Author: kannadanewsnow07

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಈ ಲೇಖನದ ಮೂಲಕ ಮುಖದ ಮೇಲಿನ ಸುಕ್ಕು ನೆರಿಗೆ ಹಾಗು ಮೊಡವೆಗಳನ್ನು ಹೋಗಲಾಡಿಸಿ ನಿಮ್ಮ ಮುಖದ ಚರ್ಮದ ಆರೋಗ್ಯ ಹೆಚ್ಚಿಸಿ ನಿಮ್ಮ ವಯಸ್ಸನ್ನು ಮುಚ್ಚಿಡುವಂತೆ ಮಾಡುತ್ತವೆ ಈ ಫೇಸ್‌ ಪ್ಯಾಕ್‌ಗಳು. ಇವೆಲ್ಲಾ ನೈಸರ್ಗಿಕ ಹಾಗು ಯಾವುದೇ ಅಡ್ಡ ಪರಿಣಾಮವಿಲ್ಲದ ಫೇಸ್‌ ಪ್ಯಾಕ್‌ಗಳು. ಒಂದೆರಡು ಚಮಚ ಅಕ್ಕಿ ಹಿಟ್ಟಿಗೆ ಶುದ್ಧ ಹಸಿ ಹಾಲು ಸೇರಿಸಿ ಪೇಸ್ಟ್‌ ಮಾಡಿಕೊಳ್ಳಿ. ಮುಖವನ್ನು ಚೆನ್ನಾಗಿ ತೊಳೆದು ಈ ಪೇಸ್ಟ್‌ ಹಚ್ಚಿಕೊಂಡು ಹದಿನೈದು ನಿಮಿಷ ಬಿಟ್ಟು ತೊಳೆಯಿರಿ. ಇದರಿಂದ ಮುಖ ಕ್ಲೆಂಸಿಂಗ್‌ ಆಗುತ್ತದೆ. ತ್ವಚೆ ಮೃದುವಾಗಿ, ಚರ್ಮ ಹೊಸ ಯವ್ವನ ಪಡೆದುಕೊಳ್ಳುತ್ತದೆ. ಮೊಸರಿಗೆ ಜೇನುತುಪ್ಪ ಕಲಿಸಿ ಮುಖಕ್ಕೆ ಪ್ಯಾಕ್‌ ಹಾಕಿಕೊಳ್ಳಿ. ಇದು ಒಣ ಚರ್ಮ ಇದ್ದವರಿಗೆ ತುಂಬಾ ಉತ್ತಮ ರಿಸಲ್ಟ್‌ ಕೊಡುತ್ತದೆ. ಮೊಸರಿನ ಜಿಡ್ಡಿನಾಂಶ ಚರ್ಮಕ್ಕೆ ಸೇರಿಕೊಳ್ಳುತ್ತದೆ. ಚಳಿಗಾಲದಲ್ಲಿ ಈ ಪ್ಯಾಕ್‌ ಎಲ್ಲರಿಗೂ ಸೂಕ್ತ. ಚೆನ್ನಾಗಿ ಮಾಗಿದ ಬಾಳೆಹಣ್ಣನು ಕಿವುಚಿ ಇದಕ್ಕೆ ರೋಸ್‌ ವಾಟರ್‌ ಬೆರಸಿ ಮುಖಕ್ಕೆ ಹಚ್ಚಿಕೊಳ್ಳಿ. ಮುಖದ ಚರ್ಮ ಬಿಗಿದಂತೆ ಆಗುತ್ತದೆ, ಆಗ ಮುಖವನ್ನು…

