Author: kannadanewsnow07

ಬೆಂಗಳೂರು: ಆಹಾರ ಪದಾರ್ಥಗಳಲ್ಲಿ ಕೃತಕ, ಹಾನಿಕಾರಕ ಕಲರ್ ಬಳಸಬಾರದು ಎಂದು ಈಗಾಗಲೇ ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ.   https://kannadanewsnow.com/kannada/30-goats-die-after-consuming-leftover-food-at-anegondi-festival-180-goats-treated/ https://kannadanewsnow.com/kannada/karnataka-hc-imposes-fine-of-rs-1-lakh-on-police-constable-cancels-his-bail-in-rape-case/ ಈ ನಡುವೆ ಕಬಾಬ್‌ನಲ್ಲಿ ಕೂಡ ಕಲರ್ ಮಿಕ್ಸ್‌ ಮಾಡುತ್ತಿರುವುದು ಕೂಡ ಸರ್ಕಾರದ ಗಮನಕ್ಕೆ ಬಂದಿದ್ದು, ಈ ನಿಟ್ಟಿನಲ್ಲಿ ಈ ಬಗ್ಗೆ ಕೂಡ ಕಲರ್‌ ಮಿಕ್ಸ್‌ ಮಾಡಿದ್ರೆ ಅವರ ವಿರುದ್ದ ಕೂಡ ಸೂಕ್ತ ಕ್ರಮ ಕೈಗೊಳ್ಳುವುದುಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಅಂದ ಹಾಗೇ ಆಕಸ್ಮಾತ್ ಕಬಾಬ್‌ನಲ್ಲೂ ಕಲರ್ ಬಳಸೋದು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುತ್ತದೆ ಅಂತ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ತಿಳಿಸಿದ್ದಾರೆ. ಅವರು ಇಂದು ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿಮಾತನಾಡುತ್ತ ಈ ಬಗ್ಗೆ ತಿಳಿಸಿದರು. ಇದೇ ವೇಳೆ ಅವರು ಮಾತನಾಡಿನಿಯಮಗಳನ್ನು ಪಾಲಿಸುವಂತೆ ನೋಡಿಕೊಳ್ಳುತ್ತೆವೆ. ಇದರ ಹೊರತಾಗಿ ನಿಯಮ ಮೀರಿ ನಿಷೇಧಿತ ಪದಾರ್ಥಗಳನ್ನು ತಯಾರಿಸಿ ಜನರಿಗೆ ಮಾರಾಟ ಮಾಡಿದರೆ ಕಾನೂನು ಅನ್ವಯ ಕಠಿಣ ಕ್ರಮಕೈಗೊಳ್ಳಲಾಗುತ್ತದೆ. ಇದಕ್ಕೆ 7 ವರ್ಷದವರೆಗೂ ಜೈಲು ಶಿಕ್ಷೆ ನೀಡಲು ಅವಕಾಶವಿದೆ ಎಂದು ಹೇಳಿದರು.

