Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ನಾಳೆಯಿಂದ ಎರಡು ದಿನಗಳ ಕಾಲ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಕರ್ನಾಟಕ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಚಿಕ್ಕೋಡಿಯಲ್ಲಿ ಬೂತ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಈ ಕುರಿತಂತೆ ಬಿಜೆಪಿಯಿಂದ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶ್ರೀ ಜಗತ್ ಪ್ರಕಾಶ್ ನಡ್ಡಾ ಅವರು ನಾಳೆ, ಮಾರ್ಚ್ 4, 2024 ರಿಂದ ಎರಡು ದಿನಗಳ (ಸೋಮವಾರ ಮತ್ತು ಮಂಗಳವಾರ) ಪ್ರವಾಸಕ್ಕಾಗಿ ಕರ್ನಾಟಕಕ್ಕೆ ಆಗಮಿಸಲಿದ್ದು, ಅಲ್ಲಿ ಅವರು ಅನೇಕ ಸಾರ್ವಜನಿಕ ಮತ್ತು ಸಾಂಸ್ಥಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದಿದೆ. ಈ ವಾಸ್ತವ್ಯದ ವೇಳೆ ಅವರು ಚಿಕ್ಕೋಡಿಯಲ್ಲಿ ಬೂತ್ ಕಾರ್ಯಕರ್ತರ ಸಮಾವೇಶ ನಡೆಸಲಿದ್ದು, ಬೆಳಗಾವಿಯಲ್ಲಿ ಸ್ವನಿಧಿ ಯೋಜನೆಯ ಫಲಾನುಭವಿಗಳು ಮತ್ತು ಕಾರ್ಯಕರ್ತರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದಿದೆ. ನಡ್ಡಾ ಅವರು ಮಾರ್ಚ್ 04 ರ ಸೋಮವಾರ ರಾತ್ರಿ 08:30 ಕ್ಕೆ ಕರ್ನಾಟಕದ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಅಲ್ಲಿ ಅವರಿಗೆ ವಿಮಾನ ನಿಲ್ದಾಣದ ಹೊರಗೆ ಪಕ್ಷದ ಹಿರಿಯ ಮುಖಂಡರು ಮತ್ತು ಪಕ್ಷದ…
ಬೆಂಗಳೂರು: ರಾಜ್ಯಾಧ್ಯಂತ ಇಂದು ಪಲ್ಸ್ ಪೋಲಿಯೋ ಅಭಿಯಾನ ನಡೆಯಿತು. 0-5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಲಸಿಕೆಯನ್ನು ಹಾಕಲಾಯಿತು. ಇಂದಿನ ಪಲ್ಸ್ ಪೋಲಿಯೋ ಅಭಿಯಾನ ಯಶಸ್ವಿಯಾಗಿದ್ದು ಬರೋಬ್ಬರಿ 60,41,483 ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಮಾರ್ಚ್.3ರ ಇಂದು ನಡೆದಂತ ಪಲ್ಸ್ ಪೋಲಿಯೋ ಅಭಿಯಾನ ಯಶಸ್ವಿಯಾಗಿ ನಡೆದಿದೆ. 