Author: kannadanewsnow09

ಶಿವಮೊಗ್ಗ: ಮೂತ್ರ ವಿಸರ್ಜನೆಗೆ ತೆರಳಿದ್ದಂತ ವ್ಯಕ್ತಿಯ ಮೇಲೆ ಸಿಮೆಂಟ್ ಸ್ಲ್ಯಾಬ್ ಕುಸಿದು ಬಿದ್ದ ಪರಿಣಾಮ, ಅದರಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ವಿನೋಬನಗರದಲ್ಲಿ ನಡೆದಿದೆ. ಶಿವಮೊಗ್ಗದ ವಿನೋಬನಗರದ ರೈಲ್ವೆ ಪ್ಯಾರಲರ್ ರಸ್ತೆಯಲ್ಲಿ ಮೂತ್ರ ವಿಸರ್ಜನೆಗೆಂದು ಚರಂಡಿ ಸ್ಲ್ಯಾಬ್ ಮೇಲೆ ನಿಂತಿದ್ದಂತ ಬೊಮ್ಮನಕಟ್ಟೆ ನಿವಾಸಿ ಮುತ್ತಪ್ಪ(45) ಎಂಬುವರ ಮೇಲೆ ಕುಸಿತಗೊಂಡು ಅದರಡಿ ಸಿಲುಕಿ ಸಾವನ್ನಪ್ಪಿದ್ದಾರೆ. ಮುತ್ತಪ್ಪ ಚರಂಡಿಗೆ ಬೀಳುತ್ತಿದ್ದಂತ ಸ್ಲ್ಯಾಬ್ ಕೂಡ ಅವರ ಮೇಲೆ ಬಿದ್ದಿದೆ. ಈ ಅವಘಡದಲ್ಲಿ ಗಾಯಗೊಂಡಿದ್ದಂತ ಮುತ್ತಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ವಿನೋಬನಗರ ಠಾಣೆಯ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದಾರೆ. https://kannadanewsnow.com/kannada/give-compensation-to-farmers-like-bjp-govt-leave-chair-r-ashoka/ https://kannadanewsnow.com/kannada/mandya-cm-siddaramaiah-mla-ganiga-ravis-banners-torn-by-mob-pelting-stones/

Read More

ಕೋಲಾರ : ಬರ ಮತ್ತು ನೆರೆ ಸಂದರ್ಭದಲ್ಲಿ ಹಿಂದಿನ ಬಿಜೆಪಿ ಸರ್ಕಾರ ರೈತರಿಗೆ ಮೂರು, ನಾಲ್ಕು ಪಟ್ಟು ಅಧಿಕ ಪರಿಹಾರ ನೀಡಿತ್ತು. ಅದೇ ಮಾನದಂಡದಲ್ಲಿ ಸಿದ್ದರಾಮಯ್ಯ ಸರ್ಕಾರ ಪರಿಹಾರ ನೀಡಲಿ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದ್ದಾರೆ. ಕೋಲಾರದಲ್ಲಿ ಬಿಜೆಪಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮೊದಲು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸುದ್ದಿಗೋಷ್ಟಿ ಯಲ್ಲಿ ಆರ್‌.ಅಶೋಕ ಮಾತನಾಡಿದರು. ಬರಗಾಲ ಬಂದು ಏಳು ತಿಂಗಳಾದರೂ ರೈತರಿಗೆ ಪರಿಹಾರ ನೀಡಿಲ್ಲ. ಬೆಳಗಾವಿ ಅಧಿವೇಶನ ಕಳೆದು ತಿಂಗಳಾದರೂ ಪರಿಹಾರ ಕೊಟ್ಟಿಲ್ಲ. ರೈತರು ಚಾತಕ ಪಕ್ಷಿಗಳಂತೆ ಪರಿಹಾರಕ್ಕೆ ಕಾಯುತ್ತಿದ್ದಾರೆ. ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಮೇವಿನ ಸಮಸ್ಯೆ ಇದೆ. ಆದರೂ ಒಂದೇ ಒಂದು ಗೋಶಾಲೆ ತೆರೆದಿಲ್ಲ. ಅಲ್ಪಸಂಖ್ಯಾತ ಇಲಾಖೆ ಸಚಿವರು ಮನವಿ ಕೊಟ್ಟ ಮೂರು ದಿನಗಳಲ್ಲಿ ಮುಸ್ಲಿಮರಿಗೆ 1 ಸಾವಿರ ಕೋಟಿ ರೂ. ಅನುದಾನವನ್ನು ಕಾಲನಿ ಅಭಿವೃದ್ಧಿಗೆ ಬಿಡುಗಡೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರವಾಹ ಬಂದಾಗ…

