Author: kannadanewsnow07

ಬೆಂಗಳೂರು: ಕರ್ನಾಟಕ ಕೌಶಲ್ಯಾಭಿವೃದ್ದಿ ನಿಗಮವು ರಾಜ್ಯದ ಯುವಕರಿಗೆ ಹೊರ ದೇಶಗಳಲ್ಲಿ ಉದ್ಯೋಗ ಒದಗಿಸುವ ಮಹತ್ವದ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಇದರ ಭಾಗವಾಗಿ ಸ್ಲೊವೆನಿಯಾ ರಾಷ್ಟ್ರದಲ್ಲಿ ಬಿಇ, ಡಿಪ್ಲೊಮೊ, ಐಟಿಐ ಮತ್ತಿತರ ವೃತ್ತಿಪರ ಕೋರ್ಸ್‍ಗಳನ್ನು ಮುಗಿಸಿದ 94 ಯುವಕರಿಗೆ ಉದ್ಯೋಗ ನೀಡುವಲ್ಲಿ ಕೌಶಲ್ಯಾಭಿವೃದ್ಧಿ ನಿಗಮವು ಯಶಸ್ವಿಯಾಗಿದೆ.  ಉದ್ಯೋಗವಿಲ್ಲದೆ ಕೆಲಸ ಹುಡುಕುತ್ತಿದ್ದ ಯುವಕರು ಇದೀಗ ವಿದೇಶದಲ್ಲಿ ಕೈ ತುಂಬಾ ಸಂಬಳ ಪಡೆಯುತ್ತಿದ್ದು, ತಮ್ಮ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ. ಯುವಕರ ಕೌಶಲ್ಯಾ ಅರ್ಹತೆಗೆ ತಕ್ಕಂತೆ ಉದ್ಯೋಗಗಳನ್ನುನೀಡಲಾಗುತ್ತಿದೆ. ಅವರಿಗೆ ಇಲ್ಲಿಯೇ ತರಬೇತಿ, ವೀಸಾ ವ್ಯವಸ್ಥೆ, ಗೃಹ ಇಲಾಖೆಯಲ್ಲಿ ದಾಖಲಾತಿಗಳ ಪ್ರಮಾಣಪತ್ರ ಪರಿಶೀಲನೆ ಮಾತ್ರವಲ್ಲದೆ ಹೊರರಾಷ್ಟ್ರಗಳಿಗೆ ತೆರಳುವವರಿಗೆ ಊಟ, ವಸತಿ ವ್ಯವಸ್ಥೆ, ಸಂಬಂಧಪಟ್ಟವರ ಭೇಟಿಗೆ ಬೇಕಾದ ಇನ್ನಿತರ ಸೌಲಭ್ಯಗಳನ್ನು ಸಹ ಇಲಾಖೆಯ ಅಧಿಕಾರಿಗಳೇ ನಿಗಾವಹಿಸುತ್ತಾರೆ. ಐಟಿಬಿಟಿ, ವಿಜ್ಞಾನ, ಕೈಗಾರಿಕೆ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕರ್ನಾಟಕ ಇತರೆ ರಾಜ್ಯಗಳಿಗೆ ಹೋಲಿಸಿದರೆ ಸಾಕಷ್ಟು ಮುಂಚೂಣಿಯಲ್ಲಿದೆ. ಇದನ್ನು ಮನಗಂಡ ಸ್ಲೊವೆನಿಯಾ ರಾಷ್ಟ್ರವು ಎರಡೂವರೆ ಸಾವಿರ ಅಸೆಂಬ್ಲಿ ಲೈನ್ ಆಪರೇಟರ್‌ಗಳನ್ನು ನೇಮಕ ಮಾಡಿಕೊಳ್ಳಲು ಮುಂದೆ ಬಂದಿತ್ತು.…

Read More

ಬೆಂಗಳೂರು: ತಮ್ಮ ವಿರುದ್ದ ಕೇಳಿ ಬಂದಿರುವ ಅಸಹಜ ಲೈಂಗಿಕ ಕಿರುಕುಳ ಬಗ್ಗೆ ಹಾಸನ ಎಂಎಲ್‌ಸಿ ಸೂರಜ್‌ ರೇವಣ್ಣ ಮಾತನಾಡಿದ್ದು, ತಮ್ಮ ವಿರುದ್ದ ಕೇಳಿ ಬಂದಿರುವ ಎಲ್ಲಾ ಆರೋಪವನ್ನು ತಳ್ಳಿ ಹಾಕಿದ್ದಾರೆ. ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಗನ್ನಿಕಡ ಫಾರ್ಮ್ ಹೌಸ್ ನಲ್ಲಿ ಸೂರಜ್ ರೇವಣ್ಣ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿದರು. ಇದೇ ವೇಳೆ ಅವರು ಮಾತನಾಡಿ, ನನ್ನ ವಿರುದ್ದ ಎಲ್ಲಾ ರೀತಿಯಲ್ಲಿ ಷಡ್ಯಂತ್ರ ನಡೆಯುತ್ತಿದ್ದು, ಎಲ್ಲವೂ ಕಾನೂನು ಪ್ರಕಾರ ತನಿಖೆಯಾಗಲಿ ಅಂಥ ಅವರು ಹೇಳಿದರು. ಇದಲ್ಲದೇ ನನ್ನ ವಿರುದ್ದ ದೂರು ನೀಡಿರುವ ಯುವಕನ ವಿರದ್ದ ಕೂಡ ದೂರು ದಾಖಲಾಗಿದ್ದು, ಎಲ್ಲವೂ ತನಿಖೆಯಿಂದ ಸತ್ಯ ಹೊರ ಬರಲಿ ಅಂಥ ಹೇಳುವೆ ಅಂತ ಅವರು ಹೇಳಿದರು.

Read More

ಬೆಂಗಳೂರು: ಕೃಷಿ ಇಲಾಖೆಯಲ್ಲಿ 600 ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಅಂಥ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ. ಇದೇ ವೇಳೆ ಅವರು ಕೃಷಿ ಇಲಾಖೆಯಲ್ಲಿ ಹಲವು ವರ್ಷಗಳಿಂದ ಭರ್ತಿಯಾಗದೆ ಖಾಲಿ ಉಳಿದಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನೊಳಗೊಂಡ 600ಕ್ಕೂ ಹೆಚ್ಚು ಹುದ್ದೆಗಳನ್ನು ಹಂತ ಹಂತವಾಗಿ ಶೀಘ್ರ ಭರ್ತಿ ಮಾಡಲಾಗುವುದು ಅಂತ ತಿಳಿಸಿದ್ದಾರೆ. ಇನ್ನೂ ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯವು ಅಭಿವೃದ್ಧಿಪಡಿಸಲಾದ ವಿವಿಧ ತಾಂತ್ರಿಕತೆಗಳ ಉತ್ಪನ್ನ / ಕೃಷಿ ಪರಿಕರಗಳನ್ನು ಕೃಷಿಕರಿಗೆ ಹಾಗೂ ಸಾರ್ವಜನಿಕರಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜನಪ್ರಿಯಗೊಳಿಸುವ ಸಲುವಾಗಿ “ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರಿನ ಉತ್ಪನ್ನಗಳ ಸಂತೆ” ಎಂಬ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಸಂತಸದ ವಿಷಯ ಎಂದು ಕೃಷಿ ಸಚಿವ ಎನ್ ಚೆಲುವರಯಸ್ವಾಮಿ ತಿಳಿಸಿದರು. ಇಂದು ಕೃಷಿ ಸಚಿವ ಎನ್ ಚೆಲುವರಯಸ್ವಾಮಿ ಅವರು ಜಿ.ಕೆ.ವಿ.ಕೆ ಆವರಣದಲ್ಲಿ ಆಯೋಜಿಸಿದ್ದ“ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ಉತ್ಪನ್ನಗಳ ಸಂತೆ” ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಮಾತನಾಡಿದ ಸಚಿವರು, ಸದರಿ ಕೃಷಿ ಸಂತೆಯಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವ್ಯಾಪ್ತಿಗೊಳಪಡುವ ವಿವಿಧ ಕೃಷಿ ಸಂಶೋಧನಾ,…