62,85,880 ಟಾರ್ಗೆಟ್ ಹೊಂದಲಾಗಿತ್ತು. ಇದರಲ್ಲಿ 60,41,483 ಮಕ್ಕಳಿಗೆ ಪೋಲಿಯೋ ಲಸಿಕೆಯನ್ನು ಮೊದಲ ದಿನವೇ ಹಾಕಲಾಗಿದೆ ಎಂದಿದೆ. ವಿಜಯಪುರ ಜಿಲ್ಲೆಯಲ್ಲಿ 1,43,654 ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ 1,06,789, ಚಿಕ್ಕಮಗಳೂರು 75,089, ಬೆಂಗಳೂರು ಗ್ರಾಮಾಂತರ 1,00,050, ಶಿವಮೊಗ್ಗ 1,17,957 ಮಕ್ಕಳು ಸೇರಿದಂತೆ 60,41,483 ಮಕ್ಕಳಿಗೆ ಇಂದು ಪಲ್ಸ್ ಪೋಲಿಯೋ ಹನಿಯನ್ನು ಹಾಕಲಾಗಿದೆ. ಶೇ.96ರಷ್ಟು ಟಾರ್ಗೆಟ್ ಮೊದಲ ದಿನವೇ ರೀಚ್ ಆಗಿದೆ ಎಂದು ತಿಳಿಸಿದೆ. https://kannadanewsnow.com/kannada/sumalatha-ambareesh-i-will-get-100-bjp-jds-alliance-ticket-in-mandya/ https://kannadanewsnow.com/kannada/bharat-shakti-war-game-pm-modi-to-attend-mega-military-exercise-in-pokhran-ahead-of-lok-sabha-elections/
ಶಿವಮೊಗ್ಗ: ಇಂದು ಪಲ್ಸ್ ಪೊಲೀಯೋ ಅಭಿಯಾನ. ಇಡೀ ದಿನ 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪಲ್ಸ್ ಪೊಲೀಯೋ ಹಾಕಬೇಕು. ಮಿಸ್ ಆದಂತ ಮಕ್ಕಳಿಗೆ ನಾಳೆ ಮನೆ ಮನೆಯ ಭೇಟಿಯ ಮೂಲಕ ಹಾಕಬೇಕು. ಆದ್ರೇ ಇಲ್ಲೊಂದು ಅಂಗನವಾಡಿಯವರು ಮಾತ್ರ ಮಧ್ಯಾಹ್ನಕ್ಕೆ ಬೀಗ ಜಡಿದುಕೊಂಡು ಮನೆಗೆ ಹೋಗಿರೋ ಆರೋಪ ಕೇಳಿ ಬಂದಿದೆ. ಸಾಗರ ತಾಲೂಕಿನ ಕರೂರು ಹೋಬಳಿಯ ಶಂಕಣ್ಣ ಶ್ಯಾನುಬೋಗ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಳೂರು ಗ್ರಾಮದಲ್ಲಿರುವಂತ ಅಂಗನವಾಡಿ ಕೇಂದ್ರದ ಸಿಬ್ಬಂದಿಯೇ ಹೀಗೆ ಮಧ್ಯಾಹ್ನಕ್ಕೆ ಬೀಗ ಜಡಿದುಕೊಂಡು ತೆರಳಿರುವಂತ ಸಿಬ್ಬಂದಿಗಳಾಗಿದ್ದಾರೆ. ಮಧ್ಯಾಹ್ನಕ್ಕೆ ಅಂಗನವಾಡಿ ಕೇಂದ್ರಕ್ಕೆ ಬೀಗ ಮಳೂರು ಗ್ರಾಮದಲ್ಲಿರುವಂತ ಅಂಗನವಾಡಿ ಕೇಂದ್ರಕ್ಕೆ ಮಧ್ಯಾಹ್ನ 1 ಗಂಟೆಯ ವೇಳೆಗೆ ಪೋಷಕರು ಮಕ್ಕಳೊಂದಿಗೆ ತೆರಳಿದರೇ ಬಾಗಿಲು ಹಾಕಿದೆ. ಇಡೀ ದಿನ 5 ವರ್ಷದೊಳಗಿನ ಮಕ್ಕಳಿಗೆ ಇಂದು ತಪ್ಪದೇ ಪಲ್ಸ್ ಪೊಲೀಯೋ ಹಾಕಬೇಕಿದ್ದಂತ ಸಿಬ್ಬಂದಿ ಮಾತ್ರ ಮಧ್ಯಾಹ್ನವೇ ಬೀಗ ಜಡಿದಿದ್ದು ಕಂಡು ಪೋಷಕರು ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ. ಮಳೂರು ಅಂಗನವಾಡಿ ಕೇಂದ್ರದ ಅಂಗನವಾಡಿ ಶಿಕ್ಷಕಿ, ಸಹಾಯಕಿಯರ ಬೇಜಾವಬ್ದಾರಿ ನಡೆಯನ್ನು ಕಂಡಂತ…
ಮಂಗಳೂರು: ಜಿಲ್ಲೆಯ ಪಣಂಬೂರು ಬೀಚ್ ನಲ್ಲಿ ಮೂವರು ಯುವಕರು ನೀರುಪಾಲಾಗಿರೋದಾಗಿ ತಿಳಿದು ಬಂದಿದೆ. ಅವರ ಪತ್ತೆಗಾಗಿ ಮೀನುಗಾರರು ಹಾಗೂ ಜೀವರಕ್ಷಕ ದಳದಿಂದ ಶೋಧಕಾರ್ಯ ನಡೆಸಲಾಗುತ್ತಿದೆ. ಮಂಗಳೂರು ಹೊರವಲಯದ ಪಣಂಬೂರು ಬೀಚ್ ನಲ್ಲಿ ಇಂದು ಈಜುವುದಕ್ಕೆ ತೆರಳಿದ್ದಂತ ಮೂವರು ಯುವಕರು ನೀರುಪಾಲಾಗಿದ್ದಾರೆ. ಮೃತರನ್ನು ಮಿಲನ್(20), ಲಿಖಿತ್(18) ಹಾಗೂ ನಾಗರಾಜು(24) ಎಂಬುದಾಗಿ ತಿಳಿದು ಬಂದಿದೆ. ಡಿಲಿವರಿ ಬಾಯ್ ಆಗಿ ಮಿಲನ್ ಕೆಲಸ ಮಾಡುತ್ತಿದ್ದರೇ, ಕೈಕಂಬದ ಖಾಸಗಿ ಕಾಲೇಜಿನಲ್ಲಿ ಪಿಯುಸಿಯನ್ನು ಲಿಖಿತ್ ಅವರು ಓದುತ್ತಿದ್ದರು. ಕಂಪನಿಯೊಂದರಲ್ಲಿ ಸೂಪರ್ ವೈಸ್ ಆಗಿ ನಾಗರಾಜ್ ಕೆಲಸ ಮಾಡುತ್ತಿದ್ದರು. ಈ ಮೂವರು ಸ್ನೇಹಿತರು ಸೇರಿಕೊಂಡು ಪಣಂಬೂರು ಬೀಚ್ ಗೆ ತೆರಳಿದ್ದರು. ಈ ವೇಳೆಯಲ್ಲಿ ಮೂರು ನೀರುಪಾಲಾಗಿದ್ದು, ಅವರ ಪತ್ತೆಗಾಗಿ ಮೀನುಗಾರರು ಹಾಗೂ ಜೀವರಕ್ಷಕ ದಳದಿಂದ ಶೋಧ ಕಾರ್ಯ ನಡೆಸಲಾಗುತ್ತಿದೆ. ಈ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/sumalatha-ambareesh-i-will-get-100-bjp-jds-alliance-ticket-in-mandya/ https://kannadanewsnow.com/kannada/bharat-shakti-war-game-pm-modi-to-attend-mega-military-exercise-in-pokhran-ahead-of-lok-sabha-elections/
ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಅಧೀನ ಸಂಸ್ಥೆಗಳಲ್ಲಿ ಖರೀದಿ ಪ್ರಕ್ರಿಯೆಯನ್ನು ಇ-ಪ್ರೊಕ್ಯೂರ್ಮೆಂಟ್ ಅಥವಾ ಜೆಂ ಪೋರ್ಟಲ್ ಗಳ ಮೂಲಕ ನಿರ್ವಹಣೆ ಮಾಡುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಅದರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಅಧೀನ ಸಂಸ್ಥೆಯ ರೂ. ಒಂದು ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಖರೀದಿ ಪ್ರಕ್ರಿಯೆಯನ್ನು e-procurement ಅಥವಾ GeM portal ನ ಆನ್ ಲೈನ್ ಮೂಲಕ ನಡೆಸಲು ಕೆಟಿಪಿಪಿ ಕಾಯ್ದೆ ಮತ್ತು ನಿಯಮಾವಳಿಗಳಲ್ಲಿ ಸೂಚಿಸಲಾಗಿದೆ ಎಂದಿದ್ದಾರೆ. e-procurement portal ನಲ್ಲಿ ನೊಂದಾಯಿಸಿಕೊಳ್ಳಲು e-procurement ವೆಬ್ ಸೈಟ್ ನಲ್ಲಿ ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಂಡು ಅದರಲ್ಲಿ ಅಡಕಗೊಳಿಸಬೇಕಾದ ದಸ್ತಾವೇಜುಗಳನ್ನು e-procurement portal ಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ +91-8046010000, +91-8068948777 ಗೆ ಸಂಪರ್ಕಿಸಬಹುದು. DSC (Digital Signature Certificate), encryption and Decryption key states aisland ನಿರ್ದೇಶಕರು, e-procurement,…
ಬೆಂಗಳೂರು: ರಾಮೇಶ್ವರ ಕೆಫೆಯಲ್ಲಿ ನಡೆದ ಸ್ಪೋಟದ ಪ್ರಕರಣ ಸಂಬಂದಿಸಿದಂತೆ ನಾನೆಲ್ಲೂ ಹಗುರವಾಗಿ ಮಾತನಾಡಿಲ್ಲ ಎಂಬುದಾಗಿ ಸಚಿವ ಶರಣ ಪ್ರಕಾಶ್ ಪಾಟೀಲ್ ಸ್ಪಷ್ಟ ಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸರ್ಕಾರ ಪ್ರಕರಣದ ಅರಿತು ಸಿರಿಯಸ್ಸಾದ ಕ್ರಮ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದೇನೆ, ಹೊರತು ಯಾವ ಪದ ಪ್ರಯೋಗವೂ ಮಾಡಲಿಲ್ಲ, ಮಾಧ್ಯಮ ಮಿತ್ರರೂ ಸಹ ಸ್ಥಳದಲ್ಲಿಯೇ ಇದ್ದರು, ಅವರ ಪ್ರಶ್ನೆ ವಿಷಯಾಂತರವಾಗಿರುವ ಕಾರಣ ನಾನು ಸರ್ಕಾರವು ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಕ್ರಮ ವಹಿಸಲಾಗಿದೆ ಎಂದು ಹೇಳಿದ್ದೇನೆ ಎಂದರು. ರಾಜ್ಯ ಬಿಜೆಪಿ ಪಕ್ಷ ವಿಧಾನ ಸಭೆ ಚುನಾವಣೆಯಲ್ಲಿ ಸೋತು ಹತಾಶೆಯಾಗಿದೆ. ಕೆಲವೊಂದು ಘಟನೆಗಳನ್ನು ವಿಷಯಾಂತರ ಮಾಡುವುದು ಬಿಜೆಪಿ ಪಕ್ಷ ಮೈಗೂಡಿಸಿಕೊಂಡಿದೆ. ಶಾಂತಿ ಭಂಗ ಮಾಡುವ ಮನಸ್ಥಿತಿಯ ಬಿಜೆಪಿ ಸೌಜನ್ಯವಾಗಿ ನಡೆದುಕೊಳ್ಳಲಿ ಎಂದು ತಿಳಿಸಿದರು. https://kannadanewsnow.com/kannada/sumalatha-ambareesh-i-will-get-100-bjp-jds-alliance-ticket-in-mandya/ https://kannadanewsnow.com/kannada/bharat-shakti-war-game-pm-modi-to-attend-mega-military-exercise-in-pokhran-ahead-of-lok-sabha-elections/