Read More

ಕೆಎನ್‌ಡಿಜಿಟಲ್‌ಡೆಸ್ಕ್‌: ನಿಮ್ಮ ಮುದ್ದಾದ ಮಗುವಿನ ಚರ್ಮದ ಆರೈಕೆಯ ಬಗ್ಗೆ ನಾವಿಂದು ತಿಳಿಸಿಕೊಡಲಿದ್ದೇವೆ. ಚಳಿಗಾಲದಲ್ಲಿ ಸಹಜವಾಗಿ ಚರ್ಮದ ತೇವಾಂಶ ಕಡಿಮೆಯಾಗುತ್ತದೆ. ಚರ್ಮ ಒಡೆಯುವುದು ಬಿರುಕಾಗುವುದು. ಇಂತಹ ಋತುಮಾನದಲ್ಲಿ ಮಗುವಿನ ಆರೈಕೆಯ ಬಗ್ಗೆ ತುಂಬಾ ಕಾಳಜಿ ವಹಿಸಬೇಕು. ಎಳೆಯ ಮೃದುವಾದ ಚರ್ಮದ ಆರೈಕೆ ತುಂಬಾ ನಾಜೂಕಾಗಿರಬೇಕು. ಮಗುವಿನ ಸ್ನಾನ ಸೂರ್ಯ ನೆತ್ತಿಗೆ ಬಂದ ಮೇಲೆ ಆಗಲಿ. ಬೆಳಗ್ಗೆ ಮಗುವಿಗೆ ಸ್ನಾನ ಬೇಡ. ಹೆಚ್ಚು ಹೊತ್ತು ಬಚ್ಚಲು ಮನೆಯಲ್ಲಿ ಮಗುವನ್ನು ಇರಿಸಬೇಡಿ. ಚಳಿ ಇದೆ ಎಂದು ಮಗುವಿಗೆ ತೀವ್ರವಾದ ಬಿಸಿ ನೀರು ಸ್ನಾನ ಮಾಡಿಸಬೇಡಿ. ಆದರೆ ನಮ್ಮ ಹಳೆಯ ಪದ್ಧತಿ ಏನೆಂದರೆ ತುಂಬಾ ಸುಡುವ ನೀರು ಮಗುವಿಗೆ ಹಾಕಿದರೆ ಒಳ್ಳೆಯದು ಅಂತ ಹೇಳುತ್ತಾರೆ. ಆದರೆ ಈಗಿನ ಆಧುನಿಕ ವೈದ್ಯರು ಇದನ್ನು ತಳ್ಳಿ ಹಾಕುತ್ತಾರೆ. ತುಂಬಾ ಸುಡುವ ನೀರು ಚಿಕ್ಕ ಮಕ್ಕಳಿಗೆ ಚರ್ಮದ ಮೇಲೆ ಕೆಂಪು ಕಲೆಗಳು ಅಥವಾ ಅಲರ್ಜಿ ಆಗಬಹುದು ಎಂದು ಹೇಳುತ್ತಾರೆ. ಚಳಿಗಾಲದಲ್ಲಿ ನೀರಿನ ಟಬ್‌ನಲ್ಲಿ ಹೆಚ್ಚು ಹೊತ್ತು ಮಗುವನ್ನು ಬಿಡಬೇಡಿ. ಇದರಿಂದ ಶೀತವಾಗುವ…

