Author: kannadanewsnow09

ಬೆಂಗಳೂರು: ರಾಜ್ಯ ಸರ್ಕಾರದ ಸುಮಾರು 13,000 ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಿ ಆದೇಶ ಹೊರಡಿಸಲಾಗಿದೆ. ಈ ಮೂಲಕ ಸರ್ಕಾರಿ ನೌಕರರ ಬಹು ದಿನಗಳ ಬೇಡಿಕೆಯನ್ನು ಈಡೇರಿಸಲಾಗಿದೆ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ. ಈ ಕುರಿತಂತೆ ಇಂದು ಎಕ್ಸ್ ಮಾಡಿರುವಂತ ಅವರು, 2006 ಏಪ್ರಿಲ್‌ ಪೂರ್ವ ನೇಮಕಾತಿ ಅಧಿಸೂಚನೆಯಾಗಿ 2006 ರ ನಂತರ ನೇಮಕಾತಿಗೊಂಡ ರಾಜ್ಯ ಸರ್ಕಾರದ ಸುಮಾರು 13,000 ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಿ ಆದೇಶ ಹೊರಡಿಸಲಾಗಿದೆ ಎಂದಿದ್ದಾರೆ. ಚುನಾವಣೆಗೂ ಪೂರ್ವದಲ್ಲಿ ಎನ್.ಪಿ.ಎಸ್ ನೌಕರರು ಮುಷ್ಕರು ಮಾಡುವ ವೇಳೆ ಸ್ಥಳಕ್ಕೆ ಭೇಟಿನೀಡಿ ನಾವು ಅಧಿಕಾರಕ್ಕೆ ಬಂದ ನಂತರ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದೆ, ಕೊಟ್ಟ ಮಾತಿನಂತೆ ಬೇಡಿಕೆ ಈಡೇರಿಸಿ ನುಡಿದಂತೆ ನಡೆದಿದ್ದೇನೆ ಎಂದು ಹೇಳಿದ್ದಾರೆ. ಎಲ್ಲಾ 13,000 ಎನ್.ಪಿ.ಎಸ್ ನೌಕರರ ಕುಟುಂಬಗಳಿಗೆ ನಮ್ಮ ಈ ನಿರ್ಧಾರ ನೆಮ್ಮದಿ ನೀಡಿದೆ ಎಂದು ಭಾವಿಸಿದ್ದೇನೆ ಎಂದು ತಿಳಿಸಿದ್ದಾರೆ. https://twitter.com/CMofKarnataka/status/1750187799960223763 https://kannadanewsnow.com/kannada/legislative-council-chairman-basavaraj-horatti-has-been-added-to-the-limca-book-of-records/ https://kannadanewsnow.com/kannada/wpl-2024-schedule-announced-bengaluru-delhi-to-host-tournament-from-february-23/

Read More

ನವದೆಹಲಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಕಾಂಗ್ರೆಸ್ ನಡುವಿನ ಜಗಳ ಹೆಚ್ಚಾಗಿದೆ. ಭಾರತ್ ಜೋಡೋ ನ್ಯಾಯ್ ಯಾತ್ರೆ ಕೈಗೊಳ್ಳುತ್ತಿರುವ ರಾಹುಲ್ ಗಾಂಧಿ ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ಮತ್ತೊಮ್ಮೆ ಹೇಳಿಕೆ ನೀಡಿದ್ದಾರೆ. ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಬಂಧಿಸಲಾಗುವುದು ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಅಸ್ಸಾಂನಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಕಾಂಗ್ರೆಸ್ನ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಂದರ್ಭದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ರಾಹುಲ್ ಗಾಂಧಿ ಮತ್ತು ಇತರ ಹಲವಾರು ಪಕ್ಷದ ನಾಯಕರ ವಿರುದ್ಧ ಅಸ್ಸಾಂ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಎಫ್ಐಆರ್ ನಂತರ, ರಾಹುಲ್ ಗಾಂಧಿ ಅವರು ಬಿಜೆಪಿ ಆಡಳಿತದ ಅಸ್ಸಾಂ ಸರ್ಕಾರವು “ಎಷ್ಟೇ ಪ್ರಕರಣಗಳನ್ನು ದಾಖಲಿಸಿದರೂ” ಹೆದರುವುದಿಲ್ಲ ಎಂದು ಹೇಳಿದ್ದಾರೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ಗಳ ಅಡಿಯಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ, ಇದು ಕ್ರಿಮಿನಲ್ ಪಿತೂರಿ,…

