Subscribe to Updates
Get the latest creative news from FooBar about art, design and business.
Author: kannadanewsnow07
ಉತ್ತರ ಕನ್ನಡ : ಮದ್ಯಪಾನಪ್ರಿಯರರ ಜೊತೆಗೆ ಹಾಸ್ಟೆಲ್ ವಿದ್ಯಾರ್ಥಿಗಳು ಕೀಟಲೆ ಮಾಡಿ ಕೊಂಡ ನಂತರ ಇಬ್ಬರ ನಡುವೆ ಹೊಡೆದಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಮೆಟ್ರಿಕ್ ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯದಲ್ಲಿ ನಡೆದಿದೆ. ಮದ್ಯಪ್ರಿಯರನ್ನು ಹಾಸ್ಟೆಲ್ ಹುಡುಗುರು ಕಿಚಾಯಿಸಿದ್ದಾರೆ ಎನ್ನಲಾಗಿದೆ. ಈ ನಡುವೆ ಇದನ್ನೇ ನೆಪಾಗಿಇಟ್ಟುಕೊಂಡು ದಂಡುಕಟ್ಟಿಕೊಂಡು ಮದ್ಯಪ್ರಿಯರು ಹಾಸ್ಟೆಲ್ ಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ, ಹಾಸ್ಟೆಲ್ ನಲ್ಲಿರುವ ವಸ್ತುಗಳನ್ನು ಚೆಲ್ಲಪಿಲ್ಲಿ ಮಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ನಡುವೆ ಘಟನೆಯಲ್ಲಿ ಹಾಸ್ಟೆಲ್ ವಿದ್ಯಾರ್ಥಿಯೊಬ್ಬನಿಗೆ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ನಿಲಯ ಪಾಲಕ ನಾಗೇಂದ್ರ ಅವರು ದೂರು ನೀಡಿರುವ ಹಿನ್ನಲೆಯಲ್ಲಿ ಮದ್ಯಪ್ರಿಯರಾದ ರಾಘವೇಂದ್ರ ಹಾಗೂ ನಂದನ್ ಎಂಬುವರನ್ನು ಶಹರ ಪೊಲೀಸರು ಬಂಧಿಸಿದ್ದಾರೆ ಅಂತ ತಿಳಿದು ಬಂದಿದೆ. ಇದಲ್ಲದೇ ಹಾಸ್ಟೆಲ್ ತುಂಬಾ ರಕ್ತ ಕಂಡು ಹರಡಿದ್ದು, ಘಟನೆಯ ಭಿಭಸ್ಸವನ್ನು ತೋರಿಸುತ್ತಿದೆ.
ನವದೆಹಲಿ: ಆಸ್ಪತ್ರೆಗಳು ಮತ್ತು ಶೈಕ್ಷಣಿಕ ಸೇವೆಗಳಿಗೆ ಯುಪಿಐ ವಹಿವಾಟಿನ ಮಿತಿಯನ್ನು 5 ಲಕ್ಷ ರೂ.ಗೆ ಹೆಚ್ಚಿಸುವ ಬ್ಯಾಂಕಿಂಗ್ ನಿಯಂತ್ರಕರ ನಿರ್ಧಾರವನ್ನು ಜನವರಿ 10 ರೊಳಗೆ ಅನುಸರಿಸುವಂತೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಪಿಸಿಐ) ಸದಸ್ಯರಿಗೆ ನಿರ್ದೇಶನ ನೀಡಿದೆ ಎಂದು ಖಾಸಗಿ ಮಾಧ್ಯಮ ವರದಿ ಮಾಡಿದೆ. ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು, ನಿರ್ದಿಷ್ಟ ವ್ಯಾಪಾರಿ ವರ್ಗಗಳಿಗೆ ವಹಿವಾಟು ಮಿತಿಗಳನ್ನು ಹೆಚ್ಚಿಸಲು NPCI ಬ್ಯಾಂಕುಗಳು, ಪಾವತಿ ಸೇವಾ ಪೂರೈಕೆದಾರರು (PSPs)ಮತ್ತು UPI ಅಪ್ಲಿಕೇಶನ್ಗಳಿಗೆ ಸೂಚನೆ ನೀಡಿದೆ. NPCI ಹೊರಡಿಸಿದ ಅಧಿಸೂಚನೆಯ ಪ್ರಕಾರ, ಯುಪಿಐ ಬಳಕೆದಾರರು 2024ರ ಜನವರಿ 10ರಿಂದ 5 ಲಕ್ಷ ರೂ. ವರೆಗೆ ಯುಪಿಐ ಪಾವತಿ ಮಾಡಬಹುದು. ಇದಕ್ಕಾಗಿ, NPCI ಎಲ್ಲಾ ಬ್ಯಾಂಕ್ಗಳು, ಪಾವತಿ ಸೇವಾ ಪೂರೈಕೆದಾರರು ಮತ್ತು API ಅಪ್ಲಿಕೇಶನ್ಗಳಿಗೆ ಈ ಸೇವೆಯನ್ನು ಒದಗಿಸಲು ಆದೇಶಿಸಿದೆ. 2023 ರಲ್ಲಿ ಯುಪಿಐ ವಹಿವಾಟಿನ ಒಟ್ಟು ಮೌಲ್ಯವು ಸರಿಸುಮಾರು 182 ಲಕ್ಷ ಕೋಟಿ ರೂ.ಗಳಷ್ಟಿದ್ದು, 2022 ರಲ್ಲಿ 126 ಲಕ್ಷ ಕೋಟಿ ರೂ.ಗೆ ಹೋಲಿಸಿದರೆ ಶೇಕಡಾ…
ದುಶಾಂಬೆ: ತಜಕಿಸ್ತಾನದಲ್ಲಿ ಇಂದು ರಿಕ್ಟರ್ ಮಾಪಕದಲ್ಲಿ 5.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ. NCS ಪ್ರಕಾರ, ಶನಿವಾರ ತಜಕಿಸ್ತಾನದಲ್ಲಿ ಬೆಳಗ್ಗೆ 6:42ಕ್ಕೆ ಭೂಮೇಲ್ಮೈಯಿಂದ 80 ಕಿಮೀ ಆಳದಲ್ಲಿ 5.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಮಾಹಿತಿ ನೀಡಿದೆ. ಭೂಕಂಪದಿಂದಾದ ಹಾನಿಯ ಬಗ್ಗೆ ಇನ್ನೂ ಯಾವುದೇ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. https://kannadanewsnow.com/kannada/the-marcos-commando-force-which-saved-the-lives-of-21-people-is-as-follows/ https://kannadanewsnow.com/kannada/japan-earthquake-pm-modi-writes-to-japanese-counterpart-offers-assistance/ https://kannadanewsnow.com/kannada/the-marcos-commando-force-which-saved-the-lives-of-21-people-is-as-follows/ https://kannadanewsnow.com/kannada/japan-earthquake-pm-modi-writes-to-japanese-counterpart-offers-assistance/
