Author: kannadanewsnow07

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ಸನಾತನ ಧರ್ಮದಲ್ಲಿ ಸುಲಭವಾಗಿ ಒಲಿಸಿಕೊಳ್ಳಬಹುದಾದ ದೇವರೆಂದರೆ ಅದು ಶಂಕರ, ಶಂಕರ ಎಂದರೆ ಶುಭವನ್ನುಂಟು ಮಾಡುವವನು ಎಂದರ್ಥ. ಭಕ್ತಿಯಿಂದ ಪ್ರಾರ್ಥಿಸಿದರೆ ಶಂಕರ ಎಂಥವರಿಗೂ ಒಲಿಯುತ್ತಾನೆ.ಸನಾತನ ಧರ್ಮದಲ್ಲಿ ಸುಲಭವಾಗಿ ಒಲಿಸಿಕೊಳ್ಳಬಹುದಾದ ದೇವರೆಂದರೆ ಅದು ಶಂಕರ, ಶಂಕರ ಎಂದರೆ ಶುಭವನ್ನುಂಟು ಮಾಡುವವನು ಎಂದರ್ಥ. ಭಕ್ತಿಯಿಂದ ಪ್ರಾರ್ಥಿಸಿದರೆ ಶಂಕರ ಎಂಥವರಿಗೂ ಒಲಿಯುತ್ತಾನೆ. ಭಕ್ತಿಯಿಂದ ಪ್ರಾರ್ಥಿಸಿದ ಅಸುರರಿಗೂ ಒಲಿದ ಕಾರಣದಿಂದಲೇ ಶಿವನಿಗೆ ಭೋಳಾ ಶಂಕರ ಎಂಬ ಹೆಸರು ಇದೆ. ಶಿವನಿಗೆ ಸಂಬಂಧಿಸಿದಂತೆ ವೈಭವವಾಗಿ, ಅತ್ಯಂತ ಸಡಗರ ಭಕ್ತಿ ಭಾವಗಳಿಂದ ಆಚರಿಸುವ ಪರ್ವದಿನವೆಂದರೆ ಅದು ಶಿವರಾತ್ರಿ, ಈ ಬಾರಿ ಫೆ.26 ರಂದು ಬಂದಿದೆ.ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ಶಿವರಾತ್ರಿಯಂದು ಶಿವನನ್ನು ಒಲಿಸಿಕೊಳ್ಳುವುದಕ್ಕಾಗಿ ಕೆಲವು ಸರಳ ಮಂತ್ರಗಳಿದ್ದು, ಇವುಗಳನ್ನು ಪಠಿಸಿದರೆ ಶಿವ ತತ್ವವನ್ನು ತಲುಪುವುದಕ್ಕೆ ಮನಸ್ಸನ್ನು ಸಿದ್ಧಪಡಿಸಿಕೊಳ್ಳುವುದು…

