Author: kannadanewsnow07

ನವದೆಹಲಿ: ಮಿಜೋರಾಂನ ಲುಂಗ್ಲೈನಲ್ಲಿ ಶುಕ್ರವಾರ ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆಯ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಬೆಳಿಗ್ಗೆ 7:18 ಕ್ಕೆ ಭೂಕಂಪ ಸಂಭವಿಸಿದೆ.  ಮಿಜೋರಾಂನ ಲುಂಗ್ಲೈನಲ್ಲಿ ಬೆಳಿಗ್ಗೆ 7:18 ಕ್ಕೆ ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. https://twitter.com/ANI/status/1743107687330844945

Read More

ಬೆಂಗಳೂರು: ಕರ್ನಾಟಕ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ “ಯುವನಿಧಿ” ಯೋಜನೆಯ ಫಲಾನುಭವಿಗಳ ನೋಂದಣಿಗೆ ಸನ್ಮಾನ್ಯ ಮುಖ್ಯಮಂತ್ರಿಗಳು 2023 ನೇ ಡಿಸೆಂಬರ್ 26 ರಂದು ಚಾಲನೆ ನೀಡಿದ್ದು, ನೋಂದಣಿ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. ಈ ಯೋಜನೆಯ ಅಡಿಯಲ್ಲಿ 2022-23ನೇ ಶೈಕ್ಷಣಿಕ ಸಾಲಿನಲ್ಲಿ ಅಧ್ಯಯನ ಮಾಡಿ 2023ರಲ್ಲಿ ತೇರ್ಗಡೆಯಾಗಿ, ತೇರ್ಗಡೆಯಾದ ದಿನಾಂಕದಿಂದ 180 ದಿನ ಕಳೆದರೂ ಉದ್ಯೋಗ ಲಭಿಸದ ಪದವೀಧರ ನಿರುದ್ಯೋಗಿಗಳಿಗೆ (ವ್ಯತಿಪರ ಕೋರ್ಸ್‍ಗಳು ಸೇರಿದಂತೆ) ಪ್ರತಿ ತಿಂಗಳು ರೂ. 3,000/- ನಿರುದ್ಯೋಗ ಭತ್ಯೆ ಹಾಗೂ ಡಿಪೆÇ್ಲೀಮಾ ಪಾಸಾದ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ರೂ. 1,500/- ನಿರುದ್ಯೋಗ ಭತ್ಯೆಯನ್ನು ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ ಎರಡು ವರ್ಷಗಳ ಅವಧಿಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ನೀಡಲಾಗುತ್ತದೆ. ಅನ್ವಯವಾಗುವ ನಿರುದ್ಯೋಗ ಭತ್ಯೆಯನ್ನು ಫಲಾನುಭಾವಿಗಳ ಬ್ಯಾಂಕ್ ಖಾತೆಗಳಿಗೆ ಡಿ.ಬಿ.ಟಿ ಮೂಲಕ ವರ್ಗಾವಣೆ ಮಾಡಲಾಗುತ್ತದೆ. ನಿರುದ್ಯೋಗ ಸ್ಥಿತಿಯ ಬಗ್ಗೆ ಉದ್ಯೋಗ ಪಡೆದ ನಂತರ ತಪ್ಪು ಘೋಷಣೆ ಅಥವಾ ಘೋಷಿಸಲು ವಿಫಲವಾದರೆ ದಂಡ ವಿಧಿಸಲಾಗುವುದು. ಪದವಿ/ಡಿಪೆÇ್ಲೀಮಾ ನಂತರ ಉನ್ನತ ವ್ಯಾಸಂಗಕ್ಕೆ ದಾಖಲಾತಿ ಹೊಂದಿ…