Read More

*ಅವಿನಾಶ್‌ ಆರ್‌ ಭೀಮಸಂದ್ರ ಬೆಂಗಳೂರು: ನಟ ದರ್ಶನ್‌ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ಜೈಲುಪಾಲಾಗಿದ್ದಾರೆ. ಇಂದು ದರ್ಶನ್ ಸೇರಿ ನಾಲ್ವರು ಆರೋಪಿಗಳಿಗೆ ಕೋರ್ಟ್ ಜುಲೈ 4ರವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ನಡುವೆ ನಟ ದರ್ಶನ್‌ ನನ್ನು ಮುಂಜಾಗ್ರತಕ್ರಮವಾಗಿ ತುಮಕೂರಿನ ಜೈಲಿಗೆ ಕಳುಹಿಸಕೊಡುವ ನಿಟ್ಟಿನಲ್ಲಿ ಬಂಧಿಖಾನೆ ಅಧಿಕಾರಿಗಳು ಅಲೋಚನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇದಲ್ಲದೇ ಕೆಲ ಆರೋಪಿಗಳನ್ನು ತುಮಕೂರು ಜೈಲಿಗೆ ಶಿಫ್ಟ್ ಮಾಡಲು ಎಸ್‌ಪಿಪಿ ಮನವಿ ಮಾಡಿದ್ದಾರೆ ಕೂಡ ಎನ್ನಲಾಗುತ್ತಿದೆ. ಈ ಬಗ್ಗೆ ನ್ಯಾಯಾಧೀಶರು ಸೋಮವಾರ ವಿಚಾರಣೆ ನಡೆಸಲಿದ್ದು, ಅಂದೇ ಆದೇಶವನ್ನು ನೀಡಲಿದ್ದಾರೆ ಎನ್ನಲಾಗಿದೆ.

Read More

ಬೆಂಗಳೂರು: ರೇಣುಕಸ್ವಾಮಿ ಕೊಲೆ ಆರೋಪದ ಮೇಲೆ ಸದ್ಯ ನ್ಯಾಯಾಲಯವು ದರ್ಶನ್‌ ರಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ನ್ಯಾಯಾಧೀಶರ ಮುಂದೆ ದರ್ಶನ್‌ ಅಂಡ್‌ ಗ್ಯಾಂಗ್‌ ಅನ್ನು ಹಾಜರು ಪಡಿಸಿದ ಬಳಿಕ ನ್ಯಾಯಾಧೀಶರ ಆದೇಶದಂತೆ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಗೃಹಕ್ಕೆ ಕರೆದುಕೊಂಡು ಹೋಗುತ್ತಿದ್ದ ವೇಳೆಯಲ್ಲಿ ಹಲವು ಅಭಿಮಾನಿಗಳು ವ್ಯಾನ್ ಬಳಿ ದರ್ಶನ್‌ ಪರ ಘೋಷಣೆ ಕೂಗುತ್ತಿದ್ದ ಸನ್ನಿವೇಶ ಕಂಡು ಬಂತು. ಈ ನಡುವೆ ದರ್ಶನ್‌ ಇದ್ದ ವ್ಯಾನ್‌ ಬಳಿ ಅಭಿಮಾನಿಯೊಬ್ಬ . ಈ ಥರದ್ದು ಬೇಜಾನ್‌ ಆಗಿದೆ ಸರ್.‌ ತಲೆ ಕೆಡಿಸಿಕೊಳ್ಳಬೇಡಿ ಸರ್..‌ ಅಭಿಮಾನಿಗಳು ಹಿಂದೆ ಬರುತ್ತಾರೆ.. ನೀವು ಆರಾಮಾಗಿ ಇರಿ ಎಂದು ಹೇಳಿದ ಸನ್ನಿವೇಶ ಕಂಡು ಬಂದಿತ್ತು. ತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಹಾಗೂ ಇತರ ಮೂವರನ್ನು ಬೆಂಗಳೂರು ನಗರದ 24 ನೇ ಎಸಿಎಂಎಂ ನ್ಯಾಯಾಲಯ 12 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಸದ್ಯ ಈ ಎಲ್ಲರನ್ನು ಜೈಲಿಗೆ ಕಳುಹಿಸಲಾಗಿದೆ.