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ ಕೊಬ್ಬರಿ ಬೆಳೆಗಾರರಿಗೆ ಸಿಹಿಸುದ್ದಿ ಎನ್ನುವಂತೆ 2024ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಉಂಡೆ ಕೊಬ್ಬರಿಗೆ ಪ್ರೋತ್ಸಾಹಧನ ಹೆಚ್ಚಳ ಮಾಡಿ ಆದೇಶಿಸಿದೆ. ಈ ಕುರಿತಂತೆ ರಾಜ್ಯ ಸರ್ಕಾರದಿಂದ ನಡವಳಿಯನ್ನು ಹೊರಡಿಸಿದ್ದು, 2024ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರವು ನಿಗದಿಪಡಿಸಿರುವ ಎಫ್.ಎ.ಕ್ಯೂ ಗುಣಮಟ್ಟದ ಉಂಡೆ ಕೊಬ್ಬರಿಗೆ ಪ್ರತಿ ಕ್ವಿಂಟಾಲ್‌ಗೆ ರೂ.12,KKI (ಹನ್ನೆರಡು ಸಾವಿರ ರೂಪಾಯಿಗಳು ಮಾತ್ರ) ರಂತ ಗರಿಷ್ಠ 62,500 ಮೆಟ್ರಿಕ್ ಟನ್ ಉಂಡ ಕೊಬ್ಬರಿಯನ್ನು ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನಗಳ ಮಾರ್ಗಸೂಚಿಗಳನ್ವಯ ತುಮಕೂರು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ಮಂಡ್ಯ, ಮೈಸೂರು, ದಕ್ಷಿಣ ಕನ್ನಡ, ಚಾಮರಾಜನಗರ ಮತ್ತು ರಾಮನಗರ ಜಿಲ್ಲೆಗಳ ರೈತರಿಂದ ಖರೀದಿಸಲು ಅನುಮತಿ ನೀಡಿ ಆದೇಶಿಸಿದೆ. ಮೇಲೆ ಓದಲಾದ ಕ್ರಮ ಸಂಖ್ಯೆ (2)ರ, ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ, ಬೆಂಗಳೂರು ಇವರ ಏಕ ಕಡತದ ಪ್ರಸ್ತಾವನೆಯಲ್ಲಿ, 2024ನೇ ಸಾಲಿನ ಉಂಡ ಕೊಬ್ಬರಿ ಖರೀದಿ ಪ್ರಕ್ರಿಯೆ ಕೈಗೊಂಡ ನಂತರವು…

Read More

ಬೆಂಗಳೂರು: ರಾಜ್ಯವು ಈಗಾಗಲೇ ಅನಿಮೇಷನ್‌, ಗೇಮಿಂಗ್‌ ಮತ್ತು ಕಾಮಿಕ್ಸ್‌ ಕ್ಷೇತ್ರದಲ್ಲಿ ದಾಪುಗಾಲು ಇಡುತ್ತಿದ್ದು, 2028ರ ವೇಳೆಗೆ 30 ಸಾವಿರ ಉದ್ಯೋಗ ಸೃಷ್ಟಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ಇಂದು ಲಲಿತ ಅಶೋಕ ಹೋಟೆಲ್‌ನಲ್ಲಿ ಐಟಿ-ಬಿಟಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಮೂರು ದಿನದ GAFX2024 ಐದನೇ ಆವೃತ್ತಿಯನ್ನು ಉದ್ಘಾಟಿಸಿದರು. ಈ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಶ್ರೀ ಶರತ್ ಬಚ್ಚೇಗೌಡ, ಅಧ್ಯಕ್ಷರು, ಕಿಯೋನಿಕ್ಸ್, ಶ್ರೀಮತಿ ನಿವೃತಿ ರೈ, ಎಂಡಿ, ಮತ್ತು ಸಿಇಒ, ಇನ್ವೆಸ್ಟ್ ಇಂಡಿಯಾ, ಶ್ರೀ ಕ್ರಿಸ್ ಗೋಪಾಲಕೃಷ್ಣನ್, ಅಧ್ಯಕ್ಷ ಆಕ್ಸಿಲರ್ ವೆಂಚರ್ಸ್, ಸಹ-ಸ್ಥಾಪಕ ಇನ್ಫೋಸಿಸ್, ಅಧ್ಯಕ್ಷ ಇನ್ಫೋಸಿಸ್ ಸೈನ್ಸ್ ಫೌಂಡೇಶನ್; ಶ್ರೀ ರಾಜನ್ ನವನಿ, ಸ್ಥಾಪಕ ಮತ್ತು CEO, Jet Synthesys; ಶ್ರೀ ವಿಶಾಲ್ ಧೂಪರ್, ಮ್ಯಾನೇಜಿಂಗ್ ಡೈರೆಕ್ಟರ್, ಏಷ್ಯಾ ಸೌತ್ – NVIDIA; ಶ್ರೀ ಸಾಯಿ ಶ್ರೀನಿವಾಸ್ ಕಿರಣ್ ಗರಿಮೆಲ್ಲ; ಸಹ-ಸಂಸ್ಥಾಪಕ, MPL; ಶ್ರೀ ಆಶಿಶ್ ಕುಲಕರ್ಣಿ, ಸ್ಥಾಪಕ ಮತ್ತು CEO, Punnaryug…

