Author: kannadanewsnow07

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಬಾಯಿಗೆ ಸಿಹಿ ರುಚಿ ಕೊಡುವ ಸಕ್ಕರೆ ಆರೋಗ್ಯಕ್ಕೆ ಮಾತ್ರ ಒಳ್ಳೆಯದಲ್ಲ. ನಿತ್ಯವೂ ಒಂದಲ್ಲ ಒಂದು ರೀತಿಯಲ್ಲಿ ಸಕ್ಕರೆ ಅಂಶ ದೇಹಕ್ಕೆ ಸೇರಿಕೊಳ್ಳುತ್ತದೆ. ಆದರೆ ಸಕ್ಕರೆ ಸೇವನೆಯನ್ನು ಬಿಟ್ಟರೆ ದೇಹಕ್ಕೆ ಅನೇಕ ಪ್ರಯೋಜನಗಳಿವೆ. ನಿಮ್ಮ ಆಹಾರದಲ್ಲಿ ಸಕ್ಕರೆ ತೆಗೆದು ಹಾಕುವುದು ತುಂಬಾ ಒಳ್ಳೆಯ ನಿರ್ಧಾರ. ಆದರೆ ಸಕ್ಕರೆ ಸೇವನೆಯನ್ನು ನಿಲ್ಲಿಸೋದು ಅಷ್ಟು ಸುಲಭದ ಮಾತಲ್ಲ. ನಾವೀಗ ಹೇಳುವ ಈ ಪ್ರಯೋಜನಗಳನ್ನು ತಿಳಿದುಕೊಂಡರೆ ಸಕ್ಕರೆ ಸೇವನೆಯನ್ನು ನಿಲ್ಲಿಸಬಹುದು. ಗಟ್ಟಿ ಮನಸ್ಸು ಮಾಡಿ ಸಕ್ಕರೆ ತಿನ್ನೋದನ್ನು ನಿಲ್ಲಿಸಿಬಿಡಿ ಹಾಗು ಆರೋಗ್ಯವಾಗಿರಿ. ನೀವು ಒಂದು ತಿಂಗಳು ಸಕ್ಕರೆ ಸೇವನೆ ಬಿಟ್ಟರೆ ನಿಮ್ಮ ಮುಂದಿನ ಜೀವನದುದ್ದಕ್ಕೂ ಸಿಹಿಯಾಗಿರಬಹುದು ಎಂದು ತಜ್ಞರು ಹೇಳುತ್ತಾರೆ. ಆರೋಗ್ಯದ ದೃಷ್ಟಿಯಿಂದ ಇದು ತುಂಬಾ ಉತ್ತಮ ಪರಿಣಾಮ ಬೀರುತ್ತದೆ. ಸಕ್ಕರೆ ತಿನ್ನುವುದನ್ನು ನಿಲ್ಲಸಿದರೆ ದೇಹದ ತೂಕ ತನ್ನಂತಾನೇ ಕಡಿಮೆಯಾಗುತ್ತದೆ. ದೇಹಕ್ಕೆ ಹೊಸ ಚೈತನ್ಯ ಉಂಟಾಗುತ್ತದೆ. ಸಕ್ಕರೆ ಬದಲಾಗಿ ಉತ್ತಮ ಪೌಷ್ಟಿಕಾಂಶದ ಆಹಾರಗಳನ್ನು ಸೇವಿಸಿ ಆರೋಗ್ಯವನ್ನು ಸಮತೋಲನದಲ್ಲಿರಿಸಿ. ಸಕ್ಕರೆಯಿಂದ ಮಾಡಿದ ಪದಾರ್ಥಗಳ ಸೇವನೆ ನಿಲ್ಲಿಸಿದಾಗ ದೇಹಕ್ಕೆ…

Read More

ಬೆಂಗಳೂರು: ಯುವನಿಧಿ ಯೋಜನೆಯಡಿ ನೋಂದಾಯಿಸಿಕೊಂಡಿರುವ ಫಲಾನುಭವಿಗಳು, ಯೋಜನೆಯ ಸೌಲಭ್ಯ ಪಡೆಯಲು ಪ್ರತಿ ತಿಂಗಳು ತಾವು ವ್ಯಾಸಂಗ ಮಾಡುತ್ತಿಲ್ಲ, ಸ್ವಯಂ ಉದ್ಯೋಗಿಯಲ್ಲ, ನಿರುದ್ಯೋಗಿ ಎಂದು ಸ್ವಯಂ ಘೋಷಣೆ ಪ್ರಮಾಣ ಪತ್ರ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪಿ.ಎಸ್.ಹಟ್ಟಪ್ಪ ಅವರು ತಿಳಿಸಿದ್ದಾರೆ. ಈ ಮಾಹೆಯಲ್ಲಿ ಫೆ.29ರ ಒಳಗಾಗಿ ಸೇವಾ ಸಿಂಧು ಪೋರ್ಟಲ್ ಮೂಲಕ ಸ್ವಯಂ ಘೋಷಣೆ ಪತ್ರ ಸಲ್ಲಿಸಲು ಕಾಲಾವಕಾಶವಿದೆ. 2022-23ನೇ ಶೈಕ್ಷಣಿಕ ವರ್ಷದಲ್ಲಿ ಪದವಿ, ಸ್ನಾತಕೊತ್ತರ ಪದವಿ ಮತ್ತು ಡಿಪ್ಲೋಮಾ ವ್ಯಾಸಂಗ ಮಾಡಿ 2023ರಲ್ಲಿ ತೇರ್ಗಡೆಯಾಗಿ ಅರ್ಹತೆ ಹೊಂದಿದ ಅಭ್ಯರ್ಥಿಗಳು ಈಗಾಗಲೇ ಸೇವಾ ಸಿಂಧು ಪೆÇೀರ್ಟಲ್‍ನಲ್ಲಿ ನೋಂದಣಿಯಾಗಿದ್ದು, ಈಗಾಗಲೇ ನೋಂದಾಯಿಸಿಕೊಂಡ ಅಭ್ಯರ್ಥಿಗಳಿಗೆ ಜನವರಿ ತಿಂಗಳ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗಿದ್ದು, ಫೆಬ್ರವರಿ ತಿಂಗಳ ಪ್ರಯೋಜನ ಪಡೆದುಕೊಳ್ಳಲು ಸ್ಚಯಂ ಘೋಷಣೆ ಮಾಡಬೇಕಾಗಿದೆ. ಫಲಾನುಭವಿಗಳಿಗೆ ಎಸ್‍ಎಂಎಸ್ ಮೂಲಕ ಸಂದೇಶ ರವಾನಿಸಲಾಗುತ್ತದೆ. ಅಭ್ಯರ್ಥಿಗಳು ಕಡ್ಡಾಯವಾಗಿ ಆಧಾರ್ ಸೀಡೆಡ್ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಫಲಾನುಭವಿಗಳು ಯುವ ನಿಧಿ ಯೋಜನೆಯ ಸ್ವಯಂ ಘೋಷಣೆ ಮಾಡಿಕೊಳ್ಳಲು https://sevasindhugs.karnataka.gov.in/…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಮನೆಯಲ್ಲಿ ಸಿಗುವ ಕೆಲ ಅಡುಗೆ ಪದಾರ್ಥಗಳಿಂದ ರಕ್ತದೊತ್ತಡ ಸಮಸ್ಯೆಯನ್ನು ತಾತ್ಕಾಲಿಕವಾಗಿ ಶಮನ ಮಾಡಿಕೊಳ್ಳಬಹುದು. ಬಿಪಿ ಹೆಚ್ಚಾದರೂ ತೊಂದರೆಯೆ, ಕಡಿಮೆಯಾದರೂ ತೊಂದರೆಯೇ. ಮನೆಯಲ್ಲಿ ಇದ್ದಾಗ ಸಡನ್‌ ಆಗಿ ರಕ್ತದೊತ್ತಡ ಹಚ್ಚಾದರೆ ಈ ಮನೆ ಮದ್ದನ್ನು ಟ್ರೈ ಮಾಡಿ. ನಾವು ಹೇಳುವ ಈ ಮನೆ ಮದ್ದು ಬಿಪಿಗೆ ಔಷಧಿ ಅಲ್ಲ. ತಾತ್ಕಾಲಿಕವಾಗಿ ಬಿಪಿ ಏರಿಳಿತವನ್ನು ಕಂಟ್ರೋಲ್‌ ಮಾಡಿಕೊಳ್ಳಬಹುದು. ರಕ್ತದೊತ್ತಡವು 90/70ಕ್ಕಿಂತಲೂ ಕಡಿಮೆ ಆದರೆ ಹೈಪೋಟೆನ್ಶನ್‌ ಉಂಟಾಗುತ್ತದೆ. ದೇಹದಲ್ಲಿ ರಕ್ತ ಮತ್ತು ಆಮ್ಲಜನಕ ಪೂರೈಕೆ ಸರಿಯಾಗಿ ಆಗದೇ ಇದ್ದಾಗ ದೇಹಕ್ಕೆ ಅಘಾತ ಉಂಟಾಗುತ್ತದೆ. ರಕ್ತದೊತ್ತಡ ಉಂಟಾದರೆ ಸಾಮಾನ್ಯವಾಗಿ ಆಯಾಸ, ಬಳಲಿಕೆ, ತಲೆ ನೋವು ಹೀಗೆ ಮುನ್ಸೂಚನೆ ನೀಡುತ್ತದೆ. ಆಗ ಕೂಡಲೇ ಮಾಡಬೇಕಾದ ಕೆಲ ಮನೆ ಮದ್ದುಗಳೆಂದರೆ, ನಿಮಗೆ ಪದೇ ಪದೇ ಆರೋಗ್ಯದಲ್ಲಿ ನಿರಂತರವಾಗಿ ಸಮಸ್ಯೆ ಕಾಡುತ್ತಿದ್ದರೆ ಆಗ ಕೂಡಲೇ ವೈದ್ಯರನ್ನು ಸಂಪರ್ಕಿಸಿ. ಬಿಪಿ ಚೆಕ್‌ ಮಾಡಿಸಿಕೊಂಡು ಸೂಕ್ತ ಸಲಹೆ ಪಡೆಯಿರಿ. ಇನ್ನು ರಕ್ತದೊತ್ತಡ ಕಡಿಮೆಯಾದರೆ ಅಡುಗೆ ಉಪ್ಪನ್ನು ಸೇವಿಸಿ. ನೇರವಾಗಿ ಉಪ್ಪು ನೆಕ್ಕಿದರೂ ಪರವಾಗಿಲ್ಲ.…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ನಿತ್ಯವೂ ಊಟ ಮಾಡಲೇಬೇಕು. ಊಟವೂ ಒಂದು ರೀತಿಯಾದ ವ್ಯಾಯಾಮವೇ ಸರಿ. ವ್ಯಾಯಾಮ ಮಾಡಲು ಹೇಗೆ ಕೆಲ ನಿಯಮಗಳಿವೆಯೋ ಹಾಗೆಯೇ ಊಟ ಮಾಡಲೂ ಸಹ ಕೆಲ ನಿಯಮ ಪದ್ಧತಿಗಳಿವೆ. ನಾವು ಮೊದಲು ಅವುಗಳನ್ನು ತಿಳಿದುಕೊಳ್ಳಬೇಕು. ಊಟ ಮಾಡುವುದು ಒಂದು ಶಿಸ್ತಿನ ವ್ಯಾಯಾಮ ಎಂದು ನಮ್ಮ ಹಿರಿಯರು ಹೇಳುತ್ತಿದ್ದರು. ಊಟಕ್ಕೆ ಕೂರುವ ಅಥವಾ ಊಟ ಮಾಡುವಾಗ ಹೇಗೆಲ್ಲಾ ಶಿಸ್ತನ್ನು ಪಾಲಿಸಬೇಕು ಎಂದು ನಮ್ಮ ಹಿರಿಯರು ನಮಗೆ ಪಾಠ ಹೇಳುತ್ತಾ ಬಂದಿದ್ದಾರೆ. ಆದರೆ ನಾವು ನಮ್ಮ ಹಿರಿಯರು ಹೇಳಿಕೊಟ್ಟ ಊಟದ ಪಾಠವನ್ನು ಮರೆಯುತ್ತಾ ಇದ್ದೇವೆ ಎಂಬುದು ಮಾತ್ರ ವಿಷಾದನೀಯ. ಆಧುನಿ ಜೀವನ ಶೈಲಿ, ಒತ್ತಡದ ಜೀವನ ಹೀಗೆ ಅನೇಕ ಕಾರಣಗಳಿಂದಾಗಿ ನಾವು ಊಟದ ಶಿಸ್ತನ್ನು ಪಾಲಿಸುತ್ತಿಲ್ಲ. ಊಟ ಮಾಡುವಾಗ ಇರಬೇಕಾದ ಶಿಸ್ತು ಎಂದರೆ ನಾವು ನೆಲದ ಮೇಲೆಯೇ ಕೂತು ಊಟ ಮಾಡಬೇಕು. ಹೀಗೆ ಮಂಡಿ ಮಡಚಿ ಚಕ್ಕಂಬಕ್ಕಳ ಹಾಕಿ ಊಟ ಮಾಡಿದರೆ ತಿಂದ ಆಹಾರ ಸರಾಗವಾಗಿ ಹಾಗು ಬೇಗನೆ ಜೀರ್ಣವಾಗುತ್ತದೆ. ನೆಲದ ಮೇಲೆ ಕೂತು…