Read More

ವರದಿ: ವಸಂತ ಬಿ ಈಶ್ವರಗೆರೆ ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ( Karnataka Goverment Employees ) ಬಹುದಿನಗಳ ಬೇಡಿಕೆಯಾದಂತ ಹೊಸ ಪಿಂಚಣಿ ಯೋಜನೆ ( New Pension Scheme-NPS ) ರದ್ದುಗೊಳಿಸಿ, ಹಳೇ ಪಿಂಚಣಿ ಯೋಜನೆ ಸಿಎಂ ಸಿದ್ಧರಾಮಯ್ಯ ( CM Siddaramaiah ) ಗ್ರೀನ್ ಸಿಗ್ನಲ್ ನೀಡಿದ್ದರು. ಈ ಬೆನ್ನಲ್ಲೇ ಇಂದು ರಾಜ್ಯ ಸರ್ಕಾರಿ ನೌಕರರಿಗೆ ಹಳೇ ಪಿಂಚಣಿ ಯೋಜನೆಯನ್ನು ( Old Pension Scheme-OPS ) ಜಾರಿಗೊಳಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಸಂಬಂಧ ಇಂದು ಆರ್ಥಿಕ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ನಡವಳಿಗಳನ್ನು ಹೊರಡಿಸಿದ್ದು, ಅದರಲ್ಲಿ ದಿನಾಂಕ: 01.04.2006 ರಂದು ಹಾಗೂ ತದನಂತರ ಸರ್ಕಾರಿ ಸೇವೆಗೆ ಸೇರಿದ ಎಲ್ಲಾ ಸರ್ಕಾರಿ ನೌಕರರಿಗೆ ನೂತನ ಅಂಶದಾಯಿ ಕೊಡುಗೆ ಯೋಜನೆಯನ್ನು (ರಾಷ್ಟ್ರೀಯ ಪಿಂಚಣಿ ಯೋಜನ ಕಡ್ಡಾಯವಾಗಿ ಜಾರಿಗೊಳಿಸಲಾಗಿದೆ ಎಂದಿದ್ದಾರೆ. ಓದಲಾದ ಕ್ರಮ ಸಂಖ್ಯೆ (2)ರ ಸರ್ಕಾರಿ ಆದೇಶದಲ್ಲಿನ ಸೂಚನೆಗಳನ್ವಯ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಮಾರ್ಗಸೂಚಿಯನ್ನು ರೂಪಿಸುವುದರೊಂದಿಗೆ ಈ…

Read More

ಬೆಂಗಳೂರು: ಉತ್ತರ ಪ್ರದೇಶದ ಅಯೋಧ್ಯೆಯಯ ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪ್ರಾಣ ಪ್ರತಿಷ್ಠಾಪನೆ ಮಾಡಲಾಗಿದೆ. ಈ ಮೂರ್ತಿಯನ್ನು ಕೆತ್ತಿದಂತ ಶಿಲ್ಪಿ ಅರುಣ್ ಯೋಗಿರಾಜ್ ತಾಯ್ನಾಡಿಗೆ ಆಗಮಿಸಿದ್ದಾರೆ. ಬೆಂಗಳೂರಿಗೆ ಆಗಮಿಸಿದಂತ ಅವರನ್ನು ರಾಮ ಭಕ್ತರು ಅದ್ಧೂರಿಯಾಗಿ ಸ್ವಾಗತ ಮಾಡಿದ್ದಾರೆ. ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿರುವಂತ ರಾಮಲಲ್ಲಾ ಮೂರ್ತಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ ಮೂರ್ತಿ ಆಯ್ಕೆಯಾಗಿತ್ತು. ಆ ಬಳಿಕ ಅಯೋಧ್ಯೆಗೆ ಆ ಮೂರ್ತಿಯನ್ನು ಕೊಂಡೊಯ್ದು, ಜನವರಿ.22ರಂದು ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ಪ್ರತಿಷ್ಠಾಪಿಸಿ, ಪ್ರಾಣ ಪ್ರತಿಷ್ಠಾಪನೆಯನ್ನು ಮಾಡಲಾಗಿದೆ. ಈ ಎಲ್ಲಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಂತ ಕನ್ನಡಿಗ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್, ಅಲ್ಲಿಂದ ಇಂದು ಬೆಂಗಳೂರಿಗೆ ವಾಪಾಸ್ ಆಗಿದ್ದಾರೆ. ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಅವರ ಸ್ವಾಗತಕ್ಕೆ ಬಿಜೆಪಿ ನಾಯಕರು, ಕಾರ್ಯಕರ್ತರು, ರಾಮ ಭಕ್ತರು ಸಹಸ್ರ ಸಂಖ್ಯೆಯಲ್ಲಿ ನೆರೆದಿದ್ದರು. ಇದೀಗ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದಂತ ಅವರನ್ನು ಅದ್ದೂರಿಯಾಗಿ ಪುಷ್ಪಮಾಲೆಯಾಗಿ ಸ್ವಾಗತಿಸಿದರು. ಈ ಮೂಲಕ ರಾಮಲಲ್ಲಾ ಮೂರ್ತಿ…

