Author: kannadanewsnow07

ಬೆಂಗಳೂರು: ರಾಜ್ಯದಲ್ಲಿ ನಡೆದಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಕುರಿತು ಕೆಲವು ನಿರ್ದೇಶನಗಳನ್ನು ನೀಡಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ದಿನಾಂಕ:27.09.2025 ರಂದು ಮುಂಜಾನೆ 11.30 ಗಂಟೆಗೆ ರಾಜ್ಯದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ ಹಾಗೂ ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಅವರು ತಿಳಿಸಿದರು. ಸಚಿವ ಸಂಪುಟದ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಚಿವ ಸಂಪುಟದ ನಿರ್ಣಯಗಳ ವಿವರಗಳನ್ನು ನೀಡಿದ ಅವರು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದ್ದು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಕೈಗೊಳ್ಳಲಾಗಿರುವ ಈ ಸಮೀಕ್ಷಾ ಕಾರ್ಯದಲ್ಲಿ ನಿಯೋಜಿಸಲ್ಪಡುವ ಅಧಿಕಾರಿ/ನೌಕರರು ಸಮೀಕ್ಷಾ ಕಾರ್ಯಕ್ಕೆ ಹಾಜರಾಗದೇ ಮತ್ತು ಕರ್ತವ್ಯಗಳನ್ನು ನಿರ್ವಹಿಸದೇ ಇರುವಂತಹವರ ವಿರುದ್ಧ ಶಿಸ್ತುಕ್ರಮ ಜರುಗಿಸಲು ಬೆಂಗಳೂರು ವ್ಯಾಪ್ತಿಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಿಗೆ ಅಧಿಕಾರ ಪ್ರಾಯೋಜಿಸಲಾಗಿದೆ ಎಂದು ತಿಳಿಸಿದರು. ಗ್ರೇಟರ್ ಬೆಂಗಳೂರು ಪ್ರಾಧಿಕಾರದ…

Read More

ಶಿವಮೊಗ್ಗ: ಕರ್ಮದಿಂದ ಅಲ್ಲ ತ್ಯಾಗದಿಂದ ಮಾತ್ರ ಶ್ರೇಷ್ಟತೆ ಪಡೆಯುವುದಕ್ಕೆ ಸಾಧ್ಯ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು. ಸಾಗರದ ಅಗ್ರಹಾರದಲ್ಲಿರುವ ಶ್ರೀ ರಾಘವೇಶ್ವರ ಭವನದಲ್ಲಿ ಏರ್ಪಡಿಸಿರುವ ನವರಾತ್ರ ಸಮಸ್ಯಾದ ಎರಡನೇ ದಿನದ ಲಲಿತೋಪಾಖ್ಯಾನ ಪ್ರವಚನದಲ್ಲಿ ಅವರು ಆಶೀರ್ವಚನ ನೀಡಿದರು. ನಮ್ಮಲ್ಲಿ ಸ್ವಾರ್ಥ ಇಲ್ಲದೆ, ನಮ್ಮಲ್ಲಿರುವ ಸಮಸ್ತವನ್ನು ಸಮರ್ಪಿಸುವ ಮನೋಭಾವ ಇದ್ದಾಗ ದೇವರ ಒಲುಮೆ ಸಾಧ್ಯ. ಅಂತಹ ಒಲುಮೆ ಪಡೆಯಬೇಕಾದರೆ ನಮ್ಮಲ್ಲಿರುವ ನಾನು ನನ್ನದು ಎನ್ನುವ ಮೋಹ ತ್ಯಜಿಸಬೇಕು. ಅದೇ ತ್ಯಾಗ ಎಂದ ಅವರು, ನಿತ್ಯ ಬೇರೆಬೇರೆ ರೀತಿಯ ವಸ್ತು ವಿಷಯವನ್ನು ಬಯಸುವುದು ಮನುಷ್ಯನ ಕ್ರಿಯೆಯಾದರೆ, ನಾನಾ ಅವತಾರದಲ್ಲಿ ನಮಗೆ ದರ್ಶನದ ಭಾಗ್ಯ ನೀಡುವುದು ಭಗವಂತನ ಸ್ವಭಾವ. ಅಂತಯೇ ಭಗವಂತನಲ್ಲಿ ನಾವು ಅಪೇಕ್ಷೆಗಳ ಪಟ್ಟಿಯನ್ನು ಇಟ್ಟು ಕೇಳುತ್ತೇವೆ ಆದರೆ ನಿಜವಾಗಿ ನಮಗೇನು ಬೇಕು ಎಂದು ಭಗವಂತನೇ ಅರಿತಿರುವಾಗ ಕೇಳುವ ಅಗತ್ಯ ಇರುವುದೇ ಇಲ್ಲ. ಹಾಗಾಗಿಯೇ ದೇವಿ ಅವತಾರವಾಗುವಾಗ ದೇವೇಂದ್ರ ತಾಯಿಗೆ ಶರಣಾಗಿ ಎಲ್ಲವೂ ತಿಳಿದಿರುವ ನೀನು…