Read More

ನವದೆಹಲಿ: ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಇತ್ತೀಚೆಗೆ ಪತ್ತೆಯಾದ 2024 ವೈಆರ್ 4 ಎಂಬ ಕ್ಷುದ್ರಗ್ರಹದ ಪಥವನ್ನು ಪತ್ತೆಹಚ್ಚುತ್ತಲೇ ಇರುವುದರಿಂದ, ಅದು ಭೂಮಿಗೆ ಅಪ್ಪಳಿಸುವ ಸಾಧ್ಯತೆಗಳನ್ನು ಶೇಕಡಾ 3.1 ಕ್ಕೆ ಹೆಚ್ಚಿಸಿದೆ ಅಂತ ತಿಳಿಸಿದೆ. ಈ ನಡುವೆ ನಾಸಾ ತನ್ನ ಅಪಾಯದ ಮೌಲ್ಯಮಾಪನವನ್ನು ಪರಿಷ್ಕರಿಸಿದೆ, ಪರಿಣಾಮದ ಸಂಭವನೀಯತೆಯನ್ನು ಶೇಕಡಾ 3.1 ರಿಂದ (32 ರಲ್ಲಿ 1) 1.5 ಕ್ಕೆ (67 ರಲ್ಲಿ 1) ಕಡಿಮೆ ಮಾಡಿದೆ. ಇದು ಹಿಂದಿನ ಅಂದಾಜುಗಳಿಗಿಂತ ಸುಧಾರಣೆಯಾಗಿದ್ದರೂ, ಜಾಗತಿಕ ಬಾಹ್ಯಾಕಾಶ ಸಂಸ್ಥೆಗಳಿಗೆ ಕಠಿಣ ಕ್ರಮವನ್ನು ಪರಿಗಣಿಸಲು ಇದು ಇನ್ನೂ ಗಂಭೀರ ಬೆದರಿಕೆಯನ್ನು ಪ್ರತಿನಿಧಿಸುತ್ತದೆ ಎನ್ನಲಾಗಿದೆ. ಕ್ಷುದ್ರಗ್ರಹದ ಅಪಾಯದ ಕಾರಿಡಾರ್ ಪೂರ್ವ ಪೆಸಿಫಿಕ್ ಮಹಾಸಾಗರ, ಉತ್ತರ ದಕ್ಷಿಣ ಅಮೇರಿಕಾ, ಅಟ್ಲಾಂಟಿಕ್ ಮಹಾಸಾಗರ, ಆಫ್ರಿಕಾ, ಅರೇಬಿಯನ್ ಸಮುದ್ರ ಮತ್ತು ದಕ್ಷಿಣ ಏಷ್ಯಾದಾದ್ಯಂತ ವ್ಯಾಪಿಸಿದೆ ಎಂದು NASA ಡೇಟಾ ತೋರಿಸುತ್ತದೆಯಂತೆ. ಇದು ಮುಂಬೈ, ಕೋಲ್ಕತ್ತಾ, ಢಾಕಾ, ಬೊಗೋಟಾ, ಅಬಿಡ್ಜಾನ್, ಲಾಗೋಸ್ ಮತ್ತು ಖಾರ್ಟೂಮ್‌ನಂತಹ ವಿಶ್ವದ ಅತಿ ಹೆಚ್ಚು ಜನಸಂಖ್ಯೆ…

Read More

ಸುದ್ದಿ ಮೂಲ: ಪ್ರಜಾಕಹಳೆ, ತುಮಕೂರು ಕನ್ನಡ ದಿನಪತ್ರಿಕೆ, ಸಂಪಾದಕರು : ರಘು ಎ.ಎನ್‌  ಮಧುಗಿರಿ : ದೇವರ ಹೆಸರಿನಲ್ಲಿ ಲಕ್ಷ ಲಕ್ಷ ಖರ್ಚು ಮಾಡಿ ಪೂಜೆ ಮಾಡಿಸಿದರೆ ದೇವರು ಸಂತಸ ಪಡುವುದಿಲ್ಲ ಪ್ರಯಾಗ್ ರಾಜ್‌ಗೆ ಹೋಗಿ ಕೊಳಕು ನೀರಲ್ಲಿ ಮುಳುಗಿದರೆ ದೊರೆಯುವುದಿಲ್ಲ. ಬಡ ಪುಣ್ಯ ಜನರ ಸೇವೆ ಮಾಡಿ, ಅವರಿಗೆ ಒಳಿತು ಮಾಡಿದಾಗ ಮಾತ್ರ ದೇವರು ಒಲಿಯುತ್ತಾನೆ. ಬಡ ಜನರ ಸೇವೆಯಲ್ಲೇ ನಾನು ದೇವರನ್ನು ಕಾಣುತ್ತಿದ್ದೇನೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದರು. ಪಟ್ಟಣದ ಕನ್ನಡ ಭವನದಲ್ಲಿರುವ ಕೆ.ಎನ್‌. ರಾಜಣ್ಣನವರ ಸಭಾಂಗಣದಲ್ಲಿ ತಾಲೂಕು ಆಡಳಿತ ಮತ್ತು ತಾಲೂಕು ಮಡಿವಾಳ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಲಕ್ಷಾಂತರ ಹಣ ಖರ್ಚು ಮಾಡುವ ಬದಲು ಅದೇ ಹಣವನ್ನು ನೊಂದವರಿಗೆ ಬಡಜನರಿಗೆ ಅರ್ಥಿಕ ಶಕ್ತಿ ಇಲ್ಲದವರಿಗೆ ಸಹಾಯ ಮಾಡಿದರೆ ಅ ಬಡಜನರ ಆಶೀರ್ವಾದವೇ ನಮಗೆ ದೇವರ ಆಶೀರ್ವಾದದಂತೆ ನಮ್ಮ ನಮ್ಮ ಊರುಗಳಲ್ಲಿ ದೇವರಿಲ್ಲವಾ ನಮ್ಮೂರಲ್ಲೂ ನಮ್ಮ…

