ ಸಾರಿಗೆ ಬಸ್ ನಿಲ್ಲಿಸಲಾಗಿತ್ತು. ಈ ಟರ್ಮಿನಲ್-3ರಲ್ಲಿ ಆಂಧ್ರ ಸಾರಿಗೆ ಬಸ್ ಗೆ ಒರಗಿ ಬೆಳಗಾವಿ ಜಿಲ್ಲೆಯ ಖಾನಾಪುರದ ಭೂಷಣ್ ಪಾಟೀಲ್(30) ಎಂಬಾತ ನಿಂತಿದ್ದನು. ಬಸ್ಸಿಗೆ ಒರಗಿ ನಿಂತಿರುವಂತ ಭೂಷಣ್ ಪಾಟೀಲ್ ಗಮನಿಸದಂತ ಆಂಧ್ರ ಸಾರಿಗೆ ಸಂಸ್ಥೆಯ ಬಸ್ ಚಾಲಕ ಬಸ್ ಅನ್ನು ಚಾಲನೆ ಮಾಡಿಕೊಂಡು ಹೊರಟಾಗ ಕಳಗೆ ಬಿದ್ದಂತ ಆತನ ಮೇಲೆ ಬಸ್ ಹರಿದಿದೆ. ಈ ಹಿನ್ನಲೆಯಲ್ಲಿ ಭೂಷಣ್ ಪಾಟೀಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಚಾಮರಾಜನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/over-15-labourers-feared-trapped-in-assam-coal-mine-flooded/ https://kannadanewsnow.com/kannada/list-of-winners-of-state-level-youth-festival-competition-announced/

Read More