Read More

ಬೆಂಗಳೂರು: ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಮುಂಬಡ್ತಿಗಾಗಿ ಕಡ್ಡಾಯ ತರಬೇತಿ) ನಿಯಮಗಳು 2025ಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಉನ್ನತ ಶಿಕ್ಷಣ ಇಲಾಖೆಯಡಿ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಿರ್ವಹಣಾ ತಂತ್ರಾಂಶ 2ನೇ ಆವೃತ್ತಿ (UUCMS-V-2.0) ಯನ್ನು ರೂ.40.29 ಕೋಟಿಗಳ ಮೊತ್ತದಲ್ಲಿ ಅಭಿವೃದ್ಧಿಪಡಿಸಿ ಅನುಷ್ಠಾನಗೊಳಿಸಲು ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ನಿಧಿಯಡಿಯಲ್ಲಿ 110 ಜಂಕ್ಷನ್ ಗಳಲ್ಲಿ ಬೆಂಗಳೂರು ನಗರಕ್ಕೆ ಅವಶ್ಯಕವಿರುವ ಟ್ರಾಫಿಕ್ ಸಿಗ್ನಲ್ ಗಳನ್ನು ರೂ. 56.45 ಕೋಟಿಗಳ ಅಂದಾಜು ಅನುಷ್ಠಾನಗೊಳಿಸಲು ಅನುಮತಿಯನ್ನು ಸಚಿವ ಸಂಪುಟ ನೀಡಿದೆ. ಕರ್ನಾಟಕ ರಾಜ್ಯ ಕೌಶಲ್ಯ ಅಭಿವೃದ್ಧಿ ನೀತಿ-2025-32ಕ್ಕೆ ಅನುಮೋದನೆ ನೀಡಿದೆ. ಕಲಬುರಗಿ ಜಿಲ್ಲೆಯ ಸೇಡಂ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿತು. ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಪ್ರಸ್ತುತ ಇರುವ 60 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಮೊದಲನೇ ಹಂತದಲ್ಲಿ 250 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯನ್ನಾಗಿ ರೂ.95.60 ಕೋಟಿಗಳ ಅಂದಾಜು ಮೊತ್ತದಲ್ಲಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ…

