Subscribe to Updates
Get the latest creative news from FooBar about art, design and business.
Author: kannadanewsnow07
ಶಿವಮೊಗ್ಗ: ಮಲೆನಾಡು ಅಭಿವೃದ್ಧಿ ಮಂಡಳಿಯು 13 ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದೆ. 65 ಕ್ಕೂ ಹೆಚ್ಚು ಶಾಸಕರು, ಸಂಸದರು, ಅಧಿಕಾರಿಗಳನ್ನೊಂಡಿದ್ದು ಎಲ್ಲರ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯವನ್ನು ಮಾಡುತ್ತೇನೆ ಎಂದು ನೂತನ ಎಂಎಡಿಬಿ ಅಧ್ಯಕ್ಷರಾದ ಡಾ.ಆರ್ ಎಂ ಮಂಜುನಾಥ ಗೌಡ ತಿಳಿಸಿದರು. ನಗರದ ಮಲೆನಾಡು ಅಭಿವೃದ್ಧಿ ಮಂಡಳಿಯ ಕಚೇರಿಯ ಆವರಣದಲ್ಲಿ ಇಂದು ಮಲೆನಾಡು ಅಭಿವೃದ್ಧಿ ಮಂಡಳಿಯ ನೂತನ ಅಧ್ಯಕ್ಷರಾಗಿ ಅಧಿಕಾರವನ್ನು ವಹಿಸಿಕೊಂಡು ಮಾತನಾಡಿದ ಅವರು ಮೊದಲು ಬಂಗಾರಪ್ಪನವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಮಲೆನಾಡು ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಮುನ್ನುಡಿ ಬರೆದಿದ್ದರು. ನಂತರ ಅದು ಬೆಳೆದುಕೊಂಡು ಬಂದಿದೆ ಸರ್ಕಾರದಿಂದ ಆಗದೇ ಇರುವ ಕೆಲಸಗಳನ್ನು ಈ ಮಂಡಳಿಯಿಂದ ಮಾಡಬಹುದಾಗಿದೆ ಎಂದರು. ಅಧ್ಯಕ್ಷರ ಅಧಿಕಾರ ಹೆಸರಿಗೆ ಮಾತ್ರವಲ.್ಲ ಇದನ್ನು ನಿಭಾಯಿಸುವುದು ಸುಲಭದ ಕೆಲಸವಲ್ಲ ಹತ್ತಾರು ಎಂಎಲ್‍ಎ ಗಳು, ಸಂಸದರು ಎಲ್ಲಾರಿಗೂ ಅನುದಾನ ನೀಡಿ ಅಭಿವೃದ್ಧಿ ಮಾಡಬೇಕಾಗಿದೆ. ಆದರೆ ಪ್ರಸ್ತುತ ಬರಗಾಲದ ಸಂದರ್ಭದಲ್ಲಿ ಜನ ಮೂಲಭೂತ ಸೌಲಭ್ಯಗಳ ಕುರಿತು ಹೆಚ್ಚಿನ ಗಮನ ನೀಡಬೇಕಾಗಿದೆ. ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಅವರ…
ನವದೆಹಲಿ: ರಾಜ್ಯಸಭಾ ಸದಸ್ಯತ್ವಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ರಾಜೀನಾಮೆ ನೀಡಿದ್ದಾರೆ. ಈ ನಡುವೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಸೋಮವಾರ ಮತ್ತು ಮಂಗಳವಾರ ಬೆಳಗಾವಿಯಲ್ಲಿ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳ ಪಕ್ಷದ ಮುಖಂಡರ ಸಭೆ ನಡೆಸಲಿದ್ದಾರೆ. ಸೋಮವಾರ ರಾತ್ರಿ 8 ಗಂಟೆಗೆ ಬೆಳಗಾವಿಗೆ ಆಗಮಿಸಲಿರುವ ಅವರು, ರಾತ್ರಿ ಖಾಸಗಿ ಹೋಟೆಲ್ ನಲ್ಲಿ ಪಕ್ಷದ ಕೋರ್ ಕಮಿಟಿ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಬಾಗಲಕೋಟೆ, ವಿಜಯಪುರ ಮತ್ತು ಬೆಳಗಾವಿ ಜಿಲ್ಲೆಗಳ ಚುನಾವಣಾ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಲಿದ್ದಾರೆ. ನಡ್ಡಾ ಅವರು ತಮ್ಮ ಭೇಟಿಯ ಸಮಯದಲ್ಲಿ ಚುನಾಯಿತ ಪ್ರತಿನಿಧಿಗಳು, ಹಿರಿಯ ನಾಯಕರು ಮತ್ತು ಟಿಕೆಟ್ ಆಕಾಂಕ್ಷಿಗಳನ್ನು ಭೇಟಿ ಮಾಡಲಿದ್ದಾರೆ. ಬೆಳಗಾವಿ, ಚಿಕ್ಕೋಡಿ, ವಿಜಯಪುರ ಮತ್ತು ಬಾಗಲಕೋಟೆ ಸೇರಿದಂತೆ ವಿವಿಧ ಲೋಕಸಭಾ ಕ್ಷೇತ್ರಗಳ ಚುನಾವಣಾ ಸಿದ್ಧತೆಗಳನ್ನು ನಡ್ಡಾ ಪರಿಶೀಲಿಸಲಿದ್ದಾರೆ ಎಂದು ಪಕ್ಷದ ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್ ತಿಳಿಸಿದ್ದಾರೆ. ನಡ್ಡಾ ಅವರು ಮಂಗಳವಾರ ಬೆಳಿಗ್ಗೆ 11…
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಸಾಂಪ್ರದಾಯಕ ಸಿಹಿ ಪದಾರ್ಥಗಳನ್ನು ಮಾಡುವಾಗ ಬೆಲ್ಲ ಬಳಸೋದು ಸಹಜ. ಬೆಲ್ಲದ ಅಡುಗೆಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ನಾವಿಂದು ಹಳೆಯ ಸಾಂಪ್ರದಾಯಕ ಬೆಲ್ಲದ ಸಿಹಿ ಪದಾರ್ಥಗಳ ಸೇವನೆ ಕಡಿಮೆ ಮಾಡಿದ್ದೇವೆ. ಸಕ್ಕರೆ ಸಿಹಿ ಪದಾರ್ಥಗಳ ಸೇವನೆ ಹೆಚ್ಚಾಗಿದೆ. ಬೆಲ್ಲ ಸೇವನೆ ಇಲ್ಲದೇ ಇರುವುದು ಆರೋಗ್ಯಕ್ಕೆ ಅನೇಕ ನಷ್ಟಗಳಿವೆ. ಈ ಲೇಖನ ಓದಿ ಬೆಲ್ಲ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭಗಳಿವೆ ಎಂದು ತಿಳದುಕೊಂಡು, ಇನ್ನು ಮೇಲಾದರೂ ಬೆಲ್ಲ ಸೇವನೆಯನ್ನು ನಿಯಮಿತವಾಗಿ ಮಾಡುತ್ತಾ ಬನ್ನಿ. ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ ಎಂಬುದು ಈ ಲೇಖನದ ಆಶಯವಾಗಿದೆ. ಬೆಲ್ಲ ರಕ್ತ ಶುದ್ಧೀಕರಣ ಮಾಡುವಲ್ಲಿ ಎತ್ತಿದ ಕೈ. ಬೆಲ್ಲವನ್ನು ನಿಯಮಿತವಾಗಿ ಆಗಾಗ ಸೇವಿಸುತ್ತಾ ಬಂದರೆ ರಕ್ತ ಶುದ್ಧೀಕರಣವಾಗುತ್ತದೆ. ಮತ್ತು ಇದರಿಂದ ಅನಾರೋಗ್ಯ ಸಮಸ್ಯೆ ಕಾಡುವುದು ಕಡಿಮೆಯಾಗುತ್ತದೆ. ಇದು ಎಕೃತ್ತಿನ ಆರೋಗ್ಯ ಕಾಪಾಡುವಲ್ಲಿ ಅತ್ಯಂತ ಪ್ರಯೋಜನಕಾರಿಯಾಗಿದೆ. ಮಲಬದ್ಧತೆ ನಿವಾರಣೆ ಮಾಡುವಲ್ಲಿ ಬೆಲ್ಲ ತುಂಬಾ ಉತ್ತಮ ಕೆಲಸ ಮಾಡುತ್ತದೆ. ಬೆಲ್ಲವು ದೇಹದಲ್ಲಿ ಜೀರ್ಣಕಾರಿ ಕಿಣ್ವಗಳನ್ನು ಸಕ್ರೀಯಗೊಳಿಸುತ್ತದೆ. ಹೀಗಾಗಿ ಇದು ಕರುಳಿನ…
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ನಿದ್ರೆ ಆರೋಗ್ಯಕ್ಕೆ ನೈಸರ್ಗಿಕ ಔಷಧಿ. ಒಳ್ಳೆಯ ನಿದ್ರೆ ಒಳ್ಳೆಯ ಆರೋಗ್ಯದ ಸಂಕೇತ. ತುಂಬಾ ದಣಿದಾಗ ಚೆನ್ನಾಗಿ ನಿದ್ರೆ ಮಾಡಿ ಎದ್ದರೆ ಆ ದಣಿವು ಆಯಾಸವೆಲ್ಲಾ ಮಾಯವಾಗುತ್ತದೆ. ಆದರೆ ಕೆಲವರಿಗೆ ಎಷ್ಟೇ ದಣಿದರು ಎಷ್ಟೇ ಸುಸ್ತಾದರು ನಿಂದ್ರೆ ಎಂಬುಗು ಮರಿಚಿಕೆಯಾಗಿರುತ್ತದೆ. ಈಗಿನ ಒತ್ತಡದ ಜೀವನದಲ್ಲಿ ಅನೇಕ ಜನ ಈ ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಿದ್ರಾಹೀನತೆ ಎಂದರೆ ರಾತ್ರಿ ಬೇಗೆನೇ ನಿದ್ರೆ ಆಗದೇ ಇರುವುದ. ಅಥವಾ ಮಲಗಿದಾಗ ಆಗಾಗ ಎಚ್ಚರವಾಗುವುದು. ಇನ್ನು ಕೆಲವೊಮ್ಮೆ ರಾತ್ರಿ ನಿದ್ರೆ ಬಾರದೇ ಬೆಳಗಿನ ಜಾವ ನಿದ್ರೆ ಹೋಗುವುದು ಹೀಗೆ ನಿದ್ರಾಹೀನತೆಯಲ್ಲಿ ಅನೇಕ ಸಮಸ್ಯೆಗಳಿವೆ. ರಾತ್ರಿ ಬೇಗ ನಿದ್ರೆ ಬಾರದೇ ಇದ್ದಾಗ ಅಥವಾ ಮಧ್ಯೆ ಮಧ್ಯೆ ಎಚ್ಚರವಾದಾಗ ತುಂಬಾ ಕಿರಿಕಿರಿ ಉಂಟಾಗುತ್ತದೆ. ಹೀಗೆ ನಿದ್ರೆ ಸರಿಯಾಗಿ ಆಗದೇ ಇದ್ದಾಗ ದೈಹಿಕವಾಗಿ ಹಾಗು ಮಾನಸಿಕವಾಗಿ ಆರೋಗ್ಯಕ್ಕೆ ಒಳಗಾಗುತ್ತಾರೆ. ದೇಹಕ್ಕೆ ಸರಿಯಾಗಿ ನಿದ್ರೆ ಆಗದೇ ಸರಿಯಾಗಿ ವಿಶ್ರಾಂತಿ ಸಿಗದೇ ಇದ್ದಾಗ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ನಿದ್ರೆ ಸರಿಯಾಗಿ ಆಗದೇ…
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ದ್ರಾಕ್ಷಿ ಹಣ್ಣಿನ ಸೀಸನ್ ಶುರುವಾಗುತ್ತಿದೆ. ಚಳಿಗಾಲ ಮುಗಿದು ಬೇಸಿಗೆ ಶುರುವಾಗುವ ಹೊತ್ತಿನಲ್ಲಿ ಮಾರ್ಕೆಟ್‌ನಲ್ಲಿ ದ್ರಾಕ್ಷಿ ಹಣ್ಣು ಕಾಣಿಸಿಕೊಳ್ಳುತ್ತಿವೆ. ಸ್ವಲ್ಪ ಹುಳಿ ಮುಂದೆ ಇರುವ ಈ ಹಣ್ಣು ಸವಿಯಲು ಬಲು ರುಚಿ. ಬಿಸಿಲು ಹೆಚ್ಚಾದಂತೆ ದ್ರಾಕ್ಷಿ ಹಣ್ಣಿನ ಸಿಹಿ ಕೂಡ ಹೆಚ್ಚಾಗುತ್ತದೆ. ದ್ರಾಕ್ಷಿ ಹಣ್ಣುಗಳನ್ನು ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಏನೆಲ್ಲಾ ಲಾಭಗಳಿವೆ ಎಂದು ತಿಳಿದುಕೊಳ್ಳೋಣ. ದ್ರಾಕ್ಷಿ ಹಣ್ಣು ಸೇವಿಸಿದರೆ ದೇಹದ ತೂಕ ಇಳಿಯುತ್ತದೆ. ನಿತ್ಯದ ವ್ಯಾಯಾಮ ಮಾಡುತ್ತಾ ಸೀಸನ್ ಇದ್ದ ಸಮಯದಲ್ಲಿ ನಿತ್ಯವೂ ದ್ರಾಕ್ಷಿ ಹಣ್ಣು ಸೇವಿಸಿದರೆ ದೇಹ ತೂಕವನ್ನು ಮತ್ತಷ್ಟು ವೇಗವಾಗಿ ಇಳಿಸಿಕೊಳ್ಳಬಹುದು. ದ್ರಾಕ್ಷಿ ಹಣ್ಣಿನಲ್ಲಿ ಅತ್ಯಂತ ಹೇರಳ ಪ್ರಮಾಣದಲ್ಲಿ ಖನಿಜಾಂಶ ಹಾಗು ನಾರಿನಾಂಶ ಇದೆ. ಈ ಹಣ್ಣನ್ನು ಸೇವಿಸಿದೆ ಇದರಲ್ಲಿರುವ ನಾರಿನಾಂಶ ಜೀರ್ಣಕ್ರಿಯೆಗೆ ತುಂಬಾ ಸಹಾಯ ಮಾಡುತ್ತದೆ. ಜೀರ್ಣಕ್ರಿಯೆ ತೊಂದರೆ ಇದ್ದವರು ನಿತ್ಯವೂ ದ್ರಾಕ್ಷಿ ಹಣ್ಣನ್ನು ಸೇವಿಸಿ ಉತ್ತಮ ಆರೋಗ್ಯವನ್ನು ಪಡೆಯಬಹುದು. ದ್ರಾಕ್ಷಿ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಒದಗಿಸುವಲ್ಲಿ ಮುಖ್ಯ…
ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ಹಿಂದೂ ಅಲ್ಲ ಎಂದು ಹೇಳಿಕೆ ನೀಡಿದ್ದ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ವಿರುದ್ಧ ಪಾಟ್ನಾ ಪೊಲೀಸರು ಸೋಮವಾರ ಪ್ರಕರಣ ದಾಖಲಿಸಿದ್ದಾರೆ. ಭಾರತೀಯ ಜನತಾ ಯುವ ಮೋರ್ಚಾದ (ಬಿಜೆವೈಎಂ) ರಾಜ್ಯ ವಕ್ತಾರ ಕಲ್ಲು ಎಂದೂ ಕರೆಯಲ್ಪಡುವ ಕೃಷ್ಣ ಸಿಂಗ್ ಅವರು ಭಾನುವಾರ ರಾತ್ರಿ ಪಾಟ್ನಾದ ಗಾಂಧಿ ಮೈದಾನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. “ನಾವು ಲಾಲು ಪ್ರಸಾದ್ ಯಾದವ್ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಮತ್ತು ಈ ವಿಷಯವು ತನಿಖೆಯಲ್ಲಿದೆ” ಎಂದು ಗಾಂಧಿ ಮೈದಾನ್ ಪೊಲೀಸ್ ಠಾಣೆಯ ಎಸ್ಎಚ್ಒ ಸೀತಾರಾಮ್ ಕುಮಾರ್ ಹೇಳಿದ್ದಾರೆ. ಭಾನುವಾರ ಗಾಂಧಿ ಮೈದಾನದಲ್ಲಿ ನಡೆದ ಜನವಿಶ್ವಾಸ್ ರ್ಯಾಲಿಯಲ್ಲಿ ಮಾತನಾಡಿದ ಲಾಲು ಪ್ರಸಾದ್ ಯಾದವ್, ಇತ್ತೀಚಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ವಂಶಪಾರಂಪರ್ಯದ ಮೇಲೆ ದಾಳಿ ನಡೆಸುತ್ತಿದ್ದಾರೆ. ರ್ಯಾಲಿಯಲ್ಲಿ ಮಾತನಾಡಿದ ಲಾಲು ಪ್ರಸಾದ್, “ಅವರಿಗೆ ಏಕೆ ಮಕ್ಕಳಿಲ್ಲ ಎಂದು ನಾನು ಅವರನ್ನು ಕೇಳಲು ಬಯಸುತ್ತೇನೆ. ಅವರು ಮಕ್ಕಳನ್ನು ಹೊಂದಿರುವವರ ಮೇಲೆ ದಾಳಿ ಮಾಡುತ್ತಿದ್ದಾರೆ.…
ಕ್ಯಾಲಿಫೋರ್ನಿಯಾ: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಭಾನುವಾರ ಸಂಜೆ ಹೊರಾಂಗಣ ಪಾರ್ಟಿಯಲ್ಲಿ ಮುಖವಾಡ ಧರಿಸಿದ ಪುರುಷರ ಗುಂಪು ಗುಂಡು ಹಾರಿಸಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಇತರ ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಿಂಗ್ ಸಿಟಿಯಲ್ಲಿ ಸಂಜೆ 6 ಗಂಟೆ ಸುಮಾರಿಗೆ (ಸ್ಥಳೀಯ ಕಾಲಮಾನ) ವರದಿಯಾದ ಗುಂಡಿನ ದಾಳಿಗೆ ಪೊಲೀಸರು ಪ್ರತಿಕ್ರಿಯಿಸಿದರು ಮತ್ತು ಗುಂಡೇಟಿನಿಂದ ಗಾಯಗೊಂಡ ಮೂವರು ಪುರುಷರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ಸ್ಯಾನ್ ಜೋಸ್ನಿಂದ ದಕ್ಷಿಣಕ್ಕೆ 170 ಕಿಲೋಮೀಟರ್ ದೂರದಲ್ಲಿರುವ ಕಿಂಗ್ ಸಿಟಿಯ ಮೀ ಮೆಮೋರಿಯಲ್ ಆಸ್ಪತ್ರೆಗೆ ಸಾಗಿಸಿದ ನಂತರ ಮಹಿಳೆ ಸೇರಿದಂತೆ ಇತರ ನಾಲ್ವರು ಗುಂಡೇಟಿನಿಂದ ಗಾಯಗೊಂಡಿದ್ದಾರೆ. “3/3/2024 ರಂದು, ಸುಮಾರು ಸಂಜೆ 6:00 ಗಂಟೆಗೆ, ಗುಂಡು ಹಾರಿಸಿದ ವರದಿಯ ಮೇರೆಗೆ ಕಿಂಗ್ ಸಿಟಿ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಎನ್ 2 ನೇ ಸ್ಟ್ರೀಟ್ನ 200 ಬ್ಲಾಕ್ಗೆ ಕಳುಹಿಸಲಾಯಿತು. ಆಗಮಿಸಿದಾಗ, ಅವರು ನಿವಾಸದ ಮುಂಭಾಗದ ಅಂಗಳದಲ್ಲಿ ಗುಂಡೇಟಿನ ಗಾಯಗಳೊಂದಿಗೆ ಮೂವರು ಪುರುಷ ವಯಸ್ಕರನ್ನು ಕಂಡುಕೊಂಡರು. ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಕಿಂಗ್…
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ತುಳಸಿ ಗಿಡಕ್ಕೆ ಪೂಜ್ಯನೀಯ ಸ್ಥಾನವಿದೆ. ಅಲ್ಲದೇ ಇದರಲ್ಲಿ ಆರ್ಯುವೇದ ಔಷಧೀಯ ಗುಣಗಳು ಸಾಕಷ್ಟು ಪ್ರಮಾಣದಲ್ಲಿದೆ. ನಿತ್ಯ ಒಂದು ತುಳಸಿ ಎಲೆಯ ಸೇವನೆ ಆರೋಗ್ಯಕ್ಕೆ ಅನೇಕ ಲಾಭಗಳನ್ನು ನೀಡುತ್ತದೆ. ಹೀಗೆ ತುಳಸಿ ಆರೋಗ್ಯದ ಜೊತೆಗೆ ಸೌಂದರ್ಯದ ಆರೈಕೆ ಕೂಡ ಮಾಡುತ್ತದೆ. ತುಳಸಿಯಿಂದ ಹೇಗೆಲ್ಲಾ ಸೌಂದರ್ಯ ಕಾಪಾಡಿಕೊಳ್ಳಬಹುದು ಎಂದು ತಿಳಿದುಕೊಳ್ಳೋಣ. ತುಳಸಿ ಎಲೆಗಳನ್ನು ರುಬ್ಬಿಕೊಂಡು ಅದಕ್ಕೆ ಸ್ವಲ್ಪ ಜೇನುತುಪ್ಪ, ನಿಂಬೆ ರಸ ಬೆರಸಿ ಮುಖಕ್ಕೆ ತೆಳುವಾಗಿ ಪ್ಯಾಕ್ ಹಾಕಿಕೊಳ್ಳಿ. ಒಣಗಿದ ಮೇಲೆ ಮಸಾಜ್ ಮಾಡುತ್ತಾ ಮುಖ ತೊಳೆಯಿರಿ. ಇದರಿಂದ ಮೊಡವೆ ಮತ್ತು ಮೊಡವೆ ಕಲೆಗಳು ನಿವಾರಣೆಯಾಗುತ್ತವೆ. ತುಳಸಿ ಪೇಸ್ಟ್ ಜೊತೆ ಸ್ವಲ್ಪ ಕೇಸರಿಯನ್ನು ಬರೆಸಿಕೊಂಡು ಮುಖಕ್ಕೆ ಹಚ್ಚಿಕೊಳ್ಳಬಹುದು. ಇದರಲ್ಲಿ ಬ್ಯಾಕ್ಟಿರಿಯಾ ಗುಣಗಳಿದ್ದು ಮುಖದ ಚರ್ಮವನ್ನು ಸೋಂಕಿನಿಂದ ರಕ್ಷಣೆ ಮಾಡುತ್ತದೆ. ಚಳಿಗಾಲದಲ್ಲಿ ತಲೆ ಚರ್ಮ ಒಣಗಿದಂತಾಗಿ ತಲೆ ತುರುಕೆ ಉಂಟಾಗುತ್ತದೆ. ಇದಕ್ಕೆ ತುಳಸಿ ಸೂಕ್ತವಾದ ಔಷಧಿಯಾಗಿದೆ. ರುಬ್ಬಿಕೊಂಡ ತುಳಸಿಗೆ ಕೊಬ್ಬರಿ ಎಣ್ಣೆ ಹಾಗು ಮೆಂತೆ ಪುಡಿಯನ್ನು ಸೇರಿಸಿ ಚೆನಾಗಿ ಕಲಿಸಿ. ನಂತರ ತಲೆಯ ಚರ್ಮಕ್ಕೆ…
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ದಾಂಪತ್ಯ ನಡೆಸುವುದು ಅಷ್ಟು ಸುಲಭದ ಮಾತಲ್ಲ. ಅದನ್ನೊಂದು ಕಲೆ ಅಥವಾ ಜಾಣತನ ಎಂತಲೂ ಕರೆಯಬಹುದು. ದಾಂಪತ್ಯ ಬಲಪಡಿಸಲು ಹಲವಾರು ಕಸರತ್ತುಗಳನ್ನು ಇಬ್ಬರೂ ಮಾಡಬೇಕಾಗುತ್ತದೆ. ಸಂಬಂಧವನ್ನು ಬಿಗಿಗೊಳಿಸುವುದು ನಮ್ಮ ಕೈಯಲ್ಲಿದೆ. ನಮ್ಮನ್ನು ನಾವು ಕೆಲ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ. ಈ ರೀತಿಯಾಗಿ ಕೆಲ ಚಟುವಟಿಕೆಗಳನ್ನು ಸಂಗಾತಿಗಳಿಬ್ಬರೂ ಒಟ್ಟಿಗೆ ಸೇರಿ ಮಾಡುವುದರಿಂದ ನಿಮ್ಮ ಬಂಧನ ಮತ್ತಷ್ಟು ಗಟ್ಟಿಯಾಗುತ್ತದೆ. ಪ್ರೀತಿಯ ಸಂದೇಶ ಕಳುಹಿಸಿ: ಎಷ್ಟೋ ವಿಷಯಗಳನ್ನು ಮಾತಿನಲ್ಲಿ ಹೇಳತೀರದು. ನಿಮ್ಮ ಮನದಾಳದ ಮಾತನ್ನು ಸಂದೇಶಗಳ ಮೂಲಕ ಕಳುಹಿಸಿ. ಹಿಂದಿನ ಕಾಲದಲ್ಲಿ ಪತ್ರ ವಿನಿಮಯವಿತ್ತು. ಪತ್ರ ವಿನಿಮಯದ ಪ್ರಣಯ ತುಂಬಾ ಮಜವಾಗಿತ್ತು ಎಂದು ಹಿರಿಯರು ತಮ್ಮ ಪತ್ರ ಪ್ರಣಯದ ಅನುಭವಗಳನ್ನು ರಸವತ್ತಾಗಿ ಹೇಳಿಕೊಳ್ಳುತ್ತಾರೆ. ಆದರೆ ಕಾಲ ಬದಲಾಗಿ ಮೊಬೈಲ್ ಮೆಸೇಜ್ ರವಾನೆಗೆ ಬಂದು ನಿಂತಿದೆ. ಕೆಲಸದ ಒತ್ತಡ ನಡುವೆ ಅಥವಾ ನಿಮ್ಮ ಸಂಗಾತಿ ನಿಮ್ಮಿಂದ ಕೆಲ ದಿನಗಳವರಗೆ ದೂರವಿದ್ದಾಗ ಸಡನ್‌ಆಗಿ ಒಂದು ಪ್ರೀತಿಯ ಸಂದೇಶ ಕಳುಹಿಸಿ ನೋಡಿ. ಆಗ ಆಗುವ ಖುಷಿಯೇ ಬೇರೆ. ಸಂಗಾತಿಯ ಒಂದು…
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಮೊಸರಿನ ಜೊತೆ ಒಣ ದ್ರಾಕ್ಷಿ ಸೇವಿಸಿದರೆ ಆರೋಗ್ಯಕ್ಕೆ ದುಪ್ಪಟ್ಟು ಒಳ್ಳೆಯದು. ಮೊಸರು ಹಾಗು ಒಣ ದ್ರಾಕ್ಷಿ ಸಂಯೋಜನೆ ಆರೋಗ್ಯಕ್ಕೆ ದೊಡ್ಡ ವರದಾನ. ಇವೆರಡರ ಮಿಶ್ರಣದ ಸೇವನೆ ಚರ್ಮದ ಆರೋಗ್ಯಕ್ಕೆ ಹಾಗು ಜೀರ್ಣಕ್ರಿಯೆಗೆ ಹೇಳಿ ಮಾಡಿಸಿದ ಆಹಾರ ಪದಾರ್ಥಗಳಾಗಿವೆ. ಮೊಸರಿನಲ್ಲಿ ಲ್ಯಾಕ್ಟೋಸ್, ಕ್ಯಾಲ್ಸಿಯಂ, ಪ್ರೋಟೀನ್, ರಂಜಕ ಕಬ್ಬಿಣ, ಮುಂತಾದ ಪೋಷಕಾಂಶಗಳಿವೆ. ಇನ್ನು ಒಣ ದ್ರಾಕ್ಷಿಯಲ್ಲಿ ಪೊಟ್ಯಾಶಿಯಂ, ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಂ ಹೇರಳವಾಗಿವೆ. ಎರಡರನ್ನು ಫೈಬರ್ ಅಂಶ ಸಂಮೃದ್ಧವಾಗಿದೆ. ಹಾಗಾಗಿ ಇಷ್ಟೆಲ್ಲಾ ಪೋಷಕಾಂಶಗಳಿರುವ ಈ ಎರಡೂ ಆಹಾರ ಪದಾರ್ಥಗಳನ್ನು ಒಟ್ಟಿಗೆ ಸೇವಿಸಿದರೆ ದೇಹಕ್ಕೆ ಈ ಎಲ್ಲಾ ಪೋಷಕಾಂಶಗಳು ಒಂದೇ ಸಮಯದಲ್ಲಿ ಒದಗಿಸಿದಂತಾಗುತ್ತದೆ. ಒಂದು ವೇಳೆ ನಿಮಗೆ ದೀರ್ಘ ಕಾಲದಿಂದಲೂ ಜೀರ್ಣಕ್ರಿಯೆಯ ಸಮಸ್ಯೆ ಇದ್ದರೆ ಮೊಸರಿನೊಟ್ಟಿಗೆ ಒಣ ದ್ರಾಕ್ಷಿ ಸೇವಿಸಿ ನೋಡಿ ಕೆಲವೇ ದಿನಗಳಲ್ಲಿ ಆ ಸಮಸ್ಯೆ ನಿವಾರಣೆಯಾಗುತ್ತದೆ. ಕಾರಣ ಇವೆರಡರಲ್ಲೂ ಇರುವ ಫೈಬರ್‌ನ ಅಂಶ ಆಹಾರವನ್ನು ಸುಲಭವಾಗಿ ಜೀರ್ಣಗೊಳಿಸುತ್ತದೆ. ಜೀರ್ಣಕ್ರಿಯೆ ಸುಲಭವಾಗಿ ಆದರೆ ಮಲಬದ್ಧತೆ ಸಮಸ್ಯೆ ಕೂಡ ಅಟೋಮ್ಯಾಟಿಕ್ ಆಗಿ ಮಾಯವಾಗುತ್ತದೆ. ಮೊಸರು…