Read More

 ಮೈಸೂರು: ಮೈಸೂರಿನ ಅಂಬಾವಿಲಾಸ ಅರಮನೆ ಆವರಣದಲ್ಲಿರುವ ವಸ್ತು ಪ್ರದರ್ಶನ ಮೈದಾನದಲ್ಲಿ ನಡೆದಸ ಅದ್ದೂರಿ ಮದುವೆ ಸಮಾರಂಭದಲ್ಲಿ ಇಂದು ನಟ ಧನಂಜಯ್​ ಅವರು ಚಿತ್ರದುರ್ಗ ಮೂಲದ ವೈದ್ಯೆ ಧನ್ಯತಾ ಅವರಿಗೆ ತಾಳಿಕಟ್ಟುವ ಮೂಲಕ ಅಧಿಕೃತವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

Read More

ಬೆಂಗಳೂರು: ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರು ಸಣ್ಣ ಫೈನಾನ್ಸ್ ಸಂಸ್ಥೆಗಳಲ್ಲಿ ಸಾಲ ಪಡೆದು ಮರುಪಾವತಿಸುವಲ್ಲಿ ವಿಳಂಬಮಾಡುವ ಸಾಲಗಾರರ ಮೇಲೆ ಮೈಕ್ರೋಫೈನಾನ್ಸ್ ಸಂಸ್ಥೆಗಳು, ಸಾಲ ನೀಡಿಕೆ ಏಜೆನ್ಸಿಗಳು ಹಾಗೂ ಲೇವಾದೇವಿಗಾರರು ನೀಡುವ ಕಿರುಕುಳ ಹಾಗೂ ಬಲವಂತದ ವಸೂಲಾತಿ ಕ್ರಮಗಳನ್ನು ನಿಯಂತ್ರಿಸಲು ಸರ್ಕಾರವು ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧ್ಯಾದೇಶ 2025ನ್ನು ಫೆಬ್ರವರಿ 12 ರಿಂದ ಜಾರಿಗೊಳಿಸಿದ್ದು, ಆದೇಶದ ಮುಖ್ಯಾಂಶಗಳು ಹೀಗಿವೆ. ಮೈಕ್ರೋಫೈನಾನ್ಸ್ ಸಂಸ್ಥೆಗಳು ಸಾಲಗಾರರಿಂದ ಯಾವುದೇ ಭದ್ರತೆ ಪಡೆಯಬಾರದು. ಗ್ರಾಹಕರಿಗೆ ವಿಧಿಸುವ ಬಡ್ಡಿದರಗಳ ಬಗ್ಗೆ ಪಾರದರ್ಶಕವಾಗಿ ಲಿಖಿತ ರೂಪದಲ್ಲಿ ತಿಳಿಸಬೇಕು. ಈ ಆದೇಶವು ಭಾರತೀಯ ರಿಸರ್ವ್ ಬ್ಯಾಂಕ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ನೊಂದಣಿಯಾಗದ ಮೈಕ್ರೋಫೈನಾನ್ಸ್ ಸಂಸ್ಥೆಗಳಿಗೆ ಮಾತ್ರ ಅನ್ವಯಿಸುತ್ತದೆ. ನೊಂದಾಯಿತ ಸಂಸ್ಥೆಗಳಿಂದ ಅಂದಾಜು 60 ಸಾವಿರ ಕೋಟಿ ರೂ ಸಾಲವನ್ನು ಸುಮಾರು 1.09 ಕೋಟಿ ಸಾಲಗಾರರು ಪಡೆದಿದ್ದಾರೆ. ನೊಂದಣಿಯಾಗದ ಸಂಸ್ಥೆಗಳಿಂದ ಸಾಲ ಪಡೆದವರ ಮಾಹಿತಿ ನಿಖರವಾಗಿ ಲಭ್ಯವಿಲ್ಲವಾದರೂ, ಅಂದಾಜು 40 ಸಾವಿರ…

