Subscribe to Updates
Get the latest creative news from FooBar about art, design and business.
Author: kannadanewsnow07
ಬೆಂಗಳೂರು:ಸೂರಣಗಿ ಗ್ರಾಮದಲ್ಲಿ ನಡೆದ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಸಿಎಂ ಸಿದ್ದರಾಮಯ್ಯ, ಮೃತ ಯುವಕರ ಕುಟುಂಬಕ್ಕೆ ಪರಿಹಾರ ಘೋಷಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಕೆ ಪಾಟೀಲ್ ಸಂತಾಪ ಸೂಚಿಸಿದ್ದಾರೆ. ಈ ನಡುವೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಫ್ಲೆಕ್ಸ್ ಕಟ್ಟುವ ವೇಳೆ ವಿದ್ಯುತ್ ಪ್ರವಹಿಸಿ ಮೃತಪಟ್ಟ ಮೂವರು ಯುವಕರ ಕುಟುಂಬಸ್ಥರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಲಾ ಎರಡು ಲಕ್ಷ ಪರಿಹಾರ ಘೋಷಿಸಿದ್ದಾರೆ. ಸುದ್ದಿ ತಿಳಿದು ಬೇಸರವಾಯಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಅಂಥ ತಿಳಿಸಿದ್ದಾರೆ. ಬದುಕಿ ಬಾಳಬೇಕಿದ್ದ ಹುಡುಗರು ಹೀಗೆ ಅಚಾತುರ್ಯದಿಂದ ಸಾವಿಗೀಡಾಗಿದ್ದಾರೆ, ಅವರನ್ನು ನಂಬಿದ್ದ ಕುಟುಂಬವೀಗ ಸಂಕಷ್ಟಕ್ಕೆ ಸಿಲುಕಿದ್ದು ಆ ಕುಟುಂಬಗಳಿಗೆ ನೆರವಾಗುವ ದೃಷ್ಟಿಯಿಂದ ಮೃತ ದುರ್ದೈವಿಗಳಿಗೆ ತಲಾ 2 ಲಕ್ಷ ರೂಪಾಯಿಗಳ ಪರಿಹಾರ ನೀಡುವಂತೆ ಆದೇಶಿಸಿದ್ದೇನೆ ಅಂತ ತಿಳಿಸಿದ್ದಾರೆ. https://twitter.com/CMofKarnataka/status/1744306126932623626
ಗದಗ: ಯಶ್ ಜನ್ಮದಿನದ ಅಂಗವಾಗಿ 20 ಅಡಿ ಬ್ಯಾನರ್ ಕಟ್ಟುವಾಗ ದಾರುಣವಾಗಿ ಸಾವನ್ನಪ್ಪಿದ ಮೂವರು ಯುವಕರ ಸಾಮೂಹಿಕ ಅಂತ್ಯಕ್ರಿಯೆ ಸೂರಣಗಿಯಲ್ಲಿ ನೇರವೇರಿದೆ. ಈ ನಡುವೆ ಸುದ್ದಿ ತಿಳಿದ ಯಶ್, ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮಕ್ಕೆ ಇಂದು ಸಂಜೆ ಭೇಟಿ ಮೃತರ ಕುಟುಂಬಕ್ಕೆ ಸಮಾಧಾನ ಮಾಡಿದರು. ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು ನಾನು ಮೃತರ ಕುಟುಂಬದೊಂದಿಗೆ ಇದ್ದು, ಅವರನ್ನು ಯಾವುದೇ ಕಾರಣಕ್ಕೂ ಕೈ ಬಿಡುವುದಿಲ್ಲ ಅಂತ ತಿಳಿಸಿದರು. ಯಾರೂ ಕೂಡ ಕಟೌಟ್ ಕಟ್ಟುವುದು, ವಾಹನಗಳ ಹಿಂದೆ ಬರುವುದು ಮಾಡಬೇಡಿ ಅಂತ ಮನವಿ ಮಾಡಿಕೊಂಡರು. ಇನ್ನೂ ನೀವು ಖುಶಿಯಾಗಿದ್ದರೆ ಅದೇ ನನಗೆ ಸಂತೋಶ, ಅಭಿಮಾನದ ಹೆಸರಿನಲ್ಲಿ ನಿಮ್ ಜೀವ ಕಳೆದುಕೊಳ್ಳಬೇಡಿ ಅಂತ ಹೇಳಿದರು.