Read More

ನವದೆಹಲಿ: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಲೆ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಸುಪ್ರೀಂ ಕೋರ್ಟ್ ಕೊಲಿಜಿಯಂ ಕಳೆದ ವಾರ ಅವರ ಪದೋನ್ನತಿಗೆ ಶಿಫಾರಸು ಮಾಡಿತ್ತು. ಹೈಕೋರ್ಟ್ ನ್ಯಾಯಾಧೀಶರಲ್ಲಿ, ನ್ಯಾಯಮೂರ್ತಿ ವರಲೆ ಪರಿಶಿಷ್ಟ ಜಾತಿಗೆ ಸೇರಿದ ಹಿರಿಯ ನ್ಯಾಯಾಧೀಶರು ಮತ್ತು ದೇಶಾದ್ಯಂತದ ಹೈಕೋರ್ಟ್ಗಳ ಮುಖ್ಯ ನ್ಯಾಯಮೂರ್ತಿಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಏಕೈಕ ಮುಖ್ಯ ನ್ಯಾಯಮೂರ್ತಿ ಎಂಬ ಅಂಶವನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ತನ್ನ ಹೇಳಿಕೆಯಲ್ಲಿ ಪರಿಗಣಿಸಿತ್ತು. ಅವರು ಹೈಕೋರ್ಟ್ ನ್ಯಾಯಾಧೀಶರ ಅಖಿಲ ಭಾರತ ಜ್ಯೇಷ್ಠತೆಯಲ್ಲಿ ಎಸ್ಎಲ್ ಸಂಖ್ಯೆ 6 ರಲ್ಲಿ ನಿಂತಿದ್ದಾರೆ. ಬಾಂಬೆ ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ಹಿರಿತನದಲ್ಲಿ, ಅವರು ಅತ್ಯಂತ ಹಿರಿಯ ನ್ಯಾಯಾಧೀಶರಾಗಿದ್ದಾರೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಕೊಲಿಜಿಯಂ ಅವರು ಬರೆದ ತೀರ್ಪುಗಳು ಕಾನೂನಿನ ಪ್ರತಿಯೊಂದು ಕ್ಷೇತ್ರದ ವಿವಿಧ ಸಮಸ್ಯೆಗಳನ್ನು ವ್ಯವಹರಿಸುತ್ತದೆ ಎಂದು ಗಮನಿಸಿದೆ. “ಅವರು ಅಸಾಧಾರಣ ನಡವಳಿಕೆ ಮತ್ತು ಸಮಗ್ರತೆಯನ್ನು ಹೊಂದಿರುವ ಸಮರ್ಥ ನ್ಯಾಯಾಧೀಶರಾಗಿದ್ದಾರೆ…