Read More

ನವದೆಹಲಿ: ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಪಿಸಿಐ) ಫಾಸ್ಟ್ಟ್ಯಾಗ್ ಬ್ಯಾಲೆನ್ಸ್ ಮೌಲ್ಯಮಾಪನಕ್ಕಾಗಿ ಹೊಸ ನಿಯಮಗಳನ್ನು ಪರಿಚಯಿಸಿದೆ, ಇದು ಫೆಬ್ರವರಿ 17, 2025 ರಿಂದ ಜಾರಿಗೆ ಬರಲಿದೆ. ಈ ಬದಲಾವಣೆಗಳು ಮೋಸದ ಚಟುವಟಿಕೆಗಳನ್ನು ತಡೆಗಟ್ಟುವಾಗ ಸುಗಮ ಟೋಲ್ ವಹಿವಾಟುಗಳನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿವೆ. ಆದಾಗ್ಯೂ, ಟೋಲ್ ಪ್ಲಾಜಾಗಳಲ್ಲಿ ಪಾವತಿ ವೈಫಲ್ಯಗಳನ್ನು ತಪ್ಪಿಸಲು ವಾಹನ ಮಾಲೀಕರು ಈ ನವೀಕರಣಗಳ ಬಗ್ಗೆ ತಿಳಿದಿರಬೇಕು. ಫಾಸ್ಟ್ಟ್ಯಾಗ್ ಮೌಲ್ಯೀಕರಣದಲ್ಲಿ ಬದಲಾವಣೆಗಳು: ಜನವರಿ 28, 2025 ರ ಎನ್ಪಿಸಿಐನ ಸುತ್ತೋಲೆಯ ಪ್ರಕಾರ, ಫಾಸ್ಟ್ಟ್ಯಾಗ್ ವಹಿವಾಟುಗಳನ್ನು ಈಗ ಟೋಲ್ ಪ್ಲಾಜಾದಲ್ಲಿ ಟ್ಯಾಗ್ ಓದಿದಾಗ ನಿರ್ದಿಷ್ಟ ಸಮಯದ ವಿಂಡೋ ಆಧಾರದ ಮೇಲೆ ಮೌಲ್ಯೀಕರಿಸಲಾಗುತ್ತದೆ. ಹೊಸ ನಿಯಮವು ಎರಡು ಪ್ರಮುಖ ಕಾಲಾವಧಿಗಳನ್ನು ಪರಿಚಯಿಸುತ್ತದೆ: ಫಾಸ್ಟ್ಟ್ಯಾಗ್ ಸ್ಕ್ಯಾನ್ ಮಾಡುವ 60 ನಿಮಿಷಗಳ ಮೊದಲು – ಫಾಸ್ಟ್ಟ್ಯಾಗ್ ಅನ್ನು ಕಪ್ಪುಪಟ್ಟಿಗೆ ಸೇರಿಸಿದ್ದರೆ, ಹಾಟ್ಲಿಸ್ಟ್ನಲ್ಲಿ ಇರಿಸಿದ್ದರೆ ಅಥವಾ ಟೋಲ್ ಬೂತ್ ತಲುಪುವ ಮೊದಲು ಒಂದು ಗಂಟೆಗಿಂತ ಹೆಚ್ಚು ಕಾಲ ಕಡಿಮೆ ಬ್ಯಾಲೆನ್ಸ್ ಎಂದು ಗುರುತಿಸಿದರೆ, ವಹಿವಾಟು ನಿರಾಕರಿಸಲಾಗುತ್ತದೆ.…