Read More

ಬೆಂಗಳೂರು: ನೈರುತ್ಯ ರೈಲ್ವೆ ಇಲಾಖೆಯಿಂದ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸೋ ನಿಟ್ಟಿನಲ್ಲಿ ಈ ಕೆಳಕಂಡ ಹತ್ತು ವಿಶೇಷ ರೈಲುಗಳ ಅವಧಿ ವಿಸ್ತರಣೆ ಮಾಡಲಾಗಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ನೈರುತ್ಯ ರೈಲ್ವೆಯಿಂದ ಮಾಹಿತಿ ನೀಡಲಾಗಿತ್ತು, ಪ್ರಯಾಣಿಕರಿಂದ ಹೆಚ್ಚುತ್ತಿರುವ ಬೇಡಿಕೆ ಪೂರೈಸುವ ಸಲುವಾಗಿ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ದಾನಾಪುರ ನಿಲ್ದಾಣಗಳ ನಡುವೆ ಚಲಿಸುವ ಹತ್ತು ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳ ಸೇವೆಯ ಅವಧಿಯನ್ನು ವಿಸ್ತರಿಸಲು ಪೂರ್ವ ಮಧ್ಯ ರೈಲ್ವೆ ವಲಯವು ಸೂಚಿಸಿದೆ. ಈ ವಿಶೇಷ ರೈಲುಗಳು ಅಸ್ತಿತ್ವದಲ್ಲಿರುವ ಮಾರ್ಗ, ನಿಲುಗಡೆ ಮತ್ತು ಸಮಯದೊಂದಿಗೆ ಸಂಚರಿಸಲಿವೆ. ಅವುಗಳ ವಿವರ ಈ ಕೆಳಗಿನಂತಿವೆ. 1. ರೈಲು ಸಂಖ್ಯೆ 03245 ದಾನಾಪುರ-ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್‌ ರೈಲನ್ನು 24.04.2024 ರವರೆಗೆ ವಿಸ್ತರಿಸಲಾಗುತ್ತಿದೆ. 2. ರೈಲು ಸಂಖ್ಯೆ 03246 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ದಾನಾಪುರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್‌ ರೈಲನ್ನು 26.04.2024 ರವರೆಗೆ ವಿಸ್ತರಿಸಲಾಗುತ್ತಿದೆ. 3. ರೈಲು ಸಂಖ್ಯೆ 03251 ದಾನಾಪುರ-…