ಬೆಂಗಳೂರು: ಬೆಂಗಳೂರಿನ ಪ್ರಸಿದ್ಧ ಮಹಿಳಾ ಕಾಲೇಜು ಮೌಂಟ್ ಕಾರ್ಮೆಲ್ ಕಾಲೇಜು (ಎಂಸಿಸಿ) ತನ್ನ 60 ನೇ ವಾರ್ಷಿಕೋತ್ಸವದ ಆಚರಣೆಯಲ್ಲಿ 2024-25ನೇ ಶೈಕ್ಷಣಿಕ ವರ್ಷಕ್ಕೆ ಪುರುಷ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಮೂಲಕ ಸಹ-ಶೈಕ್ಷಣಿಕ ಸ್ಥಾನಮಾನಕ್ಕೆ ಪರಿವರ್ತನೆಗೊಳ್ಳಲು ಸಜ್ಜಾಗಿದೆ. ಗುರುವಾರ ಈ ನಿರ್ಧಾರವನ್ನು ಪ್ರಕಟಿಸಿದ ಮೌಂಟ್ ಕಾರ್ಮೆಲ್ ಕಾಲೇಜಿನ ಅಕಾಡೆಮಿಕ್ಸ್ ರಿಜಿಸ್ಟ್ರಾರ್ ಸುಮಾ ಸಿಂಗ್, “ಸಂಸ್ಥೆಯ ಉದ್ದೇಶಗಳನ್ನು ಬೆಂಬಲಿಸಲು ಮತ್ತು ಕ್ಯಾಂಪಸ್ನಲ್ಲಿ ವೈವಿಧ್ಯತೆಯನ್ನು ಹೆಚ್ಚಿಸಲು ಹುಡುಗರನ್ನು ಸೇರಿಸಲು ಆಡಳಿತ ಮಂಡಳಿ ಆಯ್ಕೆ ಮಾಡಿದೆ” ಎಂದು ಹೇಳಿದರು. ಈ ಕ್ರಮವು ‘ಡೀಮ್ಡ್-ಟು-ಬಿ-ಯೂನಿವರ್ಸಿಟಿ’ ಸ್ಥಾನಮಾನವನ್ನು ಪಡೆಯುವ ಕಾಲೇಜಿನ ಅನ್ವೇಷಣೆಯೊಂದಿಗೆ ಹೊಂದಿಕೆಯಾಗುತ್ತದೆ ಎನ್ನಲಾಗಿದೆ. ಮುಂಬರುವ ಶೈಕ್ಷಣಿಕ ವರ್ಷಕ್ಕೆ ಪದವಿಪೂರ್ವ ಮತ್ತು ಸ್ನಾತಕೋತ್ತರ ಕೋರ್ಸ್ ಗಳಿಗೆ ಪ್ರವೇಶ ಬಯಸುವ ಅರ್ಹ ವಿದ್ಯಾರ್ಥಿಗಳಿಗೆ ಈಗ ಅರ್ಜಿಗಳು ಮುಕ್ತವಾಗಿವೆ. ವಿಶೇಷವೆಂದರೆ, ಬೆಂಗಳೂರು ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ನ ಅನುಮೋದನೆಯ ನಂತರ ಕಾಲೇಜು ಈ ಹಿಂದೆ 2015 ರಲ್ಲಿ ಪುರುಷ ವಿದ್ಯಾರ್ಥಿಗಳಿಗೆ ಆಯ್ದ ಸ್ನಾತಕೋತ್ತರ ಕೋರ್ಸ್ಗಳನ್ನು ಪರಿಚಯಿಸಿತ್ತು. ಪ್ರಸ್ತುತ, ಮೌಂಟ್ ಕಾರ್ಮೆಲ್ ಕಾಲೇಜು ಸ್ನಾತಕೋತ್ತರ ಕೋರ್ಸ್ಗಳಿಗೆ ದಾಖಲಾದ…
ಬೆಂಗಳೂರು: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಅಧಿಕೃತವಾಗಿ ಮುದ್ರಿಸಲಾಗಿರುವ 10 ರೂಪಾಯಿ ನಾಣ್ಯಗಳು ಚಲಾವಣೆಯಲ್ಲಿದ್ದು, ಎಲ್ಲರೂ ತಮ್ಮ ದಿನನಿತ್ಯದ ವಹಿವಾಟುಗಳಲ್ಲಿ ಯಾವುದೇ ಸಂಶಯವಿಲ್ಲದೆ ಬಳಸಬಹುದಾಗಿದೆ. ಕೇಂದ್ರ ಸರಕಾರವಾಗಲಿ, ಆರ್.ಬಿ.ಐಯಾಗಲಿ 10 ರೂ. ನಾಣ್ಯಗಳನ್ನು ನಿಷೇಧಿಸಿಲ್ಲಹಾಗೂ ಚಲಾವಣೆ ಹಿಂಪಡೆದಿಲ್ಲ. ಸಾರ್ವಜನಿಕರು ಸುಳ್ಳು ವದಂತಿಯಮ್ಮು ನಂಬದೆ 10ರೂ. ನಾಣ್ಯಗಳನ್ನು ಸ್ವೀಕರಿಸಬಹುದು ಮತ್ತು ಬಳಸಬಹುದು. 10ರೂ. ನಾಣ್ಯಗಳನ್ನು ಬಳಸುವುದರಿಂದ ಚಿಲ್ಲರೆ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಆರ್.ಬಿ.ಐ ಹಲವು ಬಾರಿ 10ರೂ. ನಾಣ್ಯಗಳನ್ನು ಚಲಾವಣೆಯಿಂದ ಹಿಂಪಡೆದಿಲ್ಲ. ಆದರೂ ಸಹ ಕೆಲವರು ಸಾಮಾಜಿಕ ಮಾಧ್ಯಮಗಳ ಮೂಲಕ ಜನರಲ್ಲಿತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಈ ನಡುವೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ರೂ.10/-ರ ನಾಣ್ಯಗಳನ್ನು ಕೂಡ ಪ್ರಯಾಣಿಕರಿಂದ ಸ್ವೀಕರ ಮಾಡುವಂತೆ ಸುತ್ತೋಲೆಯನ್ನು ಹೊರಡಿಸಿದೆ. ಇದೇ ವೇಳೇ ಸುತ್ತೋಲೆಯಲ್ಲಿ ರೂ.10/-ರ ನಾಣ್ಯಗಳ ಚಲಾವಣೆಗಾಗಿ ಪ್ರಯಾಣಿಕರಿಂದ ಸ್ವೀಕರಿಸುವ ಕುರಿತು ಸಂಬಂಧಿಸಿದ ಎಲ್ಲಾ ಸಿಬ್ಬಂದಿಗಳಿಗೆ ಮತ್ತೊಮ್ಮೆ ಸೂಕ್ತ ನಿರ್ದೇಶನ ನೀಡಲು ಕ್ರಮವಹಿಸುವಂತೆ ಕೋರಲು ನಿರ್ದೇಶಿಸಲ್ಪಟ್ಟಿದ್ದೇನೆ ಅಂತ ತಿಳಿಸಿದ್ದಾರೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ಹೊಸ ನಿರೀಕ್ಷೆಗಳೊಂದಿಗೆ ಹೊಸ ವರ್ಷ ಆಗಮನವಾಗುತ್ತಿದೆ. ಕಷ್ಟ, ನೋವುಗಳು ದೂರವಾಗಿ ಹೊಸ ವರ್ಷದಲ್ಲಿ ಹೊಸ ಜೀವನ, ಸುಖ, ಸಂತೋಷ ನೆಲೆಸಲಿ ಎಂದು ಎಲ್ಲರೂ ಬಯಸುತ್ತಿದ್ದಾರೆ. ಹೊಸ ವರ್ಷ ದ್ವಾದಶ ರಾಶಿಗಳ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ? ಸಿಂಹ ರಾಶಿಯ ವರ್ಷ ಭವಿಷ್ಯ ಹೀಗಿದೆ. ಬದಲಾವಣೆ ಜಗದ ನಿಯಮ ಎಂಬ ಮಾತಿದೆ. ದಿನ ಉರುಳುತ್ತಿದ್ದಂತೆ ಎಲ್ಲರ ಜೀವನದಲ್ಲಿ ಸಾಕಷ್ಟು ಬದಲಾವಣೆ ಉಂಟಾಗಲಿದೆ. ಉದ್ಯೋಗ, ವ್ಯಾಪಾರ, ವಿದ್ಯಾಭ್ಯಾಸ, ವೈಯಕ್ತಿಕ ಜೀವನ ಉತ್ತವಾಗಿರಲಿ ಎಂದು ಎಲ್ಲರೂ ಬಯಸುತ್ತಾರೆ. ಈ ಆಸೆ ಆಕ್ಷಾಂಕ್ಷೆಗಳ ನಡುವೆ ಹೊಸ ವರ್ಷ ಆಗಮನವಾಗುತ್ತಿದೆ. 