Subscribe to Updates
Get the latest creative news from FooBar about art, design and business.
Author: kannadanewsnow07
ಬೆಂಗಳೂರು: ಲೋಡ್ ಟೆಸ್ಟಿಂಗ್ (Load Testing) ಮಾಡುವ ಸಲುವಾಗಿ ಜನವರಿ 16ರಿಂದ ಮೂರು ದಿನಗಳ ಕಾಲ ಪೀಣ್ಯ ಫ್ಲೈಓವರ್ (Peenya Flyover) ಬಂದ್ ಆಗಲಿದೆ . ಜನವರಿ 16ರ ರಾತ್ರಿ 11 ಗಂಟೆಯಿಂದ ಜನವರಿ 19ರ ಬೆಳಗ್ಗೆ 11 ಗಂಟೆಯವರೆಗೆ ಈ ಫ್ಲೈಓವರ್ ಕ್ಲೋಸ್ ಆಗಲಿದೆ. ಈ ಹಿನ್ನೆಲೆ ಎಲ್ಲಾ ವಾಹನ ಸವಾರರು ಸರ್ವಿಸ್ ರಸ್ತೆ ಬಳಸುವಂತೆ ಮನವಿ ಮಾಡಿದ್ದಾರೆ. ಪ್ರಯಾಣಿಕರು ನೆಲಮಂಗಲ ಕಡೆಯಿಂದ ಬೆಂಗಳೂರು ನಗರಕ್ಕೆ ಫೈ ಓವರ್ ರಸ್ತೆಯ ಮೂಲಕ ಸಾಗುವ ವಾಹನಗಳು ಕೆನ್ನಮೆಟಲ್ ಹತ್ತಿರ ಫೈಓವರ್ ಪಕ್ಕದ ಎನ್‍ಎಚ್-4 ಮತ್ತು ಸರ್ವಿಸ್ ರಸ್ತೆಯ ಮೂಲಕ 8ನೇ ಮೈಲಿ, ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, ಪೀಣ್ಯ ಪೊಲೀಸ್ ಠಾಣೆಯ ಜಂಕ್ಷನ್ ಮೂಲಕ ಎಸ್‍ಆರ್ ಎಸ್ ಜಂಕ್ಷನ್ ಮೂಲಕ ಗೊರಗುಂಟೆಪಾಳ್ಯ ತಲುಪಬಹುದಾಗಿದೆ. ಸಿಎಂಟಿಐ ಜಂಕ್ಷನ್‍ನಿಂದ ನೆಲಮಂಗಲ ಕಡೆಗೆ ಫೈಓವರ್ ರಸ್ತೆಯಲ್ಲಿ ಸಾಗುವ ವಾಹನಗಳು ಪಾರ್ಲೆ-ಜಿ ಟೋಲ್ ತಲುಪಲು ಫೈ ಓವರ್ ಪಕ್ಕದ ಎನ್.ಎಚ್-4 ಸರ್ವಿಸ್ ರಸ್ತೆಯಲ್ಲಿ ಎಸ್‍ಆರ್ ಎಸ್ ಜಂಕ್ಷನ್, ಪೀಣ್ಯ…
ಬೆಂಗಳೂರು: ಮುಂಗಾರು ಹಂಗಾಮಿನಲ್ಲಿ ಬರ ಪರಿಸ್ಥಿತಿಯಿಂದ ಉಂಟಾದ ಬೆಳೆಹಾನಿಗೆ ಪರಿಹಾರವಾಗಿ ಹಣ ಬಿಡುಗಡೆ ಮಾಡಿದೆ/ ರಾಜ್ಯ ಸರಕಾರ ಪ್ರತಿ ರೈತರಿಗೆ ಗರಿಷ್ಠ 2,000 ರೂ. ಪಾವತಿಸಲು ರಾಜ್ಯ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ 105 ಕೋಟಿ ರೂ. ಬಿಡುಗಡೆ ಮೊದಲ ಕಂತಿನಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ 105 ಕೋಟಿ ರೂ. ಬಿಡುಗಡೆ ಅರ್ಹತೆ ಆಧರಿಸಿ ಷರತ್ತಿಗೆ ಒಳಪಟ್ಟು ರೈತರಿಗೆ ಪರಿಹಾರ ವಿತರಿಸಲು ಸಿದ್ದರಾಮಯ್ಯ ಸೂಚಿಸಿದ್ದಾರೆ. ಸಿಎಂ ಬರ ಪರಿಹಾರದ(Drought Relief) ಹಣವನ್ನು ಪಡೆಯಲು ರೈತರು ತಮ್ಮ ಖಾತೆಯೊಂದಿಗೆ ಆಧಾರ್ ಕಾರ್ಡ್ ಜೋಡಣೆ(Aadhaar card Link) ಮಾಡಿಸಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಟ್ವಿಟ್ ಮಾಡಿ ತಿಳಿಸಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ರೈತರಿಗೆ ಬರ ಪರಿಹಾರ ನೀಡುವ ಪ್ರಕ್ರಿಯೆ ಪ್ರಾರಂಭವಾಗಿದ್ದು ಬೆಳೆ ನಷ್ಟಕ್ಕೆ ತಾತ್ಕಾಲಿಕ ಪರಿಹಾರವಾಗಿ ರಾಜ್ಯ ಸರ್ಕಾರದಿಂದ 2 ಸಾವಿರ ರೂ.