Read More

ಮಂಡ್ಯ: ಜಿಲ್ಲೆಯ ಕೆರಗೋಡುವಿನಲ್ಲಿ ಹನುಮ ಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿಯಿಂದ ಫೆಬ್ರವರಿ.9ರಂದು ಮಂಡ್ಯ ಬಂದ್ ಗೆ ಕರೆ ನೀಡಲಾಗಿದೆ. ಈ ಮೂಲಕ ಇಂದು ನಡೆಸಲಾಗುತ್ತಿದ್ದಂತ ಪ್ರತಿಭಟನೆಯನ್ನು ಕೈ ಬಿಡಲಾಗಿದೆ. ಮಂಡ್ಯ ತಾಲೂಕಿ ಕೆರಗೋಡಿನಲ್ಲಿ ಹನುಮ ಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಪ್ರತಿಭಟನೆಯನ್ನು ಬಿಜೆಪಿಯಿಂದ ನಡೆಸಲಾಯಿತು. ಕೆರಗೋಡಿನಿಂದ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮೂಲಕ ಸಾಗಿ, ಜಿಲ್ಲಾಧಿಕಾರಿ ಕಚೇರಿಯ ಮುಂದೆ ಜಮಾಯಿಸಿದರು. ಈ ಪ್ರತಿಭಟನೆಗೆ ಜೆಡಿಎಸ್ ನ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಕೂಡ ಕೇಸರಿ ಶಾಲು ಧರಿಸಿ ಭಾಗಿಯಾದರು. ಈ ಪ್ರತಿಭಟನೆಯಲ್ಲಿ ಭಾಗಿಯಾದಂತ ಬಿಜೆಪಿ ನಾಯಕ ಸಿಟಿ ರವಿ ಮನೆ ಮನೆಯ ಮೇಲೂ ಹನುಮಧ್ವಜ ಹಾರಿಸೋದಕ್ಕೆ ಕರೆ ನೀಡಿದ್ರೇ, ಮಾಜಿ ಸಿಎಂ ಹೆಚ್ ಡಿಕೆ ಹೆಸರಿನಲ್ಲಿ ರಾಮನಿದ್ರೆ ಸಾಲದು, ನಡೆಯಲ್ಲೂ ಶ್ರೀರಾಮನಂತೆ ಇರಬೇಕು ಎಂಬುದಾಗಿ ಕಿಡಿಕಾರಿದರು. ಅಂತಿಮವಾಗಿ ಫೆಬ್ರವರಿ.9ರಂದು ಮಂಡ್ಯ ಬಂದ್ ಮಾಡಬೇಕು ಎಂಬುದಾಗಿ ಪ್ರತಿಭಟನಾ ನಿರತರು ಘೋಷಣೆ ಕೂಗುತ್ತಾ, ಫೆಬ್ರವರಿ.9ರಂದು ಮಂಡ್ಯ ಬಂದ್…

Read More

ಬೆಂಗಳೂರು: ಮೊನ್ನೆ ತಾನೇ ರಾಜ್ಯದಲ್ಲಿ ಮುಸ್ಲಿಂ ಪರ ಸರ್ಕಾರ ಇದೆ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದೇ ಮುಸ್ಲಿಮರ ದಯೆಯಿಂದ ಎಂದು ಹಿಂದೂ ಮತದಾರರಿಗೆ ಅಪಮಾನ ಮಾಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮೇಲೆ ಪೈಪೋಟಿ ಬಿದ್ದಂತೆ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೊಹಲ್ಲಾ ಅಭಿವೃದ್ಧಿಗೆ 1,000 ಕೋಟಿ ರೂಪಾಯಿ ನೀಡಲು ಮುಂದಾಗಿದ್ದಾರೆ ಎಂಬುದಾಗಿ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ. ಈ ಕುರಿತಂತೆ ಎಕ್ಸ್ ಮಾಡಿರುವಂತ ಅವರು,  ಮೋಹಲ್ಲಾಗಳಿಗೆ 1000 ಕೋಟಿ ರೂಪಾಯಿ ನೀಡಲು ಕಾಂಗ್ರೆಸ್ ಸರ್ಕಾರದ ಬಳಿ ಹಣ ಇದೆ. ಆದರೆ ಬರ ಬಂದು ಎಂಟು ತಿಂಗಳಾದರೂ ರೈತರಿಗೆ 2,000 ರೂಪಾಯಿ ಪರಿಹಾರ ನೀಡಲು ಹಣವಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಸಿಎಂ ಸಿದ್ಧರಾಮಯ್ಯನವರೇ, ಮುಸ್ಲಿಮರ ತುಷ್ಟೀಕರಣ ಮಾಡಲು ನಿಮ್ಮ ಕಾಂಗ್ರೆಸ್ ಪಕ್ಷ ಯಾವ ಮಟ್ಟಕ್ಕಾದರೂ ಹೋಗುತ್ತದೆ ಎಂದು ಪದೇ ಪದೇ ನಿರೂಪಿಸುತ್ತಲೇ ಇದ್ದೀರಿ. ಆದರೆ ಜಾತಿ, ಮತ, ಧರ್ಮದ ಭೇದವಿಲ್ಲದೆ ಎಲ್ಲರಿಗೂ ಅನ್ನ ನೀಡುವ ರೈತರನ್ನೂ ನಿಮ್ಮ ಓಲೈಕೆ ರಾಜಕಾರಣದಲ್ಲಿ ಬಲಿಪಶು ಮಾಡಬೇಡಿ ಎಂಬುದಾಗಿ ಗುಡುಗಿದ್ದಾರೆ.…

