Author: kannadanewsnow07

ಬೆಂಗಳೂರು: ಸರ್ಕಾರವು ಕರ್ನಾಟಕ ರಾಜ್ಯವನ್ನು ಗುಂಡಿ ಮುಕ್ತ ರಸ್ತೆಗಳನ್ನಾಗಿಸುವ ಉದ್ದೇಶವನ್ನು ಹೊಂದಿದೆ. ಕಬ್ಬಿಣದ ಉತ್ಪಾದನೆಯಲ್ಲಿ ಬರುವ Slag ಅನ್ನು ಉಪಯೋಗಿಸಿ, ತೇವಾಂಶವಿರುವ ರಸ್ತೆಗಳಲ್ಲಿಯು ಸಹ, ಹೆಚ್ಚಿನ ಕಾರ್ಮಿಕರ ಅವಶ್ಯಕತೆಯಿಲ್ಲದೆ ಕಡಿಮೆ ಸಮಯದಲ್ಲಿ ಗುಂಡಿ ಮುಚ್ಚಲು ಸಾಧ್ಯವಾಗುವಂತೆ ಎಕೋಫಿಕ್ಸ್ ಎಂಬ ರೆಡಿಮಿಕ್ಸ್ ಪದಾರ್ಥವನ್ನು ಬಳಸಿಕೊಂಡು ರಸ್ತೆಯ ಗುಂಡಿಗಳನ್ನು ಮುಚ್ಚಲು ಸಾಧ್ಯವಾಗುವುದು. ಇದರಿಂದಾಗಿ ಅತಿಯಾಗಿ ಮಳೆಯಾಗುವ ಜಿಲ್ಲೆಗಳಲ್ಲಿ ಆಗಿಂದಾಗ್ಗೆ ಉಂಟಾಗುವ ರಸ್ತೆ ಗುಂಡಿಗಳನ್ನು ತೇವಾಂಶ ಇದ್ದಾಗಲೂ ಕೂಡ ಕಡಿಮೆ ಸಮಯದಲ್ಲಿ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬಹುದಾಗಿರುತ್ತದೆ. ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆಯು, ಕಬ್ಬಿಣದ ಉತ್ಪಾದನೆಯಲ್ಲಿ ಬರುವ Slag ಅನ್ನು ಉಪಯೋಗಿಸಿ, ತೇವಾಂಶವಿರುವ ರಸ್ತೆಗಳಲ್ಲಿಯು ಸಹ, ಹೆಚ್ಚಿನ ಕಾರ್ಮಿಕರ ಅವಶ್ಯಕತೆಯಿಲ್ಲದೆ ಕಡಿಮೆ ಸಮಯದಲ್ಲಿ ಗುಂಡಿ ಮುಚ್ಚಲು ಸಾಧ್ಯವಾಗುವಂತೆ ಎಕೋಫಿಕ್ಸ್ ಎಂಬ ರೆಡಿಮಿಕ್ಸ್ ಪದಾರ್ಥವನ್ನು ತಯಾರಿಸಿದ್ದು, ಕರ್ನಾಟಕ ಸರ್ಕಾರವು ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆ ಹಾಗೂ ರಾಮುಕ ಗ್ಲೋಬಲ್ ಸರ್ವಿಸಸ್ ಅವರೊಂದಿಗೆ ಟ್ರೈ ಪಾರ್ಟಿ ಕರಾರು ಒಪ್ಪಂದ ಮಾಡಿಕೊಳ್ಳಲಾಗಿರುತ್ತದೆ. ಈ ಸಂಬಂಧವಾಗಿ ಇಂದು, 2025ನೇ…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಹನಿಮೂನ್ ಈ ನಾಲ್ಕು ಅಕ್ಷರವನ್ನು ಕೇಳಿದ ತಕ್ಷಣ ನವಜೋಡಿಗಿಳಗೆ ಅದೇನೋ ಒಂದು ತರಹದ ಖುಷಿ ನೀಡುವ ಪದ. ಇನ್ನೂ ಹನಿಮೂನ್ಗೆ ಸಿದ್ದವಾಗುತ್ತಿರುವ ಪ್ರಣಯ ಪಕ್ಷಿಗಳಿಗೆ ಒಂದು ಕಡೆ ಅತಂಕವಾದರೇ ಇನ್ನೊಂದು ಕಡೆ ಆ ಕ್ಷಣಕ್ಕಾಗಿ ಚಾತಕದ ಪಕ್ಷಿಯಂತೆ ಕಾಯುತ್ತಿರುತ್ತಾರೆ, ಹೌದು ಯಾವ ದೇಶ, ಯಾವ ಊರು, ಯಾವ ಹೋಟೆಲ್ ಗೆ ಹೋಗ ಬೇಕು ಎಂದು ಮದುವೆಗೆ ಮುಂಚೆ ಗಂಡು ಹೆಣ್ಣು ಇಬ್ಬರು ಪ್ಲಾನ್ ಮಾಡಿಕೊಂಡು ಬಿಡುತ್ತಾರೆ. ಹನಿಮೂನ್ ಅನ್ನು ಸುಂದರವಾಗಿ ಇರಬೇಕು ಎನ್ನುವುದು ಅನೇಕ ನವವಧುಗಳ ಅಪೇಕ್ಷೆ ಕೂಡ ಹೌದು. ಅನೇಕ ಮಂದಿ ನವ ಜೋಡಿಗಳು ಸಾಮಾನ್ಯವಾಗಿ ಏಕಾಂತದ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಅದರಲ್ಲೂ ಹಸಿರು, ಚಳಿ, ಮಂಜಿನ ಪ್ರದೇಶ ಇವರ ಹಾಟ್ ಸ್ಪಾಟ್ ಗಳಲ್ಲಿ ಒಂದು. ತಮ್ಮ ಹೊಸ ಜೀವನಕ್ಕೆ ಅಡಿಗಾಲಿಟ್ಟ ನವ ದಂಪತಿಗಳು ಆ ಮಧುರ, ಸುಂದರ ಕ್ಷಣಗಳನ್ನು ಸ್ಮರಣಾರ್ಹಗೊಳಿಸಲು ಇಚ್ಚೆ ಪಡುತ್ತಾರೆ. ಏಕಾಂತ ಸ್ಥಳದಲ್ಲಿ, ಪ್ರಶಾಂತವಾದ ಸ್ಥಳದಲ್ಲಿ ಸ್ವಚ್ಚಂದವಾಗಿ ಇರಬೇಕು ಎನ್ನುವುದು ಅವರುಗಳ ಆಸೆಯಾಗಿರುತ್ತದೆ ಕೂಡ.…