Read More

ಬಳ್ಳಾರಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ “ಯುವ ಸ್ಪಂದನ” ಕಾರ್ಯಕ್ರಮದಡಿಯಲ್ಲಿ ಹೊಸದಾಗಿ ಯುವ ಸಮಾಲೋಚಕರು ಹಾಗೂ ಯುವ ಪರಿವರ್ತಕರ ತರಬೇತಿಗೆ ಆಯ್ಕೆ ಮಾಡಲು ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಗ್ರೇಸಿ ಅವರು ತಿಳಿಸಿದ್ದಾರೆ. ಯುವಜನತೆಗೆ ಸಂಬಂಧಿಸಿದ ವಿಷಯಗಳಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ(ನಿಮ್ಹಾನ್ಸ್) ಬೆಂಗಳೂರು ಇಲ್ಲಿ ತರಬೇತಿ ಪಡೆಯಲಿದ್ದು, ಅಲ್ಲಿ ಆಯ್ಕೆಯಾದ ನಂತರ ಯುವ ಪರಿವರ್ತಕ ಯುವ ಸಮಾಲೋಚಕರೆಂದು ಪ್ರಮಾಣೀಕರಿಸಲಾಗುತ್ತದೆ. *ಯುವ ಪರಿವರ್ತಕರು:* ಬಳ್ಳಾರಿ, ಕಂಪ್ಲಿ, ಸಿರುಗುಪ್ಪ, ಸಂಡೂರು, ಕುರುಗೋಡು ತಾಲ್ಲೂಕಿನಲ್ಲಿ 06 ಯುವ ಪರಿವರ್ತಕರ ಹುದ್ದೆ ಖಾಲಿಯಿರುತ್ತವೆ. *ಶೈಕ್ಷಣಿಕ ಅರ್ಹತೆ:* ಪದವಿ ಹಾಗೂ ಮೇಲ್ಪಟ್ಟು (Psychology/Social work) ಪದವಿ ತೇರ್ಗಡೆ ಹೊಂದಿರಬೇಕು. ಸಮುದಾಯದಲ್ಲಿ ಕೆಲಸ ಮಾಡಿ ಅನುಭವ ಇರುವವರಿಗೆ ಆದ್ಯತೆ. ಸಾರ್ವಜನಿಕರ ಮಾನಸಿಕ ಆರೋಗ್ಯ ಸಂವರ್ಧನ…

Read More

ಬೆಂಗಳೂರು: ರಾಜ್ಯ ಸರ್ಕಾರದ ಐದನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆಗೆ ಡಿಸೆಂಬರ್ 26 ರಿಂದ ನೋಂದಣಿ ಶುರುವಾಗಿದ್ದು ಈ ನಡುವೆ ಇದೇ ಜನವರಿ 12ರಂದು ಸಿಎಂ ಸಿದ್ದರಾಮಯ್ಯ ಅವರು ಶಿವಮೊಗ್ಗದಲ್ಲಿ ಅಧಿಕೃತವಾಗಿ ಚಾಲನೆಯನ್ನು ನೀಡಲಿದ್ದಾರೆ. ಈ ನಡುವೆ ಅರ್ಹರಿಗೆ ಯೋಜನೆಗೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಯಾವೆಲ್ಲ ದಾಖಲೆಗಳು ಬೇಕು? ಎಲ್ಲಿ ಅರ್ಜಿ ಸಲ್ಲಿಸಬಹುದು? ಈ ಎಲ್ಲಾ ಮಾಹಿತಿ ತಿಳಿಯಲು ಸಿಎಂ ಸಿದ್ದರಾಮುಯ್ಯ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹಾಗಾದ್ರೇ ಅರ್ಜಿ ಸಲ್ಲಿಕೆಗೆ ಅರ್ಹತೆಗಳು ಏನು? 1) 2023ರಲ್ಲಿ ಪದವಿ/ಡಿಪ್ಲೋಮಾ ಉತ್ತೀರ್ಣರಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಆರ್ಹರಿದ್ದಾರೆ. 2) ಪದವಿ/ಡಿಪ್ಲೋಮಾ ನಂತರ ಕನಿಷ್ಠ 6 ತಿಂಗಳ ಅವಧಿಯವರೆಗೆ ಸರ್ಕಾರಿ/ ಖಾಸಗಿ ಉದ್ಯೋಗ ಹೊಂದಿಲ್ಲದವರು ಅರ್ಜಿ ಸಲ್ಲಿಸಬಹುದಾಗಿದೆ. 3) ಸ್ವಯಂ ಉದ್ಯೋಗ ಹೊಂದಿಲ್ಲದವರು ಕೂಡ ಅರ್ಜಿ ಸಲ್ಲಿಸಬಹುದು 4) ಉನ್ನತ ವಿದ್ಯಾಭ್ಯಾಸ ಮುಂದುವರಿಸದೇ ಇರುವವರು ಕೂಡ ಅರ್ಹರು 5) ಕರ್ನಾಟಕದಲ್ಲಿ ವಾಸವಿರುವವರು (ಕನಿಷ್ಠ 6 ವರ್ಷಗಳವರೆಗೆ ಪದವಿ/ಡಿಪ್ಲೋಮಾದವರೆಗೆ ಅಧ್ಯಯನ…