Read More

ಬೆಂಗಳೂರು: ಎಂ.ಕೆ. ಗಣಪತಿ, ಡಿವೈಎಸ್ಪಿ, (ಇಲಾಖಾ ವಿಚಾರಣೆ), ಐಜಿಪಿ ಕಛೇರಿ, ಪಶ್ಚಿಮ ವಲಯ, ಮಂಗಳೂರು ಇವರು ಮಡಿಕೇರಿಯ ವಿನಾಯಕ ಲಾಡ್, ಕೊಠಡಿ ಸಂಖ್ಯೆ: 315ರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ 2016ನೇ ಜುಲೈ 07 ರಂದು ಮರಣ ಹೊಂದಿರುವ ಬಗ್ಗೆ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗಿತ್ತು ಹಾಗೂ ಮುಖ್ಯಮಂತ್ರಿಯವರ ಆದೇಶದನ್ವಯ ಈ ಪ್ರಕರಣದ ತನಿಖೆ ನಡೆಸಲು  ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಕೆ.ಎನ್.ಕೇಶವನಾರಾಯಣ ಇವರ ನೇತೃತ್ವದಲ್ಲಿ ಏಕ ಸದಸ್ಯ ವಿಚಾರಣಾ ಆಯೋಗವನ್ನು ನೇಮಿಸಲಾಗಿತ್ತು. ವಿಚಾರಣಾ ಆಯೋಗವು 2018 ನೇ ಫೆಬ್ರವರಿ 26 ರಂದು ಸರ್ಕಾರಕ್ಕೆ ವಿಚಾರಣಾ ವರದಿಯನ್ನು ಸಲ್ಲಿಸಿತ್ತು. ಸದರಿ ವಿಚಾರಣಾ ಆಯೋಗದ ವರದಿಯಲ್ಲಿನ ಸಂಪೂರ್ಣ 08 ಭಾಗಗಳ ಕುರಿತು ಅಧ್ಯಯನ ನಡೆಸಿ ಸದರಿ ವರದಿಯಲ್ಲಿನ ಎಲ್ಲಾ ಅಂಶಗಳು ಹಾಗು ಶಿಫಾರಸ್ಸುಗಳನ್ನು ಪರಿಶೀಲಿಸಿ ಅಧ್ಯಯನ ವರದಿಯನ್ನು ನೀಡಲು ಸರ್ಕಾರವು ಎಂ.ಕೆ.ಶ್ರೀವಾಸ್ತವ್, ಐಪಿಎಸ್ ನಿವೃತ್ತ ಪೊಲೀಸ್‌ ಮಹಾನಿರ್ದೇಶಕರು ಇವರನ್ನು ನೇಮಿಸಲಾಗಿತ್ತು. ಸದರಿ ಅಧ್ಯಯನ ವರದಿಯ ಆಧಾರದಲ್ಲಿ ಕೆ.ಎನ್. ಕೇಶವ ನಾರಾಯಣ, ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ…

Read More

* ಅವಿನಾಶ್ ಆರ್ ಭೀಮಸಂದ್ರ ಜೊತೆಗೆ ಸುರೇಶ್‌ ಕುಮಾರ್‌ ಬೆಂಗಳೂರು: ಕರ್ನಾಟಕ ಸರ್ಕಾರ ನಡೆಸುತ್ತಿರುವ ಜಾತಿ ಗಣತಿಗೆ ಮಧ್ಯಂತರ ತಡೆ ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ.ಜೋಶಿ ಅವರಿದ್ದ ವಿಭಾಗೀಯ ಪೀಠವು ಈ ತೀರ್ಮಾನ ಕೈಗೊಂಡಿದೆ. ಜಾತಿ ಗಣತಿಯನ್ನು ಪ್ರಶ್ನೆ ಮಾಡಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ , ರಾಜ್ಯ ಒಕ್ಕಲಿಗರ ಸಂಘ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದೆ. ಇನ್ನೂ ಇದೇ ವೇಳೆ ನ್ಯಾಯಪೀಠ ಯಾವುದೇ ಕಾರಣಕ್ಕೂ ನೀವು ಸಾರ್ವಜನಿಕರಿಗೆ ಒತ್ತಡ ಹಾಕುವ ಹಾಗೇ ಇಲ್ಲ, ಈ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸಬೇಕು. ದತ್ತಾಂಶ ಸರ್ಕಾರ ಹೊರತು ಪಡಿಸಿ ಬೇರೆ ಯಾರಿಗೂ ಕೂಡ ಲಭ್ಯವಾಗಬಾರದು. ಗುರುವಾರ ತಡೆಯಾಜ್ಞೆ ನೀಡಲು ನಿರಾಕರಿಸಿದ ಕೋರ್ಟ್‌, ಲಿಖಿತ ವಾದಾಂಶ ಸಲ್ಲಿಕೆಗೆ ಸೂಚಿಸಿ ವಿಚಾರಣೆಯನ್ನು ಇಂದು ಮುಂದೂಡಿತು. ಆಯೋಗದ ಪರವಾಗಿ ಪ್ರೊ. ರವಿವರ್ಮಕುಮಾರ್ ಅವರು ವಾದ ಆರಂಭಿಸಿದರು. 5 ನಿಮಿಷವಾದ ಮಂಡಿಸಲು ಅವಕಾಶ ನೀಡುವಂತೆ ಕೋರ್ಟಿಗೆ…