Read More

ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ: ಪರೀಕ್ಷಾ ಶುಭಾಶಯ ಕೋರೋದು ಸಾಮಾನ್ಯ..ಆದರೆ ಕನ್ನಡ ಪರೀಕ್ಷೆಯನ್ನ ನಾಲ್ಕನೆ ಬಾರಿ ಬರೆಯೊ ಸ್ನೇಹಿತರನಿಗೆ ಬ್ಯಾನರ್ ಕಟ್ಟಿ ಶುಭಾಶಯ ಕೋರಿದ್ದಾರೆ‌. ಸತತ 4ನೇ ಬಾರಿ ಕನ್ನಡ ಪರೀಕ್ಷೆ ಬರಿಯುತ್ತಿರುವ ಶ್ರೀಯುತ ಜೀವನ ರವರಿಗೆ ಶುಭಾಶಯಗಳು ಎಂಬ ಒಕ್ಕಣೆಯೊಂದಿಗೆ ಆರಂಭವಾಗಿ ನಮ್ ಮನ್ಸು,ನಮ್ಗೆ ಒಳ್ಳೆದ್ ಮಾಡಿದ್ರೆ, ದೇವು ಈ ಎಕ್ಷಮ್ ಎಲ್ಲಾ ಏನಿಕ್ಕೆ ಎಂದು ಬೆಳ್ಳುಳ್ಳಿ ಕಬಾಬ್ ಎಂಬ ನಾಮಾಂಕಿತದೊಂದಿಗೆ ಶುಭ ಕೋರಿದ್ದಾರೆ. ಇಂದಿನಿಂದ ಆರಂಭವಾದ ದ್ವಿತೀಯ ಪಿಯು ಪರೀಕ್ಷೆ ಆರಂಭವಾಗಿದ್ದು ಮೊದಲ ದಿನವಾದ ಕನ್ನಡ ಪರೀಕ್ಷೆ ಬರೆಯುತ್ತಿದ್ದಾರೆ..ಇಂತ ಸಂದರ್ಭದಲ್ಲಿ ಗೆಳೆಯರು ಹಾಕಲಾದ ಬ್ಯಾನರ್ ನೋಡುಗರಿಗೆ ಹಾಸ್ಯಸ್ಪವಾಗಿ ಖುಷಿ ತರಿಸದೆ ಇರಲಾರದು. https://kannadanewsnow.com/kannada/law-and-order-is-deteriorating-day-by-day-under-congress-govt-by-vijayendra/ https://kannadanewsnow.com/kannada/eat-these-foods-regularly-to-enhance-the-glow-of-your-skin/ https://kannadanewsnow.com/kannada/if-you-are-not-menstruating-properly-then-eat-these-foods-and-your-menstrual-cycle-will-be-fine/

