Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು : ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಗೆ ರಾಜ್ಯಾದ್ಯಂತ 5,14,000 ನೋಂದಣಿಯಾಗಿದ್ದು ಈ ಪೈಕಿ 1,17,000 ಅರ್ಜಿಗಳು ಸ್ವೀಕೃತವಾಗಿವೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ತಿಳಿಸಿದ್ದಾರೆ. ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಹೂಡಿಯಲ್ಲಿರುವ ಕೆಪಿಟಿಸಿಎಲ್‌ನ ಮಾನವ ಸಂಪನ್ಮೂಲ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. “ಪಿಎಮ್ ಸೂರ್ಯ ಘರ್ ಯೋಜನೆಗೆ ಈವರೆಗೆ 5.14 ಲಕ್ಷ ನೋಂದಣಿಯಾಗಿದ್ದು, ಈ ಪೈಕಿ ಸುಮಾರು 1,17,000 ಅರ್ಜಿಗಳು ಸ್ವೀಕೃತವಾಗಿವೆ. ಈ ಯೋಜನೆಯನ್ನು ಕಾರ್ಯಗತಗೊಳಿಸಲು, ಎಮ್ಎನ್‌ಆರ್ ಇ ಪೋರ್ಟಲ್ ನಲ್ಲಿ 353 ಖಾಸಗಿ ಏಜೆನ್ಸಿಗಳು ನೋಂದಾಯಿಸಿಕೊಂಡಿವೆ,” ಎಂದು ಬೆಸ್ಕಾಂ ಎಂಡಿ ವಿವರಿಸಿದರು. “ರಾಜ್ಯಾದ್ಯಂತ ಮನೆಗಳಲ್ಲಿ ಸೌರಶಕ್ತಿಯ ಬಳಕೆಯನ್ನು ಉತ್ತೇಜಿಸಲು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ಸಮರ್ಥ ನಾಯಕತ್ವದಲ್ಲಿ ಯೋಜನೆಯನ್ನು ಉತ್ತೇಜಿಸುವ ಗುರಿ ಹೊಂದಿದ್ದೇವೆ. ಈ ಮೂಲಕ ಸಾಂಪ್ರದಾಯಿಕ ಇಂಧನ ಮೂಲಗಳ ಮೇಲಿನ ಅವಲಂಬನೆಯನ್ನು ಕಡಿಮೆ…
ಬೆಂಗಳೂರು: ಅನ್‌ಬಾಕ್ಸಿಂಗ್ ಬಿಎಲ್‌ಆರ್, ಸರ್ಕಾರದ ಸಹಭಾಗಿತ್ವದಲ್ಲಿ ನಡೆಸುತ್ತಿರುವ “ಬೆಂಗಳೂರು ಹಬ್ಬ”ಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಡಿಸೆಂಬರ್ 15ರವರೆಗೆ ಬೆಂಗಳೂರಿನಾದ್ಯಂತ ಮುಂದುವರೆಯುತ್ತಿದೆ. ನಗರದ ಪರಂಪರೆ, ಸಾಂಸ್ಕೃತಿಕ ವೈಭವ, ನಾಡು-ನುಡಿ, ಸಾಹಿತ್ಯ, ಸಂಗೀತದ ಕಲೆಯನ್ನು ಪ್ರದರ್ಶನಗೊಳ್ಳುವ 500 ಕ್ಕೂ ಅಧಿಕ ಕಾರ್ಯಕ್ರಮಗಳು ಜರುಗುತ್ತಿವೆ. ಈ ಬಾರಿ ಪ್ರಮುಖವಾಗಿ ಫ್ರೀಡಂ ಪಾರ್ಕ್, ಪಂಚವಟಿ, ಬೆಂಗಳೂರು ಅಂತಾರಾಷ್ಟ್ರೀಯ ಕೇಂದ್ರ, ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ (NGMA) ನಂತಹ ಪ್ರಮುಖ ಸ್ಥಳಗಳಲ್ಲಿ ನಡೆಯುತ್ತಿರುವುದು ವಿಶೇಷ. ಫ್ರೀಡಂ ಪಾರ್ಕ್: ಒಂದು ಕಾಲದಲ್ಲಿ ಸೆಂಟ್ರಲ್ ಜೈಲಾಗಿದ್ದ ಈ ಸ್ಥಳವು, ಕ್ರಮೇಣ ಆಸಕ್ತಿದಾಯಕ ಕ್ರಿಯಾಶೀಲತೆಯ ಮೈದಾನವಾಗಿ ಹೊರಹೊಮ್ಮಿದ್ದು, ಕಲಾತ್ಮಕ ಪ್ರದರ್ಶನಗಳೊಂದಿಗೆ ಸಾಂಸ್ಕೃತಿಕ ಅಭಿವ್ಯಕ್ತಿಯನ್ನು ವಿಲೀನಗೊಳಿಸುತ್ತಿದೆ. ಪಂಚವಟಿ: ನೊಬೆಲ್ ಪ್ರಶಸ್ತಿ ಪುರಸ್ಕೃತ ಸರ್.