Read More

ಹೈದ್ರಬಾದ್‌: ಆಂಧ್ರಪ್ರದೇಶದ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಎಪಿಸಿಆರ್ಡಿಎ) ಮತ್ತು ಮಂಗಳಗಿರಿ ತಾಡೆಪಲ್ಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಟಿಎಂಸಿ) ಶನಿವಾರ ಮುಂಜಾನೆ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್ಆರ್ಸಿಪಿ) ನಿರ್ಮಾಣ ಹಂತದಲ್ಲಿದ್ದ ಕಚೇರಿ ಕಟ್ಟಡವನ್ನು ನೆಲಸಮಗೊಳಿಸಿವೆ. ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ವೈಎಸ್ಆರ್ಸಿಪಿ, ಇದು ‘ಸೇಡಿನ ರಾಜಕೀಯದ ಆರಂಭ’ ಎಂದು ಹೇಳಿದೆ. ಗುಂಟೂರು ಜಿಲ್ಲೆಯ ತಾಡೆಪಲ್ಲಿ ಮಂಡಲದ ಸೀತಾನಗರಂನ ಬೋಟ್ ಯಾರ್ಡ್ ಕಾಂಪೌಂಡ್ನ ಆರ್ಎಸ್ ಸಂಖ್ಯೆ 202-ಎ-1 ರಲ್ಲಿ 870.40 ಚದರ ಮೀಟರ್ ಅಳತೆಯ 870.40 ಚದರ ಮೀಟರ್ ಭೂಮಿಯನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದೆ ಎಂದು ಆರೋಪಿಸಲಾಗಿದೆ. ಟಿಡಿಪಿ ಸೇಡಿನ ರಾಜಕಾರಣ ಮಾಡುತ್ತಿದೆ. ಆಂಧ್ರಪ್ರದೇಶ ಸಿಆರ್ಡಿಎ (ಆಂಧ್ರಪ್ರದೇಶ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ) ಯ ಪ್ರಾಥಮಿಕ ಕ್ರಮಗಳನ್ನು ಪ್ರಶ್ನಿಸಿ ವೈಎಸ್ಆರ್ಸಿಪಿ ಹಿಂದಿನ ದಿನ ಹೈಕೋರ್ಟ್ ಅನ್ನು ಸಂಪರ್ಕಿಸಿದ್ದರೂ ನೆಲಸಮ ಮುಂದುವರಿಯಿತು. ಯಾವುದೇ ನೆಲಸಮ ಚಟುವಟಿಕೆಯನ್ನು ನಿಲ್ಲಿಸಲು ನ್ಯಾಯಾಲಯ ಆದೇಶಿಸಿತ್ತು” ಎಂದು ಪಕ್ಷವು ಮಾಧ್ಯಮಗಳಿಗೆ ಮಾಹಿತಿ ನೀಡಿದೆ. ವಿಚಾರಣೆ ಪೂರ್ಣಗೊಳ್ಳುವವರೆಗೆ ಕಟ್ಟಡದ ವಿರುದ್ಧ ಯಾವುದೇ ಕ್ರಮ…