Read More

ಬೆಂಗಳೂರು: ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮೀ ಯೋಜನೆಗೆ ನೀವು ಅರ್ಜಿ ಸಲ್ಲಿಸಿದ್ದೀರಾ? ನಿಮ್ಮ ಬ್ಯಾಂಕ್ ಖಾತೆಗೆ 7 ನೇ ಕಂತಿನ ಹಣ ಯಾವಾಗ ಜಮೆಯಾಗಲಿದೆ ಎನ್ನುವುದರ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಹೌದು, ಓದುಗರೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಯಲ್ಲಿ ಒಂದಾಗಿದೆ. ಅದೆರಲ್ಲಿ ಗೃಹಲಕ್ಷ್ಮೀ ಯೋಜನೆ ಕೂಡ ಒಂದಾಗಿದೆ. ಕರ್ನಾಟಕ ಸರ್ಕಾರವು ಗೃಹಲಕ್ಷ್ಮೀ ಯೋಜನೆಯನ್ನು 2023 ರ ಆಗಸ್ಟ್ 30 ರಿಂದ ಅನುಷ್ಠಾಣಕ್ಕೆ ತರಲಾಗಿದ್ದು ಇಲ್ಲಿ ತನಕ ಅರ್ಹರಿಗೆ ಆರು ಕಂತುಗಳ ತನಕ ಹಣವನ್ನು ವರ್ಗಾವಣೆ ಮಾಡಲಾಗಿದೆ. ಈ ನಡುವೆ ಹಲವು ಮಂದಿ ಏಳನೇ ಕಂತಿಗಾಗಿ ಕಾಯುತ್ತಿದ್ದಾರೆ. ಮಾರ್ಚ್‌ ತಿಂಗಳ ಗೃಹಲಕ್ಷ್ಮೀ ಯೋಜನೆಯ ಹಣ 2ನೇ ಅಥವಾ 3ನೇ ವಾರದಲ್ಲಿ ಗೃಹಲಕ್ಷ್ಮೀಯರ ಖಾತೆಗಳಿಗೆ GruhaLakshmi DBT ಮೂಲಕ ವರ್ಗಾವಣೆ ಯಾಗಲಿದೆ ಎನ್ನಲಾಗಿದೆ. https://kannadanewsnow.com/kannada/lok-sabha-polls-2024-pm-modi-to-campaign-in-kerala-tamil-nadu-telangana-today/ https://kannadanewsnow.com/kannada/world-sleep-day-2024-61-indians-sleep-less-than-6-hours-study/ https://kannadanewsnow.com/kannada/breaking-lok-sabha-election-dates-to-be-announced-at-3-pm-tomorrow/

Read More

*ಅವಿನಾಶ್‌ ಆರ್ ಭೀಮಸಂದ್ರ ನವದೆಹಲಿ: ನಾಳೆ ಮಧ್ಯಾಹ್ನ 3 ಗಂಟೆಗೆ ಚುನಾವಣಾ ಆಯೋಗ ಲೋಕಸಭಾ ಚುನಾವಣೆ ದಿನಾಂಕ ಘೋಷಣೆ ಮಾಡಲಿದೆ  ಅಂತ ತಿಳಿದು ಬಂದಿದೆ. ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ನಾಳೆ ಮಧ್ಯಾಹ್ನ 3 ಗಂಟೆಗೆ ಪ್ರಕಟಿಸಲಿದೆ. ಈ ಪ್ರಕಟಣೆಯನ್ನು ಇಸಿಐನ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. 2024 ರ ಸಾರ್ವತ್ರಿಕ ಚುನಾವಣೆ ಮತ್ತು ಕೆಲವು ರಾಜ್ಯ ವಿಧಾನಸಭೆಗಳ ವೇಳಾಪಟ್ಟಿಯನ್ನು ಪ್ರಕಟಿಸಲು ಚುನಾವಣಾ ಆಯೋಗವು ಮಾರ್ಚ್ 16 ರಂದು ಮಧ್ಯಾಹ್ನ 3 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಲಿದೆ. ಇದನ್ನು ಇಸಿಐನ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ ಅಂತ ಇಸಿಐ ತಿಳಿಸಿದೆ. ಕಳೆದ ಬಾರಿ 7 ಹಂತಗಳಲ್ಲಿ ಚುನಾವಣೆ ನಡೆದಿತ್ತು : 2019 ರಲ್ಲಿ ಲೋಕಸಭಾ ಚುನಾವಣೆ ಏಳು ಹಂತಗಳಲ್ಲಿ ನಡೆಯಿತು. ಕಳೆದ ಬಾರಿ ಮಾರ್ಚ್ 10ರಂದು ಚುನಾವಣಾ ಆಯೋಗ ಚುನಾವಣಾ ದಿನಾಂಕವನ್ನು ಘೋಷಿಸಿತ್ತು. ಏಪ್ರಿಲ್ 11 ರಂದು ಮೊದಲ ಹಂತದ ಮತದಾನ ನಡೆದಿದ್ದರೆ, ಮೇ 19…