ಸಿ.ವಿ. ರಾಮನ್, ಇತಿಹಾಸ ಮತ್ತು ವೈಜ್ಞಾನಿಕ ಪರಂಪರೆಯಲ್ಲಿ ಮುಳುಗಿದೆ. ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (BIC): ಬೌದ್ಧಿಕ ಪ್ರವಚನ, ಪ್ರದರ್ಶನಗಳು ಮತ್ತು ಪ್ರದರ್ಶನಗಳಿಗೆ ರೋಮಾಂಚಕ ಸ್ಥಳ. ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ (NGMA): ನಗರದ ಪ್ರವರ್ಧಮಾನಕ್ಕೆ ಬರುತ್ತಿರುವ ಕಲಾ ದೃಶ್ಯ…
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಅನಾರೋಗ್ಯದ ಕಾರಣ ಜಾಮೀನು ಪಡೆದಿರುವಂತ ನಟ ದರ್ಶನ್ ಅವರಿಗೆ, ಈಗ ಸರ್ಜರಿ ಮಾಡೋದಕ್ಕೆ ದಿನಾಂಕ ನಿಗದಿ ಪಡಿಸಲಾಗಿದೆ. ನಟ ದರ್ಶನ್ ಅವರಿಗೆ ಡಿಸೆಂಬರ್.11ರಂದು ವೈದ್ಯರು ಸರ್ಜರಿ ಮಾಡಲಿದ್ದಾರೆ ಎಂಬುದಾಗಿ ಅವರ ಪರ ವಕೀಲರು ಹೈಕೋರ್ಟ್ ಗೆ ಮಾಹಿತಿ ನೀಡಿದ್ದಾರೆ. ಇಂದು ನಟ ದರ್ಶನ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಲ್ಲಿ ನಡೆಸಲಾಯಿತು. ಹಿರಿಯ ವಕೀಲ ಸಿವಿ ನಾಗೇಶ್ ಅವರು ದರ್ಶನ್ ಪರ ವಾದ ಮಂಡಿಸಿದರು. ನಟ ದರ್ಶನ್ ಅವರಿಗೆ ಡಿಸೆಂಬರ್.11ರಂದು ಸರ್ಜರಿ ಮಾಡಲಾಗುತ್ತದೆ ಎಂಬುದೈಗಿ ಹೈಕೋರ್ಟ್ ಗೆ ಮಾಹಿತಿ ನೀಡಿದರು.
ಬೆಳಗಾವಿ ಸುವರ್ಣ ವಿಧಾನಸೌಧ : ಅಕ್ರಮ ಪಡಿತರ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದ ವ್ಯಕ್ತಿಗಳ ವಿರುದ್ಧ ಆರೋಪ ಸಾಬೀತಾದಲ್ಲಿ ನ್ಯಾಯಾಲಯದ ಆದೇಶದಂತೆ ಕಾನೂನು ರೀತಿ ಕ್ರಮ ವಹಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತç ಇಲಾಖೆಯ ಸಚಿವರಾದ ಕೆ.ಎಚ್.ಮುನಿಯಪ್ಪ ಹೇಳಿದರು. ಅಕ್ರಮ ಪಡಿತರ ವಿರುದ್ಧ ಸರ್ಕಾರದಿಂದ ವಿಶೇಷ ಕಾರ್ಯಾಚರಣೆ ಪ್ರಕ್ರಿಯೆಯು ಚಾಲ್ತಿಯಲ್ಲಿದೆ ಎಂದು ಇದೇ ಸಂದರ್ಭದಲ್ಲಿ ಸದನಕ್ಕೆ ಅವರು ತಿಳಿಸಿದರು. ವಿಧಾನ ಪರಿಷತನಲ್ಲಿ ಡಿಸೆಂಬರ್ 9ರಂದು ಸದಸ್ಯರಾದ ಟಿ.