Read More

ನವದೆಹಲಿ: ರಾಜ್ಯಪಾಲರು ಕಳುಹಿಸಿದ ಮಸೂದೆಗಳ ಬಗ್ಗೆ ಕಾರ್ಯನಿರ್ವಹಿಸಲು ರಾಷ್ಟ್ರಪತಿಗಳಿಗೆ ಕಾಲಮಿತಿಯನ್ನು ವಿಧಿಸಿದ ಸುಪ್ರೀಂ ಕೋರ್ಟ್ ನ ಇತ್ತೀಚಿನ ತೀರ್ಪನ್ನು ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಗುರುವಾರ ಟೀಕಿಸಿದ್ದಾರೆ. ಇಂತಹ ನಿರ್ದೇಶನವು ರಾಷ್ಟ್ರದ ಅತ್ಯುನ್ನತ ಕಚೇರಿಯ ಸಾಂವಿಧಾನಿಕ ಅಧಿಕಾರವನ್ನು ದುರ್ಬಲಗೊಳಿಸುತ್ತದೆ ಎಂದು ಉಪರಾಷ್ಟ್ರಪತಿ ಹೇಳಿದ್ದಾರೆ. ಉಪರಾಷ್ಟ್ರಪತಿಗಳ ಎನ್ಕ್ಲೇವ್ನಲ್ಲಿ ರಾಜ್ಯಸಭಾ ಇಂಟರ್ನಿಗಳ ಆರನೇ ಬ್ಯಾಚ್ನೊಂದಿಗೆ ಮಾತನಾಡಿದ ಧಂಕರ್, “ನೀವು ಭಾರತದ ರಾಷ್ಟ್ರಪತಿಗಳಿಗೆ ನಿರ್ದೇಶನ ನೀಡುವ ಪರಿಸ್ಥಿತಿಯನ್ನು ನಾವು ಹೊಂದಲು ಸಾಧ್ಯವಿಲ್ಲ ಮತ್ತು ಯಾವ ಆಧಾರದ ಮೇಲೆ?” ಎಂದು ಪ್ರಶ್ನಿಸಿದರು. “ಇತ್ತೀಚಿನ ತೀರ್ಪಿನಿಂದ ರಾಷ್ಟ್ರಪತಿಗಳಿಗೆ ನಿರ್ದೇಶನ ನೀಡಲಾಗಿದೆ. ನಾವು ಎಲ್ಲಿಗೆ ಹೋಗುತ್ತಿದ್ದೇವೆ? ದೇಶದಲ್ಲಿ ಏನಾಗುತ್ತಿದೆ? ನಾವು ಅತ್ಯಂತ ಸೂಕ್ಷ್ಮವಾಗಿರಬೇಕು. ಇದು ಯಾರಾದರೂ ಮರುಪರಿಶೀಲನೆ ಸಲ್ಲಿಸುತ್ತಾರೋ ಇಲ್ಲವೋ ಎಂಬ ಪ್ರಶ್ನೆಯಲ್ಲ. ಈ ದಿನ ನಾವು ಪ್ರಜಾಪ್ರಭುತ್ವಕ್ಕಾಗಿ ಎಂದಿಗೂ ಚೌಕಾಸಿ ಮಾಡಲಿಲ್ಲ. ಕಾಲಮಿತಿಯೊಳಗೆ ನಿರ್ಧರಿಸಲು ರಾಷ್ಟ್ರಪತಿಗಳನ್ನು ಕರೆಯಲಾಗುತ್ತದೆ, ಇಲ್ಲದಿದ್ದರೆ, ಅದು ಕಾನೂನಾಗುತ್ತದೆ” ಎಂದು ಧನ್ಕರ್ ಹೇಳಿದರು.

Read More

ಬೆಂಗಳೂರು: ಅಂಜನೇಯ ಮೇಲೆ ಅಪಾರವಾದ ಅಭಿಮಾನ ಹೊಂದಿರುವ ನಟ ಅರ್ಜುನ್ ಸರ್ಜಾ 2ನೇ ಪುತ್ರಿ ಈಗ ವಿದೇಶಿ ಪ್ರಜೆ ಜೊತೆಗೆ ಮದುವೆಯಾಗಲು ಮುಂದಾಗಿದ್ದಾರೆ ಎನ್ನಲಾಗಿದೆ. ಇಬ್ಬರು ಕೂಡ 13 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು ಎನ್ನಲಾಗಿದೆ. ಅಂಜನಾ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ, ಗೆಳೆಯನ ಪ್ರೇಮ ನಿವೇದನೆಗೆ ‘ಯೆಸ್‌ ಎನ್ನದೇ ಹೇಗಿರಲಿ’ ಎಂದು ಬರೆದುಕೊಂಡಿದ್ದಾರೆ. ಅದಕ್ಕೆ ಅರ್ಜುನ್ ಸರ್ಜಾ, ನಾನು ಮೊದಲೇ ಊಹಿಸಿದ್ದೆ, ಅವನು ನಿನ್ನ ಪಾರ್ಟ್ನರ್ ಆಗುತ್ತಾನೆಂದು ಅಂತ ಕಾಮೆಂಟ್ ಮಾಡಿದ್ದಾರೆ.