Read More

ಬೆಂಗಳೂರು : ಅಪ್ರಾಪ್ತೇ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಪುಕ್ಸ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಘಟನೆ ಸ್ಥಳಕ್ಕೆ ತನಿಕಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಪ್ರಾಥಮಿಕ ತನಿಖೆ ಸಾಕ್ಷಿಗಳ ಸಂಗ್ರಹ ಮಾಡಲಾಗುತ್ತಿದೆ. ಈ ಬಗ್ಗೆ ಸುಪ್ರೀಂಕೋರ್ಟ್ ನ ನಿರ್ದೇಶನದಂತೆ ಗೈಡ್ ಲೈನ್ಸ್ ಹಾಗೂ ಕಾನೂನಿನ ಪ್ರಕಾರ ತನಿಖೆ ನಡೆಸಲಾಗುತ್ತಿದೆ. ಕೃತ್ಯ ನಡೆದ ಸ್ಥಳ ಎಂದು ಆರೋಪಿಸಲಾದ ಕಡೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.ಸ್ಥಳದಲ್ಲಿ ಸಿಗಬಹುದಾದ ಸಾಕ್ಷಿಗಳ ಬಗ್ಗೆ ಮಾಹಿತಿಯನ್ನು ಸಂಗ್ರಹ ಮಾಡಲಾಗುತ್ತಿದೆ. ಈ ನಡುವೆ CID ತನಿಖೆಗಾಗಿ, ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಿದೆ ಎನ್ನಲಾಗಿದ್ದು, ಈ ಬಗ್ಗೆ ಇಂದು ಸಂಜೆಯೊಳಗೆ ಆದೇಶವನ್ನು ಹೊರಡಿಸಲಲಾಗುವುದು ಎನ್ನಲಾಗಿದೆ. ಪೋಕ್ಸೋ’ ಕೇಸ್ ದಾಖಲು ವಿಚಾರ : ಕಾನೂನು ರೀತಿಯಲ್ಲಿ ಎಲ್ಲವನ್ನು ಎದುರಿಸೋಣ ಎಂದ ಯಡಿಯೂರಪ್ಪ ಬೆಂಗಳೂರು : ಅಪ್ರಾಪ್ತೆ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ FIR ದಾಖಲಾದ ವಿಚಾರಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ…

Read More

ತೈಯುವಾನ್ : ಉತ್ತರ ಚೀನಾದ ಶಾಂಕ್ಸಿ ಪ್ರಾಂತ್ಯದ ಕಲ್ಲಿದ್ದಲು ಗಣಿಯೊಂದರ ಭೂಗತ ಗೋದಾಮಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಸಿಲುಕಿದ್ದ ಎಲ್ಲ ಏಳು ಗಣಿ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.    https://kannadanewsnow.com/kannada/top-brass-misusing-priority-given-to-bsy-vijayendra-eshwarappa/ https://kannadanewsnow.com/kannada/taaja-suddi-lyrical-video-song-kenda-sahadevkelvadi-ritwikkaikini-ameyuktistudios-rooparao/ https://kannadanewsnow.com/kannada/world-sleep-day-2024-61-indians-sleep-less-than-6-hours-study/ ಬೆಳಿಗ್ಗೆ 6:23 ಕ್ಕೆ ಕೊನೆಯ ಶವವನ್ನು ಹೊರತೆಗೆಯಲಾಯಿತು. ಶುಕ್ರವಾರ, ಝೊಂಗ್ಯಾಂಗ್ ಕೌಂಟಿಯ ಟಾವೊಯುವಾನ್ ಕ್ಸಿನ್ಲಾಂಗ್ ಕಲ್ಲಿದ್ದಲು ಕೈಗಾರಿಕಾ ನಿಗಮದ ಕಲ್ಲಿದ್ದಲು ಗಣಿಯಲ್ಲಿ ರಕ್ಷಣಾ ಕಾರ್ಯಾಚರಣೆಯ ಅಂತ್ಯವನ್ನು ಸೂಚಿಸುತ್ತದೆ ಎಂದು ಕೌಂಟಿ ಸರ್ಕಾರ ತಿಳಿಸಿದೆ. ಸೋಮವಾರ ರಾತ್ರಿ 10:45 ಕ್ಕೆ ಗಣಿಗಾರರು ಅಸಮರ್ಪಕ ಕಲ್ಲಿದ್ದಲು ಫೀಡರ್ ಅನ್ನು ದುರಸ್ತಿ ಮಾಡುತ್ತಿದ್ದಾಗ ಗೋದಾಮಿನಲ್ಲಿನ ಕಲ್ಲಿದ್ದಲು ರಾಶಿ ಕುಸಿದು ಏಳು ಜನರು ಸಮಾಧಿಯಾಗಿದ್ದಾರೆ ಎಂದು ಗಣಿಯ ಮುಖ್ಯಸ್ಥ ಗಾವೊ ನೈಚುನ್ ತಿಳಿಸಿದ್ದಾರೆ. ಕುಸಿದ ಕಲ್ಲಿದ್ದಲು ಗೋದಾಮಿನ ಕೆಳಗಿರುವ ನೀರಿನ ಪೈಪ್ ಗಳನ್ನು ಒಡೆದು ನೀರಿನ ಸ್ಫೋಟಕ್ಕೆ ಕಾರಣವಾಯಿತು, ಇದು ರಕ್ಷಣಾ ಪ್ರಯತ್ನಗಳಿಗೆ ಅಡ್ಡಿಯಾಯಿತು ಎಂದು ಗಾವೊ ಹೇಳಿದ್ದಾರೆ.