ಎನ್.ಜವರಾಯಿಗೌಡ, ಐವನ್ ಡಿ ಸೋಜಾ, ಸಿ.ಟಿ.ರವಿ, ಶರವಣ.ಟಿ.ಎ, ನಿರಾಣಿ ರುದ್ರಪ್ರ ಹನುಮಂತಪ್ಪ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವರು ಉತ್ತರಿಸಿದರು. ರಾಜ್ಯಾದ್ಯಂತ ಜನವರಿ-2021 ರಿಂದ ಮೇ 2023ರ ಅವಧಿಯಲ್ಲಿ 3,35,463 ಅನರ್ಹ ಆದ್ಯತಾ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಲಾಗಿದ್ದು, ಇವರಿಂದ ರೂ. 13,51,30,858 ಗಳ ದಂಡ ವಿಧಿಸಿ, ಅನರ್ಹರಿಗೆ ನೀಡಿದ ಸವಲತ್ತುಗಳಿಂದ ಉಂಟಾದ ನಷ್ಟವನ್ನು ಭರಿಸಲು ಸರ್ಕಾರ ಕ್ರಮವಹಿಸಿದೆ. ಆಹಾರ ಇಲಾಖೆಯ ಉಗ್ರಾಣಗಳಿಂದ ಅಕ್ರಮವಾಗಿ ಕಾಳ ಸಂತೆಯಲ್ಲಿ…
ಬೆಂಗಳೂರು: ನಾಳೆಯಿಂದ ಬೆಳಗ್ಗೆ 10 ರಿಂದ ಸಂಜೆ 7ರವರೆಗೆ ವಿಧಾನಸಭೆಯ ಕಲಾಪವನ್ನು ನಡೆಸಲು ಸದನ ಸಮಿತಿಯು ತೀರ್ಮಾನ ಕೈಗೊಂಡಿದೆ. ಈ ಮೂಲಕ ವಿಧಾನಸಭೆಯಲ್ಲಿ ಮಹತ್ವದ ವಿಷಯಗಳ ಚರ್ಚೆಗೆ ಒತ್ತು ನೀಡಲಾಗಿದೆ. ಡಿಸೆಂಬರ್.16ರಂದು ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿಯ ಬಗ್ಗೆ ಚರ್ಚಿಸಲು ವಿಶೇಷ ದಿನವನ್ನು ನಿಗದಿ ಪಡಿಸಲಾಗಿದೆ. ಅಲ್ಲದೇ ನಾಳೆಯಿಂದ ಬೆಳಿಗ್ಗೆ 10 ರಿಂದ ಸಂಜೆ 7 ಗಂಟೆಯವರೆಗೆ ವಿಧಾನಸಭೆಯ ಕಲಾಪ ನಡೆಸಲು ತೀರ್ಮಾನಿಸಲಾಗಿದೆ. ಅಕ್ರಮ ಪಡಿತರ ವಿರುದ್ದ ವಿಶೇಷ ಕಾರ್ಯಾಚರಣೆ: ಕೆ.ಎಚ್.ಮುನಿಯಪ್ಪ ಬೆಳಗಾವಿ ಸುವರ್ಣ ವಿಧಾನಸೌಧ: ಅಕ್ರಮ ಪಡಿತರ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದ ವ್ಯಕ್ತಿಗಳ ವಿರುದ್ಧ ಆರೋಪ ಸಾಬೀತಾದಲ್ಲಿ ನ್ಯಾಯಾಲಯದ ಆದೇಶದಂತೆ ಕಾನೂನು ರೀತಿ ಕ್ರಮ ವಹಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತç ಇಲಾಖೆಯ ಸಚಿವರಾದ ಕೆ.ಎಚ್.ಮುನಿಯಪ್ಪ ಹೇಳಿದರು. ಅಕ್ರಮ ಪಡಿತರ ವಿರುದ್ಧ ಸರ್ಕಾರದಿಂದ ವಿಶೇಷ ಕಾರ್ಯಾಚರಣೆ ಪ್ರಕ್ರಿಯೆಯು ಚಾಲ್ತಿಯಲ್ಲಿದೆ ಎಂದು ಇದೇ ಸಂದರ್ಭದಲ್ಲಿ ಸದನಕ್ಕೆ ಅವರು ತಿಳಿಸಿದರು. ವಿಧಾನ ಪರಿಷತನಲ್ಲಿ ಡಿಸೆಂಬರ್…