ಬೆಂಗಳೂರು: ನಗರದ ರಾಮೇಶ್ವರಂ ಕೆಫೆಯಲ್ಲಿನ ಸ್ಪೋಟ ಮಾಡಿದ ವ್ಯಕ್ತಿಯ ಮಾಹಿತಿ ಸಿಕ್ಕಿದ್ದೂ, ಶೀಘ್ರವೇ ಬಂಧನ ಮಾಡುವುದಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ಬೆಂಗಳೂರಿನ 11 ಕಡೆಯಲ್ಲಿ ರಾಮೇಶ್ವರಂ ಕೆಫೆ ಹೋಟೆಲ್ ತೆರೆದಿದ್ದಾರೆ. 12ನೇ ಕಡೆ ರಾಮೇಶ್ವರಂ ಕೆಫೆ ಓಪನ್ ಮಾಡುತ್ತಿದ್ದಾರೆ. ಇದನ್ನು ಸಹಿಸಲಾರದವರು ಈ ರೀತಿ ಮಾಡಿರಬಹುದು ಅಂತಿದ್ದಾರೆ ಎಂದರು. ಇದಲ್ಲದೇ ಲೋಕಸಭಾ ಚುನಾವಣೆಯೂ ಬರುತ್ತಿದೆ. ಬೆಂಗಳೂರಿನಲ್ಲಿ ಅನ್ ಸೇವ್ ನಗರ ಮಾಡಬೇಕು ಎಂದು ಹೀಗೆ ಮಾಡಿರಬಹುದು. ಅಲ್ಲದೇ ಬೆಂಗಳೂರು ನಗರಕ್ಕೂ ಹೂಡಿಕೆದಾರರು ಬರುತ್ತಿದ್ದಾರೆ. ಹೀಗೆ ಮಾಡಿದರೇ ಬಂಡವಾಳ ಹಾಕಲು ಬರಲ್ಲ ಅಂತ ಮಾಡಿರಬಹುದು ಎಂದು ಹೇಳಿದರು. ರಾಮೇಶ್ವರಂ ಕೆಫೆ ಪ್ರಕರಣ ಸಂಬಂಧ ಎಲ್ಲಾ ಆಯಾಮಗಳಲ್ಲೂ ತನಿಖೆ ಮಾಡುತ್ತಿದ್ದೇವೆ. ಈಗಾಗಲೇ ಸ್ಪೋಟ ಮಾಡಿದಂತ ಆರೋಪಿಯ ಸುಳಿವು ಸಿಕ್ಕಿದೆ. ಶೀಘ್ರವೇ ಆತನನ್ನು ಬಂಧಿಸುವುದಾಗಿ ತಿಳಿಸಿದರು. https://kannadanewsnow.com/kannada/wtc-india-jump-back-to-no-1-spot-hitman-rohits-captaincy-is-praised/ https://kannadanewsnow.com/kannada/sumalatha-ambareesh-i-will-get-100-bjp-jds-alliance-ticket-in-mandya/
ರಾಮನಗರ: ಜಿಲ್ಲೆಯ ಹಾರೋಹಳ್ಳಿಯ ತಹಶೀಲ್ದಾರ್ ಮೇಲೆ ಲಾರಿ ಹತ್ತಿಸಿ ಕೊಲೆಗೆ ಯತ್ನಿಸಿದಂತ ಘಟನೆ ನಡೆದಿದೆ. ಹೀಗೆ ಕೊಲೆಗೆ ಯತ್ನಿಸಿದಂತ ಲಾರಿ ಚಾಲಕನನ್ನು ತಹಶೀಲ್ದಾರ್ ಚೇಸ್ ಮಾಡಿ ಹಿಡಿದಿರೋದಾಗಿ ತಿಳಿದು ಬಂದಿದೆ. ಫೆಬ್ರವರಿ.29ರಂದು ಗೋಮಾಳ ಜಮೀನಿನಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿರೋ ಬಗ್ಗೆ ರಾಮನಗರ ಜಿಲ್ಲೆಯ ಹಾರೋಹಳ್ಳಿ ತಹಶೀಲ್ದಾರ್ ವಿಜಯಣ್ಣ ಅವರಿಗೆ ದೂರು ಬಂಧಿತ್ತು. ಈ ಮಾಹಿತಿ ಆಧರಿಸಿ, ಸ್ಥಳಕ್ಕೆ ತೆರಳಿ ನೋಡಿದಾಗ ಲಾರಿಯಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ಮಾಡಲಾಗುತ್ತಿತ್ತು. ಇದರನ್ನು ಗಮನಿಸಿದಂತ ಹಾರೋಹಳ್ಳಿ ತಹಶೀಲ್ದಾರ್ ವಿಜಯಣ್ಣ ಲಾರಿ ಚಾಲಕನನ್ನು ನಿಲ್ಲಿಸು ಎಂಬುದಾಗಿ ಸೂಚಿಸಿದ್ದಾರೆ. ಇದನ್ನು ಕಂಡು ಸಿಟ್ಟಾದಂತ ಲಾರಿ ಚಾಲಕ ಅವರ ಮೇಲೆ ಲಾರಿ ಹತ್ತಿಸಿ ಕೊಲೆಗೆ ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಸಿನಿಮೀಯ ರೀತಿಯಲ್ಲಿ ಪಾರಾದಂತ ಅವರು, ಪರಾರಿಯಾಗಲು ಯತ್ನಿಸಿದಂತ ಲಾರಿ ಚಾಲಕನನ್ನು ಚೇಸ್ ಮಾಡಿ ಹಿಡಿದಿದ್ದಾರೆ. ಈ ಸಂಬಂಧ ಹಾರೋಹಳ್ಳಿ ಠಾಣೆಗೆ ತಹಶೀಲ್ದಾರ್ ವಿಜಯಣ್ಣ ದೂರು ನೀಡಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ. ಫೆ.29ರಂದು ನಡೆದಿದ್ದಂತ ಘಟನೆ ಇದೀಗ…