Read More

ಬೆಂಗಳೂರು: ಜಾತಿ ಗಣತಿ ಬಗ್ಗೆ ಅಂತಿಮ ತೀರ್ಮಾನಕ್ಕೆ ಬಾರದೇ ಕ್ಯಾಬಿನೆಟ್‌ ಸಭೆ ಕೊನೆಯಾಗಿದೆ ಎನ್ನುವ ಮಾಹಿತಿ ಪ್ರಾಥಮಿಕ ಮೂಲಗಳಿಂದ ತಿಳಿದು ಬಂದಿದೆ. ಸಭೆಯಲ್ಲಿ ಸಿಎಂ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಜಾತಿ ಗಣತಿ ಬಗ್ಗೆ ಲಿಖಿತ ರೂಪದಲ್ಲಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ ಅಂತ ಹೇಳಿದ್ದಾರ ಎನ್ನಲಾಗಿದೆ. ಇದರೊಂದಿಗೆ ಜಾತಿ ಗಣತಿ ಬಹಿರಂಗಗೊಳ್ಳುವ ಆಂತಕದಲ್ಲಿದ್ದವರಿಗೆ ನೆಮ್ಮದಿ ನೀಡಿದೆ. ಸಭೆಯಲ್ಲಿ ಒಕ್ಕಲಿಗ ಮತ್ತು ಲಿಂಗಾಯತ ಶಾಸಕರು ಮತ್ತು ಸಚಿವರು ಜಾತಿ ಗಣತಿ ಬಗ್ಗೆ ತೀವ್ರವಾದ ವಿರೋಧವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

Read More

ಹೈದ್ರಬಾದ್‌: ಹೈದರಾಬಾದ್ನ ಹೌಸಿಂಗ್ ಸೊಸೈಟಿಯ ಪಾರ್ಕಿಂಗ್ ಪ್ರದೇಶದಲ್ಲಿ ಸಾಕುಪ್ರಾಣಿಗಳ ಮಾಲೀಕನೆಂದು ಹೇಳಲಾದ ವ್ಯಕ್ತಿಯೊಬ್ಬ ಐದು ನವಜಾತ ಬೀದಿ ನಾಯಿಮರಿಗಳನ್ನು ಕ್ರೂರವಾಗಿ ಕೊಂದ ಘಟನೆಯ ಆತಂಕಕಾರಿ ವೀಡಿಯೊಗಳನ್ನು ಖಾನ್ ಎಂಬ ಎಕ್ಸ್ ಬಳಕೆದಾರರು ಹಂಚಿಕೊಂಡಿದ್ದಾರೆ. ಆರೋಪಿಯನ್ನು ಆಶಿಶ್ ಎಂದು ಗುರುತಿಸಲಾಗಿದ್ದು, ವೃತ್ತಿಯಲ್ಲಿ ಉದ್ಯಮಿ ಮತ್ತು ಸಾಕು ನಾಯಿ ಪೋಷಕರಾಗಿದ್ದಾನೆ. ಎಕ್ಸ್ನಲ್ಲಿ ಆಘಾತಕಾರಿ ವೀಡಿಯೊವನ್ನು ಹಂಚಿಕೊಂಡ ಖಾನ್, “ನಮ್ಮ ಸಮುದಾಯದಲ್ಲಿ ಸಂಭವಿಸಿದ ಪ್ರಾಣಿಗಳ ಕ್ರೌರ್ಯದ ಭಯಾನಕ ಕೃತ್ಯವನ್ನು ತುರ್ತಾಗಿ ವರದಿ ಮಾಡಲು ನಾನು ಬರೆಯುತ್ತಿದ್ದೇನೆ. ವ್ಯಕ್ತಿಯೊಬ್ಬ 5 ನವಜಾತ ನಾಯಿಮರಿಗಳ ತಲೆಯನ್ನು ಕಲ್ಲು ಮತ್ತು ಕಾಲಿನಿಂದ ಹೊಡೆದು ಕಂಬಕ್ಕೆ ಎಸೆದು ಕ್ರೂರವಾಗಿ ಕೊಂದಿದ್ದಾನೆ. ಬಳಕೆದಾರರು ತಮ್ಮ ಪೋಸ್ಟ್ನಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಪೆಟಾ ಇಂಡಿಯಾವನ್ನು ಟ್ಯಾಗ್ ಮಾಡಿದ್ದಾರೆ. ಮತ್ತೊಂದು ಪೋಸ್ಟ್ನಲ್ಲಿ, ಬಳಕೆದಾರರು ಈ “ನೀಚ” ಕೃತ್ಯದ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು ಖಾನ್ ತಮ್ಮ ಪೋಸ್ಟ್ನಲ್ಲಿ ಹಲವಾರು ಮಾಧ್ಯಮ ಸಂಸ್ಥೆಗಳನ್ನು ಟ್ಯಾಗ್ ಮಾಡಿದ್ದಾರೆ. ವರದಿಗಳ ಪ್ರಕಾರ, ಆಶಿಶ್ ತನ್ನ ನಾಯಿಯೊಂದಿಗೆ ವಾಕಿಂಗ್…