ನವದೆಹಲಿ: ತಜ್ಞರ ಸಮಿತಿಯ ಶಿಫಾರಸುಗಳ ಪ್ರಕಾರ ಸಿಯುಇಟಿ ಯುಜಿ ಮತ್ತು ಸಿಯುಇಟಿ ಪಿಜಿ 2025 ರಿಂದ ( CUET UG and CUET PG ) ಪ್ರಮುಖ ಬದಲಾವಣೆಗಳನ್ನು ಕಾಣಲಿವೆ. ಪದವಿಪೂರ್ವ ಮತ್ತು ಸ್ನಾತಕೋತ್ತರ ಕೋರ್ಸ್ಗಳಿಗೆ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (Common University Entrance Test -CUET) ಯಲ್ಲಿ ಮುಂಬರುವ ಬದಲಾವಣೆಗಳ ಪ್ರಕಟಣೆಯನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗ (University Grants Commission -UGC) ಅಧ್ಯಕ್ಷ ಜಗದೀಶ್ ಕುಮಾರ್ ಮಾಡಿದ್ದಾರೆ. ಸಿಯುಇಟಿ ಪ್ರಕ್ರಿಯೆಯನ್ನು ಹೆಚ್ಚಿಸಲು ಯುಜಿಸಿ ಕೆಲಸ ಮಾಡುತ್ತಿದೆ, ವಿಶೇಷವಾಗಿ ಹಿಂದಿನ ವರ್ಷಗಳಲ್ಲಿ ಸವಾಲುಗಳ ನಂತರ. ಪರೀಕ್ಷೆಯ ರಚನೆ, ಕಾಗದದ ಅವಧಿ, ಪಠ್ಯಕ್ರಮದ ಜೋಡಣೆ ಮತ್ತು ಕಾರ್ಯಾಚರಣೆಯ ಲಾಜಿಸ್ಟಿಕ್ಸ್ ಸೇರಿದಂತೆ ವಿವಿಧ ಅಂಶಗಳನ್ನು ಪರಿಶೀಲಿಸಲು ತಜ್ಞರ ಸಮಿತಿಯನ್ನು ರಚಿಸಲಾಯಿತು. ಕ್ಯೂಇಟಿ ರಚನೆ ಮತ್ತು ಲಾಜಿಸ್ಟಿಕ್ಸ್ ನಲ್ಲಿ ಸುಧಾರಣೆಗಳು ವಿಮರ್ಶೆಯು ಹೆಚ್ಚು ವಿದ್ಯಾರ್ಥಿ ಸ್ನೇಹಿ ಅನುಭವವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ ಎಂದು ಕುಮಾರ್ ವಿವರಿಸಿದರು. “ಹಿಂದಿನ ವರ್ಷಗಳ ಪ್ರತಿಕ್ರಿಯೆಯ ಆಧಾರದ ಮೇಲೆ, ಹೆಚ್ಚು…
ಬೆಳಗಾವಿ: ಜೈನ ಧರ್ಮಿಯರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಸದಾ ಬದ್ಧವಾಗಿದೆ. ಸರ್ವ ಧರ್ಮಿಯರನ್ನು ಒಟ್ಟಿಗೆ ಕೊಂಡೊಯ್ಯುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಬೆಳಗಾವಿಯ ಬಸ್ತವಾಡ ಗ್ರಾಮದಲ್ಲಿ ಕರ್ನಾಟಕ ಸಮಸ್ತ ಜೈನ ಸಮಾಜದ ವತಿಯಿಂದ ಸೋಮವಾರ ನಡೆದ ಜೈನ ಸಮಾವೇಶದಲ್ಲಿ ಮಾತನಾಡಿದ ಸಚಿವರು, ಭಾರತದ ಸಂವಿಧಾನ ತುಂಬಾ ಶ್ರೇಷ್ಠವಾದದ್ದು, ಇಲ್ಲಿ ಆಚಾರ ವಿಚಾರಗಳಿಗೆ ತುಂಬಾ ಸ್ವಾತಂತ್ರ್ಯವಿದೆ. ಅಲ್ಪ ಸಂಖ್ಯಾತ ಕೋಟಾದಲ್ಲಿ ಜೈನ ಧರ್ಮಿಯರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು. ಜೈನ ಧರ್ಮದ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳಲಿದೆ ಎಂದು ಸಚಿವರು ಭರವಸೆ ನೀಡಿದರು. ಜೈನರ ಅಹಿಂಸಾ ಪರಮೋ ಧರ್ಮಃ ಎನ್ನುವುದು ಇತರ ಧರ್ಮದವರಿಗೂ ಮಾದರಿ. ಸಂಸ್ಕೃತಿಯಲ್ಲಿ ಶ್ರೇಷ್ಠ ಸಂಸ್ಕೃತಿ ಜೈನ ಧರ್ಮ ಸಂಸ್ಕೃತಿ, ಜೈನ ಧರ್ಮಿಯರು ಶಾಂತಿ ಪ್ರಿಯರು ಎಂದರು. ಈ ವೇಳೆ 108 ರಾಷ್ಟ್ರಸಂತ ಗುಣಧರನಂದಿ ಮಹಾರಾಜರು, ದೇವೇಂದ್ರ ಕೀರ್ತಿ ಭಟ್ಟಾರಕರು, ಭಟಾಕಲಂಕ ಭಟ್ಟಾರಕರು, ಸ್ಚಸ್ತಿಶ್ರೀ…