Read More

ನವದೆಹಲಿ: ಈ ತಿಂಗಳು ಜಿಎಸ್‌ಟಿ ಸ್ಲ್ಯಾಬ್‌ಗಳನ್ನು ಕೇವಲ ಶೇ. 5 ಮತ್ತು ಶೇ. 18 ಕ್ಕೆ ಇಳಿಸಲು ಕೈಗೊಂಡ ಜಿಎಸ್‌ಟಿ ಸುಧಾರಣೆಗಳನ್ನು ಮುಂದುವರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು. “ನಾವು 2017 ರಲ್ಲಿ ಜಿಎಸ್‌ಟಿ ತಂದೆವು ಮತ್ತು ಆರ್ಥಿಕತೆಯನ್ನು ಬಲಪಡಿಸಿದೆವು. 2025 ರಲ್ಲಿ ನಾವು ಜಿಎಸ್‌ಟಿ ಸುಧಾರಣೆಗಳನ್ನು ತಂದೆವು ಮತ್ತು ಆರ್ಥಿಕತೆಯನ್ನು ಮತ್ತಷ್ಟು ಬಲಪಡಿಸುತ್ತೇವೆ” ಎಂದು ಅವರು ಹೇಳಿದರು. “ಆರ್ಥಿಕತೆ ಬಲಗೊಂಡಂತೆ ತೆರಿಗೆ ಹೊರೆ ಕಡಿಮೆಯಾಗುತ್ತಲೇ ಇರುತ್ತದೆ” ಎಂದು ಅವರು ಹೇಳಿದರು. ಅವರು ಇಂದು ಗ್ರೇಟರ್ ನೋಯ್ಡಾದಲ್ಲಿ ನಡೆದ ಉತ್ತರ ಪ್ರದೇಶ ಅಂತರರಾಷ್ಟ್ರೀಯ ವ್ಯಾಪಾರ ಪ್ರದರ್ಶನದಲ್ಲಿ ಮಾತನಾಡಿದ ಅವರು, ಇದು ರಾಜ್ಯದ ಶ್ರೀಮಂತ ಪರಂಪರೆ, ಬಲಿಷ್ಠ MSMEಗಳು ಮತ್ತು ವೇಗವಾಗಿ ಹೊರಹೊಮ್ಮುತ್ತಿರುವ ಕೈಗಾರಿಕೆಗಳನ್ನು ಪ್ರದರ್ಶಿಸುತ್ತದೆ ಅಂತ ತಿಳಿಸಿದರು. ಇದೇ ವೇಳೇ ಅವರು ಭಾರತದ ಫಿನ್‌ಟೆಕ್ ವಲಯಕ್ಕೆ ಜಾಗತಿಕವಾಗಿ ಮನ್ನಣೆ ದೊರೆತಿರುವುದನ್ನು ಉದಾಹರಣೆಯಾಗಿ ಉಲ್ಲೇಖಿಸುತ್ತಾ ಪ್ರಧಾನಿಯವರು, ಇದರ ಪ್ರಮುಖ ಲಕ್ಷಣವೆಂದರೆ ಸಮಗ್ರ ಅಭಿವೃದ್ಧಿಗೆ ಅದರ ಕೊಡುಗೆ ಎಂದು ಅವರು ಎತ್ತಿ ತೋರಿಸಿದರು.…

