Author: kannadanewsnow07

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಹೌದು. ಅಲೋವೆರಾ ಒಂದು ನೈಸರ್ಗಿಕವಾದ ದಿವ್ಯ ಔಷಧಿಯಾಗಿದೆ. ಇದೊಂದು ಸಾಂಪ್ರದಾಯಕ ಆರ್ಯುವೇದ ಔಷಧಿಯಾಗಿದೆ. ಅಲೋವೆರಾ ಸೇವನೆ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ ಹಾಗು ಇದು ಚರ್ಮದ ಕಾಂತಿಗೆ ಬೆಸ್ಟ್‌ ಎಂದು ಹೇಳಲಾಗುತ್ತದೆ. ಸಾಮಾನ್ಯ ಜನರು ನಿತ್ಯವೂ ಅಲೋವೆರಾ ಜ್ಯೂಸ್‌ ಕುಡಿಯಬಹುದು. ಆರೋಗ್ಯ ಸಮತೋಲನದಲ್ಲಿ ಇರಿಸಿಕೊಳ್ಳಲು ಇದೊಂದು ಸಾಂಪ್ರದಾಯಕ ಮನೆಮದ್ದಾಗಿದೆ. ಶೀತ ಕೆಮ್ಮು ನೆಗಡಿ ಅಥವಾ ಇನ್ನಾವುದೇ ಸಣ್ಣ ಪುಟ್ಟ ವೈರಲ್‌ ಫೀವರ್‌ಗಳಿಂದ ತಪ್ಪಿಸಿಕೊಳ್ಳಲು ನಿಯಮಿತವಾಗಿ ಅಲೋವೆರಾ ಜ್ಯೂಸ್‌ ಕುಡಿಯಬಹುದು. ಇನ್ನು ನಿರತಂತವಾಗಿ ಇದನ್ನು ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಈ ಮೂಲಕ ಯಾವುದೇ ವೈರಲ್‌ ಫೀವರ್‌ ನಿಮ್ಮ ಬಳಿ ಸುಳಿಯುವ ಸಭವ ಕಡಿಮೆ ಇರುತ್ತದೆ. ಚರ್ಮದ ಮೇಲೆ ಗಾಯದ ಬರೆಗಳು ಅಥವಾ ಸುಟ್ಟ ಕಲೆಗಳು ಇದ್ದರೆ ಅಲೋವೆರಾ ಜೆಲ್‌ ಹಚ್ಚಿದರೆ ಕಾಲಕ್ರಮೇಣ ಆ ಕಲೆಗಳು ಮಾಯವಾಗುತ್ತವೆ. ಸನ್‌ಬರ್ನ್‌ ಆದಾಗ ಅದಕ್ಕೆ ಉತ್ತಮ ಪರಿಹಾರವೆಂದರೆ ಅಲೋವೆರಾ ಜೆಲ್‌ ಹಚ್ಚುವುದು. ಅಲೋವೆರಾದಲ್ಲಿ ಮಿನರಲ್ಸ್‌, ಆಂಟಿಆಕ್ಸಿಡೆಂಟ್‌ ಹಾಗು ವಿಟಮನ್‌ಗಳಿವೆ. ಹಾಗು ಇದರ ಸೇವನೆಯಿಂದ ದೇಹದಲ್ಲಿನ…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ನಿಮಗಿದು ಗೊತ್ತೇ…? ಜಗತ್ತಿನಾದ್ಯಂತ ಸುಮಾರು 15ರಿಂದ 18 ಬಗೆಯ ಬಾಳೆಹಣ್ಣುಗಳಿವೆಯಂತೆ. ಇದರಲ್ಲಿ ಕೆಂಪು ಬಾಳೆಹಣ್ಣು ಕೂಡ ಒಂದು. ಇದು ನಮ್ಮ ಭಾರತದಲ್ಲಿ ಕೆಲ ಭಾಗಳಲ್ಲಿ ಮಾತ್ರ ಸಿಗುತ್ತದೆ. ತೀರಾ ವಿರಳವಾಗಿ ಸಿಗುವ ಈ ಕೆಂಪು ಬಾಳೆಹಣ್ಣು ಸೇವನೆ ಆರೋಗ್ಯಕ್ಕೆ ಸಾಕಷ್ಟು ಉಪಯೋಗಗಳಿವೆ. ಅವುಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಕೆಂಪು ಬಾಳೆಹಣ್ಣು ಸೇವಿಸಿದರೆ ದೇಹಕ್ಕೆ ರೋಗನಿರೋಧಕ ಶಕ್ತಿ ಒದಗುತ್ತದೆ. ಸಂಶೋಧನೆಯೊಂದ ಪ್ರಕಾರ ಸುದೀರ್ಘ ಕಾಲದ ವರೆಗೆ ರೋಗನಿರೋಧಕ ಶಕ್ತಿ ಒದಗಿಸುವಲ್ಲಿ ಕೆಂಪು ಬಾಳೆಹಣ್ಣು ತುಂಬಾ ಪ್ರಯೋಜನಕಾರಿ. ಕೆಂಪು ಬಾಳೆಹಣ್ಣನ್ನು ನಿಯಮಿತವಾಗಿ ಸೇವಿಸಿದರೆ ತ್ವಚೆಯ ಉತ್ತಮ ಆರೈಕೆಯಾಗುತ್ತದೆ. ಅಲ್ಲದೇ ಈ ಹಣ್ಣನು ಕಿವುಚಿ ಜೇನು ತುಪ್ಪದೊಂದಿಗೆ ಬೆರಸಿ ಮುಖಕ್ಕೆ ಪ್ಯಾಕ್‌ ಹಾಕಿಕೊಂಡು, ಸ್ವಲ್ಪ ಸಮಯದ ನಂತ ತಣ್ಣೀರಿನಿಂದ ಮುಖ ತೊಳೆದರೆ ಮುಖದ ಕಾಂತಿ ಹೆಚ್ಚಾಗುತ್ತದೆ. ಕೂದಲಿನ ಆರೈಕೆಗೂ ಕೆಂಪು ಬಾಳೆಹಣ್ಣು ಮನೆಮದ್ದಾಗಿದೆ. ಇದನ್ನು ಕಿವುಚಿ ತೆಂಗಿನ ಎಣ್ಣೆಯೊಂದಿಗೆ ಬೆರಸಿ ಕೂದಲಿಗೆ ಹಚ್ಚಿದರೆ ಕೂದಲು ರೇಷ್ಮೆಯಂತೆ ಹೊಳೆಯುತ್ತವೆ. ಹೀಗೆ ದೇಹದ ಆರೋಗ್ಯ ಹಾಗು ಚರ್ಮದ…

Read More

ಬಳ್ಳಾರಿ: ಜಿಲ್ಲೆಯ ಕಂಪ್ಲಿ ಮತ್ತು ಸಿರುಗುಪ್ಪ ತಾಲ್ಲೂಕಿನಲ್ಲಿ ಖಾಲಿಯಿರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಹೆಚ್.ಗೋವಿಂದಪ್ಪ ಅವರು ತಿಳಿಸಿದ್ದಾರೆ. ಕಂಪ್ಲಿ ತಾಲ್ಲೂಕಿನ ಮೆಟ್ರಿ ಗ್ರಾಮ ಪಂಚಾಯಿತಿ 1, ಸಿರುಗುಪ್ಪ ತಾಲ್ಲೂಕಿನ ಕೊಂಚಗೇರಿ ಗ್ರಾಮ ಪಂಚಾಯಿತಿ 1, ಕೆಂಚನಗುಡ್ಡ ಗ್ರಾಮ ಪಂಚಾಯಿತಿ 1 ಸೇರಿ ಒಟ್ಟು 03 ಗ್ರಾಮ ಪಂಚಾಯಿತಿಯ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗಳು (ವಿಆರ್‍ಡಬ್ಲ್ಯೂ) ಖಾಲಿಯಿದ್ದು, ಆಯಾ ತಾಲ್ಲೂಕ್ ಪಂಚಾಯತ್ ಇವರ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಮೂಲಕ ನೇಮಿಸಲಾಗುವುದು. ಹುದ್ದೆಗಳು ಗೌರವ ಧನ ಆಧಾರಿತ ತಾತ್ಕಾಲಿಕ ಹುದ್ದೆಗಳಾಗಿರುತ್ತವೆ. ಮಾಸಿಕ ಗೌರವಧನ ರೂ.9000/- ಇರುತ್ತದೆ. ಈ ಹುದ್ದೆಗಳಿಗೆ ಆಯಾ ಗ್ರಾಮ ಪಂಚಾಯಿತಿಯ ಸ್ಥಳೀಯ ವ್ಯಾಪ್ತಿಯಲ್ಲಿ ಬರುವ ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರುವ 18 ರಿಂದ 45ವರ್ಷ ವಯೋಮಿತಿ ಹೊಂದಿರುವ ವಿಕಲಚೇತನರು ಅರ್ಹರಿರುತ್ತಾರೆ (ಕರ್ತವ್ಯ ನಿರ್ವಹಿಸಲು ಸಮರ್ಥರಿರುವ ವಿಕಲಚೇತನರು). ಒಂದು ವೇಳೆ ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ಅಭ್ಯರ್ಥಿಗಳು ದೊರೆಯದಿದ್ದಲ್ಲಿ ಎಸ್.ಎಸ್.ಎಲ್.ಸಿ…

Read More

ಬಳ್ಳಾರಿ: ಮುಂಬರುವ ದಿನಗಳಲ್ಲಿ ಲೋಕಸಭಾ ಚುನಾವಣೆಗೆ ಮಾದರಿ ನೀತಿ ಸಂಹಿತೆ ಜಾರಿಯಾಗಲಿದ್ದು, ಪೂರ್ವಾನುಮತಿಯಿಲ್ಲದೇ ಫ್ಲೆಕ್ಸ್, ಕರಪತ್ರ, ಬ್ಯಾನರ್ ಮುದ್ರಿಸುವಂತಿಲ್ಲ. ಕಡ್ಡಾಯವಾಗಿ ಜಿಲ್ಲಾ ಚುನಾವಣಾಧಿಕಾರಿಗಳ ಅನುಮತಿ ಪಡೆಯಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಸೂಚಿಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರದಂದು ಜಿಲ್ಲೆಯ ಪ್ರಿಂಟಿಂಗ್ ಪ್ರೆಸ್ ಮಾಲೀಕರೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಯಾವುದೇ ರೀತಿಯ ರಾಜಕೀಯ ಮತಪ್ರಚಾರ ಮತ್ತು ಕೋಮುಗಲಭೆ ಸೃಷ್ಟಿಸುವಂತಹ ಬ್ಯಾನರ್‍ಗಳಾಗಲೀ, ಹೋರ್ಡಿಂಗ್ಸ್‍ಗಳಾಗಲೀ ಮತ್ತು ಕರಪತ್ರಗಳನ್ನಾಗಲಿ ಪೂರ್ವಾನುಮತಿಯಿಲ್ಲದೇ ಮುದ್ರಿಸುವಂತಿಲ್ಲ. ಮುದ್ರಣಕ್ಕೆ ಮೂರು ದಿನಗಳ ಮುಂಚಿತವಾಗಿ ಅನುಮತಿ ಪಡೆಯಬೇಕು ಎಂದು ತಿಳಿಸಿದರು. ಪ್ರಜಾಪ್ರತಿನಿಧಿ ಕಾಯ್ದೆ 1951 ಕಲಂ 127ಎ ಅನ್ವಯ ಪ್ರಿಂಟಿಂಗ್ ಪ್ರೆಸ್ ಅವರು ಚುನಾವಣಾ ಕರಪತ್ರಗಳನ್ನು ಮುದ್ರಣ ಮಾಡುವ ಸಂದರ್ಭದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಬೇಕು ಹಾಗೂ ಚುನಾವಣಾ ಕರಪತ್ರದಲ್ಲಿ ಮುದ್ರಕರ ಹೆಸರು, ಪ್ರಕಾಶಕರ ಹೆಸರು ಹಾಗೂ ಮುದ್ರಣ ಮಾಡಿದ ಪ್ರಮಾಣದ ವಿವರಗಳನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಸೂಚಿಸಿದರು.…

Read More

ಶಿವಮೊಗ್ಗ: ಕ್ರೀಡೆಗಳು ಮಾನವ ಜೀವನದ ಅಗತ್ಯಗಳಲ್ಲಿ ಒಂದಾಗಿದ್ದು ಪ್ರತಿದಿನ ನಮ್ಮ ದೈನಂದಿನ ಚಟುವಟಿಕೆಗಳ ಜೊತೆ ಯಾವುದಾದರೂ ಕ್ರೀಡೆಯನ್ನು ಆಡಬೇಕೆಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ನುಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಶಾಖೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ನೆಹರೂ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಶಿವಮೊಗ್ಗ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳನ್ನು ಬಲೂನ್ ಹಾರಿಸಿ, ಗುಂಡು ಎಸೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ ನೌಕರರಿಂದಲೇ ರಾಜ್ಯ ಸರ್ಕಾರದ ಕೆಲಸ ಕಾರ್ಯಗಳು ನಡೆಯುತ್ತಿವೆ. ಅಧಿಕಾರಿ-ನೌಕರರ ಒತ್ತಡ ನಿರ್ವಹಣೆಗೆ ಕ್ರೀಡೆ ಸಹಕಾರಿಯಾಗಿದ್ದು ಈ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸುವಂತೆ ತಿಳಿಸಿದರು. ಶಿಕ್ಷಣ ಇಲಾಖೆಯಿಂದಲೇ ಅತಿ ಹೆಚ್ಚು ನೌಕರರಿದ್ದು ಇದು ದೊಡ್ಡ ಇಲಾಖೆ. ಹಲವಾರು ಸಮಸ್ಯೆಗಳು ಇವೆ. ಶಿಕ್ಷಕರ ನೇಮಕ ಆಗಬೇಕಿದೆ. ನಾನು ಸಚಿವ ಸ್ಥಾನ ಸ್ವೀಕರಿಸಿದ…

Read More

ದಾವಣಗೆರೆ: ಸಾಮಾಜಿಕ ಭದ್ರತಾ ಯೋಜನೆಗಳಾದ ಸಂಧ್ಯಾಸುರಕ್ಷಾ, ವೃದ್ದಾಪ್ಯ, ವಿಧವಾ, ಅಂಗವಿಕಲರ ಮಾಸಾಶನ ಸೇರಿದಂತೆ ಇನ್ನಿತರೆ ಮಾಸಾಶನಗಳನ್ನು ಅಂಚೆ ಇಲಾಖೆಯಿಂದ ನಿಗದಿತ ಸಮಯಕ್ಕೆ ತಲುಪಿಸಬೇಕೆಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ಸೂಚನೆ ನೀಡಿದರು. ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಅಂಚೆ ಇಲಾಖೆ ಅಧಿಕಾರಿಗಳು ಹಾಗೂ ಸಾಮಾಜಿಕ ಭದ್ರತಾ ಯೋಜನೆ ಅನುಷ್ಟಾನಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಪ್ರತಿ ತಿಂಗಳು ಸಾಮಾಜಿಕ ಭದ್ರತಾ ಯೋಜನೆ ಮಾಸಾಶನ ಸಕಾಲದಲ್ಲಿ ತಲುಪದ ಕಾರಣ ವಯೋವೃದ್ದರಿಗೆ ಜೀವನ ನಿರ್ವಹಣೆ ಹಾಗೂ ದಿನನಿತ್ಯದ ಖರ್ಚುವೆಚ್ಚಗಳಿಗೆ ಸಮಸ್ಯೆಯಾಗಿದೆ ಎಂದು ಹಲವು ಮಾಸಾಶನ ಫಲಾನುಭವಿಗಳು ದೂರು ನೀಡಿದ್ದರು. ಅಂಚೆ ಇಲಾಖೆಯಿಂದ ಮಾಸಾಶನಗಳು ಸಕಾಲದಲ್ಲಿ ವಿತರಣೆಯಾಗಿದೆಯೇ ಇಲ್ಲವೋ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕು. ಮಾಸಾಶನದ ಮಾಹಿತಿ ಕೇಳಲು ಬರುವವರಿಗೆ ಅಂಚೆ ಕಚೇರಿಯಲ್ಲಿ ಸೌಜನ್ಯತೆಯಿಂದ ವರ್ತನೆ ಮಾಡುವ ಜೊತೆಗೆ ಅವರ ಖಾತೆಯಲ್ಲಿ ಹಣ ಜಮಾ ಆಗಿರುವ ಬಗ್ಗೆ ನಿಖರ ಮಾಹಿತಿಯನ್ನು ನೀಡಬೇಕು. ಕೆಲವೊಂದು ವೇಳೆ ಅಂಚೆ ಇಲಾಖೆ ನೌಕರರು ವಿತರಣೆಯ ವೇಳೆ ವಿಳಂಬ ಮಾಡುವ ಸಂಭವವಿದ್ದು…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಕೆಲವೊಬ್ಬರಿಗೆ ವ್ಯಾಯಾಮ, ದೇಹ ದಂಡನೆ ಎಂದರೆ ಆಗದು. ಏನೂ ಶ್ರಮವಿಲ್ಲದೆ, ಯಾವುದೇ ಎಕ್ಸ್‌ಸೈಸ್‌ಗಳಿಲ್ಲದೆ ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕೆನ್ನುವವರಿಗೆ ಸುಲಭದ ಟಿಪ್ಸ್‌. ವ್ಯಾಯಾಮ ಇಲ್ಲದೇ ತೂಕ ಇಳಿಸಿಕೊಳ್ಳಲು ಮಾಡಬೇಕಾದ ಮೊದಲ ಹೆಜ್ಜೆ ಎಂದರೆ ನಮ್ಮ ಆಹಾರದ ವಿಷಯದಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯ. ಆರೋಗ್ಯಕ್ಕೆ ಒಳ್ಳೆಯದಲ್ಲದ ಜಂಗ್‌ ಫುಡ್‌, ಫ್ರೋಜನ್‌ ಫುಡ್‌, ಬೇಕರಿ ಐಟಂ, ಚಾಟ್ಸ್‌ಗಳಿಂದ ಸಂಪೂರ್ಣವಾಗಿ ದೂರವಿರಬೇಕು. ಬದಲಾಗಿ ಹೆಚ್ಚಿನ ಪ್ರಮಾಣದಲ್ಲಿ ತಾಜಾ ತರಕಾರಿ ಹಣ್ಣು, ಮೊಳಕೆ ಕಾಳುಗಳನ್ನ ನಿತ್ಯದ ಆಹಾರದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಒಟ್ಟಾರೆ ಹೊರಗಿನ ಜಂಗ್‌ ಫುಡ್‌ ಬಿಟ್ಟು ಮನೆಯ ಊಟವನ್ನು ನಿಯಮಿತವಾಗಿ ಮಾಡಿದರೆ ಯಾವುದೇ ದೈಹಿಕ ಶ್ರಮವಿಲ್ಲದೇ ನೀವು ಆರಾಮಾಗಿ ತೂಕ ಇಳಿಸಿಕೊಳ್ಳಬಹುದು. ನೀವು ಊಟ ಮಾಡುವ ಪದ್ಧತಿ ಅಥವಾ ಪ್ರಕ್ರಿಯೆ ನಿಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ. ಊಟ ಮಾಡುವಾಗ ಚೆನ್ನಾಗಿ ಜಗಿದು ತಿನ್ನಿ. ಅವಸರದಲ್ಲಿ ಬೇಗ ಬೇಗ ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಊಟವನ್ನು ನಿಧಾನವಾಗಿ ಜಗಿದು ತಿಂದರೆ ತೂಕ ಕಡಿಮೆ ಆಗೋಕೆ ಉತ್ತಮ…

Read More

ಮಡಿಕೇರಿ: ಬೆಂಗಳೂರು ಕೌಶಲ್ಯಾಭಿವೃದ್ದಿ ಉದ್ಯಮಶೀಲತಾ ಮತ್ತು ಜೀವನೋಪಾಯ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‍ಆರ್‍ಎಲ್‍ಎಂ) ಸಂಜೀವಿನಿ ಯೋಜನೆ, ಕೊಡಗು ಜಿಲ್ಲಾ ಪಂಚಾಯತ್ ವತಿಯಿಂದ ಜಿಲ್ಲಾ ಮಟ್ಟದಲ್ಲಿ ಗ್ರಾಮೀಣ ಸ್ವಸಹಾಯ ಗುಂಪುಗಳ ಸದಸ್ಯರು ಉತ್ಪಾದಿಸಿರುವ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವು ಮಾರ್ಚ್, 05 ರಿಂದ ಮಾರ್ಚ್, 07 ರವರೆಗೆ ನಗರದ ಬಾಲಭವನದ ಆವರಣದಲ್ಲಿ ನಡೆಯಲಿದೆ. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳಲ್ಲಿ ಇರುವ ಗ್ರಾಮೀಣ ಮಹಿಳೆಯರ ಸ್ವಾವಲಂಬನೆಗೆ ಪ್ರೋತ್ಸಾಹಿಸಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೊಡಗು ಜಿಲ್ಲಾ ಪಂಚಾಯತ್ ಪ್ರಕಟಣೆಯಲ್ಲಿ ತಿಳಿಸಿದೆ.

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಮಹಿಳೆಯರು ತಮ್ಮ ಜನನಾಂಗವನ್ನು ಶುಚಿತ್ವವಾಗಿಟ್ಟುಕೊಳ್ಳುವುದು ತುಂಬಾ ಪ್ರಾಮುಖ್ಯತೆ. ಒಂದು ವೇಳೆ ಗುಪ್ತಾಂಗವನ್ನು ಶುಚಿ ಇಟ್ಟುಕೊಂಡಿಲ್ಲವೆಂದರೆ ಒಂದರ ಮೇಲೊಂದು ಅನೇಕ ಸಮಸ್ಯೆಗಳು ಕಾಡತೊಡುಗುತ್ತವೆ. ಹಾಗಾಗಿ ಈ ವಿಷಯದಲ್ಲಿ ಮಹಿಳೆಯರು ನಿರ್ಲಕ್ಷ್ಯವಹಿಸದೇ, ತುಂಬಾ ಜಾಗರೂಕರಾಗಿರಬೇಕು. ಹಾಗಿದ್ದರೆ ಜನನಾಂಗದ ಶುಚಿತ್ವ ಬಗ್ಗೆ ಏನೆಲ್ಲಾ ಮುನ್ನೆಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿದುಕೊಳ್ಳೋಣ. ಜನನಾಂಗದ ಶುಚಿತ್ವ ಕಾಪಾಡಲು ಮುಖ್ಯವಾಗಿ ಪಾಲಿಸಬೇಕಾದ ವಿಷಯ ಎಂದರೆ ಹೆಚ್ಚು ರಾಸಾಯನಿಕಯುಕ್ತ ಸೋಪ್‌ಗಳನ್ನು ಬಳಸಬಾರದು. ನಿಯಮಿತವಾಗಿ ಸೋಪ್‌ ಬಳಸಿ ಹಾಗು ಹದ ಬಿಸಿ ನೀರನ್ನು ಬಳಬಹುದು. ನಿತ್ಯವೂ ಎರಡು ಬಾರಿ ಜನನಾಂಗವನ್ನು ಹದ ಬಿಸಿ ನೀರಿನಂದ ಶುಚಿಗೊಳಿಸಬೇಕು. ಧರಿಸುವ ಒಳ ಉಡುಪುಗಳು ಟೈಟ್‌ ಆಗಿರದೇ ಲೂಸ್‌ ಆಗಿರಬೇಕು. ಕಾಟನ್‌ ಒಳ ಉಡುಪು ಧರಿಸಿದರೆ ಉತ್ತಮ. ಪ್ರತಿನಿತ್ಯ ಒಳ ಉಡುಪುಗಳನ್ನು ಬಿಸಿ ನೀರಿನಿಂದ ತೊಳೆಯುವುದು ಉತ್ತಮ ಅಭ್ಯಾಸ. ಇನ್ನು ಜನನಾಂಗವನ್ನು ಶುಚಿಗೊಳಿಸಿದ ನಂತರ ಶುದ್ಧವಾದ ಬಟ್ಟೆಯಿಂದ ಒರೆಸಿ ಶುಭ್ರವಾದ ತಾಜಾ ಒಳ ಉಡುಪುಗಳನ್ನು ಧರಿಸಬೇಕು. ಒಂದು ಬಾರಿ ಜನನಾಂಗವನ್ನು ಶುಚಿಗೊಳಿಸಿದ ಮೇಲೆ ಧರಿಸಿದ ಒಳುಡುಪನ್ನು ಮತ್ತೇ…

Read More

ಬಳ್ಳಾರಿ: 2023-24ನೇ ಸಾಲಿನ ವಿಕಲಚೇತನ ವ್ಯಕ್ತಿಗಳಿಗೆ ಬ್ಯಾಟರಿ ಚಾಲಿತ ವೀಲ್‍ಚೇರ್‍ಗಳನ್ನು ನೀಡುವ ಸಲುವಾಗಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ದೈಹಿಕ ವಿಕಲಚೇತನರಾಗಿರುವ ಯಂತ್ರಚಾಲಿತ ದ್ವಿಚಕ್ರವಾಹನವನ್ನು ಚಾಲನೆ ಮಾಡಲು ಸಾಮಥ್ರ್ಯ ಹೊಂದಿರದ ಶೇ.75 ಕ್ಕಿಂತ ಹೆಚ್ಚಿನ ದೈಹಿಕ ಅಂಗವೈಕಲ್ಯತೆಯನ್ನು ಹೊಂದಿರುವ ವಿಕಲಚೇತನರಿಂದ ಬ್ಯಾಟರಿ ಚಾಲಿತ ವೀಲ್‍ಚೇರ್‍ಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮಾರ್ಚ್, 07 ಕೊನೆಯ ದಿನವಾಗಿದೆ. ಈ ಯೋಜನೆಯ ಸೌಲಭ್ಯವನ್ನು ಜಿಲ್ಲೆಯ ವಿಶೇಷಚೇತನರು ಪಡೆದುಕೊಳ್ಳುವಂತೆ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಅವರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ದೂರವಾಣಿ ಸಂಖ್ಯೆ. 08272-295829ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಕೆ.ಜಿ.ವಿಮಲ ಅವರು ತಿಳಿಸಿದ್ದಾರೆ.

Read More