Read More

ಶಿವಮೊಗ್ಗ : ಕುಂಸಿ ಮೆಸ್ಕಾಂ ಉಪವಿಭಾಗ ಕುಂಸಿ ಮತ್ತು ಹಾರ್ನಳ್ಳಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಜ. 25 ರಂದು ಬೆಳಗ್ಗೆ 9.00 ರಿಂದ ಸಂಜೆ 6.00 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ನಾಳೆ ಈ ಪ್ರದೇಶದಲ್ಲಿ ವಿದ್ಯುತ್ ಇರೋದಿಲ್ಲ ಕುಂಸಿ, ಚಿಕ್ಕದಾನವಂದಿ, ದೊಡ್ಡದಾನವಂದಿ, ಜೋರಡಿ, ಬಾಳೆಕೊಪ್ಪ, ತುಪ್ಪೂರು, ಶೆಟ್ಟಿಕೆರೆ, ಕೋಣೆಹೊಸೂರು, ದೊಡ್ಡಿಮಟ್ಟಿ, ಕೊರಗಿ, ಹುಬ್ಬನಹಳ್ಳಿ, ಹಾರ್ನಳ್ಳಿ, ರಾಮನಗರ, ಕೆಸುವಿನಕಟ್ಟೆ, ವಿಠಗೊಂಡನಕೊಪ್ಪ, ವೀರಣ್ಣನಬೆನವಳ್ಳಿ, ಮುದುವಾಲ, ಯಡವಾಲ, ದೇವಬಾಳ, ತ್ಯಾಜವಳ್ಳಿ, ಕೊನಗವಳ್ಳಿ, ಮಲ್ಲಾಪುರ, ಹಿಟ್ಟೂರು, ಸುತ್ತುಕೋಟೆ, ಆಯನೂರು, ರಾಗಿಹೊಸಳ್ಳಿ, ಮಂಡಘಟ್ಟ, ಸಿರಿಗೆರೆ, ಸೂಡೂರು, ಕೂಡಿ, ಮಲೆಶಂಕರ, ದೊಡ್ಡಮತ್ತಲಿ, ಚಿಕ್ಕಮತ್ತಲಿ, ಚನ್ನಹಳ್ಳಿ, ಇಟ್ಟಿಗೆಹಳ್ಳಿ, ಕಲ್ಲುಕೊಪ್ಪ, ತಮ್ಮಡಿಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದ್ದು, ಈ ವ್ಯಾಪ್ತಿಯ ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ನೀಡಿದೆ. ಶಿವಮೊಗ್ಗ ನಗರ ಉಪ ವಿಭಾಗ-2ರ ವ್ಯಾಪ್ತಿಯಲ್ಲಿನ ಮಂಡ್ಲಿ 110/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಇರುವ ಕಾರಣ ಈ ಕೆಳಕಂಡ…

Read More

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆಬ್ರುವರಿ 8 ರಂದು ವಿಧಾನಸೌಧದ ಮುಂಭಾಗದಲ್ಲಿ ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ನಡೆಸಲಿದ್ದು, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಸ್ಥಳದಲ್ಲಿಯೇ ಪರಿಹಾರ ಸೂಚಿಸಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌ ಅವರು ಇಂದು ಪೂರ್ವಸಿದ್ಧತಾ ಸಭೆ ನಡೆಸಿ, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದರು ಅಗತ್ಯ ಸಲಹೆ‌ ಮತ್ತು‌ ಸೂಚನೆಗಳನ್ನು ನೀಡಿದ್ದಾರೆ.‌ ಈ ಸಂದರ್ಭದಲ್ಲಿ ಮಾತನಾಡಿದ ಅವರು ಜನಸ್ಪಂದನ ಕಾರ್ಯಕ್ರಮವನ್ನು ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಬೇಕು. ಮುಖ್ಯಮಂತ್ರಿಯವರು ನಡೆಸುತ್ತಿರುವ ಎರಡನೇ ಜನಸ್ಪಂದನ ಕಾರ್ಯಕ್ರಮ ಇದಾಗಿದ್ದು, ಎಲ್ಲ ಇಲಾಖೆಗಳ ಕಾರ್ಯದರ್ಶಿಗಳು, ಇಲಾಖಾ ಮುಖ್ಯಸ್ಥರು ಹಾಜರಿದ್ದು, ವಿಶೇಷ ಆಸಕ್ತಿ ವಹಿಸಿ ಕುಂದು ಕೊರತೆ ನಿವಾರಣೆಗೆ ಕ್ರಮ ವಹಿಸಬೇಕೆಂದು ತಿಳಿಸಿದರು. ಜನಸ್ಪಂದನ ಕಾರ್ಯಕ್ರಮಕ್ಕೆ ಆಗಮಿಸುವ ವಿಶೇಷಚೇತನರು, ಹಿರಿಯನಾಗರಿಕರಿಗೆ ವಿಶೇಷ ವ್ಯವಸ್ಥೆಗಳನ್ನು ಮಾಡುವಂತೆ ಸೂಚಿಸಿದರು. ಸ್ವಚ್ಛತೆ, ಕುಡಿಯುವ ನೀರು, ಲಘು ಉಪಾಹಾರ, ಊಟದ ವ್ಯವಸ್ಥೆಗಳನ್ನು ಮಾಡುವ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಕಳೆದ ಬಾರಿಯ ಜನಸ್ಪಂದನದಲ್ಲಿ ಸ್ವೀಕರಿಸಿದ ಅರ್ಜಿಗಳ ತ್ವರಿತ ವಿಲೇವಾರಿ ಮಾಡುವ ಬಗ್ಗೆ…