Read More

ಬೆಂಗಳೂರು: ಬೆಂಗಳೂರಿನಲ್ಲಿ ಪಾಕ್‌ ಧ್ವಜ ಹೋಲುವ ಟೀ ಶರ್ಟ್‌ ಧರಿಸಿದ್ದ ಯುವಕ ವಿಡಿಯೋ ಅವನ್ನು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಹಂಚಿಕೊಂಡಿದ್ದು, ಈಗ ಇದು ದೊಡ್ಡ ವಿವಾದವನ್ನು ಎಬ್ಬಿಸಿದೆ. ಭಾರತದ ಭೂ ಶಿಖರ ಕಾಶ್ಮೀರ ರಾಜ್ಯಕ್ಕೆ ಪಾಕ್ ಧ್ವಜವನ್ನು ಹೋಲವಂತೆ ಮಾಡಿ ಹಿಂಬದಿ ಸವಾರ ಟೀ ಶರ್ಟ್‌ ಅನ್ನು ಧರಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇನ್ನೂ ಕೆಎ 41 E Z 6614 ದ್ವಿಚಕ್ರ ನಂಬರ್‌ನ ವಾಹನದಲ್ಲಿ ಹಿಂಬದಿ ಸವಾರ ಪಾಕ್‌ ಧ್ವಜದ ಟೀ ಶರ್ಟ್‌ ಹಾಕಿಕೊಂಡಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಈ ಬಗ್ಗೆ ಶಾಸಕ ಬಸವನಗೌಡ ಶತ್ರು ರಾಷ್ಟ್ರವನ್ನು ಭಾರತೀಯ ಪ್ರಜೆ  ಹೊಗಳುವುದು ನಮ್ಮ ರಾಷ್ಟ್ರಕ್ಕೆ ಮಾಡುವ ನೇರ ಅವಮಾನ. ಈ ವ್ಯಕ್ತಿ ಕಾಶ್ಮೀರ ಪಾಕಿಸ್ತಾನ ಧ್ವಜವನ್ನು ಹೊತ್ತ ಟಿ-ಶರ್ಟ್ ಧರಿಸಿರುವುದು ಕಂಡುಬಂದಿದೆ. ಇದು ಅತ್ಯಂತ ಸ್ವೀಕಾರಾರ್ಹವಲ್ಲ ಮತ್ತು ವಿಶ್ವಾಸಘಾತುಕ ಕೃತ್ಯ. ಅಂತಹ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಸಂಬಂಧಿತ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಬೇಕೆಂದು ನಾನು ಪೊಲೀಸರನ್ನು ಒತ್ತಾಯಿಸುತ್ತೇನೆ ಅಂತ ಹೇಳಿದ್ದಾರೆ. https://twitter.com/BasanagoudaBJP/status/1971040226089832831

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಸಾಂಪ್ರದಾಯಿಕವಾಗಿ ‘ಮೊದಲ ರಾತ್ರಿ’ ವೇಳೆ, ಕೇಸರಿ ಮತ್ತು ಬಾದಾಮಿಯೊಂದಿಗೆ ಒಂದು ಲೋಟ ಹಾಲು ವಧು-ವರರಿಗಾಗಿ ಕಾಯುತ್ತಿರುತ್ತದೆ. ನಾವು ಅದನ್ನು ಒಂದು ಆಚರಣೆ ಎಂದು ಪರಿಗಣಿಸುತ್ತೇವೆ, ಆದರೆ ಈ ವೇಳೆಯಲ್ಲಿ ಮೂರೂ ಅತ್ಯುತ್ತಮ ಕಾಮೋತ್ತೇಜಕಗಳು ಎಂದು ನಿಮಗೆ ತಿಳಿದಿದೆಯೇ? ನಿಮ್ಮ ಮದುವೆಯ ಮೊದಲ ರಾತ್ರಿ ನಿಮ್ಮ ಉತ್ಸಾಹವನ್ನು ಹೊತ್ತಿಸಲು ಸಹಾಯ ಮಾಡುವ ಹೆಚ್ಚಿನ ಆಹಾರಗಳ ಬಗ್ಗೆ ನಿಮಗೆ ಮಾಹಿತಿ ನೀಡುನೀಡುತ್ತಿದ್ದೇವೆ. ಚಾಕೊಲೇಟ್: ಮೃದುವಾದ ರುಚಿಯನ್ನು ಹೊಂದಿರುವ ಗಾಢವಾದ ಚಾಕೊಲೇಟ್ ಬಾರ್ ಅತ್ಯಂತ ಜನಪ್ರಿಯ ಪ್ರೀತಿಯ ಆಹಾರವಾಗಿದೆ. ಒಂದು ಬಾಕ್ಸ್ ಚಾಕೊಲೇಟ್‌ಗಳು ತೀವ್ರವಾದ ಪರಿಸ್ಥಿತಿಯನ್ನು ಹಗುರಗೊಳಿಸುತ್ತದೆ ಮತ್ತು ನವವಿವಾಹಿತರು ಪರಸ್ಪರ ಹೆಚ್ಚು ಆರಾಮದಾಯಕವಾಗಲು ಸಹಾಯ ಮಾಡುತ್ತದೆ. ಈ ಉತ್ತಮ ಭಾವನೆ ನೀಡುವ ಆಹಾರವು ದೇಹದಲ್ಲಿ ಸಿರೊಟೋನಿನ್‌ನಂತಹ ರಾಸಾಯನಿಕಗಳನ್ನು ಉತ್ಪಾದಿಸುತ್ತದೆ, ಅದು ನಮ್ಮನ್ನು ಸಂತೋಷಪಡಿಸುತ್ತದೆ ಮತ್ತು ಹೀಗಾಗಿ ಹೆಚ್ಚು ವಿಶ್ರಾಂತಿ ಪಡೆಯುತ್ತದೆ. ಇದು ಪರಿಪೂರ್ಣ ಆರಂಭಕ್ಕೆ ಕಾರಣವಾಗುವುದಿಲ್ಲವೇ? ಬಾದಾಮಿ: ಬಾದಾಮಿಗಳು ಹಲವಾರು ಆರೋಗ್ಯ ಪ್ರಯೋಜನಗಳಿಂದ ತುಂಬಿರುತ್ತವೆ ಮತ್ತು ಶಕ್ತಿಯ ಉತ್ತಮ ಮೂಲವಾಗಿದೆ. ಅವುಗಳು ರೈಬೋಫ್ಲಾವಿನ್,…