Read More

ನವದೆಹಲಿ: ನಿದ್ರೆಯ ಕೊರತೆ ಅನೇಕರಿಗೆ ಜೀವನದ ಒಂದು ಭಾಗವಾಗಿದೆ. ಡಿಜಿಟಲ್ ಕ್ರಿಯೇಟರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇತ್ತೀಚೆಗೆ ನಡೆದ ಸಂವಾದದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜೀವನದಲ್ಲಿ ನಿದ್ರೆಯ ಮಹತ್ವವನ್ನು ಒತ್ತಿ ಹೇಳಿದರು. ಅವರು ತಮ್ಮ ನಿದ್ರೆಯ ದಿನಚರಿಯ ಬಗ್ಗೆ ಶಿಸ್ತು ಹೊಂದಿಲ್ಲ ಎಂದು . ವಿಶ್ವ ನಿದ್ರೆ ದಿನದ ಸಂದರ್ಭದಲ್ಲಿ ಲೋಕಲ್ ಸರ್ಕಲ್ಸ್ ನಡೆಸಿದ ಇತ್ತೀಚಿನ ಸಮೀಕ್ಷೆಯು ಕಳೆದ ಎರಡು ವರ್ಷಗಳಲ್ಲಿ, ದಿನಕ್ಕೆ 7 ಗಂಟೆಗಳ ಕಾಲ ನಿರಂತರ ನಿದ್ರೆ ಪಡೆಯುವ ಬಗ್ಗೆ ಸಮಸ್ಯೆಗಳನ್ನು ಹೊಂದಿರುವ ಹಲವಾರು ನಾಗರಿಕರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ ಎಂದು ಬಹಿರಂಗಪಡಿಸಿದೆ.   https://kannadanewsnow.com/kannada/opposition-leader-r-ashoka-slams-congress-for-acquiring-palace-land-for-road-widening/ https://kannadanewsnow.com/kannada/taaja-suddi-lyrical-video-song-kenda-sahadevkelvadi-ritwikkaikini-ameyuktistudios-rooparao/ ಸಮೀಕ್ಷೆಯ ಪ್ರಕಾರ, ಕಳೆದ 12 ತಿಂಗಳಲ್ಲಿ ಶೇಕಡಾ 61 ರಷ್ಟು ಭಾರತೀಯರು ರಾತ್ರಿಯಲ್ಲಿ 6 ಗಂಟೆಗಳಿಗಿಂತ ಕಡಿಮೆ ನಿರಂತರ ನಿದ್ರೆಯನ್ನು ಪಡೆದಿದ್ದಾರೆ ಮತ್ತು 38 ಪ್ರತಿಶತದಷ್ಟು ಜನರು ರಾತ್ರಿಯಲ್ಲಿ 4 ರಿಂದ 6 ಗಂಟೆಗಳ ನಿರಂತರ ನಿದ್ರೆಯನ್ನು ಪಡೆಯುತ್ತಿದ್ದಾರೆ. ಅವರಲ್ಲಿ ಸುಮಾರು 23 ಪ್ರತಿಶತದಷ್ಟು ನಾಗರಿಕರು 4 ಗಂಟೆಗಳ ನಿದ್ರೆಯನ್ನು…