Read More

ನಕ್ಷತ್ರ ಪ್ರಾರಂಭ ಸಮಯ : ಗುರುವಾರ ಹಗಲು 08:15 ಗಂಟೆಯಿಂದ ‌ ‌ ನಕ್ಷತ್ರ ಮುಗಿಯುವ ಸಮಯ : ಶುಕ್ರವಾರ ಹಗಲು 10:27 ಗಂಟೆಯವರೆಗೆ ‌‌ ‌ ‌ ಈ ದಿನ ಗುರು ದತ್ತಾತ್ರೇಯ, ದಕ್ಷಿಣಾಮೂರ್ತಿ, ಬೃಹಸ್ಪತಿ, ರಾಘವೇಂದ್ರ, ಸಾಯಿಬಾಬಾ ಮಂತ್ರ ಅಥವಾ ಸ್ತೋತ್ರ ಗಳನ್ನು ಜಪ – ಪಾರಾಯಣ ಮಾಡಿ. ಈ ದೇವರ ದೇವಸ್ಥಾನಗಳಿಗೆ ಭೇಟಿ ನೀಡಿ ದರ್ಶನ ಪಡೆಯಿರಿ. ‌ ‌ ಜಾತಕದಲ್ಲಿ ಗುರು ಪೀಡಿತನಾಗಿದ್ದರೆ ಅಥವಾ ಬಲಹೀನನಾಗಿದ್ದರೆ ಅಥವಾ ಪ್ರಸ್ತುತ ಗುರುಬಲ ಇಲ್ಲದ ರಾಶಿಗಳು (ಮೇಷ, ವೃಷಭ, ಕಟಕ, ಕನ್ಯಾ, ವೃಶ್ಚಿಕ, ಮಕರ, ಕುಂಭ) ಪರಿಹಾರ ಮಾಡಿಕೊಳ್ಳುವುದು ಪರಿಣಾಮಕಾರಿ. ವಿಶೇಷವಾಗಿ ಮೇಷ, ವೃಷಭ, ಕಟಕ ಮತ್ತು ಮಕರ ರಾಶಿ ಸಂಜಾತರು. ‌ ‌ ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564. ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು…