Read More

ನವದೆಹಲಿ: ಹಿಂದೂ ಮಹಿಳೆಯೊಬ್ಬರು ಪತಿ ಮತ್ತು ಮಕ್ಕಳನ್ನು ಬಿಟ್ಟು ವಿಲ್ ಬರೆಯದೆ ಸಾವನ್ನಪ್ಪಿದರೆ, ಆಕೆಯ ಆಸ್ತಿ ಆಕೆಯ ಪತಿಯ ಕುಟುಂಬಕ್ಕೆ ಅಲ್ಲ, ಬದಲಾಗಿ ಆಕೆಯ ಪತಿಯ ಉತ್ತರಾಧಿಕಾರಿಗಳಿಗೆ ಹೋಗುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಹಿಂದೂ ಕಾನೂನಿನಡಿಯಲ್ಲಿ ವಿವಾಹವಾದಾಗ ಆಕೆಯ “ಗೋತ್ರ” ಬದಲಾಗುತ್ತದೆ. ವಿಚಾರಣೆಯ ಸಮಯದಲ್ಲಿ, ನ್ಯಾಯಮೂರ್ತಿ ಬಿ.ವಿ. ನಾಗರತ್ನ ನೇತೃತ್ವದ ಪೀಠವು ಅರ್ಜಿದಾರರಿಗೆ ಕಾನೂನಿನ ಆಧಾರವಾಗಿರುವ ಸಾಂಸ್ಕೃತಿಕ ಚೌಕಟ್ಟನ್ನು ಪರಿಗಣಿಸಲು ನೆನಪಿಸಿತು.”ನೀವು ವಾದಿಸುವ ಮೊದಲು, ದಯವಿಟ್ಟು ನೆನಪಿಡಿ. ಇದು ಹಿಂದೂ ಉತ್ತರಾಧಿಕಾರ ಕಾಯ್ದೆ. ಹಿಂದೂ ಎಂದರೆ ಏನು, ಹಿಂದೂ ಸಮಾಜವನ್ನು ಹೇಗೆ ನಿಯಂತ್ರಿಸಲಾಗುತ್ತದೆ, ಅದರ ಅರ್ಥವೇನು? ನೀವು ಆ ಎಲ್ಲಾ ಪದಗಳನ್ನು ಬಳಸಲು ಇಷ್ಟಪಡದಿರಬಹುದು… ಆದರೆ ‘ಕನ್ಯಾದಾನ’, ಒಬ್ಬ ಮಹಿಳೆ ಮದುವೆಯಾದಾಗ, ಅವಳ ಗೋತ್ರವನ್ನು ಬದಲಾಯಿಸಲಾಗುತ್ತದೆ, ಅವಳ ಹೆಸರನ್ನು ಬದಲಾಯಿಸಲಾಗುತ್ತದೆ. ಅವಳು ತನ್ನ ಗಂಡನಿಂದ ಜೀವನಾಂಶವನ್ನು ಪಡೆಯಬಹುದು…” ಎಂದು ಪೀಠವು ಗಮನಿಸಿತು. ದಕ್ಷಿಣ ಭಾರತದಲ್ಲಿನ ಧಾರ್ಮಿಕ ಆಚರಣೆಗಳನ್ನು ಎತ್ತಿ ತೋರಿಸಿದ ನ್ಯಾಯಮೂರ್ತಿ ನಾಗರತ್ನ, “ದಕ್ಷಿಣದ ವಿವಾಹಗಳಲ್ಲಿ, ಅವಳು ಒಂದು ಗೋತ್ರದಿಂದ…