Read More

ಕೆಎನ್‌ಎನ್‌ಸಿನಿಮಾಡೆಸ್ಕ್‌: ಇದೀಗ ಕೆಂಡ ಸಿನಿಮಾ ಸದ್ಯದಲ್ಲೇ ಬಿಡುಗಡೆಯಾಗಲಿದ್ದು, ಈ ನಡುವೆ ಜಯಂತ್‍ಕಾಯ್ಕಣಿ ರಚಿಸಿದ `ತಾಜಾ ತಾಜಾ ಸುದ್ದಿ’ ಗೀತೆಗೆ ಪುತ್ರ ರಿತ್ವಿಕ್‍ಕಾಯ್ಕಣಿ ಪ್ರಥಮ ಬಾರಿ ಸಂಗೀತ ಸಂಯೋಜಿಸಿರುವ ಲಿರಿಕಲ್ ವಿಡಿಯೋ ಹಾಡಿನ ಬಿಡುಗಡೆ ಕಾರ್ಯಕ್ರಮ ಎಸ್‍ಆರ್‍ವಿ ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು. ಇದೇ ವೇಳೆ ಸಿನಿಮಾ ತಂಡಕ್ಕೆ ಶುಭಹಾರೈಸಲು ಯೋಗರಾಜಭಟ್, ಸಂಗೀತ ಸಂಯೋಜಕ ವಿ.ಹರಿಕೃಷ್ಣ, ಡಿ.ಬೀಟ್ಸ್‍ನ ಶೈಲಜಾನಾಗ್ ಮತ್ತು ಜಯಂತ್‍ಕಾಯ್ಕಣಿ ಆಗಮಿಸಿದ್ದರು.ಅಂದ ಹಾಗೇ ರೂಪಾ ರಾವ್ ಕೆಂಡ ಚಿತ್ರದ ಮೂಲಕ ನಿರ್ಮಾಪಕಿಯಾಗಿದ್ದಾರೆ. ಸಹದೇವ ಕೆಲವಡಿ ಛಾಯಾಗ್ರಹಣ, ನಿರ್ದೇಶನದ ಜೊತೆಗೆ ನಿರ್ಮಾಣದಲ್ಲಿಯೂ ಭಾಗಿಯಾಗಿದ್ದಾರೆ. ಇದೇ ವೇಳೆ ವಿಕಟ ಕವಿ ಯೋಗರಾಜಭಟ್ ಮಾತನಾಡಿ, ಎರಡನೇ ಲಾಕ್‍ಡೌನ್ ಸಂದರ್ಭದಲ್ಲಿ ರಿತ್ವಿಕ್‍ಕಾಯ್ಕಣಿ ಜೊತೆ ದೋಸ್ತಿ ಶುರುವಾಯಿತು. ಸದ್ಯದ ಪರಿಸ್ಥಿತಿಯಲ್ಲಿ ಹಾಡು ಇಲ್ಲದೆ ಸಿನಿಮಾ ಬಿಡುಗಡೆ ಅಂತ ಬಂದಾಗ ಎರಡು ತರದ ಅಪಾಯದಲ್ಲಿ ತಗಲಾಕೊಳ್ತಾರೆ. ಬೆಳಿಗ್ಗೆ ಸ್ನಾನದ ಮನೆಯಲ್ಲಿ ಇರುವಾಗ ನನ್ನ ಹಾಡು ಇಡೀ ಪ್ರಪಂಚ ತಿರುಗಿ ನೋಡುತ್ತೆ ಎನ್ನುವ ಕನಸು. ಹೊರಗೆ ಬಂದಾಗ ಯಾರಿಗೂ ಗೊತ್ತಿಲ್ಲವೆಂಬ ದುಗುಡ. ಒಂದು…