ವಾರಾಹಿ ಅಮ್ಮನವರು ಇಂದು ಅನೇಕ ಜನರು ವ್ಯಾಪಕವಾಗಿ ಪೂಜಿಸುತ್ತಾರೆ. ವರಗಿ ದೇವಿಯನ್ನು ಪಂಚಮುಖಿ ಎಂದೂ ಕರೆಯುತ್ತಾರೆ ಏಕೆಂದರೆ ವರಗಿ ಅಮ್ಮನ್ ಸಪ್ತ ಕನ್ಯೆಯರಲ್ಲಿ ಐದನೆಯವಳು, ರಾಜರಾಜೇಶ್ವರಿಯ ರಕ್ಷಕ ದೇವತೆ ಎಂದು ಅರ್ಥೈಸಬಹುದು. ಅಂತಹ ಪಂಚಮುಖಿ ದೇವಿಯನ್ನು ನಾವು ಯಾವುದೇ ರೀತಿಯಲ್ಲಿ ಪೂಜಿಸಿದರೆ ನಾವು ಅಂದುಕೊಂಡಂತೆ ಆಗುತ್ತದೆ ಎಂಬುದನ್ನು ಈ ಆಧ್ಯಾತ್ಮಿಕ ಪೋಸ್ಟ್ನಲ್ಲಿ ನಾವು ನೋಡಲಿದ್ದೇವೆ. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564. ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು…
ಬೆಂಗಳೂರು: ನಗರದ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ಸಿಸಿಬಿಯಿಂದ ಇಂದು ಸ್ಥಳ ಮಹಜರು ನಡೆಸಲಾಯಿತು. ಈ ಮೂಲಕ ಸ್ಪೋಟಕ ಪ್ರಕರಣ ಸಂಬಂಧ ಮಹತ್ವದ ತನಿಖೆಯನ್ನು ಕೈಗೊಂಡಿದ್ದಾರೆ. ಬೆಂಗಳೂರಿನ ಕುಂದಲಹಳ್ಳಿ ಬಳಿಯ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಕ ಪ್ರಕರಣ ಘಟನೆಯಲ್ಲಿ 10 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ವಿವಿಧ ರಾಜಕೀಯ ನಾಯಕರು ಗಾಯಾಳುಗಳನ್ನು ಭೇಟಿಯಾಗಿ ಸಂತೈಸಿದ್ದರು. ರಾಜ್ಯ ಸರ್ಕಾರದಿಂದ ಗಾಯಾಳುಗಳ ಚಿಕಿತ್ಸೆ ಭರಿಸುವುದಾಗಿ ಘೋಷಣೆ ಕೂಡ ಮಾಡಲಾಗಿತ್ತು. ಇಂದು ಸಿಸಿಬಿಯ ತನಿಖಾಧಿಕಾರಿ ನವೀನ್ ಕುಲಕರ್ಣಿಯವರ ನೇತೃತ್ವದ ತಂಡವು ರಾಮೇಶ್ವರಂ ಕೆಫೆಯ ಮ್ಯಾನೇಜರ್, ಸಿಬ್ಬಂದಿಯ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಸಿದೆ. ಈ ಮೂಲಕ ಸಿಸಿಬಿ ಟೀಂ ನಿಂದ ಸ್ಥಳ ಮಹಜರು ನಡೆಸಲಾಗಿದೆ. https://kannadanewsnow.com/kannada/wtc-india-jump-back-to-no-1-spot-hitman-rohits-captaincy-is-praised/ https://kannadanewsnow.com/kannada/rameswaram-cafe-blast-case-fsl-probe-reveals-2-chemical-blasts/