Subscribe to Updates
Get the latest creative news from FooBar about art, design and business.
Author: kannadanewsnow07
ಶಿವಮೊಗ್ಗ: ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ, ನಿಯಮಿತದ ವತಿಯಿಂದ 2024-25 ನೇ ಸಾಲಿನ ಗಿರಿಜನ ಉಪ ಯೋಜನೆಯಡಿಯಲ್ಲಿ ಕುರಿ/ಮೇಕೆ ಘಟಕ ಪೂರೈಕೆ ಯೋಜನೆಗೆ ನಿಗಮದಲ್ಲಿ ನೋಂದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಪರಿಶಿಷ್ಟ ಪಂಗಡದ ಸದಸ್ಯರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. 16 ರಿಂದ 60 ವರ್ಷದೊಳಗಿನ ಮಹಿಳಾ/ಪುರುಷ ಸದಸ್ಯರು ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಡಿ.20 ಕಡೆಯ ದಿನವಾಗಿದೆ. ಈ ಯೋಜನೆಯಡಿ 10 ಸುಧಾರಿತ ಹೆಣ್ಣು ಕುರಿ/ಮೇಕೆ, 01 ಟಗರು/ಹೋತ ಒಟ್ಟು ಘಟಕ ದರ ರೂ.66,000/ಗಳಿದ್ದು, ಶೇ.90 ರಷ್ಟು ಸಹಾಯಧನ ಹೊಂದಿರುತ್ತದೆ.ಜಿಲ್ಲೆಗೆ ಒಟ್ಟು 03 ಗುರಿಗಳನ್ನು ನೀಡಲಾಗಿದೆ. ಹೆಚ್ಚಿನ ವಿವರಗಳಿಗೆ ಹತ್ತಿರದಲ್ಲಿರುವ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ ಅಥವಾ ಸಹಾಯಕ ನಿರ್ದೇಶಕರು, ಕರ್ನಾಟಕ ಕುರಿತು ಮತ್ತು ಅಭಿವೃದ್ದಿ ನಿಗಮ, ನಿಯಮಿತ ಶಿವಮೊಗ್ಗ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಕುರಿತು ಮತ್ತು…
ಶಿವಮೊಗ್ಗ: 2024-25ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆ ಅಡಿಯಲ್ಲಿ 2023ನೇ ಕ್ಯಾಲೆಂಡರ್ ವರ್ಷದಲ್ಲಿ ಅಂತರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಅಧಿಕೃತ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ ಪ.ಜಾ./ಪ. ಪಂ. ಗಳ ಕ್ರೀಡಾಪಟುಗಳಿಂದ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಕ್ರೀಡಾಪಟುಗಳು ಅರ್ಜಿಯನ್ನು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಡಿ. 21 ರೊಳಗಾಗಿ ಸಲ್ಲಿಸುವಂತೆ ಇಲಾಖೆ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಇಲಾಖೆ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.:08182-223328 ನ್ನು ಸಂಪರ್ಕಿಸುವುದು.
ಬೆಂಗಳೂರು: ಹಿಂದೂ ಧರ್ಮದ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದು ಮಾಡಿದೆ. ಸಚಿವ ಸತೀಶ್ ಜಾರಕಿಹೊಳಿ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಪುರಸ್ಕರಿಸಿದೆ. ಹಿಂದೂ ಎನ್ನುವುದು ಭಾರತೀಯ ಪದವಲ್ಲ. ಅದು ಪರ್ಷಿಯನ್ ನೆಲಕ್ಕೆ ಸೇರಿದ್ದು, ಅದೊಂದು ಅಶ್ಲೀಲ ಪದ” ಎಂದು ಕಾರ್ಯಕ್ರಮವೊಂದರಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಗುರುವಾರ ಕೇಸ್ನ ರದ್ದು ಮಾಡಿ ಆದೇಶ ನೀಡಿದೆ. ಐಪಿಸಿ ಸೆಕ್ಷನ್ಗಳಾದ 153 (ಗಲಭೆಗೆ ಪ್ರಚೋದನೆ) ಮತ್ತು 500ರ (ಬೇರೊಬ್ಬರಿಗೆ ಅವಮಾನ ಮಾಡುವುದು) ಅಡಿ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸಂಜ್ಞೇ ತೆಗೆದುಕೊಂಡು ಕಾನೂನಿನ ಅನ್ವಯ ಮುನ್ನಡೆಯಬೇಕು ಎಂದು ಸತ್ರ ನ್ಯಾಯಾಲಯ ಮಾಡಿದ್ದ ಆದೇಶವನ್ನು ಸತೀಶ್ ಜಾರಕಿಹೊಳಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು.
ಬೆಂಗಳೂರು: ಕಂದಾಯ ಇಲಾಖೆಯಲ್ಲಿ ಇದೇ ಮೊದಲ ಬಾರಿಗೆ ಕೌನ್ಸಿಲಿಂಗ್ ಮೂಲಕ 31 ಜಿಲ್ಲೆಯ 90 ಉಪ ನೋಂದಣಿ ಅಧಿಕಾರಿಗಳನ್ನು ಏಕ ಕಾಲದಲ್ಲಿ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ. ಉಪ ನೋಂದಣಾಧಿಕಾರಿಗಳ ವರ್ಗಾವಣೆಯಲ್ಲಿ ಹಣ ವಹಿವಾಟು ಸೇರಿದಂತೆ ಭ್ರಷ್ಟಾಚಾರದ ಬಗ್ಗೆ ಈ ಹಿಂದೆ ಹಲವು ಬಾರಿ ದೂರುಗಳು ಕೇಳಿಬಂದಿದ್ದವು. ವರ್ಗಾವಣೆ ದಂಧೆಯ ಬಗ್ಗೆ ಹಲವು ನಾಯಕರು ಸದನದಲ್ಲೇ ಧ್ವನಿ ಎತ್ತಿದ್ದರು. ಹೀಗಾಗಿ ಈ ಎಲ್ಲಾ ಅವ್ಯವಹಾರಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ, ವರ್ಗಾವಣೆಯಲ್ಲಿನ ಭ್ರಷ್ಟಾಚಾರವನ್ನು ಕೊನೆಗೊಳಿಸುವ ಸಲುವಾಗಿ ಸಚಿವ ಕೃಷ್ಣ ಬೈರೇಗೌಡ ಅವರು ಈ ಸಾಲಿನಿಂದ ಉಪ-ನೋಂದಣಾಧಿಕಾರಿಗಳ ವರ್ಗಾವಣೆಯನ್ನು ಕೌನ್ಸಿಲಿಂಗ್ ಮೂಲಕ ನಡೆಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಇಂದು ರಾಜ್ಯದ 31 ಜಿಲ್ಲೆಯಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಉಪ ನೋಂದಣಿ ಕಚೇರಿಗಳಲ್ಲಿ ನೋಂದಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ 90ಜನ ಕೇಂದ್ರಸ್ಥಾನ ಸಹಾಯಕರು/ ಹಿರಿಯ ಉಪನೋಂದಣಾಧಿಕಾರಿಗಳನ್ನು ಇಂದು ಏಕ ಕಾಲದಲ್ಲಿ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ. ಈ ವರ್ಗಾವಣೆ ಅವಧಿಯಲ್ಲಿ ಒಂದು ರೂಪಾಯಿ ಸಹ ಹಣ ವಹಿವಾಟು ನಡೆದಿರುವ ಬಗ್ಗೆ ದೂರುಗಳು…
ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವನ್ನು ಸ್ಫೋಟಿಸುವುದಾಗಿ ಬೆದರಿಕೆ ಇಮೇಲ್ ಅನ್ನು ಗುರುವಾರ ಮಧ್ಯಾಹ್ನ ಕೇಂದ್ರ ಬ್ಯಾಂಕಿಗೆ ಕಳುಹಿಸಲಾಗಿದೆ. ಇಮೇಲ್ ಅನ್ನು ರಷ್ಯನ್ ಭಾಷೆಯಲ್ಲಿ ಕಳುಹಿಸಲಾಗಿದೆ. ಅಪರಿಚಿತ ಆರೋಪಿಗಳ ವಿರುದ್ಧ ಮಾತಾ ರಮಾಬಾಯಿ ಮಾರ್ಗ್ (MRA Marg) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಳೆದ ತಿಂಗಳು, ಆರ್ಬಿಐ ಗ್ರಾಹಕ ಆರೈಕೆಗೆ ಇದೇ ರೀತಿಯ ಬೆದರಿಕೆಯನ್ನು ಕಳುಹಿಸಲಾಗಿತ್ತು. ಇದಕ್ಕೂ ಮುನ್ನ ಶುಕ್ರವಾರ ಬೆಳಿಗ್ಗೆ ದೆಹಲಿಯ ಆರು ಶಾಲೆಗಳು ಬಾಂಬ್ ಬೆದರಿಕೆಯಿಂದಾಗಿ ತರಗತಿಗಳನ್ನು ಸ್ಥಗಿತಗೊಳಿಸಿದವು. ಶುಕ್ರವಾರ ಮುಂಜಾನೆ 12:54 ಕ್ಕೆ ಬೆದರಿಕೆ ಬಂದಿದ್ದು, ಶಾಲೆಗಳು ತಮ್ಮ ಮಕ್ಕಳನ್ನು ಶಾಲೆಗೆ ಕರೆತರದಂತೆ ಪೋಷಕರಿಗೆ ಮಾಹಿತಿ ನೀಡಿವೆ.
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಆರೋಪಿಗಳ ಜಾಮೀನು ಭವಿಷ್ಯ ಇಂದು ಪ್ರಕಟ ಆಗಲಿದ್ದು, ಈ ನಿಟ್ಟಿನಲ್ಲಿ ಎಲ್ಲರ ಗಮನ ಹೈಕೋರ್ಟ್ ನತ್ತ ನೆಟ್ಟಿದೆ. 7 ಜನ ಆರೋಪಿಗಳ ಪರ ವಿರುದ್ಧ ವಾದ – ಪ್ರತಿವಾದ ಆಲಿಸಿರೋ ನ್ಯಾ. ವಿಶ್ವಜಿತ್ ಶೆಟ್ಟಿ ಪೀಠದಿಂದ ಮಧ್ಯಾಹ್ನ 2:30ರ ವೇಳೆಗೆ ತೀರ್ಪು ಹೊರ ಬೀಳುವ ಸಾಧ್ಯತೆ ಇದೆ. ಒಂದೊಮ್ಮೆ ದರ್ಶನ್ ಜಾಮೀನು ಅರ್ಜಿ ವಜಾಗೊಂಡರೆ, ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿ, ಗುಣಮುಖರಾದ ಬಳಿಕ ಮತ್ತೆ ಜೈಲಿಗೆ ಹೋಗಬೇಕಾದ ಸಂಧರ್ಭ ನಿರ್ಮಾಣವಾಗಲಿದೆ. ಇದಲ್ಲದೇ ಬೇಲ್ ಸಿಕ್ಕರೆ ಗುಣಮುಖರಾದ ನಂತರ ಮನೆಗೆ ತೆರಳಲಿದ್ದಾರೆ.
ಬೆಂಗಳೂರು: ಬೆಂಗಳೂರಿನಲ್ಲಿ ಶುಕ್ರವಾರವೂ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿತ್ರದುರ್ಗ, ತುಮಕೂರು ಮತ್ತು ರಾಮನಗರ ಸೇರಿದಂತೆ ಕರ್ನಾಟಕದ ಹಲವಾರು ಜಿಲ್ಲೆಗಳಿಗೆ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಈ ಜಿಲ್ಲೆಗಳಲ್ಲಿ ಹೆಚ್ಚಿನವು ಶುಕ್ರವಾರದ ನಂತರ ಮಳೆಯಿಂದ ವಿರಾಮವನ್ನು ಕಾಣುವ ನಿರೀಕ್ಷೆಯಿದೆ. ಆದಾಗ್ಯೂ, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಶನಿವಾರದವರೆಗೆ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಹವಾಮಾನ ಇಲಾಖೆ ಪ್ರಕಾರ, ಆಗ್ನೇಯ ಬಂಗಾಳ ಕೊಲ್ಲಿ ಮತ್ತು ಪೂರ್ವ ಹಿಂದೂ ಮಹಾಸಾಗರದಲ್ಲಿ ಕಡಿಮೆ ಒತ್ತಡದ ಪ್ರದೇಶದಿಂದಾಗಿ, ತೇವಾಂಶ ತುಂಬಿದ ಗಾಳಿಯು ರಾಜ್ಯದ ಕಡೆಗೆ ಸಾಗುತ್ತಿದೆ, ಇದು ಈ ಮಳೆಗೆ ಮುಖ್ಯ ಕಾರಣವಾಗಿದೆ. ಹೀಗಾಗಿ ಕರ್ನಾಟಕದ ದಕ್ಷಿಣ ಒಳನಾಡಿನ ಹೆಚ್ಚಿನ ಜಿಲ್ಲೆಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ನಿರೀಕ್ಷೆಯಿದೆ. https://twitter.com/Bnglrweatherman/status/1867156871989383516
ಜೈಪುರ: ರಾಜಸ್ಥಾನದ ಜೈಪುರದಲ್ಲಿ ಆಯುರ್ವೇದ ವಿಶ್ವವಿದ್ಯಾಲಯದ ವೈದ್ಯರೊಬ್ಬರು ಮಾನಸಿಕ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ಒಳಗೊಂಡಿರುವ ಟಿಪ್ಪಣಿಯನ್ನು ಪೊಲೀಸರು ವೈದ್ಯರ ಕೋಣೆಯಿಂದ ವಶಪಡಿಸಿಕೊಂಡಿದ್ದಾರೆ, ಇದು ವೈವಾಹಿಕ ಭಿನ್ನಾಭಿಪ್ರಾಯದ ಬಗ್ಗೆ ಸುಳಿವು ನೀಡುತ್ತದೆ ಎನ್ನಲಾಗಿದೆ. ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಆಕ್ರೋಶದ ನಡುವೆಯೇ ಈ ಪ್ರಕರಣ ಬಂದಿದೆ. ಉತ್ತರ ಪ್ರದೇಶದ ಜೌನ್ಪುರದಲ್ಲಿ ವಿಚ್ಛೇದನ ಮತ್ತು ಮಕ್ಕಳ ಕಸ್ಟಡಿ ಹೋರಾಟದ ನಡುವೆ ಅತುಲ್ (34) ತನ್ನ ಪತ್ನಿ ಮತ್ತು ಅವಳ ಕುಟುಂಬವು ನಿರಂತರ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ 24 ಪುಟಗಳ ಆತ್ಮಹತ್ಯೆ ಪತ್ರ ಮತ್ತು 81 ನಿಮಿಷಗಳ ವೀಡಿಯೊವನ್ನು ಮಾಡಿದ್ದಾರೆ.
ಮನೆಯ ಎಂತಹ ದೊಡ್ಡ ವಾಸ್ತು ಕೊರತೆಯನ್ನು ಒಂದು ಗ್ಲಾಸ್ ನೀರು ನಿವಾರಿಸುತ್ತದೆ. ಇನ್ಮುಂದೆ ವಾಸ್ತು ಫಿಕ್ಸ್ ಮಾಡಲು ಲಕ್ಷಾಂತರ ಹಣ ಖರ್ಚು ಮಾಡುವ ಅವಶ್ಯಕತೆ ಇರುವುದಿಲ್ಲ.. ಒಂದು ಗ್ಲಾಸ್ ನೀರು ಮನೆಯಲ್ಲಿ ಯಾವುದೇ ಪ್ರಮುಖ ವಾಸ್ತು ದೋಷವನ್ನು ಸರಿಪಡಿಸಬಹುದು. ಇನ್ನು ವಾಸ್ತು ಸರಿಪಡಿಸಲು ಲಕ್ಷಗಟ್ಟಲೆ ಹಣ ಖರ್ಚು ಮಾಡಬೇಕಿಲ್ಲ. ವಾಸ್ತು, ಇತ್ತೀಚೆಗೆ ನಾವು ಈ ವಾಸ್ತು ಬಗ್ಗೆ ಹೆಚ್ಚು ಮಾತನಾಡುತ್ತಿದ್ದೇವೆ. ಆದರೆ ವಾಸ್ತು ಇಂದು ನಿನ್ನೆಯದಲ್ಲ. ವಾಸ್ತು ರಾಜರ ಕಾಲದಿಂದಲೂ ಇದೆ. ವಾಸ್ತುವನ್ನು ನಂಬುವವರು ಈ ಪರಿಹಾರವನ್ನು ಅನುಸರಿಸಬಹುದು. ಅನೇಕರ ಮನೆಯಲ್ಲಿ ವಾಸ್ತು ಸರಿಯಾಗಿ ಹೊಂದಿಸದೇ ಇರುವುದರಿಂದ ಕುಟುಂಬದಲ್ಲಿ ಕೆಲವು ಸಮಸ್ಯೆಗಳು