Read More

ಬೆಂಗಳೂರು: ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನನ್ನ ಪ್ರೀತಿಯ ಮನವಿ ಈ ವರ್ಷ ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಕ್ಷಮೆ ಇರಲಿ ಅಂತ ನಟ ದರ್ಶನ್‌ ಅವರು ಇದೇ ಮೊದಲ ಬಾರಿಗೆ ಜೈಲಿನಿಂದ ಜಾಮೀನಿನ ಮೇಲೆ ಹೊರ ಬಂದ ಬಳಿಕ ಕಾಣಿಸಿಕೊಂಡಿದ್ದಾರೆ. ಇದೇ ವೇಳೇ ಅವರು ಈ ಬಾರಿ ನಾನು ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿಲ್ಲ, ನನ್ನ ಆರೋಗ್ಯದಲ್ಲಿ ಏರುಪೇರು ಉಂಟು ಮಾಡುತ್ತಿದ್ದು, ಸರಿಯಾಗಿ ತುಂಬಾ ಹೊತ್ತು ನಿಂತುಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ ಈ ಹಿನ್ನಲೆಯಲ್ಲಿ ನಾನು ಈ ಬಾರಿ ಎಂದಿನ ಹಾಗೇ ನಿಮ್ಮೊಂದಿಗೆ ಇರಲು ಸಾಧ್ಯವಿಲ್ಲ, ಸದ್ಯ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದೇನೆ. ಮುಂದೆ ಒಂದು ದಿನ ನಿಮ್ಮೊಂದಿಗೆ ಕಾಲ ಕಳೆಯುವೆ ಅಂತ ಹೇಳಿದ್ದಾರೆ. ಇದಲ್ಲದೇ ನಿರ್ಮಾಪಕ ಸೂರಪ್ಪ ಬಾಬು ಅವರಿಗೆ ವಾಪಸ್ಸು ನೀಡಿರುವುದಕ್ಕೆ ಸಂಬಂಧಪಟ್ಟ ಕ್ಲಾರಿಟಿ ನೀಡಿದ ಅವರು ನಿರ್ಮಾಪಕರಿಗೆ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ಹಣವನ್ನು ವಾಪಸ್ಸುಕೊಟ್ಟಿರುವೆ. ಇದಲ್ಲದೇ ಪ್ರೇಮ್‌ ಅವರೊಂದಿಗೆ ಸಿನಿಮಾ ಮಾಡುವುದಾಗಿ ಅವರು ತಿಳಿಸಿದರು. ವಿಡಿಯೋ ನೋಡಲು ಇಲ್ಲಿ ಕ್ಲಿಕ್‌ ಮಾಡಿ: https://www.facebook.com/watch?v=1751073738791599