Read More

ಬೆಂಗಳೂರು: ಸಮಸಮಾಜ ನಿರ್ಮಾಣವೇ ನಮ್ಮ ಸರ್ಕಾರದ ಗುರಿ. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಉದ್ದೇಶವಾದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ವವಲಂಬನೆಯನ್ನು ಸಹಕರಗೊಳಿಸಲು ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ಅವರು ಇಂದು ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಹಮ್ಮಿಕೊಳ್ಳಲಾದ ಎರಡು ದಿನಗಳ “ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶ -2024”ದ ಸಮಾರೋಪ ಭಾಷಣ ಮಾಡಿ ಮಾತನಾಡಿದರು. ನಾವು ಸಂವಿಧಾನದ 75ನೇ ವರ್ಷದ ಅಮೃತ ಮಹೋತ್ಸವ ಆಚರಣೆಯಲ್ಲಿದ್ದೇವೆ. 1950ರಲ್ಲಿ ಜಾರಿಯಾದ ನಮ್ಮ ಸಂವಿಧಾನ ಜನರಿಗೆ ಅದರಲ್ಲಿಯೂ ಅವಕಾಶ ವಂಚಿತರಿಗೆ ಬೆನ್ನುಲಬಾಗಿ ನಿಂತಿದೆ. ದಲಿತ, ಬಡವ, ಕಾರ್ಮಿಕ ಮತ್ತು ಮಹಿಳೆಯರ ಪರವಾಗಿ ಸಾಮಾಜಿಕ ನ್ಯಾಯ ಎತ್ತಿಹಿಡಿಯುವಲ್ಲಿ ಮುಖ್ಯ ಪಾತ್ರ ವಹಿಸಿದೆ. ನಮ್ಮ ಸಂವಿಧಾನ ಬದಲಾವಣೆಯಾದರೆ ಸಮಾಜದಲ್ಲಿ ಯಾರು ಸಹ ಉಳಿಯಲ್ಲ ಸಾಧ್ಯವಿಲ್ಲ ಎಂದು ನುಡಿದರು. ಸಂವಿಧಾನ ಜಾರಿಗೆ ಬಂದಿದ್ದರೂ ಸಹ ನಮ್ಮ ದೇಶದಲ್ಲಿ ಸಾಮಾಜಿಕ ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸಲು ಸಾಧ್ಯವಾಗಿಲ್ಲ. ಇದನ್ನು ಹೋಗಲಾಡಿಸುವುದು…

Read More

ಮಡಿಕೇರಿ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ಮಾರ್ಚ್, 01 ರಿಂದ ಆರಂಭವಾಗಲಿದ್ದು, ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಬಸ್ ಕಲ್ಪಿಸಲು ಕೆಎಸ್‍ಆರ್‍ಟಿಸಿ ಮಡಿಕೇರಿ ಘಟಕ ವ್ಯವಸ್ಥಾಪಕರಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಸಂಬಂಧ ಸೋಮವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಸ್‍ಗಳಲ್ಲಿ ಜನದಟ್ಟಣೆ ಹೆಚ್ಚು ಇದೆ ಎಂದು ಬಸ್ ನಿಲ್ದಾಣದಲ್ಲಿ ಬಸ್ಸು ನಿಲ್ಲಿಸದೆ ಹೋಗಬಾರದು, ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡು ಬರಬೇಕು. ಈಗಾಗಲೇ ಸರ್ಕಾರ ಪರೀಕ್ಷೆಗೆ ತೆರಳುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ‘ಪ್ರವೇಶ ಪತ್ರ’ ತೋರಿಸಿ ಉಚಿತವಾಗಿ ಪ್ರಯಾಣಕ್ಕೆ ಅವಕಾಶ ಮಾಡಿದ್ದು, ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಗಮನಹರಿಸುವಂತೆ ಸ್ಪಷ್ಟ ನಿರ್ದೇಶನ ನೀಡಿದರು. ಪ್ರಶ್ನೆ ಪತ್ರಿಕೆಯನ್ನು ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಮಾರ್ಗದಲ್ಲಿ ಪೊಲೀಸರ ನಿಯೋಜನೆ, ಪರೀಕ್ಷಾ ಕೇಂದ್ರದಲ್ಲಿ ಶ್ರುಶೂಷಕರು ಹಾಗೂ ಪೊಲೀಸರ ನಿಯೋಜನೆ, ಬ್ಯಾಗ್ ಇಟ್ಟುಕೊಳ್ಳಲು ಪ್ರತ್ಯೇಕ ಕೊಠಡಿ ವ್ಯವಸ್ಥೆ, ಕುಡಿಯುವ ನೀರು ಕಲ್ಪಿಸುವುದು, ಮತ್ತಿತರ ಅಗತ್ಯ…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಹೇರ್‌ ಸ್ಟೈಲ್‌ ಮಾಡಿಕೊಳ್ಳೋಕೆ ಯಾವ ಹೆಣ್ಣುಮಕ್ಕಳಿಗೆ ಇಷ್ಟವಿಲ್ಲ ಹೇಳಿ. ಮೇಕಪ್‌ ಮಾಡಿಕೊಂಡಾಗ ಹೇರ್‌ ಸ್ಟೈಲ್‌ ಮಾಡಿಕೊಂಡಾಗಲೇ ಅದು ಪರಿಪೂರ್ಣವಾಗೋದು. ಹೇರ್‌ ಸ್ಟೈಲ್‌ನಲ್ಲಿ ಅನೇಕ ಬಗೆಗಳಿವೆ. ದಿನ ದಿನಕ್ಕೂ ಒಂದೊಂದು ಹೇರ್‌ ಸ್ಟೈಲ್‌ ಹುಟ್ಟಿಕೊಳ್ಳುತ್ತಿವೆ. ಇನ್ನು ಹೇರ್‌ ಸ್ಟೈಲ್‌ ಅಂದವಾಗಿ ಚಂದವಾಗಿ ಕಾಣೋಕೆ ಅಥವಾ ಮಾಡಿದ ಹೇರ್‌ ಸ್ಟೈಲ್‌ ಸರಿಯಾಗಿ ಕೂರೋಕೆ ಹೇರ್‌ ಡಿಸೈನರ್‌ಗಳು ಹೇರ್‌ ಸ್ಪ್ರೇ ಬಳಸುವ ಚಾಲ್ತಿಯಲ್ಲಿದೆ. ಹೀಗೆ ಹೇರ್‌ ಸ್ಪ್ರೇ ಬಳಸುವುದರಿಂದ ಆಗುವ ಪರಿಣಾಮ ಏನೆಂದು ತಿಳಿದುಕೊಳ್ಳೋಣ. ಸ್ಟೈಲಿಶ್‌ ಹೇರ್‌ ಸ್ಟೈಲ್‌ ಬೇಕೆಂದರೆ ಹೇರ್‌ ಸ್ಪ್ರೇ ಮಾಡಲೇಬೆಂಕೆಂದು ಹೇರ್‌ ಡಿಸೈನರ್‌ಗಳು ಸಲಹೆ ನೀಡುತ್ತಾರೆ. ಆದರೆ ಈ ಹೇರ್‌ ಸ್ಪ್ರೇ ಬಳಸುವುದರಿಂದ ಕೂದಲಿಗೆ ತುಂಬಾ ಹಾನಿಕಾರಕ ಎಂದು ಮೊದಲು ತಿಳಿದುಕೊಳ್ಳಿ. ವಿವಿಧ ಬಗೆಯ ಅನೇಕ ರಾಸಾಯನಿಕಗಳನ್ನು ಬಳಸಿ ಈ ಹೇರ್‌ ಸ್ಪ್ರೇಗಳನ್ನು ತಯಾರಿಸಿರುತ್ತಾರೆ. ಈ ರಾಸಾಯನಿಕರಗಳು ಕೂದಲಿಗೆ ಹಾಗು ಚರ್ಮಕ್ಕೂ ತುಂಬಾ ಅಪಾಯಕಾರಿ. ಅಪರೂಪಕ್ಕೆಂದು ಹೇರ್‌ ಸ್ಪ್ರೇ ಬಳಸಲು ಅಡ್ಡಿಯಿಲ್ಲ. ಆದರೆ ನಿರಂತರವಾಗಿ ಹೇರ್‌ ಸ್ಪ್ರೇ ಬಳಸಿದರೆ ಕೂದಲು…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಕೆಂಪು ಮೆಣಸಿನಕಾಯಿ ಬಾಯಿಗಿಟ್ಟರೆ ಖಾರ ರುಚಿಕೊಟ್ಟರೆ ಇದರ ಸೇವನೆ ದೇಹದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಕೆಂಪು ಮೆಣಸಿನಕಾಯಿಯಲ್ಲಿ ಆಂಟಿಮೈಕ್ರೊಬಿಯಲ್‌ ಅಂಶವಿದ್ದು ಆರೋಗ್ಯದ ಮೇಲೆ ಹೇಗೆ ಉತ್ತಮ ಪ್ರಯೋಜನೆ ಬೀರುತ್ತದೆ ಎಂದು ತಿಳಿದುಕೊಳ್ಳೋಣ. ಕೆಂಪು ಮೆಣಸಿನಕಾಯಿಯಲ್ಲಿ ಅನೇಕ ಪೋಷಕಾಂಶಗಳಿವೆ. ಇದರಲ್ಲಿ ವಿಟಮಿನ್‌ ಎ,ಬಿ, ಸಿ ಹೇರಳವಾಗಿದೆ. ಇದು ದೇಹಕ್ಕೆ ತುಂಬಾ ಒಳ್ಳೆಯದು. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ. ಇನ್ನು ಸಂಶೋಧನೆಯೊಂದರ ಪ್ರಕಾರ ಕ್ಯಾಪ್ಸೈಸಿನ್‌ ದೇಹದ ಕೋಶಗಳನ್ನು ರಕ್ಷಿಸಲು ಉತ್ಕೃಷ್ಟ ನಿರೋಧಕವಾಗಿ ಕೆಲಸ ಮಾಡುತ್ತದೆ. ನಿರಂತರವಾಗಿ ಕೆಂಪು ಮೆಣಸಿನಕಾಯಿ ಸೇವಿಸಿದರೆ ವ್ಯಕ್ತಿಯ ಆಯಸ್ಸು ವೃದ್ಧಿಯಾಗುತ್ತದೆ. ಹೀಗಂತ ಸಂಶೋಧನೆಯೊಂದು ಸಾಬೀತು ಮಾಡಿದೆ. ಇದರಲ್ಲಿ ಆಯಸ್ಸು