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559…
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ಹಿಂದೂ ಧರ್ಮದಲ್ಲಿ ನಂಬಿಕೊಂಡು ಬರುತ್ತಿರುವಂತಹ ಒಂಭತ್ತೂ ಗ್ರಹಗಳು ಆಕಾಶಕಾಯಗಳು. ‘ನವ’ ಎಂದರೆ ಒಂಭತ್ತು ‘ಗ್ರಹ’ ಎಂದರೆ ಆಕಾಶಕಾಯ, ಹಾಗಾಗಿ ಇದನ್ನು ಒಟ್ಟಾಗಿ ನವಗ್ರಹಗಳೆಂದು ಕರೆಯುತ್ತೇವೆ. ನವಗ್ರಹಗಳಲ್ಲೇ ಪ್ರಬಲವಾಗಿರುವಂತಹ ಸೂರ್ಯ ದೇವನು ಉತ್ತ ಆರೋಗ್ಯ ಹಾಗೂ ಸಮೃದ್ಧಿಯನ್ನು ನೀಡುವವನು. ಚಂದ್ರನು ಮನಸ್ಸನ್ನು ನಿಯಂತ್ರಿಸುವುದರ ಜೊತೆಗೆ ಯಶಸ್ಸನ್ನು ದಯಪಾಲಿಸುವವನು. ಮಂಗಳನು ಜೀವನದಲ್ಲಿ ಧೈರ್ಯ ಹಾಗೂ ಸಮೃದ್ಧಿಯನ್ನು ನೀಡುವವನಾದರೆ, ಬುಧನು ಬುದ್ಧಿಶಕ್ತಿ ಹಾಗೂ ಸಂಪತ್ತನ್ನು ಪ್ರತಿನಿಧಿಸುತ್ತಾನೆ. ಗುರು ವಿದ್ಯಾಕಾರಕನೂ, ಜ್ಞಾನ ಹಾಗೂ ಆರೋಗ್ಯವನ್ನು ನೀಡಿ ಹರಸುತ್ತಾನೆ. ಶುಕ್ರನು ದೀರ್ಘಾಯುಷ್ಯ ಹಾಗೂ ಲಲಿತಕಲೆಗಳಲ್ಲಿ ಪ್ರಾವೀಣ್ಯತೆ ಗಳಿಸುವಂತೆ ಮಾಡುತ್ತಾನೆ. ಶನಿಯು ಸಂತೋಷವನ್ನು, ರಾಹು ಚಂದ್ರನ ಪ್ರಭಾವವನ್ನು ಏರಿಕೆ ಮಾಡಿ, ಜೀವನವನ್ನು ಬಲಗೊಳಿಸಿದರೆ, ಕೇತು ಚಂದ್ರನಿಂದಾಗುವ ನಕಾರಾತ್ಮಕ ಪ್ರಭಾವಗಳನ್ನು ಕಡಿಮೆ ಮಾಡಿ, ಸಮೃದ್ಧಿಯನ್ನು ನೀಡುತ್ತಾನೆ. ಪ್ರತಿಯೊಂದು ನವಗ್ರಹಗಳೂ ಒಂದೊಂದು ರೀತಿಯಲ್ಲಿ ಆಳಲ್ಪಡುತ್ತದೆ ಜೊತೆಗೆ ತಮ್ಮದೇ ಆದ ಪವಿತ್ರ ಶಕ್ತಿಯನ್ನು ಕೂಡಾ…
ಬೆಂಗಳೂರು: : ಜನವರಿ 18ರಿಂದ ಭಾರತ್ ಗೌರವ್ ದಕ್ಷಿಣ ಯಾತ್ರೆ ಆರಂಭವಾಗಲಿದೆ. ಈ ಯಾತ್ರೆ ರಾಮೇಶ್ವರ-ಕನ್ಯಾಕುಮಾರಿ-ಮಧುರೈ ಮತ್ತು ತಿರುವನಂತಪುರಂ ಅನ್ನು ಒಳಗೊಂಡಿದೆ. ಐಆರ್‌ಸಿಟಿಸಿ/ ಐಟಿಎಂಎಸ್ ವೆಬ್‌ಸೈಟ್ ಮೂಲಕ 18/1/2024ರಿಂದ ಬುಕ್ಕಿಂಗ್ ಆರಂಭವಾಗಲಿದೆ ಆಂತ ತಿಳಿಸಲಾಗಿದೆ. ಈ ವಿಶೇಷ ರೈಲು ಹೊರಡಲಿರುವ ದಿನಾಂಕಗಳು. ನಿರ್ಗಮನ 18/1/2024, ಆಗಮನ 23/1/2024. ನಿರ್ಗಮನ 30/1/2024, ಆಗಮನ 4/2/2024 ಆಗಿದೆ. ರಾಮೇಶ್ವರ- ರಾಮೇಶ್ವರ ದೇವಾಲಯ. ಕನ್ಯಾಕುಮಾರಿ- ಶ್ರೀ ಭಗವತಿ ದೇವಾಲಯ. ಮಧುರೈ- ಶ್ರೀ ಮೀನಾಕ್ಷಿ ದೇವಾಲಯ. ತಿರುವನಂತಪುರಂ- ಶ್ರೀ ಅನಂತಪದ್ಮನಾಭ ಸ್ವಾಮಿ ದೇವಾಲಯಗಳ ದರ್ಶನವನ್ನು ಈ ಪ್ಯಾಕೇಜ್ ನಲ್ಲಿ ನೀಡಲಾಗುತ್ತದೆ. ರೈಲು ಹತ್ತುವ ಮತ್ತು ಇಳಿಯುವ ನಿಲ್ದಾಣಗಳು ಬೆಳಗಾವಿ, ಹುಬ್ಬಳ್ಳಿ, ಬೀರೂರು, ತುಮಕೂರು, ಹಾವೇರಿ, ದಾವಣಗೆರೆ, ಯಶವಂತಪುರ ಆಗಿವೆ. ಯಾತ್ರೆಯ ಒಟ್ಟು ಪ್ಯಾಕೇಜ್ ಮೊತ್ತ 15,000 ರೂ.ಗಳು. ಕರ್ನಾಟಕ ಸರ್ಕಾರದಿಂದ ಸಹಾಯಧನ 5000 ರೂ.ಗಳು. ಯಾತ್ರಿಯ ಪಾವತಿಸಬೇಕಾದ ಮೊತ್ತ ಕೇವಲ 10,000 ರೂ.ಗಳು ಆಗಿವೆ. https://twitter.com/KarnatakaVarthe/status/1743637994157002964
ಬೆಂಗಳೂರು: ಸರ್ಕಾರದ ಸೂಚನೆಯಂತೆ ಬೆಸ್ಕಾಂ ರೈತರ ಪಂಪ್‍ಸೆಟ್‍ಗಳಿಗೆ ನಿರಂತರ ವಿದ್ಯುತ್ ಪೂರೈಕೆಗೆ ಬದ್ದವಾಗಿದ್ದು ಮಳೆಯ ಕೊರತೆಯ ನಡುವೆ ಬೇಸಿಗೆ ನಿರ್ವಹಣೆಗಾಗಿ ಸಾವಿರ ಮೆಗಾವ್ಯಾಟ್ ವಿದ್ಯುತ್ ಖರೀದಿಗೆ ಟೆಂಡರ್ ಕರೆಯಲಾಗಿದೆ ಎಂದು ಬೆಸ್ಕಾಂ ಎಂ.ಡಿ. ಮಹಂತೇಶ್ ಬೀಳಗಿ ತಿಳಿಸಿದರು. ಅವರು ಭಾನುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜನಪ್ರತಿನಿಧಿಗಳೊಂದಿಗೆ ದಾವಣಗೆರೆ ಜಿಲ್ಲಾ ಬೆಸ್ಕಾಂ ಕುಂದು ಕೊರತೆಯ ಸಭೆಯಲ್ಲಿ ಮಾತನಾಡಿದರು. ಈ ವರ್ಷ ಮುಂಗಾರು ಮಳೆಯ ಕೊರತೆಯಿಂದ ಜಲಾಶಯಗಳಲ್ಲಿ ನೀರು ಸಂಗ್ರಹ ಕಡಿಮೆಯಾಗಿದ್ದು ರೈತರು ಪಂಪ್‍ಸೆಟ್‍ಗಳ ಮೇಲೆಯೇ ಜೂನ್ ತಿಂಗಳಿನಿಂದಲೂ ಅವಲಂಭಿತವಾಗಿದ್ದರಿಂದ ತೀವ್ರ ವಿದ್ಯುತ್ ಕೊರತೆಯನ್ನು ಎದುರಿಸಬೇಕಾಗಿದೆ. ಕೊರತೆಯನ್ನು ನೀಗಿಸಲು ಈಗಾಗಲೇ ಜಿಂದಾಲ್, ಸಕ್ಕರೆ ಕಾರ್ಖಾನೆಗಳು, ಯು.ಪಿ.ಸಿ.ಎಲ್, ಸೋಲಾರ್, ವಿಂಡ್‍ಮಿಲ್ ಮೂಲಕ ವಿದ್ಯುತ್ ಖರೀದಿ ಮಾಡಲಾಗುತ್ತಿದೆ. ಈಗ ಯಾವುದೇ ವಿದ್ಯುತ್ ಕೊರತೆಯಾಗದಂತೆ ಪೂರೈಕೆ ಮಾಡಲಾಗುತ್ತಿದೆ. ಬೇಸಿಗೆ ಆರಂಭವಾಗುತ್ತಿದ್ದು ಈ ದಿನಗಳಲ್ಲಿ ಇನ್ನಷ್ಟು ವಿದ್ಯುತ್ ಅಭಾವವಾಗಬಹುದೆಂದು ಸಾವಿರ ಮೆಗಾವ್ಯಾಟ್ ವಿದ್ಯುತ್ ಖರೀದಿಗೆ ಟೆಂಡರ್ ಕರೆಯಲಾಗಿದ್ದು ಬೇಸಿಗೆಯಲ್ಲಿ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ಈ ಬಗ್ಗೆ ಯಾರಿಗೂ ಆತಂಕ…
ವಸಂತ್ ಬಿ ಈಶ್ವರಗೆರೆ ಬೆಂಗಳೂರು: 2023-24ನೇ ಸಾಲಿನಲ್ಲಿ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳನ್ನು ಭರ್ತಿ ಮಾಡಲು ಕೆ.ಪಿ.ಎಸ್.ಸಿ ಹೊರಡಿಸಿರುವ ಅಧಿಸೂಚನೆಯಲ್ಲಿ ಎಲ್ಲಾ ಅರ್ಹ ಅಭ್ಯರ್ಥಿಗಳಿಗೆ ಒಂದು ಬಾರಿಯ ಕ್ರಮವಾಗಿ (One time measure) ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡುವ ಬಗ್ಗೆ ಶುಕ್ರವಾರ ನಡೆದ ಸಚಿವ ಸಂಪುಟದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೆಲವು ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆ ಆಕಾಂಕ್ಷಿಗಳು ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸಿ ಕರ್ನಾಟಕ ಲೋಕಸೇವಾ ಆಯೋಗದಿಂದ ಅಧಿಸೂಚನೆಗೊಳ್ಳಲಿರುವ ಗೆಜೆಟೆಡ್ ಪ್ರೊಬೇಷನರ್ಸ್ ಗ್ರೂಪ್-ಎ ಮತ್ತು ಗ್ರೂಪ್-ಬಿ ಹುದ್ದೆಗಳಿಗೆ ಹಾಜರಾಗಲು ಗೆಜೆಟೆಡ್ ಪ್ರೊಬೇಷನರ್ಸ್ ಗ್ರೂಪ್-ಎ ಮತ್ತು ಗ್ರೂಪ್-ಬಿ ಹುದ್ದೆಗಳಿಗೆ ಹಾಜರಾಗಲು ಗರಿಷ್ಠ ವಯೋಮಿತಿಯನ್ನು ಒಂದು ಬಾರಿಯ ಕ್ರಮವಾಗಿ ಗರಿಷ್ಠ 3 ವರ್ಷಗಳವರೆಗೆ ಸಡಿಲಿಸಲು ಪ್ರಸ್ತಾಪಿಸಿದೆ. ವರ್ಗ ಈಗಿರುವ ವಯೋಮಿತಿ ವಿಸ್ತರಿತ ವಯೋಮಿತಿ ವರ್ಗ ಈಗಿರುವ ವಯೋಮಿತಿ ವಿಸ್ತರಿತ ವಯೋಮಿತಿ ಸಾಮಾನ್ಯ 35 ವರ್ಷ 38 ವರ್ಷ ಪ್ರವರ್ಗ 2ಎ, 2ಬಿ, 3ಎ, 3ಬಿ 38 ವರ್ಷ 41 ವರ್ಷ ಪ.ಪಂ. ಪ್ರವರ್ಗ-1 40 ವರ್ಷ 43…
ಬೆಂಗಳೂರು: ಜನವರಿ 17 ರಿಂದ ರಾಜ್ಯದಾದ್ಯಂತ ಟ್ರಕ್ ಚಾಲಕರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ ಎಂದು ಫೆಡರೇಶನ್ ಆಫ್ ಕರ್ನಾಟಕ ಲಾರಿ ಮಾಲೀಕರ ಸಂಘ ಶನಿವಾರ ಪ್ರಕಟಿಸಿದೆ. ಹೊಸ ಭಾರತೀಯ ನ್ಯಾಯ್ ಸಂಹಿತಾ (ಬಿಎನ್ಎಸ್) ಅಡಿಯಲ್ಲಿ ಹಿಟ್ ಅಂಡ್ ರನ್ ಪ್ರಕರಣಗಳಿಗೆ ಕಠಿಣ ಕಾನೂನುಗಳನ್ನು ವಿರೋಧಿಸಿ ಮುಷ್ಕರ ನಡೆಸಲಾಗುತ್ತಿದೆ ಎನ್ನಲಾಗಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಫೆಡರೇಶನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ಸಿ.ನವೀನ್ ರೆಡ್ಡಿ, ಈ ಅಶಿಸ್ತಿನ ಕಾನೂನಿನ ಬಗ್ಗೆ ಚರ್ಚಿಸಲು ಕೇಂದ್ರ ಸರ್ಕಾರ ನಮ್ಮನ್ನು ಕರೆದಿದ್ದರೂ, ಅಧಿಕಾರಿಗಳು ಲಿಖಿತವಾಗಿ ಏನನ್ನೂ ನೀಡಿಲ್ಲ. ಇದು ಕೇಂದ್ರ ಸರ್ಕಾರದ ಏಕಪಕ್ಷೀಯ ನಿರ್ಧಾರವಾಗಿದೆ ಮತ್ತು ಅಂತಹ ಆತುರದ ನಿರ್ಧಾರಕ್ಕೆ ಬರುವ ಮೊದಲು ಅವರು ನಮ್ಮೊಂದಿಗೆ ಸಮಾಲೋಚಿಸಲಿಲ್ಲ ಎಂದು ಅವರು ಹೇಳಿದರು. ರಾಜ್ಯದ ಎಲ್ಲಾ ಟ್ರಕ್ ಚಾಲಕರು ಮುಷ್ಕರವನ್ನು ಬೆಂಬಲಿಸುತ್ತಾರೆ ಮತ್ತು ತಮ್ಮ ವಾಹನಗಳನ್ನು ರಸ್ತೆಯಿಂದ ದೂರವಿಡುತ್ತಾರೆ ಎಂದು ರೆಡ್ಡಿ ಹೇಳಿದರು. ನಾವು ಈಗಾಗಲೇ ರಾಜ್ಯದ ಎಲ್ಲಾ ಟ್ರಕ್ ಚಾಲಕರಿಗೆ ಮಾಹಿತಿ ನೀಡಿದ್ದೇವೆ ಮತ್ತು ನಾವು…
ಬೆಂಗಳೂರು : ರಾಜ್ಯ ಸರ್ಕಾರದಿಂದ ʻಗೃಹಲಕ್ಷ್ಮಿʼ ಯರಿಗೆ ಭರ್ಜರಿ ಗುಡ್ ನ್ಯೂಸ್ ನೀಡಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ಪ್ರತಿ ತಿಂಗಳು ನೀಡುತ್ತಿರುವ ಹಣವನ್ನು ಚಿಟ್‌ಫಂಡ್‌ಗೆ ವಿನಿಯೋಗ ಮಾಡಿಸುವುದಕ್ಕೆ ಮುಂದಾಗಲಿದೆ ಎನ್ನಲಾಗಿದೆ. ಮಹಿಳೆಯರಿಗೆ ಗೃಹಲಕ್ಷ್ಮಿಯ ಯೋಜನೆಯಿಂದ ಹಣ ಬರುತ್ತಿರುವುದರಿಂದ ಸರ್ಕಾರಿ ಸ್ವಾಮ್ಯದ ಎಂಎಸ್‌ಐಎಲ್ ಚಿಟ್‌ಫಂಡ್ ಉನ್ನತೀಕರಣಕ್ಕೆ ಪ್ಲ್ಯಾನ್ ಮಾಡಲಾಗಿದ್ದು, ಸರ್ಕಾರ ನೀಡುತ್ತಿರುವ ʻಗೃಹಲಕ್ಷ್ಮಿʼ ದುಡ್ಡನ್ನು ಮಹಿಳೆಯರು ಚಿಟ್‌ಫಂಡ್‌ನಲ್ಲಿ (Chit Fund) ಹೂಡಿಕೆ ಮಾಡುವ ಬೊಂಬಾಟ್ ಸ್ಕೀಮ್‌ನ್ನು ತರಲು ಚಿಂತನೆ ಮಾಡಿದೆ. ಎಲ್ಲವೂ ಅಂದುಕೊಂಡ ರೀತಿ ಆದಲ್ಲಿ ಏಪ್ರಿಲ್‌ನಲ್ಲಿ ಈ ಯೋಜನೆ ಜಾರಿಗೆ ಬರಲಿದೆ ಎನ್ನಲಾಗುತ್ತಿದೆ. ಕಡಿಮೆ ಆದಾಯದ ಗುಂಪುಗಳು, ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿ ವ್ಯಕ್ತಿಗಳಲ್ಲಿ ಜನಪ್ರಿಯವಾಗಿರುವ ಚಿಟ್ ಫಂಡ್ ಸದಸ್ಯರು ನಿರ್ದಿಷ್ಟ ಅವಧಿಗೆ ಪೂರ್ವನಿರ್ಧರಿತ ಮೊತ್ತವನ್ನು ಠೇವಣಿ ಮಾಡಲು ಒಪ್ಪುವುದನ್ನು ಒಳಗೊಂಡಿರುತ್ತದೆ ಎನ್ನಲಾಗಿದೆ. ಜೀವ ವಿಮಾ ನಿಗಮ (ಎಲ್ಐಸಿ) ಯಂತೆಯೇ, ಸರ್ಕಾರವು ‘ಉಳಿತಾಯ ಸಖಿಗಳನ್ನು’ ಏಜೆಂಟರಾಗಿ ನೇಮಿಸುತ್ತದೆ, ಅವರು ಚಿಟ್ ಫಂಡ್ ವ್ಯವಹಾರಕ್ಕಾಗಿ ಪ್ರತಿ ದಾಖಲಾತಿಗೆ ಪ್ರೋತ್ಸಾಹಕಗಳನ್ನು ಪಡೆಯುತ್ತಾರೆ ಎನ್ನಲಾಗಿದೆ.
ಕೆಎನ್‌ಎನ್‌ಸಿನಿಮಾಡೆಸ್ಕ್:ಸ್ಟಾರ್ ಯಶ್ ಹುಟ್ಟುಹಬ್ಬ ಹಿನ್ನೆಲೆ ‘ಟಾಕ್ಸಿಕ್’ ಸಿನಿಮಾದ ಅಪ್ಡೇಟ್ಸ್ ಸಿಗಬಹುದೆಂಬ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ. ಇಂದು38ನೇ ವಸಂತಕ್ಕೆ ಕಾಲಿಡಲಿದ್ದಾರೆ ಕೆಜಿಎಫ್ ಸ್ಟಾರ್. ಅಪಾರ ಸಂಖ್ಯೆಯ ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ಜನ್ಮದಿನವನ್ನು ವಿಶೇಷವಾಗಿ ಆಚರಿಸಲು ಸಜ್ಜಾಗಿದ್ದಾರೆ. ಆದರೆ ನಟ ಯಶ್ ಅವರು ಕೆಲ ದಿನಗಳ ಹಿಂದೆ ಇಂದು ತಮ್ಮೊಟ್ಟಿಗೆ ಇರುವುದಿಲ್ಲ ಅಂತ ಹೇಳಿಕೊಂಡಿದ್ದಾರೆ. ಜನವರಿ 8.. ನೀವು ನನ್ನ ಮೇಲಿಟ್ಟಿರುವ ಅಭಿಮಾನವನ್ನ ನನ್ನ ಜೊತೆ ಖುದ್ದು ವ್ಯಕ್ತಪಡಿಸಬೇಕೆಂದು ಅಪೇಕ್ಷೆ ಪಡುವ ದಿನ.. ನನಗೂ ಅಷ್ಟೇ.. ಜನ್ಮದಿನದ ನೆಪದಲ್ಲಿ ನಿಮ್ಮೊಂದಿಗೆ ಸಮಯ ಕಳೆಯುವ ಹಂಬಲ ಆದರೆ ಸಿನಿಮಾದ ಕೆಲಸ ನನಗೆ ಬಿಡುವಿಲ್ಲದಂತೆ ಮಾಡಿದೆ ಅನಿವಾರ್ಯವಾಗಿ ಪ್ರಯಾಣ ಮಾಡಲೇಬೇಕಿರುವುದರಿಂದ ಈ ಜನವರಿ 8 ನಿಮಗೆ ಸಿಗಲು ಸಾಧ್ಯವಾಗುತ್ತಿಲ್ಲ.. ನಿಮ್ಮಗಳ ಅಭಿಮಾನ ನನ್ನ ಅನುಪಸ್ಥಿತಿಯನ್ನ ಅರ್ಥ ಮಾಡಿಕೊಳ್ಳುತ್ತದೆ ಎಂಬ ನಂಬಿಕೆ ನನ್ನದು.. ಸದಾಕಾಲ ನನ್ನ ಜೊತೆ ಇರುವ ನಿಮ್ಮ ಪ್ರೀತಿ, ಅಭಿಮಾನವೇ ನನಗೆ ಹುಟ್ಟುಹಬ್ಬದ ಉಡುಗೊರೆ.. ನಿಮ್ಮ ಪ್ರೀತಿಯ ಯಶ್ ಈ ಮೇಲ್ಕಂಡ ರೀತಿಯಲ್ಲಿ ಅವರು ಮಾಹಿತಿ…