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಎಷ್ಟೋ ಹೆಣ್ಣುಮಕ್ಕಳಿಗೆ ಮುಟ್ಟಿನ ಸಮಸ್ಯೆ ಇದ್ದೇ ಇರುತ್ತದೆ. ಸರಿಯಾದ ಸಮಯಕ್ಕೆ ಪೀರೇಡ್ಸ್‌ ಆಗದೇ ಇರುವವರಿಗೆ ಇಲ್ಲಿ ಕೆಲ ಆಹಾರ ಪದಾರ್ಥಗಳನ್ನು ಸೂಚಿಸುತ್ತೇವೆ. ಇವುಗಳನ್ನು ನಿಯಮಿತವಾಗಿ ಸೇವಿಸಿದರೆ ನಿಮ್ಮ ಮುಟ್ಟಿನ ಎಲ್ಲಾ ಬಗೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಇವುಗಳ ಸೇವನೆ ಹೊರೆತಾಗಿಯೂ ನಿಮ್ಮ ಪೀರೇಡ್ಸ್‌ನಲ್ಲಿ ತೊಂದರೆ ಉಂಟಾಗುತ್ತಿದ್ದರೆ ಸ್ತ್ರೀರೋಗ ತಜ್ಞರನ್ನು ಸಂಪರ್ಕಿಸಿ ಸುಕ್ತ ಚಿಕಿತ್ಸೆ ಪಡೆದುಕೊಳ್ಳಿ. ಅರಿಶಿನ: ಅರಿಶಿನ ಸರ್ವ ರೋಗಕ್ಕೂ ಮದ್ದು ಎಂದರೆ ತಪ್ಪಿಲ್ಲ. ಫಿರೇಡ್ಸ್‌ಗೂ ಅರಿಶಿನ ಉತ್ತಮ ಮನೆಮದ್ದಾಗಿದೆ. ರಾತ್ರಿ ಹಾಲಿನೊಂದಿಗೆ ಚಿಟಿಕೆ ಅರಿಶಿನ ಬೆರಸಿ ನಿತ್ಯವೂ ಸೇವಿಸಿದರೆ ಮುಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ. ಹಾಗು ಅರಿಶಿನ ಮಿಶ್ರಿತ ಹಾಲು ದೇಹಕ್ಕೆ ರೋಗ ನಿರೋಧಕ ಶಕ್ತಿ ನೀಡುತ್ತದೆ. ಬೀಟ್ರೂಟ್‌: ಇದರಲ್ಲಿ ಕಬ್ಬಿನಾಂಶ ಅತ್ಯಂತ ಅಧೀಕ ಪ್ರಮಾಣದಲ್ಲಿ ಇದೆ. ಮುಟ್ಟಿನ ಸಮಯದಲ್ಲಿ ಕಿರಿಕಿರಿ, ಮಾನಸಿಕ ಒತ್ತಡ ಹೀಗೆ ತೊಂದರೆಗಳಾದರೆ ಇದರ ಜ್ಯೂಸ್‌ ಸೇವಿಸಿದರೆ ಆ ಎಲ್ಲಾ ಸಮಸ್ಯೆ ಕಡಿಮೆಯಾಗುತ್ತದೆ. ಇದರಲ್ಲಿ ಕ್ಯಾಲ್ಸಿಯಂ, ಫೋಲಿಕ್‌ ಆಸಿಡ್‌, ಐರನ್‌ ಕೂಡ ಹೆಚ್ಚಿನ ಪ್ರಮಾಣದಲ್ಲಿ ಇದೆ.