Read More

ತುಮಕೂರು: ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಶಿಕ್ಷಣ ಇಲಾಖೆಯಲ್ಲಿ ಖಾಲಿಯಿದ್ದ 13,500 ಶಾಲಾ ಶಿಕ್ಷಕರ ನೇಮಕಾತಿ ಮಾಡಲಾ ಗಿದೆಯಲ್ಲದೆ ಹೊಸದಾಗಿ 15000 ಶಾಲಾ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂ ದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎನ್. ಮಧು ಬಂಗಾರಪ್ಪ ತಿಳಿಸಿದರು. ಜಿಲ್ಲಾ ಪಂಚಯತಿ ಸಭಾಂಗಣದಲ್ಲಿ ಶನಿವಾರ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಿಕ್ಷಕರ ಕೊರತೆ ನೀಗಿ ಸಲು ಹೊಸದಾಗಿ ಶಿಕ್ಷಕರ ನೇಮಕಾತಿಗೆ ಸರ್ಕಾರ ಮುಂದಾಗಿದೆ. ಖಾಲಿಯಿರುವ ಶಿಕ್ಷಕರ ಹುದ್ದೆ ಳನ್ನು ಹಂತ-ಹಂತವಾಗಿ ಭರ್ತಿ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಸರ್ಕಾರಿ ಶಾಲೆಗಳಲ್ಲಿ ಕ್ಷೀಣಿಸುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಿಸಲು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಲಾಗಿದೆ. ಶಾಲೆಗಳಲ್ಲಿದ್ದ ನ್ಯೂನ್ಯತೆಗಳನ್ನು ಸರಿಪಡಿಸಲಾಗಿದೆ. ಶಾಲೆಗಳಿಗೆ ಹೆಚ್ಚಿನ ಸಂಖ್ಯೆ ಯಲ್ಲಿ ವಿಜ್ಞಾನ ಲ್ಯಾಬ್‌ಗಳನ್ನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು. ಸರ್ಕಾರಿ ಶಾಲೆಗಳಲ್ಲಿ ಖಾಲಿಯಿರುವ ಶಿಕ್ಷಕರ ಹುದ್ದೆಗಳಿಗೆ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು.…

Read More

*ಅವಿನಾಶ್‌ ಆರ್‌ ಭೀಮಸಂದ್ರ ಬೆಂಗಳೂರು: 2022 ನೇ ಸಾಲಿನ ಪದವೀಧರ ಪ್ರಾಥಮಿಕ ಶಿಕ್ಷಕರು (6 ರಿಂದ 8 ನೇ ತರಗತಿ) ಹುದ್ದೆಗೆ ಆಯ್ಕೆಯಾಗಿ ಕರ್ತವ್ಯ ವರದಿ ಮಾಡಿಕೊಂಡಿರುವ ಶಿಕ್ಷಕರುಗಳಿಗೆ ಅಕ್ಟೋಬರ್ 2023 ರಿಂದ ಫೆಬ್ರವರಿ 2024 ರ ಮಾಹೆಯ ವರೆಗಿನ ಬಾಕಿ ವೇತನ ಪಾವತಿಲು ಹಾಗೂ ಕೊರತೆ ಇರುವ ಅನುದಾನ ಬಿಡುಗಡೆ ಮಾಡುವ ಕುರಿತು ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶವನ್ನು ಹೊರಡಿಸಿದ್ದಾರೆ. ಆದೇಶದಲ್ಲಿ ಉಲ್ಲೇಖ ಮಾಡಿರುವಂತೆ, 1. ಈ ಕಛೇರಿ ಜ್ಞಾಪನಾ ಸಮಸಂಖ್ಯೆ ದಿನಾಂಕ 03/12/2024 ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, 2022 ನೇ ಸಾಲಿನ ಪದವೀಧರ ಪ್ರಾಥಮಿಕ ಶಿಕ್ಷಕರು (6 ರಿಂದ 8 ನೇ ತರಗತಿ) ಹುದ್ದೆಗೆ ಆಯ್ಕೆಯಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುವ ಶಿಕ್ಷಕರುಗಳಿಗೆ ಅಕ್ಟೋಬರ್ 2023 ರಿಂದ ಫೆಬ್ರವರಿ 2024 ರ ಮಾಹಯವರೆಗಿನ ಬಾಕಿ ವೇತನ ಪಾವತಿಲು ಹಾಗೂ ಕೊರತೆ ಇರುವ ಅನುದಾನವನ್ನು ಬಿಡುಗಡೆ ಮಾಡಲು ಹಾಗೂ 2023-24 ನೇ ಸಾಲಿನ ಬಾಕಿ ವೇತನ ಬಿಲ್ಲುಗಳನ್ನು…