Read More

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ ಪರಿಶಿಷ್ಠ ಪಂಗಡದ ನಿರುದ್ಯೋಗಿ ಯುವಕ ಯುವತಿಯರಿಗೆ 2023-24ನೇ ಸಾಲಿನ ಕೌಶಲ್ಯಭಿವೃದ್ಧಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.     https://kannadanewsnow.com/kannada/chakravarthy-sulibele-to-contest-from-uttara-kannada-lok-sabha-seat-instead-of-ananth-kumar-hegde/ https://kannadanewsnow.com/kannada/sbi-should-disclose-electoral-bond-numbers-supreme-court/ https://kannadanewsnow.com/kannada/good-news-for-st-category-applications-invited-for-subsidy-for-setting-up-of-industries-in-electronic-digital-media-sectors/ https://kannadanewsnow.com/kannada/rs-571-crore-was-collected-before-the-supreme-court-order-purchase-of-electoral-bonds-of-value-report/ ಆಸಕ್ತ ಅರ್ಹ ಅಭ್ಯರ್ಥಿಗಳು ಮಾ.28ರ ಒಳಗಾಗಿ ಅರ್ಜಿ ಸಲ್ಲಿಸಬಹುದು. ಕೌಶಲ್ಯಭಿವೃದ್ಧಿ ತರಬೇತಿಯಡಿ 60 ದಿನಗಳ ಸ್ವಯಂ ಉದ್ಯೋಗದ ಟೈಲರ್, ಹಾಗೂ 30 ದಿನಗಳ ಬೋಟಿಕ್, ಸಹಾಯಕ ಕೂದಲು ಚಿಕಿತ್ಸಕ, ವಸ್ತ್ರ ವಿನ್ಯಾಸಕಾರ, ಯಂತ್ರಾಂಶ ದುರಸ್ತಿ ತಂತ್ರಜ್ಞ, ಹೇರ್ ಸ್ಟೈಲಿಸ್ಟ್, ಸೌಂದರ್ಯ ಚಿಕಿತ್ಸಕ, ಡೇಟಾ ಎಂಟ್ರಿ ಆಪರೇಟರ್, ಸೌರ ಫಲಕ ಸ್ಥಾಪನೆ ಮತ್ತು ಸೇವೆಗಳ ತರಬೇತಿಯನ್ನು ನೀಡಲಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಗಳನ್ನು ಸಂಪರ್ಕ ಮಾಡಬಹುದಾಗಿದೆ.