…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಕಾಂತಿಯುತ ಚರ್ಮ ಪಡೆಯಲು ಬರೀ ಫೇಸ್‌ ಪ್ಯಾಕ್‌, ಮಸಾಜ್‌ಗಳನ್ನು ಮಾಡಿಕೊಂಡರೆ ಸಾಲದು. ದೇಹಕ್ಕೆ ಕೆಲ ಪೋಷಕಾಂಶಗಳು ಅಗತ್ಯ. ದೇಹದ ಒಳಗಿನಿಂದ ನಮ್ಮ ತ್ವಚೆಯ ಆರೈಕೆ ಮಾಡಿಕೊಳ್ಳಬೇಕು. ಹಾಗಿದ್ದರೆ ಮಾತ್ರ ತ್ವಚೆ ದೀರ್ಘ ಕಾಲದವರೆಗೂ ಆರೋಗ್ಯವಾಗಿರುತ್ತದೆ. ಹೆಚ್ಚು ಹೆಚ್ಚು ನೀರು ಸೇವಿಸಿದರೆ ತ್ವಚೆ ತುಂಬಾ ಆರೋಗ್ಯವಾಗಿರುತ್ತದೆ. ದಿನವೂ ಸುಮಾರು ಐದು ಲೀಟರ್‌ ಕುಡಿಯಿರಿ. ನೀರು ಹೆಚ್ಚು ಸೇವಿಸಿದರೆ ತ್ವಚೆಯನ್ನು ಸದಾ ಮಾಯಿಶ್ಚರೈಸ್‌ನಲ್ಲಿರಿಸುತ್ತದೆ. ಇನ್ನು ಹೆಚ್ಚು ನೀರಿನ ಸೇವನೆ ದೇಹದಲ್ಲಿನ ವಿಷಕಾರಿ ಪದಾರ್ಥಗಳನ್ನು ಹೊರಹಾಕಿ ಈ ಮೂಲಕ ಮೊಡವೆಗಳು ಆಗದಂತೆ ನೋಡಿಕೊಳ್ಳುತ್ತದೆ. ನೀರಿನ ಹೆಚ್ಚು ಸೇವನೆ ದೇಹವನ್ನು ಸದಾ ತೇವಾಂಶದಲ್ಲಿರಿಸುತ್ತದೆ. ಬದಾಮಿ ಸೇವಿಸಿದರೆ ಚರ್ಮ ಹೊಳೆಯುವ ರೂಪ ಪಡೆದುಕೊಳ್ಳುತದೆ. ಇದರಲ್ಲಿ ಒಮೆಗಾ3 ಅಂಶವಿದ್ದು ಚರ್ಮಕ್ಕೆ ಬೇಕಾದ ಹೆಚ್ಚಿನ ಪ್ರಮಾಣದ ಕೊಬ್ಬಿನಾಮ್ಲ ನೀಡುತ್ತದೆ. ನಿತ್ಯವೂ ನೆನಸಿಟ್ಟ ಎರಡು ಬದಾಮಿ ಸೇವನೆ ತ್ವಚೆಯನ್ನು ಮೃದುವಾಗಿಸುತ್ತದೆ. ಎಲ್ಲ ಬಗೆಯ ಹಸಿ ತರಕಾರಿ ಸೇವನೆ ದೀರ್ಘ ಕಾಲದವರೆಗೂ ದೇಹ ಹಾಗು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ನಿತ್ಯವೂ ಒಂದಲ್ಲ ಒಂದು…

