Subscribe to Updates
Get the latest creative news from FooBar about art, design and business.
Author: kannadanewsnow07
ಹೈದರಾಬಾದ್: ತೆಲಂಗಾಣದಲ್ಲಿ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ತನ್ನ 12 ವರ್ಷದ ಮಗಳ ಮೇಲೆ ರೇಪ್ ಮಾಡಲು ವಿಫಲ ಯತ್ನ ನಡೆಸಿ ಕೊನೆಗೆ ಆಕೆಯನ್ನು ಕೊಲೆ ಮಾಡಿರುವ ಹೀನ ಘಟನೆ ನಡೆದಿದೆ. ಜೂನ್ 7 ರಂದು, ಆರೋಪಿಯು ತನ್ನ ಮಗಳು ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಳು. ಪೊಲೀಸರು ತನಿಖೆ ಆರಂಭಿಸುತ್ತಿದ್ದಂತೆ, ಬಾಲಕಿಯ ಕೊಳೆತ ದೇಹವು ಜೂನ್ 14 ರಂದು ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ನಂತರ, ಪೊಲೀಸರು ಈ ವಿಷಯದ ಬಗ್ಗೆ ತನಿಖೆಯನ್ನು ತೀವ್ರಗೊಳಿಸಿದರು ಮತ್ತು ತನಿಖೆ ನಡೆಸಲು ನಾಲ್ಕು ತಂಡಗಳನ್ನು ರಚಿಸಿದರು. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಪಾಪಿ ತಂಧೆ ತನ್ನ ಮಗಳನ್ನು ಹತ್ತಿರದ ಕಾಡಿಗೆ ಕರೆದೊಯ್ಯುತ್ತಿರುವುದನ್ನು ನೋಡಿದ ಬಳಿಕ ಆತನನ್ನು ಮಿಯಾಪುರ್ ಪೊಲೀಸರು ಬುಧವಾರ ಬಂಧಿಸಿದ್ದಾರೆ, ಅಲ್ಲಿ ಅಪ್ರಾಪ್ತೆಯ ದೇಹವು ನಂತರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ. ಜೂನ್ 7 ರಂದು ಬೆಳಿಗ್ಗೆ 10.02 ಕ್ಕೆ ತಂದೆ ಆಕೆಯನ್ನು ಕಾಡಿಗೆ ಕರೆದೊಯ್ದು ಬೆಳಿಗ್ಗೆ 10:14 ಕ್ಕೆ ಒಬ್ಬಂಟಿಯಾಗಿ…
ನವದೆಹಲಿ: ಇಂಡಿಯಾ ಪೋಸ್ಟ್ ಎಸ್ಎಂಎಸ್ ಹಗರಣದ ವಿರುದ್ಧ ಪಿಐಬಿ (ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ) ಫ್ಯಾಕ್ಟ್ ಚೆಕ್ ಭಾರತೀಯ ನಾಗರಿಕರನ್ನು ಎಚ್ಚರಿಸಿದೆ. ಈ ಹಗರಣದಲ್ಲಿ, ಇಂಡಿಯಾ ಪೋಸ್ಟ್ ಎಸ್ಎಂಎಸ್ ಬಳಕೆದಾರರ ಖಾಸಗಿ ಮಾಹಿತಿಯನ್ನು ಕದಿಯುವ ದುರುದ್ದೇಶಪೂರಿತ ಲಿಂಕ್ ಅನ್ನು ಕ್ಲಿಕ್ ಮಾಡಲು ಜನರನ್ನು ಮೋಸಗೊಳಿಸುತ್ತಿದೆ ಅಂತ ತಿಳಿಸಿದೆ. ಬಳಕೆದಾರರು ನಕಲಿ ಇಂಡಿಯಾ ಪೋಸ್ಟ್ ಸಂದೇಶವನ್ನು ಸ್ವೀಕರಿಸುತ್ತಿದ್ದಾರೆ, “ನಿಮ್ಮ ಪ್ಯಾಕೇಜ್ ಗೋದಾಮಿಗೆ ಬಂದಿದೆ ಮತ್ತು ನಾವು ಎರಡು ಬಾರಿ ವಿತರಣೆಗೆ ಪ್ರಯತ್ನಿಸಿದ್ದೇವೆ ಆದರೆ ಅಪೂರ್ಣ ವಿಳಾಸ ಮಾಹಿತಿಯಿಂದಾಗಿ ಸಾಧ್ಯವಾಗಲಿಲ್ಲ. ದಯವಿಟ್ಟು 48 ಗಂಟೆಗಳ ಒಳಗೆ ನಿಮ್ಮ ವಿಳಾಸವನ್ನು ನವೀಕರಿಸಿ, ಇಲ್ಲದಿದ್ದರೆ ಪ್ಯಾಕೇಜ್ ಅನ್ನು ಹಿಂದಿರುಗಿಸಲಾಗುತ್ತದೆ. ವಿಳಾಸವನ್ನು ನವೀಕರಿಸಲು ಲಿಂಕ್ [indisposegvs.top/IN] ಕ್ಲಿಕ್ ಮಾಡಿ. ನವೀಕರಣ ಪೂರ್ಣಗೊಂಡ ನಂತರ, ಪ್ಯಾಕೇಜ್ ಅನ್ನು 24 ಗಂಟೆಗಳ ಒಳಗೆ ಮರು-ತಲುಪಿಸಲಾಗುವುದು ಅಂಥ ಹೇಳಿದೆ. ನೀವು ಲಿಂಕ್ ಅನ್ನು ಕ್ಲಿಕ್ ಮಾಡಿದರೆ, ಹ್ಯಾಕರ್ಗಳು ನಿಮ್ಮ ಸಿಸ್ಟಮ್ಗೆ ಪ್ರವೇಶಿಸಬಹುದು ಮತ್ತು ವೈರಸ್ಗಳು ಅಥವಾ ದುರುದ್ದೇಶಪೂರಿತ ಸಾಫ್ಟ್ವೇರ್ ಅನ್ನು ಸ್ಥಾಪಿಸಬಹುದು, ಇದು ದುರುಪಯೋಗಪಡಿಸಿಕೊಳ್ಳಬಹುದಾದ…
ಬೆಂಗಳೂರು: ಆಕಸ್ಮಿಕವಾಗಿ ಸೋಪ್ ಮೇಲೆ ಕಾಲಿಟ್ಟು ಮಹಿಳೆಯೊಬ್ಬರು ಕಟ್ಟಡದ ಮೇಲಿಂದ ಬಿದ್ದ ಘಟನೆ ಬೆಂಗಳೂರಿನ ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯ ಕನಕನಗರದಲ್ಲಿ ನಡೆದಿದೆ. ಸದ್ಯ ಮಹಿಳೆಯನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದ್ದು, ಮಹಿಳೆ ಕೋಮಾಕ್ಕೆ ಜಾರಿದ್ದಾಳೆ ಎನ್ನಲಾಗಿದೆ. ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕನಕನಗರದಲ್ಲಿ ಈ ಪ್ರಕರಣ ನಡೆದಿದೆ. ಕಳೆದ ಮೂರು ದಿನದ ಹಿಂದ ನಡೆದ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ. ಛಾವಣಿಯ ಮೇಲೆ ಕೆಲವು ಕೆಲಸ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಈ ವೇಳೆ ಮಹಿಳೆ ಪತಿ ಆಕೆಯನ್ನು ಕೈನಿಂದ ಹಿಡಿದು ರಕ್ಷಣೆ ಮಾಡಲು ಮುಂದಾಗಿದ್ದರು ಕೂಡ ಅದು ಕೊನೆಗೆ ಫಲನಿಡದೇ ಆಕೆ ನೆಲಕ್ಕೆ ಬಿದ್ದಿದ್ದಾಳೆ. ಈ ನಡುವೆ ಮಹಿಳೆಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರ ಸ್ಥಿತಿ ಇಲ್ಲಿ ಗಂಭೀರವಾಗಿದೆ ಎನ್ನಲಾಗಿದೆ. ಡಿಜೆ ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ಕಾನೂನು ಕ್ರಮವನ್ನು ಕೈಗೊಂಡಿದ್ದಾರೆ.
ವಡೋದರಾ: ಚಲಿಸುತ್ತಿದ್ದ ವ್ಯಾನ್ ನಿಂದ ಇಬ್ಬರು ಶಾಲಾ ಬಾಲಕಿಯರು ಬಿದ್ದ ಘಟನೆ ಗುಜರಾತ್ ನ ವಡೋದರಾದಲ್ಲಿ ನಡೆದಿದೆ. ಮಂಜಲ್ಪುರದ ತುಳಸಿ ಶ್ಯಾಮ್ ಸೊಸೈಟಿಯಲ್ಲಿ ಜೂನ್ 19 ರಂದು ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಅದೃಷ್ಟವಶಾತ್, ವೇಗವಾಗಿ ಚಲಿಸುತ್ತಿದ್ದ ವ್ಯಾನ್ ಹಿಂದಿನಿಂದ ಬೇರೆ ಯಾವುದೇ ವಾಹನ ಬರುತ್ತಿರದ ಕಾರಣ ದೊಡ್ಡ ಅವಘಡವೊಂದು ತಪ್ಪಿದೆ. ಇಡೀ ಘಟನೆಯು ಪ್ರದೇಶದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಕ್ಕಳು ವ್ಯಾನ್‌ನಿಂದ ಬಿದ್ದ ತಕ್ಷಣ, ನಿವಾಸಿಗಳು ತಕ್ಷಣ ಪ್ರತಿಕ್ರಿಯಿಸಿದರು ಮತ್ತು ಹುಡುಗಿಯರಿಗೆ ಸಹಾಯ ಮಾಡಲು ಧಾವಿಸಿದ್ದಾರೆ. ವ್ಯಾನ್ ಚಾಲಕನ ಬಂಧನ: ಇದು ವ್ಯಾನ್ ಚಾಲಕನ ನಿರ್ಲಕ್ಷ್ಯವನ್ನು ಕಾಣಬಹುದಾಗಿದ್ದು, ಆತ ವ್ಯಾನಿನಿನ ಹಿಂಬಾಗಿಲು ಸರಿಯಾಗಿ ಮುಚ್ಚಲ್ಪಟ್ಟಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಗಮನ ಹರಿಸದೆ ಗಾಡಿ ನಡೆಸುತ್ತಿದ್ದ ಎನ್ನಲಾಗಿದೆ. ಇನ್ನೂ ಆಘಾತಕಾರಿ ಸಂಗತಿಯೆಂದರೆ, ಆತ ಚಾಲನೆ ಮಾಡುವಾಗ ಇಬ್ಬರು ಹುಡುಗಿಯರು ಕಾರಿನ ಹಿಂಭಾಗದಿಂದ ಬಿದ್ದಿದ್ದಾರೆ ಎನ್ನುವುದನ್ನು ಮರೆತು ಮುಂದೆ ಹೋಗಿದ್ದಾನೆ ಎನ್ನಲಾಗಿದೆ. https://twitter.com/MyVadodara/status/1804079853693472779
ಜೆರುಸಲೇಂ: ಗಾಝಾದ ರಫಾ ಮತ್ತು ಇತರ ಪ್ರದೇಶಗಳ ಮೇಲೆ ಇಸ್ರೇಲ್ ಶುಕ್ರವಾರ ನಡೆಸಿದ ಬಾಂಬ್ ದಾಳಿಯಲ್ಲಿ 45 ಫೆಲೆಸ್ತೀನೀಯರು ಸಾವನ್ನಪ್ಪಿದ್ದಾರೆ. ಇಸ್ರೇಲಿ ಸೇನೆಯು ಅನೇಕ ಸ್ಥಳಗಳಲ್ಲಿ ಪ್ಯಾಲೆಸ್ತೀನ್ ಉಗ್ರರೊಂದಿಗೆ ಹೋರಾಡುತ್ತಿದೆ ಎಂದು ಹೇಳಿದೆ. ಈಜಿಪ್ಟ್ ಗಡಿಯ ಸಮೀಪವಿರುವ ರಫಾ ಪಟ್ಟಣದಲ್ಲಿ ಇಸ್ರೇಲಿ ಪಡೆಗಳು ಸುಮಾರು ಒಂದೂವರೆ ತಿಂಗಳಿನಿಂದ ಹೋರಾಡುತ್ತಿವೆ ಆದರೆ ಅದನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳುವಲ್ಲಿ ವಿಫಲವಾಗಿವೆ ಎನ್ನಲಾಗಿದೆ. ಗಾಜಾದ ಇತರ ನಗರಗಳಿಂದ 100,000 ಕ್ಕೂ ಹೆಚ್ಚು ನಿರಾಶ್ರಿತ ಫೆಲೆಸ್ತೀನೀಯರು ಇನ್ನೂ ರಫಾದಲ್ಲಿ ಆಶ್ರಯ ಪಡೆದಿದ್ದಾರೆ, ಇದು ಮೇ ಆರಂಭದಲ್ಲಿ 1.4 ಮಿಲಿಯನ್ ಆಗಿತ್ತು. ಇಸ್ರೇಲಿ ದಾಳಿಯಿಂದ ತಪ್ಪಿಸಿಕೊಳ್ಳಲು ಸುಮಾರು 1.3 ಮಿಲಿಯನ್ ಜನರು ಗಾಜಾದ ಇತರ ಭಾಗಗಳಿಗೆ ಪಲಾಯನ ಮಾಡಿದ್ದಾರೆ. ಶೆಲ್ ದಾಳಿ: 12 ಫೆಲೆಸ್ತೀನ್ ನಿರಾಶ್ರಿತರ ಸಾವು: ರಫಾ ನಿವಾಸಿಗಳ ಪ್ರಕಾರ, ನಗರದ ಪಶ್ಚಿಮ ಮತ್ತು ಉತ್ತರ ಗಡಿಗಳಿಂದ ಇಸ್ರೇಲಿ ಟ್ಯಾಂಕ್ ಗಳು ಶೆಲ್ ದಾಳಿ ನಡೆಸುತ್ತಿವೆ. ಸಮುದ್ರದಲ್ಲಿ ಲಂಗರು ಹಾಕಿರುವ ಫೈಟರ್ ಜೆಟ್ ಗಳು ಮತ್ತು ಯುದ್ಧನೌಕೆಗಳು ರಾಕೆಟ್…
ವಿಜಯನಗರ, ಜೂನ್ 21: ವಿಜಯನಗರ ಜಿಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆಯ ಸಭೆಯಲ್ಲಿ ಅಧಿಕಾರಿಗಳಿಗೆ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಲಾಗಿದೆ. 80 ದಿನಗಳ ನೀತಿ ಸಂಹಿತೆಯಿಂದಾಗಿ ಅಧಿಕಾರಿಗಳಲ್ಲಿ ಜಡತ್ವ ಬೆಳೆದಿದ್ದು ಅದನ್ನು ಬಿಡಿಸುವ ಕೆಲಸಾವಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಜಿಲ್ಲಾ ಮಟ್ಟದ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆಯ ನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಡಿಡಿಪಿಐ ಅಮಾನತು ಎಸ್.ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ 10 ನೇ ಸ್ಥಾನದಲ್ಲಿದ್ದ ಜಿಲ್ಲೆ 27 ನೇ ಸ್ಥಾನಕ್ಕೆ ಕುಸಿದಿದೆ. ಪ್ರಾಥಮಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಮಾತನಾಡಿದ್ದು ಪರೀಕ್ಷಾ ಅಕ್ರಮವಾಗಿರುವುದರಿಂದ ಇಷ್ಟೊಂದು ವ್ಯಾತ್ಯಾಸವಾಗಲು ಕಾರಣ ಎಂದು ಹೇಳಿದರು. ಈ ಕಾರಣಕ್ಕಾಗಿ ಡಿಡಿಪಿಐ ಅವರನ್ನು ಅಮಾನತು ಗೊಳಿಸಲು ಹಾಗೂ ಬಿಇಒ ಗಳಿಗೆ ನೋಟೀಸು ಜಾರಿಮಾಡಲು ಸೂಚಿಸಲಾಗಿದೆ ಎಂದರು. ಶಿಕ್ಷಕರೂ ಕೂಡ ಇದಕ್ಕೆ ಕಾರಣಕರ್ತರು. ಜಿಲ್ಲಾ ಪಂಚಾಯತಿ ಸಿಇಒ ಕೂಡ ಇದಕ್ಕೆ ಜವಾಬ್ದಾರರಾಗಿರುವುದರಿಂದ ಅವರಿಗೂ ನೋಟೀಸು ಕೊಡುವಂತೆ ಸೂಚಿಸಲಾಗಿದೆ ಎಂದರು. ಇನ್ ಪುಟ್ ಸಬಸಿಡಿಯಲ್ಲಿ ಶೇ 100 ರಷ್ಟು…
ಬೆಂಗಳೂರು: ‘ಗಂಡನ ಪ್ರಿಯತಮೆ ಸಂಬಂಧಿ ಅಥವಾ ಕುಟುಂಬದ ಸದಸ್ಯೆಯಲ್ಲ ಅಂಥ ಹೇಳಿರುವ ಹೈಕೋರ್ಟ್ ಮಹಿಳೆಯ ಕ್ರಿಮಿನಲ್ ಕೇಸ್ ರದ್ದುಗೊಳಿಸಿ ಆದೇಶ ಹೊರಡಿಸಿದೆ. : ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498-ಎ ಅಡಿಯಲ್ಲಿ ಮಹಿಳೆಯೊಬ್ಬಳು ತನ್ನ ಗಂಡನ ಪ್ರಿಯಕರನ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿದೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ವಿಭಾಗಗಳು ಮತ್ತು ವರದಕ್ಷಿಣೆ ನಿಷೇಧ ಕಾಯ್ದೆ, 1961 ರ ಸೆಕ್ಷನ್ 3 ಮತ್ತು 4 ರ ಅಡಿಯಲ್ಲಿ ದಾಖಲಾದ ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲಾಗಿರುವ ಮಹಿಳೆ ಮತ್ತು ಆಕೆಯ ತಾಯಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ಬೆಂಗಳೂರು: ನೀಟ್ ಪರೀಕ್ಷೆಗೆ ಸರ್ಕಾರದಿಂದ ಉಚಿತ ತರಬೇತಿಗೆ ಚಿಂತನೆ ನಡೆಸಲಾಗಿದೆ ಅಂಥ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಅವರು ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ತಿಳಿಸಿದರು. ಇದೇ ವೇಳೆ ಅವರು ಮಾತನಾಡಿ. ಕೇಂದ್ರ ಮರು ಪರೀಕ್ಷೆ ನಿಗದಿ ಮಾಡಿರುವುದರಿಂದ ರಾಜ್ಯ ಸರ್ಕಾರವೇ ನುರಿತ ಉಪನ್ಯಾಸಕರಿಂದ ಉಚಿತವಾಗಿ ತರಬೇತಿ ನೀಡಲು ಮುಂದಾಗಿದೆ ಅಂತ ತಿಳಿಸಿದರು. ಇನ್ನೂ ಇದರಿಂದ ಬಡ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ ಎಂದು ಅವರು ಇದೇ ವೇಳೆ ತಿಳಿಸಿದರು. ನೀಟ್ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಿಂದ ವಾಮಮಾರ್ಗದಲ್ಲಿ ಸೀಟ್ ಪಡೆಯುವುದರಿಂದ ಪ್ರತಿಭಾವಂತರಿಗೆ ಅನ್ಯಾಯವಾಗುತ್ತದೆ ಅಂತ ಹೇಳಿದ ಅವರು ನೀಟ್ ಪರೀಕ್ಷೆಯಲ್ಲಿ ಆಗಿರುವ ಅದ್ವಾನದಿಂದ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಈ ರೀತಿಯ ಗೊಂದಲಗಳಿಗೆ ತೆರೆ ಬೀಳಬೇಕಾಗಿದೆ ಅಂತ ತಿಳಿಸಿದರು. ರಾಜ್ಯದಲ್ಲಿ ಸುಮಾರು 1,900 ಅನಧಿಕೃತ ಶಾಲೆಗಳನ್ನು ಸರ್ಕಾರ ಗುರುತಿಸಿದೆ. ಕಾನೂನು ಉಲ್ಲಂಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅನುದಾನಿತ ಶಾಲೆಗಳಿಗೆ ನೇಮಕಾತಿಗೆ ಸಂಬಂಧಿಸಿದಂತೆ ಈಗಿರುವ ನಿರ್ಬಂಧವನ್ನು ಸಡಿಲಿಸಲು ಚರ್ಚೆ ನಡೆಸಲಾಗಿದೆ ಅಂಥ ತಿಳಿಸಿದರು.
ಬೆಂಗಳೂರು: ಜೂನ್, 26 ರಿಂದ ಜುಲೈ, 05 ರವರೆಗೆ ನಡೆಯುವ ದ್ವಿತೀಯ ಪಿ.ಯು.ಸಿ ಪರೀಕ್ಷೆ-3 ಗಳನ್ನು ಯಾವುದೇ ಅವ್ಯವಹಾರಗಳಿಲ್ಲದಂತೆ ಸುಗಮವಾಗಿ ನಡೆಸುವ ಸಲುವಾಗಿ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144 ರಡಿ ದತ್ತವಾದ ಅಧಿಕಾರದಂತೆ ಪರೀಕ್ಷಾ ಕೇಂದ್ರ-ಕಾಲೇಜುಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿನ ಪ್ರದೇಶವನ್ನು ನಿರ್ಬಂಧಿತ ಪ್ರದೇಶ ಎಂದು ಘೋಷಿಸಲಾಗಿದೆ. ನಿಷೇಧಿತ ವಲಯದಲ್ಲಿ ಯಾವುದೇ ರೀತಿಯಲ್ಲಿ ಪರೀಕ್ಷೆಯಲ್ಲಿ ನಕಲು ಹೊಡೆಯಲು ಸಹಾಯ ಮಾಡುವುದು, ಚೀಟಿ ಅಥವಾ ಇನ್ನಿತರ ರೀತಿಯಲ್ಲಿ ಉತ್ತರಗಳನ್ನು ಬರೆದು ಹಂಚುವುದು, ಇನ್ನಾವುದೇ ವಸ್ತುಗಳನ್ನು ಹಂಚುವುದು/ ರವಾನಿಸುವುದು ಮತ್ತಿತರ ಚಟುವಟಿಕೆ ಸಂಪೂರ್ಣ ನಿಷೇಧಿಸಿದೆ. ಪರೀಕ್ಷಾ ಕೇಂದ್ರದೊಳಗೆ ಮುಖ್ಯ ಅಧೀಕ್ಷಕರು ಕ್ಯಾಮರಾ ಹೊಂದಿರದ ಸಾಮಾನ್ಯ ಮೊಬೈಲ್ ಮಾತ್ರ ಇರಿಸಿಕೊಳ್ಳಬಹುದು. ಉಳಿದಂತೆ ಎಲ್ಲಾ ಪರೀಕ್ಷಾ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಮೊಬೈಲ್, ಸ್ಮಾಟ್ ವಾಚ್ ಮುಂತಾದ ಎಲೆಕ್ಟ್ರಾನಿಕ್ ಸಾಮಾಗ್ರಿಗಳನ್ನು ಒಯ್ಯುವುದು ಮತ್ತು ಬಳಸುವುದನ್ನು ನಿಷೇಧಿಸಿದೆ. ಪರೀಕ್ಷಾ ಕೇಂದ್ರದೊಳಗೆ ಅನಧಿಕೃತ ವ್ಯಕ್ತಿಗಳ ಪ್ರವೇಶ, ಚಿತ್ರೀಕರಣ ಮುಂತಾದವುಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ. ನಿಷೇಧಿತ ವಲಯದಲ್ಲಿ ಯಾವುದೇ ರೀತಿಯ…
ಬೆಂಗಳೂರು: ಹಾಲನ್ನು ಬಿಳಿಯಾಗಿ ಮತ್ತು ನೊರೆಯಂತೆ ಕಾಣುವಂತೆ ಮಾಡಲು ಡಿಟರ್ಜೆಂಟ್ ಅನ್ನು ಹೇಗೆ ಬಳಸಲಾಗುತ್ತಿತ್ತು ಎಂಬುದರ ಕುರಿತು ಎಕ್ಸ್ ಬಳಕೆದಾರರ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಲಿಕ್ವಿಡ್ ಡಿಟರ್ಜೆಂಟ್ ತಯಾರಿಕೆಯಲ್ಲಿ ತೊಡಗಿದ್ದ ಉದ್ಯಮಿ ರಾಮ್ (@ramprasad_c) 2005 ರಲ್ಲಿ ತಮ್ಮ ಮಾರಾಟ ಕಾರ್ಯನಿರ್ವಾಹಕರೊಬ್ಬರು ಹೇಳಿದ್ದನ್ನು ನೆನಪಿಸಿಕೊಂಡಾಗ ಇದರ ಚರ್ಚೆ ಹುಟ್ಟುಹಾಕಿಕೊಂಡಿದೆ. “ಭಾರತದಲ್ಲಿ ಆಹಾರ ಸುರಕ್ಷತೆಯ ಬಗ್ಗೆ, ನನಗೆ ಆಘಾತವನ್ನುಂಟು ಮಾಡಿದ ಒಂದು ಕಥೆ ಇಲ್ಲಿದೆ. ಅನೇಕ ವರ್ಷಗಳ ಹಿಂದೆ, ನಾನು ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುವಾಗ ಹೊಸ ಲಿಕ್ವಿಡ್ ಡಿಟರ್ಜೆಂಟ್ ಅನ್ನು ಪ್ರಾರಂಭಿಸಿದೆ. ಮಾರಾಟಗಾರರಲ್ಲಿ ಒಬ್ಬರು ನನ್ನ ಬಳಿಗೆ ಬಂದು, ಡಿಟರ್ಜೆಂಟ್ ನಲ್ಲಿ ಪರಿಮಳ ಸ್ವಲ್ಪ ಕಡಿಮೆ ಮಾಡಿದರೆ ಮಾರಾಟ ಹೆಚ್ಚುತ್ತದೆ ಎಂದರು. ಈ ಬಗ್ಗೆ ಗ್ರಾಹಕರಿಂದ ಯಾವುದೇ ದೂರುಗಳಿವೆಯೇ ಎಂದು ನಾನು ಕೇಳಿದೆ. ಹಲವರು ಡಿಟರ್ಜೆಂಟ್ ಗಳನ್ನು ಖರೀದಿಸಿ ಹಾಲಿನಲ್ಲಿ ಮಿಶ್ರಣ ಮಾಡುತ್ತಾರೆ ಅಂತ ಹೇಳಿದ್ದರು ಅಂಥ ಹೇಳಿದ್ದಾರೆ. ಸುಗಂಧದ ಬಗ್ಗೆ ಯಾವುದೇ ಗ್ರಾಹಕರು ಯಾವುದೇ ಪ್ರತಿಕ್ರಿಯೆ ನೀಡಿದ್ದಾರೆಯೇ…