Read More

ಬೆಂಗಳೂರು: 2025-26ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗಲಿದೆ ಈ ನಡುವೆ ಕರ್ನಾಟಕದ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದಿಟ್ಟುದ್ದು ಅದರ ವಿವರ ಹೀಗಿದೆ. 1 ಕೇಂದ್ರ ಸರ್ಕಾರವು ಕರ್ನಾಟಕದ ಬಗ್ಗೆ ಅನುಸರಿಸುತ್ತಿರುವ ತಾರತಮ್ಯ ಧೋರಣೆ ಜಗಜ್ಜಾಹೀರಾಗಿದೆ. ನಮ್ಮಒಕ್ಕೂಟ ವ್ಯವಸ್ಥೆಯು ಬಲಿಷ್ಠವಾಗಿರಬೇಕೆಂದರೆ ಕೇಂದ್ರ ಸರ್ಕಾರವು ತಾರತಮ್ಯರಹಿತ, ನ್ಯಾಯಸಮ್ಮತ ಪಾರದರ್ಶಕ ನೀತಿಯನ್ನು ತನ್ನದಾಗಿಸಿಕೊಳ್ಳಬೇಕು. ರಾಜ್ಯಗಳನ್ನು ಸಂಪನ್ಮೂಲ ಸಂಗ್ರಹಣೆ ಮಾಡುವ ಘಟಕಗಳೆಂದು ನೋಡದೆ, ಅವುಗಳ ಕಷ್ಟನಷ್ಟಗಳಿಗೆ ಮಾನವೀಯವಾಗಿ ಸ್ಪಂದಿಸಬೇಕು. ತೆರಿಗೆ ಪಾಲಿನ ಹಂಚಿಕೆಯೂ ಸೇರಿದಂತೆ ರಾಜ್ಯಗಳಿಗೆ ಸಂಪನ್ಮೂಲ ಹಂಚಿಕೆ ಮಾಡುವ ವಿಷಯದಲ್ಲಿ ವೈಜ್ಞಾನಿಕವಾದ ಮಾನದಂಡಗಳನ್ನು ಅನುಸರಿಸಬೇಕು. ವಿಶೇಷವಾಗಿ, ಕರ್ನಾಟಕವೂ ಸೇರಿದಂತೆ ಅಭಿವೃದ್ಧಿ ಪಥದಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳ ಆದ್ಯತೆಗಳನ್ನು ಗುರುತಿಸಿ ಸ೦ಪನ್ಮೂಲ ಹಂಚಿಕೆಯ ವಿಚಾರದಲ್ಲಿ ಅವುಗಳಿಗೆ ಹೆಚ್ಚಿನ ಶಕ್ತಿಯನ್ನು ತುಂಬಬೇಕು, ಅವುಗಳ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಇದರಿಂದ ದೇಶಕ್ಕೆ ಹೆಚ್ಚು ಲಾಭವಿದ್ದು, ಈ ರಾಜ್ಯಗಳ ಸಾಧನೆಯ ಪಾಲು ಇತರೆ ರಾಜ್ಯಗಳಿಗೂ ಸಹಜವಾಗಿಯೇ ಸಲ್ಲುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯಕ್ಕೆ ಆಗುತ್ತಿರುವ ಸರಣಿ ಅನ್ಯಾಯಗಳನ್ನು ನಿರಂತರವಾಗಿ ಕೇಂದ್ರ ಸರ್ಕಾರದ ಗಮನಕ್ಕೆ…

Read More