Read More

ಬೆಂಗಳೂರು: ಬೆಂಗಳೂರಿನ ಪ್ರಸಿದ್ಧ ರಾಮೇಶ್ವರಂ ಕೆಫೆಯಲ್ಲಿ ಇಂದು ಮಧ್ಯಾಹ್ನ ಬಾಂಬ್ ಸ್ಫೋಟಗೊಂಡಾಗ ಹೊಗೆಯ ಮೋಡ, ನೆಲದ ಮೇಲೆ ಮಲಗಿದ್ದ ವ್ಯಕ್ತಿ ಮತ್ತು ಭಯಭೀತರಾದ ಗ್ರಾಹಕರು ಮತ್ತು ಸಿಬ್ಬಂದಿ ಹೊರಗೆ ಧಾವಿಸಿದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಸ್ಫೋಟದಲ್ಲಿ 9 ಮಂದಿ ಗಾಯಗೊಂಡಿದ್ದಾರೆ. ಘಟನೆ ವಿಡಿಯೋ ವೈರಲ್‌ ಆಗಿದ್ದು ಸಿಸಿಟಿವಿಯಲ್ಲಿ ದೃಶ್ಯಗಳು ಸೆರೆಯಾಗಿದೆ. ಈ ನಡುವೆ ಬೆಂಗಳೂರಿನ ರಾಮೇಶ್ವರ ಕಫೆಯಲ್ಲಿ ನಡೆದಿರುವ ಸ್ಪೋಟ ಘಟನೆಯ ತನಿಖೆ ತೀವ್ರವಾಗಿ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಖಚಿತವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಪ್ರಾಥಮಿಕ ತನಿಖೆಯ ಪ್ರಕಾರ ಅದು ಸಣ್ಣ ಪ್ರಮಾಣದ ಸುಧಾರಿತ ಸ್ಪೋಟಕವಾಗಿತ್ತು ಎಂದು ತಿಳಿದುಬಂದಿದೆ, ಪೂರ್ಣ ವರದಿಗಾಗಿ ಕಾಯುತ್ತಿದ್ದೇನೆ ಎಂದು ತಿಳಿಸಿದರು. ಕ್ಯಾಶಿಯರ್ ಬಳಿ ಟೋಕನ್ ಪಡೆದು ಅಲ್ಲಿ ತಿಂಡಿ ತಿಂದಿರುವ ವ್ಯಕ್ತಿ, ಬ್ಯಾಗ್ ಇಟ್ಟು ಬಂದಿದ್ದಾನೆ ಎಂಬ ಮಾಹಿತಿ ದೊರೆತಿದೆ ಎಂದರು. ಸುಮಾರು ಎಂಟು ಜನರಿಗೆ ಗಾಯಗಳಾಗಿವೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಒಂದು ಬಾರಿ ಗರ್ಭ ಧರಿಸಿದ ಮೇಲೆ ಆಕೆಗೆ ಆಗಾಗ ಅನಾರೋಗ್ಯ ಸಮಸ್ಯೆ ಕಾಡುತ್ತಲೇ ಇರುತ್ತದೆ. ಚಿಕ್ಕ ಪುಟ್ಟ ಒಂದಲ್ಲ ಒಂದ ಆರೋಗ್ಯದ ತೊಂದರೆ ಕಾಡುವುದು ಸಹಜ. ಅದರಲ್ಲಿ ಒಂದು ಗರ್ಭದ ಸಮಯದಲ್ಲಿ ಯೋನಿಯಲ್ಲಿ ಕಾಣಿಸುವ ರಕ್ತ ಚುಕ್ಕೆಗಳು ಇದರ ಬಗ್ಗೆ ನಾವಿಂದು ಡಿಟೇಲ್‌ ಆಗಿ ತಿಳಿದುಕೊಳ್ಳೋಣ. ಗರ್ಭಾವಸ್ಥೆಯಲ್ಲಿ ಯೋನಿಯಲ್ಲಾಗುವ ರಕ್ತಸ್ರಾವ ಅಥವಾ ರಕ್ತ ಚುಕ್ಕೆಗಳು ಕಂಡ ತಕ್ಷಣ ಭಯ ಬೀಳುತ್ತಾರೆ. ಇದು ಗರ್ಭಪಾತವಾಗಬಹುದು ಎಂದು ಭಾವಿಸಿಬಿಡುತ್ತಾರೆ ಹೆಚ್ಚು ಭಯ ಬೀಳಬೇಡಿ. ಗರ್ಭಾವಸ್ಥೆಯಲ್ಲಿ ಯೋನಿಯಲ್ಲಿ ರಕ್ತಸ್ರಾವವಾಗುವುದು ಸಾಮಾನ್ಯ ಎಂದು ವೈದ್ಯರು ಹೇಳುತ್ತಾರೆ. ಐದರಲ್ಲಿ ಒಬ್ಬರಿಗೆ ಹೀಗೆ ಆಗಾಗ ಆಗುತ್ತದೆ ಎಂದು ಹೇಳುತ್ತಾರೆ. ಇದು ಕಾಮನ್‌ ಸಮಸ್ಯೆಯಾದರೂ ಆದರೆ ನಿತ್ಯವೂ ಹೀಗೆ ಆಗುತ್ತಿದ್ದರೆ ಕೂಡಲೇ ನಿಮ್ಮ ವೈದ್ಯರನ್ನು ಭೇಡಿ ಮಾಡಿ ಚೆಕ್‌ಅಪ್‌ ಮಾಡಿಸಿಕೊಳ್ಳಿ. ರಕ್ತ ಚುಕ್ಕೆಗಳು ಆಗಾಗ ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ವೈಟ್‌ ಬ್ಲಡ್‌ ಅಂದರೆ ಬಿಳಿ ಸೆರಗು ಕೂಡ ಕಾಣಿಸಿಕೊಳ್ಳುತ್ತದೆ. ಆದರೆ ರಕ್ತ ಸ್ರಾವ ಹೆಚ್ಚಾದರೆ ಅಂದರೆ ತಿಂಗಳಿಗೊಮ್ಮೆ ಮುಟ್ಟಾಗುವಂತೆ ರಕ್ತ ಸ್ರಾವ…

