Subscribe to Updates
Get the latest creative news from FooBar about art, design and business.
Author: kannadanewsnow09
ಮಂಡ್ಯ: ಜಿಲ್ಲೆಯ ಮದ್ದೂರಿನ ಶಿವಪುರದ ಧ್ವಜ ಸತ್ಯಾಗ್ರಹ ಸ್ಮಾರಕ ಸೌಧ ಪುನರುಜ್ಜೀವನ ಮಾಡಲು 2 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಆರ್ಥಿಕ ಇಲಾಖೆ ಮುಖ್ಯ ಕಾರ್ಯದರ್ಶಿಗೆ ಆದೇಶಿಸಿದ್ದಾರೆ. ತಾವು ಸಲ್ಲಿಸಿದ ಮನವಿಗೆ ಸಿಎಂ ಸ್ಪಂದಿಸಿ, ಸ್ಮಾರಕದ ನವೀಕರಣಕ್ಕೆ ಕ್ರಮ ವಹಿಸಿದ್ದು, ಸಿದ್ದರಾಮಯ್ಯನವರು ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂದನೆಗಳು ಎಂದು ಮಂಡ್ಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಶಾಸಕ ದಿನೇಶ ಗೂಳಿಗೌಡ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. 1937 ರಲ್ಲಿ ಶಿವಪುರದಲ್ಲಿ ಹೋರಾಟಗಾರರಾದ ಎನ್.ವೀರಣ್ಣ ಗೌಡ, ಕೊಪ್ಪದ ಜೋಗಿ ಗೌಡ, ಸಾಹುಕಾರ ಚೆನ್ನಯ್ಯ ನೇತೃತ್ವದಲ್ಲಿ ನಡೆದಿದ್ದ ಹೋರಾಟದ ನೆನಪಿಗೆ ಅಲ್ಲಿ ಸೌಧ ನಿರ್ಮಾಣ ಮಾಡಲಾಗಿತ್ತು. ಆದರೆ, ಸೌಧ ನಿರ್ವಹಣೆ ಇಲ್ಲದೇ ಹಾಳು ಬಿದ್ದಿವೆ. ಸ್ಮಾರಕದ ಒಳಗಡೆ ಇರುವ ಚಿತ್ರಪಟಗಳು ಹಾಳಾಗಿವೆ. ಉದ್ಯಾನವನ ನಿರ್ವಹಣೆ ಇಲ್ಲದೇ ಸೊರಗಿದೆ. ಸಂಗೀತ ಕಾರಂಜಿ ನೃತ್ಯ ನಿಲ್ಲಿಸಿ ತುಕ್ಕು ಹಿಡಿದಿದೆ. ಸ್ಮಾರಕ ಭವನದ ಒಳಗೆ ಧೂಳು ತುಂಬಿಕೊಂಡಿದೆ. ಭವನದ ಬಾಗಿಲು ಸದಾ ಹಾಕಿಕೊಂಡಿರುವುದರಿಂದ…
ಕೆಎನ್ಎನ್ ಸ್ಪೋರ್ಟ್ಸ್ ಡೆಸ್ಕ್: ಮೊಕಿ ಟ್ರೈನಿಂಗ್ ಬೇಸ್ನಲ್ಲಿ ಮಂಗಳವಾರ (ಸೆಪ್ಟೆಂಬರ್ 17) ನಡೆದ ಫೈನಲ್ನಲ್ಲಿ ಚೀನಾವನ್ನು 1-0 ಅಂತರದಿಂದ ಸೋಲಿಸಿ 2024 ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ಗೆದ್ದ ನಂತರ ಭಾರತೀಯ ಹಾಕಿ ತಂಡ ಇತಿಹಾಸ ನಿರ್ಮಿಸಿದೆ. ನಾಲ್ಕನೇ ಕ್ವಾರ್ಟರ್ನಲ್ಲಿ ನಾಯಕ ಹರ್ಮನ್ಪ್ರೀತ್ ಸಿಂಗ್ ಏಕೈಕ ಗೋಲ್ ಬಾರಿಸಿ ತಂಡದ ಗೆಲುವಿಗೆ ಕಾರಣರಾದರು. ಈ ಹಿಂದೆ 2011, 2016 ಮತ್ತು 2023ರಲ್ಲಿ ಟ್ರೋಫಿ ಎತ್ತಿ ಹಿಡಿದಿದ್ದ ಭಾರತ, ಇತಿಹಾಸದಲ್ಲಿ ಐದನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಟೂರ್ನಿಯಲ್ಲಿ ಎರಡನೇ ಅತ್ಯಂತ ಯಶಸ್ವಿ ತಂಡವೆಂದರೆ ಪಾಕಿಸ್ತಾನ, ಅದು ಮೂರು ಬಾರಿ ಟ್ರೋಫಿಯನ್ನು ಎತ್ತಿಹಿಡಿದಿದೆ. ದಕ್ಷಿಣ ಕೊರಿಯಾ 2021 ರಲ್ಲಿ ಪ್ರಶಸ್ತಿಯನ್ನು ಗೆದ್ದಿತು. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚೀನಾ ಫೈನಲ್ ತಲುಪಿದ್ದು, ಪಂದ್ಯಾವಳಿಯ ಇತಿಹಾಸದಲ್ಲಿ ಅವರ ಅತ್ಯುತ್ತಮ ಅಂತ್ಯವನ್ನು ಸೂಚಿಸುತ್ತದೆ. https://kannadanewsnow.com/kannada/ramanagara-five-members-of-a-family-killed-as-car-rams-into-tree-in-ramanagara/ https://kannadanewsnow.com/kannada/kea-announces-revised-schedule-for-various-exams-including-psi-kset-here-is-the-new-exam-date/
ರಾಮನಗರ: ಮರಕ್ಕೆ ಕಾರು ಡಿಕ್ಕಿಯಾದ ಪರಿಣಾಮ, ಕಾರಿನಲ್ಲಿದ್ದಂತ ಒಂದೇ ಕುಟುಂಬದ ಐವರು ದುರ್ಮರಣ ಹೊಂದಿರುವಂತ ಘಟನೆ ರಾಮನಗರ ಗುಡೇಮಾರನಹಳ್ಳಿಯಲ್ಲಿ ನಡೆದಿದೆ. ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಗುಡೆಮಾರಹನಳ್ಳಿ ಬಳಿಯಲ್ಲಿ ಮರಕ್ಕೆ ಕಾರು ಡಿಕ್ಕಿಯಾಗಿ ಒಂದೇ ಕುಟುಂಬದ ಐವರು ದುರ್ಮರಣಹೊಂದಿರುವುದಾಗಿ ತಿಳಿದು ಬಂದಿದೆ. ಮಾರುತಿ ಎರಿಟಿಗ ಕಾರಿನಲ್ಲಿ ತೆರಳುತ್ತಿದ್ದಂತ ವೇಳೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿಯಾಗಿದೆ. ಈ ಪರಿಣಾಮ ಕಾರಿನಲ್ಲಿ ಇದ್ದಂತ ಐವರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. https://kannadanewsnow.com/kannada/bjp-mla-munirathna-sent-to-14-day-judicial-custody/ https://kannadanewsnow.com/kannada/kea-announces-revised-schedule-for-various-exams-including-psi-kset-here-is-the-new-exam-date/
ಬೆಂಗಳೂರು: ಗುತ್ತಿಗೆದಾರರಿಗೆ ಬೆದರಿಕೆ, ಜಾತಿ ನಿಂದನೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವಂತ ಶಾಸಕ ಮುನಿರತ್ನಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶಿಸಿದೆ. ಇಂದು ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜು ಅವರಿಗೆ ಬೆದರಿಕೆ, ಜಾತಿ ನಿಂದನೆ ಮಾಡಿದಂತ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವಂತ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದಂತ ಕೋರ್ಟ್, 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದೆ. ಬಿಜೆಪಿ ಶಾಸಕ ಮುನಿರತ್ನ ಅವರಿಗೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಶಾಸಕ ಮುನಿರತ್ನ ವಿರುದ್ಧ ಕೇಸ್ ದಾಖಲಾಗಿತ್ತು. ಪೊಲೀಸರು ಅವರನ್ನು ಬಂಧಿಸಿದ್ದರು. ಈ ಬೆನ್ನಲ್ಲೇ ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಅವರ ಜಾಮೀನು ಅರ್ಜಿಯ ವಿಚಾರಣೆ ನಾಳೆ ನಡೆಯಲಿದೆ. https://twitter.com/ANI/status/1836001039985811696 https://kannadanewsnow.com/kannada/arvind-kejriwal-submits-resignation-as-delhi-cm/ https://kannadanewsnow.com/kannada/breaking-sc-stays-bulldozer-operation-across-the-country/
ನವದೆಹಲಿ: ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದರು. ಎಎಪಿ ನಾಯಕಿ ಅತಿಶಿ ಅವರನ್ನು ದೆಹಲಿ ಮುಖ್ಯಮಂತ್ರಿಯಾಗಿ ಘೋಷಿಸಿದ ಸ್ವಲ್ಪ ಸಮಯದ ನಂತರ ಕೇಜ್ರಿವಾಲ್ ಲೆಫ್ಟಿನೆಂಟ್ ಗವರ್ನರ್ ಕಚೇರಿಯಲ್ಲಿ ರಾಜೀನಾಮೆ ಸಲ್ಲಿಸಿದರು. ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಬಂಧನಕ್ಕೊಳಗಾದ ಐದು ತಿಂಗಳ ನಂತರ ಜೈಲಿನಿಂದ ಬಿಡುಗಡೆಯಾದ ಕೂಡಲೇ ಕೇಜ್ರಿವಾಲ್ ತಮ್ಮ ರಾಜೀನಾಮೆಯನ್ನು ಘೋಷಿಸಿದರು. ರಾಷ್ಟ್ರ ರಾಜಧಾನಿಯಲ್ಲಿ ಮುಂಚಿತವಾಗಿ ಚುನಾವಣೆಗೆ ಕರೆ ನೀಡುವ ಮೂಲಕ ಕೇಜ್ರಿವಾಲ್ ರಾಷ್ಟ್ರಕ್ಕೆ ಆಘಾತವನ್ನುಂಟು ಮಾಡಿದರು. ದೆಹಲಿಯ ಜನರು ನನ್ನನ್ನು ಮರಳಿ ಕರೆತಂದ ನಂತರವೇ ನಾನು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತೇನೆ ಎಂದು ಹೇಳಿದರು. https://twitter.com/ANI/status/1835997363049005496 https://kannadanewsnow.com/kannada/is-rs-24000-scholarship-available-for-all-fatherless-children-heres-the-real-truth-of-the-viral-news/ https://kannadanewsnow.com/kannada/kea-announces-revised-schedule-for-various-exams-including-psi-kset-here-is-the-new-exam-date/
ಬೆಂಗಳೂರು: ಕೇಂದ್ರ ಪುರಸ್ಕೃತ ಪ್ರಾಯೋಜಕತ್ವ ಯೋಜನೆಯು ಎಲ್ಲಾ ತಂದೆ ಇಲ್ಲದ ಮಕ್ಕಳಿಗೆ ಸ್ಕಾಲರ್ಶಿಪ್ ಅನ್ವಯವಾಗುವುದಿಲ್ಲ. ಈ ಯೋಜನೆಯಲ್ಲಿ ಫಲಾನುಭವಿಯಾಗಲು ನಿರ್ದಿಷ್ಟ ಮಾನದಂಡಗಳ ಮೂಲಕ ಮಾತ್ರ ಸಾಧ್ಯವಾಗುತ್ತದೆ. ಹಾಗಾದ್ರೇ ತಂದೆಯಿಲ್ಲದ ಮಕ್ಕಳಿಗೆ 24000 ಸ್ಕಾಲರ್ ಶಿಪ್ ಲಭ್ಯವಿದ್ಯಾ ಅಥವಾ ಇಲ್ಲವೇ ಎನ್ನುವ ವೈರಲ್ ಸುದ್ದಿಯ ಅಸಲಿ ಸತ್ಯದ ಬಗ್ಗೆ ಮುಂದೆ ಓದಿ. ತಂದೆಯಿಲ್ಲದ ಮಕ್ಕಳ ಖಾತೆಗೆ ವರ್ಷಕ್ಕೆ 24000/- ಸ್ಕಾಲರ್ಶಿಪ್ ಸೌಲಭ್ಯವಿದ್ದು, ಜನಸಾಮಾನ್ಯರಿಗೆ ಈ ವಿಚಾರ ತಿಳಿದೆ ಇಲ್ಲ. ಆದುದರಿಂದ ತಮಗೆ ಗೊತ್ತಿರುವ ಯಾರಾದರೂ ತಂದೆ ಇಲ್ಲದ ಮಕ್ಕಳಿದ್ದಲ್ಲಿ ಅವರ ಪೋಷಕರಿಗೆ ಕೂಡಲೇ ಅರ್ಜಿ ಸಲ್ಲಿಸಲು ತಿಳಿಸಿ ಎಂದು ಅಧಿಕೃತ ಸಹಿ ಇಲ್ಲದ ಅರ್ಜಿಯು ಸಾಮಾಜಿಕ ಜಾಲತಾಣಗಳ ಮುಖಾಂತರ ಹರಿದಾಡುತ್ತಿದ್ದು, ಈ ಸುದ್ದಿಯು “ಸುಳ್ಳುಸುದ್ದಿ”ಯಾಗಿದೆ. ಈ ಯೋಜನೆಯಲ್ಲಿ ನಿರ್ದಿಷ್ಟ ಮಾನದಂಡಗಳು ಅನ್ವಯವಾಗುವ ಮಕ್ಕಳಿಗೆ ಮಾತ್ರ ಸ್ಕಾಲರ್ಶಿಪ್ ಲಭಿಸುತ್ತದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಯಾರಿಗೆಲ್ಲ ಸ್ಕಾಲರ್ ಶಿಪ್ ಲಭ್ಯ? ಈ ಯೋಜನೆಯಲ್ಲಿ ಮಕ್ಕಳ ಪಾಲನಾ…
ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಸೋಮವಾರದಂದು ವಿವಿಧೆಡೆ ಪ್ರತಿಷ್ಠಾಪಿಸಿದ್ದಂತ ಗಣೇಶ ಮೂರ್ತಿಯನ್ನು ಮೆರಣಿಗೆಯ ಮೂಲಕ ಕೊಂಡೊಯ್ದು ವಿಸರ್ಜಿಸಲಾಯಿತು. ಇದೇ ವೇಳೆ ಸಾಗರದ ವಿನೋಬಾ ಯುವಕ ಸಂಘದ 62ನೇ ಗಣೇಶೋತ್ಸವ ಸಮಾರೋಪ ಸಮಾರಂಭದ ವೇಳೆ ನಗರಸಭಾ ಸದಸ್ಯ ವಿ.ಶಂಕರ್ ಅವರಿಗೆ ಸನ್ಮಾನಿಸಲಾಯಿತು. ಸಾಗರದ ವಿನೋಬಾ ಯುವಕ ಸಂಘ, ವಿನೋಬಾ ಕಲಾವಿದರು (ರಿ.) ಇವರ 62ನೇ ಗಣೇಶೋತ್ಸವದ ಸಮಾರೋಪ ಸಮಾರಂಭದಲ್ಲಿ ನಗರಸಭಾ ಸದಸ್ಯರಾದ ವಿ. ಶಂಕರ್, ಕರಾಟೆ ಪಟು ಕೀರ್ತನಾ ಎ ಗೌಡರ್, ಶಿಕ್ಷಕರಾದ ಎಂ. ಸತ್ಯ ನಾರಾಯಣ ಸೇರಿದಂತೆ, ಹಿರಿಯ ಸದಸ್ಯರಾದ ಕೃಷ್ಣ ಮೂರ್ತಿ ಎನ್ ಶೇಟ್, ಹಿರಿಯ ಸದಸ್ಯರಾದ ಜಗನ್ನಾಥ ಎನ್ ಶೇಟ್ ರವರನ್ನು ಸನ್ಮಾನಿಸಲಾಯಿತು. ನಿತ್ಯಾನಂದ ಶೆಟ್ಟಿ, ರವಿ ಉಡುಪ, ಉಮೇಶ್ ಚೌಟಗಿ, ಕೆ. ಶ್ರೀಧರ, ಗಣಪತಿ ಅಪ್ಪಾಚಾರ್, ವಿನಾಯಕ ಗುಡಿಗಾರ್, ಜನಾರ್ದನ ಆಚಾರಿ, ಎಂ. ಆರ್. ಮಹೇಶ್ ಮೊದಲಾದ ವರುಷ ಹಾಜರಿದ್ದರು. https://kannadanewsnow.com/kannada/swachhta-pakhwada-fortnightly-campaign-launched-by-mysuru-division-of-south-western-railway/ https://kannadanewsnow.com/kannada/kea-announces-revised-schedule-for-various-exams-including-psi-kset-here-is-the-new-exam-date/
ಮೈಸೂರು: ಇಂದು, ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಎರಡು ವಾರಗಳ ಅವಧಿಯ ಸ್ವಚ್ಛತಾ ಅಭಿಯಾನವನ್ನು ಪ್ರಾರಂಭಿಸಿದ್ದು, ಇದು 17ನೇ ಸೆಪ್ಟೆಂಬರ್ 2024 ರಿಂದ 1 ಅಕ್ಟೋಬರ್ 2024 ರವರೆಗೆ ನಡೆಯುತ್ತದೆ. ಈ ಬಗ್ಗೆ ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಮತ್ತು ಪಿಆರ್ ಓ ಆಗಿರುವಂತ ಗಿರೀಶ್ ಧರ್ಮರಾಜ್ ಕಲಗೊಂಡ ಅವರು ಮಾಹಿತಿ ಹಂಚಿಕೊಂಡಿದ್ದು, ಇಂದು, ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಎರಡು ವಾರಗಳ ಅವಧಿಯ ಸ್ವಚ್ಛತಾ ಅಭಿಯಾನವನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಕಾರ್ಯಕ್ರಮವನ್ನು ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್ ಅವರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಛೇರಿಯ ಆವರಣದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸ್ವಚ್ಛತಾ ಪ್ರತಿಜ್ಞೆ ಬೋಧಿಸುವ ಮೂಲಕ ಪ್ರಾರಂಭಿಸಿದರು. ನಂತರ ಮೈಸೂರಿನ ರೈಲ್ವೆ ಆಸ್ಪತ್ರೆಯಲ್ಲಿ ಸಸಿಗಳನ್ನು ನೆಡಲಾಯಿತು. 17ನೇ ಸೆಪ್ಟೆಂಬರ್ 2024 ರಂದು ಪ್ರಾರಂಭವಾದ ವ್ಯಾಪಕವಾದ ಸ್ವಚ್ಛತಾ ಸೇವಾ ಅಭಿಯಾನದ ಭಾಗವಾಗಿ, ಈ ಉಪಕ್ರಮವು ರೈಲ್ವೆ ನಿಲ್ದಾಣಗಳು, ರೈಲುಗಳು, ಕಛೇರಿಗಳು ಮತ್ತು ಇತರ ರೈಲ್ವೆ ಆವರಣಗಳಲ್ಲಿ ಸ್ವಚ್ಛತೆಯನ್ನು…
ಕಲಬುರ್ಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಛೇರಿ, ಕಲಬುರಗಿಯಲ್ಲಿ ಕರ್ನಾಟಕ ಸರ್ಕಾರದ ಮಾನ್ಯ ಸಾರಿಗೆ ಹಾಗೂ ಮುಜರಾಯಿ ಖಾತೆ ಸಚಿವರು ಹಾಗೂ ಅಧ್ಯಕ್ಷರು ಕ.ಕ.ರಾ.ಸಾ.ನಿಗಮ ರಾಮಲಿಂಗರೆಡ್ಡಿ ರವರು ಮತ್ತು ನಿಗಮದ ವ್ಯವಸ್ಥಾಪಕ ನಿರ್ದೇಶಕರವರಾದ ಎಂ.