Read More

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ಕರ್ಕಾಟಕ ರಾಶಿಗೆ 2024 ಹೊಸ ವರ್ಷದಲ್ಲಿ ಕೌಟುಂಬಿಕ ಜೀವನ, ವೈವಾಹಿಕ ಜೀವನ, ಪ್ರೇಮ, ಶಿಕ್ಷಣ, ಉದ್ಯೋಗ, ಆರೋಗ್ಯ, ವ್ಯಾಪಾರ, ವೃತ್ತಿ, ಆರ್ಥಿಕ ಸ್ಥಿತಿ, ಸಂಪತ್ತು ಮತ್ತು ಲಾಭಗಳು, ಮಕ್ಕಳ ಭವಿಷ್ಯ, ವಾಹನ ಮತ್ತು ಆಸ್ತಿ ಸಂಬಂಧಿತ ಮಾಹಿತಿಯನ್ನು ಜ್ಯೋತಿಷ್ಯದ ಮೂಲಕ ತಿಳಿಯಬಹುದು. ಈ ಬಗ್ಗೆ ಮಾಹಿತಿ ಇಲ್ಲಿದೆ. ಆದಾಯ–ಈ ವರ್ಷ ಸಿಂಹ ರಾಶಿಯವರಿಗೆ ಆದಾಯ 14 ಖರ್ಚು 2. ಆದಾಯ ತುಂಬಾ ಚೆನ್ನಾಗಿ ಇರುತ್ತದೆ. ಆದಷ್ಟು ಅಗತ್ಯ ಇರುವಾಗ ದುಡ್ಡು ತೆಗೆಯುವುದು ತುಂಬಾ ಒಳ್ಳೆಯದು. ಖರ್ಚು ಕಡಿಮೆ ಇರುತ್ತದೆ ಮತ್ತು ಆರ್ಥಿಕ ಪರಿಸ್ಥಿತಿ ಈ ವರ್ಷ ತುಂಬಾ ಚೆನ್ನಾಗಿ ಇರುತ್ತದೆ.ಅಷ್ಟಮ ಶನಿ ಕಾಟ ಈ ವರ್ಷ ಕಡಿಮೆ ಆಗುತ್ತದೆ. ನಿಂತು ಹೋದ ಕೆಲಸ ತುಂಬಾ ಸರಳವಾಗು ಸಾಗುತ್ತದೆ.ಜನವರಿ ರಿಂದ ಏಪ್ರಿಲ್ 30ರ ವರೆಗೂ ಗುರು ನಿಮಗೆ 10ನೇ ಸ್ಥಾನದಲ್ಲಿ ಇರುವುದರಿಂದ ನೀವು…

Read More

ಕಷ್ಟದಲ್ಲಿರುವವರಿಗೆ ದಾನಮಾಡುವುದು ತುಂಬಾ ಶ್ರೇಷ್ಠವಾದ ಕೆಲಸ. ಕಷ್ಟದಲ್ಲಿರುವವರಿಗೆ ಅನ್ನ ದಾನ, ಧನ ದಾನ ಮಾಡಬಹುದು, ಆದರೆ ವಸ್ತ್ರದಾನವನ್ನು ಯಾವ ರಾಶಿಯವರು ದಾನ ಮಾಡಬಾರದು ಹಾಗೂ ಯಾವ ರಾಶಿಯವರು ಆ ದಾನವನ್ನು ತೆಗೆದುಕೊಳ್ಳಬಾರದು ಎಂಬುದು ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ತೊಟ್ಟ ಬಟ್ಟೆಯನ್ನು ಕೆಲವು ರಾಶಿಯವರು ದಾನವನ್ನು ಮಾಡುವಂತಿಲ್ಲ ಹಾಗೆಯೇ ಇನ್ನು ಕೆಲವು ರಾಶಿಯವರು ಆ ದಾನವನ್ನು ಸ್ವೀಕರಿಸುವಂತಿಲ್ಲ. ಮೇಷ, ವೃಶ್ಚಿಕ ರಾಶಿಗೆ ಮಂಗಳನೆ ಅಧಿಪತಿ, ಈ ಎರಡು ರಾಶಿಗೂ ಮಂಗಳನೆ ಅಧಿಪತಿ ಆಗಿರುವುದರಿಂದ ಯಾವುದೇ ಕಾರಣಕ್ಕೂ ದಾನವನ್ನು ನೀಡುವಂತಿಲ್ಲ. ಈ ರಾಶಿಯವರ ಮೇಲೆ ಅತಿ ಹೆಚ್ಚು ಸುಬ್ರಹ್ಮಣ್ಯ ಸ್ವಾಮಿಯ ಅನುಗ್ರಹ ಇರುತ್ತದೆ, ಆದ್ದರಿಂದ ಈ ರಾಶಿಯವರು ಯಾರಿಗೂ ದಾನವನ್ನು ಕೊಡುವ ಹಾಗಿಲ್ಲ ಹಾಗೆಯೇ ಸ್ವೀಕರಿಸುವ ಹಾಗಿಲ್ಲ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ವೃಷಭ, ತುಲಾ ರಾಶಿಗೆ ಅಧಿಪತಿ ಶುಕ್ರ, ಶುಕ್ರ ಗ್ರಹ ಆಭರಣ ಪ್ರಿಯ, ಸೌಂದರ್ಯ ಪ್ರಿಯ ಹಾಗಾಗಿ…

Read More

ನವದೆಹಲಿ : ಹೊಸ ಹಿಟ್ ಅಂಡ್ ರನ್ ಕಾನೂನಿನ ಪ್ರಕಾರ ಶಿಕ್ಷೆಯ ವಿರುದ್ಧ ಖಾಸಗಿ ಮತ್ತು ಟ್ರಕ್ ಚಾಲಕರು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಹೊಸ ಕಾನೂನು ಏನು ಹೇಳುತ್ತದೆ.? ಇದು ಹಳೆಯದಕ್ಕಿಂತ ಹೇಗೆ ಭಿನ್ನವಾಗಿದೆ.? ಇದು ಚಾಲಕರ ಮೇಲೆ ಹೇಗೆ ಪರಿಣಾಮ ಬೀರುತ್ತದೆ.? ಮುಂದಿದೆ ವಿವರ. ಹಳೆಯ, ಬ್ರಿಟಿಷ್ ಯುಗದ ಕಾನೂನು ಎಂದು ಪರಿಗಣಿಸಲಾದ ಭಾರತೀಯ ದಂಡ ಸಂಹಿತೆ (ಐಪಿಸಿ) ಅನ್ನು ಭಾರತೀಯ ನ್ಯಾಯ ಸಂಹಿತಾ (BNS) ಎಂದು ಬದಲಾಯಿಸಲಾಗಿದೆ. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಮಂಡಿಸಿದರು ಮತ್ತು ಇತ್ತೀಚೆಗೆ ಸಂಸತ್ತಿನ ಉಭಯ ಸದನಗಳ ಒಪ್ಪಿಗೆಯನ್ನ ಪಡೆದರು; ಈ ಕಾನೂನಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಒಪ್ಪಿಗೆಯೂ ದೊರೆತಿದೆ. ಭಾರತೀಯ ನ್ಯಾಯ ಸಂಹಿತಾ ಪ್ರಕಾರ ಭಾರತದಲ್ಲಿ ಹಿಟ್ ಅಂಡ್ ರನ್ ಪ್ರಕರಣಗಳಿಗೆ ಹೊಸ ಶಿಕ್ಷೆಯ ನಿಬಂಧನೆಗಳು ಖಾಸಗಿ ಮತ್ತು ಟ್ರಕ್ ಚಾಲಕರಿಗೆ ಇಷ್ಟವಾಗುತ್ತಿಲ್ಲ; ಇದರ ವಿರುದ್ಧ ದೇಶಾದ್ಯಂತ ‘ಚಕ್ಕಾ ಜಾಮ್’ ಪ್ರತಿಭಟನೆ ನಡೆಸಲಾಗುತ್ತಿದೆ. ಹೊಸ ಕಾನೂನು…