Read More

ಬೆಂಗಳೂರು: ಮಹಿಳೆ ಮತ್ತು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ನಿರ್ಭಯ ಯೋಜನೆಯಡಿ ಸಾರ್ವಜನಿಕ ಸೇವಾ ವಾಹನಗಳಿಗೆ ವೆಹಿಕಲ್ ಲೊಕೇಶನ್ ಟ್ರ್ಯಾಕಿಂಗ್ ಡಿವೈಸ್ ಮತ್ತು ಎಮರ್‍ಜೆನ್ಸಿ ಬಟನ್ ಅಳವಡಿಸುವ ಯೋಜನೆಯನ್ನು ಜಾರಿಗೊಳಿಸಲಾಗಿರುತ್ತದೆ. ಈ ಕುರಿತು ವಾಹನಗಳ ಚಲನವಲನ ನಿಗಾ ವಹಿಸುವ ಸಲುವಾಗಿ ಮತ್ತು ತುರ್ತು ಸನ್ನಿವೇಶಗಳಲ್ಲಿ ಸಂದೇಶ ರವಾನೆಯ ಉದ್ದೇಶಕ್ಕಾಗಿ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ ಅನ್ನು ಸಾರಿಗೆ ಆಯುಕ್ತರ ಕಛೇರಿಯಲ್ಲಿ ಸ್ಥಾಪಿಸಿದ್ದು, 24/7 ನಿರಂತರವಾಗಿ ಮತ್ತು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಲಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳು ಮತ್ತು ಸುದ್ದಿ ಮಾಧ್ಯಮಗಳಲ್ಲಿ ಸಾರ್ವಜನಿಕ ಸೇವಾ ವಾಹನಗಳಿಗೆ ಅಳವಡಿಸಿರುವ ಎಮರ್‍ಜೆನ್ಸಿ ಬಟನ್‍ಗಳನ್ನು ಒತ್ತಿದಾಗಲೂ ಸಾರಿಗೆ ಇಲಾಖೆಯ ಸಂಪರ್ಕ ಕೇಂದ್ರಕ್ಕೆ (ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್) ಯಾವುದೇ ಸಂದೇಶ ರವಾನೆಯಾಗುತ್ತಿಲ್ಲವೆಂದು ಪ್ರಕಟವಾಗಿದೆ. ಈ ಬಗ್ಗೆ ಪರಿಶೀಲಿಸಲಾಗಿ, ಕೆಲವು ವಾಹನಗಳಲ್ಲಿನ ವಿಎಲ್‍ಟಿ ಸಾಧನಗಳ ವೈರ್ ತುಂಡಾಗಿರುವುದು ಮತ್ತು ಅಸಮರ್ಪಕ ಜೋಡಣೆ ಹಾಗೂ ಮೇನ್ ಪವರ್ ಸ್ವಿಚ್ ಆನ್ ಆಗದೆ ಇರುವಂತಹ ಸಂದರ್ಭಗಳಲ್ಲಿ ವಿಎಲ್‍ಟಿ ಸಾಧನಗಳು ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದು ಗಮನಕ್ಕೆ…