Read More

ನವದೆಹಲಿ: ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (ಎನ್ಐಒಎಸ್) ಏಪ್ರಿಲ್ 12 ನೇ ತರಗತಿಯ ಫಲಿತಾಂಶವನ್ನು ಅಧಿಕೃತ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಅಧಿಕೃತ ವೆಬ್ಸೈಟ್ – nios.ac.in ಮತ್ತು results.nios.ac.in ನಿಂದ ಪರಿಶೀಲಿಸಬಹುದು ಮತ್ತು ಡೌನ್ಲೋಡ್ ಮಾಡಬಹುದು. ಫಲಿತಾಂಶವನ್ನು ಪರಿಶೀಲಿಸಿದ ನಂತರ ವಿದ್ಯಾರ್ಥಿಗಳು ತಮ್ಮ ಎಐಗಳಿಂದ ವಲಸೆ ಮತ್ತು ವರ್ಗಾವಣೆ-ಪ್ರಮಾಣಪತ್ರಗಳು ಮತ್ತು ಅಂಕಪಟ್ಟಿ-ಕಮ್-ಪ್ರಮಾಣಪತ್ರವನ್ನು ಪಡೆಯಬಹುದು. ಆನ್ಲೈನ್ ಎನ್ಐಒಎಸ್ ಫಲಿತಾಂಶವು ತಾತ್ಕಾಲಿಕ ಸ್ವರೂಪದ್ದಾಗಿದೆ ಅಂಥ ತಿಳಿಸಿದೆ. ಎನ್ಐಒಎಸ್ 12 ನೇ ತರಗತಿ ಫಲಿತಾಂಶ 2024: ಚೆಕ್ ಮಾಡುವುದು ಹೇಗೆ? ಹಂತ 1: ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ, nios.ac.in ಹಂತ 2: ಮುಖಪುಟದಲ್ಲಿ, ‘ಪರೀಕ್ಷೆಗಳು / ಫಲಿತಾಂಶ’ ಕ್ಲಿಕ್ ಮಾಡಿ ಹಂತ 3: ನಿಮ್ಮನ್ನು ಹೊಸ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ ಹಂತ 4: ‘ಸಾರ್ವಜನಿಕ ಪರೀಕ್ಷೆ ಫಲಿತಾಂಶ ಏಪ್ರಿಲ್ ಸೆಷನ್ 2024’ ಮೇಲೆ ಕ್ಲಿಕ್ ಮಾಡಿ ಹಂತ 5: ನೋಂದಣಿ ಸಂಖ್ಯೆಯನ್ನು ಬಳಸಿಕೊಂಡು ಲಾಗ್-ಇನ್ ಮಾಡಿ ಹಂತ 6: ಫಲಿತಾಂಶಗಳು…

Read More

ಬೆಂಗಳೂರು: ಸೂರಜ್ ರೇವಣ್ಣ ವಿರುದ್ಧ ಆರೋಪ ಸಂಬಂಧಕ್ಕೆ ಪಟ್ಟಂತೆ ಇಂದು ಮಾಧ್ಯಮಗಳ ಜೊತೆಗೆ ಗೃಹ ಸಚಿವ ಜಿ.ಪರಮೇಶ್ವರ್‌ ಅವರು ಮಾತನಾಡಿದ್ದಾರೆ. ಇನ್ನೂ ಸೂರಜ್‌ ರೇವಣ್ಣ ಸಂಬಂಧ ಯಾವುದೇ ದೂರುಗಳು ಬಂದಿಲ್ಲ, ದೂರು ಬಂದ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಪ್ರಕರಣದ ಬೆಳವಣಿಗೆ ನೋಡಿ ಸಿಐಡಿಗೆ ವಹಿಸುವ ಕೆಲಸ ಮಾಡುತ್ತೇವೆ ಅಂತ ತಿಳಿಸಿದರು.ಇದೇ ವೇಳೆ ಅವರು ನನಗೆ ಯಾವುದೇ ಪತ್ರ ಬಂದಿಲ್ಲ, ದೂರು ಕೂಡ ಬಂದಿಲ್ಲ. ಸೂರಜ್ ರೇವಣ್ಣ ಆಗಲಿ, ಆ ದೂರುದಾರ ಆಗಲಿ ಎಲ್ಲಿಯೂ ದೂರು ಕೊಟ್ಟಿಲ್ಲ. ಯಾವುದೇ ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗಿಲ್ಲ ಅಂತ ತಿಳಿಸಿದರು.