ರಾಚಪ್ಪರವರು ನಿಗಮದ ಆಂತರಿಕ ಗುಂಪು ವಿಮಾ ಯೋಜನೆ ಅಡಿ ಸದಸ್ಯರಾಗಿ ಸೇವಾ ಅವಧಿಯಲ್ಲಿ ನಿಧನಗೊಂಡಿರುವ ಬೀದರ ವಿಭಾಗ-05, ವಿಜಯಪೂರ ವಿಭಾಗ-04, ಕಲಬುರಗಿ ವಿಭಾಗ-02 ಹಾಗೂ ರಾಯಚೂ ವಿಭಾಗ-03 ಒಟ್ಟು 14 ಮೃತ ನೌಕರರ ನಾಮನಿರ್ದೇಶಿತರಿಗೆ ತಲಾ ರೂ.10.00ಲಕ್ಷಗಳಂತೆ ಒಟ್ಟು 14 ಜನರಿಗೆ ರೂ.1.40 ಕೋಟಿಗಳ ಪರಿಹಾರ ಮೊತ್ತದ ಧನಾದೇಶಗಳನ್ನು ವಿತರಿಸಿದರು. ಸದರಿ ಧನಾದೇಶಗಳನ್ನು ವಿತರಿಸಿ ಮಾತಾನಾಡಿದ ಸನ್ಮಾನ್ಯ ಸಾರಿಗೆ ಹಾಗೂ ಮುಜಾರಾಯಿ ಸಚಿವರು ಕ.ಕ.ರ.ಸಾ.ನಿಗಮವು ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಆಂತರಿಕ ಗುಂಪು ವಿಮ ಯೋಜನೆ ಅಡಿ ಸದಸ್ಯರಾಗಿ ಸೇವಾ ಅವಧಿಯಲ್ಲಿ ನಿಧನಗೊಂಡ ಸಿಬ್ಬಂದಿಯವರ ನಾಮನಿರ್ದೇಶಿತರಿಗೆ ರೂ.10.00 ಲಕ್ಷ ಪರಿಹಾರ ವಿತರಿಸುವ ಯೋಜನೆಯನ್ನು ರೂಪಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಹಾಗೂ ಪರಿಹಾರ ಮೊತ್ತವನ್ನು ಮಕ್ಕಳ ಶಿಕ್ಷಣ…
ಪಶ್ಚಿಮ ಬಂಗಾಳ: ಕೋಲ್ಕತ್ತಾದ ನೂತನ ಪೊಲೀಸ್ ಆಯುಕ್ತರಾಗಿ ಮನೋಜ್ ಕುಮಾರ್ ವರ್ಮಾ ಅವರನ್ನು ನೇಮಕ ಮಾಡಲಾಗಿದೆ. ಆರ್ಜಿ ಕಾರ್ ಬಿಕ್ಕಟ್ಟನ್ನು ಪರಿಹರಿಸಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಭಟನಾನಿರತ ವೈದ್ಯರನ್ನು ಭೇಟಿಯಾದ ನಂತರ ಮತ್ತು ವೈದ್ಯರು ಮುಂದಿಟ್ಟ ಹೆಚ್ಚಿನ ಬೇಡಿಕೆಗಳಿಗೆ ಒಪ್ಪಿದ್ದರಿಂದ ಕೋಲ್ಕತಾದ ಮಾಜಿ ಪೊಲೀಸ್ ಆಯುಕ್ತ ವಿನೀತ್ ಗೋಯಲ್ ಮತ್ತು ಇತರ ಇಬ್ಬರನ್ನು ವಜಾಗೊಳಿಸಿದ ನಂತರ ಈ ಬೆಳವಣಿಗೆ ನಡೆದಿದೆ. ಏತನ್ಮಧ್ಯೆ, ವಿನೀತ್ ಕುಮಾರ್ ಗೋಯಲ್ ಅವರನ್ನು ಪಶ್ಚಿಮ ಬಂಗಾಳದ ಎಸ್ಟಿಎಫ್ನ ಎಡಿಜಿ ಮತ್ತು ಐಜಿಪಿಯಾಗಿ ನೇಮಿಸಲಾಗಿದೆ. ಕಳೆದ ತಿಂಗಳು ಕೋಲ್ಕತಾದ ಆರ್ಜಿ ಕಾರ್ ಆಸ್ಪತ್ರೆಯಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ತರಬೇತಿ ವೈದ್ಯರಿಗೆ ನ್ಯಾಯ ಕೋರಿ ವೈದ್ಯರು ಆಗಸ್ಟ್ 10 ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಮಾಜಿ ಪೊಲೀಸ್ ಆಯುಕ್ತ ವಿನೀತ್ ಗೋಯಲ್, ವೈದ್ಯಕೀಯ ಶಿಕ್ಷಣ ನಿರ್ದೇಶಕ (ಡಿಎಂಇ) ಕೌಸ್ತವ್ ನಾಯಕ್ ಮತ್ತು ಉತ್ತರ ಕೋಲ್ಕತಾ ಜಿಲ್ಲಾಧಿಕಾರಿ ಅಭಿಷೇಕ್ ಗುಪ್ತಾ ಮತ್ತು ಆರೋಗ್ಯ ಸೇವೆಗಳ ನಿರ್ದೇಶಕ ದೇಬಶಿಶ್ ಹಲ್ದಾರ್ ಅವರನ್ನು ಆಯಾ ಹುದ್ದೆಗಳಿಂದ ತೆಗೆದುಹಾಕಲಾಗುವುದು…