ಗಳನ್ನು ಒದಗಿಸಲಾಗಿದೆ. ಆಧಾರ್ ಲಿಂಕ್ ಮಾಡಿದ ನಂತರ ಪರಿಹಾರದ ಹಣ ರೈತರಿಗೆ ತಲುಪಲಿದೆ.…
ಬೆಂಗಳೂರು: ನಾಳೆಯಿಂದಲೇ ಪೆಟ್ರೋಲ್ ಬಂಕ್ಗಳಲ್ಲಿ ತೈಲಬೆಲೆ ದರಪಟ್ಟಿ ಕನ್ನಡದಲ್ಲಿ ಇರಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. ಈ ಬಗ್ಗೆ ಅವರು ಮಾಧ್ಯಮಗಳ ಮಾಹಿತಿ, ಕರ್ನಾಟಕದಲ್ಲಿ ಕನ್ನಡದಲ್ಲಿಯೂ ಪೆಟ್ರೋಲ್, ಡೀಸೆಲ್ ಬೆಲೆಗಳ ದರಪಟ್ಟಿ ಪ್ರಕಟಿಸುವಂತೆ ಮನವಿ ಬಂದಿದ್ದು, ತಕ್ಷಣವೇ ಇನ್ಮುಂದೆ ಕನ್ನಡದಲ್ಲಿಯೂ ತೈಲಬೆಲೆ ಪ್ರಕಟಿಸುತ್ತಿದ್ದು, ಇಂದು ರಾಜ್ಯದ ಎಲ್ಲ ಪೆಟ್ರೋಲ್ ಬಂಕ್ಗಳಲ್ಲಿಯೂ ಕನ್ನಡದಲ್ಲೂ ದರಪಟ್ಟಿ ಪ್ರಕಟಕ್ಕೆ ಕ್ರಮ ಕೈಗೊಳ್ಳುವಂತೆ ತೈಲಕಂಪನಿಗಳಿಗೆ ಸೂಚನೆ ನೀಡುವುದಾಗಿ ತಿಳಿಸಿದರು. ಇದೇ ವೇಳೆ ಅವರುವಿಕಸಿತ್ ಭಾರತ್ ಕಾರ್ಯಕ್ರಮ ನಡೆಯುತ್ತಿದೆ. ಕೇರಳ ಕಾರ್ಯಕ್ರಮ ಮುಗಿಸಿ ನಿನ್ನೆಯಿಂದ ಕರ್ನಾಟಕಕ್ಕೆ ಬಂದಿದ್ದೇನೆ. ಹಾಸನ ಭಾಗದಲ್ಲಿ ಓಡಾಡಿ ಬಂದೆ, ಉತ್ತಮ ಚರ್ಚೆ ಕೂಡ ನಡೆದಿದೆ. ಕೇಂದ್ರದ ಯೋಜನೆಗಳನ್ನ ಜನರಿಗೆ ತಿಳಿಸುವ ಕೆಲಸ ಆಗಿದೆ. ಫಲಾನುಭವಿಗಳನ್ನ ತಲುಪುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು. ಇದೇ ವೇಳೆ ಅವರು ಮಾತನಾಡಿ, 45 ಸಾವಿರ ಬ್ಯಾರೆಲ್ ಕಚ್ಚಾತೈಲವನ್ನ ಮೇ ಹಾಗೂ ಜೂನ್ನಲ್ಲಿ ಹೊರತೆಗೆಯುತ್ತಿದ್ದೇವೆ. ಇದು ನಮ್ಮ ಉತ್ಪಾದನೆಯ ಶೇ. 7% ರಷ್ಟಾಗಲಿದೆ. ಇದರ…
ಕೊಡಗು: ಸರ್ಕಾರಿ ಮತ್ತು ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ಮುಂದಿನ ತಿಂಗಳಿನಿಂದ ರಾಗಿ ಮಾಲ್ಟ್ ನೀಡಲು ಚಿಂತಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ. ಪೊನ್ನಂಪೇಟೆ ಪ್ರವಾಸಿ ಮಂದಿರದಲ್ಲಿ ಸೋಮವಾರ ಹಾಕಿ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಚಿವರು ಈಗಾಗಲೇ ವಾರದಲ್ಲಿ ಒಂದು ದಿನ ಮೊಟ್ಟೆ ವಿತರಿಸಲಾಗುತ್ತಿದ್ದು, ವಾರದಲ್ಲಿ ಎರಡು ದಿನ ಮೊಟ್ಟೆ ವಿತರಿಸಲು ಮುಂದಾಗಲಾಗಿದೆ ಎಂದು ಸಚಿವರು ಹೇಳಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಹಲವು ಸಮಸ್ಯೆಗಳಿದ್ದು, ಅವುಗಳನ್ನು ಹಂತ ಹಂತವಾಗಿ ಬಗೆ ಹರಿಸಲಾಗುತ್ತಿದೆ. 