Read More

ಮಂಡ್ಯ: ಸಿದ್ಧರಾಮಯ್ಯ ನನ್ನ ಹೆಸರಿನಲ್ಲೇ ರಾಮನಿದ್ದಾನೆ ಅಂತ ಹೇಳ್ತಾರೆ. ಹೆಸರಿನಲ್ಲಿ ರಾಮನಿದ್ರೆ ಸಾಲದು, ನಡೆತೆಯಲ್ಲಿ ಶ್ರೀರಾಮನಂತೆ ಇರಬೇಕು ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕಿವಿಮಾತು ಹೇಳಿದ್ದಾರೆ. ಮಂಡ್ಯದ ಡಿಸಿ ಕಚೇರಿಯ ಮುಂದೆ ಜೈ ಶ್ರೀರಾಮ್ ಎನ್ನುತ್ತಲೇ ಮಾತನಾಡಿದಂತ ಅವರು, ನಮ್ಮ ನಾಡಿನ ಸಂಸ್ಕೃತಿ, ಹನುಮನನ್ನು ಪ್ರತಿದಿನ ಪ್ರಾರ್ಥನೆ ಮಾಡುತ್ತೇವೆ ಎಂದರು. ರಾಜ್ಯ ಸರ್ಕಾರ ಉದ್ದತಟನ ಪ್ರದರ್ಶಿಸುತ್ತಿದೆ. ಯಾವನೋ ಹೇಳುತ್ತದೆ ಎಂದು ಸರ್ಕಾರ ಈ ರೀತಿ ಮಾಡುತ್ತಿದೆ. ಹನುಮಧ್ವಜ ತೆಗೆದಿದ್ದು ಸರಿಯಲ್ಲ ಎಂಬುದಾಗಿ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಾಗ್ಧಾಳಿ ನಡೆಸಿದರು. ಸಿದ್ದರಾಮಯ್ಯನವರು ಈ ದೇಶದ ಕ್ಷಮೆ ಕೇಳಬೇಕು: MLC ಛಲವಾದಿ ನಾರಾಯಣಸ್ವಾಮಿ ಒತ್ತಾಯ ಬೆಂಗಳೂರು: ಗೌರವಾನ್ವಿತ ರಾಷ್ಟ್ರಪತಿಯವರನ್ನು ಅವಮಾನ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ದೇಶದ ಕ್ಷಮೆ ಕೇಳಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದರು. ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ…