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ನಮ್ಮ ದೈನಂದಿನ ಜೀವನದಲ್ಲಿ ಪ್ರತಿ ಸೆಕೆಂಡ್‌ಗಳಿಗೆ ಕೆಲವು ಅಥವಾ ಇತರ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವುದನ್ನು ನಾವು ನೋಡಬಹುದಾಗಿದೆ. ಈ ನಡುವೆ ಅವುಗಳನ್ನು ನಮ್ಮನ್ನು ನಗಿಸುವ ಕೆಲವು ವೀಡಿಯೊಗಳಿದ್ದರೆ, ಆದರಲ್ಲಿ ಕೆಲವು ವೀಡಿಯೊಗಳನ್ನು ನೋಡಿದ ನಂತರ ನಮಗೆ ಆಶ್ಚರ್ಯವಾಗುತ್ತದೆ ಕೂಡ. ಈಗ ಈ ವೀಡಿಯೊದಲ್ಲಿ, ಸಿಲಿಂಡರ್ ಅನಿಲವನ್ನು ತಲುಪಿಸುವ ವ್ಯಕ್ತಿಗೆ ಹೃದಯಾಘಾತವಾಗುವುದನ್ನು ಕಾಣಬಹುದು, ಈ ವೇಳೆ ಅಲ್ಲೇ ಇದ್ದು ಮಹಿಳೆ ಅವನಿಗೆ ಸಮಯಕ್ಕೆ ಸರಿಯಾಗಿ ಸಿಪಿಆರ್ ನೀಡಿ ಅವನ ಜೀವವನ್ನು ಉಳಿಸುತ್ತಾಳೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕನ್ನಡನ್ಯೂಸ್‌ನೌ ಈ ವಿಡಿಯೋವನ್ನು ಪರಿಶೀಲಿಸಿಲ್ಲ. ಇದೇ ಹೇಳಿಕೆಯೊಂದಿಗೆ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೈರಲ್ ವೀಡಿಯೊದಲ್ಲಿ, ಸಿಲಿಂಡರ್ ವಿತರಿಸುವ ವ್ಯಕ್ತಿಯ ಜೀವವನ್ನು ಮಹಿಳೆ ಹೇಗೆ ಉಳಿಸುತ್ತಾಳೆ ಎಂಬುದನ್ನು ಕಾಣಬಹುದು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ವೈರಲ್ ಆಗುತ್ತಿರುವ ಈ ವೀಡಿಯೊವನ್ನು @vinod_bansal ಎಂಬ ಎಕ್ಸ್ ಬಳಕೆದಾರರು ಹಂಚಿಕೊಂಡಿದ್ದಾರೆ. ಬಳಕೆದಾರರು ಹಂಚಿಕೊಂಡಿದ್ದಾರೆ…

Read More

ಬೆಂಗಳೂರು: ನಟಿ, ಮಾಜಿ ಸಂಸದೆ ರಮ್ಯಾ ಅವರು ಮತ್ತೆ ಟ್ವಟರ್‌ನಲ್ಲಿ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದು, ಈಗ ಅವರು ನಟ ದರ್ಶನ್‌, ಪ್ರಜ್ವಲ್‌ ರೇವಣ್ಣ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸೂರಜ್‌ ರೇವಣ್ಣ ವಿರುದ್ಧ ಕಿಡಿಕಾರಿದ್ದಾರೆ. ಟ್ವಿಟರ್‌ನಲ್ಲಿ ಅವರು ಕಾನೂನನ್ನು ಉಲ್ಲಂಘಿಸಿ ಸುದ್ದಿಯಲ್ಲಿರುವವರು ಶ್ರೀಮಂತರು ಮತ್ತು ಶಕ್ತಿಶಾಲಿಗಳು. ಅವರ ಹಿಂಸಾತ್ಮಕ ಕ್ರಿಯೆಗಳಿಗೆ ಬಡವರು, ಮಹಿಳೆಯರು ಮತ್ತು ಮಕ್ಕಳು ಬದುಕು ನಾಶವಾಗಿದೆ. ಈ ಅಪರಾಧಗಳನ್ನು ಹೊರತಂದ ಪೊಲೀಸರು ಮತ್ತು ಮಾಧ್ಯಮಗಳಿಗೆ ಹ್ಯಾಟ್ಸ್ ಆಫ್. ವಿಚಾರಣೆಯನ್ನು ತ್ವರಿತಗೊಳಿಸಿದಾಗ ಮತ್ತು ಪ್ರಕರಣಗಳನ್ನು ಅವುಗಳ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಾಗ ನಿಜವಾಗಿಯೂ ನ್ಯಾಯ ಸಿಗುತ್ತದೆ. ನ್ಯಾಯವು ಮೇಲುಗೈ ಸಾಧಿಸದಿದ್ದರೆ- ನಾವು ಸಾರ್ವಜನಿಕರಿಗೆ ಯಾವ ಸಂದೇಶವನ್ನು ನೀಡುತ್ತಿದ್ದೇವೆ? ಅಂತ ಹೇಳಿದ್ದಾರೆ. https://twitter.com/divyaspandana/status/1804370772775047171

Read More