Read More

ಶಿವಮೊಗ್ಗ : ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು 2023-24ನೇ ಶುಲ್ಕ ಮರುಪಾವತಿ ವಿದ್ಯಾರ್ಥಿವೇತನಕ್ಕಾಗಿ ಅರ್ಹ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಮತ್ತು ಮೆರಿಟ್-ಕಂ-ಮೀನ್ಸ್ ವಿದ್ಯಾರ್ಥಿಗಳಿಂದ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ವಿದ್ಯಾರ್ಥಿಗಳು ಕರ್ನಾಟಕದವರಾಗಿದ್ದು, ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿರಬೇಕು. ಹಿಂದಿನ ವರ್ಷದ ಅಂತಿಮ ಪರೀಕ್ಷೆಯಲ್ಲಿ ವಿದ್ಯಾರ್ಥಿಯು ಕನಿಷ್ಠ 50% ಅಂಕಗಳನ್ನು ಗಳಿಸಿರಬೇಕು. ವಿದ್ಯಾರ್ಥಿಯ ಪಾಲಕರ ಅಥವಾ ಪೋಷಕರ ವಾರ್ಷಿಕ ಆದಾಯ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ರೂ. 2.00 ಲಕ್ಷಗಳಿಗಿಂತ ಮೀರಿರಬಾರದು ಮತ್ತು ಮೆರಿಟ್-ಕಂ-ಮೀನ್ಸ್ ವಿದ್ಯಾರ್ಥಿಗಳಿಗೆ 2.50 ಲಕ್ಷಗಳಿಗಿಂತ ಮೀರಿರಬಾರದು. ಆಸಕ್ತ ಅರ್ಹ ವಿದ್ಯಾರ್ಥಿಗಳು ಅರ್ಜಿಯನ್ನು State Scholarship Portal ನ ವೆಬ್‍ಸೈಟ್ https://ssp.karnataka.gov.in ಅಥವಾ http:// dom.karnataka.gov.in (Directorate of Minorities-GOK) ನ ಮೂಲಕ ಜ.30 ರೊಳಗಾಗಿ ಸಲ್ಲಿಸುವಂತೆ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳ ಕಚೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, 1ನೇ ಮಹಡಿ, ಸತ್ಯಶ್ರೀ ಆರ್ಕೆಡ್, 5ನೇ ಪ್ಯಾರಾಲಾಲ್ ರಸ್ತೆ, ದುರ್ಗಿಗುಡಿ, ದೂ.ಸಂ.: 08182-220206 ನ್ನು ಸಂಪರ್ಕಿಸುವುದು. https://kannadanewsnow.com/kannada/three-feared-dead-as-state-run-bus-collides-with-lorry-in-gadag/…

Read More

ಬೆಂಗಳೂರು: BMTCಯ 171 ಚಾಲಕರಿಗೆ ಅಪಘಾತ ರಹಿತವಾಗಿ ಚಾಲನೆ ಮಾಡಿದ್ದಕ್ಕಾಗಿ, ಇಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಮುಖ್ಯಮಂತ್ರಿ ಚಿನ್ನದ ಪದಕವನ್ನು ವಿತರಿಸಿದರು. ಇಂದು ನಮ್ಮ ಎಲ್ಲಾ ಚಾಲನಾ ಸಿಬ್ಬಂದಿಗಳಿಗೂ ರಾಷ್ಟ್ರೀಯ ಚಾಲಕರ ದಿನಾಚರಣೆಯ ಶುಭಾಶಯಗಳು ತಿಳಿಸುತ್ತಾ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ 171 ಅರ್ಹ ಅಪಘಾತ ರಹಿತ ಚಾಲಕರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ವಿತರಿಸಿದೆ. 25 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿದ 139 ಚಾಲಕರು ಹಿರಿಯ ಚಾಲಕ ಹುದ್ದೆಗೆ ಪದೋನ್ನತಿ ಹೊಂದಿದ್ದು ಸಾಂಕೇತಿಕವಾಗಿ 13 ಚಾಲಕರಿಗೆ ಪದೋನ್ನತಿ ಆದೇಶವನ್ನು ವಿತರಿಸಲಾಯಿತು. 1122 ಅರ್ಹ ಅಪಘಾತ ರಹಿತ ಚಾಲಕರಿಗೆ ಬೆಳ್ಳಿ ಪದಕಕ್ಕೆ ಅರ್ಹರಿದ್ದಾರೆ. ಈ ಸಂದರ್ಭದಲ್ಲಿ ಕಲಾ‌ಕೃಷ್ಣಮೂರ್ತಿ, ಭಾಪೊಸೇ, ನಿರ್ದೇಶಕರು ( ಭದ್ರತಾ & ಜಾಗೃತ) ಹಾಗೂ ಬಿಎಂಟಿಸಿಯ ಹಿರಿಯ ಅಧಿಕಾರಿಗಳು‌, ಸಿಬ್ಬಂದಿಗಳು ಹಾಜರಿದ್ದರು. https://kannadanewsnow.com/kannada/three-feared-dead-as-state-run-bus-collides-with-lorry-in-gadag/ https://kannadanewsnow.com/kannada/139-36-crore-girls-have-travelled-so-far-under-shakti-yojana-minister-laxmi-hebbalkar/

Read More