Read More

ಬೆಂಗಳೂರು: ರಾಜ್ಯಾಧ್ಯಂತ ನಡೆಸಲಾಗುತ್ತಿದ್ದಂತ ಲಾರಿ ಮುಷ್ಕರವನ್ನು ವಾಪಾಸ್ ಪಡೆದಿರುವುದಾಗಿ ಅಧ್ಯಕ್ಷ ಷಣ್ಮುಗಪ್ಪ ಘೋಷಿಸಿದ್ದಾರೆ. ಈ ಮೂಲಕ ಸಚಿವ ರಾಮಲಿಂಗಾರೆಡ್ಡಿ ನಡೆಸಿದಂತ ಸಂಧಾನ ಸಭೆ ಸಕ್ಸಸ್ ಆಗಿದ್ದು, ಲಾರಿ ಮುಷ್ಕರ ವಾಪಾಸ್ ಪಡೆದಂತೆ ಆಗಿದೆ. ಇಂದು ವಿಧಾನಸೌಧದಲ್ಲಿನ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರ ಕಚೇರಿಯಲ್ಲಿ ಲಾರಿ ಮಾಲೀಕರ ಸಂಘದೊಂದಿಗೆ ಮೂರನೇ ಬಾರಿ ಸಭೆ ನಡೆಸಲಾಯಿತು. ಈ ಹಿಂದೆ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಒಂದು ಸುತ್ತಿನ ಸಭೆ, ಆ ಬಳಿಕ ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಎರಡನೇ ಸಭೆಯನ್ನು ನಿನ್ನೆ ನಡೆಸಲಾಗಿತ್ತು. ಇಂದಿನ ಸಭೆಯಲ್ಲಿ ಲಾರಿ ಮಾಲೀಕರ ಕೆಲ ಬೇಡಿಕೆಗಳನ್ನು ಈಡೇರಿಸೋದಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂಬುದಾಗಿ ತಿಳಿದು ಬಂದಿದೆ. ಅದರಲ್ಲಿ ಟೋಲ್ ಗಳಲ್ಲಿ ಲಾರಿ, ಗೂಡ್ಸ್ ವಾಹನಗಳಿಗೆ ದರ ಫಿಕ್ಸ್ ಮಾಡಲು ಸಚಿವ ರಾಮಲಿಂಗಾರೆಡ್ಡಿ ಒಪ್ಪಿಗೆ ಸೂಚಿಸಿದ್ದಾರೆ. ಇನ್ನೂ ಕೆಲ ಬೇಡಿಕೆ ಈಡೇರಿಸೋದಕ್ಕೆ ಸರ್ಕಾರ ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳೋ ಭರವಸೆಯನ್ನು ನೀಡಿದ್ದಾರೆ. ಹೀಗಾಗಿ ಲಾರಿ ಮಾಲೀಕರ ಜೊತೆಗಿನ ಸಂಧಾನ ಸಭೆ ಸಕ್ಸಸ್ ಆಗಿದ್ದು,…

