Subscribe to Updates
Get the latest creative news from FooBar about art, design and business.
Author: ಅವಿನಾಶ್ ಆರ್ ಭೀಮಸಂದ್ರ
ಅವಿನಾಶ್ ಆರ್ ಭೀಮಸಂದ್ರ ಪರಿಚಯ: ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 15 ವರ್ಷಗಳ ಅನುಭವ, ತನಿಖಾ ಪತ್ರಿಕೋದ್ಯಮ, ಅಪರಾಧ ವರದಿಗಾರಿಕೆ ಇವರ ಪ್ರಮುಖ ಆಸಕ್ತಿ ವಿಭಾಗ. ಊರು ಕಲ್ಪತರು ನಾಡು ತುಮಕೂರು ಜಿಲ್ಲೆಯ ಇವರು ಓದಿದ್ದು ಪದವಿಯಲ್ಲಿ ಪತ್ರಿಕೋದ್ಯಮ, ಐಚ್ಚಿಕ ಕನ್ನಡ, ಮನೋವಿಜ್ಞಾನ, ಪತ್ರಿಕೋದ್ಯಮದಲ್ಲಿ ಸ್ನಾತ್ತಕೋತ್ತರ ಪದವಿ. ಕಸ್ತೂರಿ ನ್ಯೂಸ್. ವಿಜಯವಾಣಿ, ಪ್ರಜಾಪ್ರಗತಿ, ಪ್ರಗತಿ ಟಿವಿಯಲ್ಲಿ ಕೆಲಸ ಮಾಡಿದ ಅನುಭವವಿದೆ. ಕನ್ನಡಿಗರ ಮನೆಮಾತಾಗಿರುವ ಕನ್ನಡ ನ್ಯೂಸ್‌ನೌ.ಕಾಂ ಡಿಜಿಟಲ್ ಮೀಡಿಯಾದ ಸಂಸ್ಥಾಪಕ ಸಂಪಾದಕರು ಕೂಡ ಹೌದು.
ನವದೆಹಲಿ : ಇಂದಿನ ಕಾಲದಲ್ಲಿ ಷೇರು ಮಾರುಕಟ್ಟೆ ಮತ್ತು ಮ್ಯೂಚುವಲ್ ಫಂಡ್’ಗಳಂತಹ ಹೂಡಿಕೆ ಮಾರ್ಗಗಳು ತುಂಬಾ ಅಪಾಯಕಾರಿ ಎಂದು ಪರಿಗಣಿಸುವವರಿಗೆ, ಅಂಚೆ ಕಚೇರಿ ನೀಡುವ ಯೋಜನೆಗಳು ವಿಶ್ವಾಸಾರ್ಹ ಪರ್ಯಾಯವಾಗಿದೆ. ಮಧ್ಯಮ ವರ್ಗದ ಕುಟುಂಬಗಳು ಮತ್ತು ಸಂಬಳ ಪಡೆಯುವ ವ್ಯಕ್ತಿಗಳು ಯಾವುದೇ ಅಪಾಯವಿಲ್ಲದೆ ತಮ್ಮ ಭವಿಷ್ಯದ ಅಗತ್ಯಗಳಿಗಾಗಿ ವ್ಯವಸ್ಥಿತವಾಗಿ ಹಣವನ್ನು ಉಳಿಸಲು ಅಂಚೆ ಕಚೇರಿ ಮರುಕಳಿಸುವ ಠೇವಣಿ ಅತ್ಯುತ್ತಮ ವೇದಿಕೆಯಾಗಿದೆ. ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಉಳಿಸುವ ಮೂಲಕ, ನೀವು ಮುಕ್ತಾಯದ ನಂತರ ದೊಡ್ಡ ಮೊತ್ತವನ್ನ ಪಡೆಯುತ್ತೀರಿ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಈಗ ಹೇಗೆ ಲಾಭದಾಯಕ ಆದಾಯವನ್ನ ಪಡೆಯಬಹುದು ಎಂಬುದನ್ನು ನೋಡೋಣ. 5 ವರ್ಷಗಳ ಯೋಜನೆ.. ಸ್ಥಿರ ಆದಾಯ.! ಅಂಚೆ ಕಚೇರಿಯ ಆರ್‌ಡಿ ಅವಧಿ 5 ವರ್ಷಗಳು. ಫೆಬ್ರವರಿ 2026 ರವರೆಗೆ ಈ ಯೋಜನೆಯ ಮೇಲೆ ಸರ್ಕಾರವು ಶೇಕಡಾ 6.7 ರಷ್ಟು ಬಡ್ಡಿದರವನ್ನು ನೀಡುತ್ತಿದೆ. ಈ ಬಡ್ಡಿಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಖಾತೆಗೆ ಜಮಾ ಮಾಡಲಾಗುತ್ತದೆ. ಇದು ಹೂಡಿಕೆದಾರರಿಗೆ…
ಡಿಜಿಟಲ್ ಡೆಸ್ಕ್ : ಇಂದಿನ ದಿನಗಳಲ್ಲಿ ಫ್ರಿಡ್ಜ್ ಇಲ್ಲದ ಮನೆಗಳೇ ಇಲ್ಲ. ಹಣ್ಣು, ತರಕಾರಿ ಹಾಗೂ ಉಳಿದ ಆಹಾರ ಪದಾರ್ಥಗಳನ್ನು ತಾಜಾವಾಗಿಡಲು ನಾವು 24 ಗಂಟೆಯೂ ಫ್ರಿಡ್ಜ್ ಅನ್ನು ಆನ್ ಮಾಡಿರುತ್ತೇವೆ. ಆದರೆ, ಮನೆಯ ಒಟ್ಟು ವಿದ್ಯುತ್ ಬಳಕೆಯಲ್ಲಿ ಶೇ. 8 ರಿಂದ 13 ರಷ್ಟು ಪಾಲು ಈ ರೆಫ್ರಿಜರೇಟರ್‌ದ್ದೇ ಎಂಬುದು ನಿಮಗೆ ಗೊತ್ತೇ? ಹವಾಮಾನಕ್ಕೆ ತಕ್ಕಂತೆ ನಾವು ಫ್ರಿಡ್ಜ್ ಸೆಟ್ಟಿಂಗ್ ಬದಲಿಸದಿದ್ದರೆ, ಅನಗತ್ಯವಾಗಿ ಸಾವಿರಾರು ರೂಪಾಯಿ ಬಿಲ್ ಪಾವತಿಸಬೇಕಾಗುತ್ತದೆ. ನಿಮ್ಮ ಫ್ರಿಡ್ಜ್‌ನ ಫ್ರೀಜರ್ ಭಾಗದಲ್ಲಿ ಒಂದು ‘ಡಿಫ್ರಾಸ್ಟ್’ (Defrost) ಬಟನ್ ಇರುತ್ತದೆ. ಫ್ರೀಜರ್‌ನಲ್ಲಿ ಅತಿಯಾಗಿ ಮಂಜುಗಡ್ಡೆ (Ice) ಶೇಖರಣೆಯಾದಾಗ, ಸಂಕೋಚಕ (Compressor) ಮೇಲೆ ಒತ್ತಡ ಹೆಚ್ಚಾಗುತ್ತದೆ. ಇದು ಹೆಚ್ಚಿನ ವಿದ್ಯುತ್ ಹೀರಿಕೊಳ್ಳಲು ಕಾರಣವಾಗುತ್ತದೆ. ಏನು ಮಾಡಬೇಕು?: ಫ್ರೀಜರ್‌ನಲ್ಲಿ ಐಸ್ ಜಾಸ್ತಿಯಾದಾಗ ಈ ಡಿಫ್ರಾಸ್ಟ್ ಬಟನ್ ಒತ್ತಿ. ಇದು ಮಂಜುಗಡ್ಡೆಯನ್ನು ಕರಗಿಸಿ ಸಂಕೋಚಕದ ಹೊರೆ ಕಡಿಮೆ ಮಾಡುತ್ತದೆ. ಇದರಿಂದ ವಿದ್ಯುತ್ ಬಳಕೆ ತಕ್ಷಣವೇ ಇಳಿಕೆಯಾಗುತ್ತದೆ. ಋತುಮಾನಕ್ಕೆ ತಕ್ಕಂತೆ ತಾಪಮಾನ ಬದಲಿಸಿ ಫ್ರಿಡ್ಜ್‌ನಲ್ಲಿ…
ಬೆಂಗಳೂರು: ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿದ್ದ ರಾಜ್ಯದ ಲಕ್ಷಾಂತರ ನಿರುದ್ಯೋಗಿ ಯುವಜನತೆಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ಬಹುದಿನಗಳಿಂದ ನಾನಾ ಕಾರಣಗಳಿಂದ, ವಿಶೇಷವಾಗಿ ಮೀಸಲಾತಿ ಗೊಂದಲಗಳಿಂದ ನೆನೆಗುದಿಗೆ ಬಿದ್ದಿದ್ದ ಬರೋಬ್ಬರಿ 56,432 ನೇರ ನೇಮಕಾತಿ ಹುದ್ದೆಗಳನ್ನು ತುಂಬಲು ಸರ್ಕಾರ ಅಧಿಕೃತವಾಗಿ ಹಸಿರು ನಿಶಾನೆ ತೋರಿದೆ. ಮುಂದಿನ 30 ದಿನಗಳ ಒಳಗಾಗಿ ನೇಮಕಾತಿ ಪ್ರಕ್ರಿಯೆಗಳನ್ನು ಆರಂಭಿಸುವಂತೆ ಎಲ್ಲಾ ಇಲಾಖೆಗಳು ಹಾಗೂ ನೇಮಕಾತಿ ಪ್ರಾಧಿಕಾರಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡಗಳ (ST) ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ 2022ರಲ್ಲಿ ತರಲಾಗಿದ್ದ ಕಾಯ್ದೆಯನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ನವೆಂಬರ್ 27, 2025 ರಂದು ಮಧ್ಯಂತರ ಆದೇಶ ನೀಡಿದ್ದ ಮಾನ್ಯ ಉಚ್ಚ ನ್ಯಾಯಾಲಯವು, ಹೆಚ್ಚಿಸಿದ ಮೀಸಲಾತಿ ಆಧಾರದ ಮೇಲೆ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸದಂತೆ ತಡೆ ನೀಡಿತ್ತು. ಇದರಿಂದಾಗಿ ರಾಜ್ಯದಲ್ಲಿ ನೇಮಕಾತಿ ಪ್ರಕ್ರಿಯೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದವು. ಇದೀಗ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR)…
ನವದೆಹಲಿ: ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಪಡೆಗಳು ನಡೆಸಿದ ಜಂಟಿ ದಾಳಿಯ ಬೆನ್ನಲ್ಲೇ ಮಧ್ಯಪ್ರಾಚ್ಯದಲ್ಲಿ (Middle East) ಯುದ್ಧದ ಕಾರ್ಮೋಡ ದಟ್ಟವಾಗಿದೆ. ಈ ಜಾಗತಿಕ ಬಿಕ್ಕಟ್ಟಿನ ಪರಿಣಾಮಗಳು ಭಾರತದ ಮೇಲೂ ಬೀರಬಹುದಾದ ಪ್ರಭಾವವನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಭಾನುವಾರ ರಾತ್ರಿಯೇ ‘ಭದ್ರತಾ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ’ಯ (Cabinet Committee on Security – CCS) ತುರ್ತು ಸಭೆಯನ್ನು ಕರೆದಿದ್ದಾರೆ. ಇತ್ತೀಚೆಗೆ ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಪಡೆಗಳು ನಡೆಸಿದ ಸರಣಿ ವಾಯುದಾಳಿಗಳಿಂದಾಗಿ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದೆ. ಯಾವುದೇ ಕ್ಷಣದಲ್ಲಾದರೂ ಈ ಸಂಘರ್ಷವು ಪೂರ್ಣ ಪ್ರಮಾಣದ ಯುದ್ಧವಾಗಿ ಮಾರ್ಪಡುವ ಅಪಾಯವಿದೆ. ಈ ಬಿಕ್ಕಟ್ಟು ಕೇವಲ ಆ ದೇಶಗಳಿಗೆ ಮಾತ್ರವಲ್ಲದೆ, ಇಡೀ ವಿಶ್ವದ ಆರ್ಥಿಕತೆ ಮತ್ತು ಭದ್ರತೆಯ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕ ಸೃಷ್ಟಿಸಿದೆ. ಈ ಬದಲಾಗುತ್ತಿರುವ ಜಾಗತಿಕ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಭಾರತ ಸರ್ಕಾರ, ಮುಂದಿನ ರಕ್ಷಣಾತ್ಮಕ ಹೆಜ್ಜೆಗಳನ್ನು ಇಡಲು ಈ ಉನ್ನತ ಮಟ್ಟದ ಸಭೆಯನ್ನು…
ಗದಗ: ಇತ್ತೀಚೆಗೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹೊರವಲಯದ ಜಮೀನೊಂದರಲ್ಲಿ ನಡೆದಿದ್ದ ಯುವಕನ ಬರ್ಬರ ಹತ್ಯೆ ಪ್ರಕರಣ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿತ್ತು. ಇದೀಗ ಈ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ರಹಸ್ಯ ಭೇದಿಸುವಲ್ಲಿ ಗದಗ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದು, ಪ್ರಕರಣಕ್ಕೊಂದು ಅಚ್ಚರಿಯ ‘ಬಿಗ್ ಟ್ವಿಸ್ಟ್’ ಸಿಕ್ಕಿದೆ. ತನ್ನ ಪ್ರೇಯಸಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಎಂಬ ಒಂದೇ ಕಾರಣಕ್ಕೆ, ಆಕೆಯ ಪ್ರಿಯಕರನೇ ಸಂಚು ರೂಪಿಸಿ ಯುವಕನನ್ನು ಕತ್ತು ಕೊಯ್ದು ಹತ್ಯೆಗೈದಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಮೃತ ಯುವಕನನ್ನು ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ನಿವಾಸಿ ಫಾರೂಕ್ ಸನದಿ (25 ವರ್ಷ) ಎಂದು ಗುರುತಿಸಲಾಗಿದೆ. ಫೆಬ್ರವರಿ 28ರಂದು ಫಾರೂಕ್‌ನನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಲಾಗಿತ್ತು. ಘಟನೆ ನಡೆದ ಕೇವಲ 24 ಗಂಟೆಗಳ ಒಳಗೆ ನಾಲ್ವರು ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ತ್ರಿಕೋನ ಪ್ರೇಮವೇ ಕೊಲೆಗೆ ಕಾರಣ! ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಡಬೇಕಿದ್ದ ಯುವಕನ ಜೀವವನ್ನು ‘ತ್ರಿಕೋನ ಪ್ರೇಮ’ ಬಲಿಪಡೆದಿದೆ. ಶಿಗ್ಲಿ ಗ್ರಾಮದ ಯುವಕ ಫಾರೂಕ್…
ಉಡುಪಿ: ಕರಾವಳಿಯ ಸುಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಉಡುಪಿ ಶ್ರೀ ಕೃಷ್ಣಮಠದಲ್ಲಿ ಮಾರ್ಚ್ 3ರಂದು ನಡೆಯಲಿರುವ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ವಿಶೇಷ ಆಚರಣೆಗಳು ಮತ್ತು ನಿಯಮಗಳನ್ನು ಜಾರಿಗೊಳಿಸಲಾಗಿದೆ. ಈ ಕುರಿತು ಮಠದ ದಿವಾನರಾದ ಡಾ. ಉದಯ ಸರಳತ್ತಾಯರು ಮಾಧ್ಯಮಗಳಿಗೆ ಸಮಗ್ರ ಮಾಹಿತಿ ನೀಡಿದ್ದಾರೆ. ಗ್ರಹಣದ ಸಮಯ ಮತ್ತು ಗೋಚರತೆ: ಮಾರ್ಚ್ 3ರ ಮಂಗಳವಾರದಂದು ‘ಗ್ರಸ್ತೋದಯ ಚಂದ್ರಗ್ರಹಣ’ ಸಂಭವಿಸಲಿದೆ. ಉಡುಪಿ ಸೇರಿದಂತೆ ಕರಾವಳಿ ಭಾಗದಲ್ಲಿ ಸೂರ್ಯಾಸ್ತದ ಸಮಯವಾದ ಸಂಜೆ 6:19 ರಿಂದ 6:47 ರವರೆಗೆ ಮಾತ್ರ ಗ್ರಹಣದ ಪ್ರಭಾವ ಇರಲಿದೆ. ವಿಶೇಷವೆಂದರೆ, ಈ ಗ್ರಹಣವು ಕೇವಲ ಎಂಟು ನಿಮಿಷಗಳ ಕಾಲ ಮಾತ್ರ ಸ್ಪಷ್ಟವಾಗಿ ಗೋಚರಿಸಲಿದೆ ಎಂದು ಅವರು ತಿಳಿಸಿದ್ದಾರೆ. ಅನ್ನದಾನ ಇರುವುದಿಲ್ಲ: ಗ್ರಹಣದ ಹಿನ್ನೆಲೆಯಲ್ಲಿ ಅಂದು ಮಧ್ಯಾಹ್ನ ಮತ್ತು ರಾತ್ರಿ ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ ಅನ್ನಪ್ರಸಾದದ ವ್ಯವಸ್ಥೆ ಇರುವುದಿಲ್ಲ. ಪೂಜಾ ವಿಧಿವಿಧಾನ: ಗ್ರಹಣ ಮುಕ್ತಾಯವಾದ ನಂತರ ಅಂದರೆ ರಾತ್ರಿ 7 ಗಂಟೆಗೆ ಸ್ನಾನಾದಿ ಶುದ್ಧಿ ಕಾರ್ಯಗಳನ್ನು ಪೂರೈಸಿ, ಶ್ರೀ ಕೃಷ್ಣನಿಗೆ ವಿಶೇಷ ರಾತ್ರಿ ಪೂಜೆಯನ್ನು ನೆರವೇರಿಸಲಾಗುತ್ತದೆ.…
ಸಾಂಧಾರ್ಭಿಕ ಚಿತ್ರ ಕುಶಾಲನಗರ: ಇಂದಿನ ದಿನಗಳಲ್ಲಿ ಒಂದು ಸರ್ಕಾರಿ ಕೆಲಸ ಪಡೆಯುವುದೆಂದರೆ ಅದು ಆಕಾಶ ಕುಸುಮವಿದ್ದಂತೆ. ಸಾವಿರಾರು ಅಭ್ಯರ್ಥಿಗಳ ನಡುವೆ ಪೈಪೋಟಿ ನಡೆಸಿ, ಹಗಲಿರುಳು ಓದಿ ಒಂದು ಹುದ್ದೆ ಗಿಟ್ಟಿಸಿಕೊಳ್ಳುವುದು ಸಾಮಾನ್ಯದ ಮಾತಲ್ಲ. ಆದರೆ, ಮಣ್ಣಿನ ಮೇಲಿನ ಮಮಕಾರ ಹಾಗೂ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಅದಮ್ಯ ಆಸಕ್ತಿಯಿಂದಾಗಿ ಪೊಲೀಸ್ ಪೇದೆಯೊಬ್ಬರು ತಮಗೆ ಸಿಕ್ಕಿದ್ದ ಸುಭದ್ರ ಸರ್ಕಾರಿ ಉದ್ಯೋಗವನ್ನೇ ತ್ಯಜಿಸಿರುವ ಅಪರೂಪದ ಘಟನೆ ವರದಿಯಾಗಿದೆ. ಕೊಡಗು ಜಿಲ್ಲೆಯಲ್ಲಿ ಪೊಲೀಸ್ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದ ತೇಜಸ್ವಿ ಅವರು, ‘ಖಾಕಿ’ಯನ್ನು ಕಳಚಿಟ್ಟು ‘ನೇಗಿಲು’ ಹಿಡಿಯಲು ಸಜ್ಜಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಯಾರೀ ತೇಜಸ್ವಿ? ಶಿವಮೊಗ್ಗ ಜಿಲ್ಲೆಯ ಸಿರಿಗೆರೆ ಗ್ರಾಮದ ಮೂಲದವರಾದ ತೇಜಸ್ವಿ ಅವರು ಕಳೆದ ಆರು ವರ್ಷಗಳಿಂದ ಕೊಡಗು ಜಿಲ್ಲೆಯ ಸುಂಟಿಕೊಪ್ಪ ಮತ್ತು ಕುಶಾಲನಗರ ಠಾಣೆಗಳಲ್ಲಿ ಸಿವಿಲ್ ಕಾನ್ಸ್‌ಟೇಬಲ್ ಆಗಿ ಅತ್ಯಂತ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದರು. ವಿವಾಹಿತರಾಗಿರುವ ಇವರಿಗೆ ಇಬ್ಬರು ಮಕ್ಕಳಿದ್ದಾರೆ. ವೃತ್ತಿಯಲ್ಲಿ ಪೊಲೀಸ್ ಆಗಿದ್ದರೂ, ಇವರ ಮನಸ್ಸು ಮಾತ್ರ ಸದಾ ಮಣ್ಣಿನ ವಾಸನೆಯನ್ನು ಅರಸುತ್ತಿತ್ತು.…
ದುಬೈ/ನವದೆಹಲಿ: ಮಧ್ಯಪ್ರಾಚ್ಯ ಏಷ್ಯಾದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿರುವ ಬೆನ್ನಲ್ಲೇ, ಅಲ್ಲಿನ ನಿವಾಸಿಗಳಲ್ಲಿ ತೀವ್ರ ಆತಂಕ ಮನೆಮಾಡಿದೆ. ಈ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಪ್ರೌಢಶಿಕ್ಷಣ ಮಂಡಳಿ (CBSE), ಗಲ್ಫ್ ರಾಷ್ಟ್ರಗಳಲ್ಲಿ ನಾಳೆ (ಮಾರ್ಚ್ 2, ಸೋಮವಾರ) ನಡೆಯಬೇಕಿದ್ದ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ತುರ್ತಾಗಿ ಮುಂದೂಡಿದೆ. ಯಾವೆಲ್ಲಾ ರಾಷ್ಟ್ರಗಳಲ್ಲಿ ಪರೀಕ್ಷೆ ಮುಂದೂಡಿಕೆ? ಇರಾನ್ ಮತ್ತು ಇಸ್ರೇಲ್ ನಡುವಿನ ಕ್ಷಿಪಣಿ ದಾಳಿ ಮತ್ತು ವಾಯುಪ್ರದೇಶಗಳ ಮುಚ್ಚುವಿಕೆಯಿಂದಾಗಿ ಈ ಕೆಳಗಿನ ದೇಶಗಳಲ್ಲಿ ಪರೀಕ್ಷೆಯನ್ನು ಸ್ಥಗಿತಗೊಳಿಸಲಾಗಿದೆ: ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಕತಾರ್ ಸೌದಿ ಅರೇಬಿಯಾ ಕುವೈತ್ ಬಹ್ರೇನ್ ಓಮನ್ ಇರಾನ್ ಮುಂದೂಡಿಕೆಗೆ ಪ್ರಮುಖ ಕಾರಣವೇನು? ಇತ್ತೀಚೆಗೆ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಮೃತಪಟ್ಟಿದ್ದಾರೆ ಎಂಬ ವರದಿಗಳು ಬಂದ ಬೆನ್ನಲ್ಲೇ ಈ ಭಾಗದಲ್ಲಿ ಯುದ್ಧದ ಜ್ವಾಲೆ ಹೊತ್ತಿಕೊಂಡಿದೆ. ಇರಾನ್ ಪಡೆಗಳು ವಾಷಿಂಗ್ಟನ್ ಮತ್ತು ಟೆಲ್…
ನಮ್ಮ ಹಿಂದೂ ಸಂಪ್ರದಾಯದಲ್ಲಿ ‘ಶಕುನ ಶಾಸ್ತ್ರ’ಕ್ಕೆ ಬಹಳ ಮಹತ್ವದ ಸ್ಥಾನವಿದೆ. ದಿನನಿತ್ಯದ ಜೀವನದಲ್ಲಿ ನಡೆಯುವ ಕೆಲವು ಘಟನೆಗಳು ಭವಿಷ್ಯದ ಶುಭ ಅಥವಾ ಅಶುಭ ಮುನ್ಸೂಚನೆಗಳನ್ನು ನೀಡುತ್ತವೆ ಎಂಬುದು ನಂಬಿಕೆ. ಅದರಲ್ಲಿಯೂ ಮುಖ್ಯವಾಗಿ, ನಾವು ಯಾವುದೋ ಕೆಲಸಕ್ಕೆ ಹೊರಟಾಗ ಬೆಕ್ಕು ಅಡ್ಡ ಬಂದರೆ ಸಾಕು, ಅಲ್ಲಿಗೆ ಒಂದು ನಿಮಿಷ ನಿಂತು ಅಥವಾ ದಾರಿ ಬದಲಿಸಿ ಹೋಗುವವರೇ ಹೆಚ್ಚು. ಹಾಗಾದರೆ, ಬೆಕ್ಕು ದಾರಿ ದಾಟುವುದು ನಿಜಕ್ಕೂ ಕೆಟ್ಟದ್ದೇ? ಜ್ಯೋತಿಷ್ಯ ಶಾಸ್ತ್ರ ಈ ಬಗ್ಗೆ ಏನು ಹೇಳುತ್ತದೆ? ಈ ಕುರಿತ ಸಮಗ್ರ ಮಾಹಿತಿ ಇಲ್ಲಿದೆ. ೧. ಜ್ಯೋತಿಷ್ಯ ಮತ್ತು ಬೆಕ್ಕಿನ ಸಂಬಂಧ: ರಾಹು-ಕೇತುಗಳ ಪ್ರಭಾವ ವೈದಿಕ ಜ್ಯೋತಿಷ್ಯದ ಪ್ರಕಾರ, ಬೆಕ್ಕುಗಳನ್ನು ‘ರಾಹು’ ಮತ್ತು ‘ಕೇತು’ ಗ್ರಹಗಳ ವಾಹನ ಅಥವಾ ಪ್ರತಿನಿಧಿ ಎಂದು ಪರಿಗಣಿಸಲಾಗುತ್ತದೆ. ರಾಹು ಮತ್ತು ಕೇತುಗಳು ಜೀವನದಲ್ಲಿ ಅನಿರೀಕ್ಷಿತ ಬದಲಾವಣೆ, ಗೊಂದಲ ಮತ್ತು ಅಡೆತಡೆಗಳನ್ನು ತರುವ ಗ್ರಹಗಳು. ವಿಶೇಷವಾಗಿ ಕಪ್ಪು ಬೆಕ್ಕು ದಾರಿ ದಾಟಿದಾಗ, ಅದು ರಾಹುವಿನ ಪ್ರಭಾವವನ್ನು ಸೂಚಿಸುತ್ತದೆ ಎಂದು ನಂಬಲಾಗಿದೆ. ಇದು…
ಬೆಂಗಳೂರು: ಬೇಸಿಗೆಯ ಬಿಸಿಲಿನ ಆರಂಭದ ಬೆನ್ನಲ್ಲೇ ರಾಜ್ಯದ ಜನತೆಗೆ ಮುಖ್ಯಮಂತ್ರಿಗಳು ಒಂದು ಸಮಾಧಾನಕರ ಸುದ್ದಿ ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ವಿದ್ಯುತ್ ದರ ಏರಿಕೆ (Electricity Price Hike) ಕುರಿತಾದ ಚರ್ಚೆಗಳಿಗೆ ಮುಖ್ಯಮಂತ್ರಿಗಳು ಪೂರ್ಣವಿರಾಮ ಇಟ್ಟಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸದ್ಯಕ್ಕೆ ವಿದ್ಯುತ್ ದರವನ್ನು ಹೆಚ್ಚಿಸುವ ಯಾವುದೇ ಆಲೋಚನೆ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು. ಕನ್ನಡಿಗರನ್ನು ಸುರಕ್ಷಿತವಾಗಿ ವಾಪಸ್ಸು ಕರೆತರಲಾಗುವುದು ಅರಬ್ ದೇಶಗಳಲ್ಲಿ ವಾಸಿಸುತ್ತಿರುವ ಕನ್ನಡಿಗರ ಸುರಕ್ಷತೆಯ ಬಗ್ಗೆ ಮುಖ್ಯ ಕಾರ್ಯದರ್ಶಿ, ಸ್ಥಾನಿಕ ಆಯುಕ್ತರೊಂದಿಗೆ ಚರ್ಚಿಸಲಾಗಿದೆ. ದುಬೈ ವಿಮಾನ ನಿಲ್ದಾಣ ಬಂದ್ ಮಾಡಲಾಗಿದ್ದು, ಅದನ್ನು ತೆರೆದ ಮೇಲೆ ಅವರನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆ ತರಲು ವ್ಯವಸ್ಥೆ ಮಾಡಲಾಗುವುದು. ವಿಧಾನ ಪರಿಷತ್ ಸದಸ್ಯ ಭೋಜೇಗೌಡರು ದುಬೈದಲ್ಲಿದ್ದು, ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ ಹೋಟೆಲಿನಲ್ಲಿ ಸುರಕ್ಷಿತವಾಗಿರುವುದಾಗಿ ಹೇಳಿದರು ಎಂದರು ಅಮೆರಿಕಾದ ತದ್ವಿರುದ್ಧ ನಿಲುವನ್ನು ಖಂಡಿಸುತ್ತೇನೆ ಅಮೆರಿಕಾ ಇರಾನ್ ಮೇಲೆ ಮಾಡಿರುವ ದಾಳಿ ಅನಗತ್ಯವಾದುದು.…