Read More

ಬೆಂಗಳೂರು: ಗೌರವಾನ್ವಿತ ರಾಷ್ಟ್ರಪತಿಯವರನ್ನು ಅವಮಾನ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ದೇಶದ ಕ್ಷಮೆ ಕೇಳಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದರು. ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಚಿತ್ರದುರ್ಗದಲ್ಲಿ ನಿನ್ನೆ ಅಹಿಂದ ಹೆಸರಿನಲ್ಲಿ ಕರೆದ ಸಭೆಯಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗೌರವಾನ್ವಿತ ರಾಷ್ಟ್ರಪತಿಗಳಾದ ಮುರ್ಮು ಅವರನ್ನು ಏಕವಚನದಲ್ಲಿ ಸಂಬೋಧಿಸಿದ್ದು ಖಂಡನೀಯ ಎಂದು ಹೇಳಿದರು. ಒಬ್ಬ ದಲಿತ ಮಹಿಳೆ ಎಂಬ ಕಾರಣಕ್ಕೆ ಮಾನ್ಯ ಮುಖ್ಯಮಂತ್ರಿಗಳು ಇಷ್ಟೊಂದು ಕೀಳಾಗಿ ಅವರನ್ನು ಸಂಬೋಧಿಸಿದ್ದು, ಇದು ಅವರ ವ್ಯಕ್ತಿತ್ವಕ್ಕೆ ಸರಿಯಾದ ಪದಗಳಲ್ಲ. ಅದಾದ ಬಳಿಕವೂ ಅವರು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ. ನಾವು ಹಿರಿಯರನ್ನು ಹಳ್ಳಿ ಭಾಷೆಯಲ್ಲಿ ಹಾಗೇ ಕರೆಯುವುದಾಗಿ ಹೇಳಿದ್ದಾರೆ. ಈ ರೀತಿ ಹೇಳುವ ಮೂಲಕ ಹಳ್ಳಿಯ ಜನರನ್ನೂ ಅವರು ಅಪಮಾನ ಮಾಡಿದ್ದಾರೆ ಎಂದು ಆಕ್ಷೇಪಿಸಿದರು. ಯಾವ ಹಳ್ಳಿ ಜನರು, ಬಡವರು ಯಾರೇ ಇದ್ದರೂ ಕೂಡ ಯಾವತ್ತೂ…

Read More

ಮಂಡ್ಯ: ಹನುಮಧ್ವಜವನ್ನು ಹಾರಿದೋನ್ನ ಕಾಂಗ್ರೆಸ್ ಸರ್ಕಾರ ತಡೆದಿರೋದು ಈಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಮಂಡ್ಯದ ಕೆರಗೋಡಿನಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆಯನ್ನು ನಡೆಸಿದ ಬಳಿಕ, ಡಿಸಿ ಕಚೇರಿಯ ಮುಂದೆ ಜಮಾವಣೆಗೊಂಡಿರುವಂತ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದೆ. ಇದೇ ವೇಳೆಯಲ್ಲಿ ರಾಜ್ಯದ ಪ್ರತಿಯೊಂದು ಮನೆಯ ಮೇಲೂ ಹನುಮಧ್ವಜ ಹಾರಿಸುತ್ತೇವೆ, ತಾಕತ್ತಿದ್ರೆ ತಡೆಯಿರಿ ಅಂತ ಸರ್ಕಾರಕ್ಕೆ ಸಿ.ಟಿ ರವಿ ಸವಾಲ್ ಹಾಕಿದ್ದಾರೆ. ಮಂಡ್ಯದ ಡಿಸಿ ಕಚೇರಿಯ ಮುಂದೆ ನೆರೆದಿದ್ದಂತ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದಂತ ಅವರು, ಪ್ರತಿಯೊಂದು ಮನೆಯ ಮೇಲೂ ಹನುಮ ಧ್ವಜ ಹಾರಿಸುತ್ತೇವೆ. ಸರ್ಕಾರಕ್ಕೆ ತಾಕತ್ತಿದ್ರೇ ತಡೆಯೋ ಧೈರ್ಯ ಮಾಡಲಿ ಎಂಬುದಾಗಿ ಗುಡುಗಿದರು. ನಮ್ಮ ಹೋರಾಟ ಹಿಂದೂ ವಿರೋಧಿಗಳ ಮೇಲೆ ಆಗಿದೆ. ಧ್ವಜ ತೆಗೆದ ಕಾಂಗ್ರೆಸ್ ಸರ್ಕಾರ ರಾಜಕೀಯವಾಗಿ ಭಸ್ಮವಾಗಲಿದೆ. ಹನುಮನ ಬಾಲಕ್ಕೆ ಬೆಂಕಿ ಹಚ್ಚಿದ್ದರಿಂದ ಲಂಗೆ ಭಸ್ಮವಾಯಿತು. ಲಂಕೆಗೆ ಆದ ಪರಿಸ್ಥಿತಿಯೇ ಈ ಸರ್ಕಾರಕ್ಕೂ ಬರಲಿದೆ ಎಂಬುದಾಗಿ ವಾಗ್ಧಾಳಿ ನಡೆಸಿದರು. https://kannadanewsnow.com/kannada/lalu-yadav-reaches-ed-office-in-patna-to-appear-in-land-for-jobs-scam-case/ https://kannadanewsnow.com/kannada/mandya-cm-siddaramaiah-mla-ganiga-ravis-banners-torn-by-mob-pelting-stones/

Read More