13 ಸಾವಿರ ಶಿಕ್ಷಕರ ನೇಮಕಾತಿಗೆ ಅಗತ್ಯ ಕ್ರಮ ವಹಿಸಲಾಗಿದೆ. 37 ಸಾವಿರ ಶಿಕ್ಷಕರನ್ನು ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡಲು ಅಗತ್ಯ ಕ್ರಮವಹಿಸಲಾಗಿದೆ ಎಂದು ಸಚಿವರು ತಿಳಿಸಿದರು. ಸರ್ಕಾರಿ ಶಾಲೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕೈಗೊಂಡಿದೆ. ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ನೇಮಕ ಸೇರಿದಂತೆ ಮಧ್ಯಾಹ್ನದ ಬಿಸಿ ಊಟ, ಮೊಟ್ಟೆ ಹಾಗೂ ಹಾಲು ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ತಲುಪಿಸಲಾಗುತ್ತಿದೆ ಎಂದರು.…
ಮಡಿಕೇರಿ: ಮಡಿಕೇರಿ ಜ.09(ಕರ್ನಾಟಕ ವಾರ್ತೆ):-ಪ್ರಸಕ್ತ(2023-24) ಸಾಲಿಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಹೊಸದಾಗಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಪರಿಶಿಷ್ಟ ಪಂಗಡದ ಇಲಾಖೆಯ ವೆಬ್‍ಸೈಟ್ https://ssp.postmatric.karnataka.gov.in ಆನ್‍ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು. ಅರ್ಜಿಯೊಂದಿಗೆ ವಿದ್ಯಾರ್ಥಿಯ ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ(ಆದಾಯದ ಮಿತಿ 2.50 ಲಕ್ಷ), ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಎನ್‍ಪಿಸಿಐ ಮೂಲಕ ಕಡ್ಡಾಯವಾಗಿ ಲಿಂಕ್ ಮಾಡಿರಬೇಕು ಅಥವಾ ಅಂಚೆ ಕಚೇರಿಯಲ್ಲಿ ಐಪಿಪಿಬಿ ಖಾತೆ ಹೊಂದಿರಬೇಕು. ದೂರವಾಣಿ ಸಂಖ್ಯೆ ಚಾಲ್ತಿಯಲ್ಲಿರುವ ಆಧಾರ್ ಲಿಂಕ್ ಆಗಿರುವ ದೂ.ಸಂ. ಕಡ್ಡಾಯವಾಗಿರಬೇಕು. ವಿದ್ಯಾರ್ಥಿಯ ಹಿಂದಿನ ವರ್ಷದ ಅಂಕಪಟ್ಟಿ, ವಿದ್ಯಾರ್ಥಿಯ ಇತ್ತೀಚಿನ ಭಾವಚಿತ್ರ, ಅಧ್ಯಯನ-ಬೋನಾಫೈಡ್ ಪ್ರಮಾಣ ಪತ್ರ, ಪ್ರಸಕ್ತ ಕೋರ್ಸ್‍ನ ಶುಲ್ಕ ರಶೀದಿ ಪ್ರತಿ, ತಂದೆ, ತಾಯಿ/ಪೋಷಕರ ಆಧಾರ್ ಕಾರ್ಡ್ ಪ್ರತಿ, ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು(ಗ್ರೇಡ್-1),…