Read More

ಪೆರ್ರಿ: ಅಮೆರಿಕದ ಅಯೋವಾದ ಪೆರ್ರಿ ಹೈಸ್ಕೂಲ್‌ನಲ್ಲಿ ಗುರುವಾರ ಬೆಳಗ್ಗೆ ನಡೆದ ಗುಂಡಿನ ದಾಳಿಯಲ್ಲಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕ್ರಿಮಿನಲ್ ಇನ್ವೆಸ್ಟಿಗೇಶನ್‌ನ ಸಾರ್ವಜನಿಕ ಸುರಕ್ಷತಾ ವಿಭಾಗದ ಅಯೋವಾ ಇಲಾಖೆಯ ಸಹಾಯಕ ನಿರ್ದೇಶಕ ಮಿಚ್ ಮೊರ್ಟ್‌ವೆಡ್ ಪ್ರಕಾರ, ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ಶಂಕಿತ ಶೂಟರ್ ಸಹ ಸ್ವಯಂ-ಉಂಟುಮಾಡಿಕೊಂಡ ಗುಂಡಿನ ಗಾಯದಿಂದ ಸತ್ತಿದ್ದಾನೆ. ಗುಂಡು ಹಾರಿಸಿದವರಲ್ಲಿ ಆರನೇ ತರಗತಿ ವಿದ್ಯಾರ್ಥಿ ಸೇರಿದಂತೆ ಐವರು ವಿದ್ಯಾರ್ಥಿಗಳು ಸೇರಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಪೆರ್ರಿ ಹೈಸ್ಕೂಲ್ ಪ್ರಿನ್ಸಿಪಾಲ್ ಡಾನ್ ಮಾರ್ಬರ್ಗರ್ ಕೂಡ ಗುಂಡು ಹಾರಿಸಿದವರಲ್ಲಿ ಸೇರಿದ್ದಾರೆ ಎಂದು ಪೆರ್ರಿ ಸಮುದಾಯ ಶಾಲಾ ಮಂಡಳಿ ಮತ್ತು ಈಸ್ಟನ್ ವ್ಯಾಲಿ ಸ್ಕೂಲ್ ಡಿಸ್ಟ್ರಿಕ್ಟ್ ದೃಢಪಡಿಸಿದೆ. ಓರ್ವ ಬಲಿಪಶು ಗಂಭೀರ ಸ್ಥಿತಿಯಲ್ಲಿದ್ದರೆ, ಇತರ ನಾಲ್ವರು ಸ್ಥಿರವಾಗಿದ್ದಾರೆ ಎಂದು ಮೊರ್ಟ್ವೆಡ್ ಹೇಳಿದರು. https://kannadanewsnow.com/kannada/belagavi-anganavadi-beat-arrest/ https://kannadanewsnow.com/kannada/two-cases-of-sub-variant-jn-1-detected-in-odisha/ https://kannadanewsnow.com/kannada/belagavi-anganavadi-beat-arrest/ https://kannadanewsnow.com/kannada/two-cases-of-sub-variant-jn-1-detected-in-odisha/

Read More

ಹೆಸರಾಂತ ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ ಅವರಿಗೆ ಭಾರತೀಯ ಜನತಾ ಪಕ್ಷವು ಮಹತ್ವದ ಹೊಣೆಗಾರಿಕೆ ವಹಿಸಿದ್ದು,ಪಕ್ಷದ ವಕ್ತಾರರನ್ನಾಗಿ ನೇಮಕ ಮಾಡಿದೆ. ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿರುವವರಿಗೆ ಪಕ್ಷದ ಜವಾಬ್ದಾರಿ ನೀಡಿ ರಾಜಕೀಯಕ್ಕೆ ಕರೆತರುವ ಕಾರ್ಯವನ್ನು ಬಿಜೆಪಿ ರಾಷ್ಟ್ರೀಯ ನಾಯಕರು ಕಳೆದ ಕೆಲವು ವರ್ಷಗಳಿಂದ ಮಾಡುತ್ತಿದ್ದು, ಇದರ ಮುಂದುವರಿದ ಭಾಗವಾಗಿ ಕರ್ನಾಟಕದಲ್ಲಿ ಹರಿಪ್ರಕಾಶ್ ಕೋಣೆಮನೆ ಅವರು ಬಿಜೆಪಿ ಸೇರ್ಪಡೆಯಾದಂತಾಗಿದೆ. ವಿಸ್ತಾರ ಮೀಡಿಯಾ ಪ್ರೈ. ಲಿ.ನ ಪ್ರಧಾನ ಸಂಪಾದಕ ಹಾಗೂ ಸಿಇಒ ಆಗಿ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದ ಹರಿಪ್ರಕಾಶ್ ಅವರು ರಾಜಕೀಯ ಪ್ರವೇಶಕ್ಕೆ ಪೂರಕ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆ ಕಾರಣದಿಂದಾಗಿ ಸಂಸ್ಥೆಯ ಉನ್ನತ ಹುದ್ದೆಗಳಿಂದ ಈಗಾಗಲೇ ಅವರು ಹೊರಬಂದಿದ್ದಾರೆ ಎನ್ನಲಾಗಿದೆ. ಪ್ರಧಾನ ಸಂಪಾದಕ ಹಾಗೂ ಸಿಇಒ ಸ್ಥಾನಗಳಿಗೆ ಈಗಾಗಲೇ ರಾಜೀನಾಮೆ ನೀಡಿರುವ ಅವರು ಸಂಸ್ಥೆಯ ಆಡಳಿತ ಮಂಡಳಿಯ ಕೋರಿಕೆಯಂತೆ ಸಂಸ್ಥೆಯ ನಿರ್ದೇಶಕರಾಗಿ ಮುಂದುವರಿಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಲೆಕ್ಕಾಚಾರವೇನು?: ವಿವಿಧ ಕ್ಷೇತ್ರಗಳಲ್ಲಿ ಹೆಸರುವಾಸಿಯಾಗಿರುವ ಆಯ್ದ ಪ್ರಮುಖರನ್ನು ರಾಜಕೀಯಕ್ಕೆ ಕರೆತಂದು ಮಹತ್ವದ ಜವಾಬ್ದಾರಿ ನೀಡುವ ಪರಿಪಾಠವನ್ನು…

Read More

ಬೆಂಗಳೂರು: ʻಪರಿಶಿಷ್ಟ ಜಾತಿಯ ಉದ್ದಿಮೆದಾರರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದ್ದು, ʻMSMEʼ ಘಟಕ ಸ್ಥಾಪನೆಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ ಮಾಡಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ಜಾತಿಯ ಜನರ ಉದ್ದಿಮೆದಾರರಾಗುವ ಕನಸಿಗೆ ಸಮಾಜ ಕಲ್ಯಾಣ ಇಲಾಖೆಯ ಸಹಕಾರ ಎಂದು ತಿಳಿಸಿದೆ. 4% ಬಡ್ಡಿ ಸಹಾಯಧನ ಕಾರ್ಯಕ್ರಮ ನಿಮ್ಮಎಂ.ಎಸ್.ಎಂ.ಇ ಕನಸಿಗಾಗಿ ಪರಿಶಿಷ್ಟಜಾತಿಯ ಉದ್ದಿಮೆದಾರರು ಎಂ.ಎಸ್.ಎಂ.ಇ ಘಟಕಗಳನ್ನು ಸ್ಥಾಪಿಸಲು ಕೆ.ಎಸ್.ಎಫ್.ಸಿ ಹಾಗೂ ರಾಷ್ಟ್ರೀಕೃತ/ಜಿಲ್ಲಾ ಸಹಕಾರಿ ಬ್ಯಾಂಕ್/ಅಪೆಕ್ಸ್ ಸಹಕಾರಿ ಬ್ಯಾಂಕ್‌ಗಳಿಂದ ಪಡೆಯುವ ಸಾಲಕ್ಕೆ 4% ಬಡ್ಡಿ ಸಹಾಯಧನ ಸೌಲಭ್ಯ ನೀಡಲಾಗುವುದು ಅಂತ ತಿಳಿಸಿದೆ. .

Read More