2024ರಲ್ಲಿ ಗ್ರಹಗತಿಗಳ ಸ್ತಾನ ಪಲ್ಲಟದೊಂದಿಗೆ ದ್ವಾದಶ ರಾಶಿಗಳ ಜೀವನದಲ್ಲಿ ಮಹತ್ತರ ಬದಲಾವಣೆಗಳಾಗುತ್ತವೆ. ಸಾಮಾನ್ಯವಾಗಿ ಸಿಂಹ ರಾಶಿಯಲ್ಲಿ ಜನಿಸಿದವರು ಮುಂಗೋಪಿಗಳಾಗಿರುತ್ತಾರೆ. ಆದರೆ ಕಾಲಕ್ಕೆ ಅನುಸಾರವಾದ ನಿಲುವನ್ನು ತಾಳಬೇಕು. ಸಾಧ್ಯವಾದಷ್ಟು ನಯಗಾರಿಕೆಯ ವಿಧಾನವನ್ನು ಅನುಸರಿಸಬೇಕು. ಒಮ್ಮೆ ತೆಗೆದುಕೊಂಡ ತೀರ್ಮಾನವನ್ನು ಎಂದಿಗೂ…
ಬೆಂಗಳೂರು: ಇತ್ತೀಚಿಗೆ ತೆರೆಕಂಡಿದ್ದ ಸಿನಿಮಾವೊಂದರ ನಟ ತಮ್ಮ ಸ್ನೇಹಿತರ ಜೊತೆಗೆ ಬೆಂಗಳೂರಿನ ಒರಾಯನ್ ಮಾಲ್ ಬಳಿ ಇರುವ ಜೆಟ್ ಲ್ಯಾಗ್ ಪಬ್ನಲ್ಲಿ ಪಾರ್ಟಿ ನಟ, ನಿರ್ದೇಶಕ, ನಿರ್ಮಾಪಕ ಸೇರಿದಂತೆ ಹಲವು ಸೆಲೆಬ್ರಿಟಿಗಳು ಪಾರ್ಟಿಯಲ್ಲಿ ಭಾಗಿ ಆಗಿದ್ದರು ಎನ್ನಲಾಗಿದೆ. ಆದರೆ ಸರ್ಕಾರ ನಿಗದಿ ಮಾಡಿದ್ದ ಸಮಯಕ್ಕಿಂತ ಹೆಚ್ಚು ಪಬ್ ತೆರೆದಿದ್ದ ಕಾರಣ ಈಗ ಜೆಟ್ ಲ್ಯಾಗ್ ಮ್ಯಾನೇಜರ್ ಪ್ರಶಾಂತ್, ಮಾಲೀಕರಾದ ಶಶಿರೇಖಾ ಜಗದೀಶ್ ಮೇಲೆ ಎಫ್ಐಆರ್ ದಾಖಲಾಗಿದೆ. ಅವಧಿ ಮೀರಿ ಬೆಳಗ್ಗೆ ಮುಂಜಾನೆ 5ರವರೆಗೆ ಪಬ್ ತೆರದಿತ್ತು ಎನ್ನಲಾಗಿದ್ದು, ಸದ್ಯ ಅಬಕಾರಿ ಮತ್ತು ಪೊಲೀಸ್ ಕಾಯಿದೆ ಷರತ್ತು ಉಲ್ಲಂಘನೆ ಆರೋಪದಡಿ ಎಫ್ಐಆರ್ ಹಾಕಲಾಗಿದೆ ಅಂಥ ತಿಳಿದು ಬಂದಿದೆ. ಇನ್ನೂ ಆ ನಟನ ಕಾರು ನೋಡಿದ ಅಭಿಮಾನಿಗಳು ಕೂಡ ಮಾಲ್ ಸುತ್ತ ನಿಂತುಕೊಂಡು ಟ್ರಾಫಿಕ್ ಜಾಮ್ ಮಾಡಿದ್ದಾರೆ ಎನ್ನಲಾಗಿದ್ದು, ಈ ಎಲ್ಲ ಘಟನೆಗಳು ಸಿಸಿಟಿವಿಯಲ್ಲಿ ರೆಕಾರ್ಟ್ ಆಗಿವೆಯಂತೆ. ಇದಲ್ಲದೇ ಘಟನೆ ಬಗ್ಗೆ ಮಾಹಿತಿ ಬಂದ ಕೂಡಲೇ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸಂಬಂಧಪಟ್ಟ ಅಧಿಕಾರಿಗಳಿಗೆ…
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ಆಂಜನೇಯಸ್ವಾಮಿಗೆ ರಾಮನೆಂದರೆ ಎಷ್ಟು ಪ್ರಿಯವೋ ಅಷ್ಟೇ ವೀಳ್ಯದೆಲೆ ಎಂದರೆ ಪಂಚಪ್ರಾಣ. ಹನುಮಂತನಿಗೆ ಯಾವ ಪೂಜೆ ಮಾಡಿಸಿದರೂ ವೀಳ್ಯದೆಲೆ ಮುಂದೆ ಯಾವುದು ಶ್ರೇಷ್ಠವಲ್ಲ. ಆಂಜನೇಯ ಸ್ವಾಮಿಗೂ ಹಾಗೂ ವೀಳ್ಯದೆಲೆಗೂ ಯಾವ ರೀತಿಯ ನಂಟಿದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ ಹಿಂದೂ ಧರ್ಮದಲ್ಲಿ ದೇವರಿಗೆ ಮಾಲೆಯನ್ನು ಹಾಕುವುದು ಒಂದು ಸಂಪ್ರದಾಯ. ಅದರಲ್ಲಿ ಹೂವಿನ ಮಾಲೆ, ಒಡೆಯ ಮಾಲೆ ಹಾಗೂ ವೀಳ್ಯದೆಲೆ ಮಾಲೆಯನ್ನು ಹಾಕಲಾಗುತ್ತದೆ. ಸೀತಾಮಾತೆಯ ಮೋಹಕ್ಕೆ ಶರಣಾಗಿದ್ದ ಲಂಕಾಸುರ ಸೀತಾದೇವಿಯನ್ನು ಅಪಹರಿಸಿದ್ದು ಎಲ್ಲರಿಗೂ ತಿಳಿದಿರುವ ವಿಷಯ. ರಾಮ ಮತ್ತು ಲಕ್ಷ್ಮಣ ಎಷ್ಟೇ ಹುಡುಕಿದರು ಸೀತಾಮಾತೆಯು ಎಲ್ಲೂ ಸಿಗುವುದಿಲ್ಲ.ಕೊನೆಗೆ ರಾಮನ ಬಂಟ ಹನುಮಂತ ಲಂಕೆಯನ್ನು ಹಾರಲು ನಿರ್ಧರಿಸುತ್ತಾರೆ. ಹನುಮಂತನು ಲಂಕೆಯಲ್ಲಿ ಸೀತಾಮಾತೆಯನ್ನು ಹುಡುಕುತ್ತಿರುವಾಗ ವೀಳ್ಯದೆಲೆ ಮೇಲೆ ರಾಮನ ಹೆಸರನ್ನು ಬರೆದು ಸೀತಾಮಾತೆ ಅಳುತ್ತಿರುತ್ತಾಳೆ, ಇದನ್ನು ಕಂಡ ಹನುಮಂತ ಸೀತಾಮಾತೆಯ ಹತ್ತಿರ ಹೋಗಿ ರಾಮನಿಂದ ತಂದಿರುವ…
ಢಾಕಾ: ಢಾಕಾದಲ್ಲಿ ರೈಲಿಗೆ ಬೆಂಕಿ ಹಚ್ಚಿದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ. ಢಾಕಾದ ಗೋಪಿಬಾಗ್ನಲ್ಲಿ ಬೆನಾಪೋಲ್ ಎಕ್ಸ್ಪ್ರೆಸ್ ರೈಲಿನಲ್ಲಿ ನಾಲ್ಕು ಬೋಗಿಗಳಿಗೆ ಬೆಂಕಿ ಹಚ್ಚಿದ ಘಟನೆ ಇದಾಗಿದ್ದು, ವರದಿಗಳ ಪ್ರಕಾರ, ರೈಲಿನಲ್ಲಿ ಕೆಲವು ಭಾರತೀಯರೂ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಈ ಘಟನೆಯು ದೇಶದಲ್ಲಿ ಸಾರ್ವತ್ರಿಕ ಚುನಾವಣೆಗೆ ಕೇವಲ ಎರಡು ದಿನಗಳ ಮೊದಲು ನಡೆದಿದೆ ಮತ್ತು ವಾತಾವರಣವನ್ನು ಹಾಳುಮಾಡಲು ಚುನಾವಣಾ ಪೂರ್ವ ಹಿಂಸಾಚಾರವನ್ನು ಪ್ರಚೋದಿಸುವ ಪ್ರಯತ್ನವೆಂದು ಪರಿಗಣಿಸಲಾಗಿದೆ. “ಇಲ್ಲಿಯವರೆಗೆ ನಾವು ನಾಲ್ಕು ಶವಗಳನ್ನು ಪತ್ತೆ ಮಾಡಿದ್ದೇವೆ… ಇನ್ನೂ ಹುಡುಕಾಟ ನಡೆಯುತ್ತಿದೆ” ಎಂದು ಅಗ್ನಿಶಾಮಕ ಸೇವೆ ಮತ್ತು ನಾಗರಿಕ ರಕ್ಷಣಾ ವಕ್ತಾರ ಷಹಜಹಾನ್ ಶಿಕ್ದರ್ ಘಟನಾ ಸ್ಥಳದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ರೈಲಿನ ಸುಮಾರು 292 ಪ್ರಯಾಣಿಕರಲ್ಲಿ ಹೆಚ್ಚಿನವರು ಭಾರತದಿಂದ ಮನೆಗೆ ಮರಳುತ್ತಿದ್ದರು