ಬೆಂಗಳೂರು: ಸಾಲಿಗೆ ವಕ್ಫ್ ನೋಂದಾಯಿತ/ ಸಂಘ ಕಾಯ್ದೆಯಡಿ ನೋಂದಾಯಿತ ಮದರಸಾಗಳಲ್ಲಿ ವ್ಯಾಸಂಗ ಮಾಡುತ್ತಿರುವ 13 ರಿಂದ 18 ವರ್ಷದ ಒಳಗಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣದ ಜೊತೆ 02 ವರ್ಷಗಳ ಕಾಲ ಔಪಚಾರಿಕ ಮತ್ತು ಗಣಕೀಕೃತ ಶಿಕ್ಷಣವನ್ನು (ಆನ್‍ಲೈನ್-ಆಪ್‍ಲೈನ್ ಕೋಚಿಂಗ್) ನೀಡಲು ಹಾಗೂ ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿಯನ್ನು ರಾಜ್ಯ, ರಾಷ್ಟ್ರೀಯ ಮುಕ್ತ ಶಾಲೆಗಳ/ ಎನ್‍ಐಒಎಸ್, ದೂರ ಶಿಕ್ಷಣ ಮೂಲಕ ನೀಡುವುದಕ್ಕಾಗಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ರಾಜ್ಯದಲ್ಲಿರುವ ನೋಂದಾಯಿತ ಮದರಸಾಗಳಿಗೆ ಔಪಚಾರಿಕ ಮತ್ತು ಗಣಕೀಕೃತ ಶಿಕ್ಷಣ ನೀಡಲು ಮದರಸಾ ಸಂಸ್ಥೆಗಳಿಂದ ಅರ್ಜಿ ಸಲ್ಲಿಸಲು https://dom.karnataka.gov.in ಮೂಲಕ ಅರ್ಹ ನೋಂದಾಯಿತ ಮದರಸಾಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಇದರ ಸದುಪಯೋಗಪಡಿಸಿಕೊಳ್ಳುವಂತೆ ಕೋರಿದೆ. ಮದರಸಾ ಸಂಸ್ಥೆಗಳು ರಾಜ್ಯದಲ್ಲಿ ವಕ್ಫ್ ನೋಂದಾಯಿತ/ ಇತರೆ ಸಂಘ ಸಂಸ್ಥೆ ಕಾಯ್ದೆಯಡಿ ನೋಂದಾಯಿತ ಮದರಸಾ ಸಂಸ್ಥೆಯಾಗಿರಬೇಕು. ಮದರಸಾದಲ್ಲಿ 40 ಅರ್ಹ ವಿದ್ಯಾರ್ಥಿಗಳಿರಬೇಕು. ಮದರಸಾಗಳು ತರಗತಿ ಕೊಠಡಿಗಳೊಂದಿಗೆ ವಸತಿ ಸೌಲಭ್ಯ ಹೊಂದಿರಬೇಕು. ಅರ್ಜಿ ಸಲ್ಲಿಸಲು ಜನವರಿ, 20 ಕೊನೆಯ ದಿನವಾಗಿದೆ.
ಉತ್ತರ ಇಸ್ರೇಲಿನ ರೆಗ್ಬಾದ ಮೊಶಾವ್ ನ ಶಾಪಿಂಗ್ ಸೆಂಟರ್ ನಲ್ಲಿ ಶಂಕಿತ ಗುಂಡಿನ ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಘಟನೆಯ ಪರಿಣಾಮವಾಗಿ, ಗಾಯಗೊಂಡ ಇಬ್ಬರು, ಒಬ್ಬ ಪುರುಷ ಮತ್ತು ಮಹಿಳೆಯನ್ನು ಗಂಭೀರ ಸ್ಥಿತಿಯಲ್ಲಿ ಘಟನಾ ಸ್ಥಳದಿಂದ ಸ್ಥಳಾಂತರಿಸಲಾಗಿದೆ ಎಂದು ವೈದ್ಯಕೀಯ ಅಧಿಕಾರಿಗಳನ್ನು ಉಲ್ಲೇಖಿಸಿ ಜೆರುಸಲೇಮ್ ಪೋಸ್ಟ್ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ತಲುಪಿ ಶೋಧ ಆರಂಭಿಸಿದರು. ಸದ್ಯ ಈ ಬಗ್ಗೆ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.