Read More

ಮೈಸೂರು, : ಬೆಂಗಳೂರಿನ ರಾಮೇಶ್ವರ ಕಫೆಯಲ್ಲಿ ನಡೆದಿರುವ ಸ್ಪೋಟ ಘಟನೆಯ ತನಿಖೆ ತೀವ್ರವಾಗಿ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಖಚಿತವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಪ್ರಾಥಮಿಕ ತನಿಖೆಯ ಪ್ರಕಾರ ಅದು ಸಣ್ಣ ಪ್ರಮಾಣದ ಸುಧಾರಿತ ಸ್ಪೋಟಕವಾಗಿತ್ತು ಎಂದು ತಿಳಿದುಬಂದಿದೆ, ಪೂರ್ಣ ವರದಿಗಾಗಿ ಕಾಯುತ್ತಿದ್ದೇನೆ ಎಂದು ತಿಳಿಸಿದರು. ಕ್ಯಾಶಿಯರ್ ಬಳಿ ಟೋಕನ್ ಪಡೆದು ಅಲ್ಲಿ ತಿಂಡಿ ತಿಂದಿರುವ ವ್ಯಕ್ತಿ, ಬ್ಯಾಗ್ ಇಟ್ಟು ಬಂದಿದ್ದಾನೆ ಎಂಬ ಮಾಹಿತಿ ದೊರೆತಿದೆ ಎಂದರು. ಸುಮಾರು ಎಂಟು ಜನರಿಗೆ ಗಾಯಗಳಾಗಿವೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿಸಿ ಟಿವಿ ಕ್ಯಾಮರಾ ಪರೀಕ್ಷಿಸಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು ಗೃಹ ಸಚಿವರಿಗೆ ಸ್ಥಳಕ್ಕೆ ಭೇಟಿ ನೀಡುವಂತೆ ತಿಳಿಸಲಾಗಿದೆ. ಇನ್ನು ಸ್ವಲ್ಪ ಹೊತ್ತಿನಲ್ಲಿಯೇ ಸ್ಪಷ್ಟ ಮಾಹಿತಿ ದೊರೆಯಲಿದೆ ಎಂದರು. ಕಠಿಣ ಕ್ರಮ : ರಾಜ್ಯದಲ್ಲಿ ಇಂಥದ್ದು ನಡೆಯಬಾರದಿತ್ತು. ಮಂಗಳೂರಿನಲ್ಲಿ ಆಗಿದ್ದು ಬಿಟ್ಟರೆ ಪುನ: ಇಂಥ ಘಟನೆ ಸಂಭವಿಸಿದೆ. ಯಾರು ಇದನ್ನು ಮಾಡಿದ್ದಾರೆ…

Read More

ಬೆಂಗಳೂರು: ಬೆಂಗಳೂರು: ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದ ಸೇವೆಗಳಿಗೆ ಆನ್-ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಹಾಗೂ ಅರ್ಜಿಗಳ ಸ್ಥಿತಿಗತಿಯನ್ನು ಪರಿಶೀಲಿಸಲು ಮತ್ತು ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದ ಕುಂದುಕೊರತೆಗಳನ್ನು ದಾಖಲಿಸಲು, ದೇಶದಲ್ಲೆ ಪ್ರಪ್ರಥಮ ಬಾರಿಗೆ “ಪಂಚಮಿತ್ರ” Whatsapp Chat ನ್ನು ಲೋಕಾರ್ಪಣೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಾದ ಪ್ರಿಯಾಂಕ್ ಖರ್ಗೆ ತಿಳಿಸಿದರು. ಅವರು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ “ಪಂಚಮಿತ್ರ” ಪೋರ್ಟಲ್ ಲಾಂಛನ ಲೋಕಾರ್ಪಣೆ ಮಾಡಿ ಮಾತನಾಡಿದರು. ಸಾರ್ವಜನಿಕರು ತಮಗೆ ಅವಶ್ಯವಿರುವ ಗ್ರಾಮ ಪಂಚಾಯತಿಗಳ ವಿವಿಧ ಮಾಹಿತಿ ಮತ್ತು ವಿವರಗಳನ್ನು ಪಡೆಯಲು ಮತ್ತು ಗ್ರಾಮ ಪಂಚಾಯತಿಗಳ ಸೇವೆಗಳಿಗೆ ಅರ್ಜಿ ಸಲ್ಲಿಸಲು ಹಲವಾರು ವೆಬ್ ಸೈಟ್ ಮತ್ತು ಪೆÇೀರ್ಟಲ್‍ಗಳಿಗೆ ಭೇಟಿ ನೀಡಬೇಕಾಗಿತ್ತು. ಅಲ್ಲದೆ ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದ ಎಲ್ಲಾ ಬಗೆಯ ಕುಂದುಕೊರತೆಗಳನ್ನು ದಾಖಲಿಸಿ, ನಿವಾರಣೆ ಪಡೆಯಲು ಯಾವುದೇ ನಿರ್ದಿಷ್ಟವಾದ ವೆಬ್ ಸೈಟ್ ಅಥವಾ ಪೆÇೀರ್ಟಲ್‍ಗಳು ಇರಲಿಲ್ಲವಾದ್ದರಿಂದ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಗ್ರಾಮೀಣಾಭಿವೃದ್ಧಿ ಮತ್ತು…

Read More

ಕೆಎನ್‌ಎನ್‌ಸಿನಿಮಾಡೆಸ್ಕ್: ಅರುಣ್ ಅಮುಕ್ತ ನಿರ್ದೇಶನದಲ್ಲಿ ಮೂಡಿ ಬಂದಿರುವ `ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರವರು ಆರಂಭದಲ್ಲಿಂದಲೇ ಸ್ಯಾಂಡಲ್‌ವುಡ್‌ ಮಂದಿಯ ಗಮನ ಸೆಳೆಯುತ್ತಿದ್ದು, ಸಿನಿಮಾಕ್ಕೆ ಒಳ್ಳೆ ಟಾಕ್‌ ಕೂಡ ನಿರ್ಮಾಣವಾಗಿದೆ. ಇದೀಗ ಪೋಸ್ಟರ್ ಮತ್ತು ಮೋಷನ್ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದೆದ್ದು, ಅದು ಒಳ್ಳೆ ಸೌಂಡ್‌ ಮಾಡುತ್ತಿದೆ. ಇನ್ನೂ ಸಂಪೂರ್ಣ ಕಥೆ ಒಂದು ಕಾಲೇಜಿನ ಸುತ್ತವೇ ನಡೆಯಲಿದೆಯಂತೆ. ಆ ಕಾರಣಕ್ಕಾಗಿ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಎಂದು ಟೈಟಲ್ ಇಡಲಾಗಿದೆ. ಈ ಹಿಂದೆ ಟೈಟಲ್ ಲಾಂಚ್ ಅನ್ನೂ ಸಹ ಪ್ರೇಕ್ಷಕರನ್ನು ಸೆಳೆಯುವಂತೆ ಮಾಡಿದ್ದ ಚಿತ್ರತಂಡ, ಇಂದು ಬೆಳಗ್ಗೆ ಪೋಸ್ಟರ್ ಹಾಗೂ ಸಂಜೆ ಮೋಷನ್ ಪೋಸ್ಟರ್ ಬಿಡುಗಡೆಗೊಳಿಸಿದೆ. ಇದರ ಸುತ್ತ ಈಗೊಂದಷ್ಟು ನಿರೀಕ್ಷೆ ಮತ್ತು ಚರ್ಚೆ ಹುಟ್ಟಿಕೊಂಡಿದೆ. ಇದುವರೆಗೂ ಈ ಸಿನಿಮಾದ ಪಾತ್ರವರ್ಗ ಕಾಣಿಸಿರಲಿಲ್ಲ. ಈ ಪೋಸ್ಟರ್ ಹಾಗೂ ಮೋಷನ್ ಪೋಸ್ಟರ್ ಮೂಲಕ ಕೆಲ ಪಾತ್ರಗಳ ದರ್ಶನವಾಗಿದೆ. ಇದರಲ್ಲಿ ಚಂದನ್ ಶೆಟ್ಟಿ, ಭಾವನಾ ಅಪ್ಪು, ಅಮರ್, ಮನಸ್ವಿ, ವಿವಾನ್ ಸುನಿಲ್ ಪುರಾಣಿಕ್, ಅರವಿಂದ ರಾಜ್ ಪ್ರಶಾಂತ್ ಸಂಬರ್ಗಿ ಮುಂತಾದವರು ನಟಿಸಿದ್ದಾರೆ. ಇದರಲ್ಲಿ…

Read More