Read More

ಬೆಂಗಳೂರು: 2025-26ರ ವರ್ಷದ ಅಗ್ನಿವೀರ್ ನೇಮಕಾತಿ ರ್ಯಾಲಿಗಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಆನ್‍ಲೈನ್ ನೋಂದಣಿ ಪ್ರಕ್ರಿಯೆಯು 2025ನೇ ಮಾರ್ಚ್ 12 ರಿಂದ ಪ್ರಾರಂಭವಾಗಿದ್ದು, ಏಪ್ರಿಲ್ 25 ರವರೆಗೆ ನೋಂದಣಿ ಮಾಡಿಕೊಳ್ಳಬಹುದು. ಕರ್ನಾಟಕದ ಎಲ್ಲಾ ಜಿಲ್ಲೆಗಳ ಅಭ್ಯರ್ಥಿಗಳು ಅಗ್ನಿವೀರ್ ಜನರಲ್ ಡ್ಯೂಟಿ, ಅಗ್ನಿವೀರ್ ಟೆಕ್ನಿಕಲ್, ಅಗ್ನೀವೀರ್ ಕಚೇರಿ ಸಹಾಯಕ /ಸ್ಟೋರ್ ಕೀಪರ್ ತಾಂತ್ರಿಕ, ಅಗ್ನಿವೀರ್ ಟ್ರೇಡ್‍ಮನ್ ಗೆ 10 ತರಗತಿ ಪಾಸಾಗಿರಬೇಕು ಹಾಗೂ ಅಗ್ನಿವೀರ್ ಜನರಲ್ ಡ್ಯೂಟಿ (ಮಹಿಳಾ ಮಿಲಿಟರಿ ಪೆÇಲೀಸ್), ನಸಿರ್ಂಗ್ ಅಸಿಸ್ಟೆಂಟ್, ನಸಿರ್ಂಗ್ ಅಸಿಸ್ಟೆಂಟ್ ಪಶುವೈದ್ಯಕೀಯ ಮತ್ತು ಸಿಪಾಯ್ ಫಾರ್ಮಾ ಅಗ್ನಿವೀರ್ ಟ್ರೇಡ್‍ಮನ್ ಗೆ 8 ತರಗತಿ ಪಾಸಾಗಿರಬೇಕು. ನೋಂದಾಯಿಸಿಕೊಳ್ಳಲು ಪ್ರತಿ ವರ್ಗದ ವಯಸ್ಸು, ಶೈಕ್ಷಣಿಕ ಅರ್ಹತೆಗಳು ಮತ್ತು ಇತರ ಮಾನದಂಡಗಳ ಬಗ್ಗೆ ವಿವರವಾದ ಮಾಹಿತಿಯನ್ನು www.joinindianarmy.nic.in ನಲ್ಲಿ ಅಪ್‍ಲೋಡ್ ಮಾಡಲಾಗಿರುವ ಅಧಿಸೂಚನೆಯಲ್ಲಿ ಲಭ್ಯವಿರುತ್ತದೆ. ಆಸಕ್ತ ಅಭ್ಯರ್ಥಿಗಳು ಭಾರತೀಯ ಸೈನ್ಯದ ವೆಬ್‍ಸೈಟ್ www.joinindianarmy.nic.in ನಲ್ಲಿ ಖಾತೆಯನ್ನು ರಚಿಸಬೇಕು ಮತ್ತು ಅಗತ್ಯ ವಿವರಗಳನ್ನು ಒದಗಿಸುವ ಮೂಲಕ ನೋಂದಾಯಿಸಿಕೊಳ್ಳಬಹುದು. ನೋಂದಣಿ ಪ್ರಕ್ರಿಯೆಯಲ್ಲಿ ಯಾವುದೇ…

Read More

ಮೀರತ್: ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಸೌರಭ್ ರಜಪೂತ್ ಹತ್ಯೆಯಂತೆಯೇ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಂದು, ಹಾವು ಕಚ್ಚಿದ ಘಟನೆ ಎಂದು ಬಿಂಬಿಸಲು ಮುಂದಾಗಿದ್ದಳು, ಆದರೆ ತನಿಖೆ ಬಳಿಕ ಅದು ಹತ್ಯೆ ಅಂತ ತಿಳಿದು ಬಂದಿದೆ. ಆದರೆ, ಮರಣೋತ್ತರ ವರದಿಯು ಭಯಾನಕ ಸತ್ಯವನ್ನು ಬಹಿರಂಗಪಡಿಸಿದೆ. ಅಕ್ಬರ್ಪುರ್ ಸಾದತ್ ಗ್ರಾಮದ ನಿವಾಸಿ ಅಮಿತ್ ಕಶ್ಯಪ್ ಅಲಿಯಾಸ್ ಮಿಕ್ಕಿ (25) ಆರಂಭದಲ್ಲಿ ಇದ್ದಂತೆ ಹಾವು ಕಡಿತದಿಂದ ಸಾವನ್ನಪ್ಪಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಬದಲಾಗಿ, ಅವನ ಹೆಂಡತಿ ರವಿತಾ ಮತ್ತು ಅವಳ ಪ್ರಿಯಕರ ಅಮರ್ದೀಪ್ ಅವನನ್ನು ಕತ್ತು ಹಿಸುಕಿ ಕೊಂದಿದ್ದಾರೆ. ತನಿಖಾಧಿಕಾರಿಗಳನ್ನು ತಪ್ಪುದಾರಿಗೆಳೆಯಲು ಮತ್ತು ಸಾವನ್ನು ಆಕಸ್ಮಿಕ ಎಂದು ಚಿತ್ರಿಸಲು ಇವರಿಬ್ಬರು ಅಮಿತ್ ಅವರ ಹಾಸಿಗೆಯ ಮೇಲೆ ಜೀವಂತ ವಿಷಕಾರಿ ಹಾವನ್ನು ಇರಿಸಿದರು ಎನ್ನಲಾಗಿದೆ. ಭಾನುವಾರ ಬೆಳಿಗ್ಗೆ ಅಮಿತ್ ಅವರ ಶವ ಪತ್ತೆಯಾಗಿದ್ದು, ಹಾಸಿಗೆಯ ಮೇಲೆ ಜೀವಂತ ಹಾವಿನೊಂದಿಗೆ ಮಲಗಿದ್ದ. ಇದೇ ವೇಎ ಅವರ ದೇಹದ…

Read More