ಹೆಚ್ಚಿಸುವ ಗುಣ ಇರುತ್ತದೆಯಂತೆ. ಮೆಣಸಿನಕಾಯಿಯು ಸ್ಥೂಲಕಾಯ ಕಡಿಮೆ ಮಾಡುತ್ತದೆ. ವಯೋಸಹಜ ರೋಗಗಳಿಂದ ರಕ್ಷಿಸುತ್ತದೆ ಹಾಗು ಸಾವನ್ನು ಮುಂದೂಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೆಂಪು ಮೆಣಸಿನಕಾಯಿಯನ್ನು ನಿತ್ಯದ ಆಹಾರದಲ್ಲಿ ಸೇವಿಸಿದರೆ ಚಯಾಪಚಯಕ್ರಿಯೆ ವೇಗಗೊಳಿಸುತ್ತದೆ, ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ. ಇದರ ಸೇವನೆ ದೇಹವನ್ನು ಬೆಚ್ಚಗೆ ಇರಿಸುತ್ತದೆ, ಹಾಗಾಗಿ ಪಹಾಡಿ ಜನ ಹೆಚ್ಚು ಕೆಂಪು…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ವಯಸ್ಸು 40 ದಾಟಿತೆಂದರೆ ಆರೋಗ್ಯದಲ್ಲಿ ಅನೇಕ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಆರೋಗ್ಯ ಕಾಪಾಡಿಕೊಳ್ಳುವುದೇ ದೊಡ್ಡ ಸಾವಾಲಾಗಿರುತ್ತದೆ. ಹೀಗಿರುವಾಗ ಪುರುಷರಾಗಲಿ, ಮಹಿಳೆಯಾಗಲಿ 40 ವರ್ಷ ದಾಟಿದವರು ಈ ಕೆಳಗೆ ತಿಳಿಸಿರುವ ಆಹಾರಗಳ ಸೇವನೆಯನ್ನು ಆದಷ್ಟು ಕಡಿಮೆ ಮಾಡಿಕೊಳ್ಳಬೇಕು. ಸಂಸ್ಕರಿತ ಪಾನೀಯಗಳು: ಸಾಮಾನ್ಯವಾಗಿ ಕಾರ್ಬೋನೇಟೆಡ್‌ ಪಾನೀಯಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಲ್ಲೂ 40 ದಾಟಿದವರು ಇದರ ಸೇವನೆ ನಿಲ್ಲಿಸಿಬಿಡಬೇಕು. ಏಕೆಂದರೆ ಇದರಲ್ಲಿ ಕೆಫೀನ್‌, ಫ್ರಕ್ಟೋಸ್‌, ಇದರಲ್ಲಿ ಸಂಸ್ಕರಿತ ಸಕ್ಕರೆ ಇರುತ್ತದೆ. ಇದರಿಂದ ಸಕ್ಕರೆಯು ಇನ್ಸುಲಿನ್‌ ಮಟ್ಟವನ್ನು ಹೆಚ್ಚಿಸುತ್ತದೆ. ಇನ್ನು ಕೆಫೀನ್‌ ಗೌಟ್‌ ಅನ್ನು ಪ್ರಚೋದಿಸುವ ಸಂಭವ ಹೆಚ್ಚಿರುತ್ತದೆ. ಇವೆಲ್ಲಾ ಹೃದಯಾಘಾತದ ಅಪಾಯವನ್ನು ಉಂಟು ಮಾಡಬಹುದು. ರೆಡ್‌ಮೀಟ್‌: 40 ದಾಟಿದವರು ರೆಡ್‌ಮೀಟ್‌ ಸೇವನೆಯನ್ನು ಕಡಿಮೆ ಮಾಡಿಕೊಳ್ಳಬೇಕು. ರೆಡ್‌ಮೀಟ್‌ ಅಂದರೆ ಕೆಂಪು ಮಾಂಸದಲ್ಲಿ ಹೇರಳ ಪ್ರಮಾಣದಲ್ಲಿ ಕೊಲೆಸ್ಟ್ರಾಲ್‌, ಹೃದಯ ರಕ್ತನಾಳದ ಕಾಯಿಲೆಗಳು ಮಧುಮೇಹದಂತಹ ಅಪಾಯಕಾರಿ ಕಾಯಿಲೆಗಳನ್ನು ತಂದೊಡ್ಡುವ ಸಂಭವ ಇರುತ್ತದೆ. ಇನ್ನು ಹೆಚ್ಚು ತಾಪಮಾನದಲ್ಲಿ ಬೇಯಿಸಿದ ಮಾಂಸವನ್ನು ಸೇವಿಸಿದರೆ ಪ್ರಾಸ್ಟೇಟ್‌ ಕ್ಯಾನ್ಸರ್‌ ಅಪಾಯವನ್ನು ತರಬಹುದು. ಹಾಗಾಗಿ ಆರೋಗ್ಯದ…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಮನಿ ಪ್ಲಾಂಟ್‌ ಇತ್ತೀಚಿನ ದಿನಮಾನಗಳಲ್ಲಿ ತುಂಬಾ ಫೇಮಸ್‌ ಆಗ್ತಾ ಇದೆ. ಸಾಮಾನ್ಯವಾಗಿ ಎಲ್ಲರೂ ಮನಿ ಪ್ಲಾಂಟ್‌ಅನ್ನು ಮನೆಯೊಳಗೆ ಇರಿಸಿಕೊಳ್ಳುತ್ತಿದ್ದಾರೆ. ಇದನ್ನು ಮನೆಯಲ್ಲಿ ಹೇಗೆ, ಯಾವ ದಿಕ್ಕಿನಲ್ಲಿ ಇಡಬೇಕು, ಇದನ್ನು ಮನೆಯಲ್ಲಿ ಇಟ್ಟರೆ ಆಗುವ ಪ್ರಯೋಜನಗಳೇನು ಎಂದು ತಿಳಿಸಿಕೊಡುತ್ತೇವೆ. ಮನಿ ಪ್ಲಾಂಟ್‌ ಹೆಸರೇ ಸೂಚಿಸುವಂತೆ ಇದನ್ನು ಮನೆಯಲ್ಲಿ ಇರಿಸಿದರೆ ಧನಲಕ್ಷ್ಮೀ ಒಲಿದು ಬರುತ್ತಾಳೆ ಎಂಬ ನಂಬಿಕೆ ಇದೆ. ವ್ಯಾಪಾರ ವ್ಯವಹಾರದಲ್ಲಿ ಲಾಭಾಂಶ ಹೆಚ್ಚಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಮನಿ ಪ್ಲಾಂಟ್‌ಗೆ ಹೆಚ್ಚು ನೀರು, ಗಾಳಿ, ಬೆಳಕು ಅವಶ್ಯಕೆ ಇಲ್ಲ. ವರ್ಷವಿಡೀ ಹಸಿರಾಗಿರುವ ಬಾಡದ ಒಂದು ಸಸಿ ಇದು. ಇದನ್ನು ಮನೆಯಲ್ಲಿಟ್ಟು ಬಾಡದಂತೆ ನೋಡಿಕೊಳ್ಳಬೇಕು. ಈ ಸಸಿ ಬಾಡಿದರೆ ಆರ್ಥಿಕ ಬಿಕ್ಕಟ್ಟು ಉಂಟಾಗುತ್ತದೆ ಎಂದು ಸಹ ಹೇಳಲಾಗುತ್ತದೆ. ಆದ್ದರಿಂದ ಇದನ್ನು ಮನೆಯಲ್ಲಿರಿಸಿದವರು ಬಾಡಲು ಬಿಡಬಾರದಂತೆ. ಹೀಗಂತ ವಾಸ್ತು ಹೇಳುತ್ತದೆ. ಇನ್ನು ಮನಿ ಪ್ಲಾಂಟ್‌ ಬಗ್ಗೆ ಹೆಚ್ಚು ಹೇಳುವುದಾದರೆ ಇದು ಮನೆಯಲ್ಲಿ ಆಮ್ಲಜನಕ ಪ್ರಮಾಣವನ್ನು ಅಧಿಕ ಮಾಡುತ್ತದೆ. ಮನೆಯವರ ಆರೋಗ್ಯ ಕಾಪಾಡುವಲ್ಲೂ ಸಹ ಈ…

Read More