ಮತ್ತು ರೈಲು ನಿಲ್ದಾಣದ ಸಮೀಪವಿರುವ ಗೋಪಿಬಾಗ್ ಪ್ರದೇಶವನ್ನು ತಲುಪುತ್ತಿದ್ದಂತೆ ರಾತ್ರಿ 9 ಗಂಟೆಗೆ ರೈಲಿಗೆ ಬೆಂಕಿ ಹಚ್ಚಲಾಯಿತು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. https://kannadanewsnow.com/kannada/2007-world-cup-winner-joginder-sharma-accused-of-abetment-of-suicide/…
ಬೆಂಗಳೂರು: ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ವಿಶ್ವದಾದ್ಯಂತ ಬಹಳಷ್ಟು ಜನರು ಎದುರು ನೋಡುತ್ತಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. ಅಯೋಧ್ಯೆ ಮತ್ತು ಕೊರಿಯನ್ ರಾಜಮನೆತನದ ನಡುವಿನ ಸಾಂಸ್ಕೃತಿಕ ಸಂಬಂಧಗಳ ಬಗ್ಗೆ ಮಾತನಾಡಿದ ಅವರು, ಭಾರತೀಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಕೊರಿಯನ್ ಭಾಗವಹಿಸುವಿಕೆ ಇದೆ ಎಂದು ಹೇಳಿದರು. ಬೆಂಗಳೂರಿನಲ್ಲಿ ನಡೆದ ಪಿಇಎಸ್ ವಿಶ್ವವಿದ್ಯಾನಿಲಯದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಭಾರತೀಯ ಜನತಾ ಪಕ್ಷದ ನಾಯಕ ತೇಜಸ್ವಿ ಸೂರ್ಯ ಅವರೊಂದಿಗೆ ‘ವೈ ಭಾರತ್ ಮ್ಯಾಟರ್ಸ್’ ಪುಸ್ತಕದ ಕುರಿತು EAM ಮಾತನಾಡುತ್ತಿದ್ದ ವೇಳೆ ಈ ಮಾಹಿತಿ ನೀಡಿದರು. https://kannadanewsnow.com/kannada/aditya-l1-mission-indias-solar-mission-to-be-placed-in-final-orbit-today-says-isro/ https://kannadanewsnow.com/kannada/breaking-four-killed-in-2-car-lorry-collision-in-dharwad/ https://kannadanewsnow.com/kannada/aditya-l1-mission-indias-solar-mission-to-be-placed-in-final-orbit-today-says-isro/ https://kannadanewsnow.com/kannada/breaking-four-killed-in-2-car-lorry-collision-in-dharwad/