ನವದೆಹಲಿ: ಮಾಲ್ಡೀವ್ಸ್ನ ಪ್ರಯಾಣ ಸಂಸ್ಥೆ ಜನವರಿ 9 ರಂದು ಈಸ್ ಮೈಟ್ರಿಪ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿಶಾಂತ್ ಪಿಟ್ಟಿ ಅವರಿಗೆ ಪತ್ರ ಬರೆದು, ತಮ್ಮ ಪ್ಲಾಟ್ಫಾರ್ಮ್ ಮೂಲಕ ಮಾಲ್ಡೀವ್ಸ್ಗೆ ವಿಮಾನ ಬುಕಿಂಗ್ ರದ್ದುಗೊಳಿಸುವ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ವಿನಂತಿಸಿದೆ ಎನ್ನಲಾಗಿದೆ. “ನಮ್ಮ ರಾಷ್ಟ್ರಗಳನ್ನು ಸಂಪರ್ಕಿಸುವ ಬಂಧಗಳು ರಾಜಕೀಯವನ್ನು ಮೀರಿವೆ. ನಾವು ನಮ್ಮ ಭಾರತೀಯ ಸಹವರ್ತಿಗಳನ್ನು ಕೇವಲ ವ್ಯವಹಾರ ಸಹವರ್ತಿಗಳಾಗಿ ಪರಿಗಣಿಸದೆ, ಪ್ರೀತಿಯ ಸಹೋದರ ಸಹೋದರಿಯರಾಗಿ ಪರಿಗಣಿಸುತ್ತೇವೆ ” ಎಂದು ಮಾಲ್ಡೀವ್ಸ್ ಅಸೋಸಿಯೇಷನ್ ಆಫ್ ಟ್ರಾವೆಲ್ ಏಜೆಂಟ್ಸ್ ಮತ್ತು ಟೂರ್ ಆಪರೇಟರ್ಸ್ (ಮಾತಾಟೊ) ಹೇಳಿದೆ. ಮಾಲ್ಡೀವ್ಸ್ ಪ್ರವಾಸೋದ್ಯಮ ಕ್ಷೇತ್ರದ ಯಶಸ್ಸಿನಲ್ಲಿ ಭಾರತೀಯ ಮಾರುಕಟ್ಟೆಯು ಅನಿವಾರ್ಯ ಶಕ್ತಿಯಾಗಿ ಉಳಿದಿದೆ, ಅತಿಥಿ ಗೃಹಗಳು ಮತ್ತು ಭಾರತೀಯ ಪ್ರವಾಸಿಗರ ಒಳಹರಿವನ್ನು ಅವಲಂಬಿಸಿರುವ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ (ಎಸ್ಎಂಇ) ಪ್ರಮುಖ ಬೆಂಬಲವನ್ನು ಒದಗಿಸುತ್ತದೆ ಎಂದು ಪ್ರಯಾಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ಲಾ ಘಿಯಾಸ್ ಪತ್ರದಲ್ಲಿ ತಿಳಿಸಿದ್ದಾರೆ.