ಬೆಳಗಾವಿ: ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಟ್ರ್ಯಾಕ್ಟರ್ ರ್ಯಾಲಿಗೆ ಬೆಳಗಾವಿ ಜಿಲ್ಲಾಡಳಿತ ನಿರ್ಬಂಧ ವಿಧಿಸಿದಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಯಾವುದೇ ರ್ಯಾಲಿ, ಹೋರಾಟಗಳಿಗೆ ನಿರ್ಬಂಧ ಹೇರಬಾರದು, ಇದು ಪ್ರಜಾಪ್ರಭುತ್ವ. ಪಂಚಮಸಾಲಿ ಮೀಸಲಾತಿಗಾಗಿ ನಾನು ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದ್ದೇನೆ ಎಂದರು. ಈಗ ಕಬ್ಬಿನ ಸೀಸನ್ ಆಗಿರುವುದರಿಂದ ಟ್ರ್ಯಾಕ್ಟರ್ಗಳು ಹೆಚ್ಚು ಓಡಾಡುತ್ತಿರುತ್ತವೆ. ಅಧಿವೇಶನದ ವೇಳೆ ಯಾವುದೇ ಅಪಘಾತ, ದುರ್ಘಟನೆ ಆಗಬಾರದು ಅಂತಾ ಮುಂಜಾಗ್ರತೆ ದೃಷ್ಟಿಯಿಂದ ಈ ಕ್ರಮ ಕೈಗೊಂಡಿರಬಹುದು ಎಂದು ಸಚಿವರು ಹೇಳಿದರು. ನಾನು ಈಗಾಗಲೇ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಅವರ ಜೊತೆ ಮಾತನಾಡಿದ್ದೇನೆ. ಇಂದು ಸಂಜೆ 4 ಗಂಟೆಗೆ ನಾನು ಸ್ವಾಮೀಜಿಗಳು, ಸಿ.ಸಿ.ಪಾಟೀಲ್, ಅರವಿಂದ್ ಬೆಲ್ಲದ ಸೇರಿದಂತೆ ಎಲ್ಲರೂ ಸಭೆ ನಡೆಸುತ್ತಿದ್ದೇವೆ. ಈ ಸಭೆಯಲ್ಲಿ ಒಂದು ನಿರ್ಣಯ ಕೈಗೊಳ್ಳುತ್ತೇವೆ ಎಂದರು. ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಸಂಬಂಧಪಟ್ಟಂತೆ ನಾನು ಸ್ವಾಮೀಜಿ ಅವರ ಜೊತೆ…
ಬೆಳಗಾವಿ ಸುವರ್ಣವಿಧಾನಸೌಧ : ಶಾಲಾ ಶಿಕ್ಷಣ ಇಲಾಖೆಯಿಂದ ರಾಜ್ಯಮಟ್ಟದ ಪ್ರೌಢಶಾಲಾ ಸಹ ಶಿಕ್ಷಕರ ಒಂದೇ ಜೇಷ್ಠತಾ ಪಟ್ಟಿ ಸಿದ್ದಪಡಿಸಿ, ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಿ, ಸ್ವೀಕೃತವಾಗುವ ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗುವುದು ಮತ್ತು ಪಟ್ಟಿ ಪ್ರಕಟಿಸಿದ ನಂತರ ಪ್ರೌಢಶಾಲಾ ಸಹ ಶಿಕ್ಷಕರಿಗೆ ಬಡ್ತಿ ನೀಡುವ ಪ್ರಕ್ರಿಯೆಯನ್ನು ಬರುವ 2025ರ ಫೆಬ್ರವರಿ ಅಂತ್ಯದೊಳಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್ ಮಧು ಬಂಗಾರಪ್ಪ ಅವರು ಭರವಸೆ ನೀಡಿದರು. ವಿಧಾನ ಪರಿಷತನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಎಸ್.ವಿ.ಸಂಕನೂರ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಉಪನ್ಯಾಸಕರ ಹುದ್ದೆಗೆ ಪದೋನ್ನತಿ ನೀಡಬೇಕೆಂಬುದು ಪ್ರೌಢಶಾಲಾ ಸಹ ಶಿಕ್ಷಕರ ಬಹುದಿನಗಳ ಬೇಡಿಕೆಯಾಗಿದೆ. ಸಂಬಂಧಿಸಿದ ಇಲಾಖೆಯು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಸಂಕನೂರ ಅವರು ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಸಚಿವರಾದ ಮಧು ಬಂಗಾರಪ್ಪ, ಈಗಾಗಲೇ 2013ನೇ ಸಾಲಿನವರೆಗೆ ಪದೋನ್ನತಿ ಪ್ರಕ್ರಿಯೆ ನಡೆಸಲಾಗಿದೆ. ಪದೋನ್ನತಿ ಪ್ರಕ್ರಿಯೆ…
ಬೆಳಗಾವಿ ಸುವರ್ಣಸೌಧ : ಬೆಳಗಾವಿಯ ಸುವರ್ಣ ಸೌಧದಲ್ಲಿ ಸೋಮವಾರ ಆರಂಭವಾದ ಹದಿನಾರನೇ ವಿಧಾನ ಸಭೆಯ 5 ನೇ ಅಧಿವೇಶನದ ಮೊದಲನೆ ದಿನ, ಕಳೆದ ಅಧಿವೇಶನದ ತರುವಾಯ ಹಾಗೂ ಪ್ರಸಕ್ತ ಅಧಿವೇಶನದ ಮುನ್ನ ಅಗಲಿದ ವಿಧಾನ ಸಭೆಯ ಮಾಜಿ ಸದಸ್ಯರು ಹಾಗೂ ನಾಡಿನ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಸಭಾಧ್ಯಕ್ಷ ಯು.ಟಿ.ಖಾದರ್ ಅವರು ವಿಧಾನಸಭೆಯ ಮಾಜಿ ಉಪ ಸಭಾಧ್ಯಕ್ಷ ಹಾಗೂ ಸಚಿವರಾಗಿದ್ದ ಮನೋಹರ ಹನುಮಂತಪ್ಪ ತಹಶೀಲ್ದಾರ್, ಮಾಜಿ ಸಚಿವ ಕೆ.ಹೆಚ್.ಶ್ರೀನಿವಾಸ್, ಮಾಜಿ ಸದಸ್ಯರುಗಳಾದ ಬಸವರಾಜು ಎ.ಎಸ್., ಲಕ್ಷ್ಮೀ ನಾರಾಯಾಣ.ಕೆ ಹಾಗೂ ವೆಂಕಟರೆಡ್ಡಿ ಮುದ್ನಾಳ್ , ಖ್ಯಾತ ಕೈಗಾರಿಕೋದ್ಯಮಿ ರತನ್ ನವಲ್ ಟಾಟಾ ಹಾಗೂ ಕಲಬುರ್ಗಿ ಸೂಫಿ ಸಂತ ಸೈಯದ್ ಶಹಾ ಖುಸ್ರೋ ಹುಸೇನಿ ಅವರ ನಿಧನ ಸಂತಾಪ ಸೂಚನೆ ನಿರ್ಣಯವನ್ನು ಸದನದ ಮುಂದೆ ಮಂಡಿಸಿದರು. ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ಸಂತಾಪ ಸೂಚನೆ ನಿರ್ಣಯದ ಮೇಲೆ ಮಾತನಾಡಿ, ಹಾನಗಲ್ ಕ್ಷೇತ್ರ ಪ್ರತಿನಿಧಿಸುತಿದ್ದ ಮನೋಹರ ಹನುಮಂತಪ್ಪ ತಹಶೀಲ್ದಾರ್ 4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 2015ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದ ವೇಳೆ…