Read More

ಬೆಂಗಳೂರು: ಕೇಂದ್ರ ಸರ್ಕಾರದ ತೆಗೆದುಹಾಕುವ ಆದೇಶವನ್ನು ಪ್ರಶ್ನಿಸಿ ಎಕ್ಸ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್‌ನಿಂದ ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ ಗೆ ಹಿನ್ನಡೆಯಾಗಿದೆ. ಭಾರತದಲ್ಲಿ ಕಾರ್ಯನಿರ್ವಹಿಸಲು ಸಾಮಾಜಿಕ ಮಾಧ್ಯಮ ವೇದಿಕೆಗಳು ದೇಶದ ಕಾನೂನುಗಳನ್ನು ಪಾಲಿಸಬೇಕಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ. ತಂತ್ರಜ್ಞಾನ ಕಾಯ್ದೆ, 2000 ರ ಸೆಕ್ಷನ್ 79(3)(b) ಸರ್ಕಾರಿ ಅಧಿಕಾರಿಗಳಿಗೆ ತಡೆಯಾಜ್ಞೆಗಳನ್ನು ಹೊರಡಿಸಲು ಅಧಿಕಾರ ನೀಡುವುದಿಲ್ಲ. ಬದಲಾಗಿ, ಕಂಪನಿಯು ಕಾಯಿದೆಯ ಸೆಕ್ಷನ್ 69A, ಮಾಹಿತಿ ತಂತ್ರಜ್ಞಾನ (ಸಾರ್ವಜನಿಕರಿಂದ ಮಾಹಿತಿ ಪ್ರವೇಶವನ್ನು ನಿರ್ಬಂಧಿಸುವ ಕಾರ್ಯವಿಧಾನ ಮತ್ತು ಸುರಕ್ಷತಾ ಕ್ರಮಗಳು) ನಿಯಮಗಳು, 2009 ಜೊತೆಗೆ ಮಾತ್ರ ಅಂತಹ ಕ್ರಮಕ್ಕೆ ಸೂಕ್ತವಾದ ಕಾನೂನು ಚೌಕಟ್ಟನ್ನು ಒದಗಿಸಲಾಗಿದೆ ಎಂದು ವಾದಿಸಿತು. ಸೆಕ್ಷನ್ 79(3)(b) ಅಡಿಯಲ್ಲಿ ಹೊರಡಿಸಲಾದ ತಡೆಯಾಜ್ಞೆಗಳ ಆಧಾರದ ಮೇಲೆ ವಿವಿಧ ಸಚಿವಾಲಯಗಳು ತಮ್ಮ ವಿರುದ್ಧ ದಂಡನಾತ್ಮಕ ಕ್ರಮ ಕೈಗೊಳ್ಳದಂತೆ ತಡೆಯಲು ನಿರ್ದೇಶನಗಳನ್ನು ಕೋರಿದರು. ಇದಲ್ಲದೆ, ಸರ್ಕಾರದ ‘ಸಹಯೋಗ’ ಪೋರ್ಟಲ್‌ಗೆ ಸೇರಲು ಒತ್ತಾಯಿಸಲಾಗುವುದರಿಂದ ಎಕ್ಸ್ ಮಧ್ಯಂತರ ರಕ್ಷಣೆಯನ್ನು ಸಹ ಕೋರಿದರು. ಅರ್ಜಿಯ ವಿಚಾರಣೆ ಹಲವು…

Read More