ಉದ್ಭವಿಸುತ್ತವೆ. ಕೆಲವರಿಗೆ ಮನೆಯಲ್ಲಿ ನೆಮ್ಮದಿ ಕಳೆದುಕೊಳ್ಳಬಹುದು, ವ್ಯಾಪಾರದಲ್ಲಿ ನಷ್ಟ ಉಂಟಾಗಬಹುದು, ಕೆಲವರಿಗೆ ಮನೆಯಲ್ಲಿ ಜಗಳಗಳು ಕೂಡ ಬರಬಹುದು. ಕೆಲವು ಮನೆಗಳಲ್ಲಿ ವಾಸ್ತು ಸರಿಯಿಲ್ಲದ ಕಾರಣ ಕುಟುಂಬ ಎರಡು ಹೋಳಾಗುತ್ತದೆ. ಸಣ್ಣಪುಟ್ಟ ವಾಸ್ತು ಸಮಸ್ಯೆಯಾಗಿದ್ದರೆ ಅದನ್ನು ಸುಲಭವಾಗಿ ಸರಿಪಡಿಸಬಹುದು. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ…
ಬೆಳಗಾವಿ: ರಾಜ್ಯದಲ್ಲಿ ಔಷಧ ಪರವಾನಗಿ ಇಲ್ಲದೆ ಅನಧಿಕೃತವಾಗಿ ಔಷಧ ಅಂಗಡಿಗಳನ್ನು ನಡೆಸುತ್ತಿರುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಔಷಧ ಮತ್ತು ಕಾಂತಿವರ್ಧಕ ಅಧಿನಿಯಮ ಮತ್ತು ನಿಯಮಾವಳಿಗಳ ಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಅವರು ವಿಧಾನ ಪರಿಷತ್ ನಲ್ಲಿ ಸದಸ್ಯ ಗೋವಿಂದ ರಾಜು ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸುತ್ತಾ ರಾಜ್ಯದಲ್ಲಿ ಪ್ರಸ್ತುತ 37,130 ಖಾಸಗಿ ಔಷಧ ಗಳು ಮಳಿಗೆಗಳು ಕಾರ್ಯ ನಿರ್ವಹಿಸುತ್ತಿದ್ದು, ಸರ್ಕಾರಿ ಆಸ್ಪತ್ರೆ ಆವರಣದಲ್ಲಿ 07 ಜತನಾ ಬಜಾರ್ಗಳು, 23 ಜನ ಸಂಜೀವಿನಿ ಕೇಂದ್ರಗಳು ಹಾಗೂ 178 ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದರು. 2023-24 ರಲ್ಲಿ ದೈನಂದಿನ ಪರಿವೀಕ್ಷಣೆಯಲ್ಲಿ ಇಲಾಖೆಯ ಅಧಿಕಾರಿಗಳು ನಿಯಮಗಳನ್ನು ಉಲ್ಲಂಘಿಸಿದ 1245 ಪರವಾನಾಗಿಗಳನ್ನು ಅಮಾನತ್ತುಗೊಳಿಸಿದ್ದು, 292 ಪರವಾನಗಿಗಳನ್ನು ರದ್ದುಗೊಳಿಸಲಾಗಿದೆ. ಇಲಾಖೆಯ ಅಧಿಕಾರಿಗಳು ಮಾದಕ ಔಷಧಿಗಳ ದಾಸ್ತಾನು ಮತ್ತು ಮಾರಾಟಗಳ ಬಗ್ಗೆ ನಿಗಾವಹಿಸುತ್ತಿದ್ದು ಮತ್ತು ಖಾಸಗಿ ಔಷಧ ಇದು ಮಳಿಗೆಗಳಲ್ಲಿ ಮಾದಕ ವಸ್ತುಗಳು ನಿಯಾಮಬಾಹಿರ ಮಾರಾಟಗಳ ಬಗ್ಗೆ ಪರಿವೀಕ್ಷಣೆಗಳನ್ನು…