ದಕ್ಷಿಣ ಕೊರಿಯಾದ ಸಂಸತ್ತು ಮಂಗಳವಾರ ನಾಯಿಗಳ ಸಂತಾನೋತ್ಪತ್ತಿ ಮತ್ತು ವಧೆಯನ್ನು ನಿಷೇಧಿಸುವ ಮಸೂದೆಯನ್ನು ಅಂಗೀಕರಿಸಿತು, ಹಲವಾರು ವರ್ಷಗಳ ರಾಷ್ಟ್ರವ್ಯಾಪಿ ಚರ್ಚೆಯ ನಂತರ ನಾಯಿ ಮಾಂಸವನ್ನು ತಿನ್ನುವ ಸಾಂಪ್ರದಾಯಿಕ ಮತ್ತು ವಿವಾದಾತ್ಮಕ ಅಭ್ಯಾಸವನ್ನು ಕೊನೆಗೊಳಿಸಿತು. ರಾಷ್ಟ್ರೀಯ ಅಸೆಂಬ್ಲಿಯ ಸಂಬಂಧಿತ ಸಮಿತಿಯ ಪ್ರಕಾರ, ನಾಯಿ ಪದಾರ್ಥಗಳಿಂದ ತಯಾರಿಸಿದ ಅಥವಾ ಸಂಸ್ಕರಿಸಿದ ಆಹಾರ ಉತ್ಪನ್ನಗಳ ವಿತರಣೆ ಮತ್ತು ಮಾರಾಟವನ್ನು ಕಾನೂನು ನಿಷೇಧಿಸುತ್ತದೆ ಎನ್ನಲಾಗಿದೆ. “ಬೊಶಿಂಟಾಂಗ್” ಎಂದು ಕರೆಯಲ್ಪಡುವ ನಾಯಿ ಮಾಂಸದ ಪಲ್ಯವನ್ನು ಕೆಲವು ಹಳೆಯ ದಕ್ಷಿಣ ಕೊರಿಯನ್ನರಲ್ಲಿ ರುಚಿಕರವೆಂದು ಪರಿಗಣಿಸಲಾಗುತ್ತದೆ, ಆದರೆ ಈ ಮಾಂಸವು ಊಟ ಮಾಡುವವರೊಂದಿಗೆ ಒಲವು ಕಳೆದುಕೊಂಡಿದೆ ಮತ್ತು ಇನ್ನು ಮುಂದೆ ಯುವಜನರಲ್ಲಿ ಜನಪ್ರಿಯವಾಗಿಲ್ಲ ಎನ್ನಲಾಗಿದೆ. ಹೊಸ ಕಾನೂನಿನ ಅಡಿಯಲ್ಲಿ ನಾಯಿ ಮಾಂಸದ ಸೇವನೆಯು ಕಾನೂನುಬಾಹಿರವಲ್ಲ.
ನವದೆಹಲಿ: ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಸೋಮವಾರ ಐದು ರಾಜ್ಯಗಳಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (PACS) ಮೂಲಕ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳ ಕಾರ್ಯಾಚರಣೆಗಾಗಿ ಸ್ಟೋರ್ ಕೋಡ್ಗಳನ್ನು ವಿತರಿಸಿದರು. “ಈಗ, ಪಿಎಂ ಜನೌಷಧಿ ಕೇಂದ್ರಗಳಲ್ಲಿ ಲಭ್ಯವಿರುವ ಕೈಗೆಟುಕುವ ಮತ್ತು ಉತ್ತಮ ಗುಣಮಟ್ಟದ ಔಷಧಿಗಳನ್ನು PACS ಮೂಲಕ ಗ್ರಾಮೀಣ ಪ್ರದೇಶದ ಬಡವರಿಗೆ ತಲುಪಿಸಲಾಗುವುದು” ಎಂದು ಶಾ ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಮತ್ತು ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರ ಪ್ರವೀಣ ಮಾರ್ಗದರ್ಶನದಲ್ಲಿ, PACS ನ್ನು ಬಹುಕ್ರಿಯಾತ್ಮಕವಾಗಿ ಪರಿವರ್ತಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಸಹಕಾರ ಚಳುವಳಿಯನ್ನು ಉತ್ತೇಜಿಸುತ್ತಾ ಅದಕ್ಕೆ ಹೊಸದಿಕ್ಕು ನೀಡುತ್ತಿರುವ ಶಾ, ರಾಷ್ಟ್ರವ್ಯಾಪಿ 2,373 ಕೃಷಿ ಪತ್ತಿನ ಸಂಘಗಳಲ್ಲಿ ಜನೌಷಧಿ ಕೇಂದ್ರಗಳ ಸ್ಥಾಪನೆಗೆ ಮುನ್ನುಡಿ ಬರೆಯುತ್ತಿದ್ದಾರೆ. ಶಾರವರ ದೂರದೃಷ್ಟಿಯ ಈ ಹೆಜ್ಜೆಯು ಕೈಗೆಟುಕುವ ಔಷಧಿಗಳ ಪ್ರಯೋಜನಗಳು PACS ಮೂಲಕ ಗ್ರಾಮೀಣ ಬಡವರಿಗೆ ಮತ್ತು ರೈತರಿಗೆ ಲಭ್ಯವಾಗಲಿದೆ. ಈ ಹಿಂದೆ, ನಗರ…