Read More

ನವದೆಹಲಿ: ರಾಜಕೀಯ ಪಕ್ಷಗಳು ಮತ್ತು ದಾನಿಗಳ ನಡುವಿನ ಸಂಪರ್ಕವನ್ನು ಬಹಿರಂಗಪಡಿಸುವ ಚುನಾವಣಾ ಬಾಂಡ್ ಡೇಟಾವನ್ನು ಪ್ರಕಟಿಸಿ ಅಂತ ಎಸ್ಬಿಐಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.  https://kannadanewsnow.com/kannada/who-is-the-number-1-buyer-of-electoral-bonds-heres-a-look/ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲು ಡೇಟಾವನ್ನು ಹಿಂದಿರುಗಿಸಲು ಚುನಾವಣಾ ಆಯೋಗದ ಮನವಿಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಚುನಾವಣಾ ಬಾಂಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ನ ಐವರು ನ್ಯಾಯಾಧೀಶರ ಸಂವಿಧಾನ ಪೀಠದಲ್ಲಿ ಇಂದು ಅಂದರೆ ಶುಕ್ರವಾರ ವಿಚಾರಣೆ ನಡೆಸಲಾಯಿತು. ಸಿಜೆಐ ಚಂದ್ರಚೂಡ್ ಅವರ ಪೀಠವು ಚುನಾವಣಾ ಬಾಂಡ್ ಸಂಖ್ಯೆಯನ್ನು ಬಹಿರಂಗಪಡಿಸುವಂತೆ ಎಸ್ಬಿಐಗೆ ಆದೇಶಿಸಿತು. ಅದೇ ಸಮಯದಲ್ಲಿ, ಚುನಾವಣಾ ಆಯೋಗವು ದತ್ತಾಂಶದ ಬೇಡಿಕೆಗೆ ಒಪ್ಪಿಕೊಂಡಿತು. https://kannadanewsnow.com/kannada/after-ban-on-colour-cotton-candy-kebabs-panipuri-also-fear-ban/ ದಾಖಲೆಗಳನ್ನು ಸ್ಕ್ಯಾನ್ ಮಾಡಲಾಗಿದೆ ಮತ್ತು ಡಿಜಿಟಲೀಕರಣಗೊಳಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಸುಪ್ರೀಂ ಕೋರ್ಟ್ನ ರಿಜಿಸ್ಟ್ರಾರ್ ನ್ಯಾಯಾಂಗ ಮತ್ತು ಪ್ರಕ್ರಿಯೆ ಪೂರ್ಣಗೊಂಡ ನಂತರ ಮೂಲ ದಾಖಲೆಗಳನ್ನು ಚುನಾವಣಾ ಆಯೋಗಕ್ಕೆ ಹಿಂತಿರುಗಿಸಬೇಕು ಮತ್ತು ನಂತರ ಅದನ್ನು ಮಾರ್ಚ್ 17 ರಂದು ಅಥವಾ ಅದಕ್ಕೂ ಮೊದಲು ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಬೇಕು…

Read More

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದ ಪರಿಶಿಷ್ಠ ಪಂಗಡದ ನಿರುದ್ಯೋಗಿ ಯುವಕ, ಯುವತಿಯರು ಜಿಲ್ಲಾ ಅಥವಾ ತಾಲ್ಲೂಕು ಮಟ್ಟದಲ್ಲಿ ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಮಾಧ್ಯಮ ಕ್ಷೇತ್ರಗಳಲ್ಲಿ ಉದ್ದಿಮೆ ಸ್ಥಾಪಿಸಲು ಆಫ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮಲ್ಲಿಕಾರ್ಜುನ ಅವರು ತಿಳಿಸಿದ್ದಾರೆ.    https://kannadanewsnow.com/kannada/who-is-the-number-1-buyer-of-electoral-bonds-heres-a-look/ https://kannadanewsnow.com/kannada/chakravarthy-sulibele-to-contest-from-uttara-kannada-lok-sabha-seat-instead-of-ananth-kumar-hegde/ https://kannadanewsnow.com/kannada/after-ban-on-colour-cotton-candy-kebabs-panipuri-also-fear-ban/ ಯುಟ್ಯೂಬ್ ಚಾನೆಲ್, ಸೋಶಿಯಲ್ ಮಿಡಿಯಾ ನ್ಯೂಸ್ ಪೇಜ್, ನ್ಯೂಸ್ ಆನ್‍ಲೈನ್ ಬ್ಲಾಗ್, ವೆಬ್ ಪೇಜ್, ಆನ್‍ಲೈನ್ ಜರ್ನಲಿಸಂ, ಮಾಧ್ಯಮಕ್ಕೆ ಸಂಬಂಧಿಸಿದ ತರಬೇತಿ ನಡೆಸುವವರು ಅರ್ಜಿ ಸಲ್ಲಿಸಬಹುದು. ಅರ್ಹ ಅಭ್ಯರ್ಥಿಗಳು ಮಾ.28ರ ಒಳಗಾಗಿ ಅರ್ಜಿ ಸಲ್ಲಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಉದ್ದಿಮೆ ಸ್ಥಾಪಿಸಲು ಘಟಕ ವೆಚ್ಚದ ಶೇ.70 ರಷ್ಟು ಅಥವಾ 5 ಲಕ್ಷ ರೂ.ಗಳಷ